ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-04-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 66/2022 ಕಲಂ: 143, 147, 323, 341, 504, 506 ಸಂ 149 ಐಪಿಸಿ : ಇಂದು ದಿನಾಂಕ 14.04.2022 ರಂದು 06.15 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬುಡ್ಡಪ್ಪ ತಂದೆ ಸಣ್ಣಯಮನಪ್ಪ ವಡ್ಡರ ವ|| 60ವರ್ಷ ಜಾ|| ವಡ್ಡರ ಉ|| ಒಕ್ಕಲುತನ ಸಾ|| ಕಿರದಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮಗೂ ಹಾಗು ನಮ್ಮ ಸಂಬಂದಿಯಾದ ಭೀಮರಾಯ ತಂದೆ ದೊಡ್ಡಯಮನಪ್ಪ ವಡ್ಡರ ಇವರ ಮದ್ಯ ಕಿರದಳ್ಳಿ ಸೀಮಾಂತರ ಹೊಲ ಸವರ್ೆ ನಂಬರ 22, ಒಟ್ಟು 12 ಎಕರೆ ಸಂಬಂದವಾಗಿ ಕೋಟರ್ಿನಲ್ಲಿ ದಾವೆ ನಡೆದಿದ್ದು ಅದೇ ವಿಷಯವಾಗಿ ಭೀಮರಾಯ ತಂದೆ ದೊಡ್ಡಯಮನಪ್ಪ ವಡ್ಡರ ಹಾಗು ಇತರರು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 14.04.2022 ರಂದು 12.30 ಪಿಎಮ್ ಸುಮಾರಿಗೆ ನಾನು ನಮ್ಮೂರ ನಮ್ಮ ಜನಾಂಗದ ಭೀಮರಾಯ ತಂದೆ ದೊಡ್ಡಯಮನಪ್ಪ ವಡ್ಡರ ಇವರ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ಆಸ್ತಿ ವಿಷಯದಲ್ಲಿ ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದ ನಮ್ಮ ಜನಾಂಗದ 1] ಭೀಮರಾಯ ತಂದೆ ದೊಡ್ಡಯಮನಪ್ಪ ವಡ್ಡರ 2] ಪರಶುರಾಮ ತಂದೆ ಭೀಮರಾಯ ವಡ್ಡರ 3] ಮಾರುತಿ ತಂದೆ ಗುರಪ್ಪ ವಡ್ಡರ 4] ಮರೆಪ್ಪ ತಂದೆ ಸಣ್ಣಯಮನಪ್ಪ ವಡ್ಡರ 5] ದೀಪಕ್ ತಂದೆ ಮರೆಪ್ಪ ವಡ್ಡರ 6] ರಾಕೇಶ ತಂದೆ ಮರೆಪ್ಪ ವಡ್ಡರ 7] ದೊಡ್ಡಯಮನಪ್ಪ ತಂದೆ ಭೀಮಣ್ಣ ವಡ್ಡರ ಎಲ್ಲರೂ ಸಾ|| ಕಿರದಳ್ಳಿ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಬಂದವರೇ ನನ್ನನ್ನು ತಡೆದು ನಿಲ್ಲಿಸಿ ಏನಲೇ ಮಗನೇ ಬುಡ್ಯಾ ನಿನ್ನ ಸೊಕ್ಕು ಬಹಾಳ ಆಗಿದೆ ಈ ಹಿಂದೆ ಹೊಡೆದಿರಬಹುದು ಸದ್ಯ ನಮಗೆ ಏನು ಮಾಡಲು ಆಗುವದಿಲ್ಲ ಅಂತ ಬೈಯುತ್ತಿದ್ದಾಗ ನಾನು ಯಾಕೇ ಸುಮ್ಮನೆ ಬೈಯುತ್ತೀರಿ ನಾನೇನು ಅಂದಿನಿ ಅಂತ ಅಂದಾಗ ಎಲ್ಲರೂ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಇವತ್ತು ಖಲಾಸ ಮಾಡಿಯೇ ಬಿಡೋಣ ಅಂತ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆಯುತ್ತಾ ಎತ್ತಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಮಾನಪ್ಪ ತಂದೆ ಸಣ್ಣಭೀಮಪ್ಪ ವಡ್ಡರ ಹಾಗು ದೇವಪ್ಪ ತಂದೆ ಭೀಮರಾಯ ವಡ್ಡರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಆಸ್ತಿ ವಿಷಯದಲ್ಲಿ ನನ್ನೊಂದಿಗೆ ಜಗಳಾ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಮೇಲ್ಕಾಣಿಸಿದ 7 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 66/2022 ಕಲಂ 143,147,341,323,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 53/2022 ಕಲಂ:498(ಎ),323,324, 504, 506, ಸಂ.34 ಐಪಿಸಿ : ಸುಮಾರು 03 ವರ್ಷಗಳ ಹಿಂದೆ ಫಿರ್ಯಾದಿಯ ಮದುವೆಯು ಆರೋಪಿತನಾದ ಅಜರ್ುನ ಎಂಬಾತನೊಂದಿಗೆ ಆಗಿದ್ದು ಇರುತ್ತದೆ. ಮದುವೆಯಾದ ನಂತರ 06 ತಿಂಗಳ ವರೆಗೆ ಆರೋಪಿತರೆಲ್ಲಾರು ಫೀರ್ಯಾದಿಯೊಂದಿಗೆ ಚನ್ನಾಗಿ ಇದ್ದು ನಂತರದ ದಿನಗಳಲ್ಲಿ ಫಿರ್ಯಾದಿಗೆ ಹೊಲ-ಮನೆಯಲ್ಲಿ ಸರಿಯಾಗಿ ಕೆಲಸ ಬರೋದಿಲ್ಲ ಅಂತಾ ಹೇಳಿ ಆಕೆಗೆ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡುತ್ತ ಬಂದಿದ್ದು ಇರುತ್ತದೆ. ಅದನ್ನು ಫಿರ್ಯಾದಿದಾರಳು ತಾಳಿಕೊಂಡು ಇದ್ದರು ಸಹ ದಿನಾಂಕ 08.04.2022 ರಂದು ರಾತ್ರಿ 09:00 ಗಂಟೆಗೆ ಆರೋಪಿ ಅಜರ್ುನ ಈತನು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಆಕೆಗೆ ಹೊಡೆ-ಬಡೆ ಮಾಡಿ ತವರು ಮನೆಗೆ ನಡಿಯೆಂದು ನೂಕಿದಾಗ ಫೀರ್ಯಾದಿಯು ತನ್ನ ಮನೆಯೊಳಗೆ ಹೋಗುತ್ತಿದ್ದಾಗ ಆರೋಪಿತರಾದ ಸುಶಿಲಾಬಾಯಿ ಮತ್ತು ಶಾಣ್ಯಾನಾಯಕ ಇವರು ಫಿರ್ಯಾದಿಗೆ ಪುನಃ ಆರೋಪಿ ಅಜರ್ುನನ ಕಡೆಗೆ ನೂಕಿ ಕೊಟ್ಟಾಗ ಆರೋಪಿತನು ಆಕೆಗೆ ಪುನಃ ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 14.04.2022 ರಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ನಾನು ಠಾಣಾ ಗುನ್ನೆ ನಂ: 53/2022 ಕಲಂ:498(ಎ),323,324, 504, 506, ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ 160 ಐ.ಪಿ.ಸಿ : ದಿನಾಂಕ:12.04.2022 ರಂದು 11.30 ಎಎಮ್ ಕ್ಕೆ ಪಿಐ ಸಾಹೇಬರು ಸಿಬ್ಬಂಧಿಯವರೊಂದಿಗೆ ಪಟ್ ಪಾಕ್ ಗ್ರಾಮಕ್ಕೆ ಹೋಗಿದ್ದಾಗ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಒಬ್ಬರೊಬ್ಬರು ಅವಾಚ್ಯವಾಗಿ ಬೈದಾಡುತ್ತಾ ಕೈ-ಕೈ ಮಿಲಾಯಿಸಿ ಕಲ್ಲು ಬಡಿಗೆಗಳಿಂದ ಜಗಳ ಮಾಡಿಕೊಳ್ಳುತ್ತಿದ್ದು ಸದರಿ ಜಗಳವನ್ನು ಬಿಡಿಸಿದ್ದು ಸದರಿ ಜಗಳದಲ್ಲಿ ಬಾಗಿಯಾಗಿದ್ದ ಜನರ ಬಗ್ಗೆ ಮಾಹಿತಿ ಸಂಗ್ರಹಿ ಈ ದಿವಸ ನೀಡಿದ ನೀಡಿದವರದಿಯ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:54/2022 ಕಲಣ 160 ಐಪಿಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ.

 


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 ಕಲಂ 279, 338 ಐಪಿಸಿ : ಇಂದು ದಿನಾಂಕ 14/04/2022 ರಂದು ಸಮಯ 6 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಶರಣಪ್ಪ ತಂದೆ ಚಿದಾನಂದಪ್ಪ ಸಂದೀಲಪ್ಪನೋರ ವಯ;35 ವರ್ಷ, ಜಾ;ಪ.ಜಾತಿ (ಮಾದಿಗ), ಉ;ಒಕ್ಕುಲುತನ ಸಾ;ಕುರಕುಂದಿ, ತಾ;ವಡಗೇರಾ, ಜಿ;ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ 12/04/2022 ರಂದು ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದು, ಪಿಯರ್ಾದಿಯ ಹೇಳಿಕೆ ಸಾರಾಂಶವೇನೆಂದರೆ ನಾನು ಶರಣಪ್ಪ ತಂದೆ ಚಿದಾನಂದಪ್ಪ ಸಂದೀಲಪ್ಪನೋರ ವಯ;35 ವರ್ಷ, ಜಾ;ಪ.ಜಾತಿ (ಮಾದಿಗ), ಉ;ಒಕ್ಕುಲುತನ ಸಾ;ಕುರಕುಂದಿ, ತಾ;ವಡಗೇರಾ, ಜಿ;ಯಾದಗಿರಿ (ಮೊ.ನಂ.9880734899) ಆಗಿದ್ದು ತಮ್ಮಲ್ಲಿ ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ನನ್ನ ಅಣ್ಣನಾದ ಮಲ್ಲಪ್ಪ ತಂದೆ ಚಿದಾನಂದಪ್ಪ ವಯ;50 ವರ್ಷ,ಈತನು ಬೆಂಗಳೂರಿನಲ್ಲಿ ಗೌಂಡಿ ಕೆಲಸ ಮಾಡಿಕೊಂಡು ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿಯೇ ಇರುತ್ತಾನೆ. ನಮ್ಮ ಮನೆಯಲ್ಲಿ ದೇವರು ಕಾರ್ಯಕ್ರಮ ಇದ್ದುದರಿಂದ 2-3 ದಿವಸಗಳ ಹಿಂದೆ ತನ್ನ ಕುಟುಂಬ ಸಮೇತ ನಮ್ಮುರಿಗೆ ಬಂದಿರುತ್ತಾನೆ. ಹೀಗಿದ್ದು ಮೊನ್ನೆ ದಿನಾಂಕ 12/04/2022 ರಂದು ಬೆಳಿಗ್ಗೆ ಸುಮಾರಿಗೆ ನನ್ನ ಅಣ್ಣ ಮಲ್ಲಪ್ಪನು ತನ್ನ ಕೆಲಸದ ಮೇಲೆ ಯಾದಗಿರಿಗೆ ಹೋಗಿ ಬರುತ್ತೇನೆಂದು ನಮಗೆ ಹೇಳಿ ಹೋಗಿದ್ದು ಇರುತ್ತಾನೆ. ಅದೇ ದಿವಸ ರಾತ್ರಿ 9 ಗಂಟೆ ಸುಮಾರಿಗೆ ನನ್ನ ಅಣ್ಣ ಮಲ್ಲಪ್ಪನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಯಾದಗಿರಿಗೆ ಬಂದು ನನ್ನ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ ಕುರಕುಂದಿಗೆ ಬರಲು ರಾತ್ರಿ 8-30 ಪಿ.ಎಂ.ದ ಸುಮಾರಿಗೆ ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ಹೊರಗಡೆ ವಾಹನದ ಸಲುವಾಗಿ ಕಾಯುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ನಾನು ನೋಡು ನೋಡುತ್ತಿದ್ದಂತೆ ಸುಬಾಷ್ ವೃತ್ತದಿಂದ ಶಹಾಪುರ ರಸ್ತೆ ಕಡೆಗೆ ಹೊರಟಿದ್ದ ಒಬ್ಬ ಆಟೋ ಟಂ,ಟಂ ನಂ.ಕೆಎ-33, ಎ-5376 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ರಸ್ತೆ ಬದಿಯಲ್ಲಿ ನಿಂತಿದ್ದ ನನಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ನನ್ನ ಎಡಗಾಲಿನ ಮೊಣಕಾಲು ಕೆಳಗೆ ಭಾರೀ ರಕ್ತಗಾಯವಾಗಿ ಮುರಿದಿರುತ್ತದೆ. ಈ ಅಪಘಾತವನ್ನು ಕಂಡು ಹಳೆ ಬಸ್ ನಿಲ್ದಾಣದ ಹತ್ತಿರದಲ್ಲಿದ್ದ ನಮ್ಮುರಿನ ಶ್ರೀ ಮಲ್ಲಪ್ಪ ತಂದೆ ಮರೆಪ್ಪ ಹಲಗಿ ಮತ್ತು ಶ್ರೀ ಶಿವಸ್ವಾಮಿ ತಂದೆ ಹಣಮಂತ ಜೇರಬಂಡಿ ಇವರುಗಳು ನನ್ನ ಹತ್ತಿರ ಬಂದು ಎಬ್ಬಿಸಿ ಕೂಡಿಸಿ ವಿಚಾರಿಸಿದ್ದು ಇರುತ್ತದೆ. ನನಗೆ ಅಪಘಾತ ಪಡಿಸಿದ ಆಟೋ ಟಂ,ಟಂ ನಂಬರ ಕೆಎ-33, ಎ-5376 ನೇದ್ದರ ಚಾಲಕನು ಘಟನಾ ಸ್ಥಳದಲ್ಲಿಯೇ ಹಾಜರಿದ್ದು, ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕರೆಪ್ಪ ತಂದೆ ರಾಮಣ್ಣ ಭಜಂತ್ರಿ ಸಾ;ಹುಲಕಲ್ (ಜೆ) ಅಂತಾ ತಿಳಿಸಿರುತ್ತಾನೆ. ನೀನು ನನ್ನ ಹೆಂಡತಿಗೆ ಸುದ್ದಿ ತಿಳಿಸಿ ಕೂಡಲೇ ಯಾದಗಿರಿ ಹಳೆ ಬಸ್ ನಿಲ್ದಾಣಕ್ಕೆ ಬರ್ರೀ ಅಂತಾ ತಿಳಿಸದನು, ಆಗ ನಾನು ನನಗೆ ಬಂದ ವಿಷಯವನ್ನು ನನ್ನ ಅಣ್ಣನ ಹೆಂಡತಿ ಲಕ್ಷ್ಮೀ ಇವರಿಗೆ ತಿಳಿಸಿ ಇಬ್ಬರು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ ಆಗ ನನ್ನ ಅಣ್ಣ ಮಲ್ಲಪ್ಪನಿಗೆ ಉಪಚಾರಕ್ಕಾಗಿ ಅಂಬುಲೆನ್ಸ್ನಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ 13/04/2022 ರಂದು ಯಾದಗಿರಿ ಸಕರ್ಾರಿ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ನಾವು ನನ್ನ ಅಣ್ಣನಿಗೆ ಖಾಸಗಿಯಾಗಿ ಆಸ್ಪತ್ರೆಗೆ ತೋರಿಸುತ್ತಿದ್ದು, ನಮ್ಮ ಮನೆಯ ಹಿರಿಯರು ಈ ಘಟನೆ ಬಗ್ಗೆ ಕೇಸು ಕೊಡಲು ತಿಳಿಸಿರುತ್ತಾರೆ. ನಮಗೆ ಕಾನೂನಿನ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಮನೆಯಲ್ಲಿ ವಿಚಾರಿಸಿ ತಡವಾಗಿ ದೂರು ನೀಡುತ್ತಿದ್ದೇನೆ, ನನ್ನ ಅಣ್ಣ ಮಲ್ಲಪ್ಪನಿಗೆ ಮೊನ್ನೆ ದಿನಾಂಕ 12/04/2022 ರಂದು ರಾತ್ರಿ 8-30 ಪಿ.ಎಂ.ಕ್ಕೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮುಂದಿನ ಯಾದಗಿರಿ-ಶಹಾಪುರ ಮುಖ್ಯ ರಸ್ತೆ ಮೇಲೆ ರಸ್ತೆ ಬದಿಯಲ್ಲಿ ನಿಂತಿದ್ದಾಗ ಡಿಕ್ಕಿಹೊಡೆದು ಅಪಘಾತಪಡಿಸಿದ ಆಟೋ ನಂ.ಕೆಎ-33, ಎ-5376 ನೇದ್ದರ ಚಾಲಕ ಕರೆಪ್ಪ ಈತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 21/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ 279,304(ಎ) ಐಪಿಸಿ : ಇಂದು ದಿನಾಂಕಃ 14/04/2022 ರಂದು 10-15 ಎ.ಎಮ್ ಕ್ಕೆ ಶ್ರೀ ರಮೇಶತಂದೆ ಶರಣಪ್ಪ ಹಡಪದ ಸಾ: ನಾಗರಾಳ ಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾಧಿಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನನ್ನಅಣ್ಣನ ಹೆಂಡತಿಯಾದ ಪಾರ್ವತಿಗಂಡಈರಪ್ಪ ಹಡಪದ ವಯಃ 30 ವರ್ಷ ಉಃ ಕೂಲಿಕೆಲಸ ಸಾ: ನಾಗರಾಳ ಹಾಗು ನಮ್ಮೂರಿನ ನಿಂಗಮ್ಮಗಂಡಈರಪ್ಪಗೌಡ ಮಾಲಿಪಾಟೀಲ್ಇಬ್ಬರೂ ನಮ್ಮೂರಿನಿಂದರಮೇಶತಂದೆ ಭಾಸ್ಕರರಾವ ಸಾ: ಸಾಯಿನಗರದೇವಾಪೂರಇವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗುತ್ತೇವೆಂದು ಹೇಳಿ ಹೋಗಿದ್ದರು. ನಂತರ 8-40 ಎ.ಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ವೀರಣ್ಣತಂದೆ ನಿಂಗನಗೌಡ ಪೊಲೀಸಪಾಟೀಲ್ಇವರು ಫೋನ್ ಮಾಡಿ ನನಗೆ ತಿಳಿಸಿದ್ದೆನೆಂದರೆ, ನಿನ್ನಅಣ್ಣನ ಹೆಂಡತಿ ಪಾರ್ವತಿ ಹಾಗು ನಮ್ಮೂರಿನ ನಿಂಗಮ್ಮಗಂಡಈರಪ್ಪಗೌಡ ಮಾಲಿಪಾಟೀಲ್ಇಬ್ಬರೂದೇವಾಪೂರಕಡೆಯಿಂದ ಹಾವಿನಾಳ ಕಡೆಗೆ ನಡೆದುಕೊಂಡು ಹೊರಟಿದ್ದಾಗ 8-30 ಎ.ಎಮ್ ಸುಮಾರಿಗೆದೇವಾಪೂರ ಹಳ್ಳದ ಬ್ರಿಜ್ ಮೇಲೆ ಹಿಂದುಗಡೆಯಿಂದ ಮೋಟಾರ ಸೈಕಲ್ ನಂಬರ ಕೆ.ಎ 33 ಎಕ್ಸ್ 4293 ನೇದ್ದರ ಸವಾರನುತನ್ನ ಮೋಟಾರ ಸೈಕಲ್ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ನಿನ್ನಅಣ್ಣನ ಹೆಂಡತಿ ಪಾರ್ವತಿ ಇವಳಿಗೆ ಜೋರಾಗಿ ಡಿಕ್ಕಿಪಡಿಸಿದರಿಂದ ರಸ್ತೆಯ ಮೇಲೆ ಬಿದ್ದ ಪರಿಣಾಮ ಪಾರ್ವತಿ ಇವಳ ತಲೆಯಲ್ಲಿ ಭಾರಿರಕ್ತಗಾಯವಾಗಿದ್ದುಅರೆಪ್ರಜ್ಞಾವಸ್ಥೆಯಲ್ಲಿ ಇರುತ್ತಾಳೆ ಅಂತ ತಿಳಿಸಿದನು. ಆಗ ನಾನು ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ, ನನ್ನಅತ್ತಿಗೆಯಎಡತಲೆಯಲ್ಲಿ ಭಾರಿರಕ್ತಗಾಯವಾಗಿ, ಮೂಗು, ಕಿವಿ ಹಾಗು ಬಾಯಿಯಿಂದರಕ್ತಸ್ರಾವಆಗಿದ್ದಲ್ಲದೇ ಹಣೆಯ ಮೇಲೆ, ಎಡಭುಜಕ್ಕೆತರಚಿದ ಗಾಯಗಳಾಗಿ ಅರೆಪ್ರಜ್ಞಾವಸ್ಥೆಯಲ್ಲಿ ನರಳಾಡುತ್ತಿದ್ದಳು. ಅಪಘಾತಪಡಿಸಿದ ಮೋಟಾರ ಸೈಕಲ್ ಸ್ಥಳದಲ್ಲೆ ಇದ್ದು, ಅಲ್ಲೆ ನಿಂತಿದ್ದ ಮೋಟಾರ ಸೈಕಲ್ ಸವಾರನ ಹೆಸರು, ವಿಳಾಸ ವಿಚಾರಿಸಲಾಗಿ ಸಿ.ಹೆಚ್ ವೆಂಕಟರಾಮರಾವ್ತಂದೆಚಾರುಕುರಿ ನಾಗೇಶ್ವರರಾವ ಸಾಃ ಬಳ್ಳಾರಿ ಅಂತ ತಿಳಿಸಿದನು. ಅಷ್ಟರಲ್ಲಿ 108 ಅಂಬ್ಯೂಲೇನ್ಸ್ ವಾಹನ ಸ್ಥಳಕ್ಕೆ ಬಂದಿದ್ದರಿಂದ ನಾವು ನನ್ನಅತ್ತಿಗೆಗೆಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿಆಸ್ಪತ್ರೆಗೆಕರೆದುಕೊಂಡು ಬರುವಾಗ ಮಾರ್ಗಮದ್ಯೆ 9-15 ಎ.ಎಮ್ ಸುಮಾರಿಗೆಕುಂಬಾರಪೇಟ ಹತ್ತಿರ ನನ್ನಅಣ್ಣನ ಹೆಂಡತಿ ಮೃತಪಟ್ಟಿದ್ದರಿಂದ ಮೃತದೇಹವನ್ನು ಸುರಪೂರ ಸಕರ್ಾರಿಆಸ್ಪತ್ರೆಯ ಶವಾಗಾರಕೋಣೆಯಲ್ಲಿತಂದು ಹಾಕಿರುತ್ತೇವೆ. ಕಾರಣ ಅಪಘಾತಪಡಿಸಿದ ಮೋಟಾರ ಸೈಕಲ್ ಸವಾರನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 55/2022 ಕಲಂ. 279, 304(ಎ) ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 48/2021 ಕಲಂ 15(ಎ), 32(3) ಕೆ,ಇ ಆಕ್ಟ್ : ಇಂದು ದಿನಾಂಕ: 14.04.2022 ರಂದು ರಾತ್ರಿ 7 ಗಂಟೆಗೆ ಸ.ತಫರ್ೇ ಶ್ರೀ ವಿಜಯಕುಮಾರ ಪಿ.ಐ ಸಾಹೇಬರು ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನನ್ನು ಹಾಜರಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಮೂಲ ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಸೈದಾಪೂರ ಠಾಣಾ ಗುನ್ನೆ ನಂ.48/2022 ಕಲಂ. 15(ಎ), 32(3) ಕೆ.ಇ ಆಕ್ಟ್ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 15-04-2022 04:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080