ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-11-2022

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 127/2022 ಕಲಂ: 279, 338 ಐಪಿಸಿ: ಇಂದು ದಿನಾಂಕ:13/11/2022 ರಂದು 5-30 ಪಿಎಮ್ ಕ್ಕೆ ಶ್ರೀ ಜಂಭಣ್ಣ ತಂದೆ ದೇವಿಂದ್ರಪ್ಪ ಕಾವಲಿ, ವ:45, ಜಾ:ಬೇಡರ, ಉ:ಒಕ್ಕಲುತನ ಸಾ:ಹಾಲಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮಣ್ಣ ಮಲ್ಲಯ್ಯ ತಂದೆ ದೇವಿಂದ್ರಪ್ಪ ಕಾವಲಿ, ವ:52 ಸಾ:ಹಾಲಗೇರಾ ಈತನು ಯಾದಗಿರಿಯ ಸ್ಟೇಷನ ಬ್ರ್ಯಾಂಚ ಪೋಸ್ಟ್ ಆಫಿಸನಲ್ಲಿ ಪೋಸ್ಟ್ ಮ್ಯಾನ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದನು. ಸದರಿ ನಮ್ಮಣ್ಣನು ತನ್ನ ಹೆಂಡತಿ ಸವಿತಾ ಮತ್ತು ಇಬ್ಬರೂ ಗಂಡು ಮಕ್ಕಳಾದ ನಿಂಗಪ್ಪ, ಮೂಕಪ್ಪ ಇವರೊಂದಿಗೆ ಯಾದಗಿರಿಯ ಎಲ್.ಐ.ಸಿ ಆಫೀಸ ಸಮೀಪ ಮನೆ ಮಾಡಿಕೊಂಡು ಯಾದಗಿರಿಯಲ್ಲಿ ವಾಸವಿದ್ದು, ಆಗಾಗ ಹಾಲಗೇರಾಕ್ಕೆ ಬಂದು ಹೊಲ ಮನೆ ನೋಡಿಕೊಂಡು ಹೋಗುತ್ತಿರುತ್ತಾನೆ. ಹೀಗಿದ್ದು ದಿನಾಂಕ:08/11/2022 ರಂದು ಬೆಳಗ್ಗೆ ನಮ್ಮಣ್ಣ ಮಲ್ಲಯ್ಯನು ಯಾದಗಿರಿಯಿಂದ ಹಾಲಗೇರಾಕ್ಕೆ ಬಂದು ತನ್ನ ಹೊಲ ಮನೆ ನೋಡಿಕೊಂಡು 8-30 ಎಎಮ್ ಸುಮಾರಿಗೆ ತಾನು ತಂದಿದ್ದ ಟಿವ್ಹಿಎಸ್ ಎಕ್ಸೆಲ್ ಸುಪರ್ ಮೊಪೆಡ್ ನಂ. ಕೆಎ 33 ಜೆ 1527 ನೇದರ ಮೇಲೆ ತಾನೇ ಚಲಾಯಿಸಿಕೊಂಡು ಮರಳಿ ಯಾದಗಿರಿಗೆ ಹೊದನು. ನಾನು ಮನೆಯಲ್ಲಿದ್ದೇನು. ನಮ್ಮಣ್ಣ ಹೊದ ಕೆಲ ಹೊತ್ತಿನ ನಂತರ ಬೆಳಗ್ಗೆ 9 ಗಂಟೆ ಸುಮಾರಿಗೆ ನಮ್ಮೂರ ನಾಗಪ್ಪ ತಂದೆ ಪರಪ್ಪ ಕರಡಿ ಎಂಬುವವರು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಕೆಲಸದ ನಿಮಿತ್ಯ ನಾಯ್ಕಲಕ್ಕೆ ಹೋಗುವ ಸಲುವಾಗಿ ವಡಗೇರಾ ಕ್ರಾಸಿನಲ್ಲಿ ಅಟೋಗಳ ಸಲುವಾಗಿ ನಿಂತುಕೊಂಡಿದ್ದಾಗ ನಿಮ್ಮಣ್ಣನು ಹಾಲಗೇರಾದಿಂದ ಯಾದಗಿರಿಗೆ ಟಿವ್ಹಿಎಸ್ ಎಕ್ಸೆಲ್ ಸುಪರ್ ಮೊಪೆಡ್ ಮೇಲೆ ಹೋಗುತ್ತಿದ್ದಾಗ ಯಾದಗಿರಿ-ಶಹಾಪೂರ ಮೇನ ರೋಡ ವಡಗೇರಾ ಕ್ರಾಸನಲ್ಲಿ ಯಾದಗಿರಿ ಕಡೆಯಿಂದ ಬರುತ್ತಿದ್ದ ಕಲ್ಯಾಣ ಕನರ್ಾಟಕ ಸಾರಿಗೆ ಬಸ್ ನಂ. ಕೆಎ 32 ಎಫ್ 1855 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಬಸ್ಸಿನ ಹಿಂದಿನ ಗಾಲಿಯ ಮಡಗಡ್ಡ ನಿಮ್ಮಣ್ಣನ ಮೊಪೆಡಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿ, ನಿಮ್ಮಣ್ಣನಿಗೆ ಭಾರಿ ಗಾಯಗಳಾಗಿರುತ್ತವೆ. ನಿಮ್ಮಣ್ಣನಿಗೆ ನಾವು 108 ಅಂಬ್ಯುಲೇನ್ಸನಲ್ಲಿ ಹಾಕಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದನು. ಆಗ ನಾನು ಅಪಘಾತದ ಮತ್ತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಷಯವನ್ನು ನಮ್ಮಣ್ಣನ ಹೆಂಡತಿ-ಮಕ್ಕಳಿಗೆ ಫೋನ ಮಾಡಿ ವಿಷಯ ತಿಳಿಸಿ, ಆಸ್ಪತ್ರೆಗೆ ಬರುವಂತೆ ಹೇಳಿ ನಾನು ಹೊರಟು ವಡಗೇರಾ ಕ್ರಾಸಿಗೆ ಬಂದು ಅಪಘಾತ ಸ್ಥಳ ಮತ್ತು ವಾಹನಗಳನ್ನು ನೋಡಿ ಬಸ್ಸಿನ ಚಾಲಕ ಮತ್ತು ಕಂಡಕ್ಟರನಿಗೆ ನೋಡಿಕೊಂಡು ಅಲ್ಲಿಂದ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿದ್ದ ನಮ್ಮಣ್ಣನಿಗೆ ನೋಡಲಾಗಿ ಅಪಘಾತದಲ್ಲಿ ಆತನ ತಲೆಯ ಎಡಭಾಗಕ್ಕೆ ಒಳಪೆಟ್ಟು, ಬಲಗೈ ಮುಂಗೈಗೆ ಒಳಪೆಟ್ಟಾಗಿ ಎಲುಬು ಮುರಿದಿದ್ದು, ಎಡಗಾಲ ಮೊಣಕಾಲ ಕೆಳಗಡೆ ಭಾರಿ ರಕ್ತಗಾಯವಾಗಿದ್ದು, ಎಡಗಾಲ ಹಿಮ್ಮಡಿ ಮೇಲೆ ಎಲುಬು ಮುರಿದಿತ್ತು. ಅಲ್ಲಿಯೇ ಆಸ್ಪತ್ರೆಯಲ್ಲಿದ್ದ ನಾಗಪ್ಪ ತಂದೆ ಪರಪ್ಪನಿಗೆ ಅಪಘಾತದ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನಂದರೆ ನಾನು ಕೆಲಸದ ನಿಮಿತ್ಯ ನಾಯ್ಕಲ್ ಕ್ಕೆ ಹೋಗಲು ಅಟೋಗಳ ದಾರಿ ಕಾಯುತ್ತಾ ವಡಗೇರಾ ಕ್ರಾಸಿನಲ್ಲಿ ನಿಂತುಕೊಂಡಿದ್ದೆನು. ಆಗ ಬೆಳಗ್ಗೆ 9 ಎಎಮ್ ಸುಮಾರಿಗೆ ನಿಮ್ಮಣ್ಣನು ಹಾಲಗೇರಾ ಕಡೆಯಿಂದ ತನ್ನ ಟಿವ್ಹಿಎಸ್ ಎಕ್ಸೆಲ್ ಸುಪರ್ ಮೊಪೆಡ್ ಮೇಲೆ ಯಾದಗಿರಿ ಕಡೆ ಹೋಗುತ್ತಿದ್ದಾಗ ಯಾದಗಿರಿ-ಶಹಾಪೂರ ಮೇನ ರೋಡ ವಡಗೇರಾ ಕ್ರಾಸಿನಲ್ಲಿ ಯಾದಗಿರಿ ಕಡೆಯಿಂದ ಬರುತ್ತಿದ್ದ ಕಲ್ಯಾಣ ಕನರ್ಾಟಕ ಸಾರಿಗೆ ಬಸ್ ನಂ. ಕೆಎ 32 ಎಫ್ 1855 ನೇದನ್ನು ಅದರ ಚಾಲಕನಾದ ಮಲ್ಲಪ್ಪ ತಂದೆ ಶಿವಪ್ಪ ಪ್ಯಾರಶಾಲಿ ಸಾ:ಮೇದಾಗಲ್ಲಿ ಸುರಪೂರ ಯಾದಗಿರಿ ಡಿಪೋ ಈತನು ತನ್ನ ಬಸನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಬಸ್ಸಿನ ಹಿಂದಿನ ಗಾಲಿಯ ಮಡಗಡ್ಡ ವಡಗೇರಾ ಕಡೆಯಿಂದ ಹೊರಟ ನಿಮ್ಮಣ್ಣನ ಮೊಪೆಡಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿರುತ್ತದೆ ಎಂದು ಹೇಳಿದನು. ಅಪಘಾತವನ್ನು ಬಸ್ಸಿನ ನಿವರ್ಾಹಕ ಸೂರ್ಯಕಾಂತ ತಂದೆ ಶಿವರಾಜಪ್ಪ ಅಂಗಡಿ ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಇನ್ನು ಇತರರು ನೋಡಿರುತ್ತಾರೆ ಎಂದು ಹೇಳಿದನು. ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಎಮ್.ಎಲ್.ಸಿ ಆಗಿದ್ದರಿಂದ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ನಮ್ಮಣ್ಣನಿಗೆ ಆಸ್ಪತ್ರೆಗೆ ತೋರಿಸುವವರು ಯಾರು ಇಲ್ಲ. ಆದ್ದರಿಂದ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಯಾದಗಿರಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಬೇರೆ ದೊಡ್ಡ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರಿಂದ ನಮ್ಮಣ್ಣನಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೇವು. ನಮ್ಮಣ್ಣನಿಗೆ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಸಿ, ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಬಸ್ಸಿನ ಚಾಲಕನಾದ ಮಲ್ಲಪ್ಪ ತಂದೆ ಶಿವಪ್ಪ ಪ್ಯಾರಶಾಲಿ ಸಾ:ಮೆದಾಗಲ್ಲಿ ಸುರಪೂರ ಯಾದಗಿರಿ ಡಿಪೋ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 127/2022 ಕಲಂ:279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 14-11-2022 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080