ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15-05-2021

ಕೆಂಭಾವಿ ಪೊಲೀಸ್ ಠಾಣೆ :- 66/21 ಕಲಂ 143,147,148, 323, 324, 504, ಸಂಗಡ 149 ಐಪಿಸಿ ಮತ್ತು 3(1) (ಆರ್) (ಎಸ್) ಎಸ್.ಸಿ. /ಎಸ್.ಟಿ ಪಿಎ ಅಮೆಂಡಮೆಂಟ್ ಬಿಲ್ 2015 : ದಿ: 06/03/2021 ರಂದು 1.15 ಪಿಎಮ್ಕ್ಕೆ ಪಿರ್ಯಾದಿ ಮಕ್ಕಳು ಹಾಗೂ ಸಾಕ್ಷಿದಾರರು ಕೂಡಿಕೊಂಡು ದೋರನಳ್ಳಿ ಸೀಮಾಂತರದರ ಹೊಲ ಸವರ್ೇ ನಂ 10 ರಲ್ಲಿ ದನ ಮೇಯಿಸಲು ಹೋದಾಗ ಆರೋಪಿತರು ಪಿರ್ಯಾದಿ ಮಕ್ಕಳು ಹಾಗೂ ಸಾಕ್ಷಿದಾರರಿಗೆ ಹಿಂದುಳಿದ ಜಾತಿಯವರು ಅಂತ ಗೊತ್ತಿದ್ದೂ ಲೇ ಹೊಲೆ ಸೂಳೆ ಮಕ್ಕಳೆ ನಮ್ಮ ಹೊಲದಾಗ ದನಗಳನ್ನು ಬಿಟ್ಟು ಒಡ್ಡು ಹಾಳು ಮಾಡುತ್ತೀರಾ ಮಕ್ಕಳೆ ಎಂದು ಜಾತಿ ಎತ್ತಿ ಹಲಕಾಟ ಬೈದಾಡಿ ಕೈಯಿಂದ ಹಾಗೂ ಬಡಿಗೆಯಿಂದ ಹೊಡೆಬಡೆ ಮಾಡಿ ಗಾಯಪೆಟ್ಟು ಮಾಡಿದ ಅಪರಾಧ ಅಂತ ವಿವರವಾದ ದೂರು ಅಜರ್ಿ ಸಾರಾಂಶವುಳ್ಳ ಕಲಕೇರಿ ಪೊಲೀಸ್ ಠಾಣೆ ಗುನ್ನೆ ನಂ 20/2021 ನೇದ್ದರ ಪ್ರಕರಣವು ಇಂದು ದಿನಾಂಕ: 14/05/2021 ರಂದು 12.30 ಪಿಎಮ್ಕ್ಕೆ ಹದ್ದಿ ಆಧಾರದ ಮೇಲಿಂದ ಐಟಿ ತಂತ್ರಾಂಶದಲ್ಲಿ ಕೆಂಭಾವಿ ಠಾಣೆಗೆ ವಗರ್ಾವಣೆಯಾಗಿ ಬಂದಿದ್ದರಿಂದ ಸದರಿ ವರದಿ ಆಧಾರದ ಮೇಲಿಂ ಕೆಂಭಾವಿ ಠಾಣೆ ಗುನ್ನೆ ನಂ 66/21 ಕಲಂ 143,147,148, 323, 324, 504, ಸಂಗಡ 149 ಐಪಿಸಿ ಮತ್ತು 3(1) (ಆರ್) (ಎಸ್) ಎಸ್.ಸಿ. /ಎಸ್.ಟಿ ಪಿಎ ಪಿಎ ಅಮೆಂಡಮೆಂಟ್ ಬಿಲ್ 2015 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ಶೋರಾಪೂರವ ಪೊಲೀಸ್ ಠಾಣೆ :- 76/2021 ಕಲಂ.143, 147, 148 323, 324, 354, 448, 504, 506 ಸಂಗಡ 149 ಐಪಿಸಿ : ಇಂದು ದಿನಾಂಕಃ 14/05/2021 ರಂದು 6:00 ಪಿ.ಎಮ್ ಕ್ಕೆ ಶಿಶ್ರೀಮತಿ ಭಾಗ್ಯಲಕ್ಷ್ಮಿ ಗಂಡ ರಂಗನಾಥ ಗುತ್ತೇದಾರ ವ|| 37 ವರ್ಷ ಜಾ|| ಇಡಿಗ ಉ|| ಮನೆಗೆಲಸ ಸಾ|| ಶಖಾಪುರ ಎಸ್.ಹೆಚ್ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಮೂರು ಜನ ಮಕ್ಕಳಿಗದ್ದು ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ನಿನ್ನೆ ದಿನಾಂಕ:13/05/2021 ರಂದು ರಾತ್ರಿ 8 ಗಂಟೆಗೆ ಸುಮಾರಿಗೆ ನಮ್ಮೂರ ಅಂಬೇಡ್ಕರ ಕಟ್ಟೆಯ ಹತ್ತಿರ ಪರಿಶಿಷ್ಟ ಜಾತಿ ಜನಾಂಗದ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಹುಡುಗರು ಬಾಯಿ ಮಾತಿನ ಜಗಳ ಆಡುತ್ತಿದ್ದಾಗ ನಮ್ಮೂರಿನ ಯಾರೋ ಒಬ್ಬರು 112 ವಾಹನಕ್ಕೆ ಕರೆ ಮಾಡಿದಾಗ 112 ವಾಹನ ನಮ್ಮೂರಿಗೆ ಬಂದಾಗ ನನ್ನ ಗಂಡ ರಂಗನಾಥ ಇತನು ನಮ್ಮೂರಿನ ಸಣ್ಣ ಹುಡುಗರು ಅದರ ನಾವು ಬಗೆಹರಿಸಿ ಕಳುಹಿಸುತ್ತೇವೆ ಅಂತಾ ಹೇಳಿ 112 ವಾಹನದವರಿಗೆ ಕಳುಹಿಸಿಕೊಟ್ಟರು. ನಂತರ ನಾನು ಮತ್ತು ನನ್ನ ಗಂಡ ಮಕ್ಕಳು ಊಟ ಮಾಡಿದ ನಂತರ ನನ್ನ ಗಂಡ ನಮ್ಮ ಕವಳಿಯನ್ನು ಹೊಲದಲ್ಲಿ ಒಣಾಕಿದ ಸಲುವಾಗಿ ನನ್ನ ಗಂಡ ಕವಳಿ ಹಾಕಿದ ಹೊಲಕ್ಕೆ ಹೊಗಿರುತ್ತಾನೆ. ನಾನು ಮತ್ತು ನನ್ನ ಮಕ್ಕಳು ನಮ್ಮ ಮನೆಯಲ್ಲಿ ಮಲಗಿದ್ದಾಗ, ರಾತ್ರಿ 10:30 ಗಂಟೆ ಸುಮಾರಿಗೆ ನಮ್ಮೂರಿನ ಪರಿಶಿಷ್ಟ ಜಾತಿ (ಹೊಲೆಯ) ಜನಾಂಗದವರಾದ 1) ರಾಜು ತಂದೆ ಬಸಪ್ಪ ದೊಡ್ಡಮನಿ, 2) ಬಸಪ್ಪ ತಂದೆ ಮಾನಶಪ್ಪ ದೊಡ್ಡಮನಿ, 3) ಮೌನೇಶ ತಂದೆ ಮಾನಶಪ್ಪ ದೊಡ್ಡಮನಿ, 4) ಬಸಪ್ಪ ತಂದೆ ಶೇಖಪ್ಪ ದೊಡ್ಡಮನಿ, 5) ದೇವಪ್ಪ ತಂದೆ ಶಿವಪ್ಪ ತಳವಾರ, 6) ಮಾನಪ್ಪ ತಂದೆ ಬಸಪ್ಪ ದೊಡ್ಡಮನಿ, 7) ವೇಣು ತಂದೆ ಶೇಖಪ್ಪ ದೊಡ್ಡಮನಿ, 8) ರಾಮಪ್ಪ ತಂದೆ ಮಾನಪ್ಪ ದೊಡ್ಡಮನಿ ಎಲ್ಲರು ಕೈಯಲ್ಲಿ ಕಲ್ಲು ಮತ್ತು ಬಡಿಗೆ ಹಿಡಿದುಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಾಗಿಲು ಒತ್ತಿ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಮನೆಯೊಳಗೆ ಬಂದಾಗ ನಾನು ಯಾರು ನೀವು ಯಾಕೆ ನಮ್ಮ ಮನೆಯಲ್ಲಿ ಬಂದಿರಿ ಅಂತಾ ಕೇಳಿದ್ದಕ್ಕೆ ನಿನ್ನ ಗಂಡ ರಂಗ್ಯಾ ಎಲ್ಲಿದ್ದಾನೆ ಸೂಳೆ ಮಗ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ರಾಜು ದೊಡ್ಡಮನಿ ಇತನು ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲಿದ್ದ ಬಡಿಗೆಯಿಂದ ಹೊಟ್ಟೆಗೆ ಮತ್ತು ಬಸಪ್ಪ ದೊಡ್ಡಮನಿ ಇತನು ಕೈಯಿಂದ ಎದೆಗೆ ಹೊಡೆದು ಗುಪ್ತಗಾಯ ಗಾಯ ಮಾಡಿ ರಾಜು ಇತನು ನನ್ನ ಎದೆಯ ಮೇಲಿನ ಸೀರೆ ಸೇರಗ ಹಿಡಿದು ಜಗ್ಗಾಡಿ ಅವಮಾನ ಮಾಡುತಿದ್ದಾಗ ಬಾಜು ಮನೆಯಲ್ಲಿದ್ದ ನಮ್ಮ ಭಾವನ ಮಕ್ಕಳಾದ ರಾಘವೆಂದ್ರ ತಂದೆ ರಮಾನಂದ ಗುತ್ತೆದಾರ, ಶರಣು ತಂದೆ ಬಸಯ್ಯ ಗುತ್ತೆದಾರ, ಸೊಸೆಯಾದ ರಾಂಬಾಯಿ ಗಂಡ ಭೀಮಯ್ಯ ಗುತ್ತೆದಾರ ಇವರುಗಳು ಜಗಳ ಬಿಡಿಸಲು ಬಂದಾಗ ರಾಘವೆಂದ್ರ ಗುತ್ತೆದಾರ ಇತನಿಗೆ ಮೌನೇಶ ದೊಡ್ಡಮನಿ ಇತನು ಕೈಯಿಂದ ಎದೆಗೆ ಹೊಡೆದನು, ಬಸಪ್ಪ ತಂದೆ ಶೇಖಪ್ಪ ದೊಡ್ಡಮನಿ ಇತನು ಬಡಿಗೆಯಿಂದ ಬಲಗೈ ಮೊಳಕೈ ಕೆಳಗೆ, ಎಡಗಾಲ ತೊಡೆಗೆ, ಎಡಗಾಲ ಪಾದದ ಹಡ್ಡಿನ ಮೇಲೆ ಹೊಡೆದು ಗುಪ್ತಗಾಯ ಮಾಡಿದನು. ಶರಣು ಗುತ್ತೆದಾರ ಇತನಿಗೆ ದೇವಪ್ಪ ತಳವಾರ ಇತನು ತನ್ನ ಕೈಯಲಿದ್ದ ಬಡಿಗೆಯಿಂದ ಬಲಗಣ್ಣಿನ ಮೂಗಿನ ಮೇಲೆ ಹೊಡೆದು ತರಚಿದ ರಕ್ತಗಾಯ, ಮಾನಪ್ಪ ದೊಡ್ಡಮನಿ ಇತನು ತನ್ನ ಕೈಯಲಿದ್ದ ಕಲ್ಲಿನಿಂದ ಎಡಗಾಲ ಪಾದದ ಹಡ್ಡಿನ ಮೇಲೆ ಗುಪ್ತಗಾಯ ಮಾಡಿದನು. ಸೊಸೆಯಾದ ರಾಂಬಾಯಿ ಇಕಗೆ ವೇಣು ಇತನು ಕಲ್ಲಿನಿಂದ ಬಲಗೈ ನಡು ಬೆರಳಿಗೆ ಹೊಡೆದು ಗುಪ್ತಗಾಯ, ರಾಮಪ್ಪ ದೊಡ್ಡಮನಿ ಇತನು ಕೈಯಿಂದ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದನು. ಸದರಿ ಗಲಾಟೆಯು ಲೈಟಿನ ಬೆಳಕಿನಲ್ಲಿ ನಡೆದಿರುತ್ತದೆ. ನಂತರ ಬಾಯಿ ಮಾತಿನ ಜಗಳ ಕೇಳಿ ನನ್ನ ಗಂಡ ರಂಗನಾಥ, ಭಾವನ ಮಕ್ಕಳಾದ ಭೀಮಯ್ಯ ತಂದೆ ರಮಾನಂದ ಗುತ್ತೆದಾರ, ಹುಲಗಯ್ಯ ತಂದೆ ರಮಾನಂದ ಗುತ್ತೆದಾರ, ನನ್ನ ನೆಗಣಿಯಾದ ಕಮಲಮ್ಮ ಗಂಡ ರಮಾನಂದ ಗುತ್ತೆದಾರ, ಇವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ಇವತ್ತು ಜನರು ಬಂದು ಬಿಡಿಸಿದ್ದಕ್ಕೆ ಉಳಿದಿದ್ದೀರಿ ಮಕ್ಕಳೇ, ನಿಮ್ಮ ಮನೆಯಲ್ಲಿ ಒಬ್ಬರಿಗಾದರೂ ಖಲಾಸ ಮಾಡುವತನಕ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ಬಳಿಕ ಅಲ್ಲಿಂದ ರಾತ್ರಿ ನಾನು ಮತ್ತು ರಾಘವೇಂದ್ರ ಗುತ್ತೆದಾರ, ಶರಣು ಗುತ್ತೆದಾರ ಮೂವರು ಒಂದು ಖಾಸಗಿ ವಾಹನದಲ್ಲಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮನೆಗೆ ಹೊಗಿ ನನ್ನ ಗಂಡನ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ಅಕ್ರಮ ಕೂಟ ರಚಿಸಿಕೊಂಡು ಬಂದು ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ, ನನ್ನ ಭಾವನ ಮಕ್ಕಳಾದ ರಾಘವೇಂದ್ರ, ಶರಣು, ಸೊಸೆಯಾದ ರಾಂಬಾಯಿ ಇವರಿಗೆ ಹೊಡೆದು ಗುಪ್ತಗಾಯ ಹಾಗೂ ರಕ್ತಗಾಯ ಮಾಡಿದ ಮೇಲೆ ಹೇಳಿದ 8 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 76/2021 ಕಲಂ.143, 147, 148 323, 324, 354, 448, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶೋರಾಪೂರವ ಪೊಲೀಸ್ ಠಾಣೆ :- 77/2021 ಕಲಂ 32, 34 ಕನರ್ಾಟಕ ಅಭಕಾರಿ ಕಾಯ್ದೆ 1965 ಮತ್ತು ಕಲಂ 188 ಐಪಿಸಿ : ಇಂದು ದಿನಾಂಕ: 14/05/2021 ರಂದು 8:15 ಪಿ.ಎಂ.ಕ್ಕೆ ಠಾಣೆಯಲ್ಲಿದಾಗ ಶ್ರೀ ಚಂದ್ರಶೇಖರ ಪಿಎಸ್ಐ (ಕಾಸು-2) ರವರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಠಾಣೆಗೆ ಬಂದು ಹಾಜರ ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ನಾನು ಚಂದ್ರಶೇಖರ ಪಿ.ಎಸ್.ಐ (ಕಾ&ಸು-2) ಸುರಪೂರ ಪೊಲೀಸ್ ಠಾಣೆ ಈ ಮೂಲಕ ನಿಮಗೆ ಸೂಚಿಸುವದೆನೆಂದರೆ ಇಂದು ದಿನಾಂಕ:14/05/2021 ರಂದು 5-30 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಕವಡಿಮಟ್ಟಿ ಗ್ರಾಮದ ಬೀಟ್ ಪೊಲೀಸ್ ಶ್ರೀ ಬಸಪ್ಪ ಸಿಪಿಸಿ-393 ರವರ ಮಾಹಿತಿ ಮೇರೆಗೆ ಕವಡಿಮಟ್ಟಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ತನ್ನ ಪರಮಾನಂದ ಕಿರಾಣಿ ಅಂಗಡಿಯ ಮುಂದೆ ಕುಳಿತುಕೊಂಡು ಅಕ್ರಮವಾಗಿ ಮಧ್ಯದವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 3) ಶ್ರೀ ಶರಣಗೌಡ ಸಿಪಿಸಿ-218 ಇವರನ್ನು ಕರೆದು ಅವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗೊಣ ಅಂತಾ ಹೇಳಿ ಮಂಜುನಾಥ ಹೆಚ್ಸಿ-176 ಇವರ ಸಹಾಯದಿಂದ ಇಬ್ಬರು ಪಂಚರಾದ 1) ಶ್ರೀ ಅಂಬ್ರೇಶ ತಂದೆ ಮರೆಪ್ಪ ನಾಯಕ ವಾಗಣಗೇರಿ ವ|| 44 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಉಪ್ಪಾರ ಮೋಹಲ್ಲಾ ಸುರಪುರ 2) ಶ್ರೀ ಮಂಜುನಾಥ ತಂದೆ ಮನೋಹರ ಕರೆನೋರ ವ|| 25 ವರ್ಷ ಜಾ|| ಲಿಂಗಾಯತ ಉ|| ಡ್ರೈವರ್ ಸಾ|| ಕಬಡಗೇರಾ ಸುರಪುರ ಇವರನ್ನು 5:45 ಪಿ.ಎಂ ಸುಮಾರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಸದರಿ ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು ಸದರಿ ಪಂಚರು ಸಿಬ್ಬಂಧಿಯರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ 6 ಪಿ.ಎಂ ಕ್ಕೆ ಠಾಣೆಯಿಂದ ಹೊರಟು 6:30 ಪಿಎಂ ಕ್ಕೆ ಕವಡಿಮಟ್ಟಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಹೊಗಿ ಸ್ವಲ್ಪ ದೂರ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿಯು ತನ್ನ ಪರಮಾನಂದ ಕಿರಾಣಿ ಅಂಗಡಿಯ ಮುಂದೆ ಕುಳಿತುಕೊಂಡು ಅಕ್ರಮವಾಗಿ ಮಧ್ಯದವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 6:35 ಪಿಎಂ ಕ್ಕೆ ದಾಳಿ ಮಾಡಲು ಹೋದಾಗ ನಮ್ಮನ್ನು ನೋಡಿ ಸಾರ್ವಜನಿಕರು ಮತ್ತು ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿ ಓಡಿ ಹೊಗಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಶಾಂತಗೌಡ ತಂದೆ ಅಂಬ್ರಪ್ಪಗೌಡ ಮಾಲಿಪಾಟೀಲ್ ವ|| 45 ವರ್ಷ ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ಕವಡಿಮಟ್ಟಿ ತಾ|| ಸುರಪುರ ಅಂತಾ ತಿಳಿಸಿದರು, ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಒಂದು ಪ್ಲಾಸ್ಟೀಕ ಚೀಲದಲ್ಲಿ ಓಲ್ಡ್ ಟಾವರಿನ್ ವಿಸ್ಕಿ 180 ಎಮ್.ಎಲ್.ನ 8 ಪೌಚಗಳು ಪ್ರತಿಯೊಂದರ ಬೆಲೆ 86.75/- ರೂ. 2) ಒಂದು ಪ್ಲಾಸ್ಟೀಕ ಚೀಲದಲ್ಲಿ ಬ್ಯಾಗ್ ಪಿಪ್ಪರ್ ಡಿಲಕ್ಸ್ ವಿಸ್ಕಿ 180 ಎಮ್.ಎಲ್.ನ 24 ಪೌಚಗಳು ಪ್ರತಿಯೊಂದ ಬೆಲೆ 106.23/- ರೂ. 3) ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹೈವಡ್ರ್ಸ ಚೀಯರ್ಸ್ ವಿಸ್ಕಿ 90 ಎಮ್.ಎಲ್.ನ 72 ಪೌಚಗಳು ಪ್ರತಿಯೊಂದ ಬೆಲೆ 35.13/- ರೂ. ಹೀಗೆ ಒಟ್ಟು 5772.88/- ರೂಗಳ ಕಿಮ್ಮತ್ತಿನ ಒಟ್ಟು 12240 ಎಮ್ಎಲ್ನ ಮಧ್ಯವಿದ್ದು ಅವನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ 310/- ರೂಗಳು ದೋರೆತಿದ್ದು, ಸದರಿ ಮದ್ಯದ 1) ಓಲ್ಡ್ ಟಾವರಿನ್ ವಿಸ್ಕಿ 180 ಎಮ್.ಎಲ್.ನ ಒಂದು ಪೌಚ, 2) ಬ್ಯಾಗ್ ಪಿಪ್ಪರ್ ಡಿಲಕ್ಸ್ ವಿಸ್ಕಿ 180 ಎಮ್.ಎಲ್.ನ ಒಂದು ಪೌಚ 3) ಹೈವಡ್ರ್ಸ ಚೀಯರ್ಸ್ ವಿಸ್ಕಿ 90 ಎಮ್.ಎಲ್.ನ ಒಂದು ಪೌಚ್, ಸದರಿಯವುಗಳಲ್ಲಿ ಒಂದೊಂದು ರಾಸಾಯನಿಕ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಪ್ರತ್ಯೇಕವಾಗಿ ತಗೆದುಕೊಂಡು ಅವುಗಳನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಬಾಯಿ ಹೊಲೆದು ಅವುಗಳ ಮೇಲೆ ಕೆ.ಎಲ್.ಆರ್ ಎಂಬ ಇಂಗ್ಲೀಷ ಅಕ್ಷರವುಳ್ಳ ಮುದ್ರೆಯನ್ನು ಅರಗಿನಲ್ಲಿ ಶಿಲ್ ಮಾಡಿ, ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು, ಉಳಿದ ಮದ್ಯದ ಬಾಟಲಿ ಮತ್ತು ಪೌಚ್ಗಳನ್ನು ಜಪ್ತಿಪಡಿಸಿಕೊಂಡು ಪ್ಲಾಸ್ಟೀಕ ಚೀಲಗಳಲ್ಲಿ ಹಾಕಿ ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು ಇರುತ್ತದೆ. ಸದರಿ ಆರೋಪಿತನು ಮಧ್ಯ ಮಾರಾಟದ ಬಗ್ಗೆ ಯಾವುದೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದು ಇರುತ್ತದೆ. ಸದರಿ ಜಪ್ತಿ ಪಡಿಸಿದ ಸ್ಥಳದ ಚೆಕ್ ಬಂದಿ ಪೂರ್ವಕ್ಕೆ: ಮುಖ್ಯ ರಸ್ತೆ ಇದ್ದು, ಅದರ ಪಕ್ಕದಲ್ಲಿ ತಾಜ್ ಹೊಟೆಲ್ ಇರುತ್ತದೆ. ಪಶ್ಚಿಮಕ್ಕೆ: ಆರೋಪಿತನ ಪರಮಾನಂದ ಕಿರಾಣಿ ಅಂಗಡಿ ಇರುತ್ತದೆ. ಉತ್ತರಕ್ಕೆ: ಸುರಪುರ ಕಡೆಗೆ ಹೋಗುವ ರಸ್ತೆ ಇರುತ್ತದೆ. ದಕ್ಷಿಣಕ್ಕೆ: ದೇವಾಪೂರ ಕಡೆಗೆ ಹೋಗುವ ರಸ್ತೆ ಇರುತ್ತದೆ. ಸದರಿ ಪಂಚನಾಮೆಯನ್ನು 6:35 ಪಿ.ಎಮ್ ದಿಂದ 7:35 ಪಿ.ಎಮ್ ವರೆಗೆ ಜೀಪ್ನ ಲೈಟಿನ ಬೆಳಕಿನಲ್ಲಿ ಸ್ಥಳದಲ್ಲಿಯೆ ಪಂಚನಾಮೆ ಮಾಡಿಕೊಂಡು, ನಂತರ ಮುದ್ದೆಮಾಲಿನೊಂದಿಗೆ ಠಾಣೆಗೆ 8-15 ಪಿ.ಎಮ್ ಕ್ಕೆ ಬಂದಿದ್ದು ಸದರಿ ಆರೋಪಿತನಾದ ಶಾಂತಗೌಡ ಈತನು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಬಸವೇಶ್ವರ ಜಯಂತಿ ಪ್ರಯುಕ್ತ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧ ಆದೇಶ ಹೊರಡಿಸಿದ್ದರು ಕೂಡ ಆದೇಶ ಉಲ್ಲಂಘನೆ ಮಾಡಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿ ಮಾರಾಟ ಮಾಡಿದ್ದು, ಸದರಿ ಆರೋಪಿತನ ವಿರುದ್ದ ಕಲಂ. 32, 34 ಕನರ್ಾಟಕ ಅಬಕಾರಿ ಕಾಯ್ದೆ 1965 ಮತ್ತು ಕಲಂ 188 ಐಪಿಸಿ ರಿತ್ಯ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಇರುತ್ತದೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.77/2021 ಕಲಂ: 32, 34 ಕೆ.ಇ ಯ್ಯಾಕ್ಟ ಮತ್ತು ಕಲಂ 188 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ :- 31/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 14/05/2021 ರಂದು 2:00 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 12:10 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ಶ್ರೀ ಅಂಬೇಡ್ಕರ ವೃತ್ತದ ಹತ್ತಿರ ಇರುವ ನಾರಾಯಣ ಇಸ್ತ್ರೀ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮಹಿಳೆ ಸಾರ್ವಜನಿಕರಿಗೆ 1/- ರೂ 80/- ರೂ ಕೊಡುತ್ತೆನೆ ಅಂತಾ ಸಾರ್ವಜನಿಕರಿಗೆ ಮಟಕಾ ಸಂಖ್ಯೆ ಬರೆದುಕೊಡುತ್ತಿರುವದಾಗಿ ಮಾಹಿತಿ ಬಂದಿದ್ದು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಆರೋಪಿತಳ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಕೊಂಡಿದ್ದು ಮಾನ್ಯ ನ್ಯಾಯಾಲಯವು ಪರವಾನಿಗೆ ನೀಡಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 31/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:- 32/2021 ಕಲಂ: 87 ಕೆ.ಪಿ ಯಾಕ್ಟ್ : ಇಂದು ದಿನಾಂಕ: 14/05/2021 ರಂದು 5:30 ಪಿ. ಎಂಕ್ಕೆ ಕ್ಕೆ ಶ್ರೀ ಸಿದ್ದೇಶ್ವರ ಗೆರೆಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಫನ ಪತ್ರ ನೀಡಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 14/05/2021 ರಂದು 4:40 ಪಿ.ಎಂ. ಕ್ಕೆ ನಾನು ಠಾಣೆಯಲ್ಲಿದ್ದಾಗ ಮದಲಿಂಗನಾಳ ಗ್ರಾಮದ ಪ್ರಾಥಮಿಕ ಶಾಲೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎನ್ನುವ ಇಸ್ಪೀಟ ಜೂಜಟ ಆಡುತ್ತಿದ್ದಾರೆ ಅಂತಾ ಪೊಲೀಸ್ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ ಪ್ರಕರಣ ದಾಖಲಿಸಿ ದಾಳಿಮಾಡಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್.ಐ.ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 32/2021 ಕಲಂ: 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿ.ಎಸ್.ಐ ಸಾಹೇಬರು ಮರಳಿ ಠಾಣೆಗೆ ಬಂದು 5 ಜನ ಆರೋಪಿತರು ನಗದು ಹಣ 5400/- ರೂ, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.


ವಡಗೇರಾ ಪೊಲೀಸ್ ಠಾಣೆ :- 59/2021 ಕಲಂ: 15 (ಎ) ಕೆ.ಇ ಎಕ್ಟ 1965 : ದಿನಾಂಕ: 14/05/2021 ರಂದು 6-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 14/05/2021 ರಂದು ಮದ್ಯಾಹ್ನ ನಾನು ಮತ್ತು ಸಾಯಬಣ್ಣ ಹೆಚ್.ಸಿ 102, ಮಹೇಂದ್ರ ಪಿಸಿ 254 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ತಡಿಬಿಡಿ ಗ್ರಾಮದಲ್ಲಿ ಬಸವರ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೂರು-ನಾಲ್ಕು ಜನ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0240 ನೇದ್ದರಲ್ಲಿ ಕರೆದುಕೊಂಡು ಹೊರಟು 4-40 ಪಿ.ಎಮ್ ಕ್ಕೆ ತಡಿಬಿಡಿ ಗ್ರಾಮದ ಬಸವ ಕಟ್ಟೆ ಹತ್ತಿರ ಜೀಪ ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಹೊನ್ನಪ್ಪ ಶಾಲಿ ಈತನ ಮನೆಯನ್ನು ಮರೆಯಾಗಿ ನಿಂತು ನೋಡಲಾಗಿ ಯಾದಗಿರಿ-ತಡಿಬಿಡಿ ಮೇನ ರೋಡ ಬಸವ ಕಟ್ಟೆ ಮುಂದಿನ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಮೂರು ಜನ ಬಿಯರ್ ಬಾಟಲಿಗಳನ್ನು ಇಟ್ಟುಕೊಂಡು ಕುಡಿಯುತ್ತಾ ಕುಳಿತ್ತಿದ್ದು, ನೋಡಿ ಖಚಿತಪಡಿಸಿಕೊಂಡು 4-45 ಪಿಎಮ್ ಕ್ಕೆ ಅವರ ಮೇಲೆ ದಾಳಿ ಮಾಡಿದಾಗ ಅವರಲ್ಲಿ ಇಬ್ಬರೂ ಸ್ಥಳದಿಂದ ಓಡಿ ಹೋಗಿದ್ದು, ಒಬ್ಬನು ಕೈಗೆ ಸಿಕ್ಕಿಬಿದ್ದನು. ಸಿಕ್ಕಿಬಿದ್ದವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಸುರೇಶ ತಂದೆ ನಾಗಪ್ಪ ತಳವಾರ, ವ:28, ಜಾ:ಕಬ್ಬಲಿಗ, ಉ:ಡ್ರೈವರ ಸಾ:ತಡಿಬಿಡಿ ತಾ:ವಡಗೇರಾ ಎಂದು ಹೇಳಿ ತಾನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಕಾಟನ ಬಾಕ್ಸದಲ್ಲಿ ಕಿಂಗಫಿಶಯರ 650 ಎಮ್.ಎಲ್ ದ 6 ಬಿಯರ್ ಬಾಟಲಗಳು ಇದ್ದು, 650ಘಿ6=3 ಲೀಟರ್ 900 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 150ಘಿ6=900/- ರೂ. ಗಳು ಆಗುತ್ತದೆ. ಸದರಿ ಬಾಟಲಗಳಿಂದ ರಾಸಾಯನಿಕ ಪರೀಕ್ಷೆ ಕುರಿತು ಒಂದು ಬಾಟಲನ್ನು ಪ್ರತ್ಯೇಕ ಪಡೆದುಕೊಂಡು ಪಂಚರ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿಪಡಿಸಿಕೊಂಡೆವು. ಉಳಿದ ಮುದ್ದೆಮಾಲನ್ನು ತಾಬಕ್ಕೆ ಪಡೆದುಕೊಂಡು 4-45 ಪಿಎಮ್ ದಿಂದ 5-45 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, 6-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 59/2021 ಕಲಂ: 15(ಎ) ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹಾಪೂರ ಪೊಲೀಸ್ ಠಾಣೆ :- 103/2021 ಕಲಂ 324, 332, 353, 504, 34 ಐಪಿಸಿ ಮತ್ತು 5(1)(2) ದಿ ಕನರ್ಾಟಕ ಎಪಿಡೆಮಿಕ್ ಡಿಸೀಜಸ್ ಯಾಕ್ಟ್ 2020 : ಇಂದು ದಿನಾಂಕ 14/05/2021 ರಂದು 1.00 ಪಿಎಂ ಕ್ಕೆ ಶ್ರೀ ಧರ್ಮಣ್ಣ ಜಂಗಳಿ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ಪ್ರಸ್ತುತ ಕೋವಿಡ್-19 ವೈರಸ್ ರೋಗಾಣು ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದುದರಿಂದ ಕನರ್ಾಟಕ ಸಕರ್ಾರವು ದಿನಾಂಕ 10/05/2021 ರಿಂದ ದಿನಾಂಕ 24/05/2021 ರವರೆಗೆ ಲಾಕಡೌನ್ ಘೋಷಣೆ ಮಾಡಿ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಿದ್ದು, ಸಕರ್ಾರದ ನಿಯಮದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದ್ದು, ಅದರಂತೆ ಶಹಾಪೂರ ನಗರಸಭೆ ಕಾಯರ್ಾಲಯದಿಂದ ಮತ್ತು ನಮ್ಮ ಶಹಾಪೂರ ಪೊಲೀಸ್ ಠಾಣೆಯ ವತಿಯಿಂದ ಧ್ವನಿವರ್ಧಕಗಳ ಮೂಲಕ ಶಹಾಪೂರ ನಗರದಾದ್ಯಂತ ಪ್ರಚಾರ ಮಾಡಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಿ ಕೋವಿಡ್-19 ವೈರಸ್ ಹರಡುವಿಕೆ ತಡೆಗಟ್ಟಲು ಸಹಕರಿಸಿರಿ ಅಂತಾ ತಿಳಿಸಿದ್ದು ಅಲ್ಲದೇ ನಾವು ಪೊಲೀಸ್ ಇಲಾಖೆಯವರು ಮತ್ತು ನಗರಸಭೆ ಕಾಯರ್ಾಲಯದ ಸಿಬ್ಬಂದಿಯವರು ಜಂಟಿಯಾಗಿ ಕಾಯರ್ಾಚರಣೆ ಕೂಡಾ ಮಾಡುತ್ತಾ ಬಂದಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ 13/05/2021 ರಂದು 9.30 ಪಿಎಂ ಸುಮಾರಿಗೆ ನಾನು, ನಮ್ಮ ಠಾಣೆಯ ಲಕ್ಕಪ್ಪ ಪಿಸಿ 163, ಬಾಬು ಹೆಚ್.ಜಿ 253 ಮತ್ತು ನಗರಸಭೆ ಕಾಯರ್ಾಲಯದ ಆನಂದ ಬಿದರಾಣಿ ಎಲೆಕ್ಟ್ರಿಶಿಯನ್, ಶರಣಪ್ಪ ನರಬೋಳ ಎಲೆಕ್ಟ್ರಿಶಿಯನ್ ಎಲ್ಲರೂ ಕೂಡಿ ಶಹಾಪೂರ ನಗರದ ಮೇನ ಬಜಾರನಲ್ಲಿ ಕೋವಿಡ್-19 ಲಾಕಡೌನ್ ಪ್ರಯುಕ್ತ ಪೆಟ್ರೋಲಿಂಗ ಕರ್ತವ್ಯ ಮಾಡುತ್ತಿದ್ದಾಗ ಕಾಯಿಪಲ್ಲೆ ಮಾಕರ್ೆಟನಲ್ಲಿ ಹೋದಾಗ ಅಲ್ಲಿ ಒಂದು ಬಟ್ಟೆ ಅಂಗಡಿಯು ತೆರೆದು ಅನೇಕ ಜನರಿಗೆ ಅಂಗಡಿಯ ಮುಂದೆ ನಿಲ್ಲಿಸಿಕೊಂಡು ಬಟ್ಟೆ ವ್ಯಾಪಾರ ಮಾಡುತ್ತಿದ್ದುದು ಕಂಡು ಬಂದ ಕಾರಣ ತಕ್ಷಣ ನಾವು ಮತ್ತು ನಗರಸಭೆ ಕಾಯರ್ಾಲಯದ ಸಿಬ್ಬಂದಿ ಜಂಟಿಯಾಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ಹೋಗಿದ್ದು, ಅದು ಮಹಾಲಕ್ಷ್ಮೀ ಫ್ಯಾಷನ್ ಬಟ್ಟೆ ಅಂಗಡಿ ಇರುತ್ತದೆ. ನಾವು ಸದರಿ ಅಂಗಡಿಗೆ ಹೋದ ತಕ್ಷಣ ಬಟ್ಟೆ ಖರೀದಿಸಲು ಬಂದ ಜನರು ಓಡಿ ಹೋಗಿದ್ದು ಇನ್ನೂ ಕೆಲವರು ಇದ್ದರು. ಆಗ ನಾವು ಅಂಗಡಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗಳ ಹೆಸರು ವಿಚಾರಿಸಲಾಗಿ 1) ಅಮರರಾಮ್ ತಂದೆ ಸುರಾರಾಮ್ ಪಟೇಲ್ ಸಾ|| ಶಹಾಪೂರ 2) ಶ್ರವಣ್ ತಂದೆ ಉದಾರಾಮ ಪಟೇಲ್ ಸಾ|| ಶಹಾಪೂರ ಅಂತಾ ತಿಳಿಸಿರುತ್ತಾರೆ. ಆಗ ಅವರಿಗೆ ನಾನು ಮತ್ತು ನಗರಸಭೆ ಕಾಯರ್ಾಲಯದ ಸಿಬ್ಬಂದಿರವರು ಕೂಡಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಕರ್ಾರವು ನಿಯಮಗಳನ್ನು ವಿಧಿಸಿದ್ದರೂ ಸಹ ಅವುಗಳನ್ನು ಉಲ್ಲಂಘಿಸಿ ಜನರನ್ನು ಗುಂಪುಗೂಡಿಸಿಕೊಂಡು ಬಟ್ಟೆ ವ್ಯಾಪಾರ ಮಾಡುತ್ತಾ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಲು ಯಾಕೆ ಕಾರಣರಾಗುತ್ತಿದ್ದೀರಿ ಎಂದು ಕೇಳಿದಾಗ ಅಮರರಾಮ್ ಈತನು ಅದನ್ನು ಕೇಳಲು ನೀವ್ಯಾರು? ಅಂತಾ ನಮಗೆ ಕೇಳಿ ನಮ್ಮ ಅಂಗಡಿಯನ್ನು ಪರಿಶೀಲನೆ ಮಾಡಲು ನಿಮಗೆ ಬಿಡುವುದಿಲ್ಲ ಅಂತಾ ಅಡ್ಡ ನಿಂತು ನಾವು ಮಾಡುತ್ತಿರುವ ಸಕರ್ಾರಿ ಕೆಲಸಕ್ಕೆ ಅಡೆತಡೆ ಮಾಡಿದನು. ಆಗ ಶ್ರವಣ್ ಎಂಬುವವನು ನನ್ನ ಜೊತೆಯಲ್ಲಿದ್ದ ನಗರಸಭೆಯ ಸಿಬ್ಬಂದಿಯಾದ ಆನಂದನ ಬಲಗೈ ಮಧ್ಯದ ಬೆರಳಿನ ಮೇಲೆ ಬಾಯಿಯಿಂದ ಕಚ್ಚಿ ರಕ್ತಗಾಯ ಮಾಡಿದನು. ಅಲ್ಲದೇ ಆನಂದನೊಂದಿಗೆ ಅಮರರಾಮ್ ಮತ್ತು ಶ್ರವಣ್ ಇಬ್ಬರೂ ಕೂಡಿ ನೀವೇನು ಕಿತ್ತುಕೊಳ್ತೀರೀ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಾ ಜಗಳ ಮಾಡುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿಯಾದ ಲಕ್ಕಪ್ಪ ಪಿಸಿ 163, ಬಾಬು ಹೆಚ್.ಜಿ 253, ಶರಣಪ್ಪ ಎಲೆಕ್ಟ್ರಿಶಿಯನ್ ಮತ್ತು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ ಮಹಾಂತಪ್ಪ ಮಲಗೊಂಡ ಇವರು ಬಂದು ಜಗಳ ಬಿಡಿಸಿಕೊಂಡಿದ್ದು 9.30 ಪಿಎಂ ದಿಂದ 10.30 ದವರೆಗೆ ಜಗಳವಾಗಿದ್ದು ಇರುತ್ತದೆ. ನಂತರ ನಾನು ಆನಂದನಿಗೆ ರಕ್ತಗಾಯವಾಗಿದ್ದರಿಂದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಕೊಡಿಸಿ ಇಂದು ರಂಜಾನ್ ಮತ್ತು ಬಸವ ಜಯಂತಿ ಇದ್ದ ಪ್ರಯುಕ್ತ ರಾತ್ರಿಯಿಡೀ ಅವಶ್ಯಕ ಕರ್ತವ್ಯವಾದ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ನಿರ್ವಹಿಸಿ ಹಾಗೆಯೇ ಬೆಳಿಗ್ಗೆ ರಂಜಾನ್ ಪ್ರಾರ್ಥನೆ ಇರುವ ಪ್ರಯುಕ್ತ ಶಹಾಪೂರ ನಗರದಾದ್ಯಂತ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಆದಕಾರಣ ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಬಟ್ಟೆ ಅಂಗಡಿ ತೆರೆದು ಕೋವಿಡ್-19 ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ಮಾಡಿದ್ದು ಅಲ್ಲದೇ ಕೇಳಲು ಹೋದ ನಮಗೆ ಸಕರ್ಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಹಲ್ಲೆ ಮಾಡಿ ನಗರಸಭೆಯ ಆನಂದನಿಗೆ ರಕ್ತಗಾಯ ಮಾಡಿದ ಮಹಾಲಕ್ಷ್ಮೀ ಫ್ಯಾಷನ್ ಬಟ್ಟೆ ಅಂಗಡಿಯ ಅಮರರಾಮ್ ಮತ್ತು ಶ್ರವಣ್ ಇವರ ಮೇಲೆ ಕ್ರಮ ಜರುಗಿಸಬೇಕೆಂದು ಈ ಅಜರ್ಿಯ ಮೂಲಕ ವಿನಂತಿಸಿಕೊಳ್ಳುತ್ತೇನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 103/2021 ಕಲಂ 324, 332, 353, 504, 34 ಐಪಿಸಿ ಮತ್ತು 5(1)(2) ದಿ ಕನರ್ಾಟಕ ಎಪಿಡೆಮಿಕ್ ಡಿಸೀಜಸ್ ಯಾಕ್ಟ್ 2020 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು


ಗುರಮಿಠಕಲ್ ಪೊಲೀಸ್ ಠಾಣೆ :- 64/2021 ಕಲಂ 448 323 504 506 ಐಪಿಸಿ : ಇಂದು ದಿನಾಂಕ: 14.05.2021 ರಂದು 6:30 ಪಿ.ಎಮ್.ಕ್ಕೆ ಠಾಣೆಗೆ ಖುದ್ದಾಗಿ ಹಾಜರಾಗಿ ಗಣಕಯಂತ್ರ ಟೈಪ್ ಮಾಡಿಸಿದ ಸಾರಾಂಶವೆನೆಂದರೆ ಪಿರ್ಯಾಧಿಯು ತನ್ನ ತಾಯಿಯಾದ ನಾರಾಯಣಮ್ಮ ಇವಳ ಹೆಸರಿಗೆ ಇರುವ ಆಶ್ರಯ ಮನೆ ಇದ್ದು ಪಿರ್ಯಾಧಿಯ ತಾಯಿಯು ಈಗ 5 ವರ್ಷಗಳ ಹಿಂದೆ ಮೃತಪಟ್ಟಿದ್ದು ಈಗ ಪಿರ್ಯಾಧಿಯು ಅನಪೂರ ಗ್ರಾಮಕ್ಕೆ ಬಂದು ತನ್ನ ಹೆಸರಿಗೆ ಇರುವ ಆಶ್ರಯ ಮನೆಯನ್ನು ತನ್ನ ಹೆಸರಿಗೆ ವಗರ್ಾವಣೆ ಮಾಡಿಕೊಂಡು ತನ್ನ ವಗರ್ಾವಣೆ ಮಾಡಿಕೊಂಡ ಮನೆಯಲ್ಲಿ ಇದ್ದಾಗ ಆರೋಪಿತನು ಇಂದು ದಿನಾಂಕ:14.05.2021 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾಧಿಯ ಮನೆಯನ್ನು ಆಕ್ರಮ ಪ್ರವೇಶ ಮಾಡಿ ಪಿರ್ಯಾಧಿಗೆ ಮತ್ತು ಪಿರ್ಯಾಧಿ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಮನೆಯಿಂದ ಹೊರಗಡೆ ಹಾಕಿದ್ದು. ಪಿರ್ಯಾಧಿ ಮತ್ತು ಪಿರಾಧಿಯ ಮಗಳು ಉಪಚಾರ ಪಡೆದುಕೊಂಡು ತಡವಾಗಿ ಬಂದಿದ್ದು ಅಂತ ಪಿರ್ಯಾಧಿ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ :-. 73/2021 ಕಲಂ 32,34 ಕೆ,ಇ ಯಾಕ್ಟ್ ಮತ್ತು 284 ಐಪಿಸಿ : ದಿನಾಂಕ: 14-05-2021 ರಂದು ಸಾಯಂಕಾಲ 06-30 ಗಂಟೆಗೆ ಶ್ರೀ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದಲ್ಲಿ ಸೇಂಧಿ ಜಪ್ತಿ ಮಾಡಿಕೊಂಡು ಬಂದು ಜ್ಞಾಪನ ಪತ್ರದೊಂದಿಗೆ ಸೇಂಧಿ ಜಪ್ತಿಪಂಚನಾಮೆ ಮತ್ತು ಸೇಂಧಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 73/2021 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀಗುಡಿ ಪೊಲೀಸ ಠಾಣೆ:- 42/2021 ಕಲಂ 32, 34 ಕೆ.ಇ ಎಕ್ಟ್& 188 ಐಪಿಸಿ : ಇಂದು ದಿನಾಂಕ: 14/05/2021ರಂದು05.00 ಪಿ.ಎಮ್.ಕ್ಕೆಆರೋಪಿತನುಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿರವರು ಬಸವೇಶ್ವರಜಯಂತಿ ಪ್ರಯುಕ್ತಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಆದೇಶ ಹೊರಡಿಸಿದ್ದರೂಕೂಡಆದೇಶಉಲ್ಲಂಘನೆ ಮಾಡಿಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಹೊತಪೇಟಗ್ರಾಮದಈರಣ್ಣ ಮಕ್ತಾಪೂರಇವರ ಹಿಟ್ಟಿನಗಿರಣಿ ಹತ್ತಿರತನ್ನದಿನಸಿ ಅಂಗಡಿಯಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ6.10 ಪಿ.ಎಮ್ ಕ್ಕೆ ದಾಳಿ ಮಾಡಿಆರೋಪಿತನಿಗೆ ಹಿಡಿದುಆತನಿಂದ1)180 ಎಮ್.ಎಲ್.ನ 48ಓರಿಜಿನಲ್ಚಾಯ್ಸ್ ವಿಸ್ಕಿ ಪೌಚಗಳು ಅ.ಕಿ. 3372.48/-ರೂ, ಮೌಲ್ಯದ ಮದ್ಯವನ್ನುಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 15-05-2021 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080