ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-10-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 149/2022 ಕಲಂ: 279, 337, 338, 304(ಎ) ಐ.ಪಿ.ಸಿ: ಇಂದು ದಿನಾಂಕ: 13/10/2022 ರಂದು ಸಂಜೆ 06.00 ಎ.ಎಂ.ಕ್ಕೆ ಶ್ರೀ ಮಲ್ಲಣ್ಣ ತಂದೆ ಸೂರಪ್ಪ ಹಡಪದ್ ಸಾ|| ದೇವಿನಗರ ಶಹಾಪೂರ ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ದೂರು ಅಜರ್ಿ ಸಾರಾಂಶ ಏನೆಂದರೆ, ನಾನು ದಿನಾಂಕ: 30/08/2022 ರಂದು ಮಧ್ಯಾಹ್ನ 02:30 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಗೆ ಹಾಜರಾಗಿ ದಿನಾಂಕ: 25/08/2022 ರಂದು ಮಧ್ಯಾಹ್ನ 02:15 ಗಂಟೆಗೆ ನನ್ನ ತಮ್ಮನಾದ ಚಂದ್ರಶೇಖರ್ ತಂದೆ ಸೂರಪ್ಪ ಹಡಪದ್ ವ|| 45 ವರ್ಷ ಉ|| ಕುಲಕಸಬು ಸಾ|| ದೇವಿನಗರ ಶಹಾಪೂರ ಈತನು ತನ್ನ ಸ್ಕೂಟಿ ನಂ. ಕೆಎ-32-ಇಟಿ-8041 ನೇದ್ದರ ಮೇಲೆ ಭೀ-ಗುಡಿ ಕಡೆಗೆ ಹೋಗುವ ಕುರಿತು ಶಹಾಪೂರ ನಗರದ ಉಪ್ಪಿಟ್ ಹೊಟೇಲ್ ಮುಂದಿನ ಮುಖ್ಯ ರಸ್ತೆಯ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಒಂದು ಸ್ಕೂಟಿ ನಂ. ಕೆಎ-38-ಇ-2757 ನೇದ್ದರ ಚಾಲಕನಾದ ಗುಲಾಮ ರಸೂಲ್ ತಂದೆ ಖಾಜಾಸಾಬ್ ಶೇಖ್ ಸಾ|| ಶಾ-ಕಾಲೋನಿ ಶಹಾಪೂರ ಈತನು ತನ್ನ ಸ್ಕೂಟಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನ ಸ್ಕೂಟಿಗೆ ಬಲವಾಗಿ ಡಿಕ್ಕಿಪಡಿಸಿದ ಪರಿಣಾಮ ಅಪಘಾತ ಜರುಗಿದ್ದು, ಅಪಘಾತದಲ್ಲಿ ನನ್ನ ತಮ್ಮನಾದ ಚಂದ್ರಶೇಖರ್ ಈತನಿಗೆ ಬಲಮೆಲಕಿಗೆ, ತಲೆಗೆ, ರಕ್ತಗಾಯ ಹಾಗೂ ಭಾರಿ ಗುಪ್ತಗಾಯವಾಗಿದ್ದು, ಅಲ್ಲದೇ ಎರಡೂ ಮೊಳಕಾಲಿಗೆ ತರಚಿದ ಗಾಯಗಳಾಗಿದ್ದು ಕೂಡಲೇ ನನ್ನ ತಮ್ಮನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈಧ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಮೆಟ್ರೋ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ತಮ್ಮ ಠಾಣೆಗೆ ಬಂದು ದೂರು ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಶಹಾಪೂರ ಪೊಲೀಸ್ ಠಾಣೆ ಗುನ್ನೆ. ನಂ. 149/2022 ಕಲಂ 279, 337, 338 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇಂದು ಮುಂದುವರೆದು ಹೇಳುವುದೇನೆಂದರೆ ಕಲಬುರಗಿಯ ಮೆಟ್ರೋ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನನ್ನ ತಮ್ಮ ಅಪಘಾತದಲ್ಲಿ ತನಗೆ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ಇಂದು ಇಂದು ದಿನಾಂಕ: 13/10/2022 ರಂದು 06.45 ಪಿ.ಎಂ.ಕ್ಕೆ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ಪ್ರಕರಣದ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 82/2022 ಕಲಂ 32, 34 ಕೆ.ಇ ಎಕ್ಟ್: ಇಂದು ದಿನಾಂಕ: 13/10/2022 ರಂದು 04.00 ಪಿ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಹೊತಪೇಟ ದಿಬ್ಬಿ ತಾಂಡಾದಆರೋಪಿತನಕಿರಾಣಿಅಂಗಡಿಯಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 04.10 ಪಿ.ಎಮ್ ಕ್ಕೆ ದಾಳಿ ಮಾಡಿಆರೋಪಿತನಿಗೆ ಹಿಡಿದುಆತನಿಂದ1)90 ಎಮ್.ಎಲ್.ನ 46ಓರಿಜಿನಲ್ಚಾಯ್ಸ್ ವಿಸ್ಕಿ ಪೌಚಗಳು ಅ.ಕಿ. 1615.98/- ರೂ, ಮೌಲ್ಯದ ಮದ್ಯವನ್ನುಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 14-10-2022 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080