ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-12-2021

ಸೈದಾಪೂರ ಪೊಲೀಸ ಠಾಣೆ
177/2021 ಕಲಂ 323, 341, 427,447, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 13.12.2021 ರಂದು ಮಧ್ಯಾಹ್ನ 1 ಗಂಟೆಗೆ ದೂರು ಅಜರ್ಿದಾರನಾದ ತಿಮೋತಿ ತಂದೆ ಜ್ಞಾನಮಿತ್ರ ಹೊಸಮನಿ ಇವರು ಸೈದಾಪುರ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ ಸಾರಾಂಶವೇನೆಂದರೆ, ನನ್ನಣ್ಣ ಇಮಾನ್ಯುವೆಲ್ ತಂದೆ ಜ್ಞಾನಮಿತ್ರ ಅವನ ಹೆಂಡತಿ ಮಾರ್ತಮ್ಮ ಅವರ ಮಕ್ಕಳಾದ ಚಾಲರ್ಿ, ಯೋಹಾನ ಇವರೆಲ್ಲರೂ ದಿನಾಂಕ 11.12.2021 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಮ್ಮ ಜಮೀನುದಲ್ಲಿ ಅಕ್ರಮ ಪ್ರವೇಶ ಮಾಡಿ ನಮ್ಮ ಜಮೀನದಲ್ಲಿನ ಬೋರವೆಲಗೆ ಹಾಕಿದ ಪೈಪಗಳನ್ನು ಕಿತ್ತಿ ಬಿಸಾಡುತ್ತಿದ್ದಾಗ ಅಲ್ಲಿಗೆ ಹೋದ ನಾನು ನಮ್ಮ ಹೊಲದಲ್ಲಿನ ಬೋರವೆಲ್ ಪೈಪಗಳನ್ನು ಯಾಕೆ ಕಿತ್ತಿಹಾಕುತ್ತಿದ್ದೀರಿ ಅಂತ ಅಂದಿದ್ದಕ್ಕೆ ನನಗೆ ಇಮಾನ್ಯುವೆಲ್ ಈತನು ಬೋಸಡಿ ಮಗನೆ, ರಂಡಿ ಮಗನ್ಯ ಅಂತಾ ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿಯನ್ನು ಹಿಡಿದು ನಿಲ್ಲಿಸಿ ಕೈಯಿಂದ ಎಡಕಿಗೆ ಹೊಡೆದು ದೊಬ್ಬಿರುತ್ತಾನೆ. ಇದನ್ನು ಸಿಡಿ ಮಾಡಿರುತ್ತೇವೆ ಮತ್ತು ನನ್ನ ಹೆಂಡತಿ ಶಾರದಮ್ಮಳಿಗೆ ರಂಡಿ, ಬೋಸಡಿ ಅಂತಾ ಬೈದಿದ್ದು ಆತನ ಮಕ್ಕಳಾದ ಚಾಲರ್ಿ, ಯೋಹಾನ ಮತ್ತು ಆತನ ಹೆಂಡತಿಯಾದ ಮಾರ್ತಮ್ಮ ಇವರೆಲ್ಲರೂ ನಮ್ಮ ಹೊಲದಲ್ಲಿನ ಮೋಟಾರ್ ಬಂದ್ ಮಾಡಿರುತ್ತಾರೆ. ಇಮಾನ್ಯುವೆಲ್ ಹೊಲದಲ್ಲಿನ ಪೈಪಗಳನ್ನು ಕಿತ್ತಿ ಮುರಿದು ಹಾಕಿರುತ್ತಾನೆ. ಇದರಿಂದಾಗಿ ನಮ್ಮ ಹೊಲದಲ್ಲಿನ ಶೇಂಗಾ ಬೆಳೆ ಒಣಗಿ ನಷ್ಟವುಂಟಾಗಿರುತ್ತದೆ. ಸಿಮನ್ ತಂದೆ ಇಮಾನ್ಯುವೆಲ್ ಈತನು ನಮಗೆ ಜೀವ ಹೊಡೆಯಲು ಫೋನಿನಲ್ಲಿ ತಿಳಿಸಿರುತ್ತಾನೆ. ನಮಗಾಗಲಿ ನಮ್ಮ ಮಕ್ಕಳಿಗಾಗಲಿ ಏನಾದರೂ ತೊಂದರೆಯಾದರೆ ಇವರೇ ಕಾರಣರಾಗಿರುತ್ತಾರೆ. ಕಾರಣ ನಮ್ಮ ಜಮೀನುದಲ್ಲಿ ಅಕ್ರಮ ಪ್ರವೇಶ ಮಾಡಿ ಜಮೀನುದಲ್ಲಿನ ಬೋರವೆಲ್ ಮುರಿದು ಹಾಕಿ ನನಗೆ ಮತ್ತು ನನ್ನ ಹೆಂಡತಿಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಸದರಿ ಮೇಲ್ಕಂಡ 5 ಜನರು ಇನ್ನೊಂದು ಸಾರಿ ನಮ್ಮ ಜಮೀನು ಮತ್ತು ಬೋರವೆಲ್ ಸಮೀಪ ಬರದಂತೆ ತಡೆಯಬೇಕು ನನ್ನ ಅಣ್ಣ ದಿನಾಲೂ ರಾತ್ರಿವೇಳೆ ನಮ್ಮ ಮನೆಯ ಮುಂದೆ ಬಂದು ನಮ್ಮನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾನೆ. ಸದರಿಯವರ ಮೇಲೆ ಕೇಸು ಮಾಡುವದನ್ನು ಮನೆಯಲ್ಲಿ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 178/2021 ಕಲಂ: 323, 324, 498(ಎ), 504, 506 ಸಂ 34 ಐಪಿಸಿ : ದಿನಾಂಕ 13/12/2021 ರಂದು 08.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಚಂದಮ್ಮ ಗಂಡ ಸಾಯಬಣ್ಣ ಬೊಮ್ಮನಳ್ಳಿ ವ|| 30 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಆಲಾಳ ಹಾ|| ವ|| ನೀರಲಗಿ ತಾ|| ತಾಳಿಕೋಟಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನನಗೆ ಸುಮಾರು 10-12 ವರ್ಷಗಳ ಹಿಂದೆ ಆಲಾಳ ಗ್ರಾಮದ ಸಾಯಬಣ್ಣ ತಂದೆ ಬಸಪ್ಪ ಬೊಮ್ಮನಳ್ಳಿ ಇವರಿಗೆ ಕೊಟ್ಟು ಮದುವೆ ಮಾಡಿದ್ದು ನಾನು ಹಾಗೂ ನನ್ನ ಗಂಡ ಮೊದಲು 7-8 ವರ್ಷಗಳವರೆಗೆ ಉತ್ತಮವಾಗಿ ಸಂಸಾರ ಸಾಗಿಸಿದ್ದು ನಮಗೆ ಸದ್ಯ 4 ವರ್ಷದ ಪ್ರವೀಣ ಎನ್ನುವ ಒಬ್ಬ ಗಂಡು ಮಗನಿರುತ್ತಾನೆ. ಈಗ್ಗೆ ಸುಮಾರು 1 ವರ್ಷದ ಹಿಂದಿನಿಂದ ನನ್ನ ಗಂಡನಾದ ಸಾಯಬಣ್ಣ ಬೊಮ್ಮನಳ್ಳಿ ಈತನು ನಿನಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಅಂತಾ ನನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದರಿಂದ ನಾನು ಸುಮಾರು 1ವರ್ಷದ ಹಿಂದೆ ನನ್ನ ತವರುಮನೆಯಾದ ತಾಳಿಕೋಟಿ ತಾಲೂಕಿನ ನೀರಲಗಿ ಗ್ರಾಮದ ನನ್ನ ತಂದೆ ತಾಯಿಯವರ ಹತ್ತಿರ ವಾಸವಾಗಿರುತ್ತೇನೆ. ಹೀಗಿದ್ದು ಇಂದು ದಿನಾಂಕ 13/12/2021 ರಂದು ನನ್ನ ಗಂಡನು ಆಲಾಳ ಗ್ರಾಮದ ನಮ್ಮ ಹಳೆಯ ಜಾಗದಲ್ಲಿ ಮನೆಯು ಕಟ್ಟುತ್ತಿದ್ದು ಅದು ನನಗೆ ಇಷ್ಟವಿರಲಿಲ್ಲ. ಮನೆ ಕಟ್ಟುವ ವಿಷಯ ಗೊತ್ತಾಗಿ ಇಂದು ನಾನು ಹಾಗೂ ನನ್ನ ತಾಯಿಯಾದ ಗುರಮ್ಮ ಗಂಡ ಮರೆಪ್ಪ ಅಸ್ಕಿ ಹಾಗೂ ನಮ್ಮ ತಮ್ಮನಾದ ಪರಶುರಾಮ ತಂದೆ ಮರೆಪ್ಪ ಅಸ್ಕಿ ನಾವು ಮೂರೂ ಜನರು ಕೂಡಿ ಮುಂಜಾನೆ 10.00 ಗಂಟೆಗೆ ಆಲಾಳ ಗ್ರಾಮಕ್ಕೆ ಬಂದು ನನ್ನ ಗಂಡನು ಮನೆ ಕಟ್ಟುವ ಜಾಗದ ಹತ್ತಿರ ಹೋಗಿ ನನ್ನ ಗಂಡನಿಗೆ ನೀನು ಏಕೆ ಮನೆ ಕಟ್ಟುವ ವಿಷಯ ನಮಗೆ ಹೇಳಿಲ್ಲ ಮತ್ತು ಈ ಜಾಗದಲ್ಲಿ ಮನೆ ಕಟ್ಟುವುದು ಬೇಡ ಅಂತಾ ಈ ಮೊದಲೇ ಹೇಳಿದ್ದೆನು, ಆದರೂ ನೀನು ಇಲ್ಲಿಯೇ ಏಕೆ ಕಟ್ಟುತ್ತಿರುವಿ ಇಲ್ಲಿ ಮನೆ ಕಟ್ಟಬೇಡ ಅಂತಾ ಅಂದಾಗ ನನ್ನ ಗಂಡನಾದ ಸಾಯಬಣ್ಣನು ಏನಲೇ ಸೂಳಿ ನಿನಗೆ ಕಣ್ಣು ಸರಿ ಕಾಣಲ್ಲ ನೀನು ನಮ್ಮ ಹತ್ತಿರ ಬರಬೇಡ ಅಂತಾ ಹೇಳಿದರೂ ಮತ್ತೇ ಏಕೆ ಬಂದಿರುವಿ ಅಂತಾ ನನ್ನೊಂದಿಗೆ ಜಗಳಕ್ಕೆ ಬಿದ್ದವನೇ ನನಗೆ ತನ್ನ ಕೈಯಿಂದ ಕಪಾಳಕ್ಕೆ ಹೊಡೆದು, ನನ್ನ ಬೆನ್ನಿಗೆ ಹೊಡೆಯುತ್ತಿದ್ದಾಗ ನಮ್ಮ ತಾಯಿಯಾದ ಗುರಮ್ಮ ಹಾಗೂ ತಮ್ಮನಾದ ಪರಶುರಾಮ ಇವರು ಜಗಳ ಬಿಡಿಸಲು ಬಂದಾಗ ನನ್ನ ಗಂಡನು ಗುರಮ್ಮ ಇವಳಿಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿ ದಬ್ಬಿಸಿ ಕೊಟ್ಟಿದ್ದರಿಂದ ನಮ್ಮ ತಾಯಿಯ ಬಲಗೈಗೆ ಒಳಪೆಟ್ಟು ಗಾಯವಾಗಿರುತ್ತದೆ. ನಂತರ ಗೌಂಡಿ ಜನರಾದ ಶಾಂತಪ್ಪ ತಂದೆ ನಾಗಪ್ಪ ಮೋಪಗಾರ ಮತ್ತು ದೇವಪ್ಪ ತಂದೆ ನಾಗಪ್ಪ ಮೋಪಗಾರ ಇವರಿಬ್ಬರೂ ಬಂದು ನಮ್ಮ ತಮ್ಮನಾದ ಪರಶುರಾಮನ ಬೆನ್ನಿಗೆ ಕೈಯಿಂದ ಹೊಡೆದು ಈ ಸೂಳೆ ಮಗನ ಸೊಕ್ಕು ಜಾಸ್ತಿಯಾಗಿದೆ ಒಂದು ಕೈ ನೋಡೋಣ ಅಂತಾ ಅವಾಚ್ಯವಾಗಿ ಬೈದು ಹೊಡೆಯುತ್ತಿದ್ದಾಗ ನಾವು ನೆಲಕ್ಕೆ ಬಿದ್ದು ಚೀರಾಡುತ್ತಿದ್ದೆವು. ಆಗ ಅಲ್ಲಿಯೇ ಹತ್ತಿರದಲ್ಲಿದ್ದ ನಮ್ಮ ಮೈದುನನಾದ ಸಂಗಪ್ಪ ಬೊಮ್ಮನಳ್ಳಿ ಹಾಗೂ ನಮ್ಮ ಸಂಬಂಧಿಕನಾದ ಸುಭಾಸ ಮಲ್ಕಾಪೂರ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ನನ್ನ ಗಂಡನಾದ ಸಾಯಬಣ್ಣ ಮತ್ತು ಗೌಂಡಿ ಜನರಾದ ಶಾಂತಪ್ಪ ಮತ್ತು ದೇವಪ್ಪ ಇವರು ಇದೊಂದು ಸಲ ಉಳಿದೀರಿ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಮ್ಮ ತಾಯಿಯವರಿಗೆ ಕೆಂಭಾವಿ ಸಕರ್ಾರಿ ದವಾಖಾನೆಗೆ ತೋರಿಸಿಕೊಂಡು ಠಾಣೆಗೆ ತಡವಾಗಿ ಬಂದಿದ್ದು ನಮ್ಮೊಂದಿಗೆ ಜಗಳ ಮಾಡಿ ನನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು ಅಲ್ಲದೇ ಮನೆ ಕಟ್ಟಲು ಬೇಡ ಅಂದಿದ್ದಕ್ಕೆ ಜಗಳ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ನನ್ನ ಗಂಡ ಹಾಗೂ ಇನ್ನಿಬ್ಬರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 178/2021 ಕಲಂ 323, 324, 498(ಎ), 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 14-12-2021 11:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080