Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-01-2022

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 05/2022 ಕಲಂ:279, 338 ಐಪಿಸಿ : ಇಂದು ದಿನಾಂಕ:14/01/2022 ರಂದು ರಾತ್ರಿ 2:00 ಗಂಟೆ ಸುಮಾರಿಗೆ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದರಿಂದ ನಮ್ಮ ಠಾಣೆಯ ಹುಲಿಗೆಪ್ಪ ಹೆಚ್.ಸಿ 03 ರವರಿಗೆ ನೇಮಕ ಮಾಡಿ ಕಳುಹಿಸಿದ್ದು, ಸದರಿಯವರು ಎಮ್.ಎಲ್.ಸಿ ವಿಚಾರಣೆ ಕುರಿತು ಮೇಲ್ಕಂಡ ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು, ಆಸ್ಪತ್ರೆಯಲ್ಲಿದ್ದ ಗಾಯಾಳುವಿನ ತಂದೆಯಾದ ದೇವಪ್ಪ ತಂದೆ ಯಮನಪ್ಪ ನಾಟೇಕಾರ ಸಾ:ಕರಡಕಲ್ ತಾ:ಸುರುಪೂರು ಈತನಿಗೆ ವಿಚಾರಿಸಿದಾಗ ಅವರು ಕಂಪ್ಯೂಟರನಲ್ಲಿ ಟೈಪ ಮಾಡಿದ ದೂರು ಅಜರ್ಿಯನ್ನು ಸಲ್ಲಿಸಿದ್ದನ್ನು ಸ್ವಿಕೃತ ಮಾಡಿಕೊಂಡು 2-45 ಪಿಎಮ್ಕ್ಕೆ ಮರಳಿ ಠಾಣೆಗೆ ಬಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶವೇನಂದರೆ ನಾನು ಒಕ್ಕಲುನತ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆೆ. ಹೀಗಿದ್ದು ನಿನ್ನೆ ದಿನಾಂಕ: 13/01/2022 ರಂದು ಸಾಯಂಕಾಲ 6 ಗಂಟೆಗೆ ಸುಮಾರಿಗೆ ನನ್ನ ಮಗ ಮಲ್ಲಣ್ಣ ತಂದೆ ದೇವಪ್ಪ ನಾಟೇಕಾರ ಸಾ:ಕರಡಕಲ್ ಈತನು ಮೈಲಾಪೂರ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ನಮಗೆ ಹೇಳಿ ಮೋಟರ ಸೈಕಲ್ ನಂಬರ: ಕೆಎ 33 ಡಬ್ಲ್ಯೂ 0630 ನೇದ್ದರ ಮೇಲೆ ಹೋದನು. ನಾವು ಮನೆಯಲ್ಲಿದೇವು. ದಿನಾಂಕ: 14/01/2022 ರಂದು ರಾತ್ರಿ 00:30 ಗಂಟೆ ಸುಮಾರಿಗೆ ಯಾರೋ ನನ್ನ ಮಗನ ಮೊಬೈಲ್ ನಿಂದ ನನಗೆ ಕರೆ ಮಾಡಿ ಈ ಮೊಬೈಲ್ನವರು ಯಾದಗಿರಿ-ಶಹಾಪೂರು ಮೇನ್ ರೋಡ ಮನಗನಾಳ ಗೇಟ ಹತ್ತಿರ ಮೋಟರ ಸೈಕಲ್ ವೇಗವಾಗಿ ನಡೆಸಿಕೊಂಡು ಬಂದು ರೋಡ ಬ್ರೇಕ್ನಲ್ಲಿ ಸ್ಕಿಡ್ಡಾಗಿ ಬಿದ್ದಿರುತ್ತಾರೆ ಎಂದು ಹೇಳಿ, ಗಾಯಾಳುವಿಗೆ 108 ಅಂಬುಲೇನ್ಸ್ನಲ್ಲಿ ಹಾಕಿ ಯಾದಗಿರಿ ದವಖಾನಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು. ಆಗ ನಾನು ಗಾಬರಿಯಾಗಿ ಊರಿನಿಂದ ಹೊರಟು ನೇರವಾಗಿ ಯಾದಗಿರಿ ಸರಕಾರಿ ಆಸ್ಪತ್ರಗೆ ಬಂದು ನನ್ನ ಮಗನಿಗೆ ನೋಡಲಾಗಿ ಅಪಘಾತದಲ್ಲಿ ಬಲಗಡೆ ಕಪಾಳಕ್ಕೆ ಭಾರಿ ರಕ್ತಗಾಯವಾಗಿ, ಕಪಾಳ ಕೆತ್ತಿದ್ದು ಬಲಗಡೆ ಹಸ್ತ, ಬಲಗಡೆ ಭುಜಕ್ಕೆ ಗಾಯವಾಗಿದ್ದು, ಎಡಕಿವಿಯಿಂದ ರಕ್ತ ಸ್ರಾವವಾಗಿರುತ್ತದೆ. ನನ್ನ ಮಗನಿಗೆ ಅಪಘಾತದ ಬಗ್ಗೆ ಕೇಳಿದಾಗ ನಾನು ಕರಡಕಲ್ ದಿಂದ ಮೈಲಾಪೂರಕ್ಕೆ ಹೋಗುತಿದ್ದಾಗ ದಾರಿಯಲ್ಲಿ ಮನಗನಾಳ ಹತ್ತಿರ ರಾತ್ರಿ 00:15 ಗಂಟೆ ಸುಮಾರಿಗೆ ನಾನು ಮೋಟರ ಸೈಕಲ್ ವೇಗವಾಗಿ ನಡೆಸಿಕೊಂಡು ಬಂದು ರೋಡ ಹಂಪ್ಸನಲ್ಲಿ ಒಮ್ಮೆಲೆ ಬ್ರೇಕ್ ಹಾಕಿ ಸ್ಕಿಡ ಮಾಡಿಕೊಂಡು ಬಿದ್ದಿರುತ್ತೇನೆ ಎಂದು ಹೇಳಿದನು. ನಂತರ ನಾನು ಮನಗನಾಳ ಹತ್ತಿರ ಬಂದು ಅಪಘಾತ ಸ್ಥಳವನ್ನು ನೋಡಿರುತ್ತೇನೆ. ಮೋಟರ ಸೈಕಲ್ ಅಲ್ಲಿಯೇ ಬಿದ್ದಿರುತ್ತದೆ. ಕಾರಣ ನನ್ನ ಮಗನು ಮೋಟರ್ ಸೈಕಲ್ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಸ್ಕಿಡ್ಡ ಮಾಡಿಕೊಂಡು ಬಿದ್ದು, ಅಪಘಾತ ಮಾಡಿಕೊಂಡಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 05/2022 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 04/2021 ಕಲಂ 323, 324, 326, 420, 406, 409, 504, 506, 307 ಸಂಗಡ 511 ಐಪಿಸಿ : ಇಂದು ದಿನಾಂಕ 14.01.2022 ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀ ವಿ.ಆರ್. ಜಾಧವ ಹೆಚ್.ಸಿ-214 ಗುರುಮಠಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ, ಯಾದಗಿರಿ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 98/2021 ದಿನಾಂಕ 30.12.2021 ನೇದ್ದರೊಂದಿಗೆ ಫಿರ್ಯಾದಿದಾರನಾದ ಚಾಲ್ರ್ಸ ವೆಸ್ಲಿ ತಂದೆ ಕೆ.ಹೆಚ್ ಚಂದ್ರಾಮಪ್ಪ ವ|| ವಯಸ್ಕ ಉ||ಒಕ್ಕಲುತನ ಜಾ||ಕ್ರಿಶ್ಚನ್ ಸಾ||ಕಾಳೆಬೆಳಗುಂದಿ ತಾ||ಜಿ||ಯಾದಗಿರಿ ಹಾ||ವ||ಕಲಬುರಗಿ ಇವರಿಗೆ ಆರೋಪಿತರು ಎಲ್ಹೇರಿ ಸೀಮಾಂತರ ಜಮೀನು ಸವರ್ೇ ನಂ: 527/ಎ, 530/ಎ ನೇದ್ದವುಗಳ ಜಮೀನುಗಳಲ್ಲಿ ಜಗಳ ತೆಗೆದು ಹೊಡೆ-ಬಡೆ ಮಾಡಿದ್ದು ಅಲ್ಲದೇ ನಂಬಿಕೆ ದ್ರೋಹ ಮತ್ತು ಮೋಸಗಳಿಸಲು ಆರೋಪಿತರು ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯ ಶಭ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಬಗ್ಗೆ ನೀಡಿದ ಖಾಸಗಿ ದೂರಿನ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಆದೇಶದಂತೆ ಗುರುಮಠಕಲ್ ಠಾಣೆ ಗುನ್ನೆ ನಂ: 04/2021 ಕಲಂ 323, 324, 326, 420, 406, 409, 504, 506, 307 ಸಂಗಡ 511 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 02/2022 ಕಲಂ 279, 338ಐಪಿಸಿ : ನಿನ್ನೆ ದಿನಾಂಕ 13.01.2022 ರಂದು ಸಾಯಂಕಾಲ 7-15 ಗಂಟೆಗೆ ವೇಳೆಗೆ ಫಿಯರ್ಾದಿಯ ಸಹೋದರ ಸಂಬಂಧಿ ಲಕ್ಷ್ಮಪ್ಪ ತಂದೆ ರಾಜಪ್ಪ ಗುಡಸೆ ಇವನು ವಂಕಸಂಬರ ರೋಡಿನ ಕಡೆಗೆ ಬರುವ ತನ್ನ ಹೊಲದಿಂದ ಮನೆಗೆ ಬರುತ್ತಿರುವಾಗ ನರಸಪ್ಪ ತಂದೆ ಮಾಶಣ್ಣ ಕುರುಬರ ಇವರ ಜಮೀನು ಹತ್ತಿರ ಆತನ ಹಿರೋಹೋಂಡಾ ಮೋಟರ ಸೈಕಲ ಕೆಎ-51 ಡಬ್ಲೂ-0942 ಬೈಕಗೆ ಕಾರ ಡಿಕ್ಕಿಯಾಗಿ ರಾಜಪ್ಪನ ಬಲಗಾಲ ಮೊಳಕಾಲಿಗೆ, ಬಲಗಾಲು ಮುಂದಿನ ಪಾದದ ಹತ್ತಿರ ಭಾರಿ ರಕ್ತಗಾಯ ಆಗಿದ್ದು, ಅಪಘಾತಪಡಿಸಿ ಕಾರ ನಂಬರ ಟಿಎಸ್-13, ಇಟಿ-5246 ನೇದ್ದರ ಚಾಲಕನ ಕಾರನಲ್ಲಿ ಸರಕಾರಿ ಆಸ್ಪತ್ರೆ ಸೈದಾಪೂರಗೆ ತಂದು ಸೇರಿಕೆ ಮಾಡಿದ್ದು, ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಕೂಡಲೇ ಬಾಲಂಕು ಆಸ್ಪತ್ರೆ ರಾಯಚೂರಗೆ ಅಂಬುಲೆನ್ಸ್ದಲ್ಲಿ ತೆಗೆದುಕೊಂಡು ಹೋಗಿದ್ದು, ಭಾರಿ ರಕ್ತಗಾಯಪಡಿಸಿದ ಸದರಿಯನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ ಬಗ್ಗೆ ಸಾರಾಂಶ ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 09/2022. ಕಲಂ. 279,338, ಐ.ಪಿ.ಸಿ. 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 14/01/2022 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀ ದವಲಪ್ಪ ತಂದೆ ಚಂದಪ್ಪ ಕುಂಬಾರ ವ|| 32 ಜಾ|| ಕುಂಬಾರ ಉ|| ಒಕ್ಕಲುತನ ಸಾ|| ಪಡಗದಹಳ್ಳಿ ತಾ|| ಯಡ್ರಾಮಿ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ಹೀಗಿದ್ದು ನಮ್ಮೂರ ಹನುಮಾನ ದೇವರ ಗುಡಿಗೆ ಹೂವು ಬೆಕಾಗಿದ್ದರಿಂದ ಹೂವು ತೆಗೆದುಕೊಂಡು ಹೊಗಲು ದಿನಾಂಕ 13/01/2022 ರಂದು ರಾತ್ರಿ 8-20 ನಾನು ಮತ್ತು ನಮ್ಮೂರ ನನ್ನ ಗೆಳೆಯನಾದ ಸಂತೋಷ ತಂದೆ ಭೀಮಣ್ಣಗೌಡ ಹಂಚಲಿ ಇಬ್ಬರು ಕೂಡಿ ಸಂತೋಷನ ಕಾರ ನಂ ಕೆಎ-41 ಸಿ-6883 ನೇದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಶಹಾಪುರಕ್ಕೆ ಹೋರಟು ಸದರಿ ಕಾರನ್ನು ಸಂತೊಷನು ನಡೆಸುತ್ತಿದ್ದನು. ನಾನು ಸಂತೊಷನ ಪಕ್ಕದಲ್ಲಿ ಕಾರಿನಲ್ಲಿ ಕುಳಿತುಕೊಂಡಿದ್ದೆನು. ಸಂತೋಷನು ನಮ್ಮ ಕಾರನ್ನು ಶಹಾಪುರ ಕಲಬುರಗಿ ಮುಖ್ಯ ರಸ್ತೆಯ ಮೇಲೆ ಶಹಾಪುರನಗರದ ಹಳ್ಳದ ಹತ್ತಿರ ನಿದಾನವಾಗಿ ಚಲಾಯಿಸಿಕೊಂಡು ಹೊಗುತ್ತಿರುವಾಗ ರಾತ್ರಿ 9-20 ಗಂಟೆಗೆ ಮಹೇಂದ್ರ ಶೋ ರೂಂ ಹತ್ತಿರ ಇರುವ ಹಳ್ಳದ ಬ್ರೀಜ್ ಮೇಲೆ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ನಮ್ಮ ಹಿಂದಿನಿಂದ ಅಂದರೆ ಭೀಮರಾಯನ ಗುಡಿ ಕಡೆಯಿಂದ ಬಂದು ನಮ್ಮ ಕಾರಿನ ಹಿಂದಿನ ಬಾಗಕ್ಕೆ ಡಿಕ್ಕಿಪಡಿಸಿದಾಗ ನಮ್ಮ ಕಾರ ಡಿಕ್ಕಿಪಡಿಸಿದ ರಬಸಕ್ಕೆ ತಿರುಗಿದಾಗ ಕಾರ ಚಾಲಕನ ಸೈಡಿಗೆ ಟಿಪ್ಪರ ಡಿಕ್ಕಿಪಡಿಸಿದ ರಬಸಕ್ಕೆ ಮತ್ತೆ ನಮ್ಮ ಕಾರು ತಿರುಗಿದ್ದು ಇರುತ್ತದೆ. ಅಗ ಅದೆ ಸಮಯಕ್ಕೆ ಎದರುಗಡೆಯಿಂದ ಬರುತ್ತಿದ್ದ ಅಂದರೆ ಶಹಾಪೂರದ ಕಡೆಯಿಂದ ಒಂದು ಮೋಟರ್ ಸೈಕಲ್ ಸವಾರನು ತನ್ನ ಸೈಡಿಗೆ ನಿದಾನವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಸದರಿ ಟಿಪ್ಪರ ಚಾಲಕನು ಮೋಟರ್ ಸೈಕಲ್ಕ್ಕೆ ಡಿಕ್ಕಿಡಿಸಿದನು. ಆಗ ನಾನು ಮೋಟರ್ ಸ್ಯಕಲ್ ಸವಾರನು ಮೋಟರ್ ಸೈಕಲ್ ಸಮೇತವಾಗಿ ಬಿದ್ದನು ಆಗ ಸದರಿ ಅಪಘಾತದಲ್ಲಿ ನನಗೆ ಮತ್ತು ಸಂತೋಷನಿಗೆ ಸಣ್ಣ ಪುಟ್ಟ ಗುಪ್ತಗಾಯವಾಗಿದ್ದು ಇರುತ್ತದೆ. ಆಗ ನಾನು ಮತ್ತು ಸಂತೋಷ ಇಬ್ಬರು ಮೋಟರ್ ಸೈಕಲ್ ಹತ್ತಿರ ಹೋಗಿ ನೋಡಿ ಹೆಸರು ವಿಚಾರಿಸಲಾಗಿ ತನ್ನ ಹೆಸರು ಖಾನರೆಡ್ಡಿ ತಂದೆ ಭೀಮಪ್ಪ ಧನಕಾಯಿ ಸಾ|| ಕೊಡಮನಹಳ್ಳಿ ಅಂತ ತಿಳಿಸಿದನು ಸದರಿ ಅಪಘಾತದಲ್ಲಿ ಖಾನರೆಡ್ಡಿಗೆ ಬಲಗಾಲ ತೋಡೆಗೆ, ಬಲಗಾಲು ಮೋಳಕಾಲು ಮೇಲೆ ಭಾರಿ ರಕ್ತಗಾಯ, ಬಲಗಾಲ ಮೋಳಕಾಲು ಕೆಳಗೆ ರಕ್ತಗಾಯ, ಎಡಕಣ್ಣಿನ ಹತ್ತಿರ, ಎದೆಗೆ, ಹೊಟ್ಟೆಗೆ ಗುಪ್ತಗಾಯ, ಎಡಗಾಲು ಪಾದದ ಮೇಲೆ, ಬಲಗೈ ಹೆಬ್ಬೆರಳಿಗೆ ರಕ್ತಗಾಯ ವಾಗಿದ್ದು ಇರುತ್ತದೆ. ಮೋಟರ್ ಸೈಕಲ್ ನಂಬರ ನೋಡಲಾಗಿ ಕೆಎ-33 ಇಎ-9732 ನೇದ್ದು ಇರುತ್ತದೆ. ಆಗ ಖಾನರೆಡ್ಡಿಯು ತನ್ನ ಅಣ್ಣನಾದ ಸೋಮಪ್ಪ ತಂದೆ ಭೀಮಪ್ಪ ಧನಕಾಯಿ ಈತನಿಗೆ ಪೋನ ಮಾಡಿ ಅಪಘಾತದ ವಿಷಯ ತಿಳಿಸಿದನು. ಆಗ ಸೋಮಪ್ಪ ಈತನು ಅಪಘಾತದ ಸ್ಥಳಕ್ಕೆ ಬಂದು ನೋಡಿ ವಿಚಾರಿಸಿದನು. ಆಗ ನಾನು 108 ಅಂಬುಲೇನ್ಸಕ್ಕೆ ಪೋನ ಮಾಡಿದ್ದರಿಂದ ಅಂಬುಲೇನ್ಸ ಬಂದಾಗ ಸೋಮಪ್ಪನು ಖಾನರೆಡ್ಡಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದನು. ಸದರಿ ಅಪಘಾತದಲ್ಲಿ ನಮ್ಮ ಕಾರ ನಂ ಕೆಎ-41 ಸಿ-6883 ನೇದ್ದು ಮತ್ತು ಮೋಟರ್ ಸೈಕಲ್ ನಂ ಕೆಎ-33 ಇಎ-9732 ನೇದ್ದವುಗಳು ಜಖಂ ಗೊಂಡಿರುತ್ತದೆ. ಸದರಿ ಅಪಘಾತ ಮಾಡಿದ ಟಿಪ್ಪರ ಸ್ವಲ್ಪ ನಿಂತಹಾಗೆ ಮಾಡಿ ತನ್ನ ಟಿಪ್ಪರನ್ನು ಅಲ್ಲಿಂದ ತೆಗೆದುಕೊಂಡು ಹೊದನು ನಾನು ಟಿಪ್ಪರ್ ನಂಬರ ನೋಡಿರುವುದಿಲ್ಲಾ ಅದರ ಚಾಲಕನಿಗೆ ನೋಡಿದರೆ ಗುರುತ್ತಿಸುತ್ತೆನೆ. ಸದರಿ ಅಪಘಾತದಲ್ಲಿ ನನಗೆ ಮತ್ತು ಸಂತೋಷನಿಗೆ ಸಣ್ಣ ಪುಟ್ಟ ಗುಪ್ತಗಾಯ ವಾಗಿದ್ದಿರಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ ಮತ್ತು ಆಸ್ಪತ್ರೆಗೆ ಹೋಗುವುದಿಲ್ಲಾ. ನಮ್ಮ ಹಿರಿಯರಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ನಮ್ಮ ಕಾರಿಗೆ ಮತ್ತು ಮೋಟರ್ ಸೈಕಲ್ಕ್ಕೆ ಅಪಘಾತಮಾಡಿ ಮೋಟರ್ ಸೈಕಲ್ ಸವಾರನಿಗೆ ಭಾರಿ ಗಾಯಮಾಡಿ ಟಿಪ್ಪರ್ ನಿಲ್ಲಸದೆ ತೆಗೆದುಕೊಂಡು ಹೋದ ಟಿಪ್ಪರ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 09/2022 ಕಲಂ: 279, 338, ಐಪಿಸಿ ಮತ್ತು 187 ಐ.ಎಂ.ವಿ. ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 05/2021 ಕಲಂ 323 324 504 506 ಸಂ 34 ಐಪಿಸಿ : ಸದರಿ ಪ್ರಕರಣದಲ್ಲಿ ಪಿರ್ಯಾದಿಯು ಆರೋಪಿತರ ಪ್ಲಾಟನ್ನು ಕಡಿಮೇ ಬೆಲೆ ಮಾರಾಟ ಮಾಡಿ ತನ್ನ ಪ್ಲಾಟನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರಿಂದ ಸಿಟ್ಟು ಮಾಡಿಕೊಂಡಿದ್ದು ಇದೇ ಸಿಟ್ಟಿನಿಂದ ಪಿರ್ಯಾಧಿ ಮತ್ತು ಪಿರ್ಯಾಧಿ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಪಿರ್ಯಾಧಿಯ ಜೀವ ಬೆದರಿಕೆ ಹಾಕಿ ಹೋಗಿದ್ದು ಪಿರ್ಯಾಧಿಯು ತಮ್ಮ ತಂದೆಗೆ ಇಲ್ಲಿಯ ವರೆಗೆ ಉಪಚಾರ ಮಾಡಿಕೊಂಡು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಸಾರಂಶ ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 09/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 14/01/2022 ರಂದು 8.15 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಂಜುನಾಥ ತಂದೆ ಕೇಶವರಾವ್ ಪೊಲೀಸ್ ಪಾಟೀಲ್ ವ|| 25ವರ್ಷ ಜಾ|| ಹಿಂದೂ ಮರಾಠಾ ಉ|| ವಿದ್ಯಾಥರ್ಿ ಸಾ|| ಮುದನೂರ(ಕೆ) ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ದಿನಾಂಕ 05/01/2022 ರಂದು 12.30 ಪಿಎಂ ಸುಮಾರಿಗೆ ನಾನು ಮುದನೂರ ಗ್ರಾಮದ ನಮ್ಮ ಮನೆಯಲ್ಲಿದ್ದಾಗ ನಮ್ಮೂರ ದೇವರಾಜ ತಂದೆ ನಿಂಗಪ್ಪ ಗೊರವರ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ನಗನೂರ ಗ್ರಾಮದ ಮುಖಾಂತರ ಶಹಾಪೂರಕ್ಕೆ ಹೋಗುತ್ತಿದ್ದಾಗ ನಗನೂರ-ಕೆಂಭಾವಿ ಮಧ್ಯದ ರಸ್ತೆಯ ಮೇಲೆ ಕವರ್ಿಂಗನಲ್ಲಿ ನಿಮ್ಮ ತಂದೆಯವರು ಹೋಗುತ್ತಿದ್ದ ಸೈಕಲ್ ಮೋಟಾರಗೆ ಒಂದು ಕಾರು ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಿಮ್ಮ ತಂದೆಯವರು ಸೈಕಲ್ ಮೋಟಾರ ಸಮೇತ ಕೆಳಗೆ ಬಿದ್ದು ಗಾಯಗಳಾಗಿದ್ದು ನಿಮ್ಮ ತಂದೆಯವರಿಗೆ ಎಬ್ಬಿಸಿದ್ದು ನೀವು ತಕ್ಷಣ ಅಪಘಾತದ ಸ್ಥಳಕ್ಕೆ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಸಂಬಂಧಿಕನಾದ ಪಾಂಡುರಂಗ ತಂದೆ ಹಣಮಂತ್ರಾಯ ಮರಾಠಾ ಇಬ್ಬರೂ ಕೂಡಿ ನಮ್ಮ ಕಾರನ್ನು ತೆಗೆದುಕೊಂಡು ನಮ್ಮ ತಂದೆಯವರಿಗೆ ಅಪಘಾತವಾದ ಸ್ಥಳಕ್ಕೆ ಹೋದೆವು. ಅಲ್ಲಿ ನಮ್ಮ ತಂದೆಯವರು ಕೆಳಗೆ ಬಿದ್ದಿದ್ದು ವಿಚಾರಿಸಲಾಗಿ ಅವರು ಬೂದನೂರ ಗ್ರಾಮದಲ್ಲಿ ಎರಡು ಆಕಳುಗಳಿಗೆ ಚಿಕಿತ್ಸೆ ನೀಡುವ ಕುರಿತು ಬಸನಗೌಡರ ಜೊತೆಗೆ ಹೋಗಿ ಮರಳಿ ಅವರ ಸೈಕಲ್ ಮೋಟಾರ ನಂ ಕೆಎ 33 ವೈ 9331 ನೇದ್ದರಲ್ಲಿ ಮರಳಿ ಮುದನೂರಗೆ ಬರುತ್ತಿರುವಾಗ ಎದುರಿನಿಂದ ಕಾರು ನಂ ಕೆಎ 03 ಎಇ 6473 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ್ದರಿಂದ ನಾವು ಕೆಳಗೆ ಬಿದ್ದು ಗಾಯಗಳಾಗಿವೆ ಅಂತಾ ತಿಳಿಸಿದರು. ಆಗ ಅಲ್ಲಿಯೇ ಇದ್ದ ಅಪಘಾತ ಮಾಡಿದ ಕಾರಿನ ಚಾಲಕನಿಗೆ ಅವನ ಹೆಸರು ವಿಳಾಸ ವಿಚಾರಿಸಲಾಗಿ ಸಂಗನಗೌಡ ತಂದೆ ಬಸವರಾಜ ಸಾ|| ಸಾದ್ಯಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು, ನಂತರ ನಮ್ಮ ತಂದೆಯವರಾದ ಕೇಶವರಾವ್ ತಂದೆ ಅಣ್ಣಾರಾವ್ ಪೊಲೀಸ್ ಪಾಟೀಲ್ ವ|| 62ವರ್ಷ ಸಾ|| ಮುದನೂರ ರವರು ಕೆಳಗೆ ಬಿದ್ದಿದ್ದು ಅವರನ್ನು ನೋಡಲಾಗಿ ಅವರಿಗೆ ಬಲಗಾಲಿನ ಪಾದದ ಮೇಲೆ ತರಚಿದ ರಕ್ತಗಾಯವಾಗಿದ್ದು, ಎಡಗಾಲಿನ ತೊಡೆಗೆ ಭಾರೀ ಗುಪ್ತಗಾಯವಾಗಿ ತೊಡೆಯ ಎಲುಬು ಮುರಿದು ನಡೆಯಲು, ಕೂಡಲು ಬರದಂತೆ ಆಗಿ ನೆಲಕ್ಕೆ ಬಿದ್ದಿದ್ದರು. ಅವರೊಂದಿಗೆ ಸೈಕಲ್ ಮೋಟಾರ ಮೇಲಿದ್ದ ಬಸನಗೌಡ ತಂದೆ ಸಾಬರೆಡ್ಡಿ ಸಾ|| ಬೂದನೂರ ಈತನಿಗೆ ಎರಡೂ ಕಾಲುಗಳಿಗೆ, ಬಲಗೈಗೆ ಮತ್ತು ಎದೆಗೆ ತರಚಿದ ಗಾಯಗಳಾಗಿದ್ದು ನಮ್ಮ ತಂದೆಯವರಿಗೂ ಮತ್ತು ಬಸನಗೌಡನಿಗೂ ನಮ್ಮ ಕಾರಿನಲ್ಲಿ ಹಾಕಿಕೊಂಡು ಶಹಾಪೂರ ಸಕರ್ಾರಿ ದವಾಖಾನೆಗೆ ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ನಮ್ಮ ತಂದೆಯವರಿಗೆ ಮಿರಾಜ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಮ್ಮ ತಂದೆಯವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ನಾವು ಕೂಡಲೇ ಮಿರಾಜ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ಉಪಚಾರಪಡಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಬೂದನೂರ ಗ್ರಾಮದಿಂದ ನಗನೂರ ಮುಖಾಂತರ ನಗನೂರ ಕೆಂಭಾವಿ ರಸ್ತೆಯ ಮೇಲೆ ಸೈಕಲ್ ಮೋಟಾರ ನಂ ಕೆಎ 33 ವೈ 9331 ನೇದ್ದರ ಬರುತ್ತಿದ್ದ ನಮ್ಮ ತಂದೆಯವರಾದ ಕೇಶವರಾವ್ ರವರಿಗೆ ಅಪಘಾತವಾಗಿ ಎಡಗಾಲಿನ ತೊಡೆಯ ಎಲುಬು ಮುರಿದು ಭಾರೀ ಸ್ವರೂಪದ ಗಾಯವಾಗಲು ಮತ್ತು ಅವರೊಂದಿಗೆ ಇದ್ದ ಬಸನಗೌಡ ಇವರಿಗೆ ಗಾಯವಾಗಲು ನಮ್ಮ ತಂದೆಯವರು ಬರುತ್ತಿದ್ದ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ ಕಾರು ನಂ ಕೆಎ 03 ಎಇ 6473 ನೇದ್ದರ ಚಾಲಕನಾದ ಸಂಗನಗೌಡ ತಂದೆ ಬಸವರಾಜ ಸಾ|| ಸಾದ್ಯಾಪೂರ ತಾ|| ಶಹಾಪೂರ ಈತನ ಅತೀವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 09/2022 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

Last Updated: 15-01-2022 10:12 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080