ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 137/2022 ಕಲಂ. ಮನುಷ್ಯ ಕಾಣೆ : ದಿನಾಂಕ: 13-09-2022 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 30-08-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನನ್ನ ಅಣ್ಣ ಮಹಾದೇವಪ್ಪ ಈತನು ನನಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ದಿನಾಂಕ: 29-08-2022 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ದೇವಪ್ಪ ಈತನು ನಿಮ್ಮಲ್ಲಿಗೆ ಬರುತ್ತೇನೆ ಅಂತಾ ಹೇಳಿ ಹೋಗಿದ್ದಾನೆ ನಿಮ್ಮಲ್ಲಿಗೆ ಬಂದಾನೇನು ಅಂತಾ ಪೊನ್ ಮಾಡಿ ಕೇಳಿದನು ಆಗ ನಾನು ದೇವಪ್ಪ ಈತನು ಇಲ್ಲಿಗೆ ಬಂದಿಲ್ಲ ಅಂತಾ ಹೇಳದೆನು. ಆಗ ನಮ್ಮ ಅಣ್ಣ ದೇವಪ್ಪನಿಗೆ ಬೆಂಗಳುರಿನಲ್ಲಿ ಮತ್ತು ಎಲ್ಲಾ ಕಡೆ ನೋಡು ಅಂತಾ ಹೇಳಿದನು ಆಗ ನಾನು ನನ್ನ ಮಗ ದೇವಪ್ಪನಿಗೆ ಬೆಂಗಳೂರಿನಲ್ಲಿ ಮತ್ತು ನಾವು ಕೆಲಸ ಮಾಡುವ ಎಲ್ಲಾ ಸ್ಥಳಗಳಲ್ಲಿ ಹುಡುಕಾಡಿದೆವು ಎಲ್ಲಿ ಸಿಗಲಿಲ್ಲ ನಂತರ ನಾವು ನಮ್ಮೂರಿಗೆ ಬಮದು ನಮ್ಮ ಬೀಗರ ನೆಂಟರ ಊರುಗಳಿಗೆ ಹೋಗಿ ಮತ್ತು ಪೊನ್ ಮೂಲಕ ನನ್ನ ಮಗ ದೇವಪ್ಪ ಈತನು ಬಂದಿದ್ದಾನೇನು ಅಂತಾ ಕೇಳಲಾಗಿ ಆತನು ಬಂದಿರುವದಿಲ್ಲ ಅಂತಾ ತಿಳಿಸಿದರು. ನಂತರ ಎಲ್ಲಾದರು ಹೋಗಿರಬಹುದು ಮತ್ತೆ ಬರಬಹುದು ಅಂತಾ ಸುಮ್ಮಿದ್ದೆವು ಆದರು ಕೂಡ ನನ್ನ ಮಗ ದೇವಪ್ಪ ಈತನು ಬರಲಿಲ್ಲ ಆಗ ನಾವು ಯಾದಗಿರಿ, ಶಹಾಪೂರ, ಕಲಬುರಗಿ ಮತ್ತು ನಮ್ಮ ಬೀಗರ ನೆಂಟರ ಊರುಗಳಿಗೆ ಹೋಗಿ ಹುಡಕಾಡಲಾಗಿ ನನ್ನ ಮಗ ದೇವಪ್ಪ ಈತನು ಎಲ್ಲಿ ಸಿಕ್ಕಿರುವದಿಲ್ಲ. ಇಷ್ಟು ದಿನ ಎಲ್ಲಾ ಕಡೆ ಹುಡುಕಾಡಿದರು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನ್ನ ಮಗ ದೇವಪ್ಪ ತಂದೆ ಶಿವರೆಡ್ಡಿ ಹುಳಗೋಳ ವ|| 21 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಹೋನಗೇರಾ ಜಿ|| ಯಾದಗಿರಿ ಈತನು ದಿನಾಂಕ: 29-08-2022 ರಂದು ಸಾಯಂಕಾಲ 04-00 ಗಂಟೆಗೆ ಹೋನಗೇರಾ ನಮ್ಮ ಅಣ್ಣ ಮಹಾದೇವಪ್ಪ ಈತನ ಮೆನೆಯಿಂದ ಕಾಣೆಯಾಗಿರುತ್ತಾನೆ ಅಂತಾ ಪಿಯರ್ಾಧಿ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 141/2022 ಕಲಂ: 323, 324, 504, 506 ಸಂ.34 ಐಪಿಸಿ : ನಾನು ಲಕ್ಷ್ಮಪ್ಪ ತಂದೆ ಚಿನ್ನಯ್ಯ ಲಿಕ್ಕಿ, ನಾರಾಯಣಪೂರ ಬಡಾವಣೆ, ವಯಸ್ಸುಃ 40 ವರ್ಷ, ಉ|| ಕೂಲಿ, ಸಾ|| ಗುರುಮಠಕಲ್ ಪಟ್ಟಣದ ನಿವಾಸಿ ಇದ್ದು ತಮಗೆ ತಿಳಿಯಪಡಿಸುವದೆನೆಂದರೆ, ನನ್ನ ತಮ್ಮನ ಮಗನಾದ ಗಣೇಶ ತಂದೆ ಶರಣಪ್ಪ ಲಿಕ್ಕಿ, ಆರಾಧನ ಪಬ್ಲಿಕ ಶಾಲೆ ಗುರುಮಠಕಲನಲ್ಲಿ 1 ನೇ ತರಗತಿಯಿಂದ 6 ನೇ ತರಗತಿಯಲ್ಲಿ ವ್ಯಾಸಾಂಗವನ್ನು ಮಾಡಲು ಶಿಕ್ಷಣ ಹಕ್ಕು ಕಾಯ್ದೆ (ಆರ.ಟಿ.ಇ)ಯಲ್ಲಿ ಅಯ್ಕೆಯಾಗಿರುತ್ತಾನೆ. ಆದರೆ ಆರಾಧನ ಪಬ್ಲಿಕ ಶಾಲೆಯ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗದವರು ಸುಮಾರು ಒಂದು ವರ್ಷದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳವನ್ನು ನೀಡುತ್ತಿದ್ದು ಹಾಗೂ ಜಾತಿಯಿಂದ ನಿಂದನೆ ಮಾಡುತ್ತಿದ್ದು, ಶಾಲೆಯಲ್ಲಿ ಉದ್ದೇಶಪೂರ್ವಕವಾಗಿ ನೋಡುತ್ತಿದ್ದುದ್ದಲ್ಲದೆ ಪ್ರಾಣವನ್ನು ಲೆಕ್ಕಿಸದೇ ವಿಧ್ಯಾಥರ್ಿಯು ಮಾನಸಿಕ ಒತ್ತಡಕ್ಕೆ ಗುರಿಯಾಗಿ ದಿನಾಂಕಃ 13/09/2022 ರಂದು ಬೆಳಗ್ಗೆ 09:00 ಗಂಟೆಗೆ ವಿಷ (ಪೆಸ್ಟಿಸೈಡ್) ವನ್ನು ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ವೈದ್ಯರು ರಾಯಚೂರು ಆಸ್ಪತ್ರೆಗೆ ರೆಫರೆನ್ಸ ಮಾಡಿರುತ್ತಾರೆ. ಹಾಗೂ ಪ್ರಾಣ ಹೋಗುವ ಸ್ಥಿತಿಯಲ್ಲಿ ಇರುತ್ತಾನೆ. ಈ ವಿಷಯವನ್ನು ತಿಳಿದು ಶಾಲೆಯ ಯಾರೋಬ್ಬರೂ ಕೂಡ ಕೇಳದೆ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪ್ರಯುಕ್ತ ಈ ಸದರಿ ಶಾಲೆಯ ಮುಖ್ಯಗುರುಗಳ ಮೇಲೆ & ಸಿಬ್ಬಂದಿ ವರ್ಗದವರ ಮೇಲೆ ಎಫ.ಐ.ಆರ. ಪ್ರಕರಣ ದಾಖಲಿಸಬೇಕು ಮತ್ತು ನಮ್ಮ ಮಗನ ಪ್ರಾಣಕ್ಕೆ ಮುಂದಿನ ದಿನಗಳಲ್ಲಿ ಇವರೆ ಹೊಣೆಗಾರರೆಂದು ನಾನು ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದೇನೆ. ಹಾಗೂ ನನ್ನ ಮಗನಿಗಾದ ಅನ್ಯಾಯವನ್ನು ಬೇರೊಬ್ಬ ಬಡ ವಿಧ್ಯಾಥರ್ಿಗೂ ಆಗಬಾರದೆಂಬ ಉದ್ದೇಶದಿಂದ ಈ ಶಾಲೆಯನ್ನು ಮುಚ್ಚುವಂತೆ ಸೂಕ್ತ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ.

ಇತ್ತೀಚಿನ ನವೀಕರಣ​ : 14-09-2022 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080