ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-01-2023ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 3/2023 323, 324, 341, 504, 506 ಸಂಗಡ 34 ಐಪಿಸಿ:ಫಿರ್ಯಾದಿ & ಆತನ ತಮ್ಮನಾದ ಶೇಖರಗೌಡ ಇಬ್ಬರಿಗೂ ಹೊಲದ ಹಂಚಕೆಯ ಸಂಬಂದ ತಕರಾರು ನಡೆದಿದ್ದು ಇರುತ್ತದೆ. ಸದರಿ ವಿಷಯಕ್ಕೆ ಸಂಬಂದಿಸಿದಂತೆ ದಿನಾಂಕ:11/01/2023 ರಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ನನ್ನ ಪಾಲಿಗೆ ಬಂದ ಹೊಲವನ್ನು ತನ್ನ ಹೆಸರಿಗೆ ಮಾಡಲುಕೇಳಿದ್ದರಿಂದ ಆರೋಪಿತರೆಲ್ಲರೂ ಸೇರಿ ಫಿರ್ಯಾದಿದಾರಿನಿಗೆ ಕೈಯಿಂದ & ಕಲ್ಲಿನಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 04/2023 ಕಲಂ: 279, 338 ಐಪಿಸಿ: ಇಂದು ದಿನಾಂಕ 13/01/2023 ರಂದು 10.45 ಎಎಂ ಕ್ಕೆ ಅಜರ್ಿದಾರರಾದ ಬೀರಲಿಂಗ ತಂದೆ ಮಾನಪ್ಪ ವಂದಗನೂರ ವ|| 38ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಮುದನೂರ(ಬಿ) ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ಅಳಿಯನಾದ ದ್ಯಾಮಣ್ಣ ತಂದೆ ಸಿದ್ದಣ್ಣ ಟಣಕೆದಾರ ವ|| 16ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಯಡ್ಡಳ್ಳಿ ಹಾ|| ಮುದನೂರ ಈತನು ನಮ್ಮ ತಂಗಿಯಾದ ಚೌಡಮ್ಮಳ ಮಗನಾಗಿದ್ದು ದ್ಯಾಮಣ್ಣನು ಮೊದಲಿನಿಂದಲೂ ಶಾಲೆ ಕಲಿಯಲು ನಮ್ಮ ಮನೆಯಲ್ಲಿ ಮುದನೂರಿನಲ್ಲಿಯೇ ಇರುತ್ತಿದ್ದು 9ನೇ ತರಗತಿ ವರೆಗೆ ಶಾಲೆ ಕಲಿತು ಈಗ ಶಾಲೆ ಬಿಟ್ಟು ಮನೆಯಲ್ಲಿದ್ದನು. ಆದರೆ ಈಗ 3 ತಿಂಗಳುಗಳಿಂದ ದ್ಯಾಮಣ್ಣನು ಮೆಕ್ಯಾನಿಕ್ ಕೆಲಸ ಕಲಿಯಲು ದಿನಾಲೂ ಕೆಂಭಾವಿಗೆ ಬಂದು ಬೇರೆ ಇಂಜಿನಿಯರಿಂಗ ಗ್ಯಾರೇಜಗಳಲ್ಲಿ ಕೆಲಸ ಕಲಿಯುತ್ತಾ ಇದ್ದನು. ಅದರಂತೆ ಇಂದು ದಿನಾಂಕ 13/01/2023 ರಂದು ಮುಂಜಾನೆ 9.00 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಳಿಯನಾದ ದ್ಯಾಮಣ್ಣನು ಮಾಮಾ ನಾನು ಕೆಂಭಾವಿಗೆ ಹೋಗುತ್ತಿದ್ದೇನೆ ನೀನು ಬರುತ್ತಿಯಾ ಅಂತಾ ಕೇಳಿದನು. ಆಗ ನಾನು ಹೌದಪ್ಪಾ ನನ್ನದು ಕೆಲಸ ಇದೆ ನಾನೂ ಕೆಂಭಾವಿಗೆ ಬರುತ್ತೇನೆ ಹೋಗೋಣ ಅಂತಾ ಹೇಳಿದೆನು. ನಾನು ಮತ್ತು ನಮ್ಮ ಅಳಿಯನಾದ ದ್ಯಾಮಣ್ಣ ಇಬ್ಬರೂ ಕೂಡಿ ಕೆಂಭಾವಿಗೆ ಬರುವ ಕುರಿತು ನಮ್ಮೂರ ಬಸ್ ನಿಲ್ದಾಣದಲ್ಲಿ ನಿಂತಾಗ ನಮ್ಮೂರಿನ ಟಂಟಂ ಅಟೋ ನಂ ಕೆಎ 33 ಎ 4240 ನೇದ್ದರ ಚಾಲಕನಾದ ಶಿವರಾಜ ತಂದೆ ಶೇಖಣ್ಣ ಹೂಗಾರ ಸಾ|| ಮುದನೂರ(ಬಿ) ಈತನು ನಮ್ಮ ಹತ್ತಿರ ಬಂದು ಕೆಂಭಾವಿಗೆ ಹೋಗುತ್ತೇನೆ ಬರುತ್ತೀರಾ ಅಂತಾ ಕೇಳಿದನು. ಆಗ ನಾನು ಮತ್ತು ನಮ್ಮ ಅಳಿಯನಾದ ದ್ಯಾಮಣ್ಣ ಇಬ್ಬರೂ ಅಟೋದಲ್ಲಿ ಕುಳಿತುಕೊಂಡೆವು. ನಂತರ ಅಟೋ ಚಾಲಕನು 9.10 ಎಎಂ ಕ್ಕೆ ನಮ್ಮೂರಿನಿಂದ ಹೊರಟು ಕೆಂಭಾವಿ ಪಟ್ಟಣಕ್ಕೆ ಬಂದು ಕೆಂಭಾವಿ ಹುಣಸಗಿ ರಸ್ತೆಯ ಮೇಲೆ ಕೆಂಭಾವಿ ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದ ಹತ್ತಿರ ಹೋಗುತ್ತಿದ್ದಾಗ 9.30 ಎಎಂ ಕ್ಕೆ ಅಟೋ ನಂ ಕೆಎ 33 ಎ 4240 ನೇದ್ದರ ಚಾಲಕನಾದ ಶಿವರಾಜನು ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೇ ಬಲಭಾಗಕ್ಕೆ ಕಟ್ ಹೊಡೆದಿದ್ದು, ಅಟೋ ಚಾಲಕನು ನಿಯಂತ್ರಣ ತಪ್ಪಿ ಚಲಾಯಿಸಿದ್ದರಿಂದ ಅಟೋ ಬಲಭಾಗಕ್ಕೆ ಪಲ್ಟಿಯಾಗಿ ಬಿದ್ದಿದ್ದು ಅಟೋದಲ್ಲಿ ಬಲಗಡೆಗೆ ಕುಳಿತಿದ್ದ ನಮ್ಮ ಅಳಿಯನಾದ ದ್ಯಾಮಣ್ಣನು ಕೆಳಗೆ ಬಿದ್ದಿದ್ದು ನಾನು ಎಡಗಡೆಗೆ ಕುಳಿತಿದ್ದು ಅಟೋ ಪಲ್ಟಿಯಾದ ತಕ್ಷಣ ನಾನು ಅಟೋದಿಂದ ಕೆಳಗೆ ಜಿಗಿದಿದ್ದು ನನಗೆ ಯಾವುದೇ ಗಾಯಗಳಾಗಲಿಲ್ಲ. ದ್ಯಾಮಣ್ಣನು ಕೆಳಗೆ ಬಿದ್ದಿದ್ದರಿಂದ ಅವನಿಗೆ ಎಬ್ಬಿಸಿ ನೋಡಲಾಗಿ ಎಡಗಾಲಿನ ತೊಡೆಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿದ್ದು ತಲೆಯ ಹಿಂದೆ ರಕ್ತಗಾಯ ಮತ್ತು ಹಣೆಗೆ ಬಲಗಡೆ ತರಚಿದ ರಕ್ತಗಾಯವಾಗಿದ್ದು ತಕ್ಷಣ ನಾನು ಮತ್ತು ಅಟೋ ಚಾಲಕನಾದ ಶಿವರಾಜ ಇಬ್ಬರೂ ಕೂಡಿ ದ್ಯಾಮಣ್ಣನಿಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ವೈದ್ಯರ ಸಲಹೆಯಂತೆ ದ್ಯಾಮಣ್ಣನಿಗೆ ನಮ್ಮ ತಂಗಿಯಾದ ಚೌಡಮ್ಮ ಮತ್ತು ನಮ್ಮ ಮಾವನಾದ ಸಿದ್ದಣ್ಣ ಟಣಕೆದಾರ ಇವರೊಂದಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನನಗೆ ಯಾವುದೇ ಗಾಯಗಳಾಗದ ಕಾರಣ ನಾನು ಆಸ್ಪತ್ರೆಗೆ ತೋರಿಸಿಕೊಂಡಿಲ್ಲ. ನಮ್ಮ ಅಳಿಯನಾದ ದ್ಯಾಮಣ್ಣನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ಕಲಬುರಗಿ ಆಸ್ಪತ್ರೆಗೆ ಕಳುಹಿಸಿ ನಾನು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಟಂಟಂ ಅಟೋ ನಂ ಕೆಎ 33 ಎ 4240 ನೇದ್ದರಲ್ಲಿ ಕುಳಿತುಕೊಂಡು ಕೆಂಭಾವಿಗೆ ಬರುವಾಗ ಟಂಟಂ ಅಟೋ ಚಾಲಕನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮೆಲೇ ಕಟ್ ಹೊಡೆದು ಪಲ್ಟಿ ಮಾಡಿದ್ದರಿಂದ ಅಟೋದಲ್ಲಿದ್ದ ನಮ್ಮ ಅಳಿಯನಾದ ದ್ಯಾಮಣ್ಣನಿಗೆ ಭಾರೀ ಗುಪ್ತಗಾಯವಾಗಿ ಎಡಗಾಲಿನ ತೊಡೆಗೆ ಕಾಲು ಮುರಿದಂತೆೆ ಆಗಿದ್ದು, ತಲೆಗೆ ರಕ್ತಗಾಯವಾಗಿದ್ದು ಟಂಟಂ ಅಟೋ ಚಾಲಕನಾದ ಶಿವರಾಜ ಹೂಗಾರ ಈತನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 04/2023 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 15-01-2023 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080