ಅಭಿಪ್ರಾಯ / ಸಲಹೆಗಳು

                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14-06-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 80/2021 ಕಲಂ 406, 409, 420, 419, 420 ಐಪಿಸಿ : ಇಂದು ದಿನಾಂಕ 13.06.2021 ರಂದು 07.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಲ್ಲಣ್ಣ ತಂದೆ ಶಂಕ್ರೆಪ್ಪ ಜಕರಡ್ಡಿ @ ಬೀಳವಾರ ವ|| 65 ಜಾ|| ಹಿಂದು ರಡ್ಡಿ ಉ|| ಒಕ್ಕಲುತನ ಸಾ|| ನಗನೂರ ತಾ|| ಸುರಪೂರ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮ್ಮೂರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ ಇದ್ದು ಸದರಿ ಬ್ಯಾಂಕಿನಲ್ಲಿ ಸುಮಾರು 10 ವರ್ಷಗಳಿಂದ ಹಳ್ಳೆರಾಯ ತಂದೆ ಶಂಕ್ರೆಪ್ಪ ದೇಸಾಯಿ ಎನ್ನುವರು ಕಾರ್ಯದಶರ್ಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತಾರೆ. ಅಲ್ಲದೇ ಸದರಿ ಬ್ಯಾಂಕಿನಲ್ಲಿ ನಾನು ಸಹ ಸುಮಾರು ಹದಿನಾಲ್ಕು ವರ್ಷಗಳಿಂದ ಸದಸ್ಯನಾಗಿರುತ್ತೇನೆ. ಹೀಗಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕನ ಕಾರ್ಯದಶರ್ಿಯವರಾದ ಹಳ್ಳೆರಾಯ ತಂದೆ ಶಂಕ್ರೆಪ್ಪ ದೇಸಾಯಿ ಇವರು 2019 ಹಾಗು 2020 ನೇ ಸಾಲಿನ ಆಥರ್ಿಕ ವರ್ಷದಲ್ಲಿ ನನ್ನ ಹೊಲ ಸವರ್ೆ ನಂಬರ 255 [ 3ಎಕರೆ 17 ಗುಂಟೆ] ನಗನೂರ ಸೀಮಾಂತರದ ಹೊಲದ ಮೇಲೆ ನನ್ನ ಅನುಮತಿ ಇಲ್ಲದೆ ನಾನು ಅನಕ್ಷರಸ್ಥನಾಗಿದ್ದು, ನನಗೆ ಓದಲು ಬರೆಯಲು ಬರುವದಿಲ್ಲ ಅಂತ ಗೊತ್ತಿದ್ದರೂ ಸಹ ಅದನ್ನು ದುರುಪಯೋಗ ಪಡಿಸಿಕೊಂಡು ನಿಗದಿತವಾದ ಸಾಲದ ಮೊತ್ತವನ್ನು ನಮೂದಿಸದೆ, ಕೇವಲ ರೂಪಾಯಿ 14,500/- ಕೊಡುವದರ ಮೂಲಕ ನಮ್ಮ ಹೊಲವನ್ನು ಅಡಮಾನ [ ಒಠಡಿಣರಚಿರಜ] ಮಾಡಿಸಿದ್ದು ಈ ವಿಷಯದಲ್ಲಿ ಸುಮಾರು 8 ತಿಂಗಳಿನಿಂದ ಸತತವಾಗಿ ಸಾಲದ ಮೊತ್ತವನ್ನು ತಿಳಿಸುವಂತೆ ವಿನಂತಿಸಿಕೊಂಡರು ಕೂಡಾ ಏನೂ ತಿಳಿಸದೇ ಗ್ರಾಹಕರ ಸೇವೆಯನ್ನು ಮಾಡದೇ ಪೀಡಿಸಿದ್ದಾರೆ ಅಲ್ಲದೇ ಈ ಕೇಸನ್ನು ಇಲ್ಲಿಗೆ ಕೈಬಿಡಬೇಕು ಅಂತ ಜೀವದ ಭಯ ಹಾಕಿದ್ದಾರೆ. ಇದುವರೆಗೂ ಕೂಡಾ ನಮ್ಮ ಸಾಲದ ಬಗ್ಗೆ ಯಾವದೇ ಮಾಹಿತಿ ನೀಡಿರುವದಿಲ್ಲ ಅಲ್ಲದೇ ಯಾವದೇ ದಾಖಲಾತಿಗಳು ನೀಡಿರುವದಿಲ್ಲ. ನಂತರ ನಾನು ಸದರಿ ಇಲಾಖೆಯ ಮೇಲಾಧಿಕಾರಿಗಳು ಹಾಗು ಕನರ್ಾಟಕ ಅಫೆಕ್ಸ್ ಬ್ಯಾಂಕ ಮುಖ್ಯ ಪ್ರಧಾನ ವ್ಯವಸ್ಥಾಪಕರಲ್ಲಿ ಸಂಪಕರ್ಿಸಿದಾಗ ಅವರ ಆದೇಶದ ಮೇರೆಗೆ ನಮಗೆ ದಾಖಲಾತಿಗಳನ್ನು ನೀಡಿದ್ದು ಇರುತ್ತದೆ. ನಂತರ ನಾವು ಸದರಿ ದಾಖಲಾತಿಗಳನ್ನು ಪರಿಶೀಲಿಸಿ ನೋಡಲು ಏಙಅ [ಏಟಿಠತಿ ಙಠಣಡಿ ಅಣಣಠಟಜಡಿ] ಸುಳ್ಳು ಇದ್ದು ಅಲ್ಲದೇ ಈ ಕೆಳಗಿನಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಠಿ ಮಾಡಿದ್ದು ಕಂಡು ಬಂದಿದ್ದು ಇರುತ್ತದೆ. ನನ್ನ ಆಧಾರ ಕಾರ್ಡ ಸಂಪೂರ್ಣವಾಗಿ ಸುಳ್ಳು ಆಗಿರುತ್ತದೆ. ಸಂಪೂರ್ಣವಾಗಿ ನನ್ನ ಮೋಬೈಲ್ ನಂಬರ ಸುಳ್ಳಾಗಿರುತ್ತದೆ. ಸಾಕ್ಷಿದಾರರು ಸಹ ಸುಳ್ಳು ಇರುತ್ತಾರೆ. ಹಸ್ತಾಕ್ಷರಗಳು ಸುಳ್ಳಾಗಿದ್ದು ಅಲ್ಲದೇ ಅನೇಕ ತಿದ್ದುಪಡಿಗಳು ಹಾಗು ಓರೈಟಿಂಗ್ ಇದ್ದದ್ದು ಕಂಡು ಬಂದಿರುತ್ತವೆ. ಮತ್ತು ನನ್ನ ಭಾವಚಿತ್ರ ಸಹ ಇರುವದಿಲ್ಲ. ಕಾರಣ ನಗನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕನ ಕಾರ್ಯದಶರ್ಿಯವರಾದ ಹಳ್ಳೆರಾಯ ತಂದೆ ಶಂಕ್ರೆಪ್ಪ ದೇಸಾಯಿ ಇವರು ಮುಗ್ದ ಹಾಗು ಸಣ್ಣ ರೈತನಾದ ನನಗೆ ಹಾಗು ಸರಕಾರಕ್ಕೂ ಕೂಡಾ ವಿಶ್ವಾಸ ದ್ರೋಹದ ಜೊತೆಗೆ ಮೋಸ ಮಾಡಿ ತಾನೊಬ್ಬ ಸಾರ್ವಜನಿಕ ನೌಕರ ಅನ್ನುವದನ್ನು ಮರೆತು ಈ ಮೇಲ್ಕಾಣಿಸಿದಂತೆ ಅಪರಾಧವೆಸಗಿದ್ದು ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 80/2021 ಕಲಂ 406,409,420,419,477[ಎ] ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 14-06-2021 12:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080