ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-03-2022
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 35/2022 ಕಲಂ 454, 457, 380 ಐಪಿಸಿ : ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ವಿಜ್ಜಿಬಾಯಿ, ಇಬ್ಬರು ಸಣ್ಣ ಮಕ್ಕಳು ಇರುತ್ತೇವೆ. ನಮ್ಮ ಅಕ್ಕಳಾದ ಲಕ್ಷ್ಮೀಬಾಯಿ ಇವರಿಗೆ ಯಾದಗಿರಿ ನಗರದ ಗಾಂಧಿನಗರ ತಾಂಡಾದ ಪುರಂಧರದಾಸ ಇವರಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ತಂದೆಗೆ ದಿನಾಂಕ 12/03/2022 ರಂದು ಕಣ್ಣಿನ ಆಫ್ರೆಶನ್ ಮಾಡಿಸಿ ನಮ್ಮ ಅಕ್ಕಳ ಮನೆಗೆ ಕಳುಹಿಸಿದ್ದರಿಂದ ಅವರು ಅಲ್ಲೆ ಇದ್ದರು. ಹೀಗಿದ್ದು ನಿನ್ನೆ ದಿನಾಂಕ 13/03/2022 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ನಮ್ಮ ಮನೆಯ ಬೀಗ ಹಾಕಿಕೊಂಡು ನಾವು ಕುಟುಂಬದೊಂದಿಗೆ ನಮ್ಮ ತಂದೆಗೆ ಮಾತನಾಡಿಸಲೆಂದು ಯಾದಗಿರಿಯ ಗಾಂಧಿನಗರ ತಾಂಡಾದ ನಮ್ಮ ಅಕ್ಕಳ ಮನೆಗೆ ಹೋಗಿ ಅಲ್ಲೆ ಉಳಿದುಕೊಂಡೆವು. ನಂತರ ಇಂದು ದಿನಾಂಕ 14/03/2022 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಬಾಗಿಲು ಕೀಲಿ ಚಿಲಕ ಮುರಿದು ಬಾಗಿಲು ತೆರೆದಿದ್ದು ಕಂಡು ಬಂತು. ಗಾಭರಿಯಾಗಿ ನಾವು ಒಳಗೆ ಹೋಗಿ ನೋಡಿದಾಗ ಮನೆಯಲ್ಲಿಯ ಬಟ್ಟೆ ಬರಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಬೆಡ್ ರೂಮಿನ ಪ್ಲೌಡ್ ನಿಂದ ಮಾಡಿದ ಅಲಮರಿಯ ಕೂಡ ಮುರಿದು ಅದರಲ್ಲಿ ಇಟ್ಟಿದ್ದ 1] ಒಂದು 35 ಗ್ರಾಂ. ಬಾಂಗಾರದ ತಾಳಿ ಚೈನ್, ಅ.ಕಿ 1,05,000/- ರೂ|| ಗಳು, 2] ಒಂದು 15 ಗ್ರಾಂ. ಬಂಗಾರದ ನೆಕ್ಲೆಸ್, ಅ.ಕಿ 45,000/- ರೂ|| ಗಳು, 3] ತಲಾ 5 ಗ್ರಾಂ. ಬಂಗಾರದ 4 ಉಂಗುರಗಳು (ಒಟ್ಟು 20 ಗ್ರಾಂ), ಅ.ಕಿ 60,000/- ರೂ|| ಗಳು, ಹಾಗೂ ನಗದು ಹಣ 80,000/- ರೂಪಾಯಿಗಳು, ಕಳ್ಳತನವಾಗಿದ್ದು ಕಂಡು ಬಂತು. ನಂತರ ನಾನು ನಮ್ಮ ಅಳಿಯ ವೆಂಕಟೇಶ ತಂದೆ ಬಸ್ಸ್ಯಾ ಚವ್ಹಾಣ, ಮಾರುತಿ ತಂದೆ ಶಂಕರ ರಾಠೋಡ, ಹಾಗೂ ವೆಂಕಟೇಶ ತಂದೆ ಪುರಂಧರದಾಸ ಚವ್ಹಾಣ ಇವರಿಗೆ ತಿಳಿಸಿದಾಗ ಅವರು ಕೂಡ ನಮ್ಮ ಮನೆಗೆ ಬಂದು ನೋಡಿ ಹೇಗಾಯಿತು ಅಂತಾ ನನಗೆ ವಿಚಾರಣೆ ಮಾಡಿದರು. ಕಾರಣ ದಿನಾಂಕ 13/03/2022 ರಂದು ಮಧ್ಯಾಹ್ನ 02-00 ಗಂಟೆಯಿಂದ ದಿನಾಂಕ 14/03/2022 ರಂದು ಬೆಳಿಗ್ಗೆ 09-00 ಗಂಟೆಯ ಅವಧಿಯಲ್ಲಿ ನಾವು ನಮ್ಮ ಮನೆಯ ಬೀಗ ಹಾಕಿಕೊಂಡು ಯಾದಗಿರಿಯ ಗಾಂಧಿನಗರ ತಾಂಡಾದಲ್ಲಿ ಇರುವ ನಮ್ಮ ಅಕ್ಕನ ಮನೆಗೆ ಹೋದಾಗ ಯಾರೋ ಕಳ್ಳರು ನಮ್ಮ ಮನೆಯ ಬೀಗದ ಕೊಂಡಿ ಮುರಿದು ಒಳಗೆ ಹೋಗಿ ಮನೆಯಲ್ಲಿ ಇದ್ದ ಒಟ್ಟು 2,90,000/-ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2022 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 25/2022 ಕಲಂ: 323,504,506,498(ಂ),109 ಖ/ಘ 34 ಕಅ,ಂಓಆ 3,4 ಆಕ ಂಅಖಿ : ಇಂದು ದಿನಾಂಕ:14.03.2022 ರಂದು ಮಧ್ಯಾಹ್ನ 2:30 ಗಂಟೆಗೆ ಪಿಯರ್ಾದಿ ಶ್ರೀ ಮುದಕಪ್ಪ ತಂ ಹಣಮಪ್ಪ ಹಾಲಭಾವಿ ವಯ: 62 ಜಾತಿ: ಹಿಂದು ಬೇಡರ ಉದ್ಯೋಗ: ಒಕ್ಕಲುತನ ಸಾ. ಯರಗೋಡಿ ತಾ. ಲಿಂಗಸುಗೂರ ಜಿ:ರಾಯಚೂರ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ ಮಾಡಿಸಿಕೊಂಡು ತಂದು ಒಂದು ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೇಂದರೆ ನಾನು ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ನನಗೆ ಬಸವಂತ್ರಾಯ, ಮಹಾಂತೇಶ, ರವಿ, ದ್ಯಾವಣ್ಣ ಅಂತ ಹೆಸರಿನ ನಾಲ್ಕು ಜನ ಗಂಡು ಮಕ್ಕಳು ಹಾಗೂ ಲಕ್ಷ್ಮೀಬಾಯಿ, ಮಾಳಗುಂಡಮ್ಮ, ಹುಲಿಗೆಮ್ಮ, ಶಿವಮ್ಮ, ದ್ಯಾವಮ್ಮ ಹೆಸರಿನ ಐದು ಜನ ಹೆಣ್ಣು ಮಕ್ಕಳು ಇದ್ದು ನನ್ನ ಮಗಳಾದ ಶಿವಮ್ಮ ಇವರಿಗೆ ಈಗ ಎರಡು ವರ್ಷದ ಹಿಂದೆ ಸುರಪುರ ತಾಲ್ಲೂಕಿನ ಐದಬಾಯೇರದೊಡ್ಡಿ ಕಕ್ಕೆರಾದ ರಮೇಶ ತಂ. ಅಂಬ್ರಪ್ಪ ಐದಭಾವಿ ವಯ: 28 ಇತನಿಗೆ ಕೊಟ್ಟು ಮದುವೆ ಮಾಡಿದ್ದು ನನ್ನ ಮಗಳಾದ ಶಿವಮ್ಮಳ ಮದುವೆಯು ಲಿಂಗಸೂರು ತಾಲೂಕಿನ ಹಾಲಬಾವಿ ಗ್ರಾಮದ ಹಣಮಂತ ದೇವರ ಗುಡಿಯ ಮುಂದೆ ಸಾಮೂಹಿಕ ವಿವಾಹದಲ್ಲಿ ಆಗಿರುತ್ತದೆ. ಮದುವೆಯ ಕಾಲಕ್ಕೆ 2 ತೊಲೆ ಬಂಗಾರ ಹಾಗೂ 1,00,000/- ರೂ ಹಣವನ್ನು, ಸುಮಾರು 80,000/- ಬೆಲೆಬಾಳುವ ಮನೆ ಬಳಕೆಯ ವಸ್ತಗಳನ್ನು ವರದಕ್ಷಿಣೆಯಾಗಿ ನೀಡಿದ್ದು ಈ ವೇಳೆ ನಮ್ಮೂರ 1)ಬಸಣ್ಣ ತಂ. ಬಾಲಪ್ಪ ದಳಪತಿ, 2)ಹನಮಪ್ಪ ತಂದೆ ಹನಮಂತ್ರಾಯ ಗೆದ್ದಲಮರಿ ಸಾ. ಯರಗೋಡಿ ಹಾಗೂ ಹಣಮಗೌಡ ತಂ. ಭೀಮನಗೌಡ ಸಾ. ಕಡದರಗಡ್ಡಿ ಮತ್ತು ನಮ್ಮ ಸಂಬಂಧಿಕರು ಹಾಗೂ ಅಳಿಯ ರಮೇಶನ ಸಂಬಂಧಿಕರು ಮತ್ತು ಇತರರು ಇದ್ದರು. ವಿವಾಹವಾದ ಸ್ವಲ್ಪ ದಿನ ಅಂದರೆ ಆರು ತಿಂಗಳವರೆಗೆ ನನ್ನ ಮಗಳು ಮತ್ತು ಅಳಿಯ ಚೆನ್ನಾಗಿ ಸಂಸಾರಿಕ ಜೀವನ ನೆಡೆಸಿಕೊಂಡು ಬಂದಿದ್ದು ತದನಂತರ ನನ್ನ ಮಗಳ ಗಂಡನ ಸೋದರಮಾವನಾದ ನಂದಪ್ಪ ತಂದೆ ಹುಲಗಪ್ಪ ಜಂಪಾ ಸಾ: ಜಂಪಾರದೊಡ್ಡಿ ಕಕ್ಕೇರಾ ಈತನ ಕುಮ್ಮಕ್ಕಿನಿಂದ ನನ್ನ ಮಗಳಿಗೆ ಆಕೆಯ ಗಂಡನಾದ ರಮೇಶ ಹಾಗೂ ಅವಳ ಅತ್ತೆಯಾದ ಆದಮ್ಮ ಗಂ. ಅಂಬ್ರಪ್ಪ ಹಾಗೂ ಮಾವನಾದ ಅಂಬ್ರಪ್ಪ ತಂ. ಸೋಮಪ್ಪ ಮೂರು ಜನ ಸೇರಿ ನನ್ನ ಮಗಳಿಗೆ ದಿನ ನಿತ್ಯ ಅವಾಚ್ಯ ಶಬ್ದಗಳಿಂದ ಬೈಯುವದು, ಕೈಯಿಂದ ಹೊಡೆ-ಬಡೆ ಮಾಡುವದು ಮಾಡಿ, ಸೂಳೆ ನಮಗೆ ಎಷ್ಟು ದಿವಸದಿಂದ ಮೂಲಾಗಿದ್ದೀ ಬಂಜಿ ಅಂತ ಬೈದು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕುತ್ತಾ ಬಂದಿದ್ದು, ನನ್ನ ಮಗಳಿಗೆ ನಿನ್ನ ತವರು ಮನೆಗೆ ಹೋಗಿ ಇನ್ನೂ 5 ಲಕ್ಷ ರೂಪಾಯಿ ಹಾಗೂ ಎರಡು ತೊಲಿ ಬಂಗಾರ ತೆಗೆದುಕೊಂಡು ಬಾ ಎಂದು ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು ಈ ವಿಷಯವನ್ನು ನನ್ನ ಮಗಳು ನನಗೆ ಹೇಳಿದಾಗ ನಾನು ಮತ್ತು ನಮ್ಮೂರಿನ ಹಿರಿಯರಾದ ಬಸಣ್ಣ ತಂ. ಬಾಲಪ್ಪ ದಳಪತಿ ಸಾ. ಯರಗೋಡಿ ಹಾಗೂ ಹಣಮಗೌಡ ತಂ. ಭೀಮನಗೌಡ ಸಾ. ಕಡದರಗಡ್ಡಿ ಇವರನ್ನು ಕರೆದುಕೊಂಡು ಐದಬಾಯೇರದೊಡ್ಡಿ ಕಕ್ಕೆರಾಗೆ ಬಂದು ಕಕ್ಕೇರಾದ ನನ್ನ ಅಳಿಯ ಮಾವನಾದ ನಂದಪ್ಪ ತಂದೆ ಹುಲಗಪ್ಪ ಜಂಪಾ ಹಾಗೂ ಹಿರಿಯರಿಗೆ ನಡೆದ ಘಟನೆ ಗಮನಕ್ಕೆ ತಂದು ನ್ಯಾಯ ಪಂಚಾಯತಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವದಿಲ್ಲ. ನಂತರ ಸ್ವಲ್ಪ ದಿನ ಸುಮ್ಮನಿದ್ದು ಆಮೇಲೆ ಮತ್ತೆ ನನ್ನ ಮಗಳ ಮೇಲೆ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳ ಕೊಡುತ್ತಾ ಬಂದಿದ್ದು ಮತ್ತು ಸುರಪೂರ ತಾಲ್ಲೂಕಿನ ಕéೃಷ್ಣಾಪೂರ ಸೀಮಾಂತರದ ಹೊಲದಲ್ಲಿ ಕೂಲಿ ಕೆಲಸಕ್ಕೆ ಎಂದು ಹತ್ತಿ ಬಿಡಿಸಲು ಕರೆದುಕೊಂಡು ಹೋಗಿ ನನ್ನ ಮಗಳನ್ನು ದಿನಾಂಕ: 23.12.2021 ರಂದು ಅಲ್ಲೇ ಬಿಟ್ಟು ಬಂದು ನನಗೆ ದಿನಾಂಕ: 24.12.2021 ಸೋಮವಾರದಂದು ನನ್ನ ಅಳಿಯ ರಮೇಶ ನನಗೆ ಫೋನ್ ಮಾಡಿ ನಿನ್ನ ಮಗಳು ಮತ್ತು ಅವಳ ಸಂಗಡ ಮೂರು ಜನ ಹೆಣ್ಣು ಮಕ್ಕಳು ಊರಿಗೆ ಬರದೇ ಕಾಣೆಯಾಗಿದ್ದಾರೆ. ನಿಮ್ಮೂರಿಗೆ ಬಂದಿದ್ದಾರೆಯೇ? ಎಂದು ಹೇಳಿದಾಗ ನಮಗೆ ಸದರಿ ವಿಷಯ ಕೇಳಿ ಒಂದು ಕ್ಷಣ ದಿಗ್ಭ್ರಮೆಗೊಂಡು ದಿಕ್ಕು ತೋಚದಂತಾಯಿತು. ಆಗ ರಾತ್ರಿ 12 ಘಂಟೆಗೆ ನಮ್ಮೂರಿನ ಹಿರಿಯರಾದ ಬಸಣ್ಣ ದಳಪತಿ ಹಾಗೂ ಹಣಮಗೌಡ ತಂದೆ ಭೀಮನಗೌಡ ಹಾಗೂ ನಮ್ಮ ಕುಟುಂಬದವರನ್ನು ಕರೆದುಕೊಂಡು ನನ್ನ ಮಗಳಾದ ಶಿವಮ್ಮಳಿಗೆ ಎಲ್ಲಾ ಕಡೆ ಹುಡುಕಿದರೂ, ನಮ್ಮ ಮಗಳು ಸಿಕ್ಕಿರುವುದಿಲ್ಲ. ಆಗ ದಿನಾಂಕ 25.12.2021 ರಂದು ಐದಬಾಯೇರದೊಡ್ಡಿ ಕಕ್ಕೇರಾಗೆ ಬಂದು ನನ್ನ ಅಳಿಯ ರಮೇಶ ಹಾಗೂ ಅವನ ತಂದೆ ಅಮರಪ್ಪ, ತಾಯಿ ಆದಮ್ಮ ರವರನ್ನು ವಿಚಾರಿಸಿದಾಗ ನನ್ನ ಮಗಳ ಬಗ್ಗೆ ಯಾವುದೇ ಸುಳಿವು ನೀಡದೇ ಸುಮ್ಮನಿದ್ದು, ದಿನಾಂಕ 29.12.2021 ರಂದು ನನ್ನ ಅಳಿಯನಾದ ರಮೇಶನು ತನ್ನ ಹೆಂಡತಿ ಶಿವಮ್ಮಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದು ಈ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣದ ಸಂಖ್ಯೆ 79/2021 ದಾಖಲಾಗಿದ್ದು ನಮ್ಮ ಮಗಳಾದ ಶಿವಮ್ಮಳಿಗೆ ತಾವು ಪತ್ತೆಮಾಡಿ ದಿನಾಂಕ 03.01.2022 ರಂದು ಕೊಡೇಕಲ್ ಪೋಲಿಸ್ ಠಾಣೆಗೆ ಕರೆತಂದು ನನ್ನ ಅಳಿಯ ಮತ್ತು ಅಳಿಯನ ಸೋದರ ಮಾವನಾದ ನಂದಪ್ಪ ತಂ. ಹುಲಗಪ್ಪ ಜಂಪರದೊಡ್ಡಿ ಸಾ. ಕಕ್ಕೆರಾ ರವರಿಗೆ ತಿಳಿಸಿದ್ದು ಅವರು ನನಗೆ ಸಮಯ ಮದ್ಯಾಹ್ನ 12:00 ಗಂಟೆಯ ಸುಮಾರಿಗೆ ಫೋನ್ ಮಾಡಿ ಕೊಡೆಕಲ್ಲ ಠಾಣೆಗೆ ಬರಲು ತಿಳಿಸಿದರು. ಆಗ ನಾನು ಮತ್ತು ನನ್ನ ಕುಟುಂಬದವರನ್ನು ಹಾಗೂ ನಮ್ಮೂರಿನ ಹಿರಿಯರನ್ನು ಕರೆದುಕೊಂಡು ಸಮಯ ಸಾಯಂಕಾಲ 4:30 ಸುಮಾರಿಗೆ ಕೊಡೇಕಲ್ ಠಾಣೆಗೆ ಬಂದಿದ್ದು ಠಾಣೆಯಲ್ಲಿ ನನ್ನ ಮಗಳಿಗೆ ನಮ್ಮ ಸಮಕ್ಷಮದಲ್ಲಿ ವಿಚಾರಿಸಿ ಆಕೆಯ ಗಂಡ ಮತ್ತು ಅತ್ತೆ ಮಾವಂದಿರೊಂದಿಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ನಾನು ದಿನಾಂಕ:26/02/2022 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಐದಬಾಯೇರದೊಡ್ಡಿ ಕಕ್ಕೇರಾಕ್ಕೆ ನನ್ನ ಮಗಳ ಮನೆಗೆ ಹೋಗಿ ನನ್ನ ಮಗಳ ಯೋಗಕ್ಷೇಮ ವಿಚಾರಿಸಿ ನನ್ನ ಮಗಳನ್ನು ನಾಲ್ಕು ದಿನ ಹಬ್ಬಕ್ಕೆ ಕರೆದುಕೊಂಡು ಬರಬೇಕೆಂದು ಹೋದಾಗ ನನ್ನ ಮಗಳಾದ ಶಿವಮ್ಮ ಗಂಡ ರಮೇಶ ಐದಬಾವಿ ವ: 22ವರ್ಷ ಇವಳು ಮನೆಯಲ್ಲಿ ಇರಲಿಲ್ಲ. ಆಗ ನಾನು ನನ್ನ ಮಗಳ ಗಂಡನ ಮನೆಯವರಿಗೆ ವಿಚಾರಿಸಲಾಗಿ ತಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದರು. ನಂತರ ನಾನು ಮರಳಿ ಊರಿಗೆ ಹೋಗಿ ಮನೆಯಲ್ಲಿ ಈ ಬಗ್ಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಕಾರಣ ನನ್ನ ಮಗಳಿಗೆ ಆಕೆಯ ಗಂಡನಾದ ರಮೇಶ, ಮಾವನಾದ ಅಮರಪ್ಪ, ಅತ್ತೆಯಾದ ಆದಮ್ಮ ಮತ್ತು ನನ್ನ ಮಗಳ ಗಂಡನ ಸೋದರ ಮಾವನಾದ ನಂದಪ್ಪನು ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದಿನಾಲು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದ ದಿನಾಂಕ 03.01.2022 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ:26/02/2022 ರಂದು 10:00 ಎಎಮ್ದ ಮದ್ಯದ ಅವಧಿಯಲ್ಲಿ ನನ್ನ ಮಗಳು ಎಲ್ಲಿಗೋ ಹೋಗಿದ್ದು ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ಇರುವದಿಲ್ಲ ಮೇಲೆ ನಮೂದಿಸಿದ ನಾಲ್ಕು ಜನರ ವಿರುದ್ದ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಲು ವಿನಂತಿ.
ಅಂತಾ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:25/2022 ಕಲಂ:323, 504, 506, 498(ಂ), 109 ಖ/ಘ 34 ಕಅ ಂಓಆ 3, 4 ಆಕ ಂಅಖಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 35/2022 ಕಲಂ: 427 ಐಪಿಸಿ ಸಂಗಡ ಕಲಂ:3 ಪ್ರಿವೇನ್ಷನ್ ಡ್ಯಾಮೇಜ್ ಪಬ್ಲಿಕ್ ಪಾಪ್ರ್ರಟರ್ಿ ಎಕ್ಟ್ 1984 : ಇಂದು ದಿನಾಂಕ:14/03/2022 ರಂದು 4-30 ಪಿಎಮ್ಕ್ಕೆ ಶ್ರೀಸಿದ್ದಪ್ಪ ತಂದೆ ಶಿವಪ್ಪ ಕಾರಭಾರಿ, ವ:43, ಜಾ:ಕುರುಬರ, ಉ:ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಮಖಂಡಿ ಡಿಪೋ ಸಾ:ಖಜ್ಜಿ ಡೋಣಿ ತಾ:ಜಿ:ಬಾಗಲಕೋಟ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರು ಅಜರ್ಿ ಸಾರಾಂಶವೇನೆಂದರೆ ನಾನು ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಜಮಖಂಡಿ ಡಿಪೋದಲ್ಲಿ ಸುಮಾರು 5-6 ವರ್ಷಗಳಿಂದ ಡ್ರೈವರ ಕಮ್ ಕಂಡಕ್ಟರ ಎಂದು ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:12/03/2022 ರಂದು ನಮ್ಮ ಡಿಪೋದನಲ್ಲಿ ನನಗೆ ಡ್ರೈವರ ಅಂತಾ ಮತ್ತು ರಾಜಶೇಖರ ತಂದೆ ಚನ್ನಬಸಪ್ಪ ಝಳಕಿ ಈತನಿಗೆ ಕಂಡಕ್ಟರ ಎಂದು ಜಮಖಂಡಿ-ಹೈದ್ರಾಬಾದ ಮಾರ್ಗ ಸಂಖ್ಯೆ 27/28 ನೇದ್ದಕ್ಕೆ ನೇಮಕ ಮಾಡಿ ಬಸ್ ಸಂಖ್ಯೆ. ಕೆಎ 29 ಎಫ್ 1435 ನೇದ್ದನ್ನು ಕೊಟ್ಟರು. ಆ ಪ್ರಕಾರ ನಾನು ಜಮಖಂಡಿ ಬಸ್ ನಿಲ್ದಾಣದಿಂದ 5-15 ಪಿಎಮ್ಕ ಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಹೈದ್ರಾಬಾದಕ್ಕೆ ಹೊರಟೆನು. ರಾಜಶೇಖರ ಇವರು ನಿವರ್ಾಹಕರಾಗಿದ್ದರು. ದಿನಾಂಕ:13/03/2022 ರಂದು ರಾತ್ರಿ 00-15 ಎಎಮ್ ಸುಮಾರಿಗೆ ಯಾದಗಿರಿ-ಶಹಾಪೂರ ರೋಡ ಗುರುಸಣಗಿ ಸಮೀಪ ಹೋಗುತ್ತಿದ್ದಾಗ ರಸ್ತೆ ಮೇಲೆ ಸುಮಾರು 15-20 ಎಮ್ಮೆಗಳು ಹೋಗುತ್ತಿದ್ದವು. ನೋಡಿ ನಾನು ಬ್ರೇಕ್ ಹಾಕಿದೆನು. ಆಗ ನನ್ನ ಬಸ್ ಎಮ್ಮೆಗಳ ಸಮೀಪ ಹೋಗಿ ನಿಂತಿತ್ತು. ಅಷ್ಟರಲ್ಲಿ ಎಮ್ಮೆಗಳನ್ನು ಹೊಡೆದುಕೊಂಡು ಹೋಗುತ್ತಿದ್ದವರ ಪೈಕಿ ಯಾವನೋ ಒಬ್ಬ ಕಿಡಿಗೇಡಿ ಬಂದು ಬಸ್ ನಮ್ಮ ಎಮ್ಮೆಗೆ ಹಾಯಿಸಿದಿ ಎಂದು ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಮ್ಮ ಬಸ್ಸಿನ ಮುಂದಿನ ಗಾಜಿಗೆ ಹೊಡೆದನು. ಬಸ್ಸಿನ ಮುಂದಿನ ಗಾಜು ಪೂತರ್ಿ ಸಿಳಿರುತ್ತದೆ. ಇದರಿಂದ ಸಕರ್ಾರಿ ಸಂಸ್ಥೆಯ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಜಮಖಂಡಿ ಡಿಪೋದ ಬಸ್ಸಿನ ಅಂದಾಜು 20,000/- ರೂ. ಕಿಮ್ಮತ್ತಿನ ಗಾಜು ಒಡೆದು ನಷ್ಟವಾಗಿರುತ್ತದೆ. ಆಗ ನಾನು ಮತ್ತು ನಮ್ಮ ನಿವರ್ಾಹಕ ಹಾಗೂ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಸೇರಿ ಪೊಲೀಸ್ ತುತರ್ು ಸಹಾಯವಾಣಿ ಸಂ. 112 ಕ್ಕೆ ಕರೆ ಮಾಡಿದಾಗ 112 ಸಿಬ್ಬಂದಿಯವರು ಬಂದಿದ್ದು, ನಂತರ ನಾವೆಲ್ಲರೂ ಸೇರಿ ನಮ್ಮ ಬಸ್ಸಿನ ಗಾಜು ಒಡೆದವರನ್ನು ಸುತ್ತಮುತ್ತು ಹುಡುಕಾಡಿದರು ಸಿಗಲಿಲ್ಲ. ಸದರಿ ಬಸ್ಸಿನ ಗಾಜು ಒಡೆದವನನ್ನು ಬಸ್ಸಿನ ಮುಂದಿನ ಲೈಟಿನ ಬೆಳಕಿನಲ್ಲಿ ನೋಡಿದ್ದು, ಪುನಃ ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ನಮ್ಮ ಬಸ್ಸಿನಲ್ಲಿ ಹೈದ್ರಾಬಾದಕ್ಕೆ ಹೋಗುವ ಪ್ರಯಾಣಿಕರು ಇದ್ದುದ್ದರಿಂದ ನಾನು ಹೈದ್ರಾಬದಕ್ಕೆ ಹೋಗಿ ಪ್ರಯಾಣಿಕರನ್ನು ಇಳಿಸಿ, ನಮ್ಮ ಮೇಲಾಧಿಕಾರಿಗಳಿಗೆ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ.ಆದ್ದರಿಂದ ವಿನಾಕಾರಣ ನಿಮ್ಮ ಬಸ್ ನಮ್ಮ ಎಮ್ಮೆಗೆ ಹಾಯ್ದಿದೆ ಎಂದು ಅಪಾದಿಸಿ, ನಮ್ಮ ಬಸ್ಸಿನ ಗಾಜನ್ನು ಒಡೆದು ಅಂದಾಜು 20,000/- ಲುಕ್ಸಾನ ಮಾಡಿದ ಕೀಡಿಗೇಡಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 35/2022 ಕಲಂ: 427 ಐಪಿಸಿ ಸಂಗಡ ಕಲಂ:3 ಪ್ರಿವೇನ್ಷನ್ ಡ್ಯಾಮೇಜ್ ಪಬ್ಲಿಕ್ ಪಾಪ್ರ್ರಟರ್ಿ ಎಕ್ಟ್ 1984 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 30/2022 ಕಲಂ 78(3) ಕೆ.ಪಿ. ಎಕ್ಟ್ : ಇಂದು ದಿನಾಂಕ:14/03/2022 ರಂದು 9.30 ಎ.ಎಮ್ ಕ್ಕೆ ಅರಳಹಳ್ಳಿ ಗ್ರಾಮದ ಹಣಮಂತದೇವರಗುಡಿ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಅವನಿಂದ 1) ನಗದು ಹಣರೂಪಾಯಿ 3130=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 10.30 ಎ.ಎಮ್ ದಿಂದ 11.30 ಎ.ಎಮ್ ವರೆಗೆ ಜಪ್ತಿಪಡಿಸಿಕೊಂಡು 12.00 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 31/2022 ಕಲಂ 279, 337, 338 ಐ.ಪಿ.ಸಿ : ದಿನಾಂಕ: 13/03/2022 ರಂದು 10.30 ಪಿ.ಎಮ್. ಸುಮಾರಿಗೆ ಫಿಯರ್ಾದಿ ಹಾಗೂ ಗಾಯಾಳುಗಳು ಕೂಡಿತಮ್ಮ ಮೋಟರ್ ಸೈಕಲ್ ನಂ:ಕೆಎ-33, ವಿ-7290 ನೇದ್ದರಲ್ಲಿ ಕುಳಿತು ಪುರಾಣ ಕೇಳುವುದು ಮುಗಿಸಿಕೊಂಡು ತಮ್ಮ ಮನೆಯಕಡೆಗೆಕಡೆಗೆ ಭೀ.ಗುಡಿ-ಗೋಗಿ ರೋಡ ಮೇಲೆ ಭುವನೇಶ್ವರಿಕಲ್ಯಾಣ ಮಂಟಪದ ಹತ್ತಿರ ಹೊರಟಾಗಅವರಎದುರಿನಿಂದಆರೋಪಿತನುತನ್ನ ಮೋಟರ್ ಸೈಕಲ್ ನಂ:ಕೆಎ-33, ಎಕ್ಸ್-6462 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ಚಾಲಕನ ನಿಯಂತ್ರಣತಪ್ಪಿ ಫಿಯರ್ಾದಿಯ ಮೋಟರ್ ಸೈಕಲ್ಗೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಫಿಯರ್ಾದಿ ಮತ್ತು ಗಾಯಾಳುಗಳಿಗೆ ಭಾರಿ ಮತ್ತು ಸಾದಾರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ದೂರು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 38/2022 ಕಲಂ 279,337,338 ಐಪಿಸಿ : ಇಂದು ದಿನಾಂಕ: 14-03-2022 ರಂದು 8-45 ಪಿ.ಎಮ್ ಕ್ಕೆ ಶ್ರೀ ಸಾಯಬಣ್ಣ ಎ.ಎಸ್.ಐ ಶಹಾಪೂರ ರವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪರಶುರಾಮ ತಂದೆ ನಿಂಗಪ್ಪ ನಾಟೆಕಾರ ವಯ: 21 ವರ್ಷ ಜಾ: ಎಸ್.ಸಿ(ಹೊಲೆಯ) ಉ: ಕೂಲಿಕೆಲಸ ಸಾ: ಹತ್ತಿಗುಡುರ ತಾ: ಶಹಾಪೂರ ಇವರ ಹೇಳಿಕೆಯನ್ನು ಹಾಜರು ಪಡಿಸಿದ್ದು, ಹೇಳಿಕೆಯ ಸಾರಾಂಶ ಏನೆಂದರೆ ದಿನಾಂಕ: 12-03-2022 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ಖಾಸಗಿ ಕೆಲಸದ ನಿಮಿತ್ಯವಾಗಿ ನಾನು ಮತ್ತು ನಮ್ಮ ಸಂಬಂದಿಯಾದ ಭೀಮಣ್ಣ ತಂದೆ ಶರಣಪ್ಪ ಏಕಾಯಿ ವಯಾ: 21 ವರ್ಷ ಸಾ: ಹತ್ತಿಗುಡುರ ಇಬ್ಬರೂ ಕೂಡಿ ನನ್ನ ಹೀರೋ ಹೊಂಡಾ ಸಿಡಿ ಡಿಲೆಕ್ಷ ಮೋಟಾರ ಸೈಕಲ್ ನಂ: ಕೆ.ಎ-33/ಇಎ-3368 ನೇದ್ದನ್ನು ತೆಗೆದುಕೊಂಡು ಶಹಾಪೂರಕ್ಕೆ ಬಂದು, ಕೆಲಸ ಮುಗಿಸಿಕೊಂಡು ವಾಪಸ್ಸ ಊರಿಗೆ ಹೋಗುವ ಕುರಿತು ರಾತ್ರಿ 8-00 ಗಂಟೆಗೆ ಶಹಾಪೂರದಿಂದ ಹೊರಟೆವು. ಮೋಟಾರ ಸೈಕಲ್ನ್ನು ಭೀಮಣ್ಣ ತಂದೆ ಶರಣಪ್ಪ ಈತನು ಚಲಾಯಿಸುತ್ತಿದ್ದನು, ನಾನು ಮೋಟಾರ ಸೈಕಲ್ ಹಿಂದುಗಡೆ ಕುಳಿತ್ತಿದ್ದೆನೆ. ಭೀಮಣ್ಣನು ನಮ್ಮ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತದಿಂದ ಚಲಾಯಿಸುತ್ತಿದ್ದನು, ನಾನು ನಿಧಾನವಾಗಿ ಚಲಾಯಿಸು ಅಂತಾ ಹೇಳಿದರೂ ಕೂಡಾ ನನ್ನ ಮಾತು ಕೇಳದೆ ಅತೀ ವೇಗದಲ್ಲಿ ಚಲಾಯಿಸುತ್ತಿದ್ದನು. ರಾತ್ರಿ 8-30 ಗಂಟೆ ಸುಮಾರಿಗೆ ಹತ್ತಿಗೂಡುರ ಸಮೀಪ ಕೆ.ಇ.ಬಿ ಹತ್ತಿರ ಒಂದು ಟ್ರ್ಯಾಕ್ಟರ ಹಿಂದೆ ಹೋಗುತ್ತಿದ್ದೆವು ನಾನು ಸಾವಕಾಶವಾಗಿ ನಡೆಸು ಮುಂದುಗಡೆ ಟ್ರ್ಯಾಕ್ಟರ ಇದೆ ಅಂತಾ ಹೇಳಿರು ಕೂಡಾ ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ ಟ್ರ್ಯಾಕ್ಟರ ಹಿಂದೆ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೊಟಾರ ಸೈಕಲ್ ಸ್ಕಿಡಾಗಿ ಇಬ್ಬರು ಮೋಟಾರ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದೆವು, ನನಗೆ ಹಣೆಗೆ ಮತ್ತು ತುಟಿಗೆ ತರಚಿದ ರಕ್ತಗಾಯ ಆಗಿರುತ್ತದೆ. ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಭೀಮಣ್ಣ ಇತನಿಗೆ ಹಣೆಗೆ ಗದ್ದಕ್ಕೆ ಭಾರೀ ರಕ್ತಗಾಯ ಆಗಿರುತ್ತದೆ. ನಂತರ ನಾನು ಭೀಮಣ್ಣನ ತಂದೆಯಾದ ಶರಣಪ್ಪ ತಂದೆ ಭೀಮಣ್ಣ ವಯಾ: 50 ಸಾ: ಹತ್ತಿಗುಡುರ ಇವರಿಗೆ ಪೋನ ಮಾಡಿ ಈ ವಿಷಯ ತಿಳಿಸಿದೆನು. ಅವರು ಘಟನಾ ಸ್ಥಳಕ್ಕೆ ಬಂದು ನನಗೆ ಮತ್ತು ಭೀಮಣ್ಣ ಇಬ್ಬರಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆ ಸೇರಿಕೆ ಮಾಡಿದರು. ನಂತರ ನಮಗೆ ಹೆಚ್ಚಿನ ಉಪಚಾರ ಕುರಿತು ಭೀಮಣ್ಣನಿಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ನನಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದರು. ಕಾರಣ ಮೋಟಾರ ಸೈಕಲ್ ನಂ: ಕೆ.ಎ-33/ಇಎ-3368 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಲೇ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡಾಗಿ, ಮೋಟಾರ ಸೈಕಲ್ ಸಮೇತ ಇಬ್ಬರೂ ರಸ್ತೆ ಮೇಲೆ ಬಿದ್ದು ಸಾದಾ ಮತ್ತು ಭಾರಿ ರಕ್ತಗಾಯ ಪಡಿಸಿದ ಭೀಮಣ್ಣ ತಂದೆ ಶರಣಪ್ಪ ವಯಾ: 21 ವರ್ಷ ಸಾ: ಹತ್ತಿಗುಡುರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಹೇಳಿಕೆ ನೀಡಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 38/2022 ಕಲಂ: 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.