ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-01-2023ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 7/2023 ಕಲಂ 279, 338 ಐಪಿಸಿ:ದಿನಾಂಕ 14.01.2023 ರಂದು ಮಧ್ಯಾಹ್ನ 2-30 ಗಂಟೆಗೆ ವಾಸುದೇವ ಶಮರ್ಾ ತಂದೆ ರಮೇಶ ಚಂದ್ರ ಶಮರ್ಾ ಇವರು ಠಾಣೆಗೆ ಬಂದು ಹಾಜರಪಡಿಸಿದ ಗಣಕೀಕೃತ ದೂರು ಸಾರಾಂಶವೇನೆಂದರೆ,  ದಿನಾಂಕ 11.01.2023 ರಂದು ಬೆಳಿಗ್ಗೆ 4-46 ಸಮಯಕ್ಕೆ ನನ್ನ ಕ್ಲೋಜ್ ಕಂಟೇನರ ಲಾರಿ ನಂಬರ ಹೆಚ್.ಆರ್-56, ಎ-8549 ನೇದ್ದರಲ್ಲಿ ಟಿಸಿಐ ಸಪ್ಲೈ ಚೈನ ಸೊಲ್ಯೂಶನ ಚಾಲನ ನಂಬರ 3744 ನೇದ್ದರ ಫೋರ್ಡ ಇಂಡಿಯಾ ಪ್ರೈವೇಟ್ ಲಿಮಿಟೆಡ ವಾಹನಗಳ ಬಿಡಿಭಾಗಗಳನ್ನು ಚೆನೈ ದಿಂದ ಸಾನಂದ ಗುಜರಾತಗೆ ನಮ್ಮ ಕ್ಲೋಜ್ ಕಂಟೇನರ ಲಾರಿ ಚಾಲಕ ಗಣೇಶ ಸೂರ್ಯವಂಶಿ ಈತನ ಸಂಗಡ ಕಳಿಸಿದ್ದು, ಆಕಾಶ ಕಾಳೆ ಮತ್ತು ಓಂಕಾರ ಸೂರ್ಯವಂಶಿ ನನಗೆ ಫೋನ ಮಾಡಿ ನಮ್ಮ ಕ್ಲೋಜ್ ಕಂಟೇನರ ಲಾರಿ ನಂಬರ ಹೆಚ್.ಆರ್-56, ಎ-8549 ನೇದ್ದರ ಚಾಲಕ ದಿನಾಂಕ 12.01.2023 ರಂದು ಬೆಳಿಗ್ಗೆ 6 ಗಂಟೆಗೆ ಎನ್.ಹೆಚ್-150 ಹೈವೇ ಮೇಲೆ ಪಲ್ಟಿ ಮಾಡಿ ಅಪಘಾತಪಡಿಸಿದ ಬಗ್ಗೆ ಮಾಹಿತಿ ನೀಡಿದ್ದರಿಂದ ನಾನು ಚೆನ್ನೈದಿಂದ ಇಂದು ದಿನಾಂಕ 14.01.2023 ರಂದು ಬೆಳಿಗ್ಗೆ ಬಂದು ನನ್ನ ಲಾರಿ ಕಂಟೇನರ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ್ದು, ಸದರಿ ಘಟನೆ ಬಗ್ಗೆ ನಮ್ಮ ಲಾರಿ ಚಾಲಕರಾದ ಆಕಾಶ ಇವರಿಗೆ ವಿಚಾರಿಸಿದಾಗ ತಿಳಿಸಿದ್ದೇನೆಂದರೆ, ದಿನಾಂಕ 12.01.2023 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾನು ನನ್ನ ಮುಂದೆ ಹೊರಟಿದ್ದ ಲಾರಿ ನಂಬರ ಹೆಚ್.ಆರ್-56, ಎ-8549 ನೇದ್ದರ ಹಿಂದೆ ನನ್ನ ಲಾರಿಯನ್ನು ತೆಗೆದುಕೊಂಡು ಹೊರಟಿದ್ದು, ಲಾರಿ ನಂಬರ ಹೆಚ್.ಆರ್-56, ಎ-8549 ನೇದ್ದರ ಚಾಲಕ ಗಣೇಶ ಸೂರ್ಯವಂಶಿ ತಂದೆ ಅಣ್ಣಾರಾವ ಸೂರ್ಯವಂಶಿ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಲಾರಿ ಬಳಿಚಕ್ರ-ಕಿಲ್ಲನಕೇರಾ ಮಧ್ಯದ ಎನ್.ಹೆಚ್-150ರೋಡಿನ ಎಡಗಡೆ ಪಕ್ಕಕ್ಕೆ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಲಾರಿ ಚಾಲಕ ಗಣೇಶ ಈತನಿಗೆ ಎಡಕಾಲಿನ ಪಾದದ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ..ಅಂತಾ ತಿಳಿಸಿದನು. ಕಾರಣ ನಮ್ಮ ಲಾರಿ ಕಂಟೆನರ ಚಾಲಕ ಗಣೇಶ ಸೂರ್ಯವಂಶಿ ಈತನು ದಿನಾಂಕ 12.01.2023 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ತಾನು ಓಡಿಸುತ್ತಿದ್ದ ಲಾರಿ ಕಂಟೇನರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಮಾಡಿರುತ್ತಾನೆ. ಸದರಿ ಘಟನೆಗೆ ಕಾರಣನಾದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನಾನು ಚೆನ್ನೈದಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಅಂತಾ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 07/2023 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 06/2023 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್: ನಿನ್ನೆ ದಿನಾಂಕ 13.01.2023 ರಂದು  ಸಂಜೆ 7:00 ಗಂಟೆಯ ಸುಮಾರಿಗೆ ಫೀರ್ಯಾದಿಯ ಮಗನಾದ ಗಾಯಾಳು ಸಚೀನ್ ಈತನು ತನ್ನ ಗ್ರಾಮಸ್ಥನಾದ ಗಾಯಾಳು ಭೀಮಾಶಂಕರ ಇತನ ಮೋಟಾರು ಸೈಕಲ್ ನಂಬರ ಕೆಎ-41-ವಿ-1326 ರ ಮೇಲೆ ಯಾದಗಿರಿ ದಿಂದ ಹೊರಟು ಅರಕೇರಾ(ಕೆ) ಮಾರ್ಗವಾಗಿ ಮಗದಂಪೂರ ಕಡೆಗೆ ಹೋಗುತ್ತಿದ್ದಾಗ ಅರಕೇರಾ(ಕೆ) ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ರೋಡಿನ ಮೇಲೆ ಎದುರಿಗೆ ಬರುತ್ತಿರುವ ಬಸ್ಗೆ ಓವರ್ ಟೇಕ್ ಮಾಡಿ ಅತಿವೇಗ ಮತ್ತು ಅಲಕ್ಷತನದಿಂದ ನಡೆದಿಕೊಂಡು ಬಂದ ಕಾರ್ ನಂಬರ ಕೆಎ-21-ಎನ್-4246ರ ಚಾಲಕನು ಮೋಟಾರು ಸೈಕಲ್ಗೆ ಅಪಘಾತಪಡಿಸಿದ್ದರಿಂದ ಗಾಯಾಳುದಾರರಿಗೆ ತರಚಿದ ಸಾದಾ ಸ್ವರೂಪದ ಹಾಗೂ ಭಾರಿ ಪ್ರಮಾಣದ ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿಯು ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಠಾಣೆ ಗುನ್ನೆ ನಂ: 06/2023 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 ಕಲಂ: 379 ಐಪಿಸಿ: ಇಂದು ದಿನಾಂಕಃ 14/01/2023 ರಂದು 4.30 ಪಿ.ಎಮ ಕ್ಕೆ ಆನಲೈನ ಮುಖಾಂತರ ಇ-ಎಫ.ಐ.ಆರ. ಸ್ವೀಕರಿಸಿಕೊಂಡು ಪರಿಶೀಲಿಸಿ ನೋಡಲಾಗಿ ದಿನಾಂಕಃ 24/12/2022 ರಂದು ರಾತ್ರಿ 9 ಗಂಟೆಯಿಂದ 10.45 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಧಮರ್ಾಪೂರ ಗೇಟ್ ಹತ್ತಿರ ಯಾದಗಿರ-ಹೈದರಾಬಾದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಬಿಚ್ಚಮ್ಮ ಗಂಡ ತಿಪ್ಪಣ್ಣ ಫಸಲೋಳ್ ಇವರ ಮನೆಯ ಮುಂದುಗಡೆ ನಿಲ್ಲಿಸಿದ ಕಪ್ಪು ಮತ್ತು ನೀಲಿ ಬಣ್ಣದ ಬಜಾಜ ಪಲಸರ 150 ಸಿಸಿ ಡಿ.ಟಿ.ಎಸ್.ಐ., ಮೋಟಾರ ಸೈಕಲ ನಂ.ಕೆ.ಎ-33-ಇ.ಬಿ.1953 ನೇದ್ದನ್ನು 1,30,000/- ರೂ. ನೇದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ನನ್ನ ಮೋಟಾರ ಸೈಕಲ ಮತ್ತು ಆರೋಪಿಗೆ ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಫಿಯರ್ಾದಿ ಅಜರ್ಿಯ ಸಾರಾಂಶ ಮೇಲಿಂದ ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂ. 05/2023 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 4/2023  ಕಲಂ: 323, 324, 504, 506 ಸಂಗಡ 34  ಐಪಿಸಿ: ಇಂದು ದಿನಾಂಕ 14/01/2023 ರಂದು ಸಾಯಂಕಾಲ 6:30 ಪಿ.ಎಂ ಕ್ಕೆ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ಕೊರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಾದ ಶ್ರೀ ಹಣಮಂತ ಪಿಸಿ-191 ರವರು ಮಾನ್ಯ ನ್ಯಾಯಾಲಯದಿಂದ ಸ್ವಿಕೃತಿಯಾದ ಖಾಸಗಿ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ಸವರ್ೇ ನಂ 33/1 ರ ಜಮೀನನ್ನು ಪಿಯರ್ಾದಿದಾರರು ಸಾಗುವಳಿ ಮಾಡುತ್ತಿದ್ದು ಪಿಯರ್ಾದಿದಾರರಾದ ದಂಡಪ್ಪಗೌಡ ರವರು ಆ ಜಮೀನನಲ್ಲಿ ಬೆಳೆದ ಬೆಳೆಯನ್ನು ಆರೋಪಿತರಾದ 1),ಮಲ್ಲನಗೌಡ, 2).ಸುಮಾ, 3)ಪದ್ಮಾವತಿ ರವರು ದಿನಾಂಕ 15/10/2017 ರಂದು ನಾಶಮಾಡಿದ್ದು ದಿನಾಂಕ 16/10/2017 ರಂದು ಮುಂಜಾನೆ 9:30 ಗಂಟೆಗೆ ಆರೋಪಿತರು ಪಿಯರ್ಾದಿ ಮನೆಯ ಮುಂದೆ ಹೋಗುತ್ತಿದ್ದಾಗ ಪಿಯರ್ಾದಿದಾರರು ಆರೋಪಿ ನಂ 1 ರವರಿಗೆ ಬೆಳೆಯನ್ನು ಏಕೆ ನಾಶಮಾಡಿದ್ದಿರಿ ಅಂತಾ ಕೇಳಲಾಗಿ ಆಗ ಆರೋಪಿ ನಂ 1 ನೆದ್ದವನು ಪಿಯರ್ಾದಿಗೆ ಏ ಬೊಸುಡಿ ಮಗನೇ ನಮ್ಮ ಕೇಸಿನಲ್ಲಿ ಅಪೀಲ್ ಮಾಡ್ತಿಯಾ ನಿನ್ನ ಎಲ್ಲಾ ಬೆಳೆಗಳನ್ನು ನಾಶ ಮಾಡುತ್ತೇನೆ ಏನು ಮಾಡುತ್ತಿ ಮಾಡಿಕೋ ಒಂದು ವೇಳೆ ಮತ್ತೊಮ್ಮ ನನಗೆ ಕೇಳಿದರೆ ನಿನಗೆ ಅಲ್ಲಿಯೇ ಖಲಾಸ ಮಾಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿಯಾಗಿ ಆರೋಪಿ ನಂ 1 ನೇದ್ದವನು ಪಿಯರ್ಾದಿಯ ಶರ್ಟ ಹಿಡಿದುಕೊಂಡು ಎಡಕೆನ್ನೆಯ ಮೇಲೆ ಕೈಯಿಂದ ಹಲ್ಲೆ ಮಾಡಿರುತ್ತಾರೆ ಮತ್ತು ಆರೋಪಿ ನಂ 2 ಮತ್ತು 3 ರವರು ಪಿಯರ್ಾದಿಯ ತಲೆಯೆ ಮೆಲೆ ಮತ್ತು ಬೆನ್ನಿನ ಮೇಲೆ ಹೊಡೆದಿರುತ್ತಾರೆ ಆಗ ಪಿಯರ್ಾದಿದಾರರು ಹೊಲಸು ಬಾಷೆಯಲ್ಲಿ ನಿಂದಿಸಬೇಡಿ ಎಂದು ಪಿಯರ್ಾದಿದಾರರು ಕೂಗಿ ಕೊಳ್ಳುತ್ತಿದ್ದಾಗ ಬಾಗಣ್ಣ ಹಾಗೂ ಮಾಯಪ್ಪ ಎಂಬುವವರು ಬಂದು ಜಗಳ ಬಿಡಿಸಿರುತ್ತಾರೆ ಸ್ಥಳದಿಂದ ತೆರಳುವಾಗ ಆರೋಪಿಗಳು ಪಿಯರ್ಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 04/2023 ಕಲಂ 323, 324, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 12/2023 ಕಲಂ ಕಲಂ : 420 ಸಂಗಡ 34 ಐ.ಪಿ.ಸಿ,  ಮತ್ತು ಕಲಂ 6, 6(ಎ) ಬೀಜಗಳ ಅಧಿನಿಯಮ 1966, ಹಾಗೂ ಕಲಂ 3 ಅಗತ್ಯ ವಸ್ತುಗಳ ಅಧಿನಿಯಮ 1955: ಇಂದು ದಿನಾಂಕ 14/01/2023 ರಂದು ಮುಂಜಾನೆ 10-30 ಗಂಟೆಗೆ ಫಿಯರ್ಾದಿಯವರ ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ಫಿಯರ್ಾದಿಯವರು ಬೇವಿನಹಳ್ಳಿ ಸೀಮಾಂತರದ ಮಂಜುನಾಥ ಜಾಗಿರದಾರ ಇವರ ಹೊಲ ಲಿಜಿಗೆ ಮಾಡಿ ಸದರಿ ಹೊಲದಲ್ಲಿ 25 ಪಾಕೇಟ್  ತುಳಸಿ ಕಂಪನಿಯ (ತುಳಸಿ 171 ಃಉ-)  ಅಕಿರಾ ಬಿಟಿ ಹತ್ತಿ ತಳಿ ಜುಲೈ ತಿಂಗಳಲ್ಲಿ ಉರಿದ್ದು ಸದರಿ ಬೆಳೆ  ಒಳ್ಳೆಯ ರೀತಿ ಬಂದು ನಂತರ ಸದರಿ ಬೆಳೆಗೆ ಕಾಯಿ ಕೂಡದೇ ಒಣಗಿ ಬಿದ್ದಿರುತ್ತದೆ. ಅದರಂತೆ ಶಹಾಪೂರ ತಾಲೂಕಿನ ಅನೇಕ ರೈತರ ಹೊಲದಲ್ಲಿಯು ಇದೆ ಸಮಸ್ಯ ಆಗಿದ್ದರಿಂದ ಫಿಯರ್ಾದಿಯವರು ಶಹಾಪೂರದ ಸಹಾಯಕ ಕೃಷಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಆಗ  ಕೃಷಿ ಅಧಿಕಾರಿಗಳು  ದಿನಾಂಕ 06/12/2022 ರಂದು, ಶಹಾಪೂರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬರುವ ರೈತರ ಹೊಲಗಳಿಗೆ ಹಾನಿಗೊಳಗಾದ ಬಿಟಿ ಹತ್ತಿ ಬೆಳೆ ಕ್ಷೇತ್ರಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದು, ಗಿಡಗಳ ಬೆಳವಣಿಗೆ ಗಮನಿಸಿ ಹೆಚ್ಚಿನ ವೈಜ್ಞಾನಿಕ ಸಮೀಕ್ಷೆಗಾಗಿ ವಿಜ್ಞಾನಿಗಳ ತಂಡ ನಿಯೋಜಿಸಲು ರಾಯಚೂರ ರವರಿಗೆ ಪತ್ರ ಬರೆದಿರುತ್ತಾರೆ.  ದಿನಾಂಕ 20/12/2022 ರಂದು, ಶಹಾಪೂರ ತಾಲೂಕಿನ ವಿವಿಧ ಗ್ರಾಮದಡಿ ಬರುವ ರೈತರ ಹೊಲಗಳಿಗೆ ಹಾನಿಗೊಳಗಾದ ಬಿಟಿ ಹತ್ತಿ ಕ್ಷೇತ್ರಕ್ಕೆ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕ್ಷೇತ್ರ ಪರಿಶೀಲನೆ ಹೆಚ್ಚಿನ ಪರೀಕ್ಷೆ ಕುರಿತು ಬೀಜದ ಪಾಕೇಟ್ಗಳು ಕಳುಹಿಸಿಕೊಟ್ಟಿರುತ್ತಾರೆ. ತುಳಸಿ ಸೀಡ್ ಕಂಪನಿಯಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
 

ಇತ್ತೀಚಿನ ನವೀಕರಣ​ : 15-01-2023 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080