Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-08-2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 42/2021 ಕಲಂ 279, 337, 338, 304(ಎ), 283 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 13/08/2021 ರಂದು ಸಮಯ 2-15 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀಮತಿ ರೇಣುಕಾ ಗಂಡ ಸಾಬಣ್ಣ ಹೊಸಮನಿ ವಯ;30 ವರ್ಷ, ಜಾ;ಬೇಡರು (ಎಸ್.ಟಿ), ಉ;ಹೊಲಮನಿ ಕೆಲಸ, ಸಾ;ಖಾನಳ್ಳಿ ತಾ;ಜಿ;ಯಾದಗಿರಿ ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 2-45 ಪಿ.ಎಂ.ದಿಂದ 3-45 ಪಿ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಹೊಲಮನಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 13/08/2021 ರಂದು 12-30 ಪಿ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ಸಾಬಣ್ಣ ಇಬ್ಬರು ಕೂಡಿಕೊಂಡು ಯಾದಗಿರಿಗೆ ಹೋಗಿ ನಾಗರಪಂಚಮಿ ಹಬ್ಬದ ಸಂತೆ ಮಾಡಿಕೊಂಡು ಬಂದರಾಯಿತು ಅಂತಾ ತಯಾರಾಗಿ ನಮ್ಮ ಊರ ಆಟೋ ಸ್ಟ್ಯಾಂಡ್ ಹತ್ತಿರ ಬಂದೆವು. ನಮ್ಮುರಿನ ರವಿಚಂದ್ರ ತಂದೆ ನಿಂಗಪ್ಪ ಹೊಸಮನಿ ಇವರ ಆಟೋ ನಂಬರ ಕೆಎ-33, ಎ-1955 ನೇದ್ದು ಯಾದಗಿರಿ ಹೋಗಲು ನಿಂತಿದ್ದು ಅದರಲ್ಲಿ ನಮ್ಮೂರಿನ ಹಣಮಂತ ತಂದೆ ಲಂಕಪ್ಪ ಖಾನಾಪುರ ಈತನು ಯಾದಗಿರಿಗೆ ಹೋಗುವ ಸಂಬಂದ ಆಟೋದಲ್ಲಿ ಕುಳಿತಿದ್ದನು. ನಾವಿಬ್ಬರು ಕೂಡ ಅದೇ ಆಟೋದಲ್ಲಿ ಹೋಗಿ ಕುಳಿತಾಗ ಆಟೋವನ್ನು ರವಿಚಂದ್ರ ಈತನು ಆಟೋವನ್ನು ಚಾಲು ಮಾಡಿಕೊಂಡು ನಮ್ಮೂರಿನಿಂದ ಯಾದಗಿರಿ ಕಡೆಗೆ ನಡೆಸಿಕೊಂಡು ಹೊರಟನು. ಮಾರ್ಗ ಮದ್ಯೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಅಲ್ಲಿಪುರ ಕ್ರಾಸ್ ಸಮೀಪ ಒಬ್ಬ ಕಾರ್ ನೇದ್ದರ ಚಾಲಕನು ತನ್ನ ಕಾರನ್ನು ಮುಖ್ಯ ರಸ್ತೆ ಮೇಲೆ ತನ್ನ ವಾಹನಕ್ಕೆ ಯಾವುದೇ ಇಂಡಿಕೇಟರ್ಗಳನ್ನು ಹಾಕದೇ ಮತ್ತು ಯಾವುದೇ ಸಿಗ್ನಲಗಳನ್ನು ಹಾಕದೇ, ಯಾವುದೇ ಮುಂಜಾಗ್ರತೆ ವಹಿಸಿದೇ ವಾಹನಗಳ ಸಂಚಾರಕ್ಕೆ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ಯಾದಗಿರಿ ಕಡೆಗೆ ಹೋಗುವ ರಸ್ತೆಗೆ ಮುಖ ಮಾಡಿ ರಸ್ತೆಯ ಮೇಲೆ ನಿಲ್ಲಿಸಿದ್ದು ಅದೇ ಸಮಯಕ್ಕೆ ಆಟೋ ಚಾಲಕ ರವಿಚಂದ್ರ ಈತನು ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಕಾರಿನ ಹಿಂದಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ನನಗೆ ಎಡಗಾಲು ಹಿಮ್ಮಡಿಗೆ, ಬಲಗಾಲು ಮೊಣಕಾಲಿಗೆ ರಕ್ತಗಾಯವಾಗಿದ್ದು ಮತ್ತು ಕಿಬ್ಬೊಟ್ಟಿಗೆ ಭಾರೀ ಒಳಪೆಟ್ಟಾಗಿ ಗುಪ್ತಾಂಗಗಳಿಂದ ರಕ್ತಸ್ರಾವ ಆಗಿರುತ್ತದೆ. ನನ್ನ ಗಂಡನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಆಟೋದಲ್ಲಿದ್ದ ಹಣಮಂತ ಖಾನಾಪುರ ಈತನಿಗೆ ತಲೆಗೆ, ಸೊಂಟಕ್ಕೆ ಭಾರೀ ಒಳಪೆಟ್ಟಾಗಿ ಮೂಚರ್ೆ ಹೋಗಿರುತ್ತಾನೆ. ಆಟೋ ನಡೆಸುತ್ತಿದ್ದ ರವಿಚಂದ್ರ ಈತನಿಗೆ ಹಣೆಗೆ, ಬಲಗೈ ಮುಂಗೈಗೆ ರಕ್ತಗಾಯವಾಗಿ ತಲೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಪಘಾತವನ್ನು ಕಂಡು ಕಾರ್ ನೇದ್ದರ ಚಾಲಕನು ಘಟನೆಯ ನಂತರ ನಮಗೆ ನೋಡುತ್ತಾ ತನ್ನ ಕಾರನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಆತನನ್ನು ನಾವುಗಳು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಕಾರ್ ನಂಬರ ನೋಡಲಾಗಿ ನಂ. ಕೆಎ-25, ಎನ್-7429 ನೇದ್ದು ಇರುತ್ತದೆ. ಆಗ ನನ್ನ ಗಂಡನಾದ ಸಾಬಣ್ಣನು ಈ ಘಟನೆ ಬಗ್ಗೆ ನಮ್ಮ ಸಂಬಂಧಿ ರಡ್ಡಿ ತಂದೆ ದೇವಿಂದ್ರಪ್ಪ ಹೊಸಮನಿ ಈತನಿಗೆ ಪೋನ್ ಮಾಡಿ ತಿಳಿಸಿ ಹಣಮಂತ ಖಾನಾಪುರ ಹಾಗೂ ಆಟೋ ಚಾಲಕ ರವಿಚಂದ್ರ ಇವರ ಮನೆಯಲ್ಲಿಯೂ ಘಟನೆ ಬಗ್ಗೆ ತಿಳಿಸಿ ಅವರಿಗೆ ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬರಲು ಹೇಳಿರುತ್ತಾರೆ. ಈ ಘಟನೆಯು ಇಂದು ದಿನಾಂಕ 13/08/2021 ರಂದು ಮದ್ಯಾಹ್ನ 01;00 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ. ಅಷ್ಟರಲ್ಲಿಯೇ ಘಟನಾ ಸ್ಥಳಕ್ಕೆ ಪೊಲೀಸ್ ವಾಹನ ಬಂದು 108 ಅಂಬುಲೆನ್ಸ್ ಕರೆಯಿಸಿ ನಮಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಮ್ಮ ಸಂಬಂಧಿ ರಡ್ಡಿ ತಂದೆ ದೇವಿಂದ್ರಪ್ಪ ಹಾಗೂ ಹಣಮಂತನ ತಾಯಿ ಸುಶೀಲಮ್ಮ ಹಾಗು ರವಿಚಂದ್ರನ ತಮ್ಮ ಭೀಮಶ್ಯಾ ಇವರುಗಳು ಬಂದು ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಹಣಮಂತ ಈತನಿಗೆ ರಸ್ತೆ ಅಪಘಾತದಲ್ಲಾದ ಭಾರೀ ಗುಪ್ತಗಾಯಗಳ ಭಾದೆಯಿಂದ ಚೇತರಿಸಿಕೊಳ್ಳಲಾರದೆ ಸಮಯ 02;20 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿಯೇ ಮೃತ ಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ. ಹಣಮಂತನ ಮೃತ ದೇಹವನ್ನು ಆತನ ತಾಯಿ ಸುಶೀಲಮ್ಮ ಹಾಗೂ ನಾನು ಗುತರ್ಿಸಿರುತ್ತೇವೆ. ಹೀಗಿದ್ದು ಇಂದು ದಿನಾಂಕ 13/08/2021 ರಂದು 01;00 ಪಿ,ಎಂ.ದ ಸುಮಾರಿಗೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಅಲ್ಲಿಪುರ ಕ್ರಾಸ್ ಹತ್ತಿರ ನಾವು ಕುಳಿತು ಕೊಂಡು ಹೊರಟಿದ್ದ ಆಟೋ ನಂಬರ ಕೆಎ-33, ಎ-1955 ನೇದ್ದರ ಚಾಲಕ ರವಿಚಂದ್ರ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿದ್ದರಿಂದ ಮತ್ತು ಮುಖ್ಯ ರಸ್ತೆ ಮೇಲೆ ತನ್ನ ವಾಹನಕ್ಕೆ ಯಾವುದೇ ಇಂಡಿಕೇಟರ್ಗಳನ್ನು ಹಾಕದೇ ಮತ್ತು ಯಾವುದೇ ಸಿಗ್ನಲಗಳನ್ನು ಹಾಕದೇ, ಯಾವುದೇ ಮುಂಜಾಗ್ರತೆ ವಹಿಸಿದೇ ವಾಹನಗಳ ಸಂಚಾರಕ್ಕೆ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಿಲ್ಲಿಸಿದ್ದ ಕಾರ ನಂಬರ ಕೆಎ-25, ಎನ್-7429 ನೇದ್ದರ ಚಾಲಕರುಗಳ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಸಮಯ 04;00 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 42/2021 ಕಲಂ 279, 337, 338, 304(ಎ), 283 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 187/2021 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 13/08/2021 ರಂದು, ಮಧ್ಯಾಹ್ನ 14-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹಣಮಂತ ಬಿ. ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 13/08/2021 ರಂದು, ಮಧ್ಯಾಹ್ನ 14-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣದ ಹಳಿಸಗರ ಏರಿಯಾದ ಅಂಬೇಡ್ಕರ್ ಕಟ್ಟೆಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 45/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೇರೆಗೆ, ಮಾನ್ಯ ನ್ಯಾಯಾಲಯವು ಇಂದು ಮಧ್ಯಾಹ್ನ 14-15 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 187/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ನಂತರ ದಾಳಿ ಮಾಡಿ ಆರೋಪಿತನಿಂದ ನಗದು ಹಣ 1290=00ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಹಾಜರ ಪಡಿಸಿರುತ್ತಾರೆ.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 188/2021.ಕಲಂ 341 323 355 504 506 ಸಂ 149 ಐ.ಪಿ.ಸಿ. : ಇಂದು ದಿನಾಂಕ 13/08/2021 ರಂದು 21-00 ಗಂಟೆಗೆ ಪಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ರಂಗಪ್ಪ ಸಗರ, ವಯಸ್ಸು 53 ವರ್ಷ, ಜಾತಿ ಕಬ್ಬಲಿಗ, ಉಃ ಒಕ್ಕಲುತನ ಸಾಃ ದೋರನಹಳ್ಳಿ, ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕ 12/08/2021 ರಂದು ಮುಂಜಾನೆಯ ಸುಮಾರಿಗೆ ನಮ್ಮೂರ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆ ಇದ್ದುದ್ದರಿಂದ ನನ್ನ ಮಗ ಪ್ರವೀಣ ಈತನು ಗ್ರಾಮ ಸಭೆಗೆ ಹೋಗಿದ್ದನು. ನಂತರ ಗ್ರಾಮ ಸಭೆ ಮಗಿಸಿಕೊಂಡು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಮರಳಿ ಮನೆಗೆ ಬಂದಾಗ ನನ್ನ ಮಗ ತಿಳಿಸಿದ್ದೇನೆಂದರೆ, ಇಂದು ನಡೆದ ಗ್ರಾಮಸಭೆಯಲ್ಲಿ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಕಸ-ಕಡ್ಡಿ ಬಿದ್ದು ನೀರು ಸಂಗ್ರಹವಾಗಿ ದುವರ್ಾಸನೆ ಬರುತ್ತಿದೆ. ಚರಂಡಿ ಸ್ವಚ್ಛತೆಗಾಗಿ ಸಭೆಯಲ್ಲಿ ಹಾಜರಿದ್ದ ಪಂಚಾಯತ ಅಭಿವೃದ್ದಿ ಅಧಿಕಾರಿ ಮಲ್ಲಿಕಾಜರ್ುನ ವಗ್ಗರ ಇವರಿಗೆ ಕೇಳಲು ಹೋದಾಗ, ಪಿ.ಡಿ.ಓ ರವರು ನಿಮ್ಮ ಸಮಸ್ಯೆ ಬಗೆ ಹರಿಸುತ್ತೇವೆ ಅಂತಾ ಹೇಳಿದರು. ಗ್ರಾಮ ಸಭೆ ಮುಗಿಸಿಕೊಂಡು ನಾನು ಹೊರಗಡೆ ಬಂದು ನಿಂತ್ತಿದ್ದಾಗ, ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಮ್ಮ ವಾರ್ಡಗೆ ಯಾವುದೇ ರೀತಿಯ ಸಂಬಂಧವಿರದ ವಾಡರ್್ ನಂ. 2 ರ ಸದಸ್ಯಳಾದ ಶ್ರೀಮತಿ ತಾಯಮ್ಮ ಗಂಡ ಶ್ರೀಕಾಂತ ತೆಗನೂರ ವಯಸ್ಸು 32 ವರ್ಷ ಇವರು, ನನಗೆ ಏ ಪ್ರವೀಣ ಪಿ.ಡಿ.ಓ ರವರಿಗೆ ಏನ್ ಕೇಳ್ತಿ ನಮ್ಮ ಮುಂದೆ ಕೇಳೋ ಈಗ ಪಿ.ಡಿ.ಓ ರವರು ನಿಮ್ಮ ಮನೆಯ ಮುಂದಿನ ಚರಂಡಿ ಸ್ವಚ್ಛತೆ ಮಾಡಿಸುತ್ತೇವೆ ಅಂತಾ ಹೇಳಿದ್ದಾರಲ್ಲಾ ನಾನು ಚರಂಡಿ ಸ್ವಚ್ಛತೆ ಮಾಡಿಸಲು ಬಿಡುವುದಿಲ್ಲ ನೋಡ್ತಾಯಿರು ಅಂತಾ ನನ್ನ ಜೊತೆ ವಿನಾಕಾರಣ ತಕರಾರಕ್ಕೆ ಇಳಿದು ಜಗಳಕ್ಕೆ ಬಿದ್ದು, ಏ ರಂಡಿ ಮಗನೇ ಏನ್ ಮಾಡ್ಕೋತಿ ಲೇ ಬಾಡ್ಕೋ ಅಂತಾ ಕೆಟ್ಟ ಪದಗಳಿಂದ ನಿಂದಿಸಿ ತನ್ನ ಎಡಗಾಲಿನ ಚಪ್ಪಲಿಯಿಂದ ನನ್ನ ತಲೆಗೆ ಬೆನ್ನಿಗೆ ಹೊಡೆದಿರುತ್ತಾಳೆ. ಆಗ ಗ್ರಾಮ ಸಭೆಗೆ ಬಂದಿದ್ದ ನಮ್ಮೂರಿನ ಹಣಮಂತ ತಂದೆ ಭೀಮರಾಯ ಚಪಟಿ, ರಂಗಪ್ಪ ತಂದೆ ಮಲ್ಲಪ್ಪ ಗುಂಡಳ್ಳಿ, ಹಾಗೂ ಹೊರಗಡೆ ನಿಂತಿದ್ದ ಅಂಬ್ರೇಶ ತಂದೆ ಭೀಮಣ್ಣ ಕಾಚಾಪೂರ ರವರೆಲ್ಲರೂ ಬಂದು, ಜಗಳ ಬಿಡಿಸಿಕೊಂಡಿರುತ್ತಾರೆ ನಾನು ಹೆಣ್ಣು ಮಗಳು ಇದ್ದಾಳೆ ಅಂತಾ ಸಹಿಸಿಕೊಂಡು ಬಂದಿರುತ್ತೇನೆ ಅಂತ ತಿಳಿಸಿದನು. ಆಗ ನಾನು ಈ ಬಗ್ಗೆ ವಿಚಾರಿಸಿದರಾಯಿತು ಅಂತಾ ಹೇಳಿ ನನ್ನ ಮಗನಿಗೆ ಸಮಾಧಾನ ಪಡಿಸಿ ಸಾಯಂಕಾಲದ ಸುಮಾರಿಗೆ ನಮ್ಮೂರಿನಿಂದ ನಾನು ಮತ್ತು ನನ್ನ ಮಗ ಪ್ರವೀಣ ಹಾಗೂ ಇನ್ನೊಬ್ಬ ಮಗ ಪೃಥ್ವಿರಾಜ ಊರಿನ ರಂಗಪ್ಪ ತಂದೆ ಮಲ್ಲಪ್ಪ ಗುಂಡಳ್ಳಿ ರವರೊಂದಿಗೆ ಶಹಾಪೂರಕ್ಕೆ ಬಂದು, ನಮ್ಮ ಸಮಾಜದ ಮುಖಂಡರಿಗೆ ಭೇಟಿಯಾಗಬೇಕು ಅಂತಾ ಸಾಯಂಕಾಲ 5-00 ಗಂಟೆಯ ಸುಮಾರಿಗೆ ಶಹಾಪೂರದ ಫರೀದ್ ಹೋಟೆಲ್ ಮುಂದೆ ಹೋಗಿ ನಿಂತಿದ್ದಾಗ, ತಾಯಮ್ಮ ಇವಳ ಸಹೋದರರಾದ ಮಾನಪ್ಪ ತಂದೆ ಬಸಪ್ಪ ಅನ್ವರ, ಎರಡನೇ ಅಣ್ಣ-ತಮ್ಮಕಿಯಾದ ಶರಣಬಸಪ್ಪ ತಂದೆ ಲಚಮಪ್ಪ ಕೋಳಿ, ಸುನೀಲ್ ತಂದೆ ಮಲ್ಲಪ್ಪ ಅನ್ವರ, ಮಲ್ಲಪ್ಪ ತಂದೆ ಬಸಪ್ಪ ಅನ್ವರ, ರವರೆಲ್ಲರೂ ಬಂದು ನನ್ನ ಮಗ ಪ್ರವೀಣನಿಗೆ ಅಡ್ಡಗಟ್ಟಿ ನಿಂತು ಸುತ್ತುವರೆದು ಅವನ ಜೊತೆ ಜಗಳಕ್ಕೆ ಬಿದ್ದು, ಏ ಬೋಸ್ಡಿ ಮಗನೇ ನಮ್ಮ ಹೆಣ್ಣು ಮಗಳ ಜೊತೆ ಜಾಸ್ತಿ ಮಾತಾಡಿದ್ದಿಯಾ ಅಂತಾ ಬೈದು, ಮಾನಪ್ಪ ಈತನು ನನ್ನ ಮಗನಿಗೆ ಕಾಲಿನಿಂದ ಒದ್ದು ಕೈಯಿಂದ ಹೊಡೆದಿರುತ್ತಾನೆ. ಸುನೀಲ್ ಈತನು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ, ಮಲ್ಲಪ್ಪ ತಂದೆ ಬಸಪ್ಪ ಅನ್ವರ ಈತನು ತನ್ನ ಕೈಯಿಂದ ಕಪಾಳಕ್ಕೆ ಹೊಡೆದನು, ಶರಣಬಸಪ್ಪ ಈತನು ಈ ಬೋಸ್ಡಿ ಮಗನಿಗೆ ಬಿಡಬ್ಯಾಡರಿ ಹಾಕ್ರಿ ಈ ಸೂಳೆ ಮಗನದು ಊರಾಗ ಹೆಚ್ಚಾಗಿದೆ ಅಂತಾ ಬೈದಿರುತ್ತಾನೆ. ಆಗ ಜೊತೆಯಲ್ಲಿದ್ದ ನಾವು ಮತ್ತು ಶಹಾಪೂರದ ನಂದಪ್ಪ ತಂದೆ ಹಣಮಂತಪ್ಪ ದ್ಯಾವಪೂರ ರವರೆಲ್ಲರೂ ಕೂಡಿ ಜಗಳ ಬಿಡಿಸಿಕೊಂಡಿರುತ್ತೇವೆ. ಈ ಜಗಳವು ದಿನಾಂಕ 12/08/2021 ರಂದು ಮಧ್ಯಾಹ್ನ 2-00 ಗಂಟೆಗೆ ನಮ್ಮೂರ ಗ್ರಾಮ ಪಂಚಾಯತ ಮುಂದೆ ನಡೆದಿದ್ದು ನಂತರ ಅದೇ ದಿನ ಸಾಯಂಕಾಲ 5-00 ಗಂಟೆಗೆ ಶಹಾಪೂರದ ಫರೀದ್ ಹೋಟೆಲ್ ಮುಂದೆ ನಡೆದಿರುತ್ತದೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ದಿನಾಂಕ 12/08/2021 ರಂದು ನಮ್ಮೂರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ನನ್ನ ಮಗ ಪ್ರವೀಣ ಈತನು ಮನೆಯ ಮುಂದಿನ ಚರಂಡಿ ಸ್ವಚ್ಛತೆ ಮಾಡಲು ಕೇಳಿದ್ದಕ್ಕೆ, 1) ತಾಯಮ್ಮ ಗಂಡ ಶ್ರೀಕಾಂತ ತೆಗನೂರ 2) ಮಾನಪ್ಪ ತಂದೆ ಬಸಪ್ಪ ಅನ್ವರ, 3) ಶರಣಬಸಪ್ಪ ತಂದೆ ಲಚಮಪ್ಪ ಕೋಳಿ, 4) ಸುನೀಲ್ ತಂದೆ ಮಲ್ಲಪ್ಪ ಅನ್ವರ, 5) ಮಲ್ಲಪ್ಪ ತಂದೆ ಬಸ್ಪಪ ಅನ್ವರ, ರವರು ನನ್ನ ಮಗನಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ವಿನಂತಿ ಅಂತ ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 188/2021 ಕಲಂ 341, 323, 355, 504, 506, ಸಂ 149 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 117/2021 ಕಲಂ:447, 323,324,504,506, ಸಂಗಡ 34 ಐಪಿಸಿ : ದಿ: 13/08/2021 ರಂದು 6.30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಶಿವರಾಜ ತಂದೆ ಬಲವಂತ್ರಾಯಗೌಡ ಪಾಟೀಲ ವಯಾ|| 41 ಜಾ|| ಹಿಂದು ಲಿಂಗಾಯತ ಉ|| ಒಕ್ಕಲುತನ ಸಾ|| ಕೂಡಲಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು 4 ಜನ ಮಕ್ಕಳಿದ್ದು, ಅದರಲ್ಲಿ 3 ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳಿರುತ್ತಾರೆ. ಸದರಿಯವಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮ್ಮ ಅಣ್ಣ ಹಳ್ಳೆಪ್ಪಗೌಡ ಈತನು ಹಿರಿವನಾಗಿದ್ದು, 2 ನೇಯವನು ಭೀಮನಗೌಡ ಅಂತ ಇದ್ದು, ನಾನು 3ನೇಯವನಾಗಿರುತ್ತೇನೆ. ಸದ್ಯ ನಾವು ಮೂರು ಜನರು ಬೇರೆಬೇರೆಯಾಗಿ ಮನೆ ಮಾಡಿಕೊಂಡು ಇರುತ್ತೇವೆ. ನಮ್ಮ ತಾಯಿಯಾದ ಗಂಗಮ್ಮ ಇವರು ನನ್ನ ಹತ್ತಿರವೇ ಇದ್ದು, ಅವರ ಪಾಲಿಗೆ ಉಪಜೀವನಕ್ಕಾಗಿ 4 ಎಕರೆ ಒಣಬೇಸಾಯದ ಹೊಲವಿದ್ದು, ಸದರಿಯವರಿಗೆ ನಾನೇ ನೋಡಿಕೊಂಡು ಹೋಗುತ್ತಿದ್ದೆನು. ನಮ್ಮ ತಾಯಿಯವರ ಹೆಸರಿನಲ್ಲಿದ್ದ ಆಸ್ತಿ ಅವರು ತೀರಿ ಹೋದ ನಂತರ ಎಲ್ಲರು ಸಮನಾಗಿ ಹಂಚಿಕೊಳ್ಳುವಂತೆ ಹಾಗೂ ಅವರ ಮಣ್ಣಿನ ಖಚರ್ಿಗಾಗಿ ಆದ ಹಣದಲ್ಲಿಯೂ ಸಹ 3 ಜನರು ಸಮನಾಗಿ ಕೊಡಬೇಕು ಅಂತ ಹಿರಿಯರ ಸಮ್ಮುಖದಲ್ಲಿ ಮಾತುಕತೆಯಾಗಿದ್ದು ಇರುತ್ತದೆ. ಅದರಂತೆ ದಿನಾಂಕ: 08/04/2021 ರಂದು ನಮ್ಮ ತಾಯಿ ಗಂಗಮ್ಮ ಇವರು ತೀರಿಹೋಗಿದ್ದು, ಆ ಸಮಯದಲ್ಲಿ ನಾನೇ ನಮ್ಮ ತಾಯಿಯ ಮಣ್ಣು ಖಚರ್ು ನೋಡಿಕೊಂಡಿದ್ದು ಅಂದಾಜು 1,50,000/- ರೂ. ಖಚರ್ಾಗಿದ್ದು ಅಲ್ಲದೆ ಸುಮಾರು 4 ವರ್ಷಗಳ ಹಿಂದೆ ನಮ್ಮ ತಂದೆ ತೀರಿಕೊಂಡಾಗಲೂ ನಾನೇ 1,50,000/- ರೂ ಖಚರ್ು ಮಾಡಿದ್ದು ಇರುತ್ತದೆ. ನಮ್ಮ ತಾಯಿಯವರ ಉಪಜೀವನಕ್ಕಾಗಿ ಇದ್ದ 4 ಎಕರೆ ಹೊಲವನ್ನು ನಾವು 3 ಜನ ಅಣ್ಣ ತಮ್ಮಂದಿರು ಸಮನಾಗಿ ಹಂಚಿಕೊಂಡಿದ್ದು ಇರುತ್ತದೆ. ನಾನು ನಮ್ಮ ತಂದೆ ಹಾಗೂ ತಾಯಿಯ ಮಣ್ಣು ಖಚರ್ಿಗಾಗಿ ಮಾಡಿದ 3,00,000/- ರೂ ಹಣದಲ್ಲಿ ಮೂರು ಭಾಗ ಮಾಡಿ ನನ್ನ ಎರಡೂ ಜನ ಅಣ್ಣಂದಿರಿಗೆ ತಿಳಿಸಿದಾಗ, ಹಳ್ಳೆಪ್ಪಗೌಡ ಇವರು ತಮ್ಮ ಪಾಲಿಗೆ ಬಂದ ಹಣ ಕೊಟ್ಟಿದ್ದು, ಭೀಮನಗೌಡ ಈತನು ನಾನು ಯಾವುದೇ ಹಣ ಕೊಡುವದಿಲ್ಲ ಅಂತ ಅಂತಾಗ ನಾನು ಈ ಹಿಂದೆ ಮಾತನಾಡಿದ ಹಿರಿಯರಲ್ಲಿ ತಿಳಿಸುತ್ತೇನೆ ಅಂತ ಹೇಳಿ ಸುಮ್ಮನಿದ್ದೆನು. ಅಲ್ಲದೆ ಈ ವಿಷಯವನ್ನು ನನ್ನ ಅಣ್ಣನಾದ ಹಳ್ಳೆಪ್ಪಗೌಡ ಈತನಿಗೆ ಹೇಳಿದ್ದರಿಂದ, ನಮ್ಮ ಅಣ್ಣ ಹಳ್ಳೆಪ್ಪಗೌಡ ಈತನು ಭೀಮನಗೌಡ ಈತನಿಗೆ ತಮ್ಮ ಶಿವರಾಜ ಈತನಿಗೆ ಹಣದ ಅಡಚಣೆ ಆಗಿದ್ದು, ಹಣ ಕೊಡು ಅಂತ ಅಂದಾಗ ಅದನ್ನು ಕೇಳುವವ ನೀನ್ಯಾರು ಅಂತ ನಮ್ಮ ಅಣ್ಣ ಹಳ್ಳೆಪ್ಪಗೌಡ ಈತನೊಂದಿಗೆ ತಕರಾರು ಮಾಡಿದ್ದನು. ಹೀಗಿದ್ದು ದಿನಾಂಕ: 02/08/2021 ರಂದು ಮದ್ಯಾಹ್ನ 1.30 ಗಂಟೆಗೆ ನಮ್ಮ ಅಣ್ಣನಾದ ಹಳ್ಳೆಪ್ಪಗೌಡ ತಂದೆ ಬಲವಂತ್ರಾಯಗೌಡ ಪಾಟೀಲ ಇವರು ತಮ್ಮ ಹೊಲ ಸವರ್ೇ ನಂ. 128 ರಲ್ಲಿ ಗದ್ದಿ ಹೊಲಕ್ಕೆ ನೀರು ಬಿಡಲು ಹೋಗಿದ್ದು, ಆಗ ನಾನು ನಮ್ಮ ಮನೆಯ ಹತ್ತಿರ ಇದ್ದಾಗ, ನಮ್ಮ ಅಣ್ಣನ ಹೊಲದ ಪಕ್ಕದ ಹೊಲದ ಶ್ಯಾಮರಾಜಪ್ಪಗೌಡ ತಂದೆ ನಾನಾಗೌಡ ಮೇಟಿ ಇವರು ನನಗೆ ಫೋನ್ ಮಾಡಿ ನಮ್ಮ ಅಣ್ಣ 1) ಭೀಮನಗೌಡ ತಂದೆ ಬಲವಂತ್ರಾಯಗೌಡ ಪಾಟೀಲ ಹಾಗೂ ಅವನ ಹೆಂಡತಿ 2) ಅನ್ನಮ್ಮ ಗಂಡ ಭೀಮನಗೌಡ ಪಾಟೀಲ ಈ ಎರಡೂ ಜನರು ಅಣ್ಣ ಹಳ್ಳೆಪ್ಪಗೌಡ ಇವರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಜಗಳತೆಗೆದಿದ್ದಾರೆ ಅಂತ ತಿಳಿಸಿದಾಗ ನಾನು ಕೂಡಲೆ ಹೊಲಕ್ಕೆ ಹೋಗಿ ನೋಡಲು ಅಣ್ಣ ಹಳ್ಳೆಪ್ಪ ಈತನಿಗೆ ಭೀಮನಗೌಡ ಹಾಗೂ ಆತನ ಹೆಂಡತಿ ಅನ್ನಮ್ಮ ಈ ಎರಡೂ ಜನರು ಸೂಳೆಮಗನೆ ನಮಗೆ ದುಡ್ಡು ಕೇಳುವವನು ನೀನ್ಯಾರು ಅಂತ ಬೈಯುತ್ತಿದ್ದಾಗ, ಅಣ್ಣ ಹಳ್ಳೆಪ್ಪಗೌಡ ಈತನು ಮಣ್ಣು ಖಚರ್ಿನ ಹಣ ಬಹಳ ದಿನ ಇಟ್ಟುಕೊಳ್ಳಬಾರದು ಕೊಡು ಅಂತ ಅಂದಾಗ ಸೂಳೆಮಗನೆ ನಿನ್ನ ಸೊಕ್ಕು ಬಾಳ ಆಗಿದೆ ಅಂತ ಇಬ್ಬರೂ ಅವಾಚ್ಯವಾಗಿ ಬೈಯುತ್ತಾ ಭೀಮನಗೌಡ ಈತನು ಬೆಡಗದ ಕಾವಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ನಂತರ ಅನ್ನಮ್ಮ ಇವಳು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಅಣ್ಣ ಹಳ್ಳೆಪ್ಪಗೌಡ ಈತನ ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸುತ್ತಿದ್ದಾಗ ನನ್ನ ಅಣ್ಣನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಾನು ಹಾಗೂ ಶ್ಯಾಮರಾಜಪ್ಪಗೌಡ ಮೇಟಿ ಇಬ್ಬರು ಕೂಡಿಕೊಂಡು ಬಿಡಿಸಿಕೊಂಡೆವು. ನಂತರ ಸದರಿಯವರು ಮಗನೆ ಇನ್ನೊಮ್ಮೆ ಹಣ ಅಂತ ನಮ್ಮಲ್ಲಿಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದರು. ಕೂಡಲೆ ನಾನು ನನ್ನ ಅಣ್ಣನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಹೆಚ್ಚಿನ ಉಪಚಾರ ಕುರಿತು ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಮಿರಜಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ, ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಹಣದ ವಿಷಯದಲ್ಲಿ ವಿನಾಕಾರಣ ಜಗಳಾ ತೆಗೆದು ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಮೇಲ್ಕಾಣಿಸಿದ ಎರಡೂ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 117/2021 ಕಲಂ: 341, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ ಠಾಣೆ
128/2021 ಕಲಂ: 78(3) ಕೆ.ಪಿ ಯಾಕ್ಟ್ : ಇಂದು ದಿನಾಂಕ: 13/08/2021 ರಂದು 1-45 ಪಿ.ಎಮ್ ಕ್ಕೆ ಶ್ರೀ ಸುನೀಲ್ ಮೂಲಿಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 11-45 ಎ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ದೇವರಗೋನಾಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರಾದ ಸಿಪಿಸಿ 427,423,184 ಹಾಗು ಇಬ್ಬರೂ ಪಂಚರೊಂದಿಗೆ ಹೋಗಿ ಹೊರಟು ಗ್ರಾಮದ ಹೊರವಲಯದಲ್ಲಿ ಜೀಪ ನಿಲ್ಲಿಸಿ ಸ್ವಲ್ಪ ನಡೆದುಕೊಂಡು ಹೋಗಿ ಬಸ್ ನಿಲ್ದಾಣದ ಸಮೀಪವಿರುವ ಅಂಗಡಿಗಳಿಗೆ ಮರೆಯಾಗಿ ನಿಂತು ನೋಡಲಾಗಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೊಯಿಂಟ್ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತ ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿತನಿಗೆ ಹಿಡಿದು, ಸದರಿಯವನಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 1670=00 ರೂ.ಗಳು 2) ಒಂದು ಬಾಲ್ ಪೆನ್ನ ಅ||ಕಿ|| 00-00 ರೂ.ಗಳು. 3) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ|| 00-00, ರೂ.ಗಳು ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 128/2021 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 60/2021 ಕಲಂ : 323, 341, 324, 504, 506 ಸಂಗಡ 34 ಐಪಿಸಿ : ದಿನಾಂಕ:11/08/2021 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿಗೆ ಬೈಯುವಾಗ ಆರೋಪಿತರು ನಮಗೆ ಬೈದಿರುತ್ತಾನೆ ಅಂತಾ ತಿಳಿದು ಕೊಂಡು ತಕರಾರು ಮಾಡಿಕೊಂಡಿದ್ದು ಇರುತ್ತದೆ. ದಿನಾಂಕ:13/08/2021 ರಂದು ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಫಿರ್ಯಾದಿಯು ಕೊಳಿಹಾಳ ನಡುವಿನ ತಾಂಡಾದ ಆಂಬ್ರೇಶ ಇವರ ಹಿಟ್ಟಿನ ಗಿರಣಿ ಹತ್ತಿರ ನಿಂತಾಗ ಆರೋಪಿ ನಂ:1 ನೇದ್ದವನು ಅಲ್ಲಿಗೆ ಬಂದು ಏ ಮಗನೆ ಮೊನ್ನೆ ನಮ್ಮ ತಂದೆಯೊಂದಿಗೆ ಜಗಳ ಮಾಡಿದಿ ಅಂತಾ ಬೈಯುತ್ತಾ ಫಿರ್ಯಾದಿಗೆ ತಡೆದು ನಿಲ್ಲಿಸಿ ಕೈಯಿಂದ & ಕಲ್ಲಿನಿಂದ ಹೊಡೆದು ರಕ್ತಗಾಯ & ಗುಪ್ತಗಾಯ ಮಾಡಿದ್ದು ಇರುತ್ತದೆ. ಅಲ್ಲದೆ ಆರೋಫಿ ನಂ;2 ನೇದ್ದವನು ಫಿರ್ಯಾದಿಗೆ ಕೈಯಿಂದ ಹೊಡೆದಿದ್ದು, & ಕೆಳ ತುಟಿಗೆ ಹೊಡೆದು ರಕ್ತಗಾಯ ಮಾಡಿದ್ದು, ಆರೋಪಿ ನಂ:3 ನೇದ್ದವಳು ಈ ಮಗಂದು ಬಹಳಾಗ್ಯಾದ ಬಿಡಬೇಡಿ ಇಲ್ಲ ಸಲ್ಲದ್ದು ಹೇಳಿ ನನ್ನ ಮಗಳ ಸಂಸಾರ ಹಾಳು ಮಾಡ್ಯಾನ ಅಂತಾ ಒದರಾಡಿದ್ದು ಇರುತ್ತದೆ. & ಆರೋಪಿ ನಂ:4 ನೇದ್ದವಳು ಸಹ ಅಲ್ಲಿಗೆ ಬಂದು ಫಿರ್ಯಾದಿಗೆ ಕೈಯಿಂದ ಮುಖಕ್ಕೆ ಹೊಡೆದಿದ್ದು ಇರುತ್ತದೆ. ಅಲ್ಲಿಯೇ ಇದ್ದ ಸಾಕ್ಷಿದಾರರು ಬಂದು ಜಗಳ ಬಿಡಿಸಿದ್ದು, ಆರೋಪಿತರೆಲ್ಲರೂ ಇವತ್ತು ನಮ್ಮ ಕೈಯಾಗ ಉಳಿದಿದಿ ಇನ್ನೊಂದು ಸಲ ನಮ್ಮ ಮಗಳ ವಿಷಯದಲ್ಲಿ ಏನಾದೂ ಹೇಳಿದರೆ ಜೀವಂತ ಬಿಡುವದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

 

ಹುಣಸಗಿ ಪೊಲೀಸ ಠಾಣೆ
61/2021 ಕಲಂ. 279, 337 338 ಐಪಿಸಿ : ದಿ:13/08/2021 ರಂದು ಫಿರ್ಯಾದಿ & ಗಾಯಾಳು ಬಸವರಾಜ ಇಬ್ಬರೂ ಕೂಡಿಕೊಂಡು ಬಸವರಾಜನ ಮೋಟಾರ್ ಸೈಕಲ್ ನಂ: ಕೆಎ-33 ಎಸ್-600 ಸಿಟಿ-100 ನೇದ್ದರ ಮೇಲೆ ಹುಣಸಗಿಗೆ ಹೋಗಲು ಹುಣಸಗಿ-ಕೆಂಭಾವಿ ರಸ್ತೆಯ ಮೇಲೆ ಹೊರಟಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂಬರ ಸ್ಕ್ರ್ಯಾಚ್ ಆಗಿದ್ದು ಚೆಸ್ಸಿ ನಂ: ಒಃಐಊಂ10ಂಒಆಊಂ81486 ಇಂಜಿನ್ ನಂ:ಊಂ01ಇಎಆಊಂ60816 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಗೆ & ಗಾಯಾಳು ಬಸವರಾಜನು ಹೊರಟ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಫಿರ್ಯಾದಿ & ಗಾಯಾಳು ಹಾಗೂ ಆರೋಪಿತನು ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ತಲೆಗೆ ರಕ್ತಗಾಯವಾಗಿದ್ದು, & ಮೋಲಕಾಲ ಕೆಳಗಡೆ ಪಾದದ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ಬಸವರಾಜನಿಗೆ ಎಡಗಾಲಿನ ಮೊಳಕಾಲಿನ ಕೆಳಬಾಗ ಮುರಿದಿದ್ದು, ಹಿಂಬಡಿಗೆ& ಎಡಗಣ್ಣಿನ ಹುಬ್ಬಿಗೆ ರಕ್ತಗಾಯವಾಗಿದ್ದು ಇರುತ್ತದೆ. ಆರೋಪಿತನಿಗೆ ಎಡಗಾಲಿನ ಹಿಂಬಡಿಗೆ & ಎಡಗಣ್ಣಿನ ಹುಬ್ಬಿಗೆ ರಕ್ತಗಾಯಗಳಾದ ಬಗ್ಗೆ ಅಪರಾಧ.

 

ನಾರಾಯಣಪೂರ ಪೊಲೀಸ ಠಾಣೆ
ಗುನ್ನೆ ನಂ.49/2021 ಕಲಂ: 143, 147, 148, 323, 324, 354 504, 506 ಸಂ 149 ಐಪಿಸಿ : ಇಂದು ದಿನಾಂಕ : 13/08/2021 ರಂದು 3:ಪಿಎಮ್ ಕ್ಕೆ ಒಐಅ ವಿಚಾರಣೆ ಕುರಿತು ಕಟ್ಟಿ ಆಸ್ಪತ್ರೆ ಬಾಗಲಕೋಟೆಕ್ಕೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗೋಪಿಲಾಲ್ ತಂದೆ ನಾರಾಯಣ ರಾಠೋಡ್ ಸಾ|| ಮಾರನಾಳ ದೊಡ್ಡತಾಂಡ ಈತನೀಗೆ ಜಗಳದ ಬಗ್ಗೆ ವಿಚಾರಿಸಿ ಸದರಿಯವನ ಹೇಳಿಕೆಯನ್ನು 3:30 ಪಿಎಮ್ ದಿಂದ 4:30 ಪಿಎಮ್ ವರಗೆ ಪಡೆದುಕೊಂಡು 4:30 ಪಿಎಮ್ ಕ್ಕೆ ಆಸ್ಪತ್ರೆಯಿಂದ ಹೋರಟು 9:00ಪಿಎಮ್ ಕ್ಕೆ ಠಾಣೆಗೆ ಬಂದಿದ್ದು ಪಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಮಗೂ ಮತ್ತು ನಮ್ಮ ಅಣ್ಣ ತಮ್ಮಕೀಯ ರುಕ್ಮಾಬಾಯಿ ರವರಿಗೆ ನಮ್ಮ ಹೊಲದ ವಿಷಯದಲ್ಲಿ ಈ ಮೊದಲಿನಿಂದಲು ತಕರಾರು ಇರುತ್ತದೆ ನಮಗೂ ಮತ್ತು ರುಕ್ಮಾಬಾಯಿ ರವರಿಗೆ ಆಗಿ ಬರುವದಿಲ್ಲ. ಹೀಗಿದ್ದು ನಿನ್ನೆ ದಿನಾಂಕ:12/08/2021 ರಂದು 3:00 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಶಿಲ್ಪಾ ಇಬ್ಬರು ನಮ್ಮ ಮನೆಯ ಮುಂದೆ ಇದ್ದಾಗ ನನ್ನ ಹೆಂಡತಿ ಶಿಲ್ಪಾ ಇವಳು ನನ್ನ ಮಕ್ಕಳಿಗೆ ಕೆಲಸ ಮಾಡುವ ವಿಷಯದಲ್ಲಿ ಬೈಯುತ್ತಾ ಇದ್ದಾಗ ಅಲ್ಲಿಯೇ ಇದ್ದ ರುಕ್ಮಾಬಾಯಿ ಗಂಡ ಸೋಮಪ್ಪ ಇವಳು ನನ್ನ ಹೆಂಡತಿ ಶಿಲ್ಪಾ ನನ್ನ ಮಕ್ಕಳಿಗೆ ಬೈಯುವದನ್ನು ತನಗೆ ಬೈಯುತ್ತಿದ್ದಾಳೆ ಅಂತಾ ತಿಳಿದುಕೊಂಡು ನಮ್ಮ ಮನೆಯ ಮುಂದೆ ಬಂದು ನನ್ನ ಹೆಂಡತಿಗೆ ಬೋಸುಡಿ ಸೂಳಿ ಯಾಕೆ ನಿನ್ನ ಮಕ್ಕಳೆ ಮೇಲೆ ಹಾಕಿ ನನಗೆ ಬೈಯುತ್ತಿದ್ದಿಯಾ ಅಂತಾ ಅಂದು ನನ್ನ ಹೆಂಡತಿಯೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ನನ್ನ ಹೆಂಡತಿಯನ್ನು ಎಳೆದುಕೊಂಡು ತಮ್ಮ ಮನೆಯ ಹತ್ತಿರ ಎಳೆದುಕೊಂಡು ಹೋಗಿ ನನ್ನ ಹೆಂಡತಿಗೆ ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ನನ್ನ ಹೆಂಡತಿಯ ಸೊಂಟಕ್ಕೆ ಒದಿಯತೊಡಗಿದಳು. ಆಗ ಅಲ್ಲಿಯೇ ಇದ್ದ ನಾನು ರುಕ್ಮಾಬಾಯಿಗೆ ಯಾಕಮ್ಮ ನನ್ನ ಹೆಂಡತಿಯೊಂದಿಗೆ ಜಗಳಕ್ಕೆ ಬಿದ್ದಿರುವೆ ಅಂತಾ ಕೇಳಿದಾಗ ರುಕ್ಮಾಬಾಯಿ ಇವಳು ನನಗೆ ಬೊಸುಡಿ ಮಕ್ಕಳೆ ಗಂಡ ಹೆಂಡತಿ ಇಬ್ಬರು ಸೇರಿ ನಾಟಕ ಮಾಡಕತ್ತಿರೇನು ಅಂತಾ ನನ್ನೊಂದಿಗೆ ಜೋರಾಗಿ ಬಾಯಿ ಮಾಡತೊಡಗಿದಳು ರುಕ್ಮಾಬಾಯಿ ಮಾಡುವ ದ್ವನಿಕೇಳಿ ಅಲ್ಲಿಯೇ ಇದ್ದ ರಾಜು ತಂದೆ ಸೊಮಪ್ಪ, ಅರುಣ ತಂದೆ ಸೋಮಪ್ಪ, ಪವನ್ ತಂದೆ ಸೋಮಪ್ಪ, ಅಜಯ ತಂದೆ ಕೃಷ್ಣಪ್ಪ ಹಾಗೂ ಸಾ||ಮಾರನಾಳ ತಾಂಡ ಮತ್ತು ಗುಂಡಪ್ಪ ತಂದೆ ಮಂಗಳಪ್ಪ ಪವಾರ್ ಸಾ|| ರೋಡಲಬಂಡಾ ಇವರೇಲ್ಲರೂ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ ಏ ಗೋಪಿ ಸೂಳೆಮಗನೆ ಯಾಕೆ ನಮ್ಮ ರುಕ್ಮಾಬಾಯಿ ಜೊತೆ ಜಗಳಕ್ಕೆ ಬಿದ್ದಿರುವಿ ಅಂತಾ ಅಂದವರೇ ಅವರಲ್ಲಿದ್ದ ರಾಜು ತಂದೆ ಸೋಮಪ್ಪ ಇವನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ತೆಲೆಯ ಹಿಂದುಗಡೆ ಹಾಗೂ ತಲೆಯ ಬಲಗಡೆಗೆ ಹೊಡೆದು ರಕ್ತಗಾಯಪಡಿಸಿದನು, ಅರುಣ ತಂದೆ ಸೋಮಪ್ಪ ಇತನು ನನ್ನ ಹೆಂಡತಿ ಶಿಲ್ಪಾಳ ನೈಟಿ ಹಿಡಿದು ಎಳೆದಾಡಿ ಅವಮಾನ ಮಾಡಿ ಕೈಯಿಂದ ಹೊಟ್ಟೆಗೆ ಹೊಡೆದು ಗುಪ್ತ ಗಾಯಪಡಿಸಿದನು, ಪವನ್ ತಂದೆ ಸೋಮಪ್ಪ ಈತನು ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿದನು. ಮತ್ತು ಅಜಯ ತಂದೆ ಸೋಮಪ್ಪ ಈತನು ನನಗೆ ಕಾಲಿನಿಂದ ನನ್ನ ಹೊಟ್ಟೆಗೆ ಒದ್ದು ಗುಪ್ತ ಪೆಟ್ಟು ಮಾಡಿದನು ಗುಂಡಪ್ಪ ತಂದೆ ಮಂಗಳಪ್ಪ ಪವಾರ್ ಸಾ||ರೋಡಲಬಂಡಾ ಇವನು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು ಆಗ ನಾನು ನನ್ನ ಹೆಂಡತಿ ಶಿಲ್ಪಾ ಇವಳು ಚೀರಾಡುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ರೇವಣಪ್ಪ ತಂದೆ ಗೀಗಪ್ಪ ರಾಠೋಡ್ ದೀರಪ್ಪ ತಂದೆ ಸೂರಪ್ಪ ರಾಠೋಡ್ ಇವರು ಬಂದು ಜಗಳ ಬಿಡಿಸಿದರು. ಆವಾಗ ಅವರಲ್ಲಿಯ ಅರುಣ ತಂದೆ ಸೋಮಪ್ಪ ಈತನು ಬೋಸುಡಿ ಮಗನೇ ಇವತ್ತು ಇವರು ಬಂದು ಬಿಡಿಸಿಕೊಂಡರು ಅಂತಾ ಉಳಿದುಕೊಂಡಿದ್ದಿಯಾ ಇನ್ನೊಮ್ಮೆ ಸೀಗು ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೊದರು ನಂತರ ನನಗೂ ಹಾಗೂ ನನ್ನ ಹೆಂಡತಿಗೂ ಶಿಲ್ಪಾನನ್ನು 108 ಗಾಡಿಯಲ್ಲಿ ಕರೆದುಕೋಂಡು ನನಗೆ ದಿನಾಂಕ:12/08/2021 ರಾತ್ರಿ 08:45 ಸುಮಾರಿಗೆ ಕಟ್ಟಿ ಆಸ್ಪತ್ರೆ ಬಾಗಲಕೋಟೆದಲ್ಲಿ ಸೇರಿಕೆ ಮಾಡಿದರು ನನ್ನ ಹೆಂಡತಿ ಶಿಲ್ಪಾಗೆ ಯಾವುದೆ ತರಹದ ಗಾಯಗಳು ಆಗಿಲ್ಲ. ಅವಳಿಗೆ ಆಸ್ಪತ್ರೆಗೆ ತೋರಿಸಿರುವುದಿಲ್ಲ ನಾನು ಈಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವೆ ನನಗೆ ಕೈಯಿಂದ, ಬಡಿಗಡಯಿಂದ ಹೊಡೆದು ರಕ್ತಗಾಯ, ಗುಪ್ತಗಾಯಪಡಿಸಿದವರ ಮೆಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 49/2021 ಕಲಂ: 143, 147, 148, 323, 324, 354, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 113/2021 ಕಲಂ 87 ಕೆ.ಪಿ ಎಕ್ಟ : ಇಂದು ದಿನಾಂಕ 13/08/2021 ರಂದು 10.30 ಪಿ.ಎಮ್ ಕ್ಕೆ ಆರೋಪಿತರು ಚಾಮನಳ್ಳಿ ಕ್ರಾಸ್ ಹತ್ತಿರ ಬಂದಳ್ಳಿ ಸಿಮಾಂತರದ ಬುಡ್ಡೆನಾಯಕ ಪೆಟ್ರೋಲ್ ಬಂಕ್ ಹಿಂದೆ ಇಸ್ಪೀಟ ಜೂಜಾಟದಲ್ಲಿ ತೋಡಗಿದ್ದಾರೆ ಅಂತಾ ಖಚಿತ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ 2230/ರೂ ನಗದು ಹಣ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು, ಇರುತ್ತದೆ.

Last Updated: 14-08-2021 01:04 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080