ಅಭಿಪ್ರಾಯ / ಸಲಹೆಗಳು

                                                                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-12-2022
ಶೋರಾಪೂರ  ಪೊಲೀಸ್ ಠಾಣೆ:-
ಗುನ್ನೆ ನಂ: 164/2022 ಕಲಂ 279, 304(ಎ) ಐಪಿಸಿಮತ್ತು 187 ಐ.ಎಮ್.ವಿಆಕ್ಟ್: ಇಂದು ದಿಃ 13-12-2022 ರಂದು 9-15 ಎ.ಎಮ್ ಕ್ಕೆ ಶ್ರೀ ಮುದಕಪ್ಪತಂದೆಯಂಕಣ್ಣ ಶುಕ್ಲಾ ಸಾಃ ಸತ್ಯಂಪೇಟಇವರುಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ 1) ಭೀಮಾಶಂಕರ 2) ನಿರ್ಮಲಾ ಹಾಗು 3) ಶಿವು ಅಂತ03 ಜನ ಮಕ್ಕಳಿರುತ್ತಾರೆ. ನನ್ನ ಹಿರಿಯ ಮಗನಾದ ಭೀಮಾಶಂಕರವಯಃ 20 ವರ್ಷಇತನು ಹಸನಾಪೂರದಲ್ಲಿರುವ ಶ್ರೀ ಶರಣಬಸವ ಅಪ್ಪಾಕಾಲೇಜಿನಲ್ಲಿ ಬಿ.ಕಾಂ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಗೆ ರಜೆಇದ್ದಾಗ ಕೂಲಿಕೆಲಸಕ್ಕೆ ಹೋಗುತ್ತಿದ್ದನು. ಅದರಂತೆ ನಿನ್ನೆ ಚೌಡೇಶ್ವರಿಹಾಳ ಗ್ರಾಮದ ಶ್ರೀನಿವಾಸ ಪೊಲೀಸಪಾಟೀಲ್ಇವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗಿ ಸಾಯಂಕಾಲ ಮರಳಿ ಮನೆಗೆ ಬಂದಾಗ, ಶ್ರೀನಿವಾಸಪಾಟೀಲರು ನಾಳೆ ಬೆಳಗಿನ ಜಾವ ಬೇಗ ಕೂಲಿಕೆಲಸಕ್ಕೆ ಬರುವಂತೆ ಹೇಳಿದ್ದಾರೆ ಅಂತ ತಿಳಿಸಿದ್ದನು. ನಂತರಇಂದು ಬೆಳಿಗ್ಗೆ 5-00 ಗಂಟೆಯ ಸುಮಾರಿಗೆ ನನ್ನ ಮಗ ಭೀಮಾಶಂಕರ ಹಾಗು ನಮ್ಮೂರಿನ ಶರಣಪ್ಪತಂದೆಯಂಕಪ್ಪ ನಾಯ್ಕೋಡಿಇಬ್ಬರೂ ಶ್ರೀನಿವಾಸ ಪೊಲೀಸಪಾಟೀಲ್ ಸಾ: ಚೌಡೇಶ್ವರಿಹಾಳ ಇವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗುತ್ತೇವೆಅಂತ ಹೇಳಿ ಹೋಗಿದ್ದರು. ನಂತರ ಬೆಳಗಿನ 6-30 ಗಂಟೆಯ ಸುಮಾರಿಗೆ ಶರಣಪ್ಪತಂದೆಯಂಕಪ್ಪ ನಾಯ್ಕೋಡಿಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ಭೀಮಾಶಂಕರಇಬ್ಬರೂಒಂದುಅಟೋರಿಕ್ಷಾದಲ್ಲಿ ಕನರ್ಾಳ ಕ್ರಾಸ್ ವರೆಗೆ ಬಂದುಅಲ್ಲಿಂದ ಚೌಡೇಶ್ವರಿಹಾಳ ಕಡೆಗೆ ನಡೆದುಕೊಂಡು ಹೊರಟಿದ್ದಾಗ ಕೃಷ್ಣಾ ನದಿಗೆ ಹೋಗುವ ಕ್ರಾಸ್ರಸ್ತೆಯ ಸಮೀಪ ರಾಧಾಕೃಷ್ಣರೆಡ್ಡಿಎಂಬುವವರ ಮನೆಯ ಹತ್ತಿರಎದುರಿನಿಂದಟಿಪ್ಪರ ನಂಬರ ಕೆ.ಎ 51 ಸಿ 4637 ನೇದ್ದರ ಚಾಲಕನು ತನ್ನಟಿಪ್ಪರಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಭೀಮಾಶಂಕರನಿಗೆ ಡಿಕ್ಕಿಪಡಿಸಿದರಿಂದ ಆತನುರಸ್ತೆಯ ಮೇಲೆ ಬಿದ್ದಾಗಟಿಪ್ಪರಆತನ ಮೇಲಿಂದ ಹಾದು ಹೋಗಿದ್ದರಿಂದತಲೆಗೆ ಭಾರಿರಕ್ತಗಾಯವಾಗಿಒದ್ದಾಡಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಟಿಪ್ಪರ ಚಾಲಕನು ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿ ಇಳಿದಾಗ ನಾವು ಚಾಲಕನಿಗೆ ನಿಧಾನವಾಗಿ ನಡೆಸಲು ಆಗುವದಿಲ್ಲ ಏನು ಅಂತ ಹೇಳಿ ಬಳಿಕ ಆತನ ಹೆಸರು ವಿಳಾಸ ವಿಚಾರಿಸಲಾಗಿಯಲ್ಲಪ್ಪತಂದೆದೇವಪ್ಪ ಗಲಗ ಸಾಃ ಹೇಮನೂರಅಂತ ಹೇಳಿರುವ ಬಗ್ಗೆ ತಿಳಿಸಿದನು. ಆಗ ನಾನು ಮತ್ತು ನನ್ನಅಣ್ಣತಮ್ಮಕೀಯ ಗೋಪಾಲ ಶುಕ್ಲಾ, ಸಿದ್ದಪ್ಪ ಕೊಡಚಿಎಲ್ಲರೂಸ್ಥಳಕ್ಕೆ ಹೋಗಿ ನನ್ನ ಮಗನ ಮೃತದೇಹವನ್ನು ನೋಡಿದ್ದು, ಆಗ ಟಿಪ್ಪರ ಚಾಲಕನು ತನ್ನಟಿಪ್ಪರ ಸಮೇತ ಸ್ಥಳದಿಂದ ಓಡಿ ಹೋಗಿರುವ ಬಗ್ಗೆ ತಿಳಿದು ಬಂದಿರುತ್ತದೆ.ಅಪಘಾತವಾದಾಗ ಸಮಯ ಬೆಳಗಿನ 6-00 ಗಂಟೆಆಗಿರಬಹುದು. ಕಾರಣಅತಿವೇಗ ಮತ್ತುಅಲಕ್ಷತನದಿಂದಟಿಪ್ಪರ ನಡೆಸಿ ನನ್ನ ಮಗನಿಗೆ ಅಪಘಾತಪಡಿಸಿದ ಚಾಲಕನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 164/2022 ಕಲಂ: 279, 304(ಎ) ಐ.ಪಿ.ಸಿ ಮತ್ತುಕಲಂ. 187 ಐ.ಎಮ್.ವಿಆಕ್ಟ್ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 208/2022 ಕಲಂ 379 ಐಪಿಸಿ: ಇಂದು ದಿನಾಂಕ: 13/12/2022 ರಂದು ಸಾಯಂಕಾಲ: 5-10 ಪಿ.ಎಂ ಕ್ಕೆ ಠಾಣೆಗೆ ಪಿರ್ಯಾದಿದಾರರಾದ ಶ್ರೀ ಥಾರೇಶ ತಂದೆ ಈಶಪ್ಪ ವಿ ವಯ: 27 ವರ್ಷ ಜಾ|| ಲಿಂಗಾಯತ ಉ: 108 ಆಂಬ್ಯೂಲೇನ್ಸ ಜಿಲ್ಲಾ ವ್ಯವಸ್ತಾಪಕರು ಯಾದಗಿರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ. ನಾನು  ಥಾರೇಶ ತಂದೆ ಈಶಪ್ಪ ವಿ ವಯ: 27 ವರ್ಷ ಜಾ|| ಲಿಂಗಾಯತ ಉ: 108 ಆಂಬ್ಯೂಲೇನ್ಸ ಜಿಲ್ಲಾ ವ್ಯವಸ್ತಾಪಕರು ಯಾದಗಿರ ಸಾ: ಯು ರಾಜಾಪೂರ ತಾ: ಸಂಡೂರ ಜಿ: ಬಳ್ಳಾರಿ ಹಾ: ವ: ಕನಕನಗರ ಯಾದಗಿರ ಮೋ. ನಂ: 6360902979, 8762792962 ಇದ್ದು ತಮ್ಮಲ್ಲಿ ದೂರು ನೀಡುವುದೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ಈಗ ಸುಮಾರು 02 ವರ್ಷಗಳಿಂದ 108 ವ್ಯವಸ್ಥಾಪಕ ಅಂತ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಹೀಗಿದ್ದು ದಿನಾಂಕ: 24/11/2022 ರಂದು  ಶಹಾಪೂರ ತಾಲೂಕಿನ ಶಿರವಾಳ ಲೋಕೆಶನ ವ್ಯಾಪ್ತಿಗೆ ಬರುವ ಏರಿಯಾದಲ್ಲಿ ನಮ್ಮ 108 ವಾಹನ ನಂ:ಕೆಎ-51 ಜಿ-5447 ನೇದ್ದು ನೇಮಿಸಿದ್ದು, ಸದರಿ ವಾಹನಕ್ಕೆ ಚಾಲಕ ಅಂತ ಮುತ್ತನಗೌಡ ಹಾಗೂ ಇಎಂಟಿ (ಸ್ಟಾಫ್ ನರ್ಸ) ಅಂತ ಶಶಿಕಾಂತರಾಜು ರವರಿಗೆ ನೇಮಿಸಿದ್ದು ಇಬ್ಬರೂ ದಿನಾಂಕ: 24/11/2022 ರಂದು ರಾತ್ರಿ ಕರ್ತವ್ಯ ನಿರ್ವಹಿಸಿ ಮರುದಿನ ದಿನಾಂಕ: 25/11/2022 ರಂದು ಬೆಳಗ್ಗೆ 8-30 ಗಂಟೆಗೆ ತಮ್ಮ ಕರ್ತವ್ಯ ಮುಗಿಸಿಕೊಂಡು 108 ವಾಹನದಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿರುವಾಗ 108 ವಾಹನಕ್ಕೆ ಅಳವಡಿಸಿದ ವೆಂಟಿಲೇಟರ್ ನೋಡಲಾಗಿ ವಾಹನದಲ್ಲಿ ಕಾಣಲಿಲ್ಲ. ಆಗ 108 ಕರ್ತವ್ಯ ನಿರ್ವಹಿಸಲು ಬಂದ ಮಲ್ಲಿಕಾಜರ್ುನ ನಾಯಕ ಚಾಲಕ ಹಾಗೂ ಸ್ಟಾಫ್ ನರ್ಸ ಸಂಗಮ್ಮ ರವರಿಗೆ ಚಾರ್ಜ ವಹಿಸುವಾಗ ಸದರಿ ಆಂಬ್ಯೂಲೆನ್ಸನಲ್ಲಿ ಅಳವಡಿಸಿದ ವೆಂಟಿಲೇಟರ್ ಇರಲಿಲ್ಲ. ಶಹಾಪೂರ ನಗರದ ಸಂಗಮೇಶ್ವರ ಪೆಟ್ರೋಲ್ ಬಂಕ ಮುಂದೆ ನಿಲ್ಲಿಸಿದ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಅಂದರೆ ದಿನಾಂಕ 24/11/2022 ರಂದು ರಾತ್ರಿ 11.45 ಪಿ ಎಮ್ ದಿಂದ ದಿನಾಂಕ 25/11/2022 ರಂದು ಬೆಳಗಿನ ಜಾವ 08.30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು 108 ವಾಹನಕ್ಕೆ ಅಳವಡಿಸಿದ ವೆಂಟಿಲೇಟರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ  ಶಶಿಕಾಂತರಾಜು ಸ್ಟಾಫ್ ನರ್ಸ ರವರು 108 ವಾಹನದಲ್ಲಿ ಅಳವಡಿಸಿದ ವೆಂಟಿಲೇಟರ ಕಳ್ಳತನವಾದ ಬಗ್ಗೆ ಶ್ರೀ ಸಂತೋಷ ಬೋಡಾ ಪ್ರೋಗ್ರಾಮ ಮ್ಯಾನೇಜರ ಯಾದಗಿರ ಜಿಲ್ಲೆ ರವರಿಗೆ ತಿಳಿಸಿದರು. ನಂತರ ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ 108 ಆಂಬ್ಯೂಲೆನ್ಸಗೆ ಅಳವಡಿಸಿದ ವೆಂಟಿಲೇಟರ ಕಳ್ಳತನವಾದ ಬಗ್ಗೆ ವಿಷಯ ತಿಳಿಸಿ ಅವರೊಂದಿಗೆ ಚಚರ್ಿಸಿ ಇಂದು ದಿನಾಂಕ: 13/12/2022 ರಂದು ತಡವಾಗಿ ಠಾಣೆಗೆ ಬಂದು ಈ ದೂರು ಕೊಟ್ಟಿದ್ದು ಇರುತ್ತದೆ. ಹಾಪೂರ ನಗರದ ಶಹಾಪೂರ-ಯಾದಗಿರ ಮುಖ್ಯ ರಸ್ತೆಯಲ್ಲಿರುವ ಸಂಗಮೇಶ್ವರ ಪೆಟ್ರೋಲ ಪಂಪನಲ್ಲಿ ನಿಲ್ಲಿಸಿರುವ 108 ವಾಹನ ನಂ: ಕೆಎ-51 ಜಿ-5447 ನೇದ್ದಕ್ಕೆ ಅಳವಡಿಸಿದ ಇಗಿ78137-2022  ವೆಂಟಿಲೇಟರ್ ಅಂದಾಜು ಕಿಮ್ಮತ 1,40,000-00 ರೂ ಕಿಮ್ಮತ್ತಿನದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 208/2022 ಕಲಂ: 379 ಐಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 171/2022 ಕಲಂ: 379, 381 ಐ.ಪಿ.ಸಿ: ಇಂದು ದಿನಾಂಕ: 13/12/2022 ರಂದು 10.30 ಎಎಮ್ ಕ್ಕೆ ಫಿಯರ್ಾದಿದಾರರಾದ ಪಾಪಣ್ಣ ತಂದೆ ಕಮಲಪ್ಪ ಸರೂರ ವ|| 39ವರ್ಷ ಜಾ|| ಕುರುಬರ ಉ|| ಟೆಕ್ನಿಕಲ್ ಮ್ಯಾನೇಜರ ಇಂಡಸ್ ಟಾವರ್ ಕಂಪನಿ ರಾಯಚೂರ ಸಾ|| ಖೈರವಾಡಗಿ ತಾ|| ಹುನಗುಂದ ಜಿ|| ಬಾಗಲಕೋಟ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೇನೆಂದರೆ, ಇಂಡಸ್ ಟಾವರ ಕಂಪನಿಯಲ್ಲಿ 5 ವರ್ಷಗಳ ಹಿಂದಿನಿಂದ ಮ್ಯಾನೇಜರ ಅಂತಾ ಕೆಲಸ ಮಾಡುತ್ತಿದ್ದೇನೆ. ನಾನು ಸಲ್ಲಿಸುವ ಫಿಯರ್ಾದಿ ಏನೆಂದರೆ, ನಮ್ಮ ಕಂಪನಿಯಲ್ಲಿ ಟೆಕ್ನಿಷಿಯನಗಳಾಗಿ ಕೆಲಸ ಮಾಡುವ 1) ಮಹ್ಮದ ಅಫ್ರೋಜ್ ತಂದೆ ಮಹ್ಮದ ಇಕ್ಬಾಲ್ ದಫೇದಾರ ಸಾ|| ಅರಕೇರಾ 2) ಕಲ್ಯಾಣಿ ತಂದೆ ನಿಂಗಣ್ಣ ಕುಂಬಾರ ಸಾ|| ವಡಗೇರಾ ಹಾಗೂ ಅವರ ಸಂಗಡಿಗರಾದ ಮಹ್ಮದ ಮುಜಾಹಿದ ಮತ್ತು ಮಹ್ಮದ ಸುಲೇಮಾನ್ ಇವರೆಲ್ಲರೂ ಕೂಡಿ ನಮ್ಮ ಕಂಪನಿಯ ಮುದನೂರ ಸೈಟಿನಲ್ಲಿ 12 ಬ್ಯಾಟರಿ ಶೆಲಗಳು ಕಳುವಾದ ಕೇಸಿನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಇಂದು ದಿನಾಂಕ 13/12/2022 ರಂದು ಮುಂಜಾನೆ 9.00 ಗಂಟೆಗೆ ನಾನು ಮತ್ತು ನನ್ನ ಸಂಗಡ ನಮ್ಮ ಕಂಪನಿಯ ಎಸ್ಟೇಟ್ ಆಫೀಸರ್ ಆಗಿರುವ ಬಸಪ್ಪ ತಂದೆ ನರಸಪ್ಪ ಸಂಗವಾರ ವ|| 68ವರ್ಷ ಜಾ|| ಅಗಸರ ಉ|| ನಿವೃತ್ತ ಪಿ.ಎಸ್.ಐ ಸಾ|| ಎರಾಮರಸ್ ರಾಯಚೂರ ಇಬ್ಬರೂ ಕೂಡಿ ಕೆಂಭಾವಿ ಪಟ್ಟಣಕ್ಕೆ ಬಂದು ಕೆಂಭಾವಿ ಪಟ್ಟಣದಲ್ಲಿರುವ ನಮ್ಮ ಕಂಪನಿಯ ಟಾವರ ಸೈಟುಗಳನ್ನು ಚೆಕ್ ಮಾಡುತ್ತಾ ಗೌಡರ ಓಣಿಯಲ್ಲಿ ಅಳವಡಿಸಿರುವ ಇಂಡಸ್ ಐಡಿ ನಂ 1020238 ಮತ್ತು ಸೈಟ್ ಐಡಿ ನಂ ಏಇಒ001 ಎಂಬ ವೊಡಾಪೋನ್ ಸೈಟಿಗೆ ಹೋಗಿ ನೋಡಲಾಗಿ ಸೈಟಿನಲ್ಲಿ ಟಾವರ್ ಬ್ಯಾಟರಿಗೆ ಅಳವಡಿಸಿದ ಕೇಬಲ್ ವೈರ್,  ಎಸ್.ಪಿ.ಎಸ್ಗೆ ಅಳವಡಿಸಿದ ಕೇಬಲ್ ವೈರ್ ಮತ್ತು ಬಿ.ಟಿ.ಎಸ್ಗೆ ಅಳವಡಿಸಿದ ಕೇಬಲ್ ವೈರ್ ಕಟ್ ಮಾಡಿ ಕಳವು ಮಾಡಿಕೊಂಡು ಹೋಗಿದ್ದು ಕಂಡು ಬಂದಿತು. ಪರಿಶೀಲಿಸಿ ನೋಡಲಾಗಿ ಅಂದಾಜು 25 ಕೆಜಿಯಷ್ಟು ಕೇಬಲ್ ವೈರ್ ಕಳುವಾಗಿದ್ದು, ಕಳುವಾದ ಕೇಬಲ್ ವೈರ್ ಕಿಮ್ಮತ್ತು 10,000/- ರೂಪಾಯಿ ಆಗಬಹುದು. ಮೇಲೆ ನಮೂದಿಸಿದ ನಮ್ಮ ಕಂಪನಿಯ ವೊಡಾಫೋನ್ ಸೈಟು 5 ತಿಂಗಳುಗಳ ಹಿಂದೆ ಸ್ವಿಚ್ ಆಫ್ ಆಗಿರುತ್ತದೆ. ಈ ಘಟನೆಯು ದಿನಾಂಕ 09/12/2022 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ 10/12/2022 ರಂದು ಮುಂಜಾನೆ 6.00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುವ ಬಗ್ಗೆ ಕಂಡು ಬಂದಿದ್ದು, ನಮ್ಮ ಕಂಪನಿಯಲ್ಲಿ ಟೆಕ್ನಿಷಿಯನಗಳಾಗಿ ನೇಮಕಗೊಂಡು ಕಂಪನಿಯ ಕೆಲಸ ಮಾಡುತ್ತಿರುವ ಮೇಲ್ಕಾಣಿಸಿದ ಮಹ್ಮದ ಅಫ್ರೋಜ್ ತಂದೆ ಮಹ್ಮದ ಇಕ್ಬಾಲ್ ದಫೇದಾರ ಸಾ|| ಅರಕೇರಾ ಮತ್ತು ಕಲ್ಯಾಣಿ ತಂದೆ ನಿಂಗಣ್ಣ ಕುಂಬಾರ ಸಾ|| ವಡಗೇರಾ ಹಾಗೂ ಕಂಪನಿಯಲ್ಲಿ ಕೆಲಸ ಮಾಡದ ಅವರ ಸಂಗಡಿಗರಾದ ಮಹ್ಮದ ಮುಜಾಹಿದ ಮತ್ತು ಮಹ್ಮದ ಸುಲೇಮಾನ್ ಇವರೆಲ್ಲರೂ ಕೂಡಿ ಕೆಂಭಾವಿ ಪಟ್ಟಣದಲ್ಲಿನ ನಮ್ಮ ಟಾವರ ಸೈಟಿನಲ್ಲಿನ ಕೇಬಲ್ ವೈರನ್ನು ಕಳವು ಮಾಡಿರುವ ಸಾಧ್ಯತೆ ಇರುತ್ತದೆ. ಕಾರಣ ಕೆಂಭಾವಿ ಪಟ್ಟಣದಲ್ಲಿರುವ ನಮ್ಮ ಕಂಪನಿಯ ವೊಡಾಫೋನ್ ಸೈಟಿನಲ್ಲಿ ಕಳುವಾದ ಕೇಬಲ್ ವೈರನ್ನು ಪತ್ತೆ ಹಚ್ಚಿ ಕೊಡಬೇಕೆಂದು ನೀಡಿದ ಫಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 171/2022 ಕಲಂ: 379, 381 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 64/2022  ಕಲಂ 279, 338  ಐಪಿಸಿ: ಇಂದು ದಿನಾಂಕ 13/12/2022 ರಂದು ಸಮಯ 4-30 ಪಿ.ಎಂ.ಕ್ಕೆ  ಶ್ರೀ ದೇವರಾಜ ತಂದೆ ಶಿವಪ್ಪ ನಾಯ್ಕೋಡಿ ವಯ;19 ವರ್ಷ, ಜಾ;ಕಬ್ಬಲಿಗ, ಉ;ಕೂಲಿ ಕೆಲಸ, ಸಾ;ಬಲಕಲ್, ತಾ;ಶಹಾಪುರ, ಜಿ;ಯಾದಗಿರಿ ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 13/12/2022 ರಂದು 5 ಪಿ.ಎಂ.ಕ್ಕೆ ಯಾದಗಿರಿ ನಗರದ ಗಾಂಧಿಚೌಕ್ ಹತ್ತಿರ ಜರುಗಿದ ರಸ್ತೆ ಅಪಘಾತದ ಬಗ್ಗೆ ಕನ್ನಡದಲ್ಲಿ ಟೈಪ್ ಮಾಡಿದ ತಮ್ಮದೊಂದು ಪಿಯರ್ಾದು ದೂರನ್ನು ಹಾಜರುಪಡಿಸಿದ್ದು, ಪಿಯರ್ಾದಿಯ  ಹೇಳಿಕೆ  ಸಾರಾಂಶವೇನೆಂದರೆ ನಾನು ದೇವರಾಜ ತಂದೆ ಶಿವಪ್ಪ ನಾಯ್ಕೋಡಿ ವಯ;19 ವರ್ಷ, ಜಾ;ಕಬ್ಬಲಿಗ, ಉ;ಕೂಲಿ ಕೆಲಸ, ಸಾ;ಬಲಕಲ್, ತಾ;ಶಹಾಪುರ, ಜಿ;ಯಾದಗಿರಿ ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ನಮ್ಮ ತಂದೆ ತಾಯಿಗೆ ಒಟ್ಟು ನಾವು 06 ಜನ ಮಕ್ಕಳಿದ್ದು, 05 ಜನ ಹೆಣ್ಣು ಮಕ್ಕಳು, ನಾನು ಒಬ್ಬ ಗಂಡು ಮಗನಿರುತ್ತೇನೆ. ನನ್ನ ತಂದೆಯವರು ಈಗಾಗಲೇ ಮೃತ ಹೊಂದಿರುತ್ತಾರೆ. ನಾನು ನನ್ನ ತಾಯಿ ಮಲ್ಲಮ್ಮ ಗಂಡ ಶಿವಪ್ಪ ನಾಯ್ಕೋಡಿ ವಯ;48 ವರ್ಷ ಇಬ್ಬರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇವೆ. ನನ್ನ ಚಿಕ್ಕಮ್ಮಳಾದ ಸಣ್ಣ ಮಲ್ಲಮ್ಮ ಗಂಡ ಭೀಮರಾಯ ಬೆಸ್ತನೋರ ಸಾ;ಹೊನಗೇರಿ ಇವರು ತಮ್ಮ ಗ್ರಾಮದಲ್ಲಿ ದೇವರು ಕಾರ್ಯಕ್ರಮ ಇರುತ್ತದೆ ನಿನ್ನ ತಾಯಿಗೆ ಕಳಿಸಿಕೊಡು ಅಂತಾ ನನಗೆ ತಿಳಿಸಿದ್ದರಿಂದ ಬೆಂಗಳೂರಿನಿಂದ ನನ್ನ ತಾಯಿಗೆ ಯಾದಗಿರಿಗೆ ಕಳಿಸಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ 12/12/2022 ರಂದು ಸಾಯಂಕಾಲ 6 ಪಿ.ಎಂ.ದ ಸುಮಾರಿಗೆ ನನ್ನ ಅಣ್ಣನಾದ ಸುರೇಶ ತಂದೆ ಬೀಮರಾಯ ಬೆಸ್ತನೋರ ಸಾ;ಹೊನಗೇರಿ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಇಂದು ದಿನಾಂಕ 12/12/2022 ರಂದು ಬೆಳಿಗ್ಗೆ ನಾನು, ನನ್ನ ತಾಯಿ ಸಣ್ಣ ಮಲ್ಲಮ್ಮ ಹಾಗೂ ದೊಡ್ಡಮ್ಮ ಗುಂಜಲಮ್ಮ ಗಂಡ ಶಿವಪ್ಪ ಹಿರೇನೋರ ಸಾ;ತುಮಕುರ ಮೂವರು ಸೇರಿಕೊಂಡು ಯಾದಗಿರಿಯ ಗಾಂಧಿಚೌಕ್ ನಲ್ಲಿ ಸಂತೆ ಮಾಡಿಕೊಂಡು ಬಂದರಾಯಿತು ಅಂತಾ ಯಾದಗಿರಿಗೆ ಬಂದಿದ್ದೆವು. ನಿನ್ನ ತಾಯಿಯು ಕೂಡ ಬೆಂಗಳೂರಿನಿಂದ ಯಾದಗಿರಿಗೆ ಬಂದು ನಮ್ಮ ಹತ್ತಿರ ಗಾಂಧಿಚೌಕಿಗೆ ಬಂದರು. ಆಗ ನಾವುಗಳು ಎಲ್ಲರೂ ಕೂಡಿ ಕಿರಾಣಿ, ಬಟ್ಟೆ ಸಂತೆ ಮಾಡಿಕೊಂಡ ನಂತರ ಬಳೆ ಹಾಕಿಸಿಕೊಳ್ಳುತ್ತೇವೆಂದು ಮೂವರು ಕೇಳಿದಾಗ ನಡೀರಿ ಅಂತಾ ಗಾಂಧಿಚೌಕ್ ಹತ್ತಿರ ನಾವುಗಳು ಎಲ್ಲರೂ ಹೊರಟಿದ್ದಾಗ  ಸಮಯ ಸಾಯಂಕಾಲ 5 ಪಿ.ಎಂ.ದ ಸುಮಾರಿಗೆ ಒಂದು ಶಾಲಾ  ಮಿನಿ ಬಸ್ ನಂಬರ ಕೆಎ-33, ಎ-3069 ನೇದ್ದರ ಚಾಲಕನು ತನ್ನ ವಾಹನವನ್ನು ಮೈಲಾಪುರ ಅಗಸಿ ರಸ್ತೆ ಕಡೆಯಿಂದ ಗಾಂಧಿಚೌಕ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಲ್ಲಿ ನಿನ್ನ ತಾಯಿಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದ ರಭಸಕ್ಕೆ  ನಿನ್ನ ತಾಯಿಯವರು ಗಾಂಧಿಚೌಕ್ನಲ್ಲಿ ಇರುವ ಮಹಾತ್ಮ ಗಾಂಧಿ ಮೂತರ್ಿ ಕಟ್ಟೆಗೆ ಹೋಗಿ ಬಡಿದು ಬಿದ್ದಾಗ ಸದರಿ ಅಪಘಾತದಲ್ಲಿ ಆಕೆಗೆ ಬಲಗಾಲಿನ ತೊಡೆಗೆ, ಹೊಟ್ಟೆಗೆ, ಸೊಂಟಕ್ಕೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿರುತ್ತವೆ. ಆಗ ಅಪಘಾತಪಡಿಸಿದ ಶಾಲಾ ವಾಹನದ ಚಾಲಕನು ಸ್ಥಳದಲ್ಲಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಬ್ದುಲ್ ಕರೀಮ್ ತಂದೆ ಅಲಿಮಿಯಾ ಸಾ;ನವಾಬ ಗಡ್ಡ ರಾಯಚೂರು ಅಂತಾ ತಿಳಿಸಿರುತ್ತಾನೆ. ನಾವುಗಳು ನಿನ್ನ ತಾಯಿಯವರಿಗೆ ಉಪಚಾರ ಕುರಿತು ಯಾದಗಿರಿಯ ನೀಲಕಂಠ ಸೈದಾಪುರ ಆಸ್ಪತ್ರೆಗೆ ಬಂದು ತೋರಿಸಿದಾಗ  ಅವರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗಲು ಸೂಚಿಸಿದಾಗ ಯಾದಗಿರಿಯ ವಿ.ಬಿ.ಆರ್ ಮುದ್ನಾಳ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಗೆ ಯಾದಗಿರಿ ಸಂಚಾರ ಠಾಣೆಯ ಪೊಲೀಸರು ವಿಚಾರಣೆಗೆ ಬಂದಿದ್ದು, ಅವರಿಗೆ ನಾವುಗಳು ಗಾಯಾಳು ಮಲ್ಲಮ್ಮನ ಮಗನಿಗೆ ಘಟನೆ ಬಗ್ಗೆ ತಿಳಿಸಿದ್ದು, ಆತನು  ನಾಳೆ ಬೆಳಿಗ್ಗೆ ಬಂದ ನಂತರ ಕೇಸು ಕೊಡುವ ಬಗ್ಗೆ ತಿಳಿಸುವುದಾಗಿ ಹೇಳಿರುತ್ತೇವೆ. ನೀನು ಕೂಡಲೇ ಯಾದಗಿರಿಗೆ ಬಾ ಅಂತಾ ತಿಳಿಸಿದಾಗ ನನಗೆ ಗಾಭರಿಯಾಗಿ ನಿನ್ನೆ ರಾತ್ರಿಯೇ ಬೆಂಗಳೂರಿನಿಂದ ಹೊರಟು ಇಂದು ಬೆಳಿಗ್ಗೆ ಯಾದಗಿರಿಗೆ ಬಂದು ವಿಬಿಆರ್ ಮುದ್ನಾಳ ಆಸ್ಪತ್ರೆಗೆ ಬಂದು ನೊಡಲು ನನ್ನ ತಾಯಿ ಮಲ್ಲಮ್ಮ ಇವರು ಉಪಚಾರ ಹೊಂದುತ್ತಿದ್ದು, ಆಸ್ಪತ್ರೆಯಲ್ಲಿ ಹಾಜರಿದ್ದ ನನ್ನ ದೊಡ್ಡಮ್ಮ ಗುಂಜಲಮ್ಮ, ಚಿಕ್ಕಮ್ಮಳಾದ ಸಣ್ಣ ಮಲ್ಲಮ್ಮ ಹಾಗೂ ನನ್ನ ಅಣ್ಣನಾದ ದೇವರಾಜ ಇವರುಗಳು ಹಾಜರಿದ್ದು ಅವರಿಗೆ ವಿಚಾರಿಸಿದ್ದು ನನಗೆ ನಿನ್ನೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ನಿನ್ನೆ  ದಿನಾಂಕ 12/12/2022 ರಂದು ಸಾಯಂಕಾಲ 5 ಪಿ.ಎಂ.ಕ್ಕೆ ಯಾದಗಿರಿ ನಗರದ ಗಾಂಧಿಚೌಕ್ ಹತ್ತಿರ ಮುಖ್ಯ ರಸ್ತೆಯ ಮೇಲೆ ಶಾಲಾ ಮಿನಿ ಬಸ್ ನಂಬರ ಕೆಎ-33, ಎ-3069 ನೇದ್ದರ ಚಾಲಕ ಅಬ್ದುಲ್ ಕರೀಮ್ ತಂದೆ ಅಲಿಮಿಯಾ ಸಾ;ನವಾಬ ಗಡ್ಡ ರಾಯಚೂರು ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿದ್ದರಿಂದ ಈ ಘಟನೆ ಜರುಗಿದ್ದು ಈ ಘಟನೆಯ ನಂತರ ನಾನು ಬೆಂಗಳೂರಿನಿಂದ ಇಲ್ಲಿಗೆ ಬಂದು, ಮನೆಯ ಹಿರಿಯರಲ್ಲಿ ವಿಚಾರಿಸಿ ಇಂದು ದಿನಾಂಕ 13/12/2022 ರಂದು ತಡವಾಗಿ ಠಾಣೆಗೆ ಹಾಜರಾಗಿ ಘಟನೆ ಬಗ್ಗೆ ದೂರನ್ನು ಕೊಡುತ್ತಿದ್ದು, ಅಪಘಾತ ಪಡಿಸಿದ  ಶಾಲಾ ವಾಹನದ ಚಾಲಕನ ಮೇಲೆ ಕಾನೂನಿನ ಸೂಕ್ತ  ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ  ಹೇಳಿಕೆ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  64/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 173/2022 ಕಲಂ : 363 ಐಪಿಸಿ: ಎಂದಿನಂತೆ ದಿನಾಂಕ 08.12.2022 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಆಕೆಯ ಮಗಳು ಸುಜಾತ ಮತ್ತು ಅವರ ಗಂಡನಾದ ರಾಮರಡ್ಡಿ ಇವರು ತನ್ನ ಅಡುಗೆ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಫಿರ್ಯಾದಿಯ ಮೊಮ್ಮಕ್ಕಳು ಹಾಗೂ ಅವರ ಇನ್ನೊಬ್ಬ ಮಗಳು ಭುವನೇಶ್ವರಿ ಇವರು ಮನೆಯಲ್ಲಿ ಟಿ.ವಿ ನೋಡುತ್ತಿದ್ದರು. ನಂತರ ಫಿರ್ಯಾದಿಯು ಊಟ ಮಾಡಿದ ನಂತರ ಟಿ.ವಿ ನೋಡುವಲ್ಲಿಗೆ ಬಂದು ನೋಡದಾಗ ತಮ್ಮ ಮಗಳು ಭುವನೇಶ್ವರಿಯು ಕಾಣಿಸದೇ ಇರುವುದನ್ನು ಕಂಡು ತನ್ನ ಅಳಿಯನೊಂದಿಗೆ ತಮ್ಮ ಹಳೆಯ ಮನೆಗೆ ಹೋಗಿ ನೋಡಿದಾಗಲು ಆಕೆ ಅಲ್ಲಿಯೂ ಇಲ್ಲವೆಂದು ಗೊತ್ತಾಗಿ ಆ ಮೇಲೆ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಪೋನ್ ಮಾಡಿ ವಿಚಾರಿಸಿದಾಗಲು ಆಕೆಯ ಬಗ್ಗೆ ಯಾವುದೇ ಸುಳಿವು ಸಿಗದೇ ಇರುವುದರಿಂದ ಫಿರ್ಯಾದಿಯು ಮನೆಯಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಇಂದು ಠಾಣೆಗೆ ಬಂದು ತನ್ನ ಮಗಳು ಭುವನೇಶ್ವರಿಯನ್ನು ಯಾರೋ, ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿದ್ದು ಆಕೆಯನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಗಣಕೀಕೃತ ದೂರು ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂಬರ 173/2022 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
 

ಇತ್ತೀಚಿನ ನವೀಕರಣ​ : 16-12-2022 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080