ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-06-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ 323, 354, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ 13.06.2022 ರಂದು ಮಧ್ಯಾಹ್ನ 2 ಗಂಟೆಗೆ ಶಿವಮ್ಮ ಗಂಡ ದಿ|| ತಾಯಪ್ಪ ದನಕಾಯಿ, ವ|| 60 ವರ್ಷ, ಜಾ|| ಕಬ್ಬಲಿಗ, ಉ|| ಹೊಲಮನೆಕೆಲಸ, ಸಾ|| ಸೌರಾಷ್ಟ್ರಹಳ್ಳಿ ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನನಗೆ ಭೀಮವ್ವ, ರವಿ, ಭಿಮಪ್ಪ, ಚೌಡಮ್ಮ ಅಂತಾ 2 ಹೆಣ್ಣು, 2 ಗಂಡು ಮಕ್ಕಳಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಅವರವರ ಗಂಡನ ಮನೆಯಲಿರುತ್ತಾರೆ. ನನ್ನದೊಡ್ಡ ಮಗ ರವಿ ಕುಟುಂಬ ಸಮೇತ ಕೇರಳ ರಾಜ್ಯದಲ್ಲಿದ್ದು ಕೂಲಿಕೆಲಸ ಮಾಡುತ್ತಾನೆ. ನನ್ನ ಸಣ್ಣಮಗ ಭೀಮಪ್ಪ ಬೇರೆಯಾಗಿ ಕುಟುಂಬ ಸಮೇತ ನಮ್ಮ ಮನೆಯ ಒಂದು ಭಾಗದಲ್ಲಿರುತ್ತಾನೆ. ನನ್ನಗಂಡ ಅನಾರೋಗ್ಯ ಪೀಡಿತನಾಗಿ ಕಳೆದ 11 ತಿಂಗಳ ಕೆಳಗೆ ಮೃತಪಟ್ಟಿರುತ್ತಾನೆ. ನನ್ನ ಸಣ್ಣಮಗ ಭೀಮಪ್ಪ ಕಳೆದ ಸುಮಾರು 2 ವರ್ಷಗಳಿಂದ ನನ್ನಗಂಡ ಜೀವಂತ ಇದ್ದಾಗ ಆತನ ಸಂಗಡ ಆತ ತೀರಿಕೊಂಡ ನಂತರ ನನ್ನೊಟ್ಟಿಗೆ ಒಂದಿಲ್ಲ ಒಂದು ನೆಪಮಾಡಿ ಕಿರಿಕಿರಿ ಮಾಡುತ್ತ ಬಂದಿರುತ್ತಾನೆ. ಹೀಗಿದ್ದು ದಿನಾಂಕ 11.06.2022 ರಂದು ನನ್ನ ಹೆಸರಿನಲ್ಲಿದ್ದ ಜಮೀನಿಗೆ ಹೋಗಿ ಗಳೆ ಹೊಡೆದು ಬಂದಿದ್ದ. ಇದ್ದೆಲ್ಲ ಜಮೀನು ನೀನೆ ಸಾಗುವಳಿ ಮಾಡಿದರೆ ನಾನೆಂಗ ಬದುಕಬೇಕು ಅಂತಾ ಆದಿನ ರಾತ್ರಿ 10.30 ಗಂಟೆ ಸುಮಾರಿಗೆ ನನ್ನಮಗನಿಗೆ ಕೇಳಿದ್ದೆ. ಅದಕ್ಕೆ ನನ್ನಮಗ ಭೀಮಪ್ಪ ಮತ್ತು ನನ್ನಸೊಸೆ ಅನಂತಮ್ಮ ಇಬ್ಬರೂ ಕೂಡಿ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನನಗೆ ರಂಡಿ, ಬೋಸಡಿ ಅಂತಾ ಅಸಭ್ಯ ಶಬ್ದಗಳಿಂದ ಬೈದು ತಮ್ಮ ಮನಸ್ಸಿಗೆ ಬಂದಂಗ ನನಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ನನ್ನನ್ನು ಹೊಡೆಯುವದನ್ನು ನೋಡಿದ್ದ ನಮ್ಮ ಮನೆಯ ಅಕ್ಕಪಕ್ಕದವರಾದ 1. ಭೀಮಾಶಂಕರ ತಂದೆ ಅಂಜಿಲಪ್ಪ ಉಪ್ಪಾರ, 2. ಬಸಪ್ಪ ತಂದೆ ಹಣಮಂತ ಕಾವಲಿ, 3. ಭೀಮಪ್ಪ ತಂದೆ ತಾಯಪ್ಪ ಹುಲಿಬೆಟ್ಟ, 4. ಚಾಂದಪಾಶ ತಂದೆ ಜೆಮಶರಅಲಿ ಇವರು ಬಂದು ನನ್ನನ್ನು ಬಿಡಿಸಿಕೊಂಡರು. ಅಷ್ಟಾದರೂ ಸಹ ನನ್ನಮಗ ಮತ್ತು ಸೊಸೆ ನಿನಗೆ ಖಲಾಸ್ ಮಾಡ್ತಿವಿ ಬಿಡುವದಿಲ್ಲ ಅಂತಾ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ. ನನ್ನ ಪಾಲಿಗೆ ಇದ್ದ ಜಮೀನಿನಲ್ಲಿ ನನ್ನಗಂಡ ಜೀವಂತ ಇರುವಾಗಲೇ 1 ಎಕರೆ ಜಮೀನು ನಮ್ಮ ಜಮೀನು ಪಕ್ಕದ ನಮ್ಮ ಸಂಬಂಧಿ ಮಲ್ಲಮ್ಮ ಗಂಡ ಮಾರೆಪ್ಪ ದನಕಾಯಿ ಇವರಿಗೆ ಕಳೆದ ಒಂದುವರೆ ವರ್ಷದ ಹಿಂದೆ ಮಾರಾಟ ಮಾಡಿದ್ದೇವೆ. ಇನ್ನೂ ಅವರ ಹೆಸರಿಗೆ ರಜಿಷ್ಟರ್ ಮಾಡಿಕೊಟ್ಟಿಲ್ಲ. ಮಾರಾಟ ಮಾಡಿದ ಜಮೀನಿನಲ್ಲಿ ಸಹ ನನ್ನಮಗ ಭೀಮಪ್ಪ ಗಳೆ ಹೊಡೆದಿದ್ದಾನೆ. ಜಮೀನಿನಲ್ಲಿ ತನಗೆ ಭಾಗಬೇಕಂತ ನನ್ನಮಗ ಯಾದಗಿರಿ ಸಿವ್ಹಿಲ್ ನ್ಯಾಯಾಲದಲ್ಲಿ ಕೇಸ್ ಹಾಕಿದ್ದರಿಂದ ನ್ಯಾಯಾಲಯ ತೀಪರ್ು ಬಂದ ನಂತರ ಜಮೀನು ಮಾಡಿಕೊಡುತ್ತೇನೆ ಅಂತಾ ಅಂದರೂ ಸಹ ಕೇಳದೆ ನನ್ನಮಗ ಮತ್ತು ಸೊಸೆ ನನಗೆ ಹೊಡೆದಿದ್ದಾರೆ. ಕಾರಣ ನನ್ನ ಮಾನಭಂಗ ಮಾಡುವ ಉದ್ದೇಶದಿಂದ ನನ್ನಮೇಲೆ ಹಲ್ಲೇಮಾಡಿದ್ದ ನನ್ನಮಗ ಭೀಮಪ್ಪ ತಂದೆ ತಾಯಪ್ಪ ದನಕಾಯಿ, ವ|| 40 ವರ್ಷ, ಜಾ|| ಕಬ್ಬಲಿಗ, ಉ|| ಗೌಂಡಿಕೆಲಸ, ನನ್ನಸೊಸೆ ಅನಂತಮ್ಮ ಗಂಡ ಭೀಮಪ್ಪ ದನಕಾಯಿ, ವ|| 35 ವರ್ಷ, ಜಾ|| ಕಬ್ಬಲಿಗ, ಉ|| ಹೊಲಮನೆಕೆಲಸ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ. 498(ಎ),324,504,506 ಸಂ 149 ಐ.ಪಿ.ಸಿ: ಇಂದು ದಿನಾಂಕ 13/06/2022 ರಂದು 01.00 ಪಿಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ನಾಗಪ್ಪ ಪಿಸಿ 167 ರವರು ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂ:47/2022 ನೇದ್ದನ್ನು ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ದೇವಮ್ಮ ಇವರಿಗೆ ಮುಷ್ಠಳ್ಳಿ ಗ್ರಾಮದ ಪರ್ವತರೆಡ್ಡಿ ತಂದೆ ವೆಂಕಟರೆಡ್ಡಿ ಈತನೊಂದಿಗೆ ದಿನಾಂಕ 16/04/2014 ರಂದು ಕೂಡಲ ಸಂಗಮದಲ್ಲಿ ಗುರುಹಿರಿಯರ ಸಮಕ್ಷಮ ಸಂಪ್ರದಾಯತಂದೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ ಮೋಹನ ಎಂಬ ಮಗು ಹುಟ್ಟಿದ್ದು, ಕೆಲವು ದಿವಸಗಳ ನಂತರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿರೂ ಸಹ ಗಂಡ ಹಾಗು ಗಂಡನ ಮನೆಯವರು ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಲಿಲ್ಲ ಅಲ್ಲದೆ ಮಗುವಿನ ಅಂತ್ಯಕ್ರಿಯೆಗೂ ಬಂದಿರಲಿಲ್ಲ. ಕಳೆದ 2 ವರ್ಷಗಳಿಂದ ಆರೋಪಿ ನಂ 1 ಈತನು ಜೂಜು, ಮದ್ಯಸೇವನೆ ಹಾಗು ಅನೈತಿಕ ಚಟುವಟಿಕೆಗಳಿಗೆ ಅಂಟಿಕೊಂಡು ದಿನಾಲು ಫಿಯರ್ಾದಿಗೆ ಹೊಡೆ ಬಡೆ ಮಾಡಿ ಊಟ ನೀಡದೇ ಉಪವಾಸ ಹಾಕುತ್ತಿದ್ದರು. ದಿನಾಂಕ 15/02/2022 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಆರೋಪಿ ನಂ 01 ರಿಂದ 08 ನೇದ್ದವರು ಸಿಂಗನಳ್ಳಿ ಗ್ರಾಮದಲ್ಲಿನ ಫಿಯರ್ಾದಿ ಮನೆಗೆ ಬಂದು ಅವಾಚ್ಯವಾಗಿ ರಂಡಿ ಭೋಸಡಿ ಅಂತ ಬೈದು ಒಂದು ವೇಳೆ 1,50000/- ರೂ ಹಣ ಹಾಗು 5 ತೊಲಿ ಬಂಗಾರ ತರದೇ ಇದ್ದರೆ ನಾವು 2ನೇ ಮದುವೆ ಮಾಡುತ್ತೇವೆ. ನೀನು ಕೋಟರ್ಿನಲ್ಲಿ ಹಾಕಿದ ಕೇಸ ವಾಪಸ್ ತೆಗೆದುಕೋ ಇಲ್ಲದಿದ್ದರೆ ನೋಡು ಅಂತ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ದೂರು.

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ. 420,324,504,506 ಸಂ 34 ಐ.ಪಿ.ಸಿ: ಇಂದು ದಿನಾಂಕ 13/06/2022 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ನಾಗಪ್ಪ ಪಿಸಿ 167 ರವರು ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂ:54/2022 ನೇದ್ದನ್ನು ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಆರೋಪಿತರು ಫಿಯರ್ಾದಿಗೆ ದೂರದ ಸಂಬಂಧಿಕರಾಗಿದ್ದು ಫಿಯರ್ಾದಿ ಬಳಿ ಜೆಸಿಬಿ ಮಶೀನ್ ಇರುವುದು ಅವರಿಗೆ ಗೊತ್ತಿದ್ದು ಅವರು ತಮ್ಮ ಸಿವಿಲ್ ಕಾಮಗಾರಿಗೆ ಜೆಸಿಬಿ ಮಶೀನ್ ಬಾಡಿಗೆಗೆ ಪಡೆದುಕೊಂಡಿದ್ದು ಬಾಯಿಮಾತಿನ ಒಪ್ಪಂದದಂತೆ ಜಿಸಿಬಿ ಬಾಡಿಗೆ ನೀಡುತ್ತ ಬಂದಿದ್ದಾರೆ. ನಂತರ ಕೆಲವು ದಿನಗಳ ಬಳಿಕ ಬಾಡಿಗೆ ಮೊತ್ತ 27 ಲಕ್ಷ 38 ಸಾವಿರ ನೀಡುವಂತೆ ಮನವಿ ಮಾಡಿದಾಗ ಸ್ವಲ್ಪ ದಿನಗಳ ಬಳಿಕ 5 ಲಕ್ಷವನ್ನು ಇಬ್ಬರು ಆರೋಪಿಗಳು ನೀಡಿದ್ದು ಬಾಕಿ ಕೆಲವು ದಿನಗಳ ನಂತರ ಕೊಡುತ್ತೇವೆ ಅಂತ ಹೇಳಿ ಬಾಡಿಗೆ ಹಣ ನೀಡದೆ ವಂಚಿಸಿದ್ದಾರೆ. ದಿನಾಂಕ 23/02/2022 ರಂದು ಬೆಳಿಗ್ಗೆ 8 ಗಂಟೆಗೆ ಫಿಯರ್ಾದಿಯು ಗೋಗಿ ಬಸ್ ನಿಲ್ದಾಣ ಬಳಿ ನಿಂತಾಗ ಅಲ್ಲಿಗೆ ಬಂದು ಲೇ ಭೋಸಡಿ ಮಗನೆ ಶಿವ್ಯಾ ಯಾಕೆ ಧಿಮಾಕು ಮಾಡುತ್ತಿದ್ದೀ, ಜೆಸಿಬಿ ಮಶೀನ್ ಬಾಡಿಗೆ ಹಣವನ್ನು ಕೊಡುವುದಿಲ್ಲ ಏನು ಸೆಂಟಾ ಹರಿದುಕೊಳ್ಳುತ್ತಿಯಾ ನಾವು ಮೋಸ ಮಾಡುವುದೇ ನಮ್ಮ ಉದ್ದೇಶ. ಈಗ ಏನು ಮಾಡಿಕೊಳ್ಳುತ್ತಿ ಮಗನೇ ಎಂದು ಹೊಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ದೂರು.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 42/2022, 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 13/06/2022 ರಂದು 6.55 ಪಿಎಮ್ ಕ್ಕೆ ಆರೋಪಿತನು ಚಾಮನಾಳ ಗ್ರಾಮ ಪಂಚಾಯತಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಂದ ಹಣ ಪಡೆದು ಬಾಂಬೆ, ಕಲ್ಯಾಣ ಮಟಕಾ ಚೀಟಿ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತ ಕೂಗಿ ಮಟಕಾ ಬರೆದುಕೊಳ್ಳುತ್ತಿರುವಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 7 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲಗಿ ಅವನು ತನ್ನ ಹೆಸರು ರಮೇಶ ತಂದೆ ರಆಮಚಂದ್ರ ಚವ್ಹಾಣ ಸಾ:ನಡಿಹಾಳ ತಾಂಡಾ ಅಂತ ತಿಳಿಸಿ ತಾನು ಬರೆದುಕೊಂಡ ಮಟಕಾ ನಂಬರ ಹಾಗು ಹಣವನ್ನು ವಾಚು ಸಾ:ಚಾಮನಾಳ ತಾಂಡಾ ಈತನಿಗೆ ಕೊಡುವುದಾಗಿ ತಿಳಿಸಿದನು. ಆಗ ಸದರಿಯವನ ಅಂಗ ಪರಿಶೀಲನೆಮಾಡಿ ಆತನಿಂದ ನಗದು ಹಣ 1255/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು 8.30 ಪಿಎಮ್ ಕ್ಕೆ ಠಾಣೆಗೆ ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ: 174 ಸಿ.ಆರ್.ಪಿ.ಸಿ: ಇಂದು ದಿನಾಂಕ: 13/06/2022 ರಂದು 9 ಎ.ಎಂ.ಕ್ಕೆ ಶ್ರೀ ವಿನೋದಕುಮಾರ ತಂದೆ ಎನ್. ಶ್ರೀನಿವಾಸ ನಕ್ಕಂಟಿ ವಯಾ:25 ವರ್ಷ ಜಾ:ಕಮ್ಮಾ ಉ:ಒಕ್ಕಲುತನ ಸಾ:ಬಿಜಾಸಪೂರ ತಾ:ಸುರಪೂರ ಇವರು ಠಾಣೆಗೆ ಬಂದು ಪಿಯರ್ಾದಿ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾವು ನಾಲ್ಕು ಜನ ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಗಂಡು ಮಕ್ಕಳಲ್ಲಿ ದೊಡ್ಡವನಾದ ನನ್ನ ಅಣ್ಣ ಕಲ್ಯಾಣ ಕುಮಾರ ಈತನು ಒಂದು ತಿಂಗಳ ಹಿಂದೆ ಮೃತಪಟ್ಟಿರುತ್ತಾನೆ. ನನ್ನ ಅಣ್ಣ ಮೃತಪಟ್ಟಾಗಿನಿಂದ ನಮ್ಮ ತಂದೆಯು ದಿನಾಲೂ ಚಿಂತೆ ಮಾಡುತ್ತಾ ನನ್ನ ದೊಡ್ಡ ಮಗ ಸತ್ತ ಮೇಲೆ ನಾನು ಏಕೇ ಬದುಕಬೇಕು? ನಾನು ಸಾಯುತ್ತೇನೆ ಸತ್ತು ನನ್ನ ಮಗನ ಹತ್ತಿರ ಹೋಗುತ್ತೇನೆ ಅಂತಾ ದಿನಾಲು ನಮಗೆ ಹೇಳುತ್ತಿದ್ದರು. ಆಗ ನಾನು ಮತ್ತು ನಮ್ಮ ತಾಯಿ ಎನ್. ಸತ್ಯವೇಣಿ ಇಬ್ಬರು ನಮ್ಮ ತಂದೆಗೆ ಧೈರ್ಯ ಹೇಳಿತ್ತೇದ್ದೆವು.ಹೀಗಿದ್ದು ದಿನಾಂಕ:10/06/2022 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು, ನನ್ನ ತಾಯಿ ಸತ್ಯವೇಣಿ ಇಬ್ಬರು ಮನೆಯಲ್ಲಿದ್ದ ನಮ್ಮ ತಂದೆಗೆ ಊಟ ಮಾಡಲು ಕರೆದಾಗ, ನನಗೆ ಹೊಟ್ಟೆಯಲ್ಲಿ ಉರಿ ಆಗುತ್ತಿದೆ ಅಂತಾ ಹೇಳಿದಾಗ ನಾವು ಅವನ ಹತ್ತಿರ ಹೋಗಿ ವಿಚಾರಿಸಿದಾಗ, ನಮ್ಮ ತಂದೆಯು ನಾನು ನನ್ನ ಹಿರಿಯ ಮಗ ಕಲ್ಯಾಣ ಕುಮಾರ ಈತನ ಸಾವಿನ ಚಿಂತೆಯಲ್ಲಿ ನಾನು ಮನೆಯಲ್ಲಿದ್ದ ತೊಗರಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧಿ ಸೇವನೆ ಮಾಡಿರುತ್ತೇನೆ ಅಂತಾ ಹೇಳಿದಾಗ ನಾವು ಗಾಭರಿಯಾಗಿ ನಮ್ಮ ತಂದೆಯವರನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಪ್ರಥಮ ಉಪಚಾರ ಮಾಡಿಸಿದೆವು. ನಂತರ ವೈಧ್ಯಾಧಿಕಾರಿಗಳ ಸಲಹೆ ಮೇರಗೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಉಪಚಾರ ಫಲಿಸದೇ ಇಂದು ದಿನಾಂಕ:13/06/2022 ರಂದು ಮದ್ಯರಾತ್ರಿ 1:30 ಎ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಸದರಿ ನನ್ನ ತಂದೆಯಾದ ಎನ್. ಶ್ರೀನಿವಾಸ ಈತನು ನನ್ನ ಅಣ್ಣನ ಸಾವಿನ ಚಿಂತೆಯಲ್ಲಿ ಮಾನಸಿಕವಾಗಿ ಕುಗ್ಗಿ ತೊಗರಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಸದರಿ ಮೃತ ಪಟ್ಟ ನನ್ನ ತಂದೆ ಎನ್. ಶ್ರೀನಿವಾಸ ಈತನ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಹಾಗೂ ಯಾರ ಮೇಲು ಪಿಯರ್ಾದಿ ವಗೈರೆ ಇರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಲು ಅಂತಾ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂಬರ 18/2022 ಕಲಂ. 174 ಸಿಆರ್ಪಿಸಿ ನೇದ್ದರಡಿಯಲ್ಲಿ ದಾಖಲು ಮಾಡಿಕೊಂಡಿದ್ದು ಇರುತ್ತದೆ.ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ 105/2022 ಕಲಂ: 341, 323, 355, 504, 506 ಸಂ 34 ಐಪಿಸಿ: ಇಂದು ದಿನಾಂಕ 13.06.2022 ರಂದು 7.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಸರಸ್ವತಿ ಗಂಡ ಗೋವಿಂದರಾಜ ಹವಲ್ದಾರ ವ|| 45ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿಕೆಲಸ ಸಾ|| ಮಾಲಗತ್ತಿ ತಾ|| ಸುರಪೂರ ಇದ್ದು ತಮ್ಮಲ್ಲಿ ಈ ಅಜರ್ಿ ನೀಡುವುದೇನೆಂದರೆ, ನಮ್ಮ ಜನಾಂಗದ ಭೀಮಣ್ಣ ತಂದೆ ಯಂಕಪ್ಪ ದೇವಕುಂಟಿ ಹಾಗು ನಮ್ಮ ಮದ್ಯ ಆಸ್ತಿ ವಿಷಯದಲ್ಲಿ ವೈಷಮ್ಯವಿದ್ದು ಅದೇ ವಿಷಯದಲ್ಲಿ ಸದರಿಯವನು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದನು.ಹೀಗಿದ್ದು ಇಂದು ದಿನಾಂಕ 12.06.2022 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಾನು ನಮ್ಮೂರ ನಮ್ಮ ಜನಾಂಗದ ಭೀಮಣ್ಣ ದೇವಕುಂಟಿ ಇವರ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಆಸ್ತಿಯ ವಿಷಯದಲ್ಲಿ ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದ ನಮ್ಮ ಜನಾಂಗದ 1] ರೇಣುಕಾ ತಂದೆ ಭೀಮಣ್ಣ ದೊರಿ 2] ಶ್ರೀದೇವಿ ತಂದೆ ಭೀಮಣ್ಣ ದೊರಿ 3] ದೇವಕ್ಕೆಮ್ಮ ಗಂಡ ನಿಂಗಣ್ಣ ದೊರಿ 4] ಭೀಮಣ್ಣ ತಂದೆ ಯಂಕಪ್ಪ ದೊರಿ ಈ ಎಲ್ಲಾ ಜನರು ಕೂಡಿಕೊಂಡು ನನಗೆ ತಡೆದು ನಿಲ್ಲಿಸಿ ಏನಲೇ ಸೂಳೀ ಸರಸಿ ಊರಲ್ಲಿ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏಕೇ ಏನಾಯಿತು ಯಾಕೇ ಸುಮ್ಮನೇ ಬೈಯುತ್ತೀರಿ ಅಂತ ಕೇಳಿದಾಗ 1] ರೇಣುಕಾ ತಂದೆ ಭೀಮಣ್ಣ ದೊರಿ 2] ಶ್ರೀದೇವಿ ತಂದೆ ಭೀಮಣ್ಣ ದೊರಿ 3] ದೇವಕ್ಕೆಮ್ಮ ಗಂಡ ನಿಂಗಣ್ಣ ದೊರಿ ಈ ಮೂರು ಜನರು ಬಿಡಬ್ಯಾಡಿರೀ ಈ ಸೂಳೆಗೆ ಅಂತ ಬೈಯುತ್ತಾ ಕೈಯಿಂದ ಹೊಡೆಯುತ್ತಾ ಮೂರು ಜನರು ನನ್ನ ಸೀರೆ ಹಾಗು ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಮನಸ್ಸಿಗೆ ಬಂದ ಹಾಗೆ ಹೊಡೆದಿರುತ್ತಾರೆ. ಅಲ್ಲಿಯೇ ನಿಂತಿದ್ದ ಭೀಮಣ್ಣ ಈತನು ಬಿಡಬ್ಯಾಡಿರಿ ಈ ಸೂಳೆಗೆ ಹೊಡೆದು ಖಲಾಸ ಮಾಡಿರಿ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ರೇಣುಕಾ ಇವಳು ತನ್ನ ಎಡಗಾಲಲ್ಲಿನ ಚೆಪ್ಪಲಿಯಿಂದ ನನ್ನ ಬೆನ್ನಿಗೆ ಹೊಡೆದಳು ನಂತರ ಮೂರು ಜನ ಹೆಣ್ಣು ಮಕ್ಕಳು ಸೇರಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿರುತ್ತಾರೆ. ನಂತರ ಎಲ್ಲರೂ ಕೂಡಿ ಸೂಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯ ಹೊರಟಿದ್ದ ಕೃಷ್ಣಪ್ಪ ತಂದೆ ಬಸವರಾಜ ಹವಲ್ದಾರ ಹಾಗು ಬಸವರಾಜ ತಂದೆ ಸಿದ್ದಪ್ಪ ನಂದಿ ಇವರು ಬಂದು ಅವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು ನಂತರ ನಾನು ಮನೆಗೆ ಹೋಗಿ ಸದರಿ ವಿಷಯವನ್ನು ಮನೆಯಲ್ಲಿ ನನ್ನ ಮಗನಾದ ಹಣಮಂತ್ರಾಯ ತಂದೆ ಗೋವಿಂದರಾಜ ಹವಲ್ದಾರ ಇವರ ಮುಂದೆ ತಿಳಿಸಿ ತಡವಾಗಿ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 04 ಜನರು ಆಸ್ತಿ ವಿಷಯದಲ್ಲಿ ನಮ್ಮೊಂದಿಗೆ ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕೈಯಿಂದ ಹಾಗು ಚೆಪ್ಪಲಿಯಿಂದ ಹೊಡೆಬಡೆ ಮಾಡಿ, ಜೀವದ ಭಯ ಹಾಕಿದ್ದು ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 105/2022 ಕಲಂ 341,323,355,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 90/2022 ಕಲಂ 78 (3) ಕೆ.ಪಿ ಕಾಯ್ದೆ: :- ದಿನಾಂಕ: 13-06-2022 ರಂದು ಸಾಯಂಕಾಲ 06-00 ಗಂಟೆಗೆ ಶ್ರೀ ಸಿದ್ದರಾಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ರಾಮಸಮುದ್ರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 700=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.90/2022 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 14-06-2022 12:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080