ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-08-2022

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ: 279, 338 ಐಪಿಸಿ ಮತ್ತು 187 ಐ.ಎಮ್.ವಿ. ಆಕ್ಟ್: ಇಂದು ದಿ: 14/08/2022 ರಂದು 07.00 ಪಿ.ಎಮ್ಕ್ಕೆ ಶ್ರೀಮತಿ ಮಂಜುಳಾ ಗಂ. ಮರೆಪ್ಪ ವಯಸ್ಸು:45 ವರ್ಷ ಉದ್ಯೋಗ: ಕೂಲಿ ಸಾ|| ಶೆಟ್ಟಿಕೇರಾ (ಚನ್ನಪ್ಪನದೊಡ್ಡಿ) ತಾ|| ಶಹಾಪೂರ ಜಿ: ಯಾದಗಿರಿ ರವರು ಠಾಣೆಗೆ ಬಂದು ಕನ್ನಡದಲ್ಲಿ ಬರೆದ ಒಂದು ದೂರು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ,ನನಗೆ ಒಟ್ಟು ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಮುದುವೆ ಮಾಡಿಕೊಟ್ಟಿದ್ದು, ಅವರು ಗಂಡನ ಮನೆಯಲ್ಲಿರುತ್ತಾರೆ. ಗಂಡು ಮಕ್ಕಳಲ್ಲಿ ಹಿರಿಯವನಾದ ಭೀಮರಾಯ ಇತನು ನನ್ನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಶೆಟ್ಟಿಕೇರಾದಲ್ಲಿಯೇ ಇರುತ್ತಾನೆ. ಇನ್ನು ಮದುವೆಯಾಗಿರುವದಿಲ್ಲ. ಇನ್ನೊಬ್ಬ ಮಗ ಆಕಾಶ ಇನ್ನು ಚಿಕ್ಕವನಿರುತ್ತಾನೆ. ಹೀಗಿರುವಾಗ ನನ್ನ ಮಗ ಭೀಮರಾಯ (20 ವರ್ಷ) ಇಂದು ದಿ|| 14.08.2022 ರ ಮುಂಜಾನೆ 8 ಗಂಟೆಗೆ ನಮ್ಮ ಮನೆಯಿಂದ ಅಂದರೆ ಶೆಟ್ಟಿಕೇರಾ (ಚನ್ನಪ್ಪನ ದೊಡ್ಡಿ) ಒಂದು ಸೈಕಲ್ ಮೋಟರ್ ನಂ. ಕೆಎ-33. ಯು-0146 (ಪ್ಯಾಶನ್ ಪ್ರೋ) ರ ಮೇಲೆ ಹಯ್ಯಾಳಕ್ಕೆ ಹೋಗಿ ಹಯ್ಯಾಳ ಲಿಂಗೇಶ್ವರ ಗುಡಿಗೆ ಕಾಯಿ ಹೊಡೆಸಿಕೊಂಡು ಬರುವದಾಗಿ ಹೇಳಿ ಹೋಗಿದ್ದು ನನ್ನ ಮಗ ಕಾಯಿ ಹೊಡಿಸಿಕೊಂಡು ಮರಳಿ ಹತ್ತಿಗೂಡೂರು ಮಾರ್ಗವಾಗಿ ಸುರಪುರ ಕಡೆಗೆ ಹೊರಟು ಬರುತ್ತಿರುವಾಗ ಸಮಯ ಸುಮಾರು 11.30 ಗಂಟೆಗೆ ದೇವಿಕೇರಾ ಕ್ರಾಸ್ ಹತ್ತಿರ ರೋಡಿನ ಎಡಬಾಗದಲ್ಲಿ ನಿಧಾನವಾಗಿ ತನ್ನ ಮೋಟರ್ ಸೈಕಲನ್ನು ನಡೆಸಿಕೊಂಡು ಹೋಗುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಒಂದು ಕ್ರಶರ್ ವಾಹನ ಸಂಖ್ಯೆ ಕೆಎ-40.ಎಮ್-1583 ರ ಚಾಲಕ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ನನ್ನ ಮಗ ಚಲಾಯಿಸುತ್ತಿದ್ದ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು ಪರಿಣಾಮ ನನ್ನ ಮಗ ಸೈಕಲ್ ಮೋಟರ್ ಸಮೇತ ರೋಡಿನ ಪಕ್ಕಕ್ಕೆ ಬಿದ್ದಿದ್ದು ಆತನ ಬಲ ಕಾಲು ತೊಡೆ ಮುರಿದು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಹೆಬ್ಬಟ್ಟಿನ ಹತ್ತಿರ ಮುರಿದಂತೆ ಆಗಿದ್ದು, ಅಲ್ಲದೆ ತಲೆಯ ಹಿಂಭಾಗ ರಕ್ತಗಾಯವಾಗಿದ್ದು, ನನ್ನ ಮಗ ಭೀಮರಾಯನಿಗೆ ಅಪಘಾತವಾದ ವಿಷಯವನ್ನು ಭೀಮರಾಯ ತಂ. ಬಸಣ್ಣ ಬಡಿಗೇರ ಸಾ|| ಶೆಟ್ಟಿಕೇರಾ (ಚನ್ನಪ್ಪನ ದೊಡ್ಡಿ) ಇತನು ಪೋನ್ ಮಾಡಿ ತಿಳಿಸಿದ್ದು, ನಾನು ಕೂಡಲೇ ಸುರಪುರದ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ಭೀಮರಾಯ ಗಂಭಿರ ಗಾಯವಾಗಿ ನರಳಾಡುತ್ತಿದ್ದು, ತಾನು ಹಯ್ಯಾಳದಿಂದ ಸುರಪುರಕ್ಕೆ ಹೊರಟು ಬರುವಾಗ ಕ್ರುಶರ್ ವಾಹನ ನಂ. ಕೆಎ-40. ಎಮ್-1583 ರ ಚಾಲಕ ಅತಿ ವೇಗ ಮತ್ತು ಅಲಕ್ಷತನದಿಂದ ಹಿಂದಿನಿಂದ ಬಂದು ತನ್ನ ಸೈಕಲ್ ಮೋಟರ್ಗೆ ಡಿಕ್ಕಿ ಪಡಿಸಿ ತನ್ನ ವಾಹನ ನಿಲ್ಲಿಸದೇ ಓಡಿ ಹೋದ ಬಗ್ಗೆ ತಿಳಿಸಿದನು. ನಂತರ ಹೆಚ್ಚಿನ ಚಿಕಿತ್ಸೆಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಸಿ ಈಗ ತಡವಾಗಿ ಬಂದು ಈ ದೂರನ್ನು ಸಲ್ಲಿಸುತ್ತಿದ್ದೇನೆ. ಆದ್ದರಿಂದ ಅತಿವೇಗ ಮತ್ತು ಅಲಕ್ಷತನದಿಂದ ಕ್ರೂಶರ್ ವಾಹನ ಚಲಾಯಿಸಿ ನನ್ನ ಮಗನಿಗೆ ಅಪಘಾತಪಡಿಸಿ ಗಂಭಿರ ಗಾಯಪಡಿಸಿರುವ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.125/2022 ಕಲಂ:279, 338 ಐಪಿಸಿ ಮತ್ತು 187 ಐ.ಎಮ್.ವಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 16-08-2022 11:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080