ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-02-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ: 498(ಎ), 323, 504, 506 ಸಂಗಡ 34 ಐಪಿಸಿ ಮತ್ತು ಕಲಂ 3, 4 ಡಿ.ಪಿ ಆಕ್ಟ್ 1961 : ಇಂದು ದಿನಾಂಕಃ 14/02/2022 ರಂದು 4-00 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ 2021 ನೇ ಸಾಲಿನ ಜನವರಿ ತಿಂಗಳಲ್ಲಿ ನಮ್ಮ ಓಣಿಯ ನಮ್ಮ ಸೋದರತ್ತೆಯ ಮಗನಾದ ಶಿವಲಿಂಗ ತಂದೆ ಲಕ್ಷ್ಮಣ ಇರಬಗೇರಾ ಇವನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಮ್ಮ ಮನೆಯಲ್ಲಿ ಮಾಡಿದ ಮದುವೆ ನಿಶ್ಚಯ ಕಾಲಕ್ಕೆ ವರನಿಗೆ 3 ತೊಲೆ ಬಂಗಾರ, 70,000/- ರೂ.ಗಳು ಹಣ ಹಾಗೂ ಇನ್ನಿತರೆ ಸುಲಗಿ ಸಾಮಾನುಗಳನ್ನು ಕೊಡಿಸುವಂತೆ ವರನ ಕಡೆಯವರು ಇಟ್ಟ ಬೇಡಿಕೆಯಂತೆ ವರದಕ್ಷಿಣೆ ಕೊಡಲು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ನನ್ನ ಮದುವೆ ನಿಶ್ಚಯ ಕಾಲಕ್ಕೆ ಮಾತನಾಡಿದ ಪ್ರಕಾರ ನನ್ನ ತಾಯಿ ಹಾಗು ಸಹೋದರರು ಕೂಡಿ ನನ್ನ ಗಂಡನಿಗೆ 3 ತೊಲೆ ಬಂಗಾರ, 70,000/- ರೂ.ಗಳು ಹಣ ಮತ್ತು ಅಂದಾಜು 40,000/- ರೂ.ಗಳು ಕಿಮ್ಮತ್ತಿನ ಗೃಹ ಉಪಯೋಗಿ ವಸ್ತುಗಳನ್ನು ಕೊಟ್ಟು, ದಿನಾಂಕಃ 16/02/2021 ರಂದು ಮದುವೆ ಮಾಡಿದ್ದು ಇರುತ್ತದೆ. ಮದುವೆ ನಂತರ ನಾನು ನನ್ನ ಗಂಡನ ಮನೆಗೆ ಹೋಗಿ ಸಂಸಾರೀಕ ಜೀವನ ನಡೆಸಿರುತ್ತೇನೆ. ನಂತರ ಕಳೆದ 9 ತಿಂಗಳ ಹಿಂದೆ ನನಗೆ ನನ್ನ ಗಂಡನಾದ 1) ಶಿವಲಿಂಗ ತಂದೆ ಲಕ್ಷ್ಮಣ ಇರಬಗೇರಾ, ಅತ್ತೆಯಾದ 2) ಮಂಜುಳಾ @ ಹಣಮಂತಿ ಗಂಡ ಲಕ್ಷ್ಮಣ ಇರಬಗೇರಾ ಹಾಗು ಮೈದುನನಾದ 3) ರಂಗನಾಥ ತಂದೆ ಲಕ್ಷ್ಮಣ ಇರಬಗೇರಾ ಮೂವರು ಇನ್ನು 1,00,000/- ರೂಪಾಯಿ ವರದಕ್ಷಿಣೆ ತಗೆದುಕೊಂಡು ಬರುವಂತೆ ಹೇಳಿ ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಆರಂಭಿಸಿದರು. ಈ ವಿಷಯವನ್ನು ನಾನು ನನ್ನ ತಾಯಿ, ಅಣ್ಣ ಹಾಗು ತಮ್ಮನಿಗೆ ತಿಳಿಸಿದಾಗ ಅವರು, ನಾವು ಬಡವರಿದ್ದೇವೆ, ಇನ್ನು ಹೆಚ್ಚಿನ ಹಣ ಕೊಡಲು ಆಗುವದಿಲ್ಲ ಅಂತ ಹೇಳಿದ್ದನ್ನು ನನ್ನ ಗಂಡನ ಮನೆಯವರಿಗೆ ತಿಳಿಸಿದಾಗ ಸದರಿ ಮೇಲ್ಕಂಡ ನನ್ನ ಗಂಡ, ಅತ್ತೆ ಹಾಗು ಮೈದುನ ಮೂವರು ಸೇರಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಆರಂಭಿಸಿದ್ದು, ಅವರ ಕಿರುಕುಳವನ್ನು ಸಹಿಸಿಕೊಂಡು ಗಂಡನ ಮನೆಯಲ್ಲೆ ಜೀವನ ಸಾಗಿಸುತ್ತ ಬಂದಿರುತ್ತೇನೆ. ನಿನ್ನೆ ದಿನಾಂಕ: 13/02/2022 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಗಂಡ ಹಾಗು ಅತ್ತೆ ಇಬ್ಬರೂ ಲೇ ಸೂಳೆ ನಿನಗೆ ತವರು ಮನೆಯಿಂದ 1 ಲಕ್ಷ ರೂಪಾಯಿ ತಗೆದುಕೊಂಡು ಬಾ ಅಂತ ಹೇಳಿದರೂ ಯಾಕೆ ತರತ್ತೀಲ್ಲಾ, ಹಣ ತಂದರೆ ಮನೆಯಲ್ಲಿರು, ಇಲ್ಲದಿದ್ದರೆ ಇರಬೇಡಾ ಅಂತ ಹೇಳುತ್ತ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನನ್ನ ಅಣ್ಣ ರಾಮು ಇತನು ಬಿಡಿಸಲು ಬಂದಾಗ ನನ್ನ ಗಂಡನು ಆತನಿಗೂ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 39/2022 ಕಲಂ. 498(ಎ), 323, 504, 506 ಸಂಗಡ 34 ಐಪಿಸಿ ಮತ್ತು ಕಲಂ 3, 4 ಡಿ.ಪಿ ಆಕ್ಟ್ 1961 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ: 143, 147, 323, 504, 506 ಸಂ. 149 ಐಪಿಸಿ : ಇಂದು ದಿ: 14/02/2022 ರಂದು 8.30 ಪಿಎಮ್ಕ್ಕೆ ಶ್ರೀಮತಿ ಮಂಜುಳಾ ಗಂಡ ಶಿವಲಿಂಗ ಇರಬಗೇರಿ ವ|| 28 ವರ್ಷ ಜಾ|| ಬೇಡರ ಉ|| ಕೂಲಿ ಕೆಲಸ ಸಾ|| ಆಶ್ರಯ ಕಾಲೋನಿ ಪಾಳದಕೇರಿ ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಶಿವಲಿಂಗ ಇವರನ್ನು ಒಂದು ವರ್ಷ ಮೂರು ತಿಂಗಳ ಹಿಂದೆ ಮದುವೆಯಾಗಿದ್ದೇನೆ. ಗಂಡನೊಂದಿಗೆ ನಾನು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದೆ ಈಗ ನಾನು 4 ತಿಂಗಳ ಗಬರ್ಿಣಿಯಾಗಿದ್ದೇನೆ. ನನ್ನ ಗಂಡ ಶಿವಲಿಂಗ ಇವರು ಈ ಮೊದಲು ಚಂದ್ರಕಲಾ ಎಂಬುವವರು ಮದುವೆಯಾಗಿದ್ದರು. ಚಂದ್ರಕಲಾ ಅವರಿಗೆ ಮಕ್ಕಳು ಆಗದ ಕಾರಣ ನನ್ನನ್ನು ವಿವಾಹವಾಗಿದ್ದರು. ಚಂದ್ರಕಲಾ ಅವಳನ್ನು ಬಿಟ್ಟು ಬಿಟ್ಟಿದ್ದರು. ಮದುವೆ ಆದ ನಂತರ ಚಂದ್ರಕಲಾ ಮತ್ತು ಅವರ ಸಹೋದರರು ನನ್ನ ಮೇಲೆ ಕೆಲವು ಬಾರಿ ಹಲ್ಲೆ ಮಾಡಿದ್ದರು. ಆಗ ನಾವು ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದೆವು. ನನ್ನ ಗಂಡನ ತಾಯಿಗೆ ಅನಾರೋಗ್ಯವಿದ್ದ ಕಾರಣ ನಾನು ನನ್ನ ಗಂಡನೊಂದಿಗೆ ಮಾತನಾಡಿಸಲು ದಿನಾಂಕ: 12/02/2022 ರಂದು ಸುರಪುರಕ್ಕೆ ಬಂದಿದ್ದೆ. ಇದನ್ನು ತಿಳಿದ 1) ಚಂದ್ರಕಲಾ ಮತ್ತು ಅವರ ಸಹೋದರರಾದ 2) ರಾಮು ತಂದೆ ಸತ್ಯಪ್ಪ 3) ಗೋಪಾಲ ತಂದೆ ಸತೀಶ 4) ರಂಗನಾಥ ತಂದೆ ಯಂಕಪ್ಪ 5) ಕಿರಣ ತಂದೆ ಯಂಕಪ್ಪ ಇವರು ದಿ: 13/02/2022 ರಂದು ರಾತ್ರಿ 10 ಗಂಟೆಗೆ ನನ್ನ ಮತ್ತು ನನ್ನ ಗಂಡನೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಹೊಟ್ಟಿಗೆ ಹೊಡೆದಿದ್ದರಿಂದ ವಿಪರೀತ ನೋವು ಆಗುತ್ತಿದೆ. ನಾನು ಅನಾಥಳಿದ್ದು ನನ್ನ ಗಂಡ ಬಿಟ್ಟು ನನಗೆ ಬೇರೆ ಯಾರೂ ಇಲ್ಲ ನನಗೆ ಮತ್ತು ನನ್ನ ಗಂಡನಿಗೆ ಜೀವದ ಭಯ ಇದೆ. ಬೆಂಗಳೂರಿಗೂ ಬಂದು ಹೊಡೆಯುವದಾಗಿ ಹೆದರಿಸಿದ್ದಾರೆ ಕಾರಣ ಮೇಲ್ಕಂಡ ವ್ಯಕ್ತಿಗಳ ಮೇಲೆ ಮೊಕದ್ದಮೆ ದಾಖಲಿಸಿ ನಮಗೆ ನ್ಯಾಯ ಕೊಡಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ. ಈ ಘಟನೆಯು ನನ್ನ ಗಂಡನ ಮನೆಯ ಮುಂದೆ ನಡೆದಿರುತ್ತದೆ ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 40/2022 ಕಲಂ: 143, 147, 323, 504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ: 323, 324, 504, 506, ಸಂ. 34 ಐಪಿಸಿ : ಇಂದು ದಿ: 14/02/2022 ರಂದು 10.30 ಪಿಎಮ್ಕ್ಕೆ ಶ್ರೀ ನೀಲಪ್ಪ ತಂದೆ ಬಸವಂತ್ರಾಯ ಶೆಳ್ಳಗಿ ವ|| 35 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೇವಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ಮನೆ ಹಾಗೂ ನಮ್ಮ ದೂರದ ಸಂಬಂದಿಕರಾದ ನಾಗಪ್ಪ ತಂದೆ ಈಶ್ವರಪ್ಪ ದೇಸಾಯಿ ಇವರ ಮನೆ ಆಜು ಬಾಜು ಇರುತ್ತವೆ. ನಮ್ಮ ಮನೆಯ ಮುಂದೆ ದನಕರುಗಳನ್ನು ಕಟ್ಟುತ್ತಿದ್ದು, ದನಕರುಗಳಿಗೆ ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ ಹಾಕುತ್ತೇವೆ. ಸೊಳ್ಳೆ ಪರದೆಯು ಅವರ ಮನೆಯ ಗೋಡೆಗೆ ತಾಕಿದ್ದರಿಂದ ಆಗಾಗ ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಿದ್ದರು. ಆದರೂ ನಾವು ಅವರೊಂದಿಗೆ ಮಾತನಾಡದೇ ಸುಮ್ಮನೆ ಇರುತ್ತಿದ್ದೆವು. ಹೀಗಿದ್ದು ದಿನಾಂಕ: 14/02/2022 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಬಸವಂತ್ರಾಯ ತಂದೆ ದೊಡ್ಡಪ್ಪ ಶೆಳ್ಳಗಿ ಇಬ್ಬರು ನಮ್ಮ ಮನೆಯ ಮುಂದೆ ನಿಂತಿದ್ದಾಗ, ನಮ್ಮ ಮನೆಯ ಬಾಜು ಮನೆಯವರಾದ 1) ನಾಗಪ್ಪ ತಂದೆ ಈಶ್ವರಪ್ಪ ದೇಸಾಯಿ 2) ಮಲ್ಲಣ್ಣ ತಂದೆ ಈಶ್ವರಪ್ಪ ದೇಸಾಯಿ 3) ಬಸಮ್ಮ ಗಂಡ ಮಲ್ಲಪ್ಪ ದೇಸಾಯಿ ಈ ಮೂವರು ಕೂಡಿ ನಮ್ಮ ಮನೆಯ ಮುಂದೆ ಬಂದು ದನಕರುಗಳನ್ನು ನಮ್ಮ ಮನೆಯ ಕಡೆ ಕಟ್ಟಬೇಡಿ ಅಂತ ಹೇಳಿದರೂ ಈ ಕಡೆನೆ ಕಟ್ಟುತ್ತೀರಿ ಸೂಳೆಮಕ್ಕಳೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಮ್ಮ ತಂದೆಯವರು ನಮ್ಮ ಜಾಗದಲ್ಲಿ ನಾವು ದನಗಳನ್ನು ಕಟ್ಟಿರುತ್ತೇವೆ ಅಂತ ಅನ್ನುತಿದ್ದಾಗ ಅವರಲ್ಲಿಯ ನಾಗಪ್ಪ ಈತನು ಅಲ್ಲೇ ಬಿದ್ದ ಬಡಿಗೆಯಿಂದ ನಮ್ಮ ತಂದೆಯ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಮಲ್ಲಪ್ಪ ಈತನು ನಮ್ಮ ತಂದೆಯ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬೆನ್ನಿಗೆ ಕಪಾಳಕ್ಕೆ ಹೊಡೆದನು. ಬಸಮ್ಮ ಇವಳು ನಮ್ಮ ತಂದೆಗೆ ಕೈಯಿಂದ ಹೊಟ್ಟೆಗೆ ಹೊಡೆದು ಗುಪ್ತಪೆಟ್ಟು ಮಾಡಿದಳು. ನಂತರ ಅಲ್ಲೆ ಇದ್ದ ನಾನು, ಬಾಜು ಮನೆಯವರಾದ ಅಮರಪ್ಪ ತಂದೆ ಗುತ್ತಪ್ಪ ದೇಸಾಯಿ, ಭೀಮರಾಯ ತಂದೆ ಬಸಣ್ಣ ಶೆಳ್ಳಗಿ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡೆವು. ನಂತರ ಮೂರು ಜನ ನಮ್ಮ ತಂದೆಗೆ ಹೊಡೆಯುವದನ್ನು ಬಿಟ್ಟು ಇವರುಗಳು ಬಂದು ಬಿಡಿಸಿದ್ದಾರೆ ಅಂತ ನಿನ್ನ ಜೀವ ಹೊಡೆಯದೇ ಬಿಟ್ಟಿದ್ದೇವೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನಮ್ಮ ತಂದೆಗೆ ನಾನು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ಉಪಚಾರ ಕುರಿತು ಸೇರಿಕೆ ಮಾಡಿದೆನು. ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ, ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಆದ್ದರಿಂದ ನಮ್ಮ ತಂದೆಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 03 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 41/2022 ಕಲಂ: 323, 324, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 

 
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 24/2022 ಕಲಂ 379 ಐಪಿಸಿ : ನಾನು ಊರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದು, ನನ್ನದು ಹಾಗೂ ನಮ್ಮ ಅಣ್ಣ ತಮ್ಮಂದಿರದು ಸೇರಿ ಒಟ್ಟು 11 ಎಕರೆ ಗದ್ದೆ ಲೀಜಿಗೆ ಹಾಕಿಕೊಂಡು ಇರುತ್ತೇನೆ. ಈ ವರ್ಷ ಸದರಿ ಗದ್ದೆಯಲ್ಲಿ ಒಟ್ಟು 395 ಚೀಲ ಕವಳಿ ಬೆಳೆದಿರುತ್ತೇನೆ. ಈ ಕವಳಿ ಮಾರಿದ ಪಟ್ಟಿ ಒಟ್ಟು 4,84,500/-ರೂಪಾಯಿಗಳು ಬಂದಿದ್ದು, ಸದರಿ ಹಣವನ್ನು ನಾನು ನನ್ನ ಕೆನರಾ ಬ್ಯಾಂಕ್ ಖಾತೆ ನಂ-0523101041786, ನೇದ್ದಕ್ಕೆ ಜಮಾ ಮಾಡಿರುತ್ತೇನೆ. ಹೀಗಿದ್ದು, ದಿನಾಂಕ 11/02/2022 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ನಾನು ನನ್ನ ಹೊಂಡಾ ಶೈನ್ ಮೋಟರ್ ಸೈಕಲ್ ನಂ ಕೆ.ಎ 33 ಎಲ್ 4638, ನೇದ್ದನ್ನು ತೆಗೆದುಕೊಂಡು ಯಾದಗಿರಿಗೆ ಬಂದೆನು. ನಂತರ ಚಕ್ರಕಟ್ಟಾ ಏರಿಯಾದಲ್ಲಿ ಇರುವ ಕೆನರಾ ಬ್ಯಾಂಕಿಗೆ ಹೋಗಿ, ನನ್ನ ಖಾತೆಯಿಂದ 1,50,000/- ರೂಪಾಯಿಗಳನ್ನು ಮಧ್ಯಾಹ್ನ 1-45 ಪಿ.ಎಂಕ್ಕೆ ನಾನು ಬ್ಯಾಂಕ್ ಸರತಿ ಸಾಲಿನಲ್ಲಿ ನಿಂತು ಹಣ ಡ್ರಾ ಮಾಡಿದೆನು. ನಂತರ ಅಲ್ಲೆ ಕುಳಿತು ನನ್ನ ಹಣವನ್ನು ಎಣಿಕೆ ಮಾಡಿ, ಅಲ್ಲಿಂದ ಬ್ಯಾಂಕ್ ಹೊರಗಡೆ ನನ್ನ ಬೈಕ್ ನಿಲ್ಲಿಸಿದ ಕಡೆಗೆ ಬಂದೆನು. ನನ್ನ ಹತ್ತಿರ ಇದ್ದ 500/- ರೂ ಮುಖ ಬೆಲೆಯ ಒಟ್ಟು 1,50,000/- ರೂಪಾಯಿಗಳನ್ನು ಒಂದು ಪ್ಲಾಸಿಕ್ ಚೀಲದಲ್ಲಿ ಹಾಕಿ ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರನಲ್ಲಿ ಇಟ್ಟೆನು. ಮೋಟರ್ ಸೈಕಲ್ ಚಾಲು ಮಾಡುಬೇಕು ಅನ್ನುವಷ್ಠರಲ್ಲಿ ಯಾರೋ ಒಬ್ಬರು ನನ್ನ ಹಿಂದೆ ಬಂದು, ನನ್ನ ಎಡಕಿನ ಹತ್ತಿರ ತುಕರ್ಿ ಪದಾರ್ಥ ಚೆಲ್ಲಿ ಮುಂದೆ ಹೋದನು. ನಾನು, ಹೇ ಯಾರಲೇ ನೀನು ಅಂದ ಕೂಡಲೆ ಅವನು ಅಲ್ಲಿಂದ ಓಡಿ ಹೋದನು. ನಾನು ಅಷ್ಠಕ್ಕೆ ಸುಮ್ಮನಾಗಿ ನನ್ನ ಮೋಟರ್ ಸೈಕಲ್ ಚಾಲು ಮಾಡಿಕೊಂಡು ಮುಂದೆ ಯಾದಗಿರಿ ನಗರದ ಚಿತ್ತಾಪೂರ ರೋಡಿನಲ್ಲಿ ಇರುವ ರಾಜಕೋಟ್ ಹಾಡರ್್ವೇರ್ ಅಂಗಡಿ ಮುಂದೆ ಹೋಗಿ ನನ್ನ ಮೋಟರ್ ಸೈಕಲ್ ನಿಲ್ಲಸಿ, ನಾನು ಅಂಗಡಿಯಲ್ಲಿ ಪಿಂಕಲರ್ ಪೈಪ್ ಬೆಂಡ್ ಖರೀದಿ ಮಾಡಿದೆನು. ನಂತರ 10-15 ನಿಮಿಷದಲ್ಲಿ ಮೋಟರ್ ಸೈಕಲ್ ಹತ್ತಿರ ಬಂದು ಊರಿಗೆ ಹೋಗೋಣ ಅಂತಾ ಮೋಟರ ಸೈಕಲ್ ಚಾಲು ಮಾಡುವಾಗ ನನ್ನ ಹಣ ನೋಡಿಕೊಂಡೆನು ಗಾಡಿಯಲ್ಲಿ ಹಣ ಇರಲಿಲ್ಲ. ಆಗ ಸಮಯ ಮಧ್ಯಾಹ್ನ 02-30 ಗಂಟೆಯಾಗಿತ್ತು. ನಂತರ ನಾನು ಗಾಭರಿಯಾಗಿ ಊರಲ್ಲಿ ಇರುವ ನಮ್ಮ ಸಂಬಂಧಿಗಳಾದ 1] ಮಲ್ಲಯ್ಯ ತಂದೆ ಹಣಮಂತ ಡೊಂಗೇರ, 2] ಬಸವರಾಜ ತಂದೆ ಹಣಮಂತ ಡೊಂಗೇರ ಮತ್ತು 3] ಮಲ್ಲಯ್ಯ ತಂದೆ ಹಣಮಂತ ಬಾಡದ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿ ವಿಚಾರಿಸಿದರು. ಎಲ್ಲರು ಕೂಡಿ ಅಲ್ಲಿ ಅಲ್ಲಿ ತಿರುಗಾಡಿ ವಿಚಾರಿಸಿ, ನೋಡಲಾಗಿ ಹಣ ತೆಗೆದುಕೊಂಡವರ ಯಾರ ಸುಳಿವು ಕಾಣಲಿಲ್ಲ. ಬ್ಯಾಂಕ್ ಹತ್ತಿರ ತುಕರ್ಿ ಪದಾರ್ಥ ಚೆಲ್ಲಿದವನು ಸಣ್ಣ ವಯಸ್ಸಿನ ಹುಡುಗನಿದ್ದು, ಕಪ್ಪಗೆ, ತೆಳ್ಳಗೆ ಇದ್ದು, ನೀಲಿ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಶಟರ್್ ಹಾಕಿದ್ದು, ಮುಖಕ್ಕೆ ಮಾಸ್ಕ ಹಾಕಿದ್ದನು. ಯಾರೋ ಕಳ್ಳರು ನಾನು ಹಣ ಡ್ರಾ ಮಾಡುವದನ್ನು ನೋಡಿ, ನನಗೆ ಪಾಲೋ ಮಾಡಿ, ಈ ರೀತಿ ಕೃತ್ಯ ವೆಸಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ಊರು ನೀಡುತ್ತಿದ್ದು, ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೋರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 24/2022 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 24/2022 ಕಲಂ: 379 ಐಪಿಸಿ : ದಿನಾಂಕ:14/02/20222 ರಂದು 7-30 ಎಎಮ್ ಕ್ಕೆ ದೀಪಕ ಆರ್. ಭೂಸರೆಡ್ಡಿ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ:14/02/2022 ರಂದು ಬೆಳಗ್ಗೆ 4-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸಂಗಡ ರಾಘವೇಂದ್ರ ರೆಡ್ಡಿ ಪಿಸಿ 254 ಹಾಗೂ ಜೀಪ ಚಾಲಕ ಬಸರಾಜ ಎ.ಹೆಚ್.ಸಿ 31 ರವರೊಂದಿಗೆ ಸರಕಾರಿ ಜೀಪ್ ನಂ. ಕೆಎ 33 ಜಿ 0314 ನೇದ್ದರಲ್ಲಿ ಪೆಟ್ರೋಲಿಂಗ್ ಮಾಡುತ್ತಾ ವಡಗೇರಾ ಪೊಲೀಸ್ ಠಾಣೆಗೆ ಭೇಟಿ ನೀಡಿದೆನು. ಆಗ ನನಗೆ ಕೊಂಕಲ್-ಚನ್ನೂರು ಸೀಮಾಂತರದ ಕೃಷ್ಣಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಗೊಂದೆನೂರು ಕ್ರಾಸ ಮೂಲಕ ಟಿಪ್ಪರನಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದಿದರಿಂದ ನಾನು ವಡಗೇರಾ ಪೊಲೀಸ್ ಠಾಣೆಯ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರಿಗೆ ಸಿಬ್ಬಂದಿಯವರೊಂದಿಗೆ ಪೊಲೀಸ್ ಠಾಣೆಗೆ ಬರಲು ತಿಳಿಸಿದೆನು. ಆಗ ಪಿ.ಎಸ್.ಐ (ಕಾಸು) ರವರು ತಮ್ಮ ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ಮಹೇಂದ್ರ ಪಿಸಿ 254 ರವರೊಂದಿಗೆ ಠಾಣೆಗೆ ಆಗಮಿಸಿದರು. ಆಗ ನಾನು ಸದರಿಯರವರಿಗೆ ಅಕ್ರಮ ಮರಳು ಸಾಗಾಣಿಕೆಯ ಖಚಿತ ಬಾತ್ಮಿ ಬಂದ ಬಗ್ಗೆ ಮಾಹಿತಿ ನೀಡಿ, ಎಲ್ಲರನ್ನು ನಮ್ಮ ಸರಕಾರಿ ಜೀಪಿನಲ್ಲಿ ಕರೆದುಕೊಂಡು ಹೊರಟು 5:30 ಎ.ಎಮ್ ಸುಮಾರಿಗೆ ಹತ್ತಿಗೂಡುರು-ಸಂಗಮ ಮೇನ ರೋಡ ಗೊಂದೆನೂರು ಕ್ರಾಸನಲ್ಲಿ ಹೋಗಿ ನಿಂತುಕೊಂಡಾಗ 5-45 ಎಎಮ್ ಸುಮಾರಿಗೆ ಕೊಂಕಲ್-ಚನ್ನೂರು ಸೀಮಾಂತರದ ಕೃಷ್ಣಾ ನದಿ ಕಡೆಯಿಂದ ಒಂದು ಟಿಪ್ಪರ ಮರಳು ತುಂಬಿಕೊಂಡು ಬರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಸದರಿ ಟಿಪ್ಪರ ನಿಲ್ಲಿಸಿ, ಚಾಲಕನಿಗೆ ವಶಕ್ಕೆ ಪಡೆಯಲು ಹೋದಾಗ ಅವನು ಕೊಸರಿಕೊಂಡು ಓಡಿ ಹೋದನು. ಸದರಿ ಟಿಪ್ಪರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಟಿಪ್ಪರ ನಂಬರ ನೋಡಲಾಗಿ ನಂ. ಕೆಎ 33 ಬಿ 0121 ಇರುತ್ತದೆ. ಸದರಿ ಟಿಪ್ಪರನಲ್ಲಿ ಮರಳು ತುಂಬಿರುತ್ತದೆ. ಸದರಿ ಟಿಪ್ಪರ ಅ:ಕಿ: 5 ಲಕ್ಷ ರೂ. ಮತ್ತು ಟಿಪ್ಪರನಲ್ಲಿರುವ ಮರಳಿನ ಅ:ಕಿ: 10,000/- ರೂ. ಆಗಬಹುದು. ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 7-30 ಎಎಮ್ ಕ್ಕೆ ಟಿಪ್ಪರದೊಂದಿಗೆ ಮರಳಿ ಠಾಣೆಗೆ ಬಂದು ನಿಮಗೆ ಈ ದೂರು ನೀಡುತ್ತಿದ್ದು, ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 ಕಲಂ. 279,337, 338 ಐಪಿಸಿ : ದಿನಾಂಕ 14-02-2022 ರಂದು ರಾತ್ರಿ 08-00 ಗಂಟೆಗೆ ಯಾದಗಿರಿ ಶರಣಬಸವ ಆಸ್ಪತ್ರೆಯಿಂದ ಎಮ್.ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಅಲ್ಲಿ ಗಾಯಾಳುವನ್ನು ವಿಚಾರಿಸಿ ಗಾಯಾಳು ಹೇಳಿಕೆ ನೀಡಿದ ಸಾರಂಶವೆನೆಂದರೆ ಇಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಹೊಲಕ್ಕೆ ಶೇಂಗಾ ಅರಿಯಲು ಹೋಗಿದ್ದು ಸಾಯಂಕಾಲ ಶೇಂಗಾ ಅರಿಯುವದು ಮುಗಿದ ನಂತರ ವಾಪಸ ಮನೆಗೆ ಹೋಗಬೇಕಂತ ರೋಡಿಗೆ ಬಂದಿದ್ದು ಆಗ ನಾನು ಮತ್ತು ನಮ್ಮೂರಿನ ಸಂಗಮ್ಮ ಮತ್ತು ಇತರರು ಸೇರಿ ನಿಂತಿರುವಾಗ ನಮ್ಮೂರಿನ ದೇವಿಂದ್ರಪ್ಪ ನ ಆಟೋ ಬಂತು ಆಗ ನಾವೆಲ್ಲರು ಕೂಡಿ ಆತನ ಆಟೋ ನಂ. ಕೆಎ-33. 3630 ನೇದ್ದರಲ್ಲಿ ಕುಳಿತು ಯರಗೊಳ ಗ್ರಾಮಕ್ಕೆ ಸಾಯಂಕಾಲ 06-30 ಗಂಟೆಗೆ ಬೈಪಾಸ ರೋಡಿನ ಮೇಲೆ ಹೋಗುತ್ತಿರುವಾಗ ಆಟೋ ಚಾಲಕನು ತಾನು ನಡೆಸುವ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೆ ಕಟ್ ಮಾಡಿದ್ದರಿಂದ ನಾನು ಮತ್ತು ಸಂಗಮ್ಮ ಇಬ್ಬರು ಆಟೋದಿಂದ ಕೆಳಗೆ ಬಿದ್ದೆವು ಕೆಳಗೆ ಬಿದ್ದಾಗ ನಮಗೆ ಭಾರಿ ಮತ್ತು ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ಪಿಯರ್ಾಧಿ. ಸಾರಂಶ ಇರುತ್ತದೆ

ಇತ್ತೀಚಿನ ನವೀಕರಣ​ : 15-02-2022 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080