ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-12-2021
ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 162/2021 ಕಲಂ.143,147,148,323,324,504,506.ಸಂಗಡ149.ಐ.ಪಿ.ಸಿ.ಕಾಯ್ದೆ : ಇಂದು ದಿನಾಂಕ 12/12/2021 ರಂದು ತಡರಾತ್ರಿ 00-10 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ತಿಮ್ಮಯ್ಯ ತಂದೆ ದೊಡ್ಡಹಣಮಂತ್ರಾಯ ಚಂದಪ್ಪನೋರ ವಯಾಃ29 ವರ್ಷ ಜಾಃ ಬೇಡರ ಉಃ ಚಾಲಕ ಸಾಃ ಕೇಂಚಗಾರಹಳ್ಳಿ ಇತನು ಸಕರ್ಾರಿ ಆಸ್ಪತ್ರೆ ಯಾದಗಿರದಲ್ಲಿ ಹೇಳಿಕೆ ಕೊಟ್ಟಿದ್ದೆನೆಂದರೆ, ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ನನ್ನ ಸ್ವಂತ ಬೊಲೆರೊ ಪಿಕ್ಅಪ್ ಜೀಪ ಇದ್ದು ಸದರಿ ಜೀಪ ಚಲಾಯಿಸಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ದಿನಾಂಕ.07/12/2021 ರಂದು ನನ್ನ ಚಿಕ್ಕಮ್ಮಳಾದ ಚಂದಮ್ಮ ಇವರು ಅನಾರೋಗ್ಯದಿಂದ ಮೃತಪಟ್ಟಿರುತ್ತಾಳೆ. ಹೀಗಿರುವಾಗ ದಿನಾಂಕ 11/12/2021 ರಂದು ಸಾಯಂಕಲ 5 ದಿವಸದ ಕಾರ್ಯಕ್ರಮ ಇದ್ದ ಕಾರಣ ಮನೆಯಲ್ಲಿ ಪೂಜೆ ಮಾಡಿದ್ದು ರಾತ್ರಿ ಮನೆಯಲ್ಲಿ ಬಜನೆ ಇದ್ದ ಕಾರಣ ಗ್ರಾಮದ ಬಜನಾ ಮಂಡಳಿಯವರಾದ ರಾಮಪ್ಪ ಹರಿಜನ ಇವರಿಗೆ ಹೇಳಿ ಬೀಡಿ ತರುವ ಕುರಿತು ಹುಗಾರ ಅಂಗಡಿ ಹೋಗುವಾಗ ಅಂಬೇಡ್ಕರ ಸರ್ಕಲ್ದಲ್ಲಿ ಇರುವ ಬೀಡಿ ಅಂಗಡಿ ಹತ್ತಿರ ನಮ್ಮ ಸಮುದಾಯದವರು ಬಜನಾ ಮಾಡುವ ದೇವಿಂದ್ರ ತಂದೆ ಮಲ್ಲಯ್ಯ ಹೇಳವ ಇತನಿಗೂ ಸಹ ಬಜನೆಗೆ ಬರಬೇಕು ಅಂತಾ ಹೇಳಿ ಹೋಗುತ್ತುದ್ದಾಗ ಅಂಗಡಿಯ ಪಕ್ಕದ ಕಟ್ಟೆಯ ಮೇಲೆ ಕುಳಿತವರ ಪೈಕಿ ಬಾಗಣ ತಂದೆ ಅಯ್ಯಪ್ಪ ದೇವದುರ್ಗ,ರಂಗಪ್ಪ ತಂದೆ ಗೋವಿಂದಪ್ಪ ಹೇಳವ ಇವರ ನನ್ನನ್ನು ಕರೆದು ಎಲೆ ಬೊಸಡಿ ಮಗನೆ ಹರಿಜನ ಓಣಿಗೆ ಹೋಗಿ ಬಜನಾ ಮಂಡಳೀಯವರಿಗೆ ಹೇಳಿ ಬಂದಿದ್ದಿಯಾ ಮಗನೆ ಅವರೆನು ತತವಪದ ಹಾಡುತ್ತಾರೆ ಅಂತಾ ನನಗೆ ಬೆದರಿಕೆ ಹಾಕಿದರು ನೀನು ನಮಗೆ ಯಾಕೆ ಹೇಳಲಿಲ್ಲ ನಾವು ಬಜನಕ್ಕೆ ಬರುತ್ತಿದ್ದೆವು ಅಂತಾ ನನಗೆ ಅವಾಚ್ಯ ಶಬ್ದಗಳಿಂದ ರಂಗಪ್ಪ ಇತನು ಬೈಯುತ್ತಿದ್ದನು,ಆಗ ಕೃಷ್ಣಪ್ಪ ತಂದೆ ಅಯ್ಯಣ್ಣ ದೇವದುಗರ್ಾ,ಸಾಬಣ್ಣ ತಂದೆ ಅಯ್ಯಣ್ಣ ದೇವದುಗರ್ಾ,ಹಣಮಂತ ತಂದೆ ಅಯ್ಯಣ್ಣ ದೇವದುಗರ್ಾ,ಭೀಮರಾಯ ತಂದೆ ದೊಡ್ಡರಾಜಪ್ಪ ಹೇಳವ ಎಲ್ಲರೂ ಓಡಿಬಂದು ನನಗೆ ಸುತ್ತುವರಿದು ನಿನು ನಮ್ಮ ಜಾತಿಯವನಿದ್ದು ನಮಗ್ಯಾಕೆ ಬಜನಾಕ್ಕೆ ಕರೆದಿಲ್ಲ ಅಂತಾ ಅಂದವರೆ ನನಗೆ ಎಳೆದಾಡಿ ಬಾಗಣ್ಣ ಮತ್ತು ರಂಗಪ್ಪ ಇಬ್ಬರೂ ಕೈಯಿಂದ ಮುಷ್ಠಿಮಾಡಿ ಮುಖಕ್ಕೆ ,ಗಲ್ಲಕ್ಕೆ,ಬಾಯಿಗೆ.ಹೊಡೆದು ರಕ್ತಗಾಯ ಮಾಡಿರುತ್ತಾರೆ.ನಂತರ ಕೃಷ್ಣಪ್ಪ,ಸಾಬಯ್ಯ ಇಬ್ಬರೂ ಹಿಡಿಗಲಿನಿಂದ ನನ್ನ ಬೇನ್ನಿಗೆ ,ಎದೆಗೆ,ಹಾಗೂಪಕ್ಕೆಲುಬಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ.ಜಗಳದಲ್ಲಿ ಆದ ಗಾಯಗಳಿಂದ ನೊವು ತಾಳಲಾರದೆ ಚಿರಾಡುತ್ತಿರುವಾಘ ನನ್ನ ಅಕ್ಕ ತಿಮ್ಮವ್ವ ಗಂಡ ನಾಗಪ್ಪ ಹಾಗೂ ನನ್ನ ತಾಯಿ ದೇವಮ್ಮ ಓಡಿ ಬಂದು ಜಗಳ ಬಿಡಿಸಲು ಬಂದರೆ ಹಣಮಂತ ಮತ್ತು ಭೀಮರಾಯ ಇವರು ನನ್ನ ಅಕ್ಕ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನೂಕಿಕೊಟ್ಟಿರುತ್ತರೆ.ಸದರಿ ಜಗಳವನ್ನು ನೊಡಿ ಅಲ್ಲಿಯೆ ಇದ್ದ ದೇವಿಂದ್ರ ತಂದೆ ಮಲ್ಲಯ್ಯ ಹೊಸಳ್ಳಿ,ದೇವು ತಂದೆ ಚಂದಪ್ಪ ಹಳೆರ,ಚನ್ನಬಸಪ್ಪ ತಂದೆ ಮಲ್ಲಯ್ಯ ಹರಿಜನ ಎಲ್ಲರೂ ಕೂಡಿ ಜಗಳ ಬಿಡಿಸಿ ಕಳುಹಿಸಿದರು. ಜಗಳ ಬಿಟ್ಟು ಹೊಗುವಾಗ ಇನ್ನೊಂದು ಸಲ ನನ್ನ ಕೈಗೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾರೆ, ಸದರಿ ಜಗಳವು ಗ್ರಾಮದ ಅಂಬೇಡ್ಕರ ಸಕಲರ್್ ಹತ್ತಿರ ಆಗಿದ್ದು ಆಗ ರಾತ್ರಿ ಸುಮಾರು 10.30 ಗಂಟೆಯಾಗಿರಬಹುದು.ಈ ಜಗಳದಲ್ಲಿ ನನಗೆ ತಿವ್ರತರನಾದ ಗಾಯಗಳಾಗಿ ನರಳಾಡುತ್ತಿರುವಾಗ ನನ್ನ ಅಕ್ಕ ಮತ್ತು ತಾಯಿ ಇಬ್ಬರೂ ಸೇರಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಉಪಾಚಾರ ಸಲುವಾಗಿ ಸೇರಿಕೆ ಮಾಡಿದ್ದು ಇರುತ್ತದೆ.ವಿನಾ ಕಾರಣ ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 162/2021 ಕಲಂ.143,147,148, 323, 324, 504, 506. ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 65/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ದಿನಾಂಕ 08/12/2021 ರಂದು ರಾತ್ರಿ 10-50 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮುದ್ನಾಳ ಕ್ರಾಸ್ ಹತ್ತಿರ ಈ ಕೇಸಿನ ಗಾಯಾಳು ಸಂಗಪ್ಪ ಈತನು ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಚಾಲನೆ ಮಾಡಿಕೊಂಡು ಹೊರಟಿದ್ದ ಬೂದಿ ಟ್ಯಾಂಕರ್ ಲಾರಿ ನಂ. ಕೆಎ-36, ಬಿ-8130 ನೇದ್ದಕ್ಕೆ ಆರೋಪಿತ ಲಾರಿ ನಂಬರ ಎಪಿ-36, ವಾಯ್-2778 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಎರಡು ವಾಹನಗಳು ರಸ್ತೆಯ ಎಡ ಮತ್ತು ಬಲ ಬದಿಗೆ ಪಲ್ಟಿಯಾಗಿದ್ದು ಇರುತ್ತವೆ. ಈ ಘಟನೆಯಲ್ಲಿ ಎರಡು ಲಾರಿ ಚಾಲಕರುಗಳಿಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು, ಪಿಯರ್ಾದಿಯು ಈ ಘಟನೆ ಬಗ್ಗೆ ತಮ್ಮ ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 12/12/2021 ರಂದು ಕಲಬುರಗಿಯ ಮಣೂರು ಆಸ್ಪತ್ರೆಯಲ್ಲಿ ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 65/2021 ಕಲಂ 279, 337, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 66/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 12/12/2021 ರಂದು ಸಮಯ 9-30 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಶ್ರೀ ರವೀಂದ್ರ ಎಚ್.ಸಿ-189 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ, ಗಾಯಾಳು ಪಿಯರ್ಾದಿ ಶ್ರೀ ತಾಯಪ್ಪ ತಂದೆ ಕುಮಲಯ್ಯ ಮೈಲಾಪುರದೋರ ವಯ;22 ವರ್ಷ, ಜಾ;ಕುರಬರ, ಉ;ವಿದ್ಯಾಥರ್ಿ, ಸಾ;ಮಲ್ಹಾರ, ಹಾ;ವ;ಹತ್ತಿಕುಣಿ, ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 11-15 ಪಿ.ಎಂ.ಕ್ಕೆ ಬಂದು ಅಸಲು ಪಿಯರ್ಾದಿ ಹೇಳಿಕೆಯನ್ನು ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ವಿದ್ಯಾಥರ್ಿಯಾಗಿದ್ದುಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಾನು ಯಾದಗಿರಿಯ ಜವಾಹರ ಕಾಲೇಜ್ನಲ್ಲಿ ಬಿ.ಎ. ಓದುತ್ತಿದ್ದು, ನನ್ನ ವಿದ್ಯಾಭ್ಯಾಸದ ಸಲುವಾಗಿ ನಮ್ಮ ದೊಡ್ಡಪ್ಪನವರಾದ ಸೋಮಲಿಂಗಪ್ಪ ಮುಂಡ್ರಿಗೇರ ಸಾ;ಹತ್ತಿಕುಣಿ ಗ್ರಾಮದ ಇವರ ಮನೆಯಲ್ಲಿಯೇ ವಾಸವಾಗಿರುತ್ತೇನೆ. ಹೀಗಿದ್ದು ಇಂದು ದಿನಾಂಕ 12/12/2021 ರಂದು ನನ್ನ ದೊಡ್ಡಪ್ಪನ ಮಗಳಾದ ಆರತಿ ಈಕೆಯ ವಿವಾಹವು ವಾಡಿಯಲ್ಲಿದ್ದು ನಾನು ಕೂಡ ಎಲ್ಲರೊಂದಿಗೆ ಮುದುವೆ ಕಾರ್ಯಕ್ರಮಕ್ಕೆ ವಾಡಿಗೆ ಹೋಗಿದ್ದೆನು. ಮದುವೆ ಮುಗಿಸಿಕೊಂಡು ಸಾಯಂಕಾಲ ನಾನು ಮತ್ತು ನನ್ನ ಸ್ನೇಹಿತನಾದ ಹತ್ತಿಕುಣಿ ಗ್ರಾಮದ ಸಾಬರೆಡ್ಡಿ ತಂದೆ ಶರಣಪ್ಪ ರಾಯಪ್ಪನೋರ ಇಬ್ಬರು ಸೇರಿಕೊಂಡು ಯಾದಗಿರಿಗೆ ಬರಲು ವಾಡಿ ಬಸ್ ನಿಲ್ದಾಣದ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ನನ್ನ ಅಣ್ಣನವರಾದ ಮಲ್ಲಿಕಾಜರ್ುನ ತಂದೆ ಸೋಮಲಿಂಗಪ್ಪ ಮುಂಡ್ರಿಗೇರ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-09. ಇ.ಎಫ್-1358 ನೇದ್ದನ್ನು ತೆಗೆದುಕೊಂಡು ನಾವು ನಿಂತಲ್ಲಿಗೆ ಬಂದು ನಾನು ಯಾದಗಿರಿಗೆ ಹೊರಟಿದ್ದೇನೆ ನೀವು ಇದೇ ಮೊಟಾರು ಸೈಕಲ್ ಮೇಲೆ ಬರ್ರೀ ಹೋಗೋಣ ಅಂದಾಗ ಆಗ ನಾವಿಬ್ಬರು ಮೋಟಾರು ಸೈಕಲ್ ಮೇಲೆ ಕುಳಿತುಕೊಂಡಾಗ ಮಲ್ಲಿಕಾಜರ್ುನ ಈತನು ಮೋಟಾರು ಸೈಕಲನ್ನು ನಡೆಸಿಕೊಂಡು ನಮಗೆ ಯಾದಗಿರಿಗೆ ಕರೆದುಕೊಂಡು ಬಂದನು. ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ನಾವು ಮೂರು ಜನರು ಚಹಾ ಕುಡಿದು, ನಂತರ ಯಾದಗಿರಿಯ ಗಂಗಾನಗರ ಬೈಪಾಸ್ ರಸ್ತೆ ಮೂಲಕ ಹತ್ತಿಕುಣಿಗೆ ಅದೇ ಮೋಟಾರು ಸೈಕಲ್ ಮೇಲೆ ಹೊರಟೆವು. ಮಾರ್ಗ ಮದ್ಯೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಯಾದಗಿರಿ ನಗರದ ಆರ್.ಟಿ.ಓ ಕಾಯರ್ಾಲಯದ ಹತ್ತಿರ ಮೋಟಾರು ಸೈಕಲನ್ನು ಮಲ್ಲಿಕಾಜರ್ುನ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ನಾವಿಬ್ಬರು ನಿಧಾನವಾಗಿ ಹೋಗು ಅಂದರೂ ಕೇಳದೇ ಅದೇ ವೇಗದಲ್ಲಿ ಹೊರಟಿದ್ದಾಗ ಅದೇ ಸಮಯಕ್ಕೆ ನಾವು ನೋಡು ನೋಡುತ್ತಿದ್ದಂತೆ ನಮ್ಮ ಮುಂದೆ ಹೊರಟಿದ್ದ ಒಂದು ಕಾರ್ ನಂಬರ ಕೆಎ-33, ಎಮ್-7139 ನೇದ್ದರ ಚಾಲಕನು ಕೂಡ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಯಾವುದೇ ಇಂಡಿಕೇಟರಗಳನ್ನು ಹಾಕದೇ ಒಮ್ಮೊಲೆ ರಸ್ತೆಯ ಬಲಕ್ಕೆ ಕಾರನ್ನು ಯು ಟರ್ನ ಮಾಡುತ್ತಿದ್ದಾಗ ಆಗ ಮೋಟಾರು ಸೈಕಲ್ ನೇದ್ದಕ್ಕೆ ಮಲ್ಲಿಕಾಜರ್ುನನು ಬ್ರೇಕ್ ಹಾಕಿದರೂ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರಿಗೆ ಹೋಗಿ ಡಿಕ್ಕಿಹೊಡೆದಾಗ ಅಪಘಾತವಾಗಿರುತ್ತದೆ. ಸದರಿ ಅಪಘಾತದಲ್ಲಿ ನನಗೆ ಎಡ ಕಿವಿಗೆ, ತಲೆಯ ಎಡಭಾಗದಲ್ಲಿ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ, ಮೋಟಾರು ಸೈಕಲ್ ನಡೆಸುತ್ತಿದ್ದ ಮಲ್ಲಿಕಾಜರ್ುನ ಈತನಿಗೆ ಎಡ ಹುಬ್ಬಿನ ಮೇಲೆ ರಕ್ತಗಾಯ, ಹಣೆಗೆ ಭಾರೀ ಒಳಪೆಟ್ಟಾಗಿದ್ದು, ಎಡಗಾಲು ಪಾದದ ಮೇಲೆ ಭಾರೀ ರಕ್ತಗಾಯವಾಗಿರುತ್ತದೆ ಮತ್ತು ಸಾಬರೆಡ್ಡಿ ಈತನಿಗೆ ಎಡ ಹುಬ್ಬಿನ ಮೇಲೆ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ಕಾರ್ ಚಾಲಕನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪ್ರದೀಪ ತಂದೆ ಸಾಹೇಬಗೌಡ ಮಾಲಿಪಾಟೀಲ್ ವಯ;24 ವರ್ಷ, ಜಾ;ಲಿಂಗಾಯತ್ ರೆಡ್ಡಿ, ಉ;ವಿದ್ಯಾಥರ್ಿ, ಸಾ;ಯಡ್ಡಳ್ಳಿ ಅಂತಾ ತಿಳಿಸಿರುತ್ತಾನೆ. ಈ ಅಪಘಾತವು ಇಂದು ದಿನಾಂಕ 12/12/2021 ರಂದು ರಾತ್ರಿ 8-30 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ. ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ವಾಹನ ಬಂದಾಗ ಅಲ್ಲಿದ್ದ ಜನರು ಅಂಬುಲೆನ್ಸ್ ನಲ್ಲಿ ನಮಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನಾನು ಈ ಘಟನೆ ಬಗ್ಗೆ ನನ್ನ ದೊಡ್ಡಪ್ಪ ಸೋಮಲಿಂಗಪ್ಪ ಇವರಿಗೆ ಪೋನ್ ಮಾಡಿ ತಿಳಿಸಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಲು ಹೇಳಿರುತ್ತೇನೆ. ಸ್ವಲ್ಪ ಸಮಯದ ನಂತರ ಆಸ್ಪತ್ರೆಗೆ ನನ್ನ ದೊಡ್ಡಪ್ಪ ಸೋಮಲಿಂಗಪ್ಪ, ಹಾಗೂ ಅವರೊಂದಿಗೆ ನನ್ನ ಸ್ನೇಹಿತರಾದ ಬೀರಪ್ಪ ತಂದೆ ಸಾಬಣ್ಣ ಮುಂಡ್ರಿಗೇರ, ಮಲ್ಲಪ್ಪ ತಂದೆ ಶಿವಪ್ಪ ಶಿವಪುರ ಸಾ;ಎಲ್ಲರೂ ಹತ್ತಿಕುಣಿ ಇವರು ಬಂದು ಅಪಘಾತದ ಬಗ್ಗೆ ನಮಗೆ ವಿಚಾರಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ 12/12/2021 ರಂದು ರಾತ್ರಿ 8-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಯಾದಗಿರಿ ನಗರದ ಆರ್.ಟಿ.ಓ ಕಾಯರ್ಾಲಯದ ಬಳಿ ಮುಖ್ಯ ರಸ್ತೆಯ ಮೇಲೆ ನಮ್ಮ ಮೋಟಾರು ಸೈಕಲ್ ನಂಬರ ಕೆಎ-09. ಇ.ಎಫ್-1358 ನೇದ್ದರ ಸವಾರ ಮಲ್ಲಿಕಾಜರ್ುನ ಹಾಗು ಕಾರ್ ನಂಬರ ಕೆಎ-33, ಎಮ್-7139 ನೇದ್ದರ ಚಾಲಕ ಪ್ರದೀಪ ಈತನ ಅತೀವೇಗ ಮತ್ತು ಅಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದರಿಂದ ಘಟನೆ ಜರುಗಿದ್ದು ಅವರ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 66/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ 248/2021. ಕಲಂ. 279.338.ಐ.ಪಿ.ಸಿ. : ನಿನ್ನೆ ದಿನಾಂಕ: 11/12/2021 ರಂದು 13-00 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ನಾನು ಜೋತೆಯಲ್ಲಿ ತನಿಖಾ ಸಹಾಯಕ ಹೆಚ್.ಸಿ.164. ರವರೊಂದಿಗೆ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಎಂ,ಎಲ್,ಸಿ ಸ್ವಿಕರಿಸಿಕೊಂಡು ಗಾಯಾಳುದಾರನಾದ ಅಯ್ಯಪ್ಪನು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇದ್ದಾನೊ ಇಲ್ಲವೋ ಎಂಬುದರ ಬಗ್ಗೆ ವೈದ್ಯಾಕಾರಿಗಳಿಗೆ ಪತ್ರ ಬರೆದಿದ್ದು ವೈದ್ಯಾಧಿಕಾರಿಗಳು ಅದೆ ಪತ್ರದಲ್ಲಿ ಸದರಿ ಗಾಯಾಳು ತಲೆಗೆ ಭಾರಿ ಗಾಯವಾಗಿದ್ದಿರಂದ ಹೆಳಿಕೆ ನಿಡುವ ಸ್ಥತಿಯಲ್ಲಿ ಇರುವುದಿಲ್ಲಾ ಅಂತ ಲಿಖಿತವಾಗಿ ನಿಡಿದ್ದು ನಂತರ ಇಂದು ಗಾಯಾಳುವಿನ ತಾಯಿಯಾದ ಶ್ರೀಮತಿ ನಿಂಗಮ್ಮ ಗಂಡ ಶಾಂತಪ್ಪ ಬಂಡಾರಿ ವ|| 52 ಜಾ|| ಮಾದಿಗ ಉ|| ಕೂಲಿ ಸಾ|| ನಂದಳ್ಳಿ ತಾ|| ಶಹಾಪೂರ ಇವರಿಗೆ ವಿಚಾರಣೆ ಮಾಡಲಾಗಿ ಹೇಳಿಕೆ ಪಿಯರ್ಾದಿ ನಿಡಿದ್ದೆನೆಂದರೆ. ಹಿಗಿದ್ದು ನಾನು ಮತ್ತು ನನ್ನ ಗಂಡ ಹಾಗೂ ನನ್ನ ಮಕ್ಕಳು ಕೂಲಿ ಕೆಲಸಕ್ಕೆ ಮುನಮುಟಿಗಿಯ ಕೆ ಆಂಜನಯ್ಯಲು ತಂದೆ ಹಣಮಯ್ಯ ಇವರ ಹತ್ತಿರ ಬಂದು ಅವರ ಜೋಪಡಿಯ ಪಕ್ಕದಲ್ಲಿ ಒಂದು ಜೋಪಡಿಹಾಕಿಕೊಂಡು ಅವರ ಹತ್ತಿರ ಕೂಲಿ ಕೆಲಸ ಮಾಡಿಕೊಂಡು ಸುಮಾರು 4 ತಿಂಗಳಿಂದ ಇದ್ದೆವು. ಹಿಗಿದ್ದು ದಿನಾಂಕ 04/12/2021 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ನನ್ನ ಮಗ ಅಯ್ಯಪ್ಪನು ಹತ್ತಿಗುಡೂರದಲ್ಲಿ ಕೆಲಸವಿದೆ ಹೋಗಿ ಬರುತ್ತೆನೆ ಅಂತ ಹೇಳಿ ಕೆ ಆಂಜನಯ್ಯಲು ಇವರ ಮೋಟರ್ ಸೈಕಲ್ ನಂ ಕೆಎ-27 ಜೆ-432 ನೇದ್ದು ತೆಗೆದುಕೊಂಡು ಹತ್ತಿಗುಡೂರಕ್ಕೆ ಹೋದನು. ಸಾಯಂಕಾಲ ನಮ್ಮ ಹತ್ತಿರ ಬಂದ್ದಿದ್ದ ನನ್ನ ಮಗ ಭೀಮಣ್ಣನು ರಾತ್ರಿ 9-00 ಗಂಟೆಯ ಸುಮಾರಿಗೆ ನಂದೆಳ್ಳಿ ಗ್ರಾಮಕ್ಕೆ ಹೋಗುತ್ತೆನೆ ಅಂತ ಹೆಳಿ ತನ್ನ ಮೋಟರ್ ಸೈಕಲ್ ಮೇಲೆ ಹೋದನು. ನಂತರ ಭಿಮಣ್ಣನು ನನಗೆ ಫೊನ ಮಾಡಿ ತಿಳಿಸಿದ್ದೆಸಿದ್ದೆನೆಂದರೆ. ನಾನು ನಂದೆಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ಹತ್ತಿಗುಡೂರ-ಹೈಯಾಳ (ಬಿ) ಮುಖ್ಯ ರಸ್ತೆಯ ಮೇಲೆ ಸೋಲಾರ ಪ್ಲಾಂಟ್ ಹತ್ತಿರ ರಾತ್ರಿ 9-10 ಗಂಟೆಯ ಸುಮಾರಿಗೆ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಹತ್ತಿಗುಡೂರ ಕಡೆಯಿಂದ ಹೈಯಾಳ (ಬಿ) ಕಡೆಗೆ ಚಲಾಯಿಸಿಕೊಂಡು ಬಂದು ಒಮ್ಮಲೆ ಸ್ಕೀಡ್ ಆಗಿ ಬಿದ್ದು ಅಪಘಾತವಾಗಿದ್ದು ನಾನು ನೋಡಿ ಹೋಗಿ ನೋಡಲಾಗಿ ನನ್ನ ತಮ್ಮ ಅಯ್ಯಪ್ಪ ತಂದೆ ಶಾಂತಪ್ಪ ಬಂಡಾರಿ ಇದ್ದು ಸದರಿ ಅಪಘಾತದಲ್ಲಿ ಅಯ್ಯಪ್ಪನಿಗೆ ಎಡಗಡೆ ಹಣೆಗೆ, ಎಡಕಣ್ಣಿಗೆ, ಎಡಕಪಾಳಕ್ಕೆ, ಎಡಗಡೆಯ ಕುತ್ತಿಗೆಗೆ, ಎಡಬುಜಕ್ಕೆ, ಬಲಮುಂಗೈಗೆ ತರಚಿದ ಗಾಯವಾಗಿದ್ದು, ತಲೆಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ಅಪಘಾತವಾದ ಮೋಟರ್ ಸ್ಯಕಲ್ ನಂ ಕೆಎ-27 ಜೆ-432 ನೇದ್ದು ಇದ್ದು ಜಖಂ ಗೊಂಡಿರುತ್ತದೆ. ಆಗ ನಾನು 108 ಅಂಬುಲೇನ್ಸಗೆ ಫೊನ ಮಾಡಿರುತ್ತೆನೆ ಅಂಬುಲೇನ್ಸ ಬಂದ ನಂತರ ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತೆನೆ ನೀವು ಬರಿ ಅಂತ ತಿಳಿಸಿದ್ದರಿಂದ ನಾನು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ಅಯ್ಯಪ್ಪನಿಗೆ ನೋಡಲಾಗಿ ಈ ಮೇಲಿನಂತೆ ಭಿಮಣ್ಣನು ತಿಳಿಸಿದ್ದು ಸರಿ ಇದ್ದು. ಅಯ್ಯಪ್ಪನಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಅಯ್ಯಪ್ಪನಿಗೆ ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗ ಭೀಮಣ್ಣ ಇಬ್ಬರು ಅಯ್ಯಪ್ಪನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಮಾಡಿದ್ದು ಇರುತ್ತದೆ. ನಮಗೆ ಕಾನೂನಿನ ಅರಿವು ಇರದೆ ಇದ್ದುದ್ದರಿಂದ ಮತ್ತು ನನ್ನ ಮಗನಿಗೆ ವೈದ್ಯಕಿಯ ಉಪಚಾರ ಮಾಡಿಸುವುದು ಅವಶ್ಯವಾಗಿದ್ದರಿಂದ ಕೇಸು ದಾಖಲಿಸದೆ ನೇರವಾಗಿ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇಂದು ತಡವಾಗಿ ತಮ್ಮ ಮುಂದೆ ಹೇಳಿಕೆ ನಿಡುತ್ತಿದ್ದೆನೆ.
ಕಾರಣ ನನ್ನ ಮಗ ಅಯ್ಯಪ್ಪನು ಮೋಟರ್ ಸೈಕಲ್ ನಂ ಕೆಎ-27 ಜೆ-132 ನೇದ್ದನ್ನು ತೆಗೆದುಕೊಂಡು ಹೋಗಿ ಸ್ಕಿಡ್ ಆಗಿ ಬಿದ್ದು ಅಪಘಾತದಲ್ಲಿ ಬಾರಿ ಗಾಯ ಮಾಡಿಕೊಂಡಿರುತ್ತಾನೆ. ಆದ್ದರಿಂದ ಅಯ್ಯಪ್ಪನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಇಂದು ದಿನಾಂಕ 12/12/2021 ರಂದು ಬೆಳಿಗ್ಗೆ 9-00 ಗಂಟೆಗೆ ಠಾಣೆಗೆ ಹಾಜರಾಗಿ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 248/2021 ಕಲಂ 279. 338. ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು