ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-11-2021

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 58/2021 ಕಲಂ 279, 337, 338, 304(ಎ) ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್ : ಇಂದು ದಿನಾಂಕ:13/11/2021 ರಂದು 01:30 ಎ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಆರ್.ಟಿ.ಎ/ಡೆತ್ ಎಮ್.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ ವಿಚಾರಣೆ ನಂತರ ಪಿಯರ್ಾದಿ ಶ್ರೀಮತಿ.ಪೂಜಾ ಗಂಡ ಸಂತೋಷ ರಾಠೋಡ್, ವಯ:22 ವರ್ಷ, ಜಾತಿ:ಲಮಾಣಿ, ಉ||ಕೂಲಿ, ಸಾ||ಹೊತರ್ಿ ತಾಂಡಾ, ತಾ||ಇಂಡಿ, ಜಿ||ವಿಜಯಪೂರ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಫಿಯರ್ಾದಿ ನೀಡಿದ್ದೇನೆಂದರೆ, ನನ್ನ ತವರು ಮನೆಯು ಹೋತಪೇಟ ತಾಂಡಾ ಶಹಾಪೂರ ಇದ್ದು, ನನಗೆ ಹೊತರ್ಿ ತಾಂಡಾಕ್ಕೆ ಮದುವೆಮಾಡಿಕೊಟ್ಟಿರುತ್ತಾರೆ. ನನ್ನ ಗಂಡನಾದ ಸಂತೋಷ ತಂದೆ ರವಿದಾಸ್ ರಾಠೋಡ್, ಮಾವನಾದ ರವಿದಾಸ್ ತಂದೆ ಖೀರು ರಾಠೋಡ್, ಅತ್ತೆಯಾದ ಅನ್ನಪೂರ್ಣ ಗಂಡ ರವಿದಾಸ್ ರಾಠೋಡ್ ಎಲ್ಲರು ಪುಣೆಯಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತೇವೆ. ನನಗೆ ಕೃಷ್ಣಾ ಹೆಸರಿನ 2.1/2 ತಿಂಗಳ ಮಗನಿರುತ್ತಾನೆ. ನನ್ನ ತಂದೆಯಾದ ಜಯರಾಮ ತಂದೆ ರಾಮಚಂದ್ರ ಚವ್ಹಾಣ, ತಾಯಿಯಾದ ಕವಿತಾ ಗಂಡ ಜಯರಾಮ ಚವ್ಹಾಣ ಇವರು ಸಹ ದುಡಿಯಲು ಪುಣೆಗೆ ಬಂದು ನಮ್ಮ ಜೊತೆಗೆ ಇರುತ್ತಾರೆ. ಹೀಗಿದ್ದು ದಿನಾಂಕ:14/11/2021 ರಂದು ನಮ್ಮ ಸಂಬಂಧಿಕರಾದ ಖೀರು ತಂದೆ ಸಕ್ರು ಚವ್ಹಾಣ ಸಾ||ಕಂಚಗಾರಹಳ್ಳಿ ತಾಂಡಾ ತಾ||ಜಿ||ಯಾದಗಿರಿ ಇವರ ಮನೆಯಲ್ಲಿ ದೇವರ ಕಾರ್ಯಕ್ರಮ ಇದ್ದುದ್ದರಿಂದ ನಮಗೆ ಬರಲು ತಿಳಿಸಿದ್ದು, ಅದರಂತೆ ದಿನಾಂಕ:12/11/2021 ರಂದು ನಾನು ಮತ್ತು ನನ್ನ ಮಗ 2)ಕೃಷ್ಣಾ ಹಾಗು ನನ್ನ ಗಂಡನಾದ 3)ಸಂತೋಷ ತಂದೆ ರವಿದಾಸ್ ರಾಠೋಡ್, ಮಾವನಾದ 4)ರವಿದಾಸ್ ತಂದೆ ಖೀರು ರಾಠೋಡ್, ಅತ್ತೆಯಾದ 5)ಅನ್ನಪೂರ್ಣ ಗಂಡ ರವಿದಾಸ್ ರಾಠೋಡ್, ನನ್ನ ದೊಡ್ಡಪ್ಪನ ಮಗಳಾದ 6)ಲಲಿತಾ ತಂದೆ ಮಾನಸಿಂಗ್ ಚವ್ಹಾಣ, ನನ್ನ ತಂದೆಯಾದ 7)ಜಯರಾಮ ತಂದೆ ರಾಮಚಂದ್ರ ಚವ್ಹಾಣ, ತಾಯಿಯಾದ 8)ಕವಿತಾ ಗಂಡ ಜಯರಾಮ ಚವ್ಹಾಣ ಎಲ್ಲರು ಕೂಡಿಕೊಂಡು ಪುಣೆಯಿಂದ ಯಾದಗಿರಿಗೆ ಚೆನ್ನೈ ಎಕ್ಸಪ್ರೆಸ್ ಟ್ರೇನಿನಲ್ಲಿ ಬಂದು ಯಾದಗಿರಿ ರೈಲ್ವೇ ಸ್ಟೇಶನ್ನಲ್ಲಿ ದಿನಾಂಕ:13/11/2021 ರಂದು ಅಂದಾಜು ರಾತ್ರಿ 12:00 ಗಂಟೆ ಸುಮಾರಿಗೆ ಇಳಿದುಕೊಂಡೆವು. ಯಾದಗಿರಿ ರೈಲ್ವೇ ಸ್ಟೇಶನ್ಗೆ ನಮಗೆ ಕಂಚಗಾರಹಳ್ಳಿ ತಾಂಡಾಕ್ಕೆ ಕರೆದುಕೊಂಡು ಹೋಗಲು ಬಂದಿದ್ದ ಲಕ್ಷ್ಮಣ ತಂದೆ ನಾಮದೇವ ರಾಠೋಡ್ ಈತನ ಆಟೋರಿಕ್ಷಾ ನಂ:ಕೆಎ-33 ಎ-9891 ರಲ್ಲಿ ನಾವೆಲ್ಲರು ಕುಳಿತುಕೊಂಡು ಯಾದಗಿರಿಯಿಂದ ಕಂಚಗಾರಹಳ್ಳಿ ತಾಂಡಾಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಎಡಗಡೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಮುದ್ನಾಳ ಕ್ರಾಸ್ ಹತ್ತಿರ ರಾತ್ರಿ 00:30 ಗಂಟೆ ಸುಮಾರಿಗೆ ನಮ್ಮ ಎದುರುಗಡೆ ವಾಡಿ ಕಡೆಯಿಂದ ಒಂದು ಯಾದಗಿರಿ ಕಡೆಗೆ ಬರುತ್ತಿದ್ದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಮಾರ್ಗವನ್ನು ಬದಲಿಸಿ ಬಲಗಡೆ ಬಂದು ನಮ್ಮ ಆಟೋರಿಕ್ಷಾಕ್ಕೆ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ನಮ್ಮ ಆಟೋರಿಕ್ಷಾ ತಿರುಗಿನಿಂತಿದ್ದು, ಆಟೋರಿಕ್ಷಾದಲ್ಲಿದ್ದ ನಾವೆಲ್ಲರು ಪುಟಿದು ಕೆಳಗಡೆ ಬಿದ್ದೆವು. ಲಾರಿಯು ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಆಟೋರಿಕ್ಷಾದಲ್ಲಿ ನನಗೆ ಮುಖಕ್ಕೆ ಅಲ್ಲಲ್ಲಿ ತರುಚಿದ ಗಾಯಗಳಾಗಿರುತ್ತವೆ. ನನ್ನ ಮಗ ಕೃಷ್ಣಾನಿಗೆ ತಲೆಗೆ ಗುಪ್ತಗಾಯವಾಗಿ ಕಿವಿಯಲ್ಲಿ ರಕ್ತ ಬಂದಿದ್ದು, ನನ್ನ ಗಂಡ ಸಂತೋಷನಿಗೆ ತಲೆಗೆ, ಮುಖಕ್ಕೆ, ಕಣ್ಣಿಗೆ, ಹಣೆಗೆ, ಗದ್ದಕ್ಕೆ ಭಾರಿ ರಕ್ತಗಾಯಗಳಾಗಿರುತ್ತವೆ. ನನ್ನ ಮಾವ ರವಿದಾಸ್ ಇವರಿಗೆ ಎರಡೂ ಮೊಳಕಾಲುಗಳಿಗೆ ಭಾರಿ ರಕ್ತಗಾಯಗಳಾಗಿದ್ದು, ಹಣೆಗೆ, ಮುಖಕ್ಕೆ ರಕ್ತಗಾಯ ಹಾಗು ಗುಪ್ತಗಾಯಗಳಾಗಿರುತ್ತವೆ. ಅತ್ತೆಯಾದ ಅನ್ನಪೂರ್ಣಳಿಗೆ ಎಡಕಾಲು ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು, ಅಲ್ಲಲ್ಲಿ ತರುಚಿದ ಗಾಯಗಳಾಗಿರುತ್ತವೆ. ತಂಗಿಯಾದ ಲಲಿತಾಳಿಗೆ ತಲೆಗೆ ರಕ್ತಗಾಯವಾಗಿದ್ದು, ಅಲ್ಲಲ್ಲಿ ತರುಚಿದ ಗಾಯಗಳಾಗಿರುತ್ತವೆ. ನನ್ನ ತಾಯಿಯಾದ ಕವಿತಾಳಿಗೆ ತುಟಿಗೆ, ಮೂಗಿಗೆ, ಗದ್ದಕ್ಕೆ ರಕ್ತಗಾಯಗಳಾಗಿರುತ್ತವೆ. ರಸ್ತೆಯ ಮೇಲೆ ಬಿದ್ದಿದ್ದ ನನ್ನ ತಂದೆಯಾದ ಜಯರಾಮ ಈತನಿಗೆ ನೋಡಲಾಗಿ ತಲೆಗೆ, ಮುಖಕ್ಕೆ, ಎಡಕೈಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಆಟೋರಿಕ್ಷಾ ಚಾಲಕನಾದ ಲಕ್ಷ್ಮಣನು ಅಪಘಾತದ ರಭಸಕ್ಕೆ ಆಟೋರಿಕ್ಷಾದಲ್ಲಿಯೇ ಸಿಲುಕಿದ್ದು, ನೋಡಲಾಗಿ ಆತನ ತಲೆಗೆ, ಹಣೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿದ್ದು ಮೃತಪಟ್ಟಿದ್ದನು. ಅಪಘಾತಪಡಿಸಿದ ಲಾರಿಯನ್ನು ನೋಡಲಾಗಿ ಅದರ ನಂ: ಎಮ್.ಹೆಚ್-11 ಎ.ಎಲ್-6262 ಇದ್ದು, ಅದರ ಚಾಲಕನಿಗೆ ರಸ್ತೆಯ ಮೇಲೆ ಬರುತ್ತಿದ್ದ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು, ಜನರು ಸೇರಿದ್ದನ್ನು ನೋಡಿ ಆತನು ಅಲ್ಲಿಂದ ಓಡಿಹೋಗಿದ್ದು, ಆತನಿಗೆ ನೋಡಿದರೆ ಗುರುತಿಸುತ್ತೇವೆ. ನಂತರ ನಾನು ಖೀರುರವರಿಗೆ ಫೋನ್ಮಾಡಿ ಅಪಘಾತವಾದ ಬಗ್ಗೆ ತಿಳಿಸಿದೆನು. ಸ್ವಲ್ಪ ಸಮಯದ ನಂತರ ಬಂದ 108 ಅಂಬುಲೆನ್ಸ್ ವಾಹನದಲ್ಲಿ ಗಾಯಗಳಾದ ನಮಗೆಲ್ಲಾ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹಾಕಿಕೊಂಡು ಬಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ನೀಡಿದ ವೈದ್ಯರು ನನ್ನ ಮಗ ಕೃಷ್ಣಾ ಮೃತಪಟ್ಟ ಬಗ್ಗೆ ತಿಳಿಸಿದರು. ವಿಷಯ ತಿಳಿದು ನಮ್ಮ ಸಂಬಂಧಿಕರಾದ ಖೀರು ತಂದೆ ಸಕ್ರು ಚವ್ಹಾಣ, ಚಂದರ ತಂದೆ ರೂಪ್ಲಾ ಚವ್ಹಾಣ, ಜಯರಾಮ ತಂದೆ ರೂಪ್ಲಾ ಚವ್ಹಾಣ ಮತ್ತು ಮೃತ ಲಕ್ಷ್ಮಣನ ತಾಯಿಯಾದ ಸಂಗೀತಾಬಾಯಿ ಗಂಡ ನಾಮದೇವ ರಾಠೋಡ್ ಇವರು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದಿದ್ದು, ನಡೆದ ಘಟನೆಯ ಬಗ್ಗೆ ನಾನು ಅವರಿಗೆ ತಿಳಿಸಿದೆನು. ಈ ಅಪಘಾತವು ದಿನಾಂಕ:13/11/2021 ರಂದು 00:30 ಗಂಟೆಯ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಮುದ್ನಾಳ ಕ್ರಾಸ್ ಸಮೀಪ ಸಂಭವಿಸಿದ್ದು, ಅಪಘಾತಪಡಿಸಿ ಓಡಿಹೋದ ಲಾರಿ ನಂ: ಎಮ್.ಹೆಚ್-11 ಎ.ಎಲ್-6262 ರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯನ್ನು 02:00 ಎ.ಎಂ.ದಿಂದ 03:00 ಎ.ಎಂ. ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 03:15 ಎ.ಎಂ.ಕ್ಕೆ ಬಂದು ಫಿಯರ್ಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:58/2021 ಕಲಂ:279, 337, 338, 304(ಎ) ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 132/2021 ಕಲಂ: 143, 147, 504, 324, 323, 506 ಸಂ 149 ಐಪಿಸಿ : ಇಂದು ದಿನಾಂಕ:13/11/2021 ರಂದು 6-45 ಪಿಎಮ್ ಕ್ಕೆ ಶ್ರೀ ವೆಂಕಟೇಶ ಹೆಚ್.ಸಿ 78 ರವರು ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು ಬಂದು ಗಾಯಾಳು ಯಲ್ಲಮ್ಮ ಗಂಡ ಮರೆಪ್ಪ ಇವಳ ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದರ ಸಾರಾಂಶವೇನಂದರೆ ನನ್ನ ಮಗ ಅಯ್ಯಣ್ಣ ತಂದೆ ಮರೆಪ್ಪ ಪೂಜಾರಿ ಈತನಿಗೆ ನಮ್ಮ ಅಣ್ಣ ಉಮಾಪತಿ ಈತನ ಮಗಳಾದ ದೇವಮ್ಮ ಇವಳೊಂದಿಗೆ ಮದುವೆ ಮಾಡಿರುತ್ತೇವೆ. ಕೆಲ ದಿನ ನನ್ನ ಮಗನೊಂದಿಗೆ ಸೊಸೆ ದೇವಮ್ಮ ಸರಿಯಾಗಿ ಸಂಸಾರ ಮಾಡಿಕೊಂಡಿದ್ದಳು, ನಂತರ ಗಂಡ-ಹೆಂಡತಿ ಮಧ್ಯ ಸ್ವಲ್ಪ ಭಿನ್ನಾಭಿಪ್ರಾಯವಾಗಿ ಕೆಲ ದಿನಗಳ ನಂತರ ನನ್ನ ಸೊಸೆ ತನ್ನ ತವರು ಮನೆಗೆ ವಾಪಸ ಹೋಗಿದ್ದಳು. ನನ್ನ ಮಗ ಅಯ್ಯಣ್ಣನ ಹಿರಿ ಮಗಳಾದ ಗೌತಮಿ ಈಕೆಗೆ ಆರೋಗ್ಯ ಸರಿ ಇಲ್ಲದೆ ಪಾರ್ಶವಾಯು ಆಗಿತ್ತು. ನನ್ನ ಸೊಸೆ ತವರು ಮನೆಗೆ ಹೋದಾಗ ನನ್ನ ಮೊಮ್ಮಗಳಾದ ಗೌತಮಿ ಇವಳಿಗೆ ತವರು ಮನೆಯವರು ಆಸ್ಪತ್ರೆಗೆ ತೋರಿಸುತ್ತಾ ಬಂದಿದ್ದರು. ಹೀಗಿದ್ದು ಈಗ ಕೆಲ ದಿನಗಳ ಹಿಂದೆ ನಮ್ಮ ಸೊಸೆ ದೇವಮ್ಮ ಮತ್ತು ನನ್ನ ಮಗ ಅಯ್ಯಣ್ಣನಿಗೆ ನಮ್ಮ ಹಿರಿಯರು ಕೂಡಿಸಿಕೊಂಡು ಬುದ್ದಿ ಮಾತು ಹೇಳಿದ್ದರಿಂದ ದೇವಮ್ಮ ಪುನಃ ನಮ್ಮ ಮನೆಗೆ ಬಂದು ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು. ಹೀಗಿದ್ದು ನನ್ನ ಮೊಮ್ಮಗಳಾದ ಗೌತಮಿ ಇವಳು ಪಾರ್ಶವಾಯು ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ:10/11/2021 ರಂದು ಬೆಳಗಿನ ಸಮಯದಲ್ಲಿ ಮೃತಪಟ್ಟಳು. ಆಗ ನಾವು ಅವಳ ಮೃತ ದೇಹವನ್ನು ನಮ್ಮ ಮನೆ ಮುಂದೆ ಹಾಕಿಕೊಂಡು ನಾವು ಅಳುತ್ತಾ ಕರೆಯುತ್ತಾ ಕುಂತಿದ್ದಾಗ ಮದ್ಯಾಹ್ನ 2-45 ಗಂಟೆ ಸುಮಾರಿಗೆ ನಮ್ಮ ಅಣ್ಣನ ಮಕ್ಕಳಾದ 1) ಸಂತೋಷ ತಂದೆ ಉಮಾಪತಿ, 2) ಆನಂದ ತಂದೆ ಉಮಾಪತಿ, 3) ಸತೀಶ ತಂದೆ ಉಮಾಪತಿ, 4) ಆಕಾಶ ತಂದೆ ಉಮಾಪತಿ, 5) ಬಸಮ್ಮ ಗಂಡ ಉಮಾಪತಿ, 6) ಜ್ಯೋತಿ ತಂದೆ ಉಮಾಪತಿ, 7) ರಾಜೇಶ್ವರಿ ಗಂಡ ಸಂತೋಷ ಮತ್ತು ನನ್ನ ಸೊಸೆ 8) ದೇವಮ್ಮ ಗಂಡ ಅಯ್ಯಣ್ಣ ಎಲ್ಲರೂ ಸಾ:ವಡಗೇರಾ ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಬಂದವರೆ ನನಗೆ ಮತ್ತು ನನ್ನ ಮಗ ಅಯ್ಯಣ್ಣನಿಗೆ ಲೇ ಭೊಸುಡಿ, ರಂಡಿ ಮಕ್ಕಳೆ ನಾವು ಗೌತಮಿಗೆ ಆಸ್ಪತ್ರೆಗೆ ಇತ್ತಿಚ್ಚಿನವರೆಗೆ ಸರಿಯಾಗಿ ತೋರಿಸಿ, ಈಗ ನಿಮ್ಮ ಮನೆಗೆ ಕಳುಹಿಸಿದ್ದೇವೆ. ಆದರೆ ನೀವು ಅವಳಿಗೆ ಆಸ್ಪತ್ರೆಗೆ ತೋರಿಸದೆ ಮನೆಯಲ್ಲಿ ಹಾಕಿಕೊಂಡು ಕುಂತಿರಿ ಸೂಳೆ ಮಕ್ಕಳೆ ಎಂದು ಜಗಳ ತೆಗೆದವರೆ ನನ್ನ ಮಗ ಅಯ್ಯಣ್ಣನಿಗೆ ಆನಂದ ಮತ್ತು ಸತೀಶ ಇಬ್ಬರೂ ಸೇರಿ ತೆಕ್ಕೆ ಕುಸ್ತಿ ಹಿಡಿದುಕೊಂಡಾಗ ಸಂತೋಷ ಈತನು ಕೈ ಮುಷ್ಠಿ ಮಾಡಿ ಮುಖಕ್ಕೆ ಮತ್ತು ಎದೆಗೆ ಗುದ್ದಿದನು. ಬಿಡಿಸಲು ಹೊದ ನನಗೆ ಬಸಮ್ಮ ಗಂಡ ಉಮಾಪತಿ ಇವಳು ಹಿಡಿದುಕೊಂಡಾಗ ನನ್ನ ಸೊಸೆ ದೇವಮ್ಮ ಅಲ್ಲೆ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ತೆಲೆ ಹಿಂಭಾಗ ಹೊಡೆದು ಒಳಪೆಟ್ಟು ಮಾಡಿದಳು. ಜ್ಯೋತಿ ಮತ್ತು ರಾಜೇಶ್ವರಿ ಇಬ್ಬರೂ ಬಂದು ನನ್ನ ಮುಖ ಮತ್ತು ಮತ್ತು ಮೂಗಿಗೆ ಕೈ ಯಿಂದ ಗುದ್ದಿದ್ದರು. ನನ್ನ ಮೂಗಿನಿಂದ ರಕ್ತ ಸ್ರಾವವಾಗಿರುತ್ತದೆ. ಬಿಡಿಸಲು ಬಂದ ನಮ್ಮ ಮಾವನ ಮಗನಾದ ಮಲ್ಲಪ್ಪನಿಗೆ ಆಕಾಶ ಈತನು ಕೈಯಿಂದ ಹೊಡೆದಿರುತ್ತಾನೆ. ಜಗಳ ಬಿಡಿಸಲು ಬಂದ ನನ್ನ ಮಗಳು ರೇಣುಕಾ ಇವಳಿಗೆ ದೇವಮ್ಮ ಅದೇ ಕಟ್ಟಿಗೆಯಿಂದ ಹಣೆಗೆ ಹೊಡೆದಿದ್ದರಿಂದ ಅವಳಿಗೆ ತೂತು ಬಿದ್ದ ರಕ್ತಗಾಯವಾಗಿರುತ್ತದೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ರಾಮಪ್ಪ ತಂದೆ ಓಂಕಾರ ಪೂಜಾರಿ ಮತ್ತು ಹಣಮಂತ ತಂದೆ ತಿರುಕಯ್ಯ ಇವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ, ಭೊಸುಡಿ ಮಕ್ಕಳೆ ನಿಮಗೆ ಇನ್ನೊಂದು ಸಲ ಬಂದು ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ನಾವು ವಡಗೇರಾ ಸರಕಾರಿ ಆಸ್ಪತ್ರೆಗೆ ಬಂದು ಪ್ರಥಮ ಉಪಚಾರ ಪಡೆದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಇಲ್ಲಿ ಉಪಚಾರ ಪಡೆಯುತ್ತಿದ್ದೇನೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುತ್ತಿದ್ದೇವೆ. ಕಾರಣ ನಮಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 132/2021 ಕಲಂ:143, 147, 504, 323, 324, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 167/2021 ಕಲಂ: 379 ಐ.ಪಿ.ಸಿ : ಇಂದು ದಿನಾಂಕ 13/11/2021 ರಂದು 8.00 ಎಎಮ್ಕ್ಕೆ ಫಿಯರ್ಾದಿದಾರರಾದ ಶ್ರೀ ರೇವಣಸಿದ್ದ ತಂದೆ ಬೀರಪ್ಪ ಅಮ್ಮಕ್ಕೋಳ್ ವ|| 30 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಮಾಲಹಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿಯ ಸಾರಾಂಶವೇನೆಂದರೆ, ನಮ್ಮವು 100 ಕುರಿಗಳು ಇದ್ದು ನಮ್ಮೂರಿನ ಹತ್ತಿರ ಕುರಿ ಮೇಯಿಸಲು ಹೆಚ್ಚಾಗಿ ಜಾಗ ಇಲ್ಲದಿದ್ದುದರಿಂದ ಕುರಿಗಳನ್ನು ಮೇಯಿಸಿಕೊಂಡು ಬಂದು ನಿಲ್ಲಿಸಲು ಕೆಂಭಾವಿ ಸಮೀಪದ ಮೂರು ಗೇಟ್ ಕೆನಾಲ್ ಹತ್ತಿರ ಇರುವ ಕೆಬಿಜೆಎನ್ಎಲ್ ಜಾಗದಲ್ಲಿ ನಾವು ಹಾಕಿದ ಕುರಿ ಹಟ್ಟಿಯಲ್ಲಿ ನಿಲ್ಲಿಸುತ್ತಿದ್ದೆವು. ದೊಡ್ಡ ಕುರಿಗಳನ್ನು ಹಗಲಿನಲ್ಲಿ ಮೇಯಿಸಲು ಸ್ವಲ್ಪ ದೂರ ತೆಗೆದುಕೊಂಡು ಹೋಗುತ್ತಿದ್ದೆವು. ಕೆಲವೊಂದು ಮರಿಗಳನ್ನು ಕಟ್ಟಿ ಮೇಯಿಸುವ ಸಲುವಾಗಿ ಹಟ್ಟಿಯಲ್ಲಿಯೇ ಹಾಕಿ ಕುರಿ ಮೇಯಿಸಲು ಹೋಗುತ್ತಿದ್ದೆವು. ಅದರಂತೆ ನಿನ್ನೆ ದಿನಾಂಕ 12/11/2021 ರಂದು ಮುಂಜಾನೆ 10.00 ಗಂಟೆಗೆ ನಮ್ಮ ಕುರಿಗಳನ್ನು ಮೇಯಿಸಲು ಗೊಗಡಿಹಾಳ ಕೆನಾಲ್ ಕಡೆಗೆ ಹೊಡೆದುಕೊಂಡು ಹೋಗಿದ್ದು ನಮ್ಮ ಕುರಿ ಹಟ್ಟಿಯಲ್ಲಿ ಕಟ್ಟಿ ಮೇಯಿಸುವ 25 ಮರಿಗಳನ್ನು ಮತ್ತು 15 ಸಣ್ಣ ಮರಿಗಳನ್ನು ನಿಲ್ಲಿಸಿ ನಾನು, ನಮ್ಮ ತಂದೆಯಾದ ಬೀರಪ್ಪ ಮತ್ತು ನಮ್ಮ ತಮ್ಮನಾದ ಮಲ್ಲಪ್ಪ ಮೂರು ಜನರು ಹೋಗಿದ್ದೆವು. ನಂತರ ದಿನಾಂಕ 12/11/2021 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ನಮ್ಮ ಕುರಿ ಹಟ್ಟಿಯ ಹತ್ತಿರ ನಾನು ಹೋಗಿ ನೋಡಲಾಗಿ ಕುರಿ ಹಟ್ಟಿಯಲ್ಲಿ ನಿಲ್ಲಿಸಿದ್ದ 40 ಮರಿಗಳಲ್ಲಿ 1 ಮರಿ ಅಂದಾಜು 6000 ರೂಪಾಯಿ ಕಿಮ್ಮತ್ತಿನದು ಕಾಣಲಿಲ್ಲ. ಆಗ ನಾನು ಗಾಬರಿಯಾಗಿ ಎಲ್ಲಿಯಾದರೂ ಹೋಗಿರಬಹುದು ಅಂತ ತುಂಬಾ ಕಡೆಗೆ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ನಮ್ಮ ಕುರಿ ಹಟ್ಟಿಯಲ್ಲಿ ನಿಲ್ಲಿಸಿದ್ದ 6000 ರೂಪಾಯಿ ಕಿಮ್ಮತ್ತಿನ ಒಂದು ಕುರಿಯ ಮರಿಯನ್ನು ನಾವು ಯಾರೂ ಇಲ್ಲದಿರುವುದನ್ನು ಗಮನಿಸಿ ಯಾರೋ ಕಳ್ಳರು ದಿನಾಂಕ 12/11/2021 ರಂದು ಮುಂಜಾನೆ 10.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಬಗ್ಗೆ ನಿನ್ನೆ ಸಂಜೆಯವರೆಗೂ ಎಲ್ಲಾ ಕಡೆಗೂ ಹುಡುಕಾಡಿ ನೋಡಲಾಗಿ ಎಲ್ಲಿಯೂ ನಮ್ಮ ಕುರಿ ಕಾಣಲಿಲ್ಲ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ಅಜರ್ಿ ಸಲ್ಲಿಸಿದ್ದು, ಕಾರಣ ನನ್ನ ಕಳುವಾದ 6000/- ರೂ ಕಿಮ್ಮತ್ತಿನ 1 ಕುರಿಯನ್ನು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ: 167/2021 ಕಲಂ 379 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

 


ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 173/2021 ಕಲಂ: 143, 147, 148, 323, 324, 326, 354, 307, 504, 506 ಸಂ. 149 ಐಪಿಸಿ : ಇಂದು ದಿನಾಂಕ:13/11/2021 ರಂದು 6.00 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಶಿಶ್ರೀ ಮಾಳಪ್ಪ ತಂದೆ ವಗ್ಗರಾಯಪ್ಪ ಬನ್ನೆಟ್ಟಿ ವ|| 25 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಬೈರಿಮಡ್ಡಿ ಇವರ ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಮ್ಮೂರ ಸಿಮಾಂತರದ ನಮ್ಮ ಚಿಕ್ಕಪ್ಪ ದಿ.ಮಾಳಪ್ಪ ತಂದೆ ರಾಯಪ್ಪ ಬನ್ನೆಟ್ಟಿ, ನಮ್ಮ ಅಜ್ಜಿಯಾದ ಸಿದ್ದಮ್ಮ ಗಂಡ ರಾಯಪ್ಪ ಬನ್ನೆಟ್ಟಿ ಇವರ ಹೆಸರಿನಲ್ಲಿ ಹೊಲ ಸವರ್ೇ ನಂ.61 ನೇದ್ದು ಇದ್ದು ಒಟ್ಟು 4 ಎಕರೆ ಹೊಲ ಇರುತ್ತದೆ. ನಮ್ಮ ಹೊಲದ ಆಜು ಬಾಜು ಹೊಲದವರಾದ ದೇವಿಂದ್ರಪ್ಪ ತಂದೆ ಭಗವಂತಪ್ಪ ರವರ ಹೆಸರಿನಲ್ಲಿ ಹೊಲ ಸವರ್ೇ ನಂ.61 ರಲ್ಲಿ 4 ಎಕರೆ 20 ಗುಂಟೆ ಜಮೀನು ಇದ್ದು ಭಗವಂತಪ್ಪ ಬನ್ನೆಟ್ಟಿ ಇವರ ಹೆಸರಿನಲ್ಲಿ ಹೊಲ ಸವರ್ೇ ನಂ. 55 ರಲ್ಲಿ 7 ಎಕರೆ 10 ಗುಂಟೆ ಜಮೀನು ಇರುತ್ತದೆ. ಈ ಎರಡು ಹೊಲಗಳ ಮದ್ಯದಲ್ಲಿ ನಮ್ಮ ಹೊಲ ಇರುತ್ತದೆ. ಬಸವರಾಜ ತಂದೆ ಭಗವಂತಪ್ಪ ಬನ್ನೆಟ್ಟಿ ಇವರು ತಮ್ಮ ಹೊಲಗಳಿಗೆ ಹೊಗಬೇಕಾದರೆ ನಮ್ಮ ಹೊಲದಲ್ಲಿ ನಡುವ ಹೊಲದಿಂದ ಹಾದು ಹೊಗುತ್ತಿದ್ದರು. ನಾವು ಅವರಿಗೆ ನಮ್ಮ ಹೊಲದಲ್ಲಿ ಹಾದು ಹೋಗುವುದು ಮಾಡಬೇಡರಿ ದಾರಿ ಹಿಡಿದು ಬಂದು ನಿಮ್ಮ ನಿಮ್ಮ ಹೊಲಗಳಿಗೆ ಹೊಗರಿ ಅಂತಾ ಹೇಳಿದೇವು. ಅದಕ್ಕೆ ಅವರು ನಾವು ಇಲ್ಲೇ ಹಾದು ಹೊಗುತ್ತೇವೆ ನೀವೇನು ಮಾಡಕೊತ್ತಿರಿ ಮಾಡಿಕೊರಿ ಅಂತಾ ಅಂದಿದ್ದಕೆ ನಾವು ಸುಮ್ಮನಿದ್ದರೂ ಕೂಡ ಆಗಾಗ ನಮ್ಮ ಜೊತೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡುತ್ತಾ ಬಂದ್ದಿದ್ದರು. ಆದರೂ ನಾವು ಸುಮ್ಮನೆ ಇದ್ದೇವು. ಹಿಗಿದ್ದು ದಿನಾಂಕ:09/11/2021 ರಂದು ಮುಂಜಾನೆ 7:30 ಗಂಟೆಗೆ ನಾನು ಮತ್ತು ಚಿಕ್ಕಪ್ಪಂದಿರರಾದ ಹಣಮಂತ ತಂದೆ ಬಸಣ್ಣ ಸಣ್ಣಮಲ್ಲಪ್ಪರ ವ|| 38 ವರ್ಷ, ಭೀಮಣ್ಣ ತಂದೆ ಬಸಣ್ಣ ಸಣ್ಣಮಲ್ಲಪ್ಪರ ವ|| 50 ವರ್ಷ, ತಮ್ಮ ಮೌನೇಶ ತಂದೆ ಭೀಮಣ್ಣ ಸಣ್ಣಮಲ್ಲಪ್ಪರ ವ|| 28 ವರ್ಷ, ಚಿಕ್ಕಮ್ಮ ಹಣಮಂತಿ ಗಂಡ ಹಣಮಂತ ಸಣ್ಣಮಲ್ಲಪ್ಪರ ಎಲ್ಲರು ಕೂಡಿ ಹೊಲಕ್ಕೆ ಹತ್ತಿ ಬಿಡಿಸಲು ಹೊಗುತ್ತಿದ್ದಾಗ ನಮ್ಮೂರ ಸಿಮಾಂತರದ ಮದನ್ಗೊಪಾಲ ನಾಯಕ ಇವರ ಹೊಲ ಸವರ್ೇ ನಂ.1 ನೇದ್ದರಲ್ಲಿ ಹಾದುಹೊಗುತ್ತಿದ್ದಾಗ ನಮ್ಮೂರ ನಮ್ಮ ಜನಾಂಗದವರಾದ 1) ಬಸವರಾಜ ತಂದೆ ಭಗವಂತಪ್ಪ ಬನ್ನೆಟ್ಟಿ, 2) ಬಲಭೀಮರಾಯ ತಂದೆ ಭಗವಂತಪ್ಪ ಬನ್ನೆಟ್ಟಿ, 3) ದೇವಿಂದ್ರಪ್ಪ ತಂದೆ ಭಗವಂತಪ್ಪ ಬನ್ನೆಟ್ಟಿ, 4) ಬಸವರಾಜ ತಂದೆ ನಾಗಪ್ಪ ಹುಂಡೆಕಲ್, 5) ಶಂಕ್ರೆಮ್ಮ ಗಂಡ ಬಲಭೀಮರಾಯ ಬನ್ನೆಟ್ಟಿ, 6) ವಿಜಯಮ್ಮ ಗಂಡ ದೇವಿಂದ್ರಪ್ಪ ಬನ್ನೆಟ್ಟಿ, 7) ಗೌರಮ್ಮ ಗಂಡ ಬಸವರಾಜ ಬನ್ನೆಟ್ಟಿ, 8) ಮಲ್ಲಮ್ಮ ಗಂಡ ಬಸವರಾಜ ಹುಂಡೇಕಲ್, ಎಲ್ಲರುಕೂಡಿ ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಬಂದವರೇ ಅವರಲ್ಲಿಯ ಬಸವರಾಜ ಇತನು ನಮ್ಮ ಚಿಕ್ಕಪ್ಪ ಹಣಮಂತ ಇತನಿಗೆ ಏಲೇ ಹಣಿಮ್ಯಾ ಸೂಳಿಮಗನೆ ನೀವು ಯಾಕೆ ನಮ್ಮ ಹೊಲದಲ್ಲಿ ಹಾದು ಹೊಗುತ್ತಿರಿ ಸೂಳಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಮ್ಮ ಚಿಕ್ಕಪ್ಪ ಇತನು ಬಹುಕಾಲದ ದಾರಿ ಇದೆ. ದಾರಿಯಿಂದ ಹೊಗುತ್ತಿದ್ದೇವೆ ಅಂತಾ ಅಂದಿದಕ್ಕೆ ಬಸವರಾಜ ಇತನು ನಮ್ಮ ಚಿಕ್ಕಪ್ಪ ಹಣಮಂತನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಚಿಕ್ಕಪ್ಪನಿಗೆ ಮೂಗಿನ ಮೇಲೆ ಹೊಡೆದು ಕಟ್ಟಾದ ಭಾರಿ ರಕ್ತಗಾಯ ಮಾಡಿದ್ದು, ಬಲಭೀಮರಾಯ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಬಿಡಿಸಲು ಹೊದ ನಮ್ಮ ಚಿಕ್ಕಮ್ಮಳಿಗೆ ದೇವಿಂದ್ರಪ್ಪ ಇತನು ಬಡಿಗೆಯಿಂದ ಮೈಕೈಗೆ ಹೊಡೆದು ಎದೆಯ ಮೇಲಿನ ಸೀರೆ ಸೇರಗು ಹಿಡಿದು ಎಳೆದಾಡಿ ಅವಮಾನಗೊಳಿಸಿದನು. ಶಂಕ್ರೆಮ್ಮ ಇವಳು ಕೈಯಿಂದ ಮೈಕೈಗೆ ಹೊಡೆದು ಗುಪ್ತಗಾಯ ಮಾಡಿದಳು. ಚಿಕ್ಕಪ್ಪ ಭೀಮಣ್ಣ ಇತನಿಗೆ ವಿಜಯಮ್ಮ ಇವಳು ಕೈಯಿಂದ ಮೈಕೈಗೆ ಹೊಡೆದಳು, ಬಸವರಾಜ ಇತನು ಕಲ್ಲಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ತಮ್ಮ ಮೌನೇಶ ಇತನಿಗೆ ಗೌರಮ್ಮ, ಮಲ್ಲಮ್ಮ ಇವರು ತಮ್ಮ ಕೈಯಲ್ಲಿದ್ದ ಬಡಿಗಯಿಂದ ಮೈಕೈಗೆ ಹೊಡೆದು ಗುಪ್ತಗಾಯ ಮಾಡಿದರು. ನಾನು ಮತ್ತು ಅದೇ ಸಮಯಕ್ಕೆ ತಮ್ಮ ತಮ್ಮ ಹೊಲಗಳಿಗೆ ಹೊರಟಿದ್ದ ಅಜರ್ುನ ತಂದೆ ನಿಂಗಪ್ಪ ಯಕ್ಷಿಂತಿ, ಬಲಭೀಮ ತಂದೆ ಬಸಣ್ಣ ಬೊಮ್ಮನಹಳ್ಳಿ, ಮಲ್ಲಿಕಾಜರ್ುನ ತಂದೆ ಚಿನ್ನಪ್ಪ ಕುರಿ, ಶ್ರೀನಿವಾಸ ತಂದೆ ದ್ಯಾವಣ್ಣ ಕ್ಯಾದಿಗೇರಿ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರೂ, ಇವರು ಬಂದು ಜಗಳ ಬಿಡಿಸಿದ್ದಾರೆ ಅಂತಾ ಇವತ್ತು ನಿಮಗೆ ಬಿಟ್ಟಿವಿ ಸೂಳೆ ಮಕ್ಕಳೆ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ಗಾಯಗೊಂಡ ಹಣಮಂತ, ಭೀಮಣ್ಣ, ಮೌನೇಶ, ಹಣಮಂತಿ ಇವರೆಲ್ಲರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಸೇರಿಕೆ ಮಾಡಿದೇವು. ಚಿಕ್ಕಪ್ಪ ಹಣಮಂತ ಇವರಿಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೊಗಲು ಹೇಳಿದ್ದರಿಂದ 108 ವಾಹನದಲ್ಲಿ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೊಗಿ ಸೇರಿಕೆ ಮಾಡಿದೇವು, ಈ ಘಟನೇಯ ಬಗ್ಗೆ ನಮ್ಮ ಚಿಕ್ಕಪ್ಪಂದಿರರ ಜೊತೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನ್ನ ಚಿಕ್ಕಪ್ಪಂದಿರರಾದ ಹಣಮಂತ, ಭೀಮಣ್ಣ, ಚಿಕ್ಕಮ್ಮ ಹಣಮಂತಿ, ತಮ್ಮ ಮೌನೇಶ, ಇವರುಗಳು ಕೊಲೆ ಮಾಡುವ ಉದ್ದೇಶದಿಂದ ಹೊಡೆಬಡೆ ಮಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ. ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ173/2021 ಕಲಂ: 143, 147, 148, 323, 324, 326, 354, 307, 504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 


ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ
153/2021 ಕಲಂ:279,337,338,ಐ.ಪಿ.ಸಿ.ಮತ್ತು 187 ಐ.ಎಮ್.ವಿ.ಆಕ್ಟ್ : ಇಂದು ದಿನಾಂಕ 13/11/2021 ರಂದು ಮದ್ಯಾಹ್ನ 12-30 ಗಂಟೆಗೆ ಗಾಯಾಳು ಫಿರ್ಯಾಧಿದಾರನಾದ ಶರಣಪ್ಪ ತಂದೆ ಮಹಾದೇವಪ್ಪ ಹಿರೆಬಾನರ ವಯಾಃ 65 ವರ್ಷ ಜಾಃ ಕಬ್ಬಲಿಗ ಉಃ ಒಕ್ಕಲುತನ ಸಾಃ ಯರಗೊಳ ತಾಃ ಯಾದಗಿರ ಇವರು ಯುನಿಟೆಡ್ ಆಸ್ಪತ್ರೆ ಕಲಬುಗರ್ಿಯಲ್ಲಿ ಸೇರಿಕೆಯಾಗಿದ್ದು ಸದರಿ ಗಾಯಳು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಹೀಗಿರುವಾಗ ಇಂದು ದಿನಾಂಕ 13/11/2021 ರಂದು ಬೆಳಗ್ಗೆ 9:30 ಗಂಟೆಯ ಸುಮಾರಿಗೆ ನಮ್ಮ ಯರಗೊಳ ಗೇಟ್ (ಬಸ್ ನಿಲ್ದಾಣದ) ಹತ್ತಿರ ನಮ್ಮ ಊರಿನ ಬಸವರಾಜ ಚಿಲಗಡಗಿ ರವರ ಟಂ ಟಂ ಸಂಖ್ಯೆ ಕೆ.ಎ.33/ಎ.4962 ನೆದ್ದರಲ್ಲಿ ಕುಳಿತು ರಸ್ತೆಯ ಮುಖಾಂತರ ನಮ್ಮ ಊರಿಗೆ ಹೊರಟಿದ್ದೆ ಸದರಿ ಟಂ ಟಂ ನಲ್ಲಿ ಯಾಗಪೂರದ ಈಶಪ್ಪ ತಂದೆ ತಾಯಪ್ಪ ತಳಗೆರಿ ಮತ್ತು ಭೀಮಾಶಂಕರ ತಂದೆ ತಾಯಪ್ಪ ತಳಗೇರಿ ಇವರು ಸಹ ನಾಲವಾರ ಕಡೆಗೆ ಹೊರಟ್ಟಿದ್ದರು ಸುಮಾರು 15 ನಿಮಿಷ ನಂತರ ನನ್ನ ಹೊಲದ ಸಮಿಪ ಬಂದಾಗ ಹವಳಪ್ಪನ ಹೊಲದ ಹತ್ತಿರ ಬಂದಾಗ ಹಿಂದಿನಿಂದ ಒಂದು ಗೂಡ್ಸ್ ವಾಹನವಾದ ಮೂರು ಗಾಲಿಯ ಟಂ ಟಂ ನಂ.ಕೆ.ಎ.32/ಡಿ.0656 ನೇದ್ದರ ಚಾಲಕನು ಹಿಂದುಗಡೆಯಿಂದ ಬಂದು ತನ್ನ ವಾಹವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ನಾವು ಕುಳಿತು ಕೊಂಡು ಹೊಗುತ್ತಿರುವ ಟಂ ಟಂ ಕ್ಕೆ ಹಿಂದುಗಡೆಯಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನಗೆ ಎಡಗಡೆ ತಲೆಯ ಮೇಲಿಕಿಗೆ ರಕ್ತ ಗಾಯ ಮತ್ತು ಗುಪ್ತಗಾಯ ವಾಗಿರುತ್ತದೆ,ಎಡಗಡೆ ಕಣ್ಣುಗೆ ಗುಪ್ತಗಾಯ,ಎಡಗಡೆ ಬಗಲಿನ ಪಕ್ಕೆಲುಬಿಗೆ ಗುಪ್ತಗಾಯ, ಬಲಗಡೆ ಹಸ್ತಕ್ಕೆ ಗುಪ್ತಗಾಯ,ಬಲಕಾಲಿನ ಮೋಣಕಾಲಿಗೆ ಗುಪ್ತಗಾಯ ಹಾಗೂ ನನ್ನಂತೆ ಸಹಪಯಣಿಗಾ ಈಶಪ್ಪ ತಾಯಪ್ಪ ತಳಗೆರಿ ಇತನಿಗೆ,ತಲೆಗೆ ಬಾರಿ ಗಾಯವಾಗಿದ್ದು,ಬಲಗಾಲಿಗೆ ಗುಪ್ತಗಾಯ,ಮತ್ತು ಭೀಮಾಶಂಕರ ತಂದೆ ತಾಯಪ್ಪ ತಳಗೇರಿ ವ:22 ವರ್ಷ ಉ:ಗಾರೆ ಕೆಲಸ ಇತನಿಗೆ ತಲೆಗೆ ಗುಪ್ತ ಗಾಯ, ಬಲಗಾಲಿನ ತೊಡೆಗೆ ಗುಪ್ತಗಾಯ,ಹೊಟ್ಟೆಯ ಕೇಳಗಡೆ ಗುಪ್ತ ಗಾಯವಾಗಿರುತ್ತವೆ ಸದರಿ ಅಪಘಾತದ ವಿಷಯವನ್ನು ನಮ್ಮ ಸಂಬಂಧಿಕನಾದ ಶಂಕರ ತಂದೆ ಹಣಮಂತು ರಾಠೋಡ ಇವನಿಗೆ ಪೋನ ಮಾಡಿ ತಿಳಿಸಿದ್ದು. ಸದರಿ ವಿಷಯವನ್ನು 108 ಅಂಬುಲೆನ್ಸಕ್ಕೆ ಪೋನ ಮಾಡಿ ಸ್ಥಳಕ್ಕೆ ಕರೆಯಿಸಿ ಅಪಘಾತದಲ್ಲಿ ಗಾಯಹೊಂದಿದ್ದ ನಾವು ಮೂರು ಜನರನ್ನು ಹಾಕಿಕೊಂಡು ಕಲಬುಗರ್ಿಯ ಯುನಿಟೆಡ್ ಆಸ್ಪತ್ರೆಗೆ ಉಪಚಾರಕ್ಕಾಗಿ ತಂದು ಸೇರಿಕೆ ಮಾಡಿರುತ್ತಾರೆ. ಸದರಿ ಅಪಘಾತಪಡಿಸಿ ಗೂಡ್ಸ್ ಟಂ ಟಂ ಚಾಲಕ ಹೆಸರು ಸಚಿನ ಅಂತಾ ಗೊತ್ತಾಗಿದ್ದು ಇರುತ್ತದೆ.ಸದರಿ ವ್ಯಕ್ತಿಯು ಓಡಿಹೋಗಿರುತ್ತಾನೆ. ಸದರಿ ಅಪಘಾತ ಮಾಡಿದ ಚಾಲಕ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಹೇಳಿಕೆ ನೀಡಿದ್ದು ಇರುತ್ತದೆ ಸದರಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ರಾತ್ರಿ 8:30 ಗಂಟೆಗೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 153/2021 ಕಲಂ. 279, 337, 338 ಐಪಿಸಿ ಮತ್ತು 187 ಐ.ಎಮ.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 14-11-2021 12:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080