ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-03-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 36/2022 ಕಲಂ. 323,324, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 13.03.2022 ರಂದು ಮಧ್ಯಾಹ್ನ 1.00 ಗಂಟೆಗೆ ಶ್ರೀ ಪ್ರಕಾಶ ತಂದೆ ಬಸಯ್ಯ ಮಲ್ಹಾರ ವಯ|| 30 ವರ್ಷ, ಜಾ|| ಬೇಡರ ಉ|| ಕೂಲಿ ಸಾ|| ಕೂಡ್ಲೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹಾಜರಪಡಿಸಿದ ದೂರು ಸಾರಾಂಶವೇನೆಂದರೆ, ದಿನಾಂಕ 15.01.2022 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮೂರಿನ ತಿಮ್ಮವ್ವ ಗಂಡ ಹಣಮಂತ್ರಾಯ ಜೀನಿ ಇವರ ಮನೆಯಲ್ಲಿ ನಮ್ಮೂರಿನ ಗ್ರಾಮ ಪಂಚಾಯಿತ ಸದಸ್ಯರಾದ ಕಲ್ಲಪ್ಪ ತಂದೆ ಮಲ್ಲಪ್ಪ ಮತ್ತು ಶ್ರೀಮತಿ ನೀಲಮ್ಮ ಗಂಡ ಬನ್ನಪ್ಪ ಎಂಬುವರ ಮಗನಾದ ಮಲ್ಲೇಶನಾಯಕ ತಂದೆ ಬನ್ನಪ್ಪ ಇವರು ಹಣಮಂತ್ರಾಯ ತಂದೆ ಹಣಮಂತ ಹಜಾರೆ ಇವರ ಮನೆಗೆ ಬಂದು ಅವರ ಆಧಾರ ಕಾರ್ಡ ಚೆಕ ಮಾಡಬೇಕು ಅಂತ ತೆಗೆದುಕೊಂಡು ಅವರ ಹೆಬ್ಬಟ್ಟಿನ ಸಹಿ ಪಡೆದುಕೊಂಡು ಹಣವನ್ನು ತಮ್ಮ ಖಾತೆಗೆ ವಗರ್ಾವಣೆ ಮಾಡಿಸಿಕೊಳ್ಳಲು ಬಂದಾಗ ಸುದ್ದಿ ಗೊತ್ತಾಗಿ ಸದರಿ ಹಣಮಂತ್ರಾಯ ಇವರಿಗೆ ಅನ್ಯಾಯ ಆಗಬಾರದು ಅಂತ ಮಾನವೀಯತೆ ದೃಷ್ಟಿಯಿಂದ ನಾನು ಅಲ್ಲಿಗೆ ಹೋಗಿ ಅಲ್ಲಿದ್ದ ಗ್ರಾಮ ಪಂಚಾಯತ ಸದಸ್ಯರಾದ ಕಲ್ಲಪ್ಪ ತಂದೆ ಮಲ್ಲಪ್ಪ ಮತ್ತು ಮಲ್ಲೇಶನಾಯಕ ತಂದೆ ಬನ್ನಪ್ಪ ಇವರಿಗೆ ನೀವು ಇಲ್ಲಿ ಯಾವುದೇ ಕೆಲಸ ಮಾಡಲಾರದ ಹಣಮಂತ್ರಾಯ ಮತ್ತು ಅವರ ಹೆಂಡತಿ ತಿಮ್ಮವ್ವ ಇವರಿಗೆ ಹೇಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ್ದಾರೆ ಅಂತ ಹಣ ಮಾಡಿಸುತ್ತಿದ್ದೀರಿ ಅಂತ ಕೇಳಿದಾಗ ಅವರು ನಮ್ಮ ಇಷ್ಟ ನಾವು ಗ್ರಾಮ ಪಂಚಾಯತ ಸದಸ್ಯರಿದ್ದೇವೆ ನೀನೇನು ಕೇಳುತ್ತಿ ಅಂತ ಅಂದಾಗ ನಾನು ಹಣಮಂತ್ರಾಯ ತಂದೆ ಹಣಮಂತ ಹಜಾರೆ ಮತ್ತು ಅವರ ಹೆಂಡತಿ ತಿಮ್ಮವ್ವ ಗಂಡ ಹಣಮಂತ್ರಾಯ ಹಜಾರೆ ಇವರಿಗೆ ನೀವೂ ಊರಲ್ಲಿ ಇಲ್ಲದೆ ಹೇಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ್ದೀರಿ ಅಂತ ಕೇಳಿದಾಗ ಅವರು ನಮಗೆ ಏನು ಗೊತ್ತಿಲ್ಲ ಆಧಾರ ಕಾರ್ಡ ಚೆಕ ಮಾಡಬೇಕು ಮತ್ತು ನಿಮ್ಮ ಹೆಬ್ಬೆಟ್ಟು ಸಹಿ ಮಾಡಬೇಕು ಅಂತ ಗ್ರಾಮ ಪಂಚಾಯತ ಸದಸ್ಯರಾದ ಕಲ್ಲಪ್ಪ ತಂದೆ ಮಲ್ಲಪ್ಪ ಮತ್ತು ಮಲ್ಲೇಶನಾಯಕ ತಂದೆ ಬನ್ನಪ್ಪ ಇವರು ತಿಳಿಸಿದ್ದರಿಂದ ನಾವು ಅವರು ತಂದಿರುವ ಮೊಬೈಲದಲ್ಲಿ ಸಹಿ ಮಾಡುತ್ತಿದ್ದೇವೆ ನಮಗೆ ಇದರ ಬಗ್ಗೆ ಏನು ಗೊತ್ತಿಲ್ಲ ಅಂತ ತಿಳಿಸಿದರು. ಆಗ ನಾನು ನಮ್ಮೂರಿನ ಗ್ರಾಮ ಪಂಚಾಯತ ಸದಸ್ಯರಾದ ಕಲ್ಲಪ್ಪ ತಂದೆ ಮಲ್ಲಪ್ಪ ಮತ್ತು ಮಲ್ಲೇಶನಾಯಕ ತಂದೆ ಬನ್ನಪ್ಪ ಇವರಿಗೆ ನೀವೂ ಹೀಗೆಲ್ಲ ಹಳ್ಳಿಯ ಜನರಿಗೆ ಮೋಸ ಮಾಡಬಾರದು ಅಂತ ಅಂದಿದ್ದಕ್ಕೆ ಮಲ್ಲೇಶನಾಯಕ ತಂದೆ ಬನ್ನಪ್ಪ ನಾಗರಬಂಡಿ ಇವನು ನನ್ನ ಕೈಯಿಂದ ವಿಡಿಯೋ ಮಾಡುತ್ತಿದ್ದ ಮೊಬೈಲನ್ನು ಕಸಿದುಕೊಂಡು, ನನಗೆ ಏ ಭೋಸಡೀ ಮಗನೇ, ನಿಂದು ಎಲ್ಲದರಲ್ಲಿ ಹೆಚ್ಚಿಗೆ ಆಗಿದ್ದು, ನೀನೇನು ಮಾಡುತ್ತಿಯ್ಯಾ ಮಗನೇ ಅಂತ ಅವಾಚ್ಯವಾಗಿ ಬೈದು, ಕೈಯಿಂದ ಕುತ್ತಿಗೆ ಹಿಸುಕಲು ಪ್ರಯತ್ನ ಮಾಡಿದ್ದು, ನನ್ನ ಮೈಮೇಲಿನ ಅಂಗಿ ಹರಿದು ಹಾಕಿದ್ದು, ಕೈಯಿಂದ ನನ್ನ ಮುಖಕ್ಕೆ, ಎದೆಗೆ, ಹೊಟ್ಟೆಗೆ ಪಂಚ ಮಾಡಿ ಹೊಡೆದಿದ್ದು, ಕಲ್ಲಪ್ಪ ತಂದೆ ಮಲ್ಲಪ್ಪ ಇವನು ನಿನ್ನನ್ನು ಇಲ್ಲಿಯೇ ಖಲಾಸ ಮಾಡುತ್ತೇನೆ ಸೂಳೇ ಮಗನೇ, ಅಂತ ನೆಲಕ್ಕೆ ಹಾಕಿ ಕಾಲಿನಿಂದ ಒದ್ದನು ಮತ್ತು ಜಗಳದ ಸುದ್ದಿ ತಿಳಿದು ಅಲ್ಲಿಗೆ ಬಂದ ನನ್ನ ಹೆಂಡತಿ ನೀಲಮ್ಮ ಇವರು ನನಗೆ ಬಿಡಿಸಲು ಬಂದಾಗ ಮಲ್ಲೇಶ ಇವನು ನನ್ನ ಹೆಂಡತಿಗೆ ಹೊಡೆದಿರುತ್ತಾನೆ. ಅಲ್ಲಿಗೆ ಬಂದ ಆಂಜನೇಯ ತಂದೆ ಬನ್ನಪ್ಪ ಇವನು ಕೈಯಲ್ಲಿ ಬಡಿಗೆ ಹಿಡಿದುಕೊಂಡು ನಿನಗೇ ಖಲಾಸ ಮಾಡುತ್ತೇನೆ ಅಂತ ಬೆದರಿಕೆ ಹಾಕಿ ಸೂಳೇ ಮಗನೇ ಅಂತ ಅವಾಚ್ಯವಾಗಿ ಬೈದಿರುತ್ತಾನೆ. ಬನ್ನಪ್ಪ ತಂದೆ ನರಸಪ್ಪ ಇವನು ಇಡೀ ನನ್ನ ಆಸ್ತಿ ಹೋದರು ಪರವಾಗಿಲ್ಲ ನಿನ್ನ ಬಿಡುವದಿಲ್ಲ ಸೂಳೇ ಮಗನೇ ಅಂತ ಬೈದಿರುತ್ತಾನೆ. ನೀಲಮ್ಮ ಗಂಡ ಬನ್ನಪ್ಪ ಇವಳು ಇದು ಪಂಚಾಯತಿ ವಿಷಯ ಇದರಲ್ಲಿ ನೀನು ಅಡ್ಡ ಬರಬಾರದು ಎಂದು ನನ್ನ ಹೆಂಡತಿ ಕೂದಲು ಹಿಡಿದು ಎಳೆದಾಡಿರುತ್ತಾಳೆ. ಲಕ್ಷ್ಮೀ ಗಂಡ ಮಲ್ಲೇಶ ಇವಳು ಕಲ್ಲು ತೆಗೆದುಕೊಂಡು ನನ್ನ ಹೆಂಡತಿಯ ಮೇಲೆ ಎಸೆಯಲು ಬಂದಾಗ ಅಲ್ಲಿಂದ ಭಯಭೀತಳಾಗಿ ನನ್ನ ಹೆಂಡತಿ ಓಡಿ ಹೋಗಿರುತ್ತಾಳೆ. ಅಷ್ಟರಲ್ಲಿ ನಮ್ಮೂರಿನ ಹುಸೇನ ತಂದೆ ಮರೆಪ್ಪ ಮಲ್ಲೋರ, ಸಾಬಯ್ಯ ತಂದೆ ರಾಮಣ್ಣ ಕೊಡ್ಲಿ, ನರಸಪ್ಪ ಗೋಪಾಳೆ ಮತ್ತು ಸುತ್ತಮುತ್ತಲಿನ ಓಣಿಯ ಜನರು ನನಗೆ ಹೊಡೆಯವದನ್ನು ಬಿಡಿಸಿ ಮನೆಗೆ ಕಳುಹಿಸಿದರು. ನಮ್ಮೂರಲ್ಲಿ ಈ ರೀತಿ ಜನರಿಗೆ ಮೋಸ ಮಾಡುತ್ತಿರುವ ಮತ್ತು ಅದನ್ನು ಕೇಳಲು ಹೋದ ನನ್ನ ಮೇಲೆ ಮತ್ತು ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಮೇಲ್ಕಂಡ ಎಲ್ಲರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ನನ್ನ ಹೆಂಡತಿ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ಹೋಗಿದ್ದರಿಂದ ತಡವಾಗಿದ್ದು, ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ. ಅಂತ ನೀಡಿದ ದೂರು ಸಾರಾಂಶದ ಮೆಲಿಂದ ಸೈದಾಪೂರ ಪೊಲಿಸ್ ಠಾಣೆ ಗುನ್ನೆ ನಂಬರ 36/2022 ಕಲಂ 323, 324, 354, 504, 506 ಸಂಗಡ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 32/2022, ಕಲಂ, 341, 323, 504.506. ಸಂ.149 ಐ ಪಿ ಸಿ : ದಿನಾಂಕ: 13-03-2022 ರಂದು ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 12-03-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮತ್ತು ಅಣ್ಣ ದೊಡ್ಡಭೀಮರಾಯ ಕೂಡಿ ನಮ್ಮ ಹೊಲಕ್ಕೆ ಹೋದಾಗ ನಮ್ಮ ಅಣ್ಣತಮ್ಮರಾದ 1) ದೊಡ್ಡನಿಂಗಪ್ಪ ತಂದೆ ಲಕ್ಷ್ಮಣ 2) ಸಣ್ಣನಿಂಗಪ್ಪ ತಂದೆ ಲಕ್ಷ್ಮಣ 3) ಭೀಮರಾಯ ತಂದೆ ಲಕ್ಷ್ಮಣ 4) ನಿಂಗಮ್ಮ ಗಂಡ ಲಕ್ಷ್ಮಣ 5) ಮರೆಮ್ಮ ಗಂಡ ನಿಂಗಪ್ಪ ಇವರೆಲ್ಲರು ಕೂಡಿಕೊಂಡು ಬಂದು ನಮಗೆ ಲೇ ಸೂಳೆ ಮಕ್ಕಳೆ ಈ ಹೊಲ ನಿಮ್ಮಪ್ಪನದು ಆದ ಏನಲೆ ಸೂಳೆ ಮಕ್ಕಳೆ ಇಲ್ಲಿಗೆ ಯಾಕೆ ಬಂದಿರಿ ಸೂಳೆ ಮಕ್ಕಳೆ ಅಂತಾ ಬೈಯುತ್ತಿರುವಾಗ ಆಗ ನಾನು ಅವರಿಗೆ ನಮ್ಮ ಹೊಲಕ್ಕೆ ಬಂದಿದ್ದೆವೆ ನಮ್ಮ ಹೊಲಕ್ಕೆ ಬಂದರೆ ನಿಮಗೆ ಏನು ತ್ರಾಸ ಅಂತಾ ಕೇಳಿದರೆ ಅವರಲ್ಲಿ ದೊಡ್ಡನಿಂಗಪ್ಪ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಲೇ ಸೂಳೆ ಮಕ್ಕಳೆ ಇಲ್ಲಿ ಯಾರಪ್ಪನ ಹೊಲ ಇದೆ ಲೆ ಲಂಗಾ ಸೂಳೆ ಮಕ್ಕಳೆ ಯಾಕೆ ಬಂದಿರಿ ಸೂಳೆ ಮಕ್ಕಳೆ ಅಂತಾ ಬೈದು ಹೊಡೆಯಲು ಕೈ ಎತ್ತಿಕೊಂಡು ಬಂದನು ಆಗ ನಾನು ಅಂಜಿ ಹಿಂದಕ್ಕೆ ಸರಿದೆನು ನಮ್ಮ ಹೊಲದ ಕಡೆಗೆ ಹೋಗುತ್ತಿರುವಾಗ ಸಣ್ಣನಿಂಗಪ್ಪ ಈತನು ನನಗೆ ಲೇ ಸೂಳೆ ಮಗನೆ ಎಲ್ಲಿಗೆ ಹೋಗುತ್ತಿರಿ ಅಂತಾ ಅಡ್ಡಗಟ್ಟಿ ನಿಲ್ಲಿಸಿ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಮತ್ತು ಎದೆಗೆ ಹೊಡೆದನು ಆಗ ನನ್ನ ಅಣ್ಣ ದೊಡ್ಡಭೀಮರಾಯ ಈತನು ನಮ್ಮ ತಮ್ಮನಿಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದ್ದಕ್ಕೆ ಆತನಿಗೆ ಭೀಮರಾಯ ತಂದೆ ಲಕ್ಷ್ಮಣ ಈತನು ಲೇ ಸೂಳೆ ಮಕ್ಕಳೆ ನೀವು ನಮ್ಮ ಮಾತು ಕೇಳುತ್ತಿಲ್ಲ ನಿಮಗೆ ಊರಲ್ಲಿ ಬಹಳ ಸೊಕ್ಕು ಆಗಿದೆ ಅಂದು ಕೈಯಿಂದ ಬೆನ್ನಿಗೆ ಹೊಡೆದನು ಆಗ ನಾವು ಅಂಜಿ ಮನೆಗೆ ಹೋಗಬೇಕೆಂದಾಗ ನಿಂಗಮ್ಮ ಮತ್ತು ಮರೆಮ್ಮ ಇವರು ಲೇ ಹೆಂಗಿಸಿನಂತವರೆ ಬರ್ರಿಲೆ ಎಲ್ಲಿದೆ ನಿಮ್ಮ ಪೌರುಷ ಇವತ್ತು ನಿಮಗೆ ಒಂದು ಗತಿ ಕಾಣಿಸಿ ಬಿಡುತ್ತೇವೆ ಮಕ್ಕಳೆ ಇನ್ನೊಂದು ಸಲ ಈ ಹೊಲದ ಮತ್ತು ಹುಣಸೆ ಗಿಡದ ತಂಟೆಗೇನಾದರು ಬಂದರೆ ನಿಮಗೆ ಇಲ್ಲೆ ಜೀವ ಖಲಾಸ ಮಾಡುತ್ತೇವೆ ಮಕ್ಕಳೆ ಅಂತಾ ಜೀವದ ಬೇದಕೆ ಹಾಕಿದ ಬಗ್ಗೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ.37/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 13/03/2022ರಂದು 11.30 ಪಿ.ಎಂ.ಕ್ಕೆ ಶ್ರೀಮತಿ ಮಲ್ಲಮ್ಮ ಗಂ/ ಭಾಗಪ್ಪ ದೊಡ್ಡಮನಿ, ಸಾ|| ಕೊಂಗಂಡಿ, ತಾ|| ಶಹಾಪೂರ ರವರು ಇಂದು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ದಿನಾಂಕ: 13/03/2022 ರಂದು ರಾತ್ರಿ 9.50 ಪಿ.ಎಂ. ಸುಮಾರಿಗೆ ನನ್ನ ಮಾವ ತಾಯಪ್ಪನು ಬೆಳಿಗ್ಗೆ ಚಹಾ ಮಾಡಲಿಕ್ಕೆ ಸಕ್ಕರೆ ತರಲು ಶೆಟ್ಟಿ ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದರು. ಅಂದಾಜು ರಾತ್ರಿ 10.15 ಪಿ.ಎಂ. ಸುಮಾರಿಗೆ ನಮ್ಮೂರ ಅಯ್ಯಪ್ಪ ತಂ/ ದ್ಯಾವಪ್ಪ ನಾಕಮನ ಈತನು ನಮ್ಮ ಮನೆಯ ಹತ್ತಿರ ಓಡಿ ಬಂದು ತಿಳಿಸಿದ್ದೇನೆಂದರೆ, ನಾನು ಮತ್ತು ಶರಣಪ್ಪ ತಂ/ ಶಿವಪ್ಪ ಚಲವಾದಿ ಇಬ್ಬರೂ ಕೂಡಿ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಮಾತನಾಡುತ್ತಾ ಕುಳಿತುಕೊಂಡಿದ್ದಾಗ 10.00 ಪಿ.ಎಂ. ಸುಮಾರಿಗೆ ನಿಮ್ಮ ಮಾವ ತಾಯಪ್ಪನು ನಿಮ್ಮ ಮನೆಯಿಂದ ಹತ್ತಿಗುಡೂರ-ಸುರಪುರ ಮುಖ್ಯ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಒಂದು ಸರಕಾರಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ದೇವದುರ್ಗ ಕ್ರಾಸಿನ ಕಡೆಯಿಂದ ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ನಿಮ್ಮ ಮಾವನವರ ಮೇಲೆ ಬಸ್ ಹಾಯಿಸಿ ಬಸ್ಸಿನಿಂದ ಇಳಿದು ಓಡಿ ಹೋದನು ಆಗ ನಾನು ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳ ಹೆಡ್ ಲೈಟ್ ಬೆಳಕಿನಲ್ಲಿ ಚಾಲಕನ ಮುಖ ನೋಡಿದ್ದು, ಇನ್ನೊಮ್ಮೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ಹತ್ತಿರ ಹೋಗಿ ನೋಡಲಾಗಿ ಬಸ್ಸಿನ ಟೈರ್ ನಿಮ್ಮ ಮಾವನ ಹೊಟ್ಟೆಯ ಮೇಲೆ ಹಾದು ಹೋಗಿದ್ದರಿಂದ ನಿಮ್ಮ ಮಾವ ತಾಯಪ್ಪನಿಗೆ ಎಡ ಹಣೆ ಮತ್ತು ಎಡಗಣ್ಣಿನ ಪಕ್ಕದಲ್ಲಿ ರಕ್ತಗಾಯ, ಬಲಗೈ ಮೊಳಕೈಯಿಂದ ಕೆಳಗೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಭಾರೀ ರಕ್ತಗಾಯವಾಗಿರುತ್ತದೆ. ಎಡಗೈ ಮಣಿಕಟ್ಟಿನ ಕೆಳಗೆ ಭಾರೀ ರಕ್ತಗಾಯವಾಗಿರುತ್ತದೆ. ಮತ್ತು ಹೊಟ್ಟೆಯ ಮೇಲೆ ಬಸ್ಸಿನ ಟೈರು ಹಾದು ಹೋಗಿದ್ದರಿಂದ ಭಾರೀ ರಕ್ತಗಾಯವಾಗಿ ಕರಳು ಹೊರಗಡೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಹೇಳಿದ್ದರಿಂದ ನಾನು ಮತ್ತು ನನ್ನ ಮಗ ಹುಸೇನಪ್ಪ ತಂ/ ಭಾಗಪ್ಪ ದೊಡ್ಡಮನಿ ಈತನೊಂದಿಗೆ ಹತ್ತಿಗುಡೂರ-ಸುರಪುರ ರಸ್ತೆಯಲ್ಲಿರುವ ನಮ್ಮೂರ ಬಸ್ಸ್ಟಾಪ್ ಹತ್ತಿರ ಹೋಗಿ ನೋಡಲಾಗಿ ನನ್ನ ಮಾವನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಲ್ಲಿಯೇ ಇದ್ದ ಬಸ್ಸನ್ನು ನೋಡಲಾಗಿ ಚಿತಾಪೂರ ಇಂದ ಬೆಂಗಳೂರಿಗೆ ಹೋಗುವ ಬಸ್ಸು ಇದ್ದು, ಅದರ ನಂಬರ ಕೆಎ-32 ಎಫ್-2531 ಅಂತಾ ಇರುತ್ತದೆ. ಕಾರಣ ಅಪಘಾತಪಡಿಸಿ ನನ್ನ ಮಾವ ತಾಯಪ್ಪ ತಂ/ ಮಲ್ಲಪ್ಪ ದೊಡ್ಡಮನಿ, ಸಾ|| ಕೊಂಗಂಡಿ ಇವರ ಸಾವಿಗೆ ಕಾರಣನಾದ ಕೆ.ಕೆ.ಆರ್.ಟಿ.ಸಿ ಬಸ್ ನಂ.ಕೆಎ-32 ಎಫ್-2531 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.37/2022 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 14-03-2022 11:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080