ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-10-2022

 

 

ಶಹಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 174/2022 ಕಲಂ, 457. 380 ಐ.ಪಿ.ಸಿ: ಇಂದು ದಿನಾಂಕ: 14/10/2022 ರಂದು ಸಾಯಂಕಾಲ: 6.30 ಪಿ,ಎಂ ಕ್ಕೆ ಠಾಣೆಗೆ ಪಿರ್ಯಾದಿ ಶ್ರೀ ಹೊನ್ನಪ್ಪ ತಂದೆ ಸಿದ್ದಪ್ಪ ಅಂಬಿಗೇರ ವಯಸ್ಸು: 40 ಉ: ಗುತ್ತಿಗೆದಾರ ಜಾ: ಕಬ್ಬಲಿಗ ಸಾ: ಕೋಣಚಪ್ಪಳಿ ತಾ: ದೇವದುರ್ಗ ಹಾ: ವ: ಬಾಪೂಗೌಡ ನಗರ ಶಹಾಪೂರ ತಾ: ಶಹಾಪೂರ ರವರು ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ಈಗ ಸುಮಾರು 03 ವರ್ಷಗಳಿಂದ ಗುತ್ತಿಗೆದಾರ ಟೆಂಡರ ಕೆಲಸ ಹಿಡಿದು ಕೆಲಸ ಮಾಡುತ್ತ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತೆನೆ. ಹಿಗಿದ್ದು ದಿನಾಂಕ: 10/10/2022 ರಿಂದ ದಿನಾಂಕ: 13/10/2022 ರ ವರೆಗೆ ಶಹಾಪೂರದಿಂದ ಕುಟುಂಬ ಸಮೇತವಾಗಿ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ ಹಾಗೂ ನಮ್ಮ 03 ಜನ ಸಣ್ಣ ಮಕ್ಕಳೂ ಕೂಡಿಕೊಂಡು ಪಂಡರಪೂರ, ಶಿರಡಿ, ಶನಿಶಿಘ್ನೇಶ್ವರ ಹಾಗೂ ತುಳಜಾಪೂರ, ಗಾಣಗಾಪೂರ ದತ್ತಾತ್ರೆಯನ ದರ್ಶನಕ್ಕಾಗಿ ಶಹಾಪೂರದ ನಮ್ಮ ಮನೆಯಿಂದ ದಿನಾಂಕ: 10/10/2022 ರಂದು ಬೆಳಗ್ಗೆ 7-30 ಗಂಟೆಗೆ ಹೊರಟು ನೇರವಾಗಿ ಪಂಡರಪೂರಕ್ಕೆ ಹೋಗಿ ಅಲ್ಲಿ ಪಾಂಡೂರಂಗನ ದರ್ಶನ ಪಡೆದುಕೊಂಡು ಅಲ್ಲಿಯೇ ವಾಸ್ತವ್ಯ ಮಾಡಿ, ಮರುದಿನ 11/10/2022 ರಂದು ಸಿರಡಿಗೆ ಹೋಗಿ ಅಲ್ಲಿ ದೇವರ ದರ್ಶನ ಪಡೆದುಕೊಂಡು ಅಲ್ಲಿಂದ ಶನಿ ಶಿಘ್ನೇಶ್ವರಕ್ಕೆ ವಾಸ್ತವ್ಯ ಮಾಡಿ ಮರುದಿನ ದಿನಾಂಕ: 12/10/2022 ರಂದು ಮದ್ಯಾಹ್ನ 2.00 ಗಂಟೆಗೆ ತುಳಜಾಪೂರಕ್ಕೆ ಬಂದು ಅಂಬಾಭವಾನಿ ದರ್ಶನ ಪಡೆದುಕೊಂಡು ಅಲ್ಲಿಂದ ದೇವಲ ಗಾಣಗಾಪೂರಕ್ಕೆ ಹೋಗಿ ಅಲ್ಲಿ ವಾಸ್ತವ್ಯ ಮಾಡಿದೆವು. ನಂತರ ನಿನ್ನೆ ದಿನಾಂಕ: 13/10/2022 ರಂದು ಬೆಳಗ್ಗೆ 6-30 ಗಂಟೆಗೆ ಶಹಾಪೂರದಿಂದ ನಮ್ಮ ಮನೆಯ ಮಾಲಿಕರಾದ ಫಾರೂಖ ತಂದೆ ಅಬ್ಬಾಸಮಿಯಾ ಆಂದ್ರಾ ರವರು ನನ್ನ ಮೋಬೈಲಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ. ಹೊನ್ನಪ್ಪ ನಮ್ಮ ಮನೆ ಯಲ್ಲಿ ನೀವು ಬಾಡಿಗೆಗೆ ಇದ್ದ ಮನೆಯ ಬಾಗಿಲು ಕೀಲಿ ಮುರಿದಿರುತ್ತದೆ. ಮತ್ತು ಬಾಗಿಲು ತೆರೆದಿರುತ್ತೆ ನೀವು ಎಲ್ಲಿ ಇದ್ದಿರಿ ಬನ್ನಿ ಅಂತ ನನಗೆ ವಿಷಯ ತಿಳಿಸಿದರು. ಆಗ ನಾನು ಒಮ್ಮೆಲೆ ಗಾಬರಿಯಾಗಿ ಗಾಣಗಾಪೂರದಿಂದ ನೇರವಾಗಿ ಶಹಾಪೂರದ ಬಾಪೂಗೌಡ ನಗರದಲ್ಲಿರುವ ನಮ್ಮ ಬಾಡಿಗೆ ಮನೆಗೆ ಕುಟುಂಬ ಸಮೇತನಾಗಿ ಬೆಳಗ್ಗೆ 10-30 ಗಂಟೆಗೆ ಬಂದು ನಮ್ಮ ಮನೆಯ ಬಾಗಿಲು ನೋಡಲಾಗಿ ಯಾರೊ ಕಳ್ಳರು ನಮ್ಮ ಮನಗೆ ನಾವು ಹಾಕಿದ ಕೀಲಿ ಮುರಿದಿದ್ದು ಕಂಡು ಬಂದಿತು. ನಂತರ ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮ ಮನೆಯ ಮಾಲಿಕ ಫಾರುಖ ಮೂವರು ಒಳಗಡಟೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಅಲಮಾರದ ಲಾಕ್ ಕೂಡ ಮುರಿದು ಅಲಮಾರ ತೆರೆದಿತ್ತು. ಅಲಮಾರದಲ್ಲಿ ಪರಿಶೀಲಿಸಿ ನೋಡಲಾಗಿ ಅಲಮಾರದಲ್ಲಿ ನಾವು ಇಟ್ಟು ಹೋದ 1) 05 ಗ್ರಾಂ ಬಂಗಾರದ 02 ಜ್ಯೋತೆ ಜುಮಕಿ ಅಂದಾಜು ಕಿಮ್ಮತ 40,000/-ರೂಪಾಯಿ ಮತ್ತು 2) 04 ಗ್ರಾಂ ಬಂಗಾರದ 02 ಜ್ಯೋತೆ ಸಾಕಳಿ ಎಳಿ ಅಂದಾಜು ಕಿಮ್ಮತ 25,000/- ರೂ ಮತ್ತು ನಗದು ಹಣ 26,000/- ರೂಪಾಯಿ ಹೀಗೆ ಒಟ್ಟು 65,000=00 ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು, 26,000=00 ರೂಪಾಯಿ ನಗದು ಯಾರೋ ಕಳ್ಳರು ನಾವು ನಮ್ಮ ಮನೆ ಕೀಲಿ ಹಾಕಿಕೊಂಡು ನಾವು ಪ್ರವಾಸಕ್ಕೆ ಹೊದಾಗ ದಿನಾಂಕ:12/10/2022 ರಂದು ರಾತ್ರಿ ಸಮಯದಲ್ಲಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ, ಈ ಬಗ್ಗೆ ನಾವು ನಮ್ಮ ಹಿರಿಯರಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ: 14/10/2022 ರಂದು ತಡವಾಗಿ ಠಾಣೆಗೆ ಬಂದು ನಮ್ಮ ಮನೆಯಲ್ಲಿ ಕಳುವಾದ ಬಂಗಾರದ ಆಭರಣಗಳು ಮತ್ತು ನಗದು ಹಣದ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ತಮ್ಮಲ್ಲಿ ವಿನಂತಿ. ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 174/2022 ಕಲಂ: 457.380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

 

ಇತ್ತೀಚಿನ ನವೀಕರಣ​ : 15-10-2022 11:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080