ಅಭಿಪ್ರಾಯ / ಸಲಹೆಗಳು

                                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/03/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 38/2021 ಕಲಂ 78(3) ಕೆ.ಪಿ. ಆ್ಯಕ್ಟ : ದಿನಾಂಕ 13/03/2021 ರಂದು ಮಧ್ಯಾಹ್ನ 3-30 ಪಿ.ಎಮ್ ಕ್ಕೆ ಆರೋಪಿತರು ಅಬ್ಬೆತುಮಕೂರ ಗ್ರಾಮದಲ್ಲಿ ಇರುವ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೇಪಣೆ ಮಾಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ ನಗದು ಹಣ 10,700/ರೂ, ಎರಡು ಮಟಕಾ ಚೀಟಿಗಳು, ಮೂರು ಮೊಬೈಲಗಳು, ಎರಡು ಬಾಲಪೆನ್ನ ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ,


ಶೋರಾಪೂರ ಪೊಲೀಸ್ ಠಾಣೆ:- 48/2021 ಕಲಂ:143, 147, 148, 323, 324, 504, 506 ಸಂ. 149 ಐಪಿಸಿ : ಇಂದು ದಿನಾಂಕ:13/03/2021 ರಂದುಜಿಲ್ಲಾ ಸರಕಾರಿಆಸ್ಪತ್ರೆ ಕಲಬುರಗಿಯಿಂದ ಪೊನ ಮೂಲಕ ಎಂ.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆಠಾಣೆಯ ಮಹೇಶ ಹೆಚ್ಸಿ-105 ರವರು 11:00 ಎ.ಎಂ ಕ್ಕೆ ಆಸ್ಪತ್ರೆಗೆ ಬೇಟಿನೀಡಿ ಜಗಳದಲ್ಲಿ ಗಾಯ ಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಮರಲಿಂಗಪ್ಪತಂದೆರಾಮಲಿಂಗಪ್ಪಗುಡಿಮನಿ ಸಾ|| ಹುಣಸಿಹೊಳೆ ಹೇಳಿಕೆ ಸಾರಾಂಶದವೆನಂದರೆ, ನಾನು ನಮ್ಮೂರಗೋವಿಂದಗೌಡಎಂಬುವವರಜಮೀನಿನಲ್ಲಿಜಾಗವನ್ನು ಖರಿದಿಸಿದ್ದು ಇರುತ್ತದೆ. ಆ ಜಾಗವುಕಣ್ವ ಮಠಜಮೀನಿಗೆಅಂಟಿಕೊಂಡಿದ್ದುಇರುತ್ತದೆ. ನಾನು ಖರಿದಿ ಮಾಡಿದಜಾಗದಲ್ಲಿ ಮನೆ ಕಟ್ಟಲು, ಬೇಕಾಗುವ ಸಾಮಾಗ್ರಿಗಳನ್ನು ಕಣ್ವ ಮಠಜಾಗದಲ್ಲಿ ಹಾಕಲು ಸ್ವಾಮಿಜಿಯವರ ಪರವಾನಿಗೆ ಪಡೆದುಕೊಂಡುಜಾಗದಲ್ಲಿ ಮಣ್ಣುಕಲ್ಲು ಸಾಮಾಗ್ರಿಗಳನ್ನು ಹಾಕಿದರಿಂದ ನಮ್ಮೂರಿನ ನಮ್ಮಜನಾಂಗದವರಾದಗ್ಯಾನಪ್ಪತಂದೆ ಭೀಮಪ್ಪಕಾಂಬ್ಳೆಇವರು ಈ ಜಾಗದಲ್ಲಿಯಾಕೆ ಮನೆ ಕಟ್ಟುವ ಸಾಮಾಗ್ರಿಗಳನ್ನು ಹಾಕಿ ಅಂತಾ ಕೆಳುತ್ತಿರುವಾಗ ನಾನು ಅವನಿಗೆ ನೀನು ಏನು ಕೆಳತಿ ಇದುಜಾಗಕಣ್ವ ಮಠ ಸ್ವಾಮಿಜಿಯವರದು ನಾನು ಅವರ ಪರವಾನಿಗೆ ಪಡೆದುಕೊಂಡು ಹಾಕಿದೇನೆಅಂತಾ ಹೇಳಿದೆನು. ಹಿಗಿದ್ದು ದಿನಾಂಕ:10/03/2021 ರಂದು ಮುಂಜಾನೆ 10:30 ಗಂಟೆಗೆ ನಾನು ಮತ್ತು ನನ್ನ ಗೆಳೆಯರಾದ ಪರಶುರಾಮತಂದೆ ಭೀಮಪ್ಪ ಚಲವಾದಿ, ಮಾನಪ್ಪತಂದೆ ಹಣಮಂತ ಬಂಡೋಳ್ಳಿ ಮೂರುಕೂಡಿ ನಮ್ಮೂರಿನಕಣ್ವ ಮಠದ ಮುಂದೆ ಮಾತನಾಡುತ್ತಾ ನಿಂತಾಗ ನಮ್ಮೂರಿನ ನಮ್ಮಜನಾಂಗದವರಾದ 1) ಗ್ಯಾನಪ್ಪತಂದೆ ಭೀಮಪ್ಪಕಾಂಬ್ಳೆ, 2) ಶಂಕರತಂದೆ ಮಲ್ಲಪ್ಪಕಾಂಬ್ಳೆ, 3) ನಿಂಗಪ್ಪತಂದೆ ಮಲ್ಲಪ್ಪಕಾಂಬ್ಳೆ, 4) ಗಂಗಪ್ಪತಂದೆ ಮಲ್ಲಪ್ಪಕಂಬ್ಳೆ, 5) ಮಾನಪ್ಪತಂದೆ ಮಲ್ಲಪ್ಪಕಾಂಬ್ಳೆಎಲ್ಲರೂಕೂಡಿಕೈಯಲ್ಲಿಕಲ್ಲು ಬಡಿಗೆ ಹಿಡಿಕೊಂಡು ಬಂದು ಏನಲೇ ಮರಲಿಂಗ್ಯ ಸೂಳೆ ಮಗನೆ ಸುಮನೆ ಕಣ್ವ ಮಠ ಸ್ವಾಮಿಜಿಯವರ ಪರವಾನಿಗೆ ಪಡೆದುಕೊಂಡು ಬಂದುಕಲ್ಲು ಮಣ್ಣು ಹಾಕಿನಿ ಅಂತಾ ಸುಳ್ಳು ಹೇಳತಿ ರಂಡಿಮಗನೆಅಂತಾಅವಾಚ್ಯ ಶಬ್ದಗಳಿಂದ ಬೈದುಗ್ಯಾನಪ್ಪಇತನುತನ್ನಕೈಲ್ಲಿದ್ದ ಬಡಿಗೆಯಿಂದ ನನ್ನತಲೆಯ ಹಿಂಬಾಗಕ್ಕೆ ಹೊಡೆದುರಕ್ತಗಾಯ ಮಾಡಿದನು, ಶಂಕರಇತನುತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಗಣ್ಣಿಗೆ ಬಡಿಗೆಯಿಂದ ಹೊಡೆದುರಕ್ತಗಾಯ ಮಾಡಿದನು, ನಿಂಗಪ್ಪ ಮತ್ತುಗಂಗಪ್ಪಇಬ್ಬರುಕಲ್ಲಿನಿಂದ ಬೆನ್ನಿಗೆ ಹೊಡೆದುಗುಪ್ತಗಾಯ ಮಾಡಿದರು, ಮಾನಪ್ಪಇತನುಕೈಯಿಂದ ಬಲಗಡೆ ಪಕ್ಕಡಿಗೆ ಹೊಡೆದುಗುಪ್ತಗಾಯ ಮಾಡಿದನು. ಅಲ್ಲೆಇದ್ದ ಪರಶುರಾಮತಂದೆ ಭೀಮಪ್ಪ ಚಲವಾದಿ, ಮಾನಪ್ಪತಂದೆ ಹಣಮಂತ ಬಂಡೋಳ್ಳಿ, ಮತ್ತು ಬಾಯಿ ಮಾತಿನ ಜಗಳ ಕೇಳಿ ಬಂದ ನನ್ನ ಹೆಂಡತಿಜ್ಯೋತಿಗಂಡರಾಮಲಿಂಗಪ್ಪಗುಡಿಮನಿ ಎಲ್ಲರುಕೂಡಿ ಜಗಳವನ್ನು ಬಿಡಿಸಿಕೊಂಡರು. ಇವತ್ತು ಉಳಿದಿ ಸುಳೆಮಗನೆ ಇಲ್ಲಂದರ ನಿನ್ನಜೀವ ಹೊಡೆದ ಬಿಡುತ್ತಿರಲಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೊದರು. ನಂತರ ನನ್ನ ಹೆಂಡತಿಜ್ಯೋತಿ, ಪರಶುರಾಮ ಚಲವಾದಿ, ಮಾನಪ್ಪ ಬಂಡೊಳಿ ಮೂರುಜನರುಕೂಡಿಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸರಕಾರಿಆಸ್ಪತ್ರೆ ಸುರಪುರಕ್ಕೆತಂದು ಸೇರಿಕೆ ಮಾಡಿದರು. ಉಪಚಾರ ಮಾಡಿದ ವೈದ್ಯಾದಿಕಾರಿಗಳು ಹೇಳಿದಂತೆ ಉಪಚಾರಕುರಿತು ಕಲಬುರಗಿಯಜಯದೇವಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದುಉಪಚಾರ ಪಡೆಯುತ್ತಿದ್ದೇನೆ. ಕಾರಣ ನನಗೆ ಬಿಡಿಗೆ, ಕಲ್ಲಿನಿಂದ ಮತ್ತುಕೈಯಿಂದ ಹೊಡೆ ಮಾಡಿಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ 5 ಜನರ ಮೇಲೆ ಕಾನೂನು ಕ್ರಮಜರಗಿಸಬೇಕುಅಂತಾ ಹೇಳಿಕೆ ಸಾರಾಂಶದ ಮೇಲಿಂದಠಾಣೆಗುನ್ನೆ ನಂ. 48/2021 ಕಲಂ:143, 147, 148, 323, 324, 504, 506 ಸಂ. 149 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ:- 49/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ: 13/03/2021 ರಂದು 8:30 ಪಿ.ಎಂ ಕ್ಕೆ ಠಾಣೆಯಲ್ಲಿದಾಗ ಪಿಯರ್ಾದಿ ಶ್ರೀಮತಿ ನಿಂಗಮ್ಮ ಗಂಡ ನಿಂಗಪ್ಪ@ನಿಂಗಯ್ಯ ವಗ್ಗಾ ವ|| 30 ವರ್ಷ ಜಾ|| ಕುರಬರ ಉ|| ಮನೆಗೆಲಸ ಸಾ|| ಕುಂಬಾರಪೇಟ್ ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಾರಾಂಶವೆನಂದರೆ, ನಮಗೆ ಮೂರು ಜನ ಮಕ್ಕಳು ಇರುತ್ತಾರೆ. ನನ್ನ ಗಂಡ ಮತ್ತು ನಮ್ಮ ಸಂಬಂದಿಯಾದ ನಿಂಗಣ್ಣ ತಂದೆ ಕಾಮಣ್ಣ ಕೆಂಗೂರಿ ಇಬ್ಬರು ಕೂಡಿ ಶಾಂತಪುರ ಗ್ರಾಮದಲ್ಲಿ ದೇವಿ ಜಾತ್ರೆ ಇದ್ದ ಪ್ರಯುಕ್ತ ಇಬ್ಬರು ಕೂಡಿ ದಿನಾಂಕ:10/03/2021 ರಂದು ಮದ್ಯಾಹ್ನ 2 ಗಂಟೆಗೆ ನಿಂಗಣ್ಣ ಇವರ ಮೋಟರ್ ಸೈಕಲ್ ನಂ. ಕೆಎ-33 ಡಬ್ಲ್ಯೂ-8519 ನೇದ್ದರ ಮೇಲೆ ಹೊದರು. ಸಾಯಂಕಾಲ 6:50 ಗಂಟೆಗೆ ನಮ್ಮ ಸಂಬಂದಿಯಾದ ನಾಗರಾಜ ತಂದೆ ಕಾಮಣ್ಣ ಕೆಂಗೂರಿ ಇತನು ಪೊನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ಮರೆಪ್ಪ ತಂದೆ ನಾಗಪ್ಪ ಗುರಿಕಾರ ಇಬ್ಬರು ಕೂಡಿ ಶಾಂತಪುರದಿಂದ ಕುಂಬಾರಪೇಟ್ಗೆ ಒಂದು ಮೋಟರ್ ಸೈಕಲ್ ಮೇಲೆ ಬರುತ್ತಿದ್ದಾಗ ನಮ್ಮ ಮುಂದೆ ಹೊರಟಿದ್ದ ನಮ್ಮ ಅಣ್ಣ ನಿಂಗಣ್ಣ ಮತ್ತು ಮಾವ ನಿಂಗಪ್ಪ@ನಿಂಗಯ್ಯ ಇಬ್ಬರು ಕೂಡಿ ಒಂದು ಮೋಟರ್ ಸೈಕಲ್ ಮೇಲೆ ಕುಂಬಾರಪೇಟ್ ಕಡೆಗೆ ಹೊರಟಿದ್ದರು, ಅಂದಾಜು ಸಾಯಂಕಾಲ 6:30 ಗಂಟೆಗೆ ಸುರಪುರ-ಲಿಂಗಸೂಗುರು ಮುಖ್ಯ ರಸ್ತೆಯ ಕವಡಿಮಟ್ಟಿ ಇನ್ನು ಸ್ವಲ್ಪ ಮುಂದೆ ಇರುವಾಗ ಹಳ್ಳದ ಹತ್ತಿರ ರೋಡಿನ ಮೇಲೆ ಎದರುಗಡೆಯಿಂದ ಅಂದರೆ ಸುರಪರು ಕಡೆಯಿಂದ ಒಂದು ಟಾಟಾ ಎಸಿಇ ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಅಣ್ಣ ನಡೆಸುತ್ತಿದ್ದ ಮೊಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದರಿಂದ ಮೋಟರ್ ಸೈಕಲ್ ಸಮೇತ ಅಣ್ಣ ಮತ್ತು ಮಾವ ಇಬ್ಬರು ರೊಡಿನ ಮೇಲೆ ಬಿದ್ದರು ಹೊಗಿ ನೊಡಲಾಗಿ ನಮ್ಮ ಮಾವ ನಿಂಗಪ್ಪ@ನಿಂಗಯ್ಯ ಇತನಿಗೆ ಎದೆಗೆ ತರಚಿದಗಾಯ, ಬಲಗೈ ಹಸ್ತಕ್ಕೆ ತರಚಿದಗಾಯ, ಬಲ ತೊಡೆಯ ಹತ್ತಿರ ಮುರಿದ ರಕ್ತಗಾಯ ಆಗಿರುತ್ತದೆ. ನಮ್ಮ ಅಣ್ಣ ನಿಂಗಣ್ಣನಿಗೆ ತಲೆಗೆ ರಕ್ತಗಾಯ, ಎದೆಗೆ ತರಚಿದಗಾಯ, ಎಡಗೈ ಮೊಳಕೈಗೆ ತರಚಿದ ಗಾಯ, ಎಡ ಮೊಳಕಾಲಿಗೆ ತರಚಿದ ಗಾಯ ಆಗಿರುತ್ತವೆ. ಟಾಟಾ ಎಸಿಇ ಎಲ್ಲಿದ್ದವರಿಗೆ ಹೊಗಿ ನೊಡಲಾಗಿ ನಜೀರ ತಂದೆ ಸತ್ತಾರಸಾಬ ಇತನಗೆ ಎಡಗೈ ಬೆರಳುಗಳಿಗೆ ರಕ್ತಗಾಯ ಆಗಿರುತ್ತದೆ. ಟಾಟಾ ಎಸಿಇ ಚಾಲಕನ ಹೆಸರು ವಿಳಾಸ ಕೆಳಲಾಗಿ ಆತನ ಹೆಸರು ಹಾಜಿಮಲಾಂಗ ಬಾಬಾ ತಂದೆ ಲಾಲಸಾಹಬ ಸಾ|| ಗುರುಗುಂಟಾ ತಾ|| ಲಿಂಗಸೂಗುರು ಅಂತಾ ಹೇಳಿದನು. ಟಾಟಾ ಎಸಿಇ ನಂಬರ ನೊಡಲಾಗಿ ಕೆಎ-06 ಬಿ-7161 ನೇದ್ದು ಇರುತ್ತದೆ. ನಾವು ಗಾಯಳುದಾರರನ್ನು 108 ವಾಹನದಲ್ಲಿ ಹಾಕಿಕೊಂಡು ಸುರಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತೇವೆ ನೀನು ಅಲ್ಲಿಗೆ ಬಾ ಅಂತಾ ತಿಳಿಸಿದರಿಂದ ನಾನು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ನೋಡಲಾಗಿ ಉಪಚಾರ ಪಡೆಯುತ್ತಿದ್ದ ನನ್ನ ಗಂಡ ನಿಂಗಪ್ಪ@ನಿಂಗಯ್ಯನಿಗೆ, ನಿಂಗಣ್ಣನಿಗೆ ಮತ್ತು ಟಾಟಾ ಎಸಿಇ ಯಲ್ಲಿದ್ದ ನಜೀರ ಇವರಿಗಳಿಗೆ ಮೇಲೆ ಹೇಳಿದಂತೆ ಗಾಯಗಳು ಆಗಿದ್ದು ಉಪಚಾರ ಮಾಡುತ್ತಿದ್ದ ವೈದ್ಯಾದಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೊಗಲು ತಿಳಿಸಿದ್ದರಿಂದ ನಾನು ಮತ್ತು ನಾಗರಾಜ ತಂದೆ ಕಾಮಣ್ಣ ಕೆಂಗೂರಿ, ಮರೆಪ್ಪ ತಂದೆ ನಾಗಪ್ಪ ಗುರಿಕಾರ ಮೂರು ಜನರು ಕೂಡಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ನಿಡಿದ್ದು ಇರುತ್ತದೆ.ಕಾರಣ ನನ್ನ ಗಂಡನಿಗೆ, ಸಂಬಂದಿಕನಾದ ನಿಂಗಣ್ಣನಿಗೆ ಟಾಟಾ ಎಸಿಇ ವಾಹನದಲ್ಲಿದ್ದ ನಜೀರ ನಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು, ಟಾಟಾ ಎಸಿಇ ಚಾಲಕನಾದ ಸಲಿಂ ತಂದೆ ಸತ್ತಾರಸಾಬ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ.ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 49/2021 ಕಲಂ 279, 337, 338 ಐಪಿಸಿ ಯ್ಯಾಕ್ಟದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರ ನಗರ ಪೊಲೀಸ್ ಠಾಣೆ:- 32/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂ ಕೆ.ಎ 33 ಇ 8625, ಅಂತಾ ಇದ್ದು, ಅದರ ಇಓಉಓಇ ಓಔ-03ಈ21ಒ03469, ಅಊಂಖಖಖ ಓಔ-03ಈ21ಅ05239, ಅಂತಾ ಇರುತ್ತದೆ. ಸದರಿ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/-ರೂ|| ಗಳು. ಹೀಗಿದ್ದು ದಿನಾಂಕ 10/03/2021 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ನಾನು ಸದರಿ ನನ್ನ ಮೋಟರ್ ಪ್ರತಿ ನಿತ್ಯದಂತೆ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ 11/03/2021 ರಂದು ಬೆಳಿಗ್ಗೆ 08-00 ಗಂಟೆಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಮನೆಯ ಸುತ್ತ-ಮತ್ತ ನೋಡಿದರೂ ನನ್ನ ಮೋಟರ್ ಸೈಕಲ್ ಕಾಣದೇ ಇದ್ದಾಗ ನಮ್ಮ ಮನೆಯ ಪಕ್ಕದಲ್ಲಿ ಇದ್ದ ಅಮಾನ್ ತಂದೆ ಕೌಸರ್ ಮತ್ತು ಕೇಸು ತಂದೆ ಯಾಇಯಾ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಕಾಲೋನಿಯಲ್ಲಿ ತಿರುಗಾಡಿ ನೋಡಿದರೂ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ಸದರಿ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದೂ ಇಗದೇ ಇದ್ದಾಗ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 32/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 
ಯಾದಗಿರ ನಗರ ಪೊಲೀಸ್ ಠಾಣೆ ಯಾದಗಿರಿ:- 33/2021 ಕಲಂ 457, 380 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಶಾಸ್ತ್ರಿ ಸರ್ಕಲ್ ಹತ್ತಿರ ಹರೀಶಕುಮಾರ ಪಟೇಲ್ ಇವರ ಬಿಲ್ಡಿಂಗ್ದಲ್ಲಿ ಒಂದು ಸಾನ್ವಿ ಮೊಬೈಲ್ ಕಮ್ಯೂನಿಕೇಶನ್ ಅಂತಾ ಅಂಗಡಿ ಇಟ್ಟುಕೊಂಡಿದ್ದು, ಅದನ್ನು ನಾನೇ ನಡೆಸಿಕೊಂಡು ಹೋಗುತ್ತೇನೆ. ಸದರಿ ಮೊಬೈಲ್ ಅಂಗಡಿಯಲ್ಲಿ ಹಲವು ಕಂಪನಿಯ ಮೊಬೈಲ್ಗಳು ಇದ್ದು, ನಾನು ದಿನಾಲು ನಮ್ಮ ಅಂಗಡಿಯಲ್ಲಿ ಮೊಬೈಲ್ ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಹೀಗಿದ್ದು, ನಿನ್ನೆ ದಿನಾಂಕ 12/03/2021 ರಂದು ನಾನು ದಿನ ನಿತ್ಯದಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 09-00 ಪಿ.ಎಂಕ್ಕೆ ಅಂಗಡಿಯ ಬೀಗ ಹಾಕಿಕೊಂಡು ಊರಿಗೆ ಹೋದೆನು. ನಂತರ ಇಂದು ದಿನಾಂಕ 13/03/2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನನ್ನ ಗೆಳೆಯ ಶರಣಬಸವ ತಂದೆ ಶಿವಕುಮಾರ ಪರಡಿ ಸಾ|| ಹೊಸಳ್ಳಿ [ಕೆ] ಹಾ|| ವ|| ಶಿವನಗರ ಯಾದಗಿರಿ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಿನ್ನ ಅಂಗಡಿಯ ಶೆಟ್ಟರ ಸ್ವಲ್ಪ ಬೆಂಡು ಆಗಿದ್ದು, ಯಾರೋ ಕಳ್ಳರು ಅಂಗಡಿ ಕಳ್ಳತನ ಮಾಡಿದಂತೆ ಕಂಡು ಬರುತ್ತದೆ. ಕೂಡಲೆ ಬಾ ಅಂತಾ ತಿಳಿಸಿದ ಕೂಡಲೆ ನಾನು ಮತ್ತು ನನ್ನ ಗೆಳೆಯನಾದ ಭೀಮರಾಯ ತಂದೆ ಹಣಮಂತ್ರಾಯ ಕಾವಲಿ ಸಾ|| ಕೊಯಿಲೂರು ಇಬ್ಬರು ಕೂಡಿ ಸ್ಥಳಕ್ಕೆ ಬಂದು ನೋಡಿದಾಗ ನಮ್ಮ ಮೊಬೈಲ್ ಅಂಗಡಿಯ ಶೆಟ್ಟರ ಮಧ್ಯದಲ್ಲಿ ಬೆಂಡು ಆಗಿತ್ತು, ನಂತರ ಅಂಗಡಿಯ ಕೀಲಿ ತೆಗೆದು ಒಳಗೆ ಹೋಗಿ ನೋಡಿದಾಗ ಅಂಗಡಿಯ ಗಲ್ಲೆ ಮುರಿದಿದ್ದು ಕಂಡು ಬಂತು. ಮತ್ತು ಅಂಗಡಿಯಲ್ಲಿ ಇದ್ದ ಓಪ್ಪೋ, ರೀಯಲ್ ಮೀ, ಎಂ.ಐ ಮತ್ತು ವಿವೋ ಕಂಪನಿಯ ಸುಮಾರು 20 ಸ್ಮಾಟರ್್ ಮೊಬೈಲ್ ಪೋನ್ಗಳು ಇರಲಿಲ್ಲ. ಸದರಿ ಎಲ್ಲಾ ಮೊಬೈಲ್ಗಳ ಅಂದಾಜು ಕಿಮ್ಮತ್ತು 1,80,000/ ರೂಪಾಯಿಗಳು. ನಾನು ಹಾಗೂ ನಮ್ಮ ಇಬ್ಬರು ಗೆಳೆಯರು ಕೂಡಿ ಅಂಗಡಿಯ ಅಕ್ಕ ಪಕ್ಕದಲ್ಲಿ ನೋಡಿದರೂ ಯಾವುದೇ ರೀತಿಯ ಸುಳಿವು ಕಾಣಲಿಲ್ಲ. ನನ್ನ ಸಾನ್ವಿ ಮೊಬೈಲ್ ಕಮ್ಯೂನಿಕೇಶನ್ ಅಂಗಡಿಯ ಶೆಟ್ಟರ ಬೆಂಡ್ ಮಾಡಿ ಒಳಗೆ ಹೋಗಿ ಅಂಗಡಿಯಲ್ಲಿ ಇದ್ದ ಸುಮಾರು 1,80,000/- ರೂಪಾಯಿ ಕಿಮ್ಮತ್ತಿನ 20 ಸ್ಮಾಟರ್್ ಮೊಬೈಲ್ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಮನೆಯಲ್ಲಿ ವಿಚಾರಣೆ ಮಾಡಿ ಈಗ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 33/2021 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ :- 34/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಸಿದ್ದು ತಂದೆ ಶಂಕ್ರೆಪ್ಪ ಮಾಚನೂರ ಇವರ ಮನೆಯಲ್ಲಿ ಬಾಡಿಗೆ ಇರುತ್ತೇನೆ. ಸದರಿಯವರದು ಒಂದು ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ ಕೆ.ಎ 33 ಜೆ 9762, ಅಂತಾ ಇದ್ದು, ಅದರ ಇಓಉಓಇ ಓಔ-ಊಂ10ಇಂಂಊಃ09718, ಅಊಂಖಖಖ ಓಔ-ಒಃಐಊಂ10ಇಇಂಊಃ108852, ಅಂತಾ ಇರುತ್ತದೆ. ನಮ್ಮ ಮಾಲಿಕ ಮಾಚನೂರದಲ್ಲಿ ಹೊಲ ಮನೆ ಕೆಲಸ ಮಾಡಿಕೊಂಡು ಇದ್ದರಿಂದ ಅವರ ಮೋಟರ್ ಸೈಕಲ್ ನನಗೆ ಉಪಯೋಗ ಮಾಡಲು ಹೇಳಿದ್ದರಿಂದ ಸದರಿ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/-ರೂ|| ಗಳು. ಹೀಗಿದ್ದು ದಿನಾಂಕ 05/03/2021 ರಂದು ಮಧ್ಯರಾತ್ರಿ 03-00 ಗಂಟೆಯ ಸುಮಾರಿಗೆ ನಾನು ಅಡತಿಯಲ್ಲಿ ಕೆಲಸ ಮುಗಿಸಿಕೊಂಡೂ ಬಂದು ನನ್ನ ಮೋಟರ್ ಪ್ರತಿ ನಿತ್ಯದಂತೆ ನಮ್ಮ ಮನೆಯ ಮುಂದೆ ನಿಲ್ಲಿಸಿ, ನಾನು ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 05/03/2021 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಮನೆಯ ಮುಂದೆ ಇರಲಿಲ್ಲ. ನಂತರ ನಮ್ಮ ಗೆಳೆಯರಾದ ತಿಪ್ಪಣ್ಣ ತಂದೆ ಮರೆಪ್ಪ ಗೋಷಿ ಕೋಲಿವಾಡಾ ಯಾದಗಿರಿ ಮತ್ತು ಮರೆಪ್ಪ ತಂದೆ ಆಶಪ್ಪ ಪಾಮಳ್ಳಿ ಸಾ|| ಕೋಲಿವಾಡಾ ಯಾದಗಿರಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಮನೆಯ ಅಕ್ಕ ಪಕ್ಕದಲ್ಲಿ ನಮ್ಮ ಮೋಟರ್ ಸೈಕಲ್ ಹುಡುಕಾಡಿದೂ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ಸದರಿ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 34/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 34/2021 ಕಲಂ: 143,147,148,341,323,324,354,504,506 ಸಂಗಡ 149 ಐಪಿಸಿ : ಇಂದು ದಿನಾಂಕ 13.03.2021 ರಂದು 12.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಾಳಪ್ಪ ತಂದೆ ಗುಂಡಪ್ಪ ಚನ್ನೂರ ವಯಾ|| 26 ಜಾ|| ಕುರುಬರ ಉ|| ಒಕ್ಕಲುತನ ಸಾ|| ಕನಕದಾಸ ಸರ್ಕಲ್ ಜೇವಗರ್ಿ ತಾ|| ಜೇವಗರ್ಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನಂದರೆ, ಸುರಪುರ ತಾಲೂಕಿನ ಮಾಚಗುಂಡಾಳ ಗ್ರಾಮದ ನಮ್ಮ ದೊಡ್ಡಮ್ಮಳಾದ ಸಾಬವ್ವ ಗಂಡ ನಿಂಗಪ್ಪ ಹೆಬ್ಬಾಳ ಇವರ ಹೊಲ ಹಾಗೂ ಶರಣಮ್ಮ ಗಂಡ ಮಾನಪ್ಪ ಹೆಬ್ಬಾಳ ಇವರ ಹೊಲ ಆಜುಬಾಜು ಇದ್ದು ಸದರಿ ಎರಡೂ ಜನರ ಸುಮಾರು ವರ್ಷಗಳಿಂದ ಮನೆಯ ಜಾಗದ ವಿಷಯದಲ್ಲಿ ತಕರಾರು ನಡೆದು ಒಬ್ಬರಿಗೊಬ್ಬರು ಹಗೆತನ ಸಾದಿಸುತ್ತಿದ್ದ ಬಗ್ಗೆ ನನಗೆ ಗೊತ್ತಿರುತ್ತದೆ. ನನಗೆ ಹಣದ ಅಡಚಣೆ ಆತದ್ದ ಕಾರಣ ನಮ್ಮ ದೊಡ್ಡಮ್ಮನ ಹತ್ತಿರ ಬಂದಿರುತ್ತೇನೆ. ಹೀಗಿದ್ದು ದಿನಾಂಕ 06/03/2021 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ದೊಡ್ಡಮ್ಮಳಾದ ಸಾಬವ್ವ ಹೆಬ್ಬಾಳ ಹಾಗೂ ಅವರ ಮಗನಾದ ಮಲ್ಲಪ್ಪ ಹೆಬ್ಬಾಳ ನಾವು 3 ಜನರು ಕೂಡಿ ಭೀಮಣ್ಣ ತಂದೆ ಭಾಗಪ್ಪ ಇವರ ಹೊಲದ ಪಕ್ಕದ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಜಾತಿಯವರೇ ಆದ 1) ಮಾನಪ್ಪ ತಂದೆ ಜಟ್ಟೆಪ್ಪ ಹೆಬ್ಬಾಳ 2) ಮಾಳಪ್ಪ ತಂದೆ ಮಾನಪ್ಪ ಹೆಬ್ಬಾಳ 3) ಶರಣವ್ವ ಗಂಡ ಮಾನಪ್ಪ ಹೆಬ್ಬಾಳ 4) ಜಟ್ಟೆಪ್ಪ ತಂದೆ ಮಾನಪ್ಪ ಹೆಬ್ಬಾಳ 5) ದೇವಪ್ಪ ತಂದೆ ಜಟ್ಟೆಪ್ಪ ಹೆಬ್ಬಾಳ 6) ವಿಜಯಲಕ್ಷ್ಮೀ ಗಂಡ ಜಟ್ಟೆಪ್ಪ ಹೆಬ್ಬಾಳ 7) ಕರೆವ್ವ ಗಂಡ ಮಾಳಪ್ಪ ಹೆಬ್ಬಾಳ ಸಾ|| ಎಲ್ಲರೂ ಮಾಚಗುಂಡಾಳ ಹಾಗೂ 8) ದೇವವ್ವ ಗಂಡ ಅಮರಪ್ಪ ಅರಳಗುಂಡಗಿ 9) ಅಮರಪ್ಪ ತಂದೆ ಚಂದಪ್ಪ ಅರಳಗುಂಡಗಿ 10) ನಿಂಗವ್ವ ಗಂಡ ಕರೆಪ್ಪ ಬೂದನೂರ ಸಾ|| ಎಲ್ಲರೂ ರತ್ತಾಳ ಹಾಗೂ ಕಿರದಳ್ಳಿ ಗ್ರಾಮದ 11) ಕರೆಪ್ಪ ತಂದೆ ನಿಂಗಪ್ಪ ಈ ಎಲ್ಲಾ ಜನರು ಬಂದವರೆ ನಮ್ಮ ದೊಡ್ಡಮ್ಮ ಸಾಬವ್ವ ಹಾಗೂ ಆಕೆಯ ಮಗನಾದ ಮಲ್ಲಪ್ಪ ಈ ಎರಡು ಜನರನ್ನು ತಡೆದು ನಿಲ್ಲಿಸಿ ಏನಲೇ ಸೂಳೆ ಮಕ್ಕಳೆ ನಮಗೆ ಜಾಗ ಕೇಳತಿರಾ ನಿಮ್ಮ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಈ ಸುಳೆ ಮಕ್ಕಳ ಸೊಕ್ಕು ಬಹಾಳ ಆಗಿದೆ ಅಂತ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಮಾನಪ್ಪ ತಂದೆ ಜಟ್ಟೆಪ್ಪ ಈತನು ಈ ಸೂಳೆ ಮಗನ ಸೊಕ್ಕು ಬಾಳ ಆಗಿದೆ ಅಂತ ದೊಡ್ಡಮ್ಮಳ ಮಗನಾದ ಮಲ್ಲಪ್ಪ ಈತನಿಗೆ ಕಟ್ಟಿಗೆಯಿಂದ ಎಡಗೈ ರಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಮಲ್ಲಪ್ಪನಿಗೆ ನೆಲಕ್ಕೆ ಒಗೆದು ಎಲ್ಲರೂ ಕಾಲಿನಿಂದ ಒದೆಯುತ್ತಿದ್ದಾಗ ಮಾಳಪ್ಪ ತಂದೆ ಮಾನಪ್ಪ ಈತನು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ಬೆನ್ನಿಗೆ ಗುದ್ದಿ ಗುಪ್ತಗಾಯ ಪಡಿಸಿದನು. ದೊಡ್ಡಮ್ಮಳಾದ ಸಾಬವ್ವ ಇವಳಿಗೂ ಸಹ ಎಲ್ಲರು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಜಟ್ಟೆಪ್ಪ ತಂದೆ ಮಾನಪ್ಪ ಈತನು ದೊಡ್ಡಮ್ಮಳಾದ ಸಾಬವ್ವ ಇವರಿಗೆ ಮಾನಭಂಗ ಮಾಡುವ ಉದ್ದೇಶದಿಂದ ಸೀರೆ ಹಾಗೂ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ನಮ್ಮ ದೊಡ್ಡಮ್ಮ ಹಾಗೂ ಆಕೆಯ ಮಗ ಇಬ್ಬರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಾನು ಹಾಗೂ ಪಿಡ್ಡಪ್ಪ ಹಸನಾಪುರ ಮತ್ತು ಬಸಪ್ಪ ಹಸನಾಪುರ ನಾವು 3 ಜನರು ಸೇರಿ ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಸದರಿ ಜಗಳದಲ್ಲಿ ನಮ್ಮ ದೊಡ್ಡಮ್ಮಳ ಮಗನಾದ ಮಲ್ಲಪ್ಪ ಈತನಿಗೆ ಎಡಗೈಗೆ ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲು ಮಾಡಿ ಉಪಚಾರ ಪಡೆಸಿ ತಡವಾಗಿ ಇಂದು ಠಾಣೆಗೆ ಬಂದು ಅಜರ್ಿ ನೀಡಿದ್ದು ಕಾರಣ ಸದರ ಮೇಲ್ಕಾಣಿಸಿದ 11 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 34/2021 ಕಲಂ 143,147,148,341,323,324,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 44/2021 ಕಲಂ. 143, 302, ಸಂಗಡ 149 ಐಪಿಸಿ : ದಿನಾಂಕ: 13-03-2021 ರಂದು ಮದ್ಯಾಹ್ನ 02-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಮ್ಮ ತಂಗಿಯಾದ ಲಕ್ಷ್ಮೀ@ರೋಜಾ ಈಕೆಗೆ 20 ವರ್ಷಗಳಿಂದೆ ವಂಕಸಂಬ್ರ ಗ್ರಾಮದ ಕೇಶವರೆಡ್ಡಿ ತಂದೆ ಬುಗ್ಗರೆಡ್ಡಿ ಎಂಬಾನಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ತಂಗಿಗೆ ಒಬ್ಬ ಮಗನಿದ್ದು ಆತನ ಸುಮಾರು 5-6 ವರ್ಷಗಳಿಂದೆ ಹಾವು ಕಚ್ಚಿ ಮೃತಪಟ್ಟಿರುತ್ತಾನೆ. ನನ್ನ ತಂಗಿಗೆ ಆಕೆಯ ಗಂಡ ಕೇಶವರೆಡ್ಡಿ ಈತನು ಆಕೆಯನ್ನು ಸರಿಯಾಗಿ ನೋಡಿಕೊಳ್ಳದೆ ಕಿರುಕುಳ ನೀಡುತಿದ್ದನು. ಇದರಿಂದ ನನ್ನ ತಂಗಿ ಆತನ ಮೇಲೆ ಸೈದಾಪೂರ ಠಾಣೆಯಲ್ಲಿ ಕೇಸು ಮಾಡಿದ್ದು ಇರುತ್ತದೆ. ಆತನು ಇನ್ನೊಂದು ಮದುವೆ ಮಾಡಿಕೊಂಡು ಆಕೆಯ ಸಂಗಡ ಮಕ್ತಲ್ ಹತ್ತಿರ ಬುರಲಪಲ್ಲಿ ಗ್ರಾಮದಲ್ಲಿ ಇರುತ್ತಾನೆ. ಆತನು ಆಗಾಗ ವಂಕಸಂಬ್ರ ಗ್ರಾಮಕ್ಕೆ ಬಂದು ಹೋಗುತಿದ್ದನು. ನಾನು ಆಗಾಗ ನಮ್ಮ ತಂಗಿಗೆ ಮಾತನಾಡಿಸಲು ವಂಕಸಂಬ್ರಕ್ಕೆ ಬಂದು ಹೋಗುತಿದ್ದೆನು. ನಾನು ವಂಕಸಂಬ್ರ ಗ್ರಾಮಕ್ಕೆ ಬಮದಾಗ ನನ್ನ ತಂಗಿ ಆಕೆಯ ಗಂಡ ಆಕೆಗೆ ತೊಂದರೆ ಕೊಡುತ್ತಾನೆ ಅಂತಾ ಹೇಳುತಿದ್ದಳು. ನನ್ನ ತಂಗಿ ಮನೆಯಲ್ಲಿ ಒಬ್ಬಳೆ ಇರುವದರಿಂದ ನನ್ನ ತಾಯಿ ನನ್ನ ತಂಗಿಯ ಹತ್ತಿರ ವಂಕಸಂಬ್ರ ಗ್ರಾಮದಲ್ಲಿ ಆಕೆಯ ಸಂಗಡ ಇದ್ದಳು. ನನ್ನ ತಂಗಿ ಆಕೆಯ ಗಂಡನ ಮೇಲೆ ಮೇಂಟೆನೆನ್ಸ ಕೇಸು ಕೂಡ ಹಾಕಿದ್ದು ನ್ಯಾಯಲಯ ಆತನಿಗೆ ಪ್ರತಿ ತಿಂಗಳ 2000=00 ಕೊಡುವಂತೆ ಆದೇಶ ಮಾಡಿರುತ್ತದೆ ಮತ್ತು ಆತನ ಆಸ್ತಿಯಯಲ್ಲಿ ನನ್ನ ತಂಗಿ ಕೊರ್ಟನಲ್ಲಿ ದಾವೆ ಹೂಡಿದ್ದು ನ್ಯಾಯಾಲಯವು ನನ್ನ ತಂಗಿಗೆ ಆತನ ಆಸ್ತಿಯಲ್ಲಿ 1 ಎಕರೆ 16 ಗುಂಟೆ ಜಮಿನು ಕೊಡುವಂತೆ ಆದೇಶ ಮಾಡಿರುತ್ತದೆ. ಇದರಿಂದ ನನ್ನ ತಂಗಿಯ ಗಂಡ ಆಕೆಯ ಮೇಲೆ ಬಹಳಷ್ಟು ಸಿಟ್ಟು ಇಟ್ಟುಕೊಂಡಿದ್ದನು. ದಿನಾಂಕ: 13-03-2021 ರಂದು ಬೆಳಿಗ್ಗೆ 09-45 ಗಂಟೆ ಸುಮಾರಿಗೆ ನನ್ನ ತಾಯಿ ನನಗೆ ಪೊನ್ ಮಾಡಿ ತಿಳಿಸಿದ್ದೇನೆಂದರೆ ಲಕ್ಷ್ಮೀ ಈಕೆಗೆ ಹೊಡೆದು ಹಳ್ಳದಲ್ಲಿ ಹಾಕಿದ್ದಾರೆ ಬೇಗ ಬಾ ಅಂತಾ ಹೇಳಿದ್ದರಿಂದ ಆಗ ನಾನು ನನ್ನ ಹೆಂಡತಿ ಒಂದು ಕಾರು ಮಾಡಿಕೊಂಡು ಬೇಗನೆ ವಂಕಸಂಬ್ರ ಗ್ರಾಮಕ್ಕೆ ಹೋಗಿ ನಮ್ಮ ತಂಗಿಯ ಹೊಲದ ದಾರಿಯ ಹಳ್ಳದಲ್ಲಿ ಹೋದಾಗ ನನ್ನ ತಂಗಿ ಕೋಲೆಯಾಗಿದ್ದು ಬಿದ್ದಿದ್ದು ಆಕೆಗೆ ನೋಡಲಾಗಿ ಬಲಗಡೆ ಎದೆಯ ಮೇಲೆ ಚರ್ಮ ಸುಲಿದ ಗಾಯವಾಗಿತ್ತು, ಬಲಕೈ ರಟ್ಟೆಯ ಹತ್ತಿರ ಚರ್ಮ ಸುಲಿದ ಗಾಯವಾಗಿತ್ತು, ಕುತ್ತಿಗೆಯ ಕೆಳಗಡೆ ಚರ್ಮ ಸುಲಿದ ಗಾಯವಾಗಿತ್ತು ಬಾಯಿಯಲ್ಲಿ ರಕ್ತ ಸೋರಿತ್ತು. ನನ್ನ ತಂಗಿ ಲಕ್ಷ್ಮೀ@ ರೋಜಾ ಈಕೆಗೆ ಆಕೆಯ ಗಂಡನಾದ ಕೇಶವರೆಡ್ಡಿ ಈತನ ಮೇಲೆ ಮೆಂಟೆನೇನ್ಸ ಕೇಸು ಹಾಕಿದ್ದು ಮತ್ತು ಆಸ್ತಿ ಬಗ್ಗೆ ಕೊರ್ಟನಲ್ಲಿ ಹಾಕಿದ್ದು ಕೊರ್ಟ ನಮ್ಮ ತಂಗಿಗೆ ಹೊಲ ಕೊಡುವಂತೆ ಆದೇಶ ಮಾಡಿದ್ದರಿಂದ ಆಕೆಗೆ ಮೆಂಟೇನೆನ್ಸ ಹಣ ಕೊಡುವದು ಮತ್ತು ಆಕೆಗೆ ಆಸ್ತಿ ಕೊಡುವದು ಬರುತ್ತದೆ ಅಂದು ಅದನ್ನು ಸಹಿಸದ ಆಕೆಯ ಗಂಡ ಕೇಶವರೆಡ್ಡಿ ತಂದೆ ಬುಗ್ಗರೆಡ್ಡಿ ಪಳ್ಳ ವ|| 45 ವರ್ಷ ಸಾ|| ವಂಕಸಂಬ್ರ ಮತ್ತು ಆತನ ಸಂಬಂದಿಕರಾದ ಇತರರು ಸೇರಿ ಇಂದು ದಿನಾಂಕ: 13-03-2021 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ಮಗನ ಸಮಾಧಿಗೆ ಹೋಗಿ ಕಾಯಿ ಹೊಡೆದು ಬರುವಾಗ ವಂಕಸಂಬ್ರ ಹಳ್ಳದ 60 ರೂಪಾಯಿ ಕತ್ವೆ ಹತ್ತಿರ ಯಾವುದೋ ವಸ್ತುವಿನಿಂದ ಹೊಡೆದು ಕೋಲೆ ಮಾಡಿ ಹೋಗಿರುತ್ತಾರೆ. ಕಾರಣ ನನ್ನ ತಂಗಿಯನ್ನು ಕೋಲೆ ಮಾಡಿದ ಆಕೆಯ ಗಂಡ ಕೇಶವರೆಡ್ಡಿ ತಂದೆ ಬುಗ್ಗರೆಡ್ಡಿ ಪಳ್ಳ ವ|| 45 ವರ್ಷ ಸಾ|| ವಂಕಸಂಬ್ರ ಮತ್ತು ಆತನ ಸಂಬಂದಿಕರಾದ ಇತರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ಈ ದೂರು ಇರುತ್ತದೆ ಅಂತಾ ದೂರಿನ ಸಾರಂಶ ಇರುತ್ತದೆ


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 35/2021 ಕಲಂ: 3 & 6 ಕನರ್ಾಟಕ ಪ್ರಿವೆನ್ಶನ ಆಫ್ ಎನಿಮಲ್ ಸ್ಯಾಕ್ರಿಫೈಸ್ ಆಕ್ಟ 1959 : ಇಂದು ದಿನಾಂಕ 13.03.2021 ರಂದು 10.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಅಲ್ತಾಫ ತಂದೆ ಮಹಿಬೂಬ ಜೈನಾಪೂರ ವಯಾ|| 31 ಜಾ|| ಮುಸ್ಲಿಂ ಉ|| ಗ್ರಾಮ ಲೆಕ್ಕಾಧಿಕಾರಿಗಳು ಸಾ|| ನಿಡಗುಂದಿ ತಾ|| ನಿಡಗುಂದಿ ಜಿಲ್ಲಾ|| ವಿಜಯಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದು ನನಗೆ ಅಗ್ನಿ, ಸದಬ, ಗುಂಡಲಗೇರಾ ಹಾಗು ಕರಿಭಾವಿ ಎಂಬ ನಾಲ್ಕು ಗ್ರಾಮಗಳು ಬರುತ್ತಿದ್ದು ಅವುಗಳಲ್ಲಿ ಅಗ್ನಿ ಗ್ರಾಮವು ಕೇದ್ರಸ್ಥಾನವಾಗಿರುತ್ತದೆ. ಅಗ್ನಿ ಗ್ರಾಮವು ನನ್ನ ವ್ಯಾಪ್ತಿಯ ಅತೀ ಸೂಕ್ಷ್ಮ ಪ್ರದೇಶವಾಗಿದ್ದು ಇರುತ್ತದೆ. ಸದರಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕೊಮ್ಮೆ ದೇವತೆ ಜಾತ್ರೆ ಮಾಡುತ್ತಿದ್ದು ಅದರಂತೆ ಈ ವರ್ಷ ಸದರಿ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರೆ ನಡೆಯುತ್ತಿದೆ ಅಂತ ನನ್ನ ಗಮನಕ್ಕೆ ಊರ ಗ್ರಾಮ ಸೇವಕರಾದ ಲಾಳೆಸಾಬ ತಂದೆ ಕಾಶಿಂಸಾಬ ವಾಲಿಕಾರ ಇವರಿಂದ ತಿಳಿದುಬಂದಿರುತ್ತದೆ. ಈ ವರ್ಷದ ಜಾತ್ರೆಯು ದಿನಾಂಕ 05.03.2021 ರಂದು ಇತ್ತು. ಸದರಿ ಜಾತ್ರೆಯಲ್ಲಿ ದೇವತೆಯ ರಥೋತ್ಸವ ಇರುವದಾಗಿ ನನ್ನ ಗಮನಕ್ಕೆ ಬಂದಿರುತ್ತದೆ. ಹೀಗಿದ್ದು ಇಂದು ದಿನಾಂಕ 13.03.2021 ರಂದು ಅಗ್ನಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಕುರಿ ಪ್ರಾಣಿ ಬಲಿ ಆದ ಬಗ್ಗೆ ವಾಟ್ಸ್ ಅಪ್ದಲ್ಲಿ ಹರಿದಾಡುತ್ತಿರುವ ಮಾಹಿತಿ ನನ್ನ ಗಮನಕ್ಕೆ ಬಂದು ಸದರ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಶ್ರೀ ವಿನಯಕುಮಾರ ಪಾಟೀಲ ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧೀಕಾರಿಗಳು ಹುಣಸಗಿ ರವರಲ್ಲಿ ತಿಳಿಸಿ ಸದರಿ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಗ್ರಾಮದ ಗ್ರಾಮಸೇವಕರಿಂದ ಮಾಹಿತಿ ಪಡೆದುಕೊಂಡು ಠಾಣೆಗೆ ಬಂದು ದೂರು ನೀಡುತ್ತಿದ್ದು, ಸದರಿ ಗ್ರಾಮದ ಪ್ರಮುಖರಾದ 1) ಶರಣಗೌಡ ತಂದೆ ಮಲ್ಲನಗೌಡ ಮಾಲಿ ಪಾಟೀಲ 2) ಜಗನ್ನಾಥ ತಂದೆ ಶಂಕರರಾವ್ ಕುಲಕ್ಪಣರ್ಿ 3) ಶಿವಲಿಂಗಯ್ಯ ತಂದೆ ಶಾಂತಯ್ಯ ಹಿರೇಮಠ 4) ರಾಜಶೇಖರಗೌಡ ತಂದೆ ಶಂಕರಗೌಡ ಪೊಲೀಸ್ ಪಾಟೀಲ 5) ಅಣ್ಣಪ್ಪ ತಂದೆ ಅಯ್ಯನಗೌಡ ಬಿರಾದಾರ 6) ಪರಮಣ್ಣ ತಂದೆ ಬಸಪ್ಪ ಹೂಗಾರ 7) ಮಲ್ಲಪ್ಪ ತಂದೆ ನಂದಪ್ಪ ಮಳಮಗೋಳ 8) ಹಣಮಂತ್ರಾಯ ತಂದೆ ಸಂಗಪ್ಪ ಬಿರಾದಾರ 9) ಶರಣ ತಂದೆ ಬಸವಂತಪ್ಪ ಮೇಟಿ 10) ಮರಳಪ್ಪ ತಂದೆ ಮದ್ದಪ್ಪ ಮುಕಿಹಾಳ ಹಾಗೂ ಇನ್ನೂ ಇತರರು ಸೇರಿ ಗ್ರಾಮದೇವತೆ ಜಾತ್ರೆ ನಡೆಸಲು ನಮ್ಮ ಕಂದಾಯ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪ್ರಾಣಿಬಲಿ ಮಾಡಕೂಡದು ಅಂತ ತಿಳಿದೂ ಗ್ರಾಮದ ಅಗಸಿ ಹತ್ತಿರ ದಿ: 05/03/2021 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಗುಂಪುಸೇರಿ ಕುರಿ ಪ್ರಾಣಿ ಬಲಿ ಮಾಡಿರುವದಾಗಿ ತಿಳಿದುಬಂದಿದ್ದು, ಈ ವಿಷಯದಲ್ಲಿ ತಾಲೂಕಾ ದಂಡಾಧಿಕಾರಿಯವರಲ್ಲಿ ವಿಚಾರಿಸಿ ಠಾಣೆಗೆ ಹಾಜರಾಗಿ ಈ ದೂರು ಅಜರ್ಿ ಸಲ್ಲಿಸಿದ್ದು, ಕಾರಣ ನಮ್ಮ ಕಂದಾಯ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ಮಾಡಿದ ಮೇಲ್ಕಾಣಿಸಿದ ಅಗ್ನಿ ಗ್ರಾಮದ ಪ್ರಮುಖರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 35/2021 ಕಲಂ 3, 6 ಕರ್ನಾಟಕ ಪ್ರಿವೆನ್ಶನ ಆಫ್ ಎನಿಮಲ್ ಸ್ಯಾಕ್ರಿಫೈಸ್ ಆಕ್ಟ 1959 ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಠಾಣೆ ಗುನ್ನೆ ನಂ :- 31/2021 ಕಲಂ 279, 337, 338, 304(ಎ) ಐಪಿಸಿ : ದಿನಾಂಕ 09.03.2021 ರಂದು ಸಂಜೆ 4:00 ಗಂಟೆಯ ಸುಮಾರಿಗೆ ಬಾಬು ಮೂಕಿ ಎಂಬಾತನು ಅನಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕಬ್ಬಿನ ಹಾಲನ್ನು ಕುಡಿದು ಬಸ್ ನಿಲ್ದಾಣ ಕಡೆಯಿಂದ ಊರಿನ ಒಳಗೆ ಹೋಗುವ ಸಲುವಾಗಿ ನಾರಾಯಣಪೇಠ-ಯಾದಗಿರಿ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಕ್ರೂಶರ ವಾಹನ ಸಂಖ್ಯೆ ಕೆಎ-33-ಎ-4144 ನೇದ್ದರ ಚಾಲಕನಾದ ರವಿ ಕಲ್ಲಾ ಎಂಬಾತನು ತನ್ನ ಕ್ರೂಶರ್ ಗಾಡಿಯನ್ನು ನಾರಾಯಣಪೇಠ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಬಾಬು ಮೂಕಿ ಎಂಬಾತನಿಗೆ ಅಪಘಾತಪಡಿಸಿ ಹಿಂದೆಲೆಗೆ ಭಾರಿ ಸ್ವರೂಪದ ರಕ್ತಗಾಯ ಹಾಗೂ ಸಾಧಾ ಸ್ವರೂಪದ ಗುಪ್ತ ಗಾಯಗೊಳಿಸಿದ್ದು ಅದನ್ನು ನೋಡಿದ ಸ್ಥಳದಲ್ಲಿದ್ದ ಫಿರ್ಯಾದಿ ಬಸವಂತ ಹಾಗೂ ಗಾಯಾಳು ಬಾಬು ಮೂಕಿ ಈತನ ಅಣ್ಣನಾದ ಸಾಬಪ್ಪ ಮೂಕಿ ಹಾಗೂ ಇತರರು ಕೂಡಿಕೊಂಡು ಗಾಯಾಳುವನ್ನು ಚಿಕಿತ್ಸೆ ಕುರಿತು ನಾರಾಯಣಪೇಠ ಸರಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಂತರ ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆ, ರಾಯಚೂರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ ಫಿರ್ಯಾದಿ ಬಸವಂತ ಎಸೆಲ್ ಎಂಬಾತನು ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 31/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಗಾಯಾಳು ಬಾಬು ಮೂಕಿ ಈತನ ಅಣ್ಣನಾದ ಸಾಬಪ್ಪ ಮೂಕಿ ಹಾಗೂ ಇತರರು ಕೂಡಿ ಗಾಯಾಳುವನ್ನು ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ 10.03.2021 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಗಾಯಾಳು ಬಾಬು ಮೂಕಿ ಇತನು ದಿನಾಂಕ 12.03.2021 ರಂದು ಸಂಜೆ 4:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸದರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆ ಬಗ್ಗೆ ಮೃತ ಬಾಬು ಮೂಕಿ ಈತನ ಅಣ್ಣನಾದ ಸಾಬಣ್ಣ ಮೂಕಿ ಈತನು ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮುಖಾಂತರ ನಿವೇದಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 14-03-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080