ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-12-2022


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 93/2022 ಕಲಂ ಮನುಷ್ಯಕಾಣೆಯಾದ ಬಗ್ಗೆ: ಫಿಯರ್ಾದಿಯತಂದೆ ಮುನೆಪ್ಪಈತನಿಗೆ ವಯಸ್ಸಾಗಿದ್ದಲ್ಲದೇಎಡಗಾಗಲಿಗೆಗ್ಯಾಂಗ್ರಿನ್ಆಗಿದ್ದು ಬಡಿಗೆ ಹಿಡಿದುಕೊಂಡುತಿರುಗಾಡುತ್ತಿದ್ದನು. ಫಿಯರ್ಾದಿಯಜನರಲ್ ಸ್ಟೋರ್ ಪಕ್ಕದಲ್ಲಿಯೇಒಂದುರೂಮನಲ್ಲಿ ವಾಸವಾಗಿದ್ದನು. ಹೀಗಿದ್ದು ದಿನಾಂಕ:29/10/2022 ರಂದು ಸಾಯಂಕಾಲ 04.00 ಗಂಟೆ ಸುಮಾರಿಗೆ ಮುನೆಪ್ಪಈತನುಯಾರಿಗೂ ಹೇಳದೇ ಕೇಳದೇ ತನ್ನರೂಮನಿಂದಎಲ್ಲಿಗೋ ಹೋಗಿರುತ್ತಾನೆ. ಅಂದುರಾತ್ರಿಯಾದರೂತನ್ನರೂಮ್ಗೆ ವಾಪಸ್ ಬಂದಿರುವದಿಲ್ಲ. ಮರುದಿನ ಫಿಯರ್ಾದಿಯುತಮ್ಮಊರಲ್ಲಿ, ಹೊಲಕ್ಕೆ ಹೋಗಿ ಹುಡುಕಾಡಲಾಗಿ ಸಿಕ್ಕಿರುವದಿಲ್ಲ. ನಂತರ ಸಂಬಂಧಿಕರು, ನೆಂಟರು, ಬೀಗರುಇವರಿಗೆ ಫೋನ್ ಮಾಡಿ ವಿಚಾರಿಸಲಾಗಿಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ನಂತರ ನಾಲವಾರ ಮಠ, ಅಬ್ಬೆತುಮಕೂರ ಮಠ, ತಿಂಥಣಿ ಮಠ, ಗುಡಿಗುಂಡಾರ, ಆಶ್ರಮಗಳಿಗೆ ಹೋಗಿ ಹುಡುಕಾಡಿ ವಿಚಾರಿಸಲಾಗಿತನ್ನತಂದೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಕಾರಣಕಾಣೆಯಾದತನ್ನತಂದೆಯವರನ್ನು ಪತ್ತೆ ಮಾಡಿಕೊಡಲು ವಿನಂತಿಅಂತಾದೂರುಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 171/2022, ಕಲಂ. 323, 324, 504, 506. ಸಂಗಡ 34 ಐ ಪಿ ಸಿ: ಇಂದು ದಿನಾಂಕ: 12/12/2022 ರಂದು 05:00 ಪಿ.ಎಮ್ ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಗಾಯಾಳುದಾರಳಾದ ಶ್ರೀಮತಿ ತಾಯಮ್ಮ ಗಂಡ ದಿ|| ಬುಗ್ಗಪ್ಪ ದಾಸರ ಸಾ|| ಮುಂಡರಗಿ. ಇವರು ನೀಡಿದ ದೂರು ಹೇಳಿಕೆ ಸಾರಂಶವೇನೆಂದರೆ,  ದಿನಾಂಕ:10-12-2022 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ, ಹೋರಗಡೆ ಹೋಗಿದ್ದ ನನ್ನ ಮಗ ಮನೆಗೆ ಬಂದ ಮೇಲೆ ಅವನಿಗೆ ನಾನು ನನಗೆ ಮೈಯಲ್ಲಿ ಹುಷಾರಿಲ್ಲ ನನಗೆ ಆಸ್ಪತ್ರೆಗೆ ಕರೆದುಕೊಂಡು ಹೋಗು ಇಲ್ಲದಿದ್ದರೆ ನನಗೆ ಹಣ ಕೋಡು ನಾನು ಹೋಗಿ ದವಾಖಾನೆ ತೋರಿಸಿಕೊಂಡು ಬರುತ್ತೆನೆ ಅಂತ ಅಂದಾಗ ನನ್ನ ಮಗ ಏಕಾ ಏಕಿ ನೀನಗೆ ಯಾವ ದವಾಖಾನೆ ತೋರಸಲ್ಲ ದಿನಾಲು ನಿಂದು ಇದೇ ಕಿರಿಕಿರಿಯಾಗಿದೆ ಇವತ್ತ ನಾನೆ ನಿನಗ ಒಂದು ಗತಿ ಕಾಣಿಸುತ್ತೆನೆ ರಂಡಿ, ಬೋಸಡಿ, ನಿನಗ ಯಾರ ಕಾಪಡತಾರ ನಾನು ನೋಡುತ್ತೆನೆ, ನೀನ್ ಕಾಲಗ ಸಾಕಾಗ್ಯಾದ ಅಂತ ತನ್ನ ಹೆಂಡತಿಗೆ ಏ ಶಾರದ ಒಂದು ಕಟ್ಟಿಗೆ ತೊಗಂಡ ಬಾ ಇವನೊವನ್ ಇವತ್ತ ಈಕೆಗೆ ಖಲಾಸ ಮಾಡಿ ಬಿಡಮ ಅಂತ ಹೇಳಿ, ಅವನ ಹೆಂಡತಿ ಹೌದು ಈಕಿನ ಕಾಲಗ ಸಾಕಾಗಿ ಹೋಗ್ಯಾದ ಚಿನಾಲಿ ಸೂಳಿ, ಈ ರಂಡಿಗೆ ಇವತ್ತ ಬಿಡದ ಬ್ಯಾಡ ಅಂದು ಕೈಯಲ್ಲಿ ಬಡಿಗೆ ಹೀಡಿದುಕೊಂಡು ಬಂದವಳೆ ನಾನು ಮನೆಯ ಅಂಗಳದಲ್ಲಿದ್ದಾಗ ಭೀಮರಾಯ ನನ್ನ ಬಲಗೈ ತಿರುವಿ ಹಿಂದಕ್ಕೆ ಹಿಡಿದಕೊಂಡು ಬೆನ್ನಿಗೆ ಕೈಮುಷ್ಟಿ ಮಾಡಿ ಹೊಡೆದು ಗುಪ್ತಗಾಯ ಮಾಡಿದನು, ಆಗ ಅವನ ಹೆಂಡತಿ ಶಾರದ ತನ್ನ ಕೈಯಲ್ಲಿಯ ಕಟ್ಟಿಗೆಯಿಂದ ನನ್ನ ಎಡಗಾಲ ತೋಡೆಗೆ ಜೋರಾಗಿ ಹೊಡೆದು ಗುಪ್ತಗಾಯಮಾಡಿ ಈ ರಂಡಿ ಕಾಲಗ ಸಾಕಾಗ್ಯಾದ ಇವತ್ತು ಈಕೆಗೆ ಖಲಾಸ ಮಾಡಮ್ ಅಂತ ನನಗೆ ನೇಲಕ್ಕೆ ಹಾಕಿ ಇಬ್ಬರು ಕಾಲಿನಿಂದ ಒದ್ದು ಬೇನ್ನಿಗೆ ಮತ್ತು ಹೊಟ್ಟೆಗೆ ಗುಪ್ತಗಾಯ ಮಾಡಿರುತ್ತಾರೆ. ನಾನು ನೆಲಕ್ಕೆ ಬಿದ್ದು ಚಿರಾಡುತ್ತಿರುವಾಗ ನಾನು ಚಿರಾಡುವುದು ಕೆಳಿಸಿಕೊಂಡ ಬಾಜು ಮನೆಯಲ್ಲಿದ್ದ ಸಾಬಣ್ಣ ತಂದೆ ಯಮನಪ್ಪ ದಾಸರ ಮತ್ತು ನಾಗಪ್ಪ ತಂದೆ ಹಣಮಂತ ಬಾವೂರ ಇವರು ಬಂದು ಜಗಳ ಬಿಡಿಸಿ ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ. ನನಗೆ ಹಲ್ಲೆ ಮಾಡಿದ ಬಗ್ಗೆ ನನ್ನ ಸಂಭಂದಿಕರ ಜೋತೆಗೆ ವಿಚಾರಿಸಿಕೊಂಡು ದೂರ ನೀಡಲು ತಡವಾಗಿರುತ್ತದೆ.ಕಾರಣ ನನ್ನ ಮೇಲೆ ಕಟಿಗೆ ಮತ್ತು ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಭೀಮರಾಯ ಮತ್ತು ಅವನ ಹೆಂಡತಿ ಶಾರದ ಸಾ|| ಮುಂಡರಗಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಲ್ಯಾಪಟ್ಯಾಪನಲ್ಲಿ ಹೇಳಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ದೂರು ಹೇಳಿಕೆ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ:171/2022 ಕಲಂ 323, 324, 504, 506, ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 129/2022 ಕಲಂ 379 ಐಪಿಸಿ: ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಗೆಳೆಯನಾದ ಮಹೇಶಕುಮಾರ ತಂದೆ ಸಾಬಣ್ಣ ನಾಟೇಕಾರ ಸಾ|| ಅಜೀಜ್ ಕಾಲೋನಿ ಯಾದಗಿರಿ ಇವರದು ಒಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 33  ಇಕ 8118 ಅಂತಾ ಇದ್ದು, ಅದರ ಇಟಿರಟಿಜ ಓಠ-ಎಅ73ಇಖಿ1040562, ಅಊಂಖಖಖ ಓಔ-ಒಇ4ಎಅ735ಅಊಖಿಔ16496, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 35,000/-ರೂ|| ಗಳು ಈ ಮೋಟರ್ ಸೈಕಲ್ ಅವರು ಉಪಯೋಗ ಮಾಡುತ್ತಿದ್ದರು.  ಹೀಗಿದ್ದು ಮಹೇಶ ಈತನು ದಿನಾಂಕ 10/12/2022 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ತನ್ನ ಮೋಟರ್ ಸೈಕಲ್ ನಂ ಏಂ 33  ಇಕ 8118  ನೇದ್ದನ್ನು ಮನೆಯ ಮುಂದೆ ನಿಲ್ಲಿಸಿ ಲಾಕ್ ಮಾಡಿ ವೈಯಕ್ತಿಕ ಕೆಲಸದ ಪ್ರಯುಕ್ತ ಬೆಂಗಳೂರಿಗೆ ಹೋಗಿರುತ್ತಾನೆ. ಈ ವಿಷಯ ನನಗೆ ತಿಳಿಸಿದ್ದು, ನಂತರ ದಿನಾಂಕ 11/12/2022 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಮಹೇಶ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನೀನು ಸ್ವಲ್ಪ ನಮ್ಮ ಮನೆ ಕಡೆ ಹೋಗಿ ನೋಡು ಅಂತಾ ಅಂದಾಗ ನಾನು ಮತ್ತು ನನ್ನ ಗೆಳೆಯ ಸ್ಟೀಫನ್ ತಂದೆ ರವಿಕುಮಾರ ಸಾ|| ಹೊಸಳ್ಳಿ ಕ್ರಾಸ್ ಯಾದಗಿರಿ ಇಬ್ಬರು ಕೂಡಿ ಅವರ ಮನೆಗೆ ಹೋಗಿ ನೋಡಿದಾಗ ಅವರ ಮನೆಯ ಮುಂದೆ ಅವರ ಮೋಟರ್ ಸೈಕಲ್ ಕಾಣಲಿಲ್ಲ. ಈ ವಿಷಯವನ್ನು ಮಹೇಶ ಈತನಿಗೆ ಪೋನ್ ಮಾಡಿ ತಿಳಿಸಿ, ನಾವು ಕೂಡ ಅವರ ಮನೆಯ ಸುತ್ತಾ-ಮುತ್ತಾ ಮತ್ತು ಕಾಲೋನಿಯಲ್ಲಿ ಮೋಟರ್ ಸೈಕಲ್ ಹುಡುಕಾಡಲಾಗಿ ಅವರ ಮೋಟರ್ ಸೈಕಲ್ ಕಾಣಲಿಲ್ಲ. ನಂತರ ಮಹೇಶನಿಗೆ ನಿನ್ನ ಮೋಟರ್ ಸೈಕಲ್ ಎಲ್ಲಿ ಕಾಣತಾ ಇಲ್ಲಾ ಅಂತಾ ತಿಳಿಸಿದಾಗ, ಅವರು ನಾನು ಯಾದಗಿರಿಗೆ ಬರುವುದು ತಡವಾಗುತ್ತದೆ, ತಾವು ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಅಂತಾ ತಿಳಿಸಿದ್ದರಿಂದ ಅವರ ಮನೆಯಲ್ಲಿ ವಿಚಾರಣೆ ಮಾಡಿ ಇಂದು ದಿನಾಂಕ 12/12/2022 ರಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಮಹೇಶ ಈತನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 129/2022 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 130/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ. 12/12/2022 ರಂದು 6-00 ಪಿಎಂಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿಐ ಸಿ.ಇ.ಎನ್.ಪೊಲಿಸ್ ಠಾಣೆ ಯಾದಗಿರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ,  ಇಂದು ದಿನಾಂಕ: 12/12/2022 ರಂದು 3-15 ಪಿಎಂಕ್ಕೆ ನಾನು ಸಿ.ಇ.ಎನ್.ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಮೈಲಾಪೂರ ಬೇಸ ಕ್ರಾಸದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಅಧಿಕಾರಿ ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಠಾಣೆ ಜೀಪಿನಲ್ಲಿ ಲ್ಯಾಪಟಾಪ ತೆಗೆದುಕೊಂಡು 4-30 ಪಿಎಂಕ್ಕೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಪೀರಸಾಬ ತಂದೆ ಮಹಿಬೂಬಸಾಬ ಕಂಬಾರ ವ; 65 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ಕೋಲಿವಾಡ ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 4710-00 ನಗದು ಹಣ 2) 1 ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು  ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 12/12/2022 ರಂದು  4-30 ಪಿಎಂ ದಿಂದ 5-30 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿ ಪಂಚರ ಸಹಿ ಮಾಡಿಸಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ನಗರ ಠಾಣೆಗೆ 6-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ  ಒಪ್ಪಿಸಿ, ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.130/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

ಇತ್ತೀಚಿನ ನವೀಕರಣ​ : 13-12-2022 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080