ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-11-2021

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 154/2021 ಕಲಂ:279,337,338, ಐ.ಪಿ.ಸಿ. : ಇಂದು ದಿನಾಂಕ 14/11/2021 ರಂದು ಗಾಯಾಳು ಫಿರ್ಯಾಧಿದಾರನಾದ ರವಿಕುಮಾರ ತಂದೆ ಪೂನ್ಯಾ ಚವ್ಹಾಣ ವಯಾಃ 45 ವರ್ಷ ಜಾಃ ಲಮಾಣಿ ಉಃ ಒಕ್ಕಲುತನ ಸಾಃ ಹನುಮನಾಯಕ ತಾಂಡ ಬಾಚವಾರ ತಾಃ ಯಾದಗಿರ ಇವರು ಯುನಿಟೆಡ್ ಆಸ್ಪತ್ರೆ ಕಲಬುಗರ್ಿಯಲ್ಲಿ ಸೇರಿಕೆಯಾಗಿದ್ದು ಸದರಿ ಗಾಯಳು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಹೀಗಿರುವಾಗ ನಿನ್ನೆ ದಿನಾಂಕ 13/11/2021 ರಂದು ಸಾಯಂಕಾಲ 4:30 ಸುಮಾರಿಗೆ ನಮ್ಮ ತಾಂಡದಿಂದ ಖಾಸಗಿ ಕೆಲಸದ ನಿಮಿತ್ಯಾ ನನ್ನ ದ್ವಿಚಕ್ರ ವಾಹನವಾದ ಟಿ.ವಿ.ಎಸ್.ಬೈಕ್ ನಂ. ಕೆ.ಎ.33/ಕೆ.2987.ನೆದ್ದನ್ನು ಚಾಲನೆ ಮಾಡಿಕೊಂಡು ಯಾದಗಿರಿಗೆ ಬರುತ್ತಿರುವಾಗ ಹನುಮನಾಯಕ ತಾಂಡದ ದಿಂದ ಬಾಚವಾರ ಕ್ರಾಸ್ ಹತ್ತಿರ ನಾನು ರಸ್ತೆ ಕ್ರಾಸ್ ಮಾಡಿಕೊಂಡು ಬರುವಾಗ ನನ್ನ ಎದರುಗಡೆಯಿಂದ ಪಲ್ಸರ್ ಬೈಕ್ ನಂ.ಟಿ.ಎಸ್.07/ಎಚ್.ಎಲ್.8343.ನೆದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಎದುರುಗಡೆ ಚಲಾಯಿಸಿಕೊಂಡು ಬಂದು ನನ್ನ ಬೈಕಗೆ ರಬಸವಾಗಿ ಡಿಕ್ಕಿಪಡಿಸಿದ್ದರಿಂದ ನಾನು ಮತ್ತು ಎದುರಗಡೆ ಬೈಕನ ಮೆಲೆ ಇದ್ದ ವ್ಯಕ್ತಿ ರಸ್ತೆ ಮೇಲೆ ಪುಟಿದು ನೇಲ್ಲಕ್ಕೆ ಬಿದ್ದೆವು ಸದರಿ ಅಪಘಾತದಿಂದ ನನಗೆ ಬಲಗಾಲಿನ ತೊಡೆಯ ಭಾಗದಲ್ಲಿ ಭಾರಿ ಗಾಯವಾಗಿ ಎಲುಬು ಮುರಿದಿರುತ್ತದೆ, ಬಾಯಿ ತುಟಿಯ ಮೆಲೆ ತರಚಿದ ಗಾಯಗಳಾಗಿರುತ್ತದೆ ನನಗೆ ಡಿಕ್ಕಿ ಹೊಡೆದ ಬೈಕ ಸವಾರನಿಗೂ ಕೂಡಾ ಈ ಅಪಘಾತದಲ್ಲಿ ಮುಖದ ಮೆಲೆ ಮತ್ತು ಕೈ ಕಾಲುಗಳಿಗೆ ಭಾರಿ ಗಾಯಗಳಾಗೀರುತ್ತವೆ ನಾವು ನರಳಾಡುತ್ತಾ ಬಿದ್ದಾಗ ನಮ್ಮ ತಮ್ಮನಾದ ಮೊತಿಲಾಲ ಇತನು ಬಂದು ನಮ್ಮ ಸ್ಥಿತಿ ನೊಡಿದ್ದು ಮತ್ತು ಅಪಘತ ಪಡಿಸಿದವನಿಗ ಎ ನೊಡಿ ವಿಚಾರಿಸಿದ್ದು ಆತನ ಹೇಸರು ಗೋಪಾಲ ತಂದೆ ಲಕ್ಷ್ಮಣ ರಾಠೋಡ ಸೌದಗಾರ ತಾಂಡ ಎಂದು ಹೇಳಿದ್ದು ,ಆಗ ಅವರ ಸಂಬಂದಿಕರಿಗೆ ಫೊನ ಮಾಡಿ ಕರೆದಾಗ,ಸುನಿಲ ತಂದೆ ಲಕ್ಷ್ಮಣ ರಾಠೋಡ ಮತ್ತು ಜೀತೆಂದ್ರ ತಂದೆ ಖಿರು ಪವ್ಹಾರ ಇವರೆಲ್ಲರೂ ಸೇರಿಕೊಂಡು ನಮಗೆ ಒಂದು ಖಾಸಗಿ ವಾಹನದಲ್ಲಿ ಹಾಕಿ ಕೊಂಡು ಯಾದಗಿರ ಸಕರ್ಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಅಲ್ಲಿ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಯುನಿಟೇಡ್ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಇರುತ್ತದೆ.ಸದರಿ ಅಪಘಾತಪಡಿಸಿದ ಪಲ್ಸರ್ ಬೈಕ್ ನಂ.ಟಿ.ಎಸ್.07/ಎಚ್.ಎಲ್.8343. ನೆದ್ದರ ಸವಾರನ ಹೆಸರು ಗೋಪಾಲ ತಂದೆ ಲಕ್ಷ್ಮಣ ರಾಠೋಡ ಸೌದಗಾರ ತಾಂಡ ಅಂತಾ ಗೊತ್ತಾಗಿದ್ದು ಇರುತ್ತದೆ.ಸದರಿ ಸದರಿ ಅಪಘಾತ ಮಾಡಿದ ವ್ಯಕ್ತಿಯ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಹೇಳೀಕೆ ನಿಡಿದ್ದು ಮರಳಿ ಠಾಣೆಗೆ ಬಂದು ರಾತ್ರಿ 8:00 ಗಂಟೆಗೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 154/2021 ಕಲಂ. 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ.178/2021 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ದಿನಾಂಕ: 14.11.2021 ರಂದು ಮಧ್ಯಾಹ್ನ 12:00 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಆರೋಪಿತನು ಪಾಡುಪಲ್ಲಿ ಗ್ರಾಮ ಹನುಮಾನ ದೇವರ ಗುಡಿಯ ಹಿಂದೆ ರಸ್ತೆಯ ಮೇಲೆ ಒಂದು ಆಟೋ ರೀಕ್ಷಾದಲ್ಲಿ ಇಟ್ಟಿದ್ದ ಹೆಂಡವನ್ನು ಅಕ್ರಮವಾಗಿ ಹೆಂಡವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೊರಟು ಸಮಯ ಮಧ್ಯಾಹ್ನ 1:00 ಗಂಟೆಗೆ ಪಾಡುಪಲ್ಲಿ ಗ್ರಾಮದ ಹನುಮಾನ ದೇವರ ಗುಡಿಯ ಸ್ವಲ್ಪ ದೂರ ತಲುಪಿ ಮರೆಯಾಗಿ ನೋಡಲಾಗಿ ಅಲ್ಲಿ ಆರೋಪಿತನು ತನ್ನ ವಶದಲ್ಲಿದ್ದ ಮಸಾಲಿ ಚೀಲದಲ್ಲಿಯ ಪ್ಲಾಸ್ಟೀಕ್ ಪಾಕೆಟ್ಗಳಲ್ಲಿ ಕಟ್ಟಿದ ಹೆಂಡವನ್ನು ಆಟೋ ರಿಕ್ಷಾ ನಂಬರ ಕೆಎ-36-ಎ-3312 ನೇದ್ದರಲ್ಲಿ ಇಟ್ಟು ಅದರಲ್ಲಿಯ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಯ ಮಧ್ಯಾಹ್ನ 1:00 ಗಂಟೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿದಾಗ ಅಲ್ಲಿಗೆ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸಿಕ್ಕಿಬಿದ್ದುರುತ್ತಾನೆ. ನಂತರ ಆತನ ವಶದಲಿದ್ದ ಒಂದು ಆಟೋ ರೀಕ್ಷಾ, ಬಿಳೀ ಬಣ್ಣದ ಮಸಾಲಿ ಚೀದಲ್ಲಿದ್ದ ಬಿಳಿ ಬಣ್ಣದ ಪಾಕೇಟ್ಗಳಲ್ಲಿ ಕಟ್ಟಿದ 50 ಲೀಟರ ಹೆಂಡವನ್ನು ಮತ್ತು ಆರೋಪಿತನ ವಶದಲ್ಲಿದ್ದ ಹೆಂಡ ಮಾರಾಟದಿಂದ ಬಂದ 150/- ರೂ ನಗದು ಹಣ ಸೇರಿ ಹೀಗೆ ಒಟ್ಟು 6650/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ನಂತರ ಸಮಯ ಮಧ್ಯಾಹ್ನ 2:30 ಗಂಟೆಗೆ ಮರಳಿ ಠಾಣೆಗೆ ಬಂದು ಆರೋಪಿ, ಮುದ್ದೆ ಮಾಲು ಮತ್ತು ಮೂಲ ಜಪ್ತಿಪಂಚನಾಮನೆಯನ್ನು ಹಾಜರುಪಡಿಸಿ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 16-11-2021 10:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080