ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-06-2022
ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 38/2022 ???: 494, 498(?). 323, 324, 355, 504,506, ಸಂಗಡ 149 ಐ.ಪಿ.ಸಿ: ಇಂದು ದಿನಾಂಕ: 14.06.202 ರಂದು ಮದ್ಯಾಹ್ನ 12-00 ಗಂಟೆಗೆ ಅಂಚೆ ಮುಖಾಂತರ ಶಹಾಪೂರ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯದ ಉಲ್ಲೇಖಿತ ಪ್ರಕರಣ ಸಂ: 67/2022 ಸ್ವೀಕೃತವಾಗಿದ್ದು, ಸದರಿ ಪ್ರಕರಣದ ಸಾರಂಶವೇನೆಂದರೆ ಫಿರ್ಯಾಧಿ ಆರೋಪಿ ನಂ:01 ರವರ ಜೊತೆ ಸುಮಾರು 23 ವರ್ಷಗಳ ಹಿಂದೆ ಮದುವೆಯಾಗಿದ್ದು ಒಬ್ಬಳೆ ಹೆಣ್ಣು ಮಗಳು ಇರುತ್ತಾಳೆ. ನಂತರ ಆರೋಪಿ ನಂ:01 ನೇಯವರು ಆರೋಪಿ ನಂ:2 ನೇಯವರೊಂದಿಗೆ 2 ನೇ ಮದುವೆಯಾಗಿರುತ್ತಾನೆ. ಆರೋಪಿ ನಂ:01 ರಿಂದ 07 ನೇಯವರು ಎಲ್ಲರೂ ಕೂಡಿ ಫಿರ್ಯಾಧಿದಾರಳಿಗೆ ವಿನಾಃಕಾರಣ ತೊಂದರೆ ಕೋಡುವುದು ಅಲ್ಲದೇ ನಿನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು ನಿಂದನೆ ಮಾಡಿರುತ್ತಾರೆ. ಹಾಗೂ ನಿನ್ನ ತವರು ಮನೆಯಿಂದ ಹಣ ಬಂಗಾರ ತರದೇ ಇದ್ದರೆ ಜಿವಸಹಿತ ಬಿಡುವುದಿಲ್ಲಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆರೋಪಿ ನಂ:01 ನೇಯವನು ಕೆಟ್ಟ ಚಟಗಳಿಗೆ ಬಿದ್ದು ಫಿರ್ಯಾಧಿದಾರಳಿಗೆ ಹೊಡೆಬಡೆ ಮಾಡುವುದು ಮಾಡಿರುತ್ತಾನೆ. ಫಿರ್ಯಾಧಿದಾರಳು ತನ್ನ ಗಂಡನ ಮನೆಯಲ್ಲಿದಾಗ ಆರೋಪಿತರೇಲ್ಲರೂ ಸೇರಿ ದಿನಾಂಕ:25.02.2022 ರಂದು ಬೆಳಿಗ್ಗೆ 10-00 ಗಂಟೆಗೆ ಜಗಳ ಮಾಡಿ ಫಿರ್ಯಾಧಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡಲು ಶುರುಮಾಡಿದ್ದು ಅವಳಿಗೆ ಹೊಡೆಬಡೆ ಮಾಡುವುದು ಅಲ್ಲದೇ ಅವಾಚ್ಯವಾಗಿ ಬೈದು ಮತ್ತು ಪ್ರಾಣ ಬೆದರಿಕೆ ಹಾಕಿ ಚಪ್ಪಲಿಯಿಂದ ಹೊಡೆಬಡೆ ಮಾಡಿರುತ್ತಾರೆ. ಈ ರೀತಿ ಆರೋಪಿತರೇಲ್ಲರೂ ಎಸಗಿದ ಕೃತ್ಯಕ್ಕೆ ಫಿರ್ಯಾಧಿದಾರಳು ತನ್ನ ಗಂಡನ ಆಸ್ತಿಯಲ್ಲಿ ಪಾಲು ಬರಬೇಕು ಅಂತಾ ಮಾನ್ಯ ಅಪರ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ್ ದಲ್ಲಿ ಖಾಸಗಿ ದೂರು ಸಂ: 67/2022 ದಾಖಲಿಸಿದ್ದು ಸದರಿ ದೂರಿನ ಪ್ರತಿಯು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಇಂದು ದಿನಾಂಕ:14.06.2022 ರಂದು ಮದ್ಯಾಹ್ನ 12-00 ಗಂಟೆಗೆ ಅಂಚ ಮೂಲಕ ವಸೂಲಾಗಿದ್ದು ಸದರಿ ಖಾಸಗಿ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ಸಂ: 38/2022 ಕಲಂ: 494, 498(ಎ), 504, 323, 324, 355, 506, ಸಂ 149 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 95/2022 ಕಲಂ: 323, 341, 504, 506 ಐಪಿಸಿ:ಇಂದು ದಿನಾಂಕಃ 14/06/2022 ರಂದು 8:00 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀ ಶ್ರೀ ಮಂಜುನಾಥ ತಂದೆ ಬಸಣ್ಣ ದೋರನಳ್ಳಿ ವ|| 33 ವರ್ಷ ಜಾ|| ಉಪ್ಪಾರ ಉ|| ಕೂಲಿ ಸಾ|| ರುಕ್ಮಾಪುರ ತಾ|| ಸುರಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ದಿನಾಂಕ: 18/04/2019 ರಂದು ಹುಣಸಗಿ ತಾಲೂಕಿನ ಯಡಹಳ್ಳಿ ಗ್ರಾಮದ ಭೀಮಾಶಂಕರ ತಂದೆ ಯಂಕಪ್ಪ ಕಟ್ಟಿಮನಿ ಇವರ ಮಗಳಾದ ಶ್ವೇತಾ ಇವಳೊಂದಿಗೆ ಮದುವೆಯಾಗಿರುತ್ತೇನೆ. ನಮಗೆ ಇನ್ನೂ ಮಕ್ಕಳು ಆಗಿರುವದಿಲ್ಲ. ಶ್ವೇತಾ ಇವಳು ನನ್ನೊಂದಿಗೆ ಒಂದು ವಾರದ ವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು, ಒಂದು ವಾರದ ನಂತರ ನಾನು ತವರು ಮನೆಗೆ ಹೋಗುತ್ತೇನೆ, ನಿನಗೆ ನಾನು ಬೇಕಾದರೆ ನಮ್ಮ ತವರು ಮನೆಗೆ ಬಂದು ಇರು ಅಂತ ದಿನಾಲು ವಿನಾಕಾರಣ ಕಿರಿಕಿರಿ ಮಾಡುತ್ತಾ ಬಂದಿದ್ದಳು. ಆದರೂ ಮುಂದೆ ಸರಿ ಹೋಗಬಹುದು, ಇದು ನಮ್ಮ ಸಂಸಾರದ ವಿಷಯ ಅಂತ ಸುಮ್ಮನಿದ್ದೆನು. ಸುಮಾರು 2 ವರ್ಷಗಳಿಂದ ನನ್ನ ಹೆಂಡತಿ ಶ್ವೇತಾ ಇವಳು ತನ್ನ ತವರುಮನೆಯಾದ ಯಡಹಳ್ಳಿಗೆ ಹೋಗಿದ್ದಳು. ಆದರೂ ನಾವು ಮುಂದೆ ಸರಿಹೋಗಬಹುದು ಅಂತ ಇಲ್ಲಿವರೆಗೆ ಸುಮ್ಮನಿದ್ದೆವು. ಇದೇ ವರ್ಷ ಹುಣಸಗಿ ಪೊಲೀಸ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ ಮಾಡಿಸಿರುತ್ತಾಳೆ. ಹೀಗಿದ್ದು ದಿನಾಂಕ: 31/05/2022 ರಂದು 12:00 ಪಿ.ಎಂ ಕ್ಕೆ ನಾನು, ನನ್ನ ತಂಗಿಯಾದ ಸಕ್ಕುಬಾಯಿ @ ಜ್ಯೋತಿ ಹಾಗೂ ಆಕೆಯ ಗಂಡ ರಾಜು ತಂದೆ ಯಂಕಪ್ಪ ಕಸಬಳ್ಳಿ ಮೂವರು ನಮ್ಮ ಮನೆಯಲ್ಲಿದ್ದಾಗ, ನನ್ನ ಹೆಂಡತಿ ಶ್ವೇತಾ ಇವಳು ಮನೆಯೊಳಗೆ ಬಂದು ಲೇ ಮಂಜ್ಯಾ ನಾನು ಹುಣಸಗಿ ಪೊಲೀಸ್ ಠಾಣೆಯಲ್ಲಿ ನಿನ್ನ ಮತ್ತು ನಿನ್ನ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ಮಾಡಿಸಿರುತ್ತೇನೆ ನೀವು ನನಗೆ ಮನೆ ಬಿಟ್ಟು ಎಲ್ಲೆರೆ ಹೋಗ್ರಿ ಈ ಮನೆಯಲ್ಲಿ ನಾನೊಬ್ಬಳೆ ಇರುತ್ತೇನೆ ಅಂತ ಅನ್ನುತ್ತಿರುವಾಗ ನಾವೇಕೆ ಮನೆಬಿಟ್ಟು ಹೋಗಬೇಕು ಇದು ನಮ್ಮ ಮನೆ ಇರುತ್ತದೆ ನೀನೂ ಬೇಕಾದರೆ ಇಲ್ಲೇ ಇರು ಅಂತ ಅಂದಾಗ ಶ್ವೇತಾ ಇವಳು ಕೈಯಿಂದ ನನಗೆ ಕಪಾಳಕ್ಕೆ, ಹೊಟ್ಟೆಗೆ, ಬೆನ್ನಿಗೆ ಹೊಡೆಯುತ್ತಿದ್ದಾಗ ನಾನು ಆಕೆಯಿಂದ ತಪ್ಪಿಸಿಕೊಂಡು ಮನೆಯ ಹೊರಗೆ ಹೋಗಬೇಕು ಅನ್ನುವಷ್ಟರಲ್ಲಿ ತಡೆದು ನಿಲ್ಲಿಸಿ ಅಂಗಿ ಹಿಡಿದು ಜಗ್ಗಾಡಿ ಮತ್ತೆ ಕೈಯಿಂದ ಬೆನ್ನಿಗೆ, ಕಪಾಳಕ್ಕೆ ಹೊಡೆದು ಗುಪ್ತಗಾಯ ಮಾಡಿದಳು. ಆಗ ಅಲ್ಲಿಯೇ ಇದ್ದ ನನ್ನ ತಂಗಿ ಸಕ್ಕುಬಾಯಿ @ ಜ್ಯೋತಿ, ಆಕೆಯ ಗಂಡ ರಾಜು ಹಾಗೂ ಅಲ್ಲಿಯೇ ಮನೆಯ ಮುಂದೆ ಹೊರಟಿದ್ದ ಸಂತೋಷ ತಂದೆ ಕರಣಗೌಡ ಗುತ್ತೇದಾರ, ಹಣಮಂತ ತಂದೆ ಸಿದ್ದಪ್ಪ ದೇವಾಪುರಕರ್ ಇವರು ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಅವಳು ನನಗೆ ಹೊಡೆಯುವದನ್ನು ಬಿಟ್ಟು, ಇವತ್ತು ನನ್ನ ಕೈಯಲ್ಲಿ ಉಳಿದೀ ಸೂಳೆಮಗನೆ ಇನ್ನೊಮ್ಮೆ ನನ್ನ ಕೈಯಾಗ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದಳು. ನನಗೆ ಅಷ್ಟೇನು ಗಾಯಗಳು ಆಗಿರದ ಕಾರಣ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಾನು ನಮ್ಮ ತಂಗಿ ಮತ್ತು ತಂಗಿಯ ಗಂಡನಾದ ರಾಜು ಇವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ತಡೆದು ನಿಲ್ಲಿಸಿ, ಹೊಡೆ ಬಡೆ ಮಾಡಿ, ಜೀವದ ಬೇದರಿಕೆ ಹಾಕಿದ ನನ್ನ ಹೆಂಡತಿ ಶ್ವೇತಾ ಇವಳ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2022 ಕಲಂ: 323, 341, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ: 78 () ಕೆ.ಪಿ. ಕಾಯ್ದೆ :ಇಂದು ದಿನಾಂಕ: 14/06/2022 ರಂದು 7:30 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 14/06/2022 ರಂದು 4 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಗೂರ ಗ್ರಾಮದ ಗ್ರಾಮ ಪಂಚಾಯತಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427, 2) ಸಿದ್ರಾಮರೆಡ್ಡಿ ಸಿಪಿಸಿ-423 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ ರವರು ಇಬ್ಬರು ಪಂಚರಾದ 1) ಹಣಮಂತ್ರಾಯ ತಂದೆ ಈರಣ್ಣ ದೊರಿ ವ|| 32 ವರ್ಷ ಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಸೂಗೂರ ತಾ|| ಸುರಪೂರ 2) ಶ್ರೀ ಬಸವರಾಜ ತಂದೆ ಮಲ್ಲಪ್ಪ ಕೂಡ್ಲಗಿ ವ|| 32 ವರ್ಷ ಜಾ|| ಮಾದರ ಉ|| ಕೂಲಿ ಕೆಲಸ ಸಾ|| ಸೂಗೂರ ತಾ|| ಸುರಪೂರ ಇವರನ್ನು 4:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 4:45 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ ಹೊರಟು 5:25 ಪಿ.ಎಮ್ ಕ್ಕೆ ಸೂಗೂರ ಗ್ರಾಮದ ಗ್ರಾಮ ಪಂಚಾಯತಿ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಗ್ರಾಮ ಪಂಚಾಯತಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:30 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಷಣ್ಮುಖಪ್ಪ ತಂದೆ ಶೇಕಪ್ಪ ಭೂಮಶೆಟ್ಟಿ ವ|| 48 ವರ್ಷ ಜಾ|| ಲಿಂಗಾಯತ ಉ|| ಹೊಟೆಲ್ ವ್ಯಾಪಾರ ಸಾ|| ಸೂಗೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 530=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:30 ಪಿ.ಎಮ್ ದಿಂದ 6:30 ಪಿ.ಎಮ್ದ ವರೆಗೆ ಜೀಪಿನ ಲೈಟಿನ ಬೆಳಿಕಿನಲ್ಲಿ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 94/2022 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 279, 338 ಐಪಿಸಿ : ದಿನಾಂಕ 02/06/2022 ರಂದು ಫಿಯರ್ಾದಿ ಹಾಗು ಗಾಯಾಳು ಇಬ್ಬರು ಸೇರಿ ತಮ್ಮ ಊರಿನವರು ಸಗರ ಸೋಫಿ ಸರಮತ್ ದೇವರು ಮಾಡಿದ್ದರಿಂದ ತಮ್ಮ ಗ್ರಾಮದವರೊಂದಿಗೆ ಸಗರ ಗ್ರಾಮಕ್ಕೆ ಜೀಪ್ ನಂ ಕೆಎ:48, ಎಮ್:3582 ನೇದ್ದರಲ್ಲಿ ಹೋಗಿ ದೇವರು ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿದ್ದಾಗ 3.30 ಪಿಎಮ್ ಸುಮಾರಿಗೆ ಉಮರದೊಡ್ಡಿ-ಸೈದಾಪೂರ ರೋಡಿನ ಮೇಲೆ ಸೈದಾಪೂರ ಸಮೀಪ ಹೊರಟಾಗ ಆರೋಪಿತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಜೀಪಿನ ಹಿಂದಿನ ಸೀಟಿನ ಮೇಲೆ ಡೋರಿನ ಪಕ್ಕದಲ್ಲಿ ಕುಳಿತಿದ್ದ ಗಾಯಾಳು ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು ಫಿಯರ್ಾದಿದಾರರು ಬಡವರಾಗಿದ್ದು ಕಾನೂನಿನ ಅರಿವು ಇಲ್ಲದೇ ಇದ್ದುದರಿಂದ ಮತ್ತು ಘಟನಾ ಸ್ಥಳವು ಯಾವ ಪೊಲೀಸ್ ಠಾಣೆಗೆ ಬರುತ್ತದೆ ಅನ್ನುವದು ಗೊತ್ತಾಗದೇ ಇದ್ದುದರಿಂದ ಊರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾನೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದ
ಕೆಂಭಾವಿ ಪೊಲೀಸ್ ಠಾಣೆ:-
ಯುಡಿಆರ್ ನಂ 15/2022 ಕಲಂ 174 ಸಿಆರ್ಪಿಸಿ:;- ಇಂದು ದಿನಾಂಕ 14.06.2022 ರಂದು 06.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಂಗಪ್ಪ ತಂದೆ ಸಿದ್ದಪ್ಪ ಕುಂಬಾರ ವಯಾ|| 50 ಜಾ|| ಕುಂಬಾರ ಉ|| ಒಕ್ಕಲುತನ ಸಾ|| ಮಲ್ಲಾ(ಬಿ) ತಾ|| ಸುರಪೂರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನೆಂದರೆ, ನನಗೆ ಎರಡು ಜನ ಹೆಣ್ಣು ಮಕ್ಕಳು ವಿಜಯಲಕ್ಷ್ಮೀ, ವಿದ್ಯಾಶ್ರೀ ಹಾಗೂ ಇಬ್ಬರು ಗಂಡು ಮಕ್ಕಳು ಶಿವಪ್ಪ, ವಿನೋದ ಅಂತಾ 4 ಜನ ಮಕ್ಕಳಿರುತ್ತಾರೆ. ಹೀಗಿದ್ದು ಇಂದು ದಿನಾಂಕ: 14.06.2022 ರಂದು ಮುಂಜಾನೆ 9.00 ಗಂಟೆಗೆ ಮಲ್ಲಾ(ಬಿ) ಸೀಮಾಂತರದ ನಮ್ಮ ಹೊಲ ಸವರ್ೆ ನಂ 193 ನೇದ್ದರಲ್ಲಿ ಹೊಲ ಸ್ವಚ್ಚಗೊಳಿಸಿ ಕಸ ತೆಗೆದು ಹಾಕಲು ನಾನು ಮತ್ತು ನನ್ನ ಮಗಳಾದ ವಿದ್ಯಾಶ್ರೀ ತಂದೆ ಸಂಗಪ್ಪ ಕುಂಬಾರ ವ|| 19ವರ್ಷ ಜಾ|| ಕುಂಬಾರ ಉ|| ಹೊಲಮನೆ ಕೆಲಸ ಸಾ|| ಮಲ್ಲಾ(ಬಿ) ಇಬ್ಬರೂ ಕೂಡಿ ಕೂಲಿ ಆಳು ಜನರಾದ ಗಂಗಮ್ಮ, ಬಸಮ್ಮ, ದಾನಮ್ಮ, ಶ್ರೀದೇವಿ, ಭಾಗಮ್ಮ, ಕಾವೇರಿ, ಸಾವಿತ್ರಿ, ಅಖಿಲಾ, ಮಲ್ಲಮ್ಮ, ದಾನಮ್ಮ ಕಾರನೂರ, ಇವರೊಂದಿಗೆ ಹೊಲಕ್ಕೆ ಹೋಗಿ ಮುಂಜಾನೆಯಿಂದ ಕಸ ಆಯ್ದು ಕೂಲಿ ಆಳುಗಳು ಆಯ್ದಿರುವ ಕಸವನ್ನು ನಾನು ಬಿಟ್ಟಿಯಲ್ಲಿ ತುಂಬಿ ಕೊಡುತ್ತಿದ್ದೆನು, ನಮ್ಮ ಮಗಳಾದ ವಿದ್ಯಾಶ್ರೀ ಇವಳು ಕಸವನ್ನು ಹೊಲದ ಬಾಂದಾರಿಗೆ ಒಯ್ದು ಚೆಲ್ಲುತ್ತಿದ್ದಳು. ಅದರಂತೆ ಮುಂಜಾನೆಯಿಂದ ಕೆಲಸ ಮಾಡುತ್ತಾ ಇದ್ದು, ಸಾಯಂಕಾಲ 05.30 ಗಂಟೆಗೆ ಗುಡುಗು, ಮಿಂಚು ಪ್ರಾರಂಭವಾಗಿ ಮಳೆ ಬರುವಂತೆ ಕಂಡಿದ್ದರಿಂದ ನಾವು ಕೆಲಸ ಬಿಟ್ಟು ಮನೆಗೆ ಹೋಗಬೇಕೆಂದು ತಯಾರಾಗಿ ಹೊಲದ ಬಾಂದಾರಿಗೆ ಕಸ ಚೆಲ್ಲಲು ಹೋದ ನನ್ನ ಮಗಳಾದ ವಿದ್ಯಾಶ್ರೀ ಇವಳಿಗೆ ಬೇಗ ಬಾ ಅಮ್ಮ ಅಂತಾ ನಾನು ಕರೆದು ಅವಳ ಹತ್ತಿರ ಹೋಗುವಷ್ಟರಲ್ಲಿ ಹೊಲದ ಬಾಂದಾರಿನ ಹತ್ತಿರ ಇದ್ದ ನನ್ನ ಮಗಳಾದ ವಿದ್ಯಾಶ್ರೀ ವ|| 19ವರ್ಷ ಇವಳಿಗೆ ಆಕಸ್ಮಿಕವಾಗಿ ಸಿಡಿಲು ಬಡಿದು ಒಮ್ಮೆಲೇ ಚೀರಿ ನೆಲಕ್ಕೆ ಬಿದ್ದಳು. ತಕ್ಷಣ ನಾನು ಮತ್ತು ಕೆಲಸಕ್ಕೆ ಬಂದಿದ್ದ ಎಲ್ಲರೂ ಕೂಡಿ ಹೋಗಿ ವಿದ್ಯಾಶ್ರೀ ಇವಳಿಗೆ ಎಬ್ಬಿಸಿ ನೋಡಲಾಗಿ ಅವಳ ಕುತ್ತಿಗೆಗೆ, ಎದೆಗೆ ಸಿಡಿಲಿನ ಹೊಡೆತದಿಂದ ಭಾರೀ ಪ್ರಮಾಣದ ಸುಟ್ಟ ಗಾಯಗಳಾಗಿ ಸತ್ತು ಬಿದ್ದಿದ್ದಳು.
ಕಾರಣ ನನ್ನ ಮಗಳಾದ ವಿದ್ಯಾಶ್ರೀ ಇವಳು ಸಿಡಿಲು ಬಡಿದು ಕುತ್ತಿಗೆಗೆ, ಎದೆಗೆ ಸಿಡಿಲಿನ ಹೊಡೆತದಿಂದ ಭಾರೀ ಪ್ರಮಾಣದ ಸುಟ್ಟ ಗಾಯಗಳಾಗಿ ಮೃತಪಟ್ಟಿದ್ದು ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ನನ್ನ ಮಗಳ ಸಾವಿನಲ್ಲಿ ನನ್ನದು ಯಾರ ಮೇಲೂ ಯಾವುದೇ ರೀತಿಯ ಸಂಶಯ ವಗೈರೆ ಇರುವದಿಲ್ಲ ತಾವು ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 15/2022 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರನ ದಾಖಲಿಸಿ ತನಿಖೆ ಕೈಕೊಂಡೆನು.