ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15-06-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 133/2021 ಕಲಂ 87 ಕೆ.ಪಿ ಆಕ್ಟ್ : ಇಂದು ದಿನಾಂಕ 14/06/2021 ರಂದು, 18-45 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶಾಮಸುಂದರ ಪಿ.ಎಸ್.ಐ(ಅವಿ) ಶಹಾಪೂರ ಪೊಲೀಸ್ ಠಾಣೆ ರವರು, ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 14/06/2021 ರಂದು 15-00 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಠಾಣಾ ವ್ಯಾಪ್ತಿಯ ಎಮ್.ಕೊಳ್ಳುರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ, ಠಾಣೆಯ ಎನ್.ಸಿ ನಂಬರ 33/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು 18-30 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಜೂಜಾಟ ಆಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 133/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 10 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 17050=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ.37/2021 ಕಲಂ: 323, 504, 506, 498(ಎ) ಸಂಗಡ 34ಐ.ಪಿ.ಸಿ : ಇಂದು ದಿನಾಂಕ :14.06.2021 ರಂದು ರಾತ್ರಿ 8:30 ಗಂಟೆಗೆ ಪಿಯರ್ಾದಿ ಶ್ರೀಮತಿ ಪದ್ಮಾವತಿ ಗಂಡ ಬಸವರಾಜ ಕಿಲ್ಲಾರ ವ||25 ವರ್ಷ ಉ||ಕೂಲಿಕೆಲಸ ಜಾ||ಹಿಂದೂ ಬೇಡರ ತಾ||ಸುರಪೂರ ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಮ್ಮ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ತವರೂರು ಸುರಪೂರ ತಾಲೂಕಿನ ದಳಾರದೊಡ್ಡಿ (ಕಕ್ಕೇರಾ) ಗ್ರಾಮವಿದ್ದು ನಮ್ಮ ತಂದೆ-ತಾಯಿಗೆ ನಾನು, ಅಂಬ್ರಮ್ಮ, ಮಾನಯ್ಯ ಅಂತ ಹೆಸರಿನ ಮೂರು ಜನ ಮಕ್ಕಳಿದ್ದು ನಮ್ಮ ತಂದೆ ತಾಯಿಯವರು ನನಗೆ ಈಗ 7 ವರ್ಷಗಳ ಹಿಂದೆ ಸುರಪೂರ ತಾಲೂಕಿನ ಹಿರೇಹಳ್ಳ ಕಕ್ಕೇರಾ ಗ್ರಾಮದ ಬಸವರಾಜ ತಂದೆ ಬಸಣ್ಣ ಕಿಲ್ಲಾರ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನಮ್ಮ ಮದುವೆಯು ನಮ್ಮ ಧರ್ಮದ ಸಂಪ್ರದಾಯದಂತೆ ಕರಡಕಲ್ಲ ಗ್ರಾಮದ ಒಂದು ಮಠದಲ್ಲಿ ಸಾಮೂಹಿಕ ವಿವಾಹದಲ್ಲಿ ಆಗಿದ್ದು, ಮದುವೆ ಕಾಲಕ್ಕೆ ನಮ್ಮ ತಂದೆ ತಾಯಿ ಹಾಗೂ ನಮ್ಮ ಸಂಬಂಧಿಕರಾದ ಸಂಗಪ್ಪ ತಂದೆ ಬಸಣ್ಣ ದಳಾರ, ಜಟ್ಟೆಪ್ಪ ತಂದೆ ಭೀಮಶಾ ದಳಾರ ಹಾಗೂ ನನ್ನ ದೊಡ್ಡಪ್ಪನಾದ ಪರಮಣ್ಣ ತಂದೆ ನಬಯ್ಯ ದಳಾರ ಮತ್ತು ಗ್ರಾಮದ ಇತರರು ಹಾಗೂ ಹಿರೇಹಳ್ಳ ಗ್ರಾಮದ ನನ್ನ ಅತ್ತೆ ಮಾವ ಹಾಗೂ ಅವರ ಸಂಬಂಧಿಕರ ಸಮಕ್ಷಮದಲ್ಲಿ ಆಗಿದ್ದು, ಮದುವೆಯಾದ ನಂತರ ನಾನು ತವರು ಮನೆಯಿಂದ ಗಂಡನ ಮನೆಗೆ ನಡೆಯಲಿಕ್ಕೆ ಬಂದಿದ್ದು ಮೂರು-ನಾಲ್ಕು ವರ್ಷಗಳವರೆಗೆ ನನ್ನ ಗಂಡನ ಮನೆಯಲ್ಲಿ ನನಗೆ ನನ್ನ ಗಂಡ ಬಸವರಾಜ ಹಾಗೂ ನನ್ನ ಗಂಡನ ಅಕ್ಕಳಾದ ಲಕ್ಷ್ಮೀ ತಂದೆ ಬಸಣ್ಣ ಕಿಲ್ಲಾರ ರವರು ಒಳ್ಳೆಯ ರೀತಿಯಿಂದ ನಡೆಸಿಕೊಂಡಿದ್ದು ನಮ್ಮ ದಾಂಪತ್ಯದಿಂದ ನನಗೆ ಮೊನಿಕಾ, ನಾಗವೇಣಿ ಮತ್ತು ಕೃಷ್ಣಾ ಅಂತ ಮೂರು ಜನ ಮಕ್ಕಳು ಜನಿಸಿದ್ದು, ನಂತರ ಈಗ ಸುಮಾರು 2 ವರ್ಷಗಳಿಂದ ನನ್ನ ಗಂಡನಾದ ಬಸವರಾಜನು ಮದುವೆಯಾಗದೇ ನಮ್ಮ ಮನೆಯಲ್ಲಿಯೇ ಇರುವ ತನ್ನ ಅಕ್ಕಳಾದ ಲಕ್ಷ್ಮೀ ತಂದೆ ಬಸಣ್ಣ ಕಿಲ್ಲಾರ ಇವರ ಮಾತನ್ನು ಕೇಳಿ ನನಗೆ ವಿನಾಕಾರಣ ಬೈಯುವದು ಹೊಡೆಬಡೆ ಮಾಡುವದು ಮತ್ತು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ಸೂಳೆ ನೀನು ನನಗೆ ಎಷ್ಟು ದಿವಸಗಳಿಂದ ನನ್ನ ಪಾಲಿಗೆ ಮುಲಾಗಿದ್ದಿ, ಕರ್ರಗೆ ಹಂದಿ ಇದ್ದ ಹಾಗೇ ಇದ್ದಿದಿ ಅಂತ ಬೈಯುವದು ಹೀಯಾಳಿಸುವದು ಮಾಡುತ್ತಾ ಮತ್ತು ತಾನು ಯಾವುದೇ ಕೆಲಸಕ್ಕೆ ಹೋಗದೆ ನನಗೆ ಸೆರೆ ಕುಡಿಯಲು ಹಣ ಕೊಡು ಅಂತ ಪೀಡಿಸುತ್ತಾ ಬಂದಿದ್ದು ಆದರೂ ಕೂಡಾ ನಾನು ಇಂದಲ್ಲ ನಾಳೆ ನನ್ನ ಗಂಡನು ಸರಿ ಹೊಂದುತ್ತಾನೆ ನನ್ನ ಸಂಸಾರದಲ್ಲಿ ಒಳ್ಳೆಯದಾಗುತ್ತದೆ ಅಂತ ತಿಳಿದುಕೊಂಡು ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸದೆ ತಾಳಿಕೊಂಡು ಬಂದಿದ್ದು ಇದ್ದು, ಈಗ 8-10 ತಿಂಗಳುಗಳಿಂದ ಮತ್ತೆ ನನಗೆ ನನ್ನ ಗಂಡನು ಅತಿಯಾಗಿ ತನ್ನ ಅಕ್ಕ ಲಕ್ಷ್ಮೀಯ ಮಾತನ್ನು ಕೇಳಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡ ಹತ್ತಿದ್ದು ಆಗ ನಾನು ನನ್ನ ತಂದೆಗೆ ಈ ವಿಷಯವನ್ನು ತಿಳಿಸಿದಾಗ ನನ್ನ ತಂದೆ ಬಸಣ್ಣ ರವರು ನಮ್ಮ ಮದುವೆ ಕಾಲಕ್ಕೆ ಮಾತುಕತೆ ಆಡಿದ ನಮ್ಮ ಸಂಬಂಧಿಕರಾದ ಸಂಗಪ್ಪ ತಂದೆ ಬಸಣ್ಣ ದಳಾರ, ಜಟ್ಟೆಪ್ಪ ತಂದೆ ಭೀಮಶಾ ದಳಾರ ಮತ್ತು ನನ್ನ ದೊಡ್ಡಪ್ಪನಾದ ಪರಮಣ್ಣ ತಂದೆ ನಬಯ್ಯ ದಳಾರ ರವರಿಗೆ ಕರೆದುಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ನಾದಿನಿ ಲಕ್ಷ್ಮೀ ರವರಿಗೆ ಬುದ್ದಿಮಾತು ಹೇಳಿ ನನ್ನೊಂದಿಗೆ ಸರಿಯಾಗಿ ಇರುವಂತೆ ತಿಳುವಳಿಕೆ ನೀಡಿ ಹೋಗಿದ್ದು ನಂತರ 3-4 ತಿಂಗಳುಗಳ ವರೆಗೆ ಎಲ್ಲರೂ ನನಗೆ ಚೆನ್ನಾಗಿ ನೋಡಿಕೊಂಡಿದ್ದು ಮತ್ತೆ ನನ್ನ ಗಂಡ ಮತ್ತು ನಾದಿನಿ ನನಗೆ ಈಗ 15-20 ದಿವಸಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುವದನ್ನು ಮುಂದುವರೆಸಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 13.06.2021 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಹಿರೇಹಳ್ಳ ಕಕ್ಕೇರಾದ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನಾದ ಬಸವರಾಜ ತಂದೆ ಬಸಣ್ಣ ಕಿಲ್ಲಾರ ವಯ-30 ವರ್ಷ ಇತನು ತನ್ನ ಅಕ್ಕ ಲಕ್ಷ್ಮೀ ತಂದೆ ಬಸಣ್ಣ ಇವರ ಮಾತನ್ನು ಕೇಳಿ ನನಗೆ ಏ ಸೂಳೆ, ರಂಡಿ ನಾವು ನಿನಗೆ ಎಷ್ಟು ಬೈದರು ಮತ್ತು ಹೊಡೆಬಡೆ ಮಾಡಿದರೂ ತವರು ಮನೆಗೆ ಹೋಗದೆ ನಾಯಿ ಬಿದ್ದ ಹಾಗೆ ನಮ್ಮ ಮನೆಯಲ್ಲಿಯೇ ಉಳಿದಿದಿ ರಂಡಿ, ಬೊಸಡಿ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತ ಅಂದವರೇ ನನ್ನ ಗಂಡ ಬಸವರಾಜನು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಯ ಮೇಲೆ, ಎದೆಯ ಮೇಲೆ, ಪಕಡಿಯ ಮೇಲೆ ಒದ್ದು ಗುಪ್ತಗಾಯ ಪಡಿಸಿದ್ದು ಹಾಗೂ ನನ್ನ ನಾದಿನಿ ಲಕ್ಷ್ಮೀಯು ನನ್ನ ಎರಡೂ ಕಪಾಳದ ಮೇಲೆ ಕೈಯಿಂದ ಜೋರಾಗಿ ಹೊಡೆದು ರಂಡಿ ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ಅಂತ ಅಂದಿದ್ದು ಆಗ ನಾನು ಯಾಕೆ ನನ್ನ ತವರು ಮನೆಗೆ ಹೊಗಲಿ ಇಲ್ಲೆ ಇರುತ್ತೇನೆ ಅಂದಾಗ ನನ್ನ ಗಂಡ ಮತ್ತು ನಾದಿನಿ ರವರು ಬೋಸಡಿ ನೀನು ನಿನ್ನ ತವರು ಮನೆಗೆ ಹೋಗದೇ ಇದ್ದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ದಬ್ಬಿ ಕೊಟ್ಟಿದ್ದು ಆಗ ನಾನು ನನಗೆ ಉಳಿಸಿರಪ್ಪೊ ಅಂತ ಚೀರಾಡಲು ಆಗ ನಮ್ಮ ಮನೆಯ ಮುಂದಿನ ರಸ್ತೆಯ ಮೇಲಿಂದ ಹೋಗುತ್ತಿದ್ದ ಭೀಮಣ್ಣ ತಂದೆ ಪರಮಣ್ಣ ದಳಾರ, ಲಕ್ಷ್ಮೀ ಗಂಡ ಕಡ್ಡಿಬಸಣ್ಣ ಕಡ್ಡೆರ ರವರು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು ನಂತರ ನಾನು ನನ್ನ ಮಕ್ಕಳಿಗೆ ಕರೆದುಕೊಂಡು ನನ್ನ ತವರೂರಾದ ದಳಾರದೊಡ್ಡಿ ಕಕ್ಕೇರಾಕ್ಕೆ ಹೋಗಿ ನನ್ನ ತಂದೆ ಬಸಣ್ಣನಿಗೆ ನನ್ನ ಗಂಡ ಮತ್ತು ನಾದಿನಿ ರವರು ನನಗೆ ಅವಾಚ್ಯ ಶಬ್ದಗಳಿಂದ ಹೊಡೆಬಡೆ ಮಾಡಿದ ವಿಷಯ ತಿಳಿಸಿದ್ದು ಈ ದಿವಸ ಮುಂಜಾನೆ ನನ್ನ ತಂದೆಯು ನಮ್ಮ ಮಡುವೆ ಕಾಲಕ್ಕೆ ಮಾತುಕತೆ ಆಡಿದ ನಮ್ಮ ಸಂಬಂಧಿಕರಾದ ಸಂಗಪ್ಪ ತಂದೆ ಬಸಣ್ಣ ದಳಾರ, ಜಟ್ಟೆಪ್ಪ ತಂದೆ ಭೀಮಶಾ ದಳರ ಹಾಗೂ ನನ್ನ ದೊಡ್ಡಪ್ಪನಾದ ಪರಮಣ್ಣ ತಂದೆ ನಬಯ್ಯ ದಳಾರ ರವರಿಗೆ ನನ್ನ ತವರು ಮನೆಗೆ ಕರೆಯಿಸಿದ್ದು ಅವರು ನನಗೆ ಘಟನೆಯ ಬಗ್ಗೆ ವಿಚಾರಿಸಲಾಗಿ ನಾನು ನನ್ನ ಗಂಡ ಮತ್ತು ನಾದಿನಿ ರವರು ನನಗೆ ಹೊಡೆಬಡೆ ಮಾಡಿದ ಬಗ್ಗೆ ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ ಬಗ್ಗೆ ತಿಳಿಸಿದ್ದು ನಾನು ನಿನ್ನೆಯಿಂದ ನನ್ನ ತವರು ಮನೆಯಲ್ಲಿಯೇ ಇದ್ದು ನಾನು ನನ್ನ ತಂದೆ ಮತ್ತು ಸಂಬಂಧಿಕರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ಈ ಘಟನೆಯಲ್ಲಿ ನನಗೆ ಅಷ್ಟೇನೂ ಪೆಟ್ಟಾಗಿರುವದಿಲ್ಲ ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ ಆದಕಾರಣ ನನಗೆ ವಿನಾಕಾರಣ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ನನ್ನ ಗಂಡ ಬಸವರಾಜ, ನಾದಿನಿ ಲಕ್ಷ್ಮೀ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.37/2021 ಕಲಂ: 323, 504, 506, 498(ಎ) ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 110/2021 ಕಲಂ 87 ಕೆ.ಪಿ. ಕಾಯ್ದೆ : ಇಂದು ದಿನಾಂಕ: 14-06-2021 ರಂದು 9-45 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿ.ಎಸ್.ಐ. ಸಾಹೇಬರು 8 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:14/06/2021 ರಂದು 6-30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯ ರುಕ್ಮಾಪೂರ ಗ್ರಾಮದ ಶ್ರೀ ಬನಶಂಕರಿ ದೇವಿ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ದೇವಿಂದ್ರಪ್ಪ ಪಿಸಿ-184, 3) ಶ್ರೀ ಮಂಜುನಾಥ ಪಿಸಿ-271, 4) ಶ್ರೀ ಹೊನ್ನಪ್ಪ ಸಿಪಿಸಿ-427, 5) ಶ್ರೀ ರವಿಕುಮಾರ ಸಿಪಿಸಿ-376, 6) ಶ್ರೀ ವಿರೇಶ ಸಿಪಿಸಿ-374 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ರಾಮಚಂದ್ರ ತಂದೆ ಭೀಮಣ್ಣ ಬೆಳಂಗಿ ವ|| 48 ವರ್ಷ ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ರುಕ್ಮಾಪೂರ ತಾ|| ಸುರಪುರ 2) ಶ್ರೀ ವಿಶ್ವನಾಥ ತಂದೆ ಶರಣಪ್ಪ ದೇವಶೆಟ್ಟಿ ವ|| 50 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ರುಕ್ಮಾಪೂರ ತಾ|| ಸುರಪುರ ಇವರನ್ನು 7 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 7:15 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು, 7-45 ಪಿ.ಎಂ ಕ್ಕೆ ರುಕ್ಮಾಪೂರ ಗ್ರಾಮದ ಶ್ರೀ ಬನಶಂಕರಿ ದೇವಿ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 7:50 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 8 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಅಮರಪ್ಪ ತಂದೆ ಬಸಣ್ಣ ಜಗಶೇಟ್ಟಿ ವ|| 43 ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಪ್ರಶಾಂತ ತಂದೆ ಅಮರಪ್ಪ ಹೈಯಾಳ ವ|| 38 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಶರಣಪ್ಪ ತಂದೆ ಬಸವರಾಜ ಬಡಗಾ ವ|| 51 ವರ್ಷ ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1600/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಶಾಖೀರ್ ತಂದೆ ಬಸೀರ್ ನಾಶಿ ವ|| 45 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ರಂಗಂಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1350/- ರೂಗಳು ವಶಪಡಿಸಿಕೊಳ್ಳಲಾಯಿತು 5) ಸಂಗಣ್ಣ ತಂದೆ ಬಸಣ್ಣ ಸಿರಗೋಳ ವ|| 58 ವರ್ಷ ನೇಕಾರ ಉ|| ಕೂಲಿ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1250/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಬಸವರಾಜ ತಂದೆ ನಿಂಗಪ್ಪ ಜೇವಗರ್ಿ ವ|| 41 ವರ್ಷ ಜಾ|| ನೇಕಾರ ಉ|| ಕೂಲಿ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು, 7) ಅಮಲಪ್ಪ ತಂದೆ ಭೀಮರಾಯ ಬಂದೊಡ್ಡಿ ವ|| 45 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು, 8) ಗಂಗಾಧರ ತಂದೆ ನಾಗಪ್ಪ ಚಿಲ್ಲಾಳ ವ|| 52 ವರ್ಷ ಜಾ|| ಸಾಳೇರ ಉ|| ಕೂಲಿ ಸಾ|| ರುಕ್ಮಾಪೂರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 900/- ರೂಗಳು ವಶಪಡಿಸಿಕೊಳ್ಳಲಾಯಿತು, ಇದಲ್ಲದೆ ಪಣಕ್ಕೆ ಇಟ್ಟ ಹಣ 63,200/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 73,200/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:50 ಪಿ.ಎಮ್ ದಿಂದ 8:50 ಪಿ.ಎಮ್ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 8 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 110/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ:86/2021 ಕಲಂ 406, 420 ಐ.ಪಿ.ಸಿ : ದಿನಾಂಕ 14-06-2021 ರಂದು ಸಾಯಂಕಾಲ 5-30 ಪಿ.ಎಮ ಕ್ಕೆ ಪಿರ್ಯಾಧಿದಾರಾದ ಶ್ರೀ ಮಂಜುನಾಥ ತಂದೆ ಮಲ್ಲನಗೌಡ ಬೂದೂರ ವಯ:26 ಉ:ಒಕ್ಕಲುತನ ಸಾ: ತಂಗಡಗಿ ತಾ:ಶಹಾಪುರ ಇರವು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಹೇಳಿಕೆ ಕೊಟ್ಟಿದ್ದು. ಸದರಿ ಹೇಳಿಯ ಸಾರಾಂಶದವೇನೆಂದರೆ ದಿನಾಂಕ 12/06/2021 ರಂದು ವಾಹನ ಸಂಖ್ಯೆ ಕೆಎ33-ಬಿ-0261 ವಾಹನದಲ್ಲಿ ಅಂಗನವಾಡಿಯ ಅಹಾರದ ಕಿಟ್ಟುಗಳನ್ನು ಸರಬರಾಜು ಮಾಡಲು ಸದರಿ ವಾಹನದ ಮೂಲಕ ಎಂ.ಎಸ್.ಪಿ.ಸಿ ಯಿಂದ ತೆಗೆದುಕೊಂಡು ವಿತರಿಸಲು ಹೊಗಿರುತ್ತಾರೆ. ಸದರಿ ವಾಹನದಲ್ಲಿ ಅಂಗವಾಡಿಗಳಿಗೆ ಸಂಪೂರ್ಣವಾಗಿ ಆಹಾರದ ಕಿಟ್ಟಗಳನ್ನು ವಿತರಸದೇ ಸದರಿ ವಾಹನದಲ್ಲಿ ಸುಮಾರು 25 ಕಿಟ್ಟುಗಳನ್ನು ಹಾಗು 50 ಕೆ.ಜಿ ಅಕ್ಕಿಗಳನ್ನು ಆಹಾರ ಸರಬರಾಜು ಮಾಡುತ್ತಿರುರವ ಗುತ್ತಿಗೆದಾರರು ಅಂಗನವಾಡಿ ಕಾರ್ಯಕರ್ತರಿಂದ ಹಿಂಪಡೆದು ಅಥವಾ ಅವರಿಂದ ಕಡಿಮೆ ದರದಲ್ಲಿ ತಂದು ವಾಹನದಲ್ಲಿರುವ ಕ್ಯಾಬಿನದಲ್ಲಿ ಸ್ಪೀಕರ ಬಾಕ್ಸಗಳಲ್ಲಿ ಹಾಗು ಸಿಟಿನ ಬ್ಯಾಕ್ಸನಲ್ಲಿ ಮುಚ್ಚಿಟ್ಟಿರುವುದು ನನ್ನ ಗಮನಕ್ಕೆ ಬಂದಿದ್ದರಿಂದ ನಾನು ವಾಹನದ ಚಾಲಕನಿಗೆ ನಿನ್ನ ವಾಹನದಲ್ಲಿ ಏನೇನು ಆಹಾರದ ಕಿಟ್ಟುಗಳಿವೆ ಎಂದು ಕೇಳಿದೆನು. ವಾಹನದ ಚಾಲಕನು ನನ್ನ ವಾಹನದಲ್ಲಿ ಯಾವುದೇ ರೀತಿಯ ಕಿಟ್ಟುಗಳು ಇರುವುದಿಲ್ಲಾ. ಎಂದು ಹೇಳಿದನು. ಆಗ ನಾನು ಪೊಲೀಸರಿಗೆ ಹೇಳುತ್ತೇನೆಂದು ಹೇಳಿದಾಗ ಆಗ ವಾಹನ ಚಾಲಕನು ಇಲ್ಲ ಸರ್ ನಾನು ಈ ಕಿಟಗಳನ್ನು ನಮ್ಮ ಮಾಲಿಕರು ಒಂದು ಕಿಟಗೆ 250/- ರೂ ಗಳಂತೆ ಖರೀದಿ ಮಾಡಿಕೊಂಡು ಬಾ ಎಂದು ಹೇಳಿರುತ್ತಾರೆ. ನಾನು ಅದರಂತೆ ಅಂಗನವಾಡಿಗಳಿಗೆ ವಿತರಿಸುವ ಕಿಟಗಳನ್ನು ಸಂಪೂರ್ಣವಾಗಿ ವಿತರಿಸದೇ ಕಡಿಮೆ ಕೊಟ್ಟು ಒಂದು ಕಿಟಗಳ ಪೈಕಿ 250/- ರೂ ಕೊಟ್ಟು ಆ ಕಿಟಗಳನ್ನು ಎಮ.ಎಸ.ಪಿ.ಸಿ ಗೆ ವಾಪಸ ತಂದು ಕೊಡುತ್ತೇವೆ ಎಂದು ಹೇಳಿ ಲಾರಿ ಡ್ರೈವರ ಲಾರಿಯಲ್ಲಿರುವ ಕಿಟಗಳನ್ನು ತೆಗೆದು ಕೆಳಗಡೆ ಹಾಕಿ ನಂತರ ಡ್ರೈವರನು ಈ ಸಂಧರ್ಬದಲ್ಲಿ ಈ ಅವ್ಯವಹಾರದಲ್ಲಿ ತಾಲೂಕ ಅಧಿಕಾರಿಗಳು ಹಾಗೂ ಸದರಿ ಇಲಾಖೆಯ ಜಿಲ್ಲಾಧಿಕಾರಿಗಳು ಶಾಮೀಲಾಗಿರುತ್ತಾರೆಂದು ಹಾಗೂ ಸದರಿ ಅವ್ಯವಹಾರವು ಇದೇ ರೀತಿ ಸುಮಾರು ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿಸಿ ವಾಹನ ಚಾಲಕನು ವಾಹನ ನಿಲ್ಲಿಸಿ ಹೋದನು. ನಂತರ ಸದರಿ ಕಿಟಗಳು ನನ್ನ ಸ್ವಂತ ವಾಹನದಲ್ಲಿ ವಾಹನ ಸಂಖ್ಯೆ ಕೆಎ-33 ಎ-9276 ಟಾಟಾ ಎ.ಸಿ ನಲ್ಲಿ ಆಹಾರದ ಕಿಟಗಳನ್ನು ಹಾಕಿಕೊಂಡು ಜಿಲ್ಲೆಯ ಸನ್ಮಾನ್ಯ ಉಸ್ತುವಾರಿ ಸಚಿವರಾದ ಆರ್ ಶಂಕರ ಸರ್ ರವರು ಜಿಲ್ಲೆಯ ನೂತನ ಪ್ರವಾಸಿ ಮಂದಿರದಲ್ಲಿ ಇದ್ದಾರೆಂದು ತಿಳಿದು ವಾಹನದಲ್ಲಿರುವ ಕಿಟಗಳನ್ನು ಪ್ರವಾಸಿ ಮಂದಿರಕ್ಕೆ ತೆಗದುಕೊಂಡು ಹೋಗಿರುತ್ತೇನೆ. ತಡರಾತ್ರಿಯಾದ ಕಾರಣ ನಾನು ಪ್ರವಾಸಿ ಮಂದಿರ ಕಂಪೌಂಡ ಹೊರಗಡೆ ವಾಹನದಲ್ಲಿಯೇ ಮಲಗಿರುತ್ತೇನೆ. ಬೆಳಗ್ಗೆ ಮಾನ್ಯ ಉಸ್ತುವಾರಿ ಮಂತ್ರಿಯವರಿಗೆ ಸದರಿ ವಿಷಯವನ್ನು ತಿಳಿಸಿದಾಗ ಮಾನ್ಯ ಮಂತ್ರಿಗಳು ವಾಹನವನ್ನು ಪರಿಶೀಲಿಸಿ ತದನಂತರ ಮಾನ್ಯ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಗಳಿಗೆ ಸದರಿ ವಿಷಯವನ್ನು ತನಿಖೆ ಮಾಡಿ ಎಂದು ತಿಳಿಸಿದರು. ಮಾನ್ಯ ಎಸ.ಪಿ ಸಾಹೇಬರು ನನಗೆ ಅವ್ಯವಹಾರ ನಡೆದ ಸ್ಥಳ ಯಾವ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಆ ಠಾಣೆಗೆ ಹೋಗಿ ಎಂದು ತಿಳಿಸಿದರು. ಆದ್ದರಿಂದ ನಾನು ಸದರಿ ಆಹಾರ ಕಿಟಗಳನ್ನು ನನ್ನ ಸ್ವಂತ ವಾಹನದಲ್ಲಿ ತಂದು ಕಛೇರಿಯಲ್ಲಿ ಆವರಣದಲ್ಲಿ ತಂದು ನಿಲ್ಲಿಸಿರುತ್ತೇನೆ. ಈ ಸಂದರ್ಭದಲ್ಲಿ ನಾನು ವಿನಂತಿಸಿಕೊಳ್ಳುವದೇನೆಂದರೆ ಸದರಿ ಇಲಾಖೆಯ ಅವ್ಯವಹಾರಗಳು ಜಿಲ್ಲೆಯ ಸಹಾಯಕ ಆಯುಕ್ತಕರು ಹಂತದಲ್ಲಿ ತನಿಖೆ ನಡೆಯುತ್ತಿದೆ. ಆದ ಕಾರಣ ಈ ಅವ್ಯವಹಾರದಲ್ಲಿ ಸದರಿ ಇಲಾಖೆಯ ಜಿಲ್ಲೆಯ ಉಪನಿದರ್ೇಶಕರು, ತಾಲೂಕಿನ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ಯಾದಗಿರಿ ಮತ್ತು ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ಗುರುಮಿಟಕಲ್ ಹಾಗೂ ಮಹಿಳಾ ಪೌರಕ ಪೌಷ್ಠಿಕ ಆಹಾರ ತಯಾರಕ ಕೇಂದ್ರದ ಸದಸ್ಯರುಗಳು ಹಾಗೂ ಆಹಾರ ಸರಬರಾಜು ಮಾಡುತ್ತೀರುವ ಗುತ್ತೀಗೆದಾರರು ಶಾಮೀಲಾಗಿರುತ್ತಾರೆ. ಆದಕಾರಣ ತಾವುಗಳು ಸದರಿ ವಿಷಯವನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೊಳ್ಳಬೇಕೆಂದು ಈ ಪತ್ರದ ಮೂಲಕ ಸಮಾಜ ಸೇವಕನಾಗಿ ಬಡ ರೈತನಾಗಿ ರೈತಸಂಘದ ಸದಸ್ಯನಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.(ವಿಚಾರಣೆ ಸಂದರ್ಭದಲ್ಲಿ ಸದರಿ ಪ್ರಕರಣದ ವಿಡಿಯೋ ಹಾಗೂ ಪೋಟೋಗಳು ತೋರಿಸುತ್ತೇನೆ) ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 86/2021 ಕಲಂ 406, 420 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 87/2021 ಕಲಂ 384 ಐ.ಪಿ.ಸಿ : ದಿನಾಂಕ 14/06/2021 ಸಾಯಂಕಾಲ 7-00 ಪಿ.ಎಮ ಕ್ಕೆ ಫಿರ್ಯಾಧಿದಾರರಾದ ಶ್ರೀ ಭೀಮರಾಯ ಶಿಶು ಅಭಿವೃಧಿ ಯೋಜನಾಧಿಕಾರಿಗಳು ಗುರುಮಿಠಕಲ್ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ಹಾಜರಪಡಿಸಿದ್ದೆನೆಂದರೆ ನಾನು ಭೀಮರಾಯ ಶಿಶು ಅಭಿವೃಧಿ ಯೋಜನಾಧಿಕಾರಿಗಳು ಗುರುಮಿಠಕಲ್ ವಯಸ್ಸು 37 ವರ್ಷ ಆದ ನಾನು ಈ ಮೂಲಕ ಗುರುಮಿಠಕಲ್ ಶಿಶು ಅಭಿವೃಧಿ ಯೋಜನೆಯ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ವಿತರಿಸಬೇಕಾದ ಆಹಾರ ಸಾಮಗ್ರಗಳನ್ನು ದಿನಾಂಕ 12-06-2021 ರಂದು ಯಾದಗಿರಿ ನಗರದ ಗಂಜ್ ಏರಿಯಾದಲ್ಲಿ ಇರುವ ಯಾದಗಿರಿ ತಾಲೂಕಾ ಮಹಿಳಾ ಪೂರಕ ಪೌಷ್ಠಿಕ ಆಹಾರ ಘಟಕ (ಎಂ.ಎಸ್.ಪಿ.ಸಿ.)ಯಾದಗಿರಿ ಸಂಸ್ಥೆಯಿಂದ ಅಕ್ಕ ಮಹಾದೇವಿ ಮಹಿಳಾ ಮಂಡಳಿ (ರಿ) ಯಾದಗಿರಿ ಇವರ ಸಂಸ್ಥೆಯ ವಾಹನ ಸಂಖ್ಯೆ ಕೆ.ಎ-32-ಬಿ-0261 ರ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಹಂಚಿಕೆಯಾಗಿ ಉಳಿಕೆಯಿರುವ ಅಂದಾಜು 10 ಕಿಟಗಳನ್ನು ಎಂ.ಎಸ್.ಪಿ.ಸಿ. ಕೇಂದ್ರದಲ್ಲಿ ಹಿಂದುರುಗಿ ಬಂದಾಗ ಸಾಯಂಕಾಲ 5-30 ಗಂಟೆಗೆ ಪಡೆಯುತ್ತಿರುವಾಗ ಮಂಜುನಾಥ (ಮಂಜು ತಂಗಡಗಿ) ಹಾಗೂ ಇತರರು ತಡ ಹಿಡಿದು ಎಂ.ಎಸ್.ಪಿ.ಸಿ. ಕೇಂದ್ರದ ಸಿಬ್ಬಂಧಿಗಳನ್ನು ಬೆದರಿಸಿ ತನ್ನ ಸ್ವಂತ ಅಟೋ ರೀಕ್ಷಾ, ಮೂಲಕ (ವಾಹನ ಸಂಖ್ಯೆ ಕೆಎ 33 ಎ 9276 ಟಾಟಾ ಎ.ಸಿ) ಉದ್ದೇಶ ಪೂರ್ವಕವಾಗಿ ಆಕ್ರಮವಾಗಿ ಪಡೆದುಕೊಂಡು ಹೋಗಿರುತ್ತಾರೆ. ಸದರಿ ವಾಹನದ ಪೋಟೊ ಹಾಘೂ ಎಮ.ಎಸ.ಪಿ.ಸಿ ಕೇಂದ್ರ ಸಿ.ಸಿ.ಟಿ.ವಿ ಕ್ಯಮರಾದ ವಿಡಿಯೋ ತುಣುಕುಗಳು ಸಹಿತ ಉಲ್ಲೇಖಿತ ಪತ್ರದ ಮೂಲಕ ತಿಳಿಸಿರುತ್ತಾರೆ.ಪ್ರಯುಕ್ತ ಯಾದಗಿರಿ ನಗರದ ಗಂಜ ಏರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಮ.ಎಸ.ಪಿ.ಸಿ ಕೇಂದ್ರದ ಮುಂಭಾಗದಲ್ಲಿ ನಿಂತಿರುವ ಲಾರಿಯಲ್ಲಿ ಉಳಿಕೆ ಇರುವ ಕಿಟ್ಗಳನ್ನು ದೂರದ್ದೇಶ ಪೂರ್ವಕವಗಿ ಮಂಜುನಾಥ ( ಮಂಜು ತಂಗಡಗಿ) ಹಾಗೂ ಇತರರು ಆಕ್ರಮವಾಗಿ ವಶದಲ್ಲಿ ಇಟ್ಟುಕೊಂಡಿರುವದು ಎಮ.ಎಸ.ಪಿ.ಸಿ ಇವರು ನೀಡಿರುವ ಪೋಟೊ ಹಾಗೂ ಸಿ.ಸಿ.ಟಿ.ವಿ ಕ್ಯಾಮರಾದ ವಿಡಿಯೋ ತುಣುಕುಗಳಿಂದ ರುಜುವಾಗಿದ್ದು, ಪ್ರಯುಕ್ತ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ವಿತರಿಸಬೇಕಾದ ಆಹಾರ ಸಾಮಾಗ್ರಿಗಳ ಕಿಟಗಳನ್ನು (ಸರಕಾರ ಸಾಮಾಗ್ರಿಗಳನ್ನು) ಆಕ್ರಮವಾಗಿ ವಶದಲ್ಲಿಟ್ಟುಕೊಂಡಿರುವ ಮಂಜುನಾಥ ( ಮಂಜು ತಂಗಡಿಗಿ) ಇವರ ವಿರುದ್ದ ದೂರು ದಾಖಲಿಸಿಕೊಂಡು ವಾಹನ ಸಂಖ್ಯೆ ಕೆಎ-33 ಎ- 9276 ಟಾಟಾ ಎ.ಸಿ ಯನ್ನು ವಶಕ್ಕೆ ಪಡೆದುಕೊಂಡು ಸೂಕ್ತ ತನಿಖೆ ನಡೆಸಲು ಹಾಗೂ ಸದರಿಯವರ ಆಕ್ರಮವಾಗಿ ವಶದಲ್ಲಿರುವ ಆಹಾರ ಸಾಮಾಗ್ರಿಗಳನ್ನು ಹಿಂದುರುಗಿಸಬೇಕೆಂದು ಈ ಮೂಲಕ ಕೋರಲಾಗಿದೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 87/2021 ಕಲಂ 384 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ:88/2021 ಕಲಂ 279,337,338 ಐಪಿಸಿ ಸಂ 187 ಐ.ಎಮ್.ವಿ ಆಕ್ಟ : ಇಂದು ದಿನಾಂಕ 14/06/2021 ರಂದು ರಾತ್ರಿ 09-15 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಚಾಂದಿಬಾಯಿ ಗಂಡ ಕುಬ್ಯಾ ಚೆವ್ಹಾಣ ವಯಾ: 55 ಉ: ಕೂಲಿ ಜಾತಿ: ಲಮಾಣಿ ಸಾ: ಅಶೋಕ ನಗರ ಮುಂಡರಗಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಬಂದು ಲಿಖಿತ ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನ್ನ ಮಗ ಅಕಾಶ ಗೌಂಡಿ ಕೆಲಸ ಮಾಡುತ್ತಿದ್ದು. ಕೆಲಸಕ್ಕೆ ಹೋಗಿ ಬರಲು ಯಾದಗಿರಿ ವಿಕೆಜಿ ಬಜಾಜ್ ಶೋ ರೂಮ್ ನಿಂದ ದಿನಾಂಕ: 17/05/2021 ರಂದು ಹೊಸದಾಗಿ ಪಾಲ್ಸರ ಬೈಕ್ ಖರೀದಿಸಿದ್ದು ಇರುತ್ತದೆ. (ಏಂ2021-ಖಿಖ- 1586ಂಅ) ದಿನಾಂಕ:12/06/2021 ರಂದು ಆರ್. ಹೊಸಳ್ಳಿ ಗ್ರಾಮದಲ್ಲಿ ಶಾಲೆ ಕಟ್ಟಡ ಕಟ್ಟುವ ಕೆಲಸ ನಡೆಯುತ್ತಿದೆ ಅಂತಾ ಹೇಳಿ ತನ್ನ ಪಾಲ್ಸರ್ ಬೈಕ ಮೇಲೆ ಮುಂಜಾನೆ ವೇಳೆ ಮನೆಯಿಂದ ಹೊಗಿದ್ದನು.ಅದೇ ದಿನ ರಾತ್ರಿ 08.30 ಪಿ.ಎಮ್ ಸುಮಾರಿಗೆ ನಾನು ಅಶೋಕ ನಗರ ಮುಂಡರಗಿ ಗ್ರಾಮದಲ್ಲಿ ಇರುವಾಗ ನಮ್ಮ ಸಮ್ಮಂದಿಕ ಕಿಶನ ರಾಠೋಡ ಸಾ: ಕುರುಕುಂಬಳ ತಾಂಡ ಇವರು ನನ್ನ ಬಾವನ ಮಗನಾದ ನಂದು ಚೆವ್ಹಾಣರವರಿಗೆ ಪೋನ ಮಾಡಿ ರಾಮಸಮುದ್ರದ ಆರ್.ಎಮ್.ಸಿ ದಭಾ ಹತ್ತಿರದ ಮುಖ್ಯ ರಸ್ತೆಯ ಮೇಲೆ ಆಕಾಶ ಇತನು ಮೊಟರ ಸೈಕಲ್ ಅಪಘಾತದಲ್ಲಿ ಗಾಯಗೊಂಡು ರಸ್ತೆ ಮೇಲೆ ಬಿದಿದ್ದು ಅತನಿಗೆ ಉಪಚಾರಕ್ಕಾಗಿ ಅಂಬುಲೆನ್ಸ್ ಗೆ ಕರೆ ಮಾಡಿದ್ದು ಆಸ್ಪತ್ರೆಗೆ ಕಳಿಸುತ್ತಿದೆವೆ ಎಂದು ಹೇಳಿದಾಗ ನಾನು ಮತ್ತು ನನ್ನ ಬಾವನ ಮಗ ನಂದು ತಂದೆ ಹೀರಾಸಿಂಗ್ ಚೆವ್ಹಾಣ, ಚಂದ್ರು ತಂದೆ ಭೀಮ ರಾಠೋಡ ಹಾಗೂ ಇನ್ನೂ ಇತರರು ರಾಮಸಮುದ್ರದ ಹತ್ತಿರ ಆರ್.ಎಮ್.ಸಿ ದಭಾದ ಹತ್ತಿರ ನೋಡಲಾಗಿ ನನ್ನ ಮಗನಿಗೆ ಆಗಲೇ ಉಪಚಾರ ಕುರಿತು ಆಸ್ಪತ್ರೆಗೆ ಕಳಿಸಿದ್ದು ಸ್ಥಳದಲ್ಲಿ ನನ್ನ ಮಗನ ಬೈಕ್ ರಸ್ತೆ ಬದಿಯಲ್ಲಿ ಜಕ್ಕಂ ಗೋಂಡು ಬಿದ್ದಿರುತ್ತದೆ. ನಂತರ ನಾವು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಆಕಾಶ ಇತನಿಗೆ ತಲೆಗೆ ಮುಖಕ್ಕೆ ಮೈಕೈ ಮೇಲೆ ಬಾರಿ ರಕ್ತಗಾಯಗಳಾಗಿದ್ದು ಮಾತಡುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ಡಾಕ್ಟರರವರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೊಗಲು ಹೇಳಿದ್ದಕ್ಕಾಗಿ ನಾವು ಆಕಾಶನಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರ್ಪಡೆ ಮಾಡಿರುತ್ತೆವೆ. ಘಟನೆ ಬಗ್ಗೆ ಕೇಳಲು ಆತನು ಇನ್ನು ಮಾತಾಡುವ ಸ್ಥಿತಿಯಲ್ಲಿ ಇಲ್ಲ. ನಂತರ ಗೊತ್ತಾಗಿನೆಂದರೆ ನನ್ನ ಮಗ ಆಕಾಶ ಇತನಿಗೆ ಬಸು ಮುಂಡರಗಿ ಎಂಬುವವರ ಟ್ಯಾಕ್ಟರ ನಂ. ಕೆಎ-33 ಟಿಬಿ 3608 ನೇದ್ದರ ಚಾಲಕ ಅಪಘಾತ ಪಡಿಸಿ ಟ್ಯಾಕ್ಟರನ್ನು ನಿಲ್ಲಸದೇ ಹಾಗೆ ತೆಗೆದುಕೊಂಡು ಹೊಗಿರುತ್ತಾನೆ ಎಂದು ಆರ್.ಎಮ್.ಸಿ ದಬಾದಲ್ಲಿ ಕೆಲಸ ಮಾಡುವ ಸತೀಶ ತಂದೆ ಪೂಮ್ಯ ಚೆವ್ಹಾಣ ಎಂಬುವ ಹುಡುಗ ಹೇಳಿದರಿಂದ ಗೊತ್ತಾಗಿದೆ.ಆದ್ದರಿಂದ ನನ್ನ ಮಗ ಆಕಾಶ ಇತನು ಹೊಸದಾಗಿ ಖರೀದಿಸಿ ಪಾಲ್ಸರ ಬೈಕನಲ್ಲಿ ಆರ್.ಹೊಸಳ್ಳಿ ಗ್ರಾಮದ ಶಾಲೆ ಕಟ್ಟಡ ಕಟ್ಟಲು ಹೋಗಿದ್ದು ದಿನಾಂಕ: 12/06/2021 ರಂದು ರಾತ್ರಿ 08 ಪಿ.ಎಮ್ ಸುಮಾರಿಗೆ ಮನಗೆ ಬರುತ್ತಿರುವಾಗ ರಾಮಸಮುದ್ರ ಗ್ರಾಮದ ಹತ್ತಿರದ ಆರ್.ಎಮ್.ಸಿ ದಬಾದ ಹತ್ತಿರ ಬಸು ಮುಂಡರಗಿ ಎಂಬುವವರ ಟ್ಯಾಕ್ಟರ ನಂ. ಕೆಎ-33 ಟಿಬಿ 3608 ನೇದ್ದರ ಚಾಲಕನು ಅತಿ ವೇಗ ಮತ್ತು ನಿಸ್ಕಳಜಿತನದಿಂದ ಚಾಲಯಿಸಿ ನನ್ನ ಮನಗ ಪಾಲ್ಸರ ಬೈಕಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹಾಗೇ ಹೋಗಿರುತ್ತಾನೆ. ಸದರಿ ವಾಹನ ಪತ್ತೆ ಹಚ್ಚಿ ಅಪಘಾತ ಪಡಿದಿಸ ಟ್ಯಾಕ್ಟರ ಮತ್ತು ಚಾಲಕ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು ಘಟನೆಯ ಬಗ್ಗೆ ತಿಳಿದುಕೊಂಡ ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಹೇಳಿ ಗಣಕೀಕರಿಸಿದ ಲಿಖಿತ ಹೇಳಿಕೆ ನಿಜವಿರುತ್ತದೆ, ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 88/2021 ಕಲಂ 279,337,338 ಐಪಿಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂಬರ : 91/2021 ಕಲಂ: 143 147 148 323 324 504 506 ಸಂ 149 ಐಪಿಸಿ : ಇಂದು ದಿನಾಂಕ 15.06.2021 ರಂದು 01.15 ಗಂಟೆಗೆ ಸಮೂದಾಯ ಆರೋಗ್ಯ ಕೇಂದ್ರ ಗುರುಮಠಕಲ್ ಎಮ್ ಎಲ್ಸಿ ವಿಚಾರಣೆ ಕುರಿತು ಹೋಗಿ ಮರಳಿ ಬಂದಿದ್ದು ಸದರಿ ಆಸ್ಪತ್ರೆಯಲ್ಲಿ ಪಡೆದ ಪಿರ್ಯಾಧಿ ಹೇಳಿಯ ಸಾರಂಶವೆನೆಂದರೆ ಪಿರ್ಯಾಧಿಯ ಹೊಲದ ಹತ್ತಿರದ ಹಳ್ಳದಿಂದ ಉಸಕನ್ನು ಪಿರ್ಯಾಧಿ ಹೊಲದ ಮುಖಾಂತರ ಆರೋಪಿತನು ತೆಗೆದುಕೊಂಡ ಹೋಗಿದ್ದು. ಅದನ್ನು ಪಿರ್ಯಾಧಿಯು ಕೇಳಿದಕ್ಕೆ ಇಬ್ಬರಲ್ಲಿ ಬಾಯಿ ಮಾತಿನ ಜಗಳವಾಗಿದ್ದು ಅದೇ ಸಿಟ್ಟಿನಿಂದ ಪಿರ್ಯಾಧಿ ಮತ್ತು ಆತನ ಮಕ್ಕಳು ತಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ಆರೋಪಿತರೆಲ್ಲರು ಗುಂಪು ಕಟ್ಟಿಕೊಂಡು ಬಂದು ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾಧಿಗೆ ಮತ್ತು ಪಿರ್ಯಾಧಿಯ ಮಕ್ಕಳಿಗೆ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 91/2021 ಕಲಂ: 143 147 148 323 324 504 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 90/2021 ಕಲಂ: 143, 147, 148, 341, 323, 324, 326, 307, 504, 506 ಸಂ.149 ಐಪಿಸಿ: ುಮಾರು ದಿನಗಳಿಂದ ಆರೋಪಿತರಿಗೆ ಮತ್ತು ಫಿರ್ಯಾದಿದಾರರಿಗೆ ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ಟ್ರ್ಯಾಕ್ಟರ ಹಾಗೂ ಜನರು ಓಡಾಡುವ ದಾರಿಗೆ ಸಂಬಂದಿಸಿದಂತೆ ಸಣ್ಣ ಪುಟ್ಟ ತಕರಾರು ಇರುತ್ತದೆ. ಹೀಗಿದ್ದು ಇಂದು ದಿನಾಂಕ 14.06.2021 ರಂದು ಸಮಯ ಸಂಜೆ 7:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆತನ ಮಗನಾದ ಗಾಯಾಳು ರಡ್ಡೆಪ್ಪ @ ಸಾಬರಡ್ಡಿ ಇವರು ಆರೋಪಿ ಮಲ್ಲಪ್ಪ ಈತನ ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಕೂಡಿ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆಗಳನ್ನು ಹಿಡಿದುಕೊಂಡು ಬಂದು ದಾರಿಯ ಮೇಲೆ ಹೋಗುತ್ತಿದ್ದ ಫಿರ್ಯಾದಿಗೆ ಮತ್ತು ಆತನ ಮಗನಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಫಿರ್ಯಾದಿಗೆ ಕೊಲೆ ಮಾಡಬೇಕು ಎಂಬ ಉದ್ದೇಶದಿಂದ ಆರೋಪಿ ಮಲ್ಲಪ್ಪ ಈತನು ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಅಲ್ಲದೇ ಅದನ್ನು ನೋಡಿ ಬಿಡಿಸಲು ಬಂದಿದ್ದವರಿಗೆ ಕೂಡ ಉಳಿದ ಆರೋಪಿತರು ತಮ್ಮ-ತಮ್ಮ ಕೈಯಲ್ಲಿದ್ದ ಕಟ್ಟಿಗೆಯಿಂದ ಹಾಗು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 90/2021 ಕಲಂ: 143, 147, 148, 341, 323, 324, 326, 307, 504, 506 ಸಂ.149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ: 81/2021 ಕಲಂ: 32, 34 ಕೆ. ಇ ಯಾಕ್ಟ : ಇಂದು ದಿನಾಂಕ: 14.06.2021 ರಂದು 07.00 ಪಿಎಮ್ಕ್ಕೆ ಮಾನ್ಯ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಸಾರಾಂಶವೇನಂದರೆ, ಇಂದು ದಿನಾಂಕ: 14.06.2021 ರಂದು 4 ಪಿ.ಎಮ್ಕ್ಕೆ ಪೊಲೀಸ್ ಠಾಣೆಯಲ್ಲಿದ್ದಾಗ ಬೈಚಬಾಳ ಗ್ರಾಮದ ಒಂದು ಕಿರಾಣಿ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ಕುಳಿತುಕೊಂಡು ಯಾವದೇ ಲೈಸನ್ಸ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಭಾತ್ಮಿ ಬಂದ ಮೇರೆಗೆ ಮಾನ್ಯ ಡಿ ಎಸ್ ಪಿ ಸಾಹೇಬರು ಸುರಪೂರ ಹಾಗು ಮಾನ್ಯ ಸಿಪಿಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ 1] ಶಂಕರಗೌಡ ಹೆಚ್ ಸಿ 33 2] ಪ್ರಕಾಶ ಹೆಚ್ ಸಿ 122 3) ಶಿವಲಿಂಗಪ್ಪ ಹೆಚ್ಸಿ 185 4] ಚಂದಪ್ಪ ಪಿಸಿ 316 ರವರಿಗೆ ಸದರಿ ಭಾತ್ಮಿ ವಿಷಯ ತಿಳಿಸಿ ಚಂದಪ್ಪ್ಪ ಪಿಸಿ-316 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 37 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ತಾ:ಸುರಪೂರ ಇವರಿಗೆ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿದೆನು. ನಂತರ ನಾನು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33.ಜಿ/0228 ನೇದ್ದರಲ್ಲಿ ಠಾಣೆಯಿಂದ 4.30 ಪಿ.ಎಮ್ಕ್ಕೆ ಹೊರಟು 5 ಪಿ.ಎಮ್ಕ್ಕೆ ಬೈಚಬಾಳ ಗ್ರಾಮದ ದ್ಯಾಮವ್ವನ ಗುಡಿಯ ಹತ್ತಿರ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಒಂದು ಕಿರಾಣಿ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಹೆಣ್ಣುಮಗಳು ಹಾಗೂ ಎರಡು ಜನ ಗಂಡಸರು ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.35 ಪಿಎಮ್ಕ್ಕೆ ದಾಳಿ ಮಾಡಲಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಮೂರು ಜನರು ನಮ್ಮನ್ನು ನೋಡಿ ಓಡಿ ಹೋಗಿದ್ದು, ನಂತರ ಓಡಿ ಹೋದವರ ಬಗ್ಗೆ ವಿಚಾರಿಸಿ ತಿಳಿಯಲಾಗಿ 1] ಸಿದ್ದಣ್ಣ ತಂದೆ ಬಲಭೀಮ ಹದಗಲ 2] ರೇಬಾಯಿ ಗಂಡ ಹಣಮಂತ್ರಾಯಗೌಡ ಬಿರಾದಾರ 3] ನಿಂಗಣ್ಣ ತಂದೆ ಭೀಮರಾಯ ಕೈತೋಟ ಸಾ|| ಎಲ್ಲರೂ ಬೈಚಬಾಳ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿ ಸ್ಥಳದಲ್ಲಿದ್ದ ಹಾಗು ಪಕ್ಕದ ಕವಳಿ ಹೊಟ್ಟಿನಲ್ಲಿ ಬಚ್ಚಿಟ್ಟದ್ದ ಸರಾಯಿಯನ್ನು ಪರಿಶೀಲಿಸಿ ನೋಡಲಾಗಿ 1) 180 ಎಮ್ಎಲ್ನ 188 ಓರಿಜಿನಲ್ ಚ್ವಾಯೀಸ್ ಪೌಚಗಳು ಇದ್ದು ಒಂದು ಪೌಚಿನ ಬೆಲೆ 70.26 ರೂ. ಇದ್ದು ಒಟ್ಟು ಪೌಚಗಳ ಕಿಮ್ಮತ್ತು 13,208.88/- ರೂ ಆಗುತ್ತಿದ್ದು, ಅವುಗಳ ಮೇಲೆ ಕ್ರ.ಸಂ 1334865521 ರಿಂದ 1334865529 ರವರೆಗೆ ಒಟ್ಟು 09, 1334865540 ರಿಂದ 1334865550 ರವರೆಗೆ ಒಟ್ಟು 11, 1334865551 ರಿಂದ 1334865559 ರವರೆಗೆ ಒಟ್ಟು 09, 1334865561 ರಿಂದ 1334865567 ರವರೆಗೆ ಒಟ್ಟು 07, 1334865570 ರಿಂದ 1334865573 ರವರೆಗೆ ಒಟ್ಟು 04, 1334865577 ರಿಂದ 1334865579 ರವರೆಗೆ ಒಟ್ಟು 03, 1334865037 ರಿಂದ 1334865043 ರವರೆಗೆ ಒಟ್ಟು 07, 1334865530 ರಿಂದ 1334865533 ರವರೆಗೆ ಒಟ್ಟು 04, 1334865537 ರಿಂದ 1334865539 ರವರೆಗೆ ಒಟ್ಟು 03, 133864974 ರಿಂದ 133864976 ರವರೆಗೆ ಒಟ್ಟು 03, 1334864921 ರಿಂದ 1334864926 ರವರೆಗೆ ಒಟ್ಟು 06, 1335099002 ರಿಂದ 1335099025 ರವರೆಗೆ ಒಟ್ಟು 24, 1335099054 ರಿಂದ 1335099059 ರವರೆಗೆ ಒಟ್ಟು 06, 1335099063 ರಿಂದ 1335099068 ರವರೆಗೆ ಒಟ್ಟು 06, 1335099071 ರಿಂದ 1335099076 ರವರೆಗೆ ಒಟ್ಟು 06, 1335098999 ರಿಂದ 1335099001 ರವರೆಗೆ ಒಟ್ಟು 03, 1335096111 ರಿಂದ 1335096113 ರವರೆಗೆ ಒಟ್ಟು 03, 1335096131 ರಿಂದ 1335096136 ರವರೆಗೆ ಒಟ್ಟು 06, 1335096144 ರಿಂದ 1335096149 ರವರೆಗೆ ಒಟ್ಟು 06, 1335096167 ರಿಂದ 1335096170 ರವರೆಗೆ ಒಟ್ಟು 04, 1335096177 ರಿಂದ 1335096179 ರವರೆಗೆ ಒಟ್ಟು 03, 1335096300 ರಿಂದ 1335096302 ರವರೆಗೆ ಒಟ್ಟು 03, 1335098996 ರಿಂದ 1335098998 ರವರೆಗೆ ಒಟ್ಟು 03 ಅಲ್ಲದೇ 1334865534, 1334865536, 1334864932, 1334864934, 1334864947, 1334864959, 1334864961, 1334864965, 1334864967, 1334865560, 1334865568, 1334865535, 1334864933, 1334864935, 1334864945, 1334864946, 1334864948, 133864960, 133864962, 133864966, 133864968, 133864969, 1334865980, 1334864981, 1335095996, 1335095997, 1335096035, 1335096084, 1335096085, 1335096086, 1335096089, 1335096340, 1335096341, 1336989200, 1336989201, 1336989203, 1336989209, 1335095919, 1335095920, 1291308707, 1291308708, 1291308620, 1291308637, 1335095908, 1291308606, 1291308724, 1291308772, 1336989193, 1336989194 ಹೀಗೆ 49 ಇರುತ್ತವೆ. 2) 180 ಎಮ್ಎಲ್ನ 60 ಬ್ಯಾಗ್ ಪೈಪರ್ ಪೌಚಗಳು ಇದ್ದು, ಒಂದು ಪೌಚನ್ ಬೆಲೆ 106.23 ರೂ. ಇದ್ದು ಒಟ್ಟು ಪೌಚಗಳ ಕಿಮ್ಮತ್ತು 6373.80/ ರೂ ಆಗುತ್ತಿದ್ದು, ಸದರಿ ಪೌಚಗಳ ಮೇಲೆ ಕ್ರ ಸಂ. 1275456163 ರಿಂದ 1275456166 ಅಂತ ಬರೆದ 04 ಪೌಚಗಳು ಹಾಗು ಕ್ರ ಸಂ. 1275456194 ರಿಂದ 1275456198 ರವರೆಗೆ ಒಟ್ಟು 05 ಪೌಚಗಳು ಹಾಗು 1275456229 ರಿಂದ 1275456233 ರವರೆಗೆ ಒಟ್ಟು 05 ಹಾಗು 1275456240 ರೀಮದ 127545644 ರವರೆಗೆ ಒಟ್ಟು 05, 1275456300 ರಿಂದ 1275456302 ರವರೆಗೆ ಒಟ್ಟು 03 , 1275456306 ರಿಂದ 1275456308 ರವರೆಗೆ ಒಟ್ಟು 03,1276925141 ರಿಂದ 1276925144 ರವರೆಗೆ ಒಟ್ಟು 04, 1276925126 ರಿಂದ 1276925128 ರವರೆಗೆ ಒಟ್ಟು 03, 1276925154 ರಿಂದ 1276925156 ರವರೆಗೆ ಒಟ್ಟು 03, 1276925131 ರಿಂದ 1276925134 ರವರೆಗೆ ಒಟ್ಟು 04, 1276925204 ರಿಂದ 1276925206 ರವರೆಗೆ ಒಟ್ಟು 03, 1275456183 ರಿಂದ 1275456185 ರವರೆಗೆ ಒಟ್ಟು 03 ಅಲ್ಲದೇ1275456173,1275456174,1275456176,1275456187,1275456261,1275456262,1275456044,1275456051,1276925149,1276925180,1276925181,1276925209,1276925188,1276925218,1276925173, 3) 650 ಎಮ್ಎಲ್ನ 08 ಕಿಂಗಫಿಶರ್ ಸ್ಟ್ರಾಂಗ್ ಬೀಯರ್ ಇದ್ದು, ಒಂದು ಬಿಯರ್ನ ಬೆಲೆ 150 ರೂ. ಇದ್ದು ಒಟ್ಟು 08 ಬಿಯರ್ಗಳ ಬೆಲೆ 1200/ ರೂ ಆಗುತ್ತಿದ್ದು 4) 180 ಎಮ್ಎಲ್ನ 15 ಇಂಪೇರಿಯಲ್ ಬ್ಲ್ಯೂ ಬಾಟಲಗಳು ಇದ್ದು ಒಂದು ಬಾಟಲ್ ಬೆಲೆ 198.21/- ರೂ. ಇದ್ದು ಒಟ್ಟು 15 ಬಾಟಲಗಳ ಕಿಮ್ಮತ್ತು 2973.15/- ರೂ ಆಗುತ್ತಿದ್ದು ಸದರಿ ಬಾಟಲಗಳ ಮೇಲೆ ಕ್ರ.ಸಂ.1174229675 ರಿಂದ 1174229677 ರವರೆಗೆ 03 ಹಾಗು ಕ್ರ ಸಂ 1174229816 ರಿಂದ 1174229818 ರವರೆಗೆ 03 ಹಾಗು ಕ್ರ ಸಂ. 1174229797,1174229727,1174229654,1174229767,1174229758,1174229779,1174229716,1174229875,1174229855 ಹೀಗೆ ಒಟ್ಟು 09 ಬಾಟಲಗಳು ಇರುತ್ತವೆ. ಹೀಗೆ ಒಟ್ಟು 23,755,83 ರೂಪಾಯಿ ಬೆಲೆಬಾಳುವ 52 ಲೀಟರ್ 978 ಎಮ್ ಎಲ್ ಸರಾಯಿಯನ್ನು ಇಂದು ದಿನಾಂಕ 14.06.2021 ರಂದು 4.35 ಪಿಎಮ್ದಿಂದ 6 ಪಿಎಮ್ದವರೆಗೆ ಪಂಚರ ಸಮಕ್ಷಮ ಜಪ್ತಪಡಿಸಿಕೊಂಡು ಸದರಿ ಸರಾಯಿಯಲ್ಲಿ ಪ್ರತಿಯೊಂದು ನಮೂನೆಯಲ್ಲಿನ ಒಂದೊಂದು ಸರಾಯಿ ಪೌಚನ್ನು ಹಾಗೂ ಬಾಟಲ್ನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರ ಸಮಕ್ಷಮದಲ್ಲಿ ಪ್ರತೇಕವಾಗಿ ಬಿಳಿ ಬಟ್ಟೆಯಲ್ಲಿ ಹೊಲೆದು ಅದರ ಮೇಲೆ ಇಂಗ್ಲೀಷ ಅಕ್ಷರದ ಏ ಅಂತ ಶೀಲ ಮಾಡಿ ಜಪ್ತಪಡಿಸಿಕೊಂಡಿದ್ದು ಇರುತ್ತದೆ ಈ ಮೇಲೆ ನಮೂದಿಸಿದ ಆರೋಪಿತರು ಸರಾಯಿ ಮಾರಾಟ ಮಾಡಲು ಯಾವುದೇ ಪರವಾನಿಗೆ ಪತ್ರ [ಲೈಸನ್ಸ] ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸರಾಯಿ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ್ದು, ದಾಳಿಯಲ್ಲಿ ಮೂರು ಜನರು ಓಡಿ ಹೋಗಿದ್ದು ಸ್ಥಳದಲ್ಲಿ ಸಿಕ್ಕ ಮುದ್ದೆಮಾಲು ಸಮೇತ 6.30 ಪಿ.ಎಂಕ್ಕೆ ಠಾಣೆಗೆ ಬಂದಿದ್ದು, ಕಾರಣ ಸದರಿ ಮೂರು ಜನ ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಆದೇಶಿಸಿದ ಮೇರೆಗೆ ಠಾಣೆ ಗುನ್ನೆ ನಂ 81/2021 ಕಲಂ 32,34 ಕೆ.ಇ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 15-06-2021 05:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080