ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14-07-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 73/2021 ಕಲಂ. 420 ಐಪಿಸಿ : ಇಂದು ದಿನಾಂಕ; 13/07/2021 ರಂದು 1-30 ಪಿಎಮ್ ಕ್ಕೆ ಶ್ರೀ ವಿಶ್ವರಾಧ್ಯ ತಂದೆ ಭೀಮಣ್ಣ ಇದ್ದಲಿ ವ; 19 ಜಾ; ಕಬ್ಬಲಿಗ ಉ; ವಿಧ್ಯಾಥರ್ಿ ಸಾ; ಯರಗೋಳ ತಾ; ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ಹಿಗೀದ್ದು ಯಾದಗಿರಿಯ ಲಕ್ಷ್ಮೀನಗರದ ಕಾಡ್ಲೂರು ಪೆಟ್ರೋಲ ಬಂಕ ಹಿಂದುಗಡೆ ಇರುವ ಕೆ.ಎಸ್.ಎಸ್ ಎಂಟರ ಪ್ರೈಸಸ್ ಅಂತಾ ಲಕ್ಕಿ ಡ್ರಾ ಸ್ಕೀಮ್ ಇದ್ದು ನಾನು ಅದರಲ್ಲಿ ಸದಸ್ಯತ್ವ ಹೊಂದಿರುತ್ತೇನೆ ನನ್ನ ಸದಸ್ಯತ್ವ ಕಾರ್ಡ ನಂ.000258 ನೇದ್ದು ಇರುತ್ತದೆ. ಮಹೇಶ ಪಾಟೀಲ ಎಂಬುವವರು ಈ ಎಂಟರ ಪ್ರೈಸಸ ಮಾಲೀಕರಾಗಿರುತ್ತಾರೆ. ಈ ಸ್ಕೀಮ್ದಲ್ಲಿ ಒಟ್ಟು 1999 ಸದಸ್ಯರು ಇದ್ದು ಸದಸ್ಯತ್ವ ಪಡೆದುಕೊಳ್ಳಲು ಪ್ರತಿಯೊಬ್ಬರಿಗೆ 100/- ರೂ. ಶುಲ್ಕ ಪಾವತಿ ಇರುತ್ತದೆ. ಈ ಸ್ಕೀಮ್ ಪ್ರಕಾರ ಪ್ರತಿ ತಿಂಗಳಿನಲ್ಲಿ 2 ಸಲಾ ಲಕ್ಕಿ ಡ್ರಾ ಮಾಡುತ್ತಿದ್ದು ಒಂದು ಕಂತಿಗೆ 399/- ರೂ. ದಂತೆ ಒಟ್ಟು 8 ಕಂತುಗಳ ಅವಧಿ ಈ ಸ್ಕೀಮದಲ್ಲಿರುತ್ತದೆ. ಸ್ಕೀಮ್ ಡ್ರಾದಲ್ಲಿ ಕಾರು ಮತ್ತು ಮೋಟಾರ ಸೈಕಲ್, ಸೈಕಲ್ ಹಾಗೂ ಗೃಹ ಬಳಕೆ ಸಾಮಾನುಗಳು, ಒಡವೆಗಳು ಹಾಗೂ ಇತ್ಯಾದಿ ಸಾಮಾನುಗಳು ಇದ್ದು ಜನೇವರಿ-2021 ರಲ್ಲಿ ಸ್ಕೀಮ್ ಫ್ರಾರಂಭವಾಗಿದ್ದು ಇರುತ್ತದೆ. ಪ್ರತಿ 15 ದಿವಸಗಳಿಗೊಮ್ಮೆ ಸ್ಕೀಮ್ ಕಂತಿನ ಹಣ ತೆಗೆದುಕೊಂಡು ಹೋಗಲು ಸ್ಕೀಮ್ ಎಂಜೆಂಟರವರು ನಮ್ಮ ಊರಿಗೆ ಬಂದು ಕಂತಿನ ಹಣ ತೆಗೆದುಕೊಂಡು ಹೋಗುತ್ತಿದ್ದರು. ಮೊದಲನೇ ಕಂತಿನ ಹಣ 399/-ರೂ. ದಿನಾಂಕ; 18/01/2021 ರಂದು ಎಜೆಂಟ ಆದ ಶ್ರೀಕಾಂತ ಈತನಿಗೆ ನೀಡಿದ್ದು ಅದರಂತೆ ದಿನಾಂಕ; 06/02/2021 ರಂದು, ದಿನಾಂಕ; 18/02/2021 ರಂದು, ದಿನಾಂಕ; 08/03/2021 ರಂದು ದಿನಾಂಕ; 20/03/2021 ರಂದು ದಿನಾಂಕ; 05/04/2021 ರಂದು ದಿನಾಂಕ; 18/04/2021 ರಂದು ಹಿಗೇ ಒಟ್ಟು 7 ಕಂತುಗಳ ಹಣ 2793/- ರೂ. ಹಣವನ್ನು ಬೇರೆ ಬೇರೆ ಏಜೆಂಟರವರು ನಮ್ಮ ಊರಿಗೆ ಬಂದು ಕಂತಿನ ಹಣ ತೆಗೆದುಕೊಂಡು ಹೋಗಿರುತ್ತಾರೆ. ಯಾದಗಿರಿ ನ್ಯೂ ಮೊಘಲ ಗಾರ್ಡನ ಪಂಕ್ಷನ ಹಾಲ್ ಹತ್ತಿಕುಣಿ ರೋಡ ಯಾದಗಿರಿದಲ್ಲಿ ಪ್ರತಿ ತಿಂಗಳು ಎರಡು ಬಾರಿ ಲಕ್ಕಿ ಡ್ರಾ ಮಾಡಿ ಲಕ್ಕಿ ಸದಸ್ಯರಿಗೆ ಸಾಮಾನುಗಳನ್ನು ನೀಡಿರುತ್ತಾರೆ. ನಂತರ ಕೊನೆಯ ಎಂಟನೇ ಕಂತಿನ ಹಣ ಏಪ್ರೀಲ್-2021 ತಿಂಗಳಿನಲ್ಲಿ ಹಣ 399/- ರೂ. ತುಂಬಿಕೊಳ್ಳಲು ಯಾರು ಬರದ ಕಾರಣ ನಮಗೆ ಸಂಶಯ ಬಂದು ಯಾದಗಿರಿಯ ನ್ಯೂ ಮೊಘಲ ಗಾರ್ಡನ ಪಂಕ್ಷನ ಹಾಲ್ಗೆ ಬಂದು ವಿಚಾರಿಸಲಾಗಿ ಅವರ್ಯಾರು ಬಂದಿರುವುದಿಲ್ಲ ಅಂತಾ ತಿಳಿಸಿದರು. ನಂತರ ಕೆ.ಎಸ್.ಎಸ್ ಎಂಟರ ಪ್ರೈಸಸ್ ಆಫೀಸಿಗೆ ಹೋದರಾಯಿತು ಅಂತಾ ಆಫೀಸ ವಿಳಾಸಕ್ಕೆ ಹೋಗಿ ನೋಡಲಾಗಿ ಆ ವಿಳಾಸದಲ್ಲಿ ಕೆ.ಎಸ್.ಎಸ್ ಎಂಟರ ಪ್ರೈಸಸ್ ಇರಲಿಲ್ಲ. ನಾನು ನಂತರ ಅವರ ಮೊಬೈಲ ನಂಬರಗಳಿಗೆ ಫೋನ ಮಾಡಿದಾಗ ಸ್ವೀಚ್ ಆಫ್ ಇತ್ತು. ನಾನು ಅವರಿಗೆ ಸಂಪಕರ್ಿಸಲು ಎಷ್ಟು ಪ್ರಯತ್ನ ಮಾಡಿದರು ಕೂಡಾ ಅವರ ವಿಳಾಸ ಸಿಕ್ಕಿರುವುದಿಲ್ಲ ಮತ್ತು ಅವರಿಗೆ ಸಂಭಂದಪಟ್ಟಂತೆ ಯಾವುದೇ ಗುರುತಿನ ಚೀಟಿಗಳು ನಮ್ಮ ಹತ್ತಿರ ಇರುವುದಿಲ್ಲ. ನನ್ನಂತೆಯೇ ಮಲ್ಲಿಕಾಜರ್ುನ ತಂದೆ ಭೀಮರಾಯ ಅಯ್ಯಳ್ಳೇರ ಸಾ; ಬಂದಳ್ಳಿ ಈತನು ಕೂಡಾ ಎರಡು ಸದಸ್ಯತ್ವ ಹೊಂದಿದ್ದು 14 ಕಂತುಗಳ ಹಣ ತುಂಬಿರುತ್ತಾನೆ. ಹಾಗೂ ಶಿವರಾಜ ಮರಮಕಲ್, ಖಾಸೀಂಸಾಬ ಗೊಂದಡಗಿ, ಗೌತಮ ಕನಗನಹಳ್ಳಿ, ಕೌರೇಶ ಬದ್ದೆಪಲ್ಲಿ, ದೇವಪ್ಪ ಬೆಳಗೇರ ಹಾಗೂ ಈತರ ಅನೇಕ ಜನರು ಕೂಡಾ ಈ ಸ್ಕೀಮ್ದಲ್ಲಿ ಇದ್ದು ಅವರು ಕೂಡಾ ಹಣವನ್ನು ತುಂಬಿದ್ದು ಇರುತ್ತದೆ. 7 ಕಂತುಗಳ ಹಣವನ್ನು ನಮ್ಮಿಂದ ತುಂಬಿಸಿಕೊಂಡು ನಮಗೆ ಲಕ್ಕಿ ಡ್ರಾದಲ್ಲಿ ವಿಜೇತರಾದಲ್ಲಿ ನಮಗೆ ಸಾಮಾನುಗಳನ್ನು ಕೊಡುವುದಾಗಿ ನಂಬಿಸಿ ಕೊನೆಯ 8 ನೇ ಕಂತು ತುಂಬಿಸಿಕೊಳ್ಳದೇ ಲಕ್ಕಿ ಡ್ರಾ ಕೂಡಾ ಮಾಡದೇ ಎಲ್ಲಾ ಸದಸ್ಯರಿಗೆ ಮೋಸ ವಂಚನೆ ಮಾಡಿ ತಲೆಮರೆಸಿಕೊಂಡು ಹೋಗಿದ್ದು ಇರುತ್ತದೆ. ಈ ಸ್ಕೀಮದಲ್ಲಿ ಮಾಲೀಕ ಮಹೇಶ ಪಾಟೀಲ, ಏಜೆಂಟರಾದ ಶ್ರೀಕಾಂತ, ಅಭೀ, ಅಭೀಲಾಷ, ಅಕ್ಷಯ, ಸಾಗರ, ಮಲ್ಲಿಕಾಜರ್ುನ, ಅಂಬಿಕಾ ರವರುಗಳು ಸೇರಿಕೊಂಡು ನಮ್ಮಿಂದ ಹಣ ಪಡೆದುಕೊಂಡು ಈ ಮೇಲಿನಂತೆ ನಮಗೆ ಮೋಸ ಮಾಡಿರುತ್ತಾರೆ. ಸದರಿಯವರ ವಿಳಾಸ ನಮಗೆ ಗೊತ್ತಾಗಿರುವುದಿಲ್ಲ ಗೊತ್ತಾದ್ದಲ್ಲಿ ತಿಳಿಸುತ್ತೇನೆ. ಸದರಿಯವರಿಗೆ ಇಲ್ಲಿಯವರೆಗೆ ಹುಡುಕಾಡಿದರು ಕೂಡಾ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.73/2021 ಕಲಂ. 420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 106/2021 ಕಲಂ 87 ಕೆಪಿ ಎಕ್ಟ್ : ದಿನಾಂಕ 13.07.2021 ರಂದು 4.30 ಪಿಎಮ್ ಕ್ಕೆ ಮೊಟ್ನಳ್ಳಿ ಗ್ರಾಮದ ಮಾಸೆಮ್ಮ ದಗರ್ಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಇಸ್ಪೀಟ್ ಎಲೆಗಳ ಸಹಾದಿಂದ ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿರವ ಬಗ್ಗೆ ಮಾಹಿತಿ ಬಂದ ಮೆರೆಗೆ ಪಿಎಸ್ಐ ಸಾಹೇಬರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡದು ಇಸ್ಪೀಟ್ ಜೂಜಾಟ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ರಾತ್ರಿ 8.25 ಕ್ಕೆ ದಾಳಿಮಾಡಿ 6 ಜನ ಇಸ್ಪೀಟ್ ಜೂಜುಕೋರರು ಮತ್ತು ಅವರಿಂದ ಜಪ್ತಿ ಪಡಿಸಿಕೊಂಡ 52 ಇಸ್ಪೀಟ್ ಎಲೆಗಳು ಹಾಗೂ ನಗದು ಹಣ 3150/-ರೂ ರೂ ಗಳನ್ನು ಬಂದು ಪಿಎಸ್ಐ ಸಾಹೇಬರು ನೀಡಿದ ವರದಿ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 106/2021 ಕಲಂ 87 ಕೆಪಿ ಎಕಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಭೀಗುಡಿ ಪೊಲೀಸ್ ಠಾಣೆ

ಗುನ್ನೆ ನಂ: 50/2021 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 13/07/2021 ರಂದು 05:00 ಪಿ.ಎಮ್.ಕ್ಕೆ ಹೊತಪೇಟ ನಡುವಿನ ತಾಂಡಾದಲ್ಲಿ ಬದ್ದುಧರಕಟ್ಟೆಯ ಹತ್ತಿರ ಸಾರ್ವಜನಿಕಖುಲ್ಲಾಜಾಗದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಸಿಪಿಐ ಸಾಹೇಬರ ನೇತೃತ್ವದಲ್ಲಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 8.15 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 04 ಜನಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 1850/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 95/2021 ಕಲಂ: 279,3337,338 ಐ.ಪಿ.ಸಿ: ದಿನಾಂಕ 12.07.2021 ರಂದು ಕುಂಬಾರ ಆಥರ್ೋಪೆಡಿಕ್ ಆಸ್ಪತ್ರೆ ಮಿರಜದಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮಂಜುನಾಥ ತಂದೆ ಚೆನ್ನಮಲ್ಲಯ್ಯ ಹಿರೇಮಠ ವ|| 42 ಜಾ|| ಜಂಗಮ ಉ|| ಅರೆ ಸರಕಾರಿ ನೌಕರ[ನೇತ್ರ ಸಹಾಯಕರು ಆರೋಗ್ಯ ಕೇಂದ್ರ ರೋಣ] ಸಾ|| ರೋಣ ತಾ|| ಗದಗ ಇವರ ಹೇಳಿಕೆಯನ್ನು ಪಡೆದುಕೊಂಡು ಇಂದು ದಿನಾಂಕ 13.07.2021 ರಂದು 6.30 ಪಿಎಮ್ಕ್ಕೆ ಮರಳಿ ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನಂದರೆ ಬಾಗೇವಾಡಿಯಲ್ಲಿ ನಮ್ಮ ಸಂಬಂದಿಕರು ಇರುವದರಿಂದ ನಾನು ದಿನಾಂಕ 06.07.2021 ರಂದು ಕಾರ ನಂಬರ ಕೆಎ-03 ಎಡಿ-7357 ನೇದ್ದನ್ನು ಬಾಡಿಗೆ ತೆಗೆದುಕೊಂಡು ರೋಣದಿಂದ ಬಾಗೇವಾಡಿಗೆ ಬಂದಿದ್ದು ನಮ್ಮ ಕಾರ ಚಾಲಕನಾಗಿ ದೇವರಾಜ ತಂದೆ ಯಲ್ಲಪ್ಪ ಮಡಿವಾಳ ಈತನು ಇದ್ದನು. ಬಾಗೇವಾಡಿಯಲ್ಲಿ ನಮ್ಮ ಸಂಬಂದಿಯಾದ ಅಂಬ್ರೀಶ ತಂದೆ ಶೇಖರಯ್ಯ ಪುರಾಣಿಕ ಇವರನ್ನು ಕರೆದುಕೊಂಡು ಕೆಂಭಾವಿಯ ನಮ್ಮ ಸಂಬಂದಿಕರಾದ ಶಿವಾನಂದ ಮಾಸ್ತರ ಇವರ ಹತ್ತಿರ ಬಂದು ಅವರ ಹತ್ತಿರ ಇದ್ದ ನನ್ನ ಎರಡು ಜನ ಮಕ್ಕಳಾದ ಮಗ ಓಂಕಾರ ವ|| 13 ಹಾಗು ಮಗಳು ಶ್ರಾವಣಿ ಇವರನ್ನು ಕರೆದುಕೊಂಡು ನಂತರ ಅದೇ ಕಾರಿನಲ್ಲಿ ಎಲ್ಲರೂ ಕೂಡಿಕೊಂಡು ಕೆಂಭಾವಿಯಿಂದ ಕಲಬುಗರ್ಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ನಾಗರಹಳ್ಳಿ ಗ್ರಾಮದ ನಮ್ಮ ಸಂಬಂದಿಯಾದ ಶ್ರೀಶೈಲ ಹಿರೆಮಠ ಇವರ ಹತ್ತಿರ ಹೋಗುವ ಕುರಿತು ನಾವೆಲ್ಲರೂ ಕಾರಿನಲ್ಲಿ ಹೋಗುತ್ತಿದ್ದಾಗ ಅಂದರೆ ದಿನಾಂಕ 06.07.2021 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಯಾಳಗಿ ದಾಟಿ ಸುಮಾರು 2 ಕೀ ಮೀ ದೂರದ ತಿರುವಿನಲ್ಲಿ ಹೋಗುತ್ತಿದ್ದಾಗ ನಮ್ಮ ಕಾರ ನಂಬರ ಕೆಎ-03 ಎಡಿ-7357 ನೇದ್ದರ ಚಾಲಕ ದೇವರಾಜ ತಂದೆ ಯಲ್ಲಪ್ಪ ಮಡಿವಾಳ ಸಾ|| ರೋಣ ಈತನು ತನ್ನ ಕಾರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿ ಒಮ್ಮಲೇ ಬಲಭಾಗಕ್ಕೆ ಕಟ್ ಮಾಡಿದಾಗ ನಾವು ಕುಳಿತ ಕಾರ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಬಲಮಗ್ಗಲಿನ ತಗ್ಗಿನಲ್ಲಿ ಬಿದ್ದಿದ್ದು ಕಾರಣ ಸದರ ಕಾರನಲ್ಲಿ ಇದ್ದ ನನಗೆ ಬಲಗಾಲ ತೊಡೆಯ ಚಪ್ಪಿಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತಾಗಿದ್ದು ಹಾಗು ಎಡಗೈ ಭುಜಕ್ಕೆ ಭಾರೀ ಗುಪ್ತಗಾಯವಾಗಿದ್ದು ಅಲ್ಲದೇ ತಲೆಗೆ ಭಾರೀ ರಕ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ನಮ್ಮ ಜೊತೆಯಲ್ಲಿದ್ದ ಅಂಬ್ರೀಶ ತಂದೆ ಶೇಖರಯ್ಯ ಪುರಾಣಿಕಮಠ ಇವರಿಗೆ ಎಡಗಾಲ ಪಾದದ ಹತ್ತಿರ ಎಲುಬು ಮುರಿದಂತಾಗಿ ಎಡಭುಜಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಮಗ ಓಂಕಾರ ಹಿರೇಮಠ ಈತನಿಗೆ ಎಡಗಾಲ ತೊಡೆಯ ಹತ್ತಿರ ಕಾಲು ಮುರಿದಂತಾಗಿ ಹೊಟ್ಟೆಗೆ ಭಾರೀ ಗುಪ್ತಗಾಯವಾಗಿ ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೇ ನಮ್ಮ ಕಾರ ಚಾಲಕನಿಗೂ ಸಹ ಒಳಪೆಟ್ಟಾಗಿದ್ದು ಇರುತ್ತದೆ. ಹಾಗು ಕಾರ ಪೂತರ್ಿಯಾಗಿ ಜಖಂಗೊಂಡಿದ್ದು ಇರುತ್ತದೆ. ನಂತರ ನಾನು ನಾಗರಹಳ್ಳಿಯ ನಮ್ಮ ಸಂಬಂದಿಯಾದ ಶ್ರೀಶೈಲ ಚಿಕ್ಕಮಠ ಇವರಿಗೆ ಪೋನ ಮಾಡಿ ತಿಳಿಸಿದ್ದು ಅವರು ಬಂದು ನಮ್ಮೆಲ್ಲರನ್ನು ಅವರ ಕಾರಿನಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ನೇರವಾಗಿ ಮಿರಜದ ಕುಂಬಾರ ಆಥರ್ೋಪೆಡಿಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಮಗನಾದ ಓಂಕಾರ ಈತನಿಗೆ ಮಿರಾಜದ ಹೊಂಭಾಳ್ಕರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಕಾರ ನಂಬರ ಕೆಎ-03 ಎಡಿ-7357 ನೇದ್ದರ ಚಾಲಕ ದೇವರಾಜ ತಂದೆ ಯಲ್ಲಪ್ಪ ಮಡಿವಾಳ ಸಾ|| ರೋಣ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 95/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 96/2021 ಕಲಂ: 87 ಕೆಪಿ ಆಕ್ಟ : ಇಂದು ದಿನಾಂಕ: 13.07.2021 ರಂದು ಕಾಚಾಪೂರ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಸದರ ಸ್ಥಳಕ್ಕೆ ಹೋಗಿ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 17.00 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 1) ಬಸವರಾಜ ತಂದೆ ಮಂದೇವಾಲ ವ:50 ಜಾ: ಗಾಣಿಗ ಉ:ಚಾಲಕ ಸಾ: ಕಾಚಾಪೂರ 2) ಶಂಕರಗೌಡ ತಂದೆ ಬಸವರಾಜ ಕಲ್ಲದೇವನಹಳ್ಳಿ ವ:35 ಜಾ: ಗಾಣಿಗ ಉ: ಒಕ್ಕಲುತನ ಸಾ: ಕಾಚಾಪೂರ 3)ಸಂತೋಷ ತಂದೆ ಬಾಪುಗೌಡ ಕಲ್ಲದೇವನಹಳ್ಳಿ ವ:32 ಜಾ: ಗಾಣಿಗ ಉ:ಒಕ್ಕಲುತನ ಸಾ: ಕಾಚಾಪೂರ 4)ಕಾಶಿರಾಯ ತಂದೆ ಬಸವಂತ್ರಾಯ ಪಾಟೀಲ ವ:30 ಜಾ: ಗಾಣಿಗ ಉ:ಒಕ್ಕಲುತನ ಸಾ: ಕಾಚಾಪೂರ 5) ರೇವಣಸಿದ್ದ ತಂದೆ ಮಡಿವಾಳಪ್ಪ ಕಲ್ಲದೇವನಹಳ್ಳಿ ವ:35 ಜಾ: ಗಾಣಿಗ ಸಾ: ಕಾಚಾಪೂರ ಒಟ್ಟು 05 ಜನ ಆರೋಪಿತರಿದ್ದು. ಮತ್ತು ಒಟ್ಟು 2400/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 17.00 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 18.35 ಗಂಟೆಗೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 96/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ: 50/2021 78 (3) ಕೆ.ಪಿ ಯಾಕ್ಟ : ದಿನಾಂಕ:13/07/2021 ರಂದು 17.45 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು ಏನೆಂದರೆ, ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಗಿ ಪಟ್ಟಣದ ಊರ ಒಳಗಿನ ನೀಲಕಂಠೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:50/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಪಿಎಸ್ಐ(ಕಾ.ಸು) ಹುಣಸಗಿ ಪೊಲೀಸ್ ಠಾಣೆ ರವರು ಸಾಯಂಕಾಲ 19.15 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1370/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತ ಹೆಸರು 1) ಅಮೃತಗೌಡ ತಂದೆ ಶರಣಪ್ಪಗೌಡ ಕುಳಗೇರಿ ವಯ:71 ವರ್ಷ ಜಾತಿ:ಲಿಂಗಾಯತ ಉ:ಮಟಕಾ ಬರೆಯುವುದು ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

ಇತ್ತೀಚಿನ ನವೀಕರಣ​ : 14-07-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080