ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-04-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ 304(ಎ), ಕಲಂ 3 & 14 ಖಿಜ ಛಿಟಜ ಚಿಟಿಜ ಂಜಠಟಜಛಿಜಟಿಣ ಟಚಿಛಠಣಡಿ (ಕಡಿಠಛಣಠಟಿ ಚಿಟಿಜ ಖಜರಣಟಚಿಣಠಟಿ ) ಂಛಿಣ 1986 : ಪಿರ್ಯಾಧಿಯು ತಮ್ಮನು ಅಪ್ರಾಪ್ತ ವಯಸ್ಸಿನವನಿದ್ದು ಉದ್ಯೋಗ ಖಾತ್ರಿ ಯೋಜನೆಯ ಗಾಜಕೋಟ್ ಗ್ರಾಮದ ಪಂಚಾಯತ ವ್ಯಾಪ್ತಿಯ ಅಡಿಯಲ್ಲಿ ಗೌಡನ ಕೆರೆಯಲ್ಲಿ ಮಣ್ಣು ಎತ್ತುವ ಕೆಲಸಕ್ಕೆ ಹೋಗಿದ್ದು ಪಿರ್ಯಾದಿಯ ತಮ್ಮನು ಕೆಲಸದ ವೇಳೆಯಲ್ಲಿ ನೀರು ಕುಡಿಯುಲು ಕೆರೆಗೆ ಹೋಗಿದ್ದು ಕೆರೆಯಲ್ಲಿ ನೀರು ಕುಡಿಯುವಾಗ ಕಾಲು ಜಾರಿ ಮೃತಪಟ್ಟಿದ್ದು ಪಂಚಾಯತಿ ಅಭೀವೃಧಿ ಅಧೀಕಾರಿಗಳು ಕೆಲಸಗಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಅಪ್ರಾಪ್ತ ವಯಸ್ಸಿನ ವ್ಯಕ್ತಿಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದು ಸದರಿ ಗ್ರಾಮ ಪಂಚಾಯತ ಅಬೀವೃದ್ಧಿ ಅಧಿಕಾರಿಗಳು ನಿರ್ಲಕ್ಷದಿಂದ ನನ್ನ ತಮ್ಮನು ಮೃತಪಟ್ಟಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆನಂ: 51/2022 ಕಲಂ:323, 324, 326, 307, 504, 506 ಐಪಿಸಿ : ಇಂದು ದಿನಾಂಕ 13.04.2022 ರಂದು ಮಧ್ಯಾಹ್ನ 2:30 ಗಂಟೆಗೆ ಶರಣಪ್ಪ ಲೊಡ್ಡಬುಗ್ಗಫೋಳ್ ಇವರ ಮನೆಯ ಮುಂದೆ ಕಟ್ಟೆಯ ಮೇಲೆ ಫಿರ್ಯಾದಿ ಮತ್ತು ಗ್ರಾಮದ ಮುಖಂಡರು ಕುಂತು ಊರಿನ ಮೈಬೂಬ ಸುಬಾನಿ ದಗರ್ಾದ ಜಾತ್ರೆಯಾದ ನಂತರ ಉಳಿದ ಹಣವನ್ನು ಲೆಕ್ಕ ಮಾಡಿ ಬೇಕಾದವರಿಗೆ ಕೊಟ್ಟ ನಂತರ ಉಳಿದ ಹಣವನ್ನು ಲೇಕ್ಕ ಮಾಡುತ್ತಿದ್ದಾಗ ಆರೋಪಿತನು ಒಮ್ಮೇಲೆ ಅವರಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಫೀರ್ಯಾದಿಯೊಂದಿಗೆ ಜಗಳ ತೆಗೆದು ಹೊಡೆ-ಬಡೆ ಮಾಡಿದ್ದು ಬಿಡಲು ನಡುವೆ ಬಂದ ಫಿರ್ಯಾದಿಯ ಅಣ್ಣತಮ್ಮಕಿಯವ ಅಣ್ಣನಾದ ಗುರುನಾಥರಡ್ಡಿಗೆ ಕೊಲೆ ಮಾಡುವ ಉದ್ದೆಶದಿಂದ ತನ್ನ ಕಿಸೆಯಲ್ಲಿದ್ದ ಚಾಕು ತೆಗೆದು ಆತನ ಎಡಗೈ ಹೆಬ್ಬೆರಳಿಗೆ ಚುಚ್ಚಿ ಕತ್ತರಿಸಿ ಭಾರಿ ರಕ್ತಗಾಯ ಮಾಡಿದ್ದು ಅಲ್ಲದೇ ಫೀರ್ಯಾದಿಯ ತಮ್ಮನಾದ ಶಂಕರಡ್ಡಿಗೆ ತರಚಿದ ಗಾಯಗೊಳಿಸಿದ್ದು ಹಾಗೂ ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾಧಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ನಾನು ಸಿದ್ದಣ್ಣ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 51/2022 ಕಲಂ: 323, 324, 326, 307, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 13/04/2022 ರಂದು 4 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ಹೊತಪೇಟಗ್ರಾಮದ ಹಣಮಂತದೇವರಗುಡಿ ಹತ್ತಿರ ಸಾರ್ವಜನಿಕಖುಲ್ಲಾಜಾಗದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 5 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 04 ಜನರು ಸಿಕ್ಕಿದ್ದು ಸಿಕ್ಕ ಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 3460/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ-55/2022 ಕಲಂ 457, 380 ಐಪಿಸಿ : ಇಂದು ದಿನಾಂಕ: 13/04/2022 ರಂದು ಸಾಯಂಕಾಲ: 6.30 ಪಿ,ಎಂ ಕ್ಕೆ ಠಾಣೆಗೆ ಫಿಯರ್ಾದಿ ಶ್ರೀ ಗುಂಡಪ್ಪ ತಂದೆ ಬಸವರಾಜಪ್ಪ ತುಂಬಗಿ ವಯ: 55 ಜಾ: ಲಿಂಗಾಯತ ಉ: ವ್ಯಾಪಾರ ಸಾ: ಗಾಂಧಿಚೌಕ ಶಹಾಪೂರ ತಾ: ಶಹಾಪೂರ ಜಿ: ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ. ನಾನು 2 ವರ್ಷಗಳಿಂದ ಶಹಾಪುರ ನಗರದ ಬಸವೇಶ್ವರ ವೃತ್ತದ ಹತ್ತಿರ ವೈಷ್ಣವಿ ಮಾಕರ್ೆಟಿಂಗ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದೆನು. ನಮ್ಮ ಅಂಗಡಿಯಲ್ಲಿ ನಾನು ಮತ್ತು ನನ್ನ ತಮ್ಮ ಸಂಗಮೇಶ ತಂದೆ ಬಸವರಾಜ ತುಂಬಗಿ ಹಾಗೂ ಗುಮಾಸ್ತ ಅಕ್ಷಯ ತಂದೆ ಗದಿಗೆಪ್ಪ ದೇಸಾಯಿ ಸಾ: ಹಳಿಸಗರ ಎಲ್ಲರೂ ಕೂಡಿ ಬೆಳಿಗ್ಗೆ 9.45 ಎ.ಎಂ. ಇಂದ ರಾತ್ರಿ 10.00 ಪಿ.ಎಂ. ವರೆಗೆ ಕೆಲಸ ಮಾಡಿಕೊಂಡಿರುತ್ತೇವೆ. ನಿನ್ನೆ ದಿನಾಂಕ: 12/04/2022 ರಂದು ರಾತ್ರಿ 10.00 ಪಿ.ಎಂ.ಕ್ಕೆ ನನ್ನ ತಮ್ಮ ಸಂಗಮೇಶ ಮತ್ತು ನಾನು ಇಬ್ಬರೂ ಕೂಡಿ ನಮ್ಮ ಅಂಗಡಿಯ ಶೆಟರ್ ಕೀಲಿ ಹಾಕಿಕೊಂಡು ಹೋಗಿದ್ದೆವು. ಇಂದು ದಿನಾಂಕ: 13/04/2022 ರಂದು ಬೆಳಿಗ್ಗೆ 5.30 ಎ.ಎಂ.ಕ್ಕೆ ನಮ್ಮ ಅಂಗಡಿಗೆ ಉಪ್ಪಿನ ಲೋಡ ಬರುವದು ಇದ್ದುದ್ದರಿಂದ ಅಂಗಡಿಗೆ ಹೋಗಿ ಉಪ್ಪಿನ ಲೋಡ ಲಾರಿಯಿಂದ ಕೆಳಗಿಳಿಸಿ ಅಂಗಡಿಯಲ್ಲಿ ಹಚ್ಚಿಸಿದರಾಯಿತು ಅಂತ ನಾನು ಮತ್ತು ನಮ್ಮ ಗುಮಾಸ್ತ ಅಕ್ಷಯ ದೇಸಾಯಿ ಇಬ್ಬರೂ ಕೂಡಿ ನಮ್ಮ ಅಂಗಡಿ ಹತ್ತಿರ ಬಂದು ಅಂಗಡಿ ನೋಡಲಾಗಿ ನಮ್ಮ ಅಂಗಡಿಯ ನಡುವಿನ ಶಟರ ಅರ್ಧಕ್ಕಿಂತ ಹೆಚ್ಚು ತೆರೆದಿತ್ತು ಸಮೀಪ ಹೋಗಿ ನೋಡಲಾಗಿ ಯಾರೋ ಕಳ್ಳರು ನಮ್ಮ ಅಂಗಡಿಯ ನಡುವಿನ ಶಟರ ಮೇಲಕ್ಕೆ ಎತ್ತಿದ್ದರಿಂದ ಮುರಿದಿದ್ದು ಕಂಡು ಬಂದಿತ್ತು ನಾನು ಒಮ್ಮೆಲೆ ಗಾಬರಿಯಾಗಿ ಈ ವಿಷಯ ನಮ್ಮ ತಮ್ಮ ಸಂಗಮೇಶನಿಗೆ ಪೋನ ಮಾಡಿ ತಿಳಿಸಿದೆನು. ತಕ್ಷಣ ನಮ್ಮ ತಮ್ಮನು ಅಂಗಡಿಗೆ ಬಂದನು. ಆಗ ನಾನು ಮತ್ತು ನಮ್ಮ ತಮ್ಮ ಸಂಗಮೇಶ ಹಾಗೂ ನಮ್ಮ ಗುಮಾಸ್ತ ಅಕ್ಷಯ ದೇಸಾಯಿ ಮೂವರು ನಮ್ಮ ಅಂಗಡಿಯ ಒಳಗಡೆ ಹೋಗಿ ನೋಡಲಾಗಿ ಅಂಗಡಿಯಲ್ಲಿನ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು ನಂತರ ಕ್ಯಾಶ ಕೌಂಟರನ್ನು ನೋಡಲಾಗಿ ಕ್ಯಾಶ ಕೌಂಟರ ಡ್ರಾದಲ್ಲಿಟ್ಟ ನಗದು ಹಣ 16300-00 ರೂ ಇರಲಿಲ್ಲ. ಹಾಗು ಅಂಗಡಿಗೆ ಸಂಬಂದಿಸಿದ ಕೆಲವು ದಾಖಲಾತಿಗಳಾದ 1) ಸಕ್ಕರೆ ಖರಿದಿ ಮಾಡಿದ ಬಿಲ್ ಅ,ಕಿ,00.00 2) ರವಾ ಖರಿಸಿ ಮಾಡಿದ ಬಿಲ್ ಅ,ಕಿ,00.00 3) ಐ.ಟಿ ರಿಟರ್ನ ಪೈಲ್ ಅ,ಕಿ, 00.00 4) ಮಂತಲಿ ಸ್ಟೆಟಮೆಂಟ್ ಅ,ಕಿ,00.00 ಹಾಗೂ ಇನ್ನಿತರ ಅಂಗಡಿಗೆ ಸಂಬಂದಿಸಿದ ಇನ್ನಿತರ ದಾಖಲಾತಿಗಳು ಕಾಣಲಿಲ್ಲ. ಈ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ತಂದೆಯವರಿಗೆ ವಿಚಾರಿಸಿ ಠಾಣೆಗೆ ದೂರು ಕೊಡಲು ಬರಲು ತಡವಾಗಿರುತ್ತದೆ. ಯಾರೋ ಕಳ್ಳರು ನಮ್ಮ ಅಂಗಡಿಯ ನಡುವಿನ ಶೆಟರ್ ಮುರಿದು ಮೇಲೆ ಎತ್ತಿ ಅಂಗಡಿಯ ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಘಟನೆಯು ದಿನಾಂಕ:12/04/2022 ರಂದು ರಾತ್ರಿ 10.00 ಪಿ,ಎಂ ದಿಂದ ದಿನಾಂಕ:13/04/2022 ರ ಬೆಳಗ್ಗೆ 5.00 ಎ,ಎಂ ಮದ್ಯ ಅವದಿಯ ಜರುಗಿರುತ್ತದೆ. ಕಾರಣ ನಮ್ಮ ಅಂಗಡಿಯೊಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿನ ಮೇಲ್ಕಾಣಿಸಿದ ಹಣ ಮತ್ತು ಅಂಗಡಿಗೆ ಸಂಬಂದಿಸಿದ ದಾಖಲಾತಿಗಳು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 55/2022 ಕಲಂ: 547.380 ಐ,ಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ: 279 ,338, 283 ಕಅ ಖ/ತಿ 122 ಒಗಿ ಂಛಿಣ : ದಿನಾಂಕ; 13/04/2022 ರಂದು 7-30 ಪಿಮ್ ಕ್ಕೆ ಪಿಯರ್ಾದಿದಾರಾದ ಶ್ರೀ ಮಲ್ಲೇಶ ತಂದೆ ಮಲ್ಲೇಶ ತಂದೆ ಸಾಬಯ್ಯ ಗೌಡಯ್ಯನೋರ ವ:38, ಜಾತಿ:ಬೇಡರು, ಉ:ಒಕ್ಕಲುತನ ಸಾ:ಕುರಿಹಾಳ ತಾ:ವಡಗೇರಾ ಜಿ:ಯಾದಗಿರಿ ಇವರು ಪೋಲಿಸ ಠಾಣೆಗೆ ಹಾಜರಾಗಿ ನೀಡಿದ ದೂರು ಅಜರ್ಿಯ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 12/04/2022 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಯಾದಗಿರಿಯಲ್ಲಿ ನನ್ನ ವೈಯಕ್ತಿಕ ಕೆಲಸ ಮುಗಿಸಿಕೊಂಡು ನಾನು ಮತ್ತು ನನ್ನ ಅಳಿಯ ಮಹಾಂತೇಶ ತಂದೆ ಪಬ್ಬಣ್ಣ ಕವಲಿ ಇಬ್ಬರು ನಮ್ಮ ಮೋಟರ ಸೈಕಲ್ ಮೇಲೆ ಕುರಿಹಾಳ ಗ್ರಾಮಕ್ಕೆ ಹೊರಟೇವು. ರಾತ್ರಿ 11-00 ಗಂಟೆ ಸುಮಾರಿಗೆ ನಾವು ಊರಿಗೆ ಹೋಗುತ್ತಿರುವಾಗ ನಮ್ಮ ಅಳಿಯನಾದ ಹೈಯಾಳಪ್ಪ ತಂದೆ ನಾಗಪ್ಪ ಕವಲಿ ಈತನು ತನ್ನ ಪೈನಾನ್ಸ್ ಕೆಲಸ ಮುಗಿಸಿಕೊಂಡು ತನ್ನ ಮೋಟರ ಸೈಕಲ್ ನಂಬರ. ಕೆಎ 33 ಈಬಿ 6948 ನೇದ್ದರ ಮೇಲೆ ನಮ್ಮ ಮುಂದೆ ಹೋಗುತ್ತಿದ್ದನು. ನಾವು ಆತನ ಹಿಂದೆಯೇ ಹೋಗುತ್ತಿದ್ದೇವು. ಹೈಯಾಳಪ್ಪನು ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್(ಜೆ) ಹಳ್ಳದ ಸಮೀಪ ಅತಿವೇಗವಾಗಿ ಹೋಗುತ್ತಿರವಾಗ ರಸ್ತೆಯ ಮಧ್ಯದಲ್ಲಿ ಐಚರ ಲಾರಿ ಗಾಡಿ ನಂಬರ: ಎಮ್ಹೆಚ್ 14 ಬಿಜೆ 3062 ನೇದ್ದರ ಚಾಲಕನು ಯಾವುದೇ ಇಂಡಿಕೇಟರ್ ವೈಗೆರೆ ಹಾಕದೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಅಪಯಕಾರಿ ಸ್ಥಿತಿಯಲ್ಲಿ ಐಚರ ಲಾರಿಯನ್ನು ನಿಲ್ಲಿಸಿದ್ದರಿಂದ ಸದರಿ ಐಚರ ಲಾರಿಗೆೆ ಹೈಯಾಳಪ್ಪನು ತನ್ನ ಮೋಟರ ಸೈಕಲ್ನ್ನು ವೇಗವಾಗಿ ಚಲಾಯಿಸಿಕೊಂಡು ಹಿಂದಿನಿಂದ ಹೋಗಿ ಡಿಕ್ಕಿಪಡಿಸಿ ರಸ್ತೆಯ ಮೇಲೆ ಬಿದ್ದನು. ಆಗ ಆತನ ಹಿಂದೆಯೇ ಹೋಗುತ್ತಿದ್ದ ನಾನು ಮತ್ತು ಮಹಾಂತೇಶ ಇಬ್ಬರು ಕೂಡಿ ಹೈಯಾಳಪ್ಪನಿಗೆ ನೋಡಿದಾಗ ಅಪಘಾತದಲ್ಲಿ ಮುಖಕ್ಕೆ ರಕ್ತಗಾಯವಾಗಿ ಹಲ್ಲು ಮುರಿದಿತ್ತು. ಎಡಗಾಲಿನ ಮೊಳಕಾಳಿನ ಕೆಳಗೆ ಭಾರಿ ರಕ್ತವಾಗಿ ಎಲಬು ಮುರಿದಿತ್ತು. ಆಗ ನಾವು ಸದರಿ ಹೈಯಾಳಪ್ಪನಿಗೆ ಅಲ್ಲಿಯೇ ರಸ್ತೆಯ ಮೇಲೆ ಹೋಗುತಿದ್ದ ಒಂದು ಟಂಟಂ ವಾಹನದಲ್ಲಿ ಹಾಕಿಕೊಂಂಡು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರಗೆ ತಂದು ಸೇರಿಕೆ ಮಾಡಿದಾಗ ಅಲ್ಲಿನ ವೈದ್ಯಾಧಿಕಾರಿಗಳು ಗಾಯಾಳುವಿಗೆ ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ತೋರಿಸಿ ಅಂತಾ ಹೇಳಿದಾಗ ಅಲ್ಲಿಂದ 108 ಅಂಬುಲೆನ್ಸಮೂಲಕ ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ.ಕಾರಣ ರಸ್ತೆ ಮೇಲೆ ಐಚರ ಲಾರಿಯನ್ನು ಯಾವುದೇ ಇಂಡಿಕೆಟರ್ ವೈಗೆರೆ ಹಾಕದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಐಚರ ಲಾರಿ ಅಪಯಾಕಾರಿಯಾಗಿ ನಿಲ್ಲಿಸಿದ್ದರಿಂದ ಹೈಯಾಳಪ್ಪನು ಮೋಟರ ಸೈಕಲನು ವೇಗದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಢಿಕ್ಕಿಪಡಿಸಿದ್ದರಿಂದ ಈ ಅಪಘಾತ ಸಂಭವಿಸಿರುತ್ತದೆ. ಆದ್ದರಿಂದ ಸದರಿ ಲಾರಿ ಚಾಲಕ ಮತ್ತು ಗಾಯಾಳು ಹೈಯಾಳಪ್ಪನ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಸದರಿ ಐಚರ ಲಾರಿ ಚಾಲಕನ ಹೆಸರು ಬಾಬುಸಾಬ ತಂದೆ ಕಾಸಿಂಸಾಬ ಹುಲಿ ಸಾ:ವಡಗೇರಾ ಅಂತಾ ಗೊತ್ತಾಗಿರುತ್ತದೆ. ಸದರಿ ಐಚರ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಅಳಿಯನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ.ಕಾರಣ ಇಬ್ಬರೂ ಮೋಟರ್ ಸೈಕಲ್ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 50/2022 ಕಲಂ: 279, 338,283 ಕಅ ಖ/ತಿ 122 ಒಗಿ ಂಛಿಣ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 78(6) ಕೆ.ಪಿ. ಎಕ್ಟ್ : ದಿನಾಂಕ: 13/04/2022 ರಂದು 9.15 ಪಿ.ಎಮ್ ಕ್ಕೆ ಗಜಾನಂದ ಬಿರಾದಾರ ಪಿ.ಎಸ್.ಐ ಕೆಂಭಾವಿ ಠಾಣೆ ರವರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆ ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಗಜಾನಂದ ಬಿರಾದಾರ ಪಿಎಸ್ಐ(ಕಾಸು) ಕೆಂಭಾವಿ ಪೊಲೀಸ್ ಠಾಣೆ ವರದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ 13/04/2022 ರಂದು 7.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಠಾಣೆಯ ಆನಂದ ಪಿಸಿ 43 ರವರು ಮಾಹಿತಿ ನೀಡಿದ್ದೇನೆಂದರೆ, ಕೆಂಭಾವಿ ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಯ ಮುಂದಿನ ಲೈಟಿನ ಬೆಳಕಿನಲ್ಲಿ ಇಂದು ರಾತ್ರಿ 19-30 ಗಂಟೆಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಾದ ಕಃಏಖ (ಪಂಜಾಬ್ ಕಿಂಗ್ಸ್) ಗಿ/ಖ ಒ (ಮುಂಬೈ ಇಂಡಿಯನ್ಸ್) 20-20 ಪಂದ್ಯದ ಕ್ರಿಕೆಟ್ ಬೆಟ್ಟಿಂಗ ನಡೆಸುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶ್ರೀ ಶಿವಲಿಂಗ ಹೆಚ್.ಸಿ 185, ಶಿವರಾಜ ಹೆಚ್.ಸಿ 85, ಶಂಕರಗೌಡ ಹೆಚ್.ಸಿ 33, ಆನಂದ ಪಿಸಿ 43, ಮಾಳಪ್ಪ ಪಿಸಿ 29 ಹಾಗೂ ಜೀಪ್ ಚಾಲಕ ಪೆದ್ದಪ್ಪಗೌಡ ಪಿಸಿ 214 ಇವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರಾದ 1) ಶ್ರೀ ಮುಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ವ|| 35ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಮತ್ತು 2) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ವ|| 38ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಎಲ್ಲರೂ ಕೂಡಿ ಠಾಣೆಯ ಸರಕಾರಿ ಜೀಪ್ ನಂ: ಕೆಎ 33, ಜಿ 127 ನೇದ್ದರಲ್ಲಿ 7.30 ಪಿ.ಎಮ್.ಕ್ಕೆ ಠಾಣೆಯಿಂದ ಹೊರಟೆವು. ಇಂದು ರಾತ್ರಿ 7.45 ಪಿ.ಎಮ್.ಕ್ಕೆ ಕೆಂಭಾವಿ ಪಟ್ಟಣದ ಸರಕಾರಿ ಆಸ್ಪತ್ರೆಯ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಅಲ್ಲಿ ಇರುವ ಅಂಗಡಿಗಳ ಸುತ್ತಮುತ್ತ ಮರೆಯಾಗಿ ನಿಂತು ನೋಡಲಾಗಿ ಸಕರ್ಾರಿ ಆಸ್ಪತ್ರೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಇಂದು ರಾತ್ರಿ 7.30 ಗಂಟೆಗೆ ಪ್ರಾರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಾದ (ಕಃಏಖ ಗಿ/ಖ ಒ) ಟ್ವೆಂಟಿ- ಟ್ವೆಂಟಿ ಪಂದ್ಯದ ಪೈಕಿ ಅದರಲ್ಲಿ ಮುಂಬೈ ಗೆದ್ದರೆ ಒಂದು ಸಾವಿರ ರೂಪಾಯಿಗೆ ಐದು ಸಾವಿರ ರೂಪಾಯಿ ಕೊಡುತ್ತೇನೆ, ಪಂಜಾಬ್ ಗೆದ್ದರೆ ಒಂದು ಸಾವಿರ ರೂಪಾಯಿಗೆ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ ಅಂತಾ ತನ್ನ ಮೊಬೈಲ್ ಮೂಲಕ ಯಾರಿಗೋ ಸಂಪರ್ಕ ಮಾಡುತ್ತಾ ಮೊಬೈಲ್ ಮುಖಾಂತರ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾತನಾಡುತ್ತಿದ್ದನು. ಸದರಿ ವ್ಯಕ್ತಿ ಮೊಬೈಲ್ನಲ್ಲಿ ಮಾತನಾಡಿದ್ದನ್ನು ತನ್ನ ಹತ್ತಿರ ಇರುವ ಒಂದು ನೋಟ್ ಬುಕ್ನಲ್ಲಿ ಬರೆದುಕೊಳ್ಳುತ್ತಿದ್ದನು. ಸದರಿಯವನು ಇಂದು ನಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಾದ (ಕಃಏಖ ಗಿ/ಖ ಒ) ಟ್ವೆಂಟಿ-ಟ್ವೆಂಟಿ ಪಂದ್ಯದ ಮೇಲೆ ಕ್ರಿಕೆಟ್ ಬೆಟ್ಟಿಂಗ ನಡೆಸುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಅವನ ಮೇಲೆ ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 8 ಪಿ.ಎಮ್.ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಅಲ್ತಾಫ್ ತಂದೆ ಮುಸ್ತಫಾ ಸಾಸನೂರ ವ|| 24ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಕೆಂಭಾವಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಿದಾಗ 1)ನಗದು ಹಣ 3000 ರೂಪಾಯಿ, 2)ಒಂದು ನೀಲಿ ಬಣ್ಣದ ಖಜಜಟ ಕಂಪನಿಯ ದೊಡ್ಡ ಮೊಬೈಲ್ ಅ.ಕಿ 3000=00, 3)ಒಂದು ನೋಟ್ ಬುಕ್ ಅ.ಕಿ. 00=00, 4)ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿರುತ್ತವೆ. ಅವನ ಮೊಬೈಲನ್ನು ಪರಿಶೀಲಿಸಿ ನೋಡಲಾಗಿ ಅಡಿಛಿಞಜಣ ಟಟಿಜ ರಣಡಿಣ ಅಂತಾ ಒಂದು ಆ್ಯಪ್ ಇರುತ್ತದೆ. ನೋಟ್ ಬುಕ್ ಪರಿಶೀಲಿಸಿ ನೋಡಲಾಗಿ ಅದರಲ್ಲಿ (ಕಃಏಖ ಗಿ/ಖ ಒ) ಅಂತ ಬರೆದಿದ್ದು [ಕಃಏಖ] ಕೆಳಗಡೆ 500, 1000, 1500 [ಒ] ಕೆಳಗಡೆ 800, 1000, 1200 ಅಂತ ಬರೆದಿತ್ತು. ಸದರಿ ವ್ಯಕ್ತಿಗೆ ಅವನ ಬಳಿ ಸಿಕ್ಕ ಹಣದ ಬಗ್ಗೆ ವಿಚಾರಣೆ ಮಾಡಿದಾಗ ಇಂದು ರಾತ್ರಿ 7.30 ಗಂಟೆಗೆ ಪ್ರಾರಂಭವಾಗಿರುವ [ಕಃಏಖ] ಗಿ/ಖ [ಒ] ಐ.ಪಿ.ಎಲ್ ಪಂದ್ಯದ ಬೆಟ್ಟಿಂಗ್ ಹಣವಿದ್ದು, ಸದರಿ ಹಣವನ್ನು ಸಾರ್ವಜನಿಕರಿಂದ ಪಡೆದುಕೊಂಡ ಹಣ ಇರುತ್ತದೆ ಅಂತಾ ತಿಳಿಸಿದನು. ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯಿಂದ ಕ್ರಿಕೆಟ್ ಬೆಟ್ಟಿಂಗಗೆ ಉಪಯೋಗಿಸಿದ ನಗದು ಹಣ 3000=00 ರೂಪಾಯಿ, ಒಂದು ಮೊಬೈಲ್, ಒಂದು ನೋಟ್ ಬುಕ್, ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 8.00 ಪಿ.ಎಮ್.ದಿಂದ 9.00 ಪಿ.ಎಮ್.ವರೆಗೆ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಸದರಿ ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ರಾತ್ರಿ 9.15 ಪಿ.ಎಮ್.ಕ್ಕೆ ಬಂದಿದ್ದು, ಠಾಣೆಯಲ್ಲಿ ವರದಿ ತಯಾರಿಸಿ ವರದಿಯೊಂದಿಗೆ ಮೂಲ ಜಪ್ತಿ ಪಂಚನಾಮೆ, ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರುಪಡಿಸಿ ಕಲಂ 78(6) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ವರದಿ ಸಲ್ಲಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 65/2022 ಕಲಂ 78(6) ಕೆ.ಪಿ ಯಾಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-04-2022 11:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080