ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-12-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 174/2022 ಕಲಂ 279, 337, 338 ಐಪಿಸಿ: ದಿನಾಂಕಃ 12.12.2022 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ಈ ಪ್ರಕರಣದಲ್ಲಿ ಫಿಯರ್ಾದಿ ಮತ್ತು ಆರೋಪಿ ಇಬ್ಬರೂ ಕೂಡಿ ಗುರುಮಠಕಲ್ ಪಟ್ಟಣದ ಹರಿಜನವಾಡಾದಿಂದ ಹೈದರಾಬಾದ ರೋಡಿಗೆ ಇರುವ ಯಶೋಧಾ ಪೆಟ್ರೋಲ ಪಂಪದಲ್ಲಿ ಪೆಟ್ರೋಲ ಹಾಕಿಕೊಳ್ಳಲು ಹೋಗುತ್ತಿರುವಾಗ ಆರೋಪಿ ಶಿವಕುಮಾರ ಇತನು ಬಜಾಜ ಪಲಸರ ಮೋಟಾರ ಸೈಕಲ ನಂ.ಟಿ.ಎಸ್.-07-ಎಫ.ಡಬ್ಲ್ಯೂ-1154 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ಮೋಟಾರ ಸೈಕಲ ಮೇಲೆ ನಿಯಂತ್ರಣ ಕಳೆದುಕೊಂಡು ಗುರುಮಠಕಲ್ ಸೀಮಾಂತರದಲ್ಲಿರುವ ಯಶೋಧಾ ಪೆಟ್ರೋಲ್ ಪಂಪ ಹತ್ತಿರ ಯಾದಗಿರ-ಹೈದರಾಬಾದ ರಾಜ್ಯ ಹೆದ್ದಾರಿ ಮೇಲೆ ಮೋಟಾರ ಸೈಕಲ ಸ್ಕೀಡ ಆದ ಪರಿಣಾಮ ಈ ಅಪಘಾತದಲ್ಲಿ ಫಿಯರ್ಾದಿ ಮತ್ತು ಆರೋಪಿ ಇಬ್ಬರಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತ ಮತ್ತು ಗುಪ್ತಗಾಯಗಳಾಗಿರುವ ಬಗ್ಗೆ ದೂರು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 14.12.2022 ರಂದು ಮಧ್ಯಾಹ್ನ 3-00 ಪಿ.ಎಮ್ ದಿಂದ 4.00 ಪಿ.ಎಮ್.ವರೆಗೆ: ಇಂದು ದಿನಾಂಕ 14.12.2022 ರಂದು ಮಧ್ಯಾಹ್ನ 4.30 ಗಂಟೆಗೆ ಬಾಪುಗೌಡ ಪಿ.ಐ ಸಾಹೇಬರು ಸಿ.ಇ.ಎನ್ ಪೊಲೀಸ್ ಠಾಣೆರವರು ಸ್ಥಳಿಯ ಸ್ಟೇಷನ್ ಸೈದಾಪುರದ ಜಾಮೀಯಾ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಒಬ್ಬ ಆಪಾದಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿಪಂಚನಾಮೆ, ಆಪಾದಿತ ವ್ಯಕ್ತಿ ಮತ್ತು ಮುದ್ದೆಮಾಲು ಒಪ್ಪಿಸಿದ್ದು ಮೂಲ ಜಪ್ತಿ ಪಂಚನಾಮೆ ಸಾರಾಂಶವೇನೆಂದರೆ ಸ್ಟೇಷನ್ ಸೈದಾಪುರದ ಜಾಮೀಯಾ ಮಸೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಮಟಕಾ ಜೂಜಾಟದ ನಂಬರ ಬರೆಸಿ 1 ರೂಪಾಯಿಗೆ 80 ರೂಪಾಯಿಗಳು ಸಿಗುತ್ತವೆ ದೈವಲೀಲೆ ಆಟ ಅಂತಾ ಕೂಗುತ್ತ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆಯುವ ವ್ಯಕ್ತಿ ಮೇಲೆ ಮಧ್ಯಾಹ್ನ 3.00 ಗಂಟೆಗೆ ದಾಳಿಮಾಡಿ ಹಿಡಿದುಕೊಂಡು ವ್ಯಕ್ತಿಯ ಅಂಗಶೋಧನೆ ಮಾಡಿದಾಗ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ ಹಾಗೂ ನಗದು ಹಣ 18,100=00 ರೂಪಾಯಿ ಮುದ್ದೆಮಾಲನ್ನು ಜಪ್ತಿ ಮಾಡಿ ಪ್ರತ್ಯೇಕ ಕವರನಲ್ಲಿ ಹಾಕಿ ಅದಕ್ಕೆ ಪಂಚರು ಮತ್ತು ಪಿ.ಐ ಸಾಹೇಬರು ಸಹಿ ಮಾಡಿ ಪಂಚರ ಚೀಟಿ ಅಂಟಿಸಿದ್ದು, ಸದರಿ ಜಪ್ತಿ ಪಂಚನಾಮೆಯನ್ನು ದಿನಾಂಕ 14.12.2022 ರಂದು ಮಧ್ಯಾಹ್ನ 3-00 ಗಂಟೆಯಿಂದ 4.00 ಗಂಟೆಯ ಮಧ್ಯದ ಅವಧಿಯಲ್ಲಿ ಸ್ಥಳದಲ್ಲಿಯೇ ಕೈಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 133/2022 ಕಲಂ 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.


 ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 209/2022 ಕಲಂ  279, 338 ಐ.ಪಿ.ಸಿ.  : ಕೇಸಿನ ಸಂಕ್ಷಿಪ್ತ ಸಾರಾಂಶಃ-. ಇಂದು ದಿನಾಂಕ 14/12/2022 ರಂದು ಸಾಯಂಕಾಲ 18-00 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ತಂದೆ ಪರಪ್ಪಗೌಡ ಮಾಲಿಪಾಟೀಲ್, ವಯಸ್ಸು 43 ವರ್ಷ, ಜಾತಿ ಲಿಂಗಾಯತ, ಉಃ ಒಕ್ಕಲುತನ ಕೆಲಸ, ಸಾಃ ಹೂವಿನಹಡಗಿ ತಾಃ ದೇವದುರ್ಗ, ಹಾಲಿವಸತಿ ಬಾಪುಗೌಡ ನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 16/11/2022 ರಂದು, ಮುಂಜಾನೆಯ ಸುಮಾರಿಗೆ ನಾನು ಮತ್ತು ನಮ್ಮ ಮಾವನವರಾದ ಶ್ರೀ ಈಶಣ್ಣ ತಂದೆ ಭೀಮರಡ್ಡಿ ಲಿಂಗೇರಿ, ವಯಸ್ಸು 59 ವರ್ಷ, ಜಾತಿ ಲಿಂಗಾಯತ, ಉಃ ವ್ಯಾಪಾರ, ಸಾಃ ಕೊಡಮನಹಳ್ಳಿ, ಹಾಲಿವಸತಿ ಬಾಪುಗೌಡ ನಗರ ಶಹಾಪೂರ. ಇಬ್ಬರೂ ಕೂಡಿ ಬಾಪುಗೌಡ ನಗರದಿಂದ ಶಹಾಪೂರ ಪಟ್ಟಣದ ತರಕಾರಿ ಮಾರುಕಟ್ಟೆಗೆ ಬಂದು, ತರಕಾರಿ ಖರೀದಿ ಮಾಡಿಕೊಂಡು, ಮನೆಯ ಕಡೆಗೆ ಹೋಗುತಿದ್ದಾಗ, ನಮ್ಮ ಮಾವನವರು ಹೇಳಿದ್ದೇನೆಂದರೆ, ನಿನಗೆ ಪರಿಚಯವಿದ್ದ ನಮ್ಮೂರಿನ ಶ್ರೀ ಮಾಳಪ್ಪ ತಂದೆ ಧರ್ಮಪ್ಪ ಕೊಲ್ಲುರ ಇವರ ಹತ್ತಿರ ಕೆಲಸವಿದೆ ಅವರ ರಸಗೊಬ್ಬರ ಅಂಗಡಿಗೆ ಹೋಗಿ ಅವರಿಗೆ ಭೇಟಿಯಾಗಿ  ಮನೆಯ ಕಡೆಗೆ ಹೋಗೋಣ ಅಂತಾ ತಿಳಿಸಿ ಅವರ ರಸಗೊಬ್ಬರದ ಅಂಗಡಿಗೆ ಕಡೆಗೆ ನಡೆದುಕೊಂಡು ಹೋಗುತಿದ್ದಾಗ, ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ನಂದಿನಿ ಹೋಟೆಲ್ ದಾಟಿ ಅಂದಾಜು 50 ಮೀಟರ್ ಅಂತರದಲ್ಲಿದ್ದಾಗ ಹಿಂದಿನಿಂದ ಅಂದರೆ  ಹಳೆ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಬದಿಗೆ ನಡೆದುಕೊಂಡು ಹೋಗುತಿದ್ದ ನಮ್ಮ ಮಾವ ಈಶಣ್ಣ ಇವರ ಬಲಗಾಲಿಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಅವರು ರೋಡಿನ ಮೇಲೆ ಬಿದ್ದರು, ಆಗ ನಾನು ಅವರಿಗೆ ಎಬ್ಬಸಿ ರೋಡಿನ ಬದಿಗೆ ಕೂಡಿಸುತಿದ್ದಾಗ, ರಸಗೊಬ್ಬರ ಅಂಗಡಿಯಲ್ಲಿದ್ದ ಕೊಡಮನಹಳ್ಳಿ ಗ್ರಾಮದ ಮಾಳಪ್ಪ ತಂದೆ ಧರ್ಮಪ್ಪ ಕೊಲ್ಲುರ ಇವರೂ ಅಪಘಾತವಾಗಿದ್ದನ್ನು ನೋಡಿ ಓಡಿ ಸ್ಥಳಕ್ಕೆ ಬಂದರು. ಸದರಿ ಅಪಘಾತದಲ್ಲಿ ನಮ್ಮ ಮಾವ ಈಶಣ್ಣ ಇವರಿಗೆ ಬಲಭಾಗದ ಸೊಂಟದಲ್ಲಿ ಮತ್ತು ಬಲಗಾಲ ತೊಡೆಯ ಎಲಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ.  ಅಪಘಾತ ಪಡಿಸಿದ ಕಾರ್ ಮತ್ತು ಅದರ ಚಾಲಕ ಅಲ್ಲಿಯೇ ಇದ್ದು ಆತನ ಹೆಸರು ವಿಳಾಸ ವಿಚಾರಿಸಲಾಗಿ  ಭೀಮಣ್ಣ ತಂದೆ ಮಲ್ಲಪ್ಪ ನರಬೊಳಿ ವಯಸ್ಸು 41 ವರ್ಷ, ಜಾತಿ ಪ.ಜಾತಿ (ಹೊಲೆಯ) ಉಃ ಡ್ರೈವರ್ ಕೆಲಸ ಸಾಃ ದೇವಿ ನಗರ ಶಹಾಪೂರ ಅಂತಾ ಹೇಳಿದನು. ಕಾರ್ ನಂ ಕೆಎ-33-ಎನ್-0113 ಅಂತಾ ಇದ್ದು ಎಟರ್ಿಗಾ  ವಾಹನ ಇರುತ್ತದೆ.
      ನಾನು ಮತ್ತು ಮಾಳಪ್ಪ ಕೊಲ್ಲುರ ಇಬ್ಬರೂ ಕೂಡಿ ನಮ್ಮ ಮಾವ ಈಶಣ್ಣ ಇವರಿಗೆ ಒಂದು ಆಟೋದಲ್ಲಿ ಕೂಡಿಸಿದೆವು. ನಂತರ ನಾನು ನಮ್ಮ ಮಾವನಿಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೆನು. ವೈದ್ಯಾಧಿಕಾರಿಗಳು ಪ್ರಥಮ ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಮುಂದೆ ಹೋಗಲು ತಿಳಿಸಿದ್ದು, ಹಣದ ವ್ಯವಸ್ಥೆ ಮಾಡಿಕೊಂಡು ದಿನಾಂಕ 19/11/2022 ರಂದು ವಾಹನ ಬಾಡಿಗೆ ಮಾಡಿಕೊಂಡು ನಾನು ಮತ್ತು ಅತ್ತೆ ಸುಮಂಗಲಾ ಇಬ್ಬರೂ ಕೂಡಿ ನಮ್ಮ ಮಾವ ಈಶಣ್ಣ ಇವರಿಗೆ ಸೋಲಾಪೂರಕ್ಕೆ ಕರೆದುಕೊಂಡು ಹೋಗಿ ಯಶೋಧರಾ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ದಿನಾಂಕ 27/11/2022 ರಂದು ಡಿಸ್ಚಾರ್ಜ ಮಾಡಿ ನಂತರ ಒಂದು ವಾರ ಬಿಟ್ಟು ಪುನಃ ಆಸ್ಪತ್ರೆಗೆ ಬರಲು ಹೇಳಿದ್ದರಿಂದ ಸೋಲಾಪೂರದಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಒಂದು ವಾರ ಬಿಟ್ಟು ಪುನಃ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಊರಿಗೆ ಬಂದು ಈ ಬಗ್ಗೆ ನಮ್ಮ ಮಾವನ ಜೊತೆ ವಿಚಾರಣೆ ಮಾಡಿ ತಡವಾಗಿ ಇಂದು ದಿನಾಂಕ 14/12/2022 ರಂದು ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ.
     ಕಾರಣ ಸದರಿ ಅಪಘಾತಕ್ಕೆ ಕಾರ್ ನಂ ಕೆಎ-33-ಎನ್-0113 ನೇದ್ದರ ಚಾಲಕ ಭೀಮಪ್ಪ ತಂದೆ  ಮಲ್ಲಪ್ಪ ನರಬೊಳಿ ಸಾಃ ದೇವಿ ನಗರ ಶಹಾಪೂರ ಈತನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿ ಅಪಘಾತ ಪಡಿಸಿದ್ದು, ಸದರಿ ಕಾರ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 209/2022 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 143,147,323,324,307,504,506 ಸಂಗಡ 149 ಐಪಿಸಿ: ಸುಮಾರು ದಿವಸಗಳಿಂದ ಪಿರ್ಯಾದಿಯ ಗಂಡ ಮತ್ತು ಆರೋಪಿ ನಂ.1 ನೇದ್ದವನಿಗೆ ಹೊಲ - ಮನೆ ಹಂಚಿಕೆ ಸಂಬಂದ ತಕರಾರು ನಡೆದಿದ್ದು ನ್ಯಾಯ ಪಂಚಾಯತಿ ಮಾಡಿದ್ದರು ಸಹ ಹಾಗೆಯೆ ತಕರಾರು ಮುಗಿಯದೆ ಇದ್ದು ಇಂದು  ದಿನಾಂಕ 14/12/2022 ರಂದು 7.00 ಗಂಟೆಯ ಸುಮಾರಿಗೆ ಪಿರ್ಯಾದಿಗೆ & ಆರೋಪಿತರ ಮದ್ಯ ಇರುವ ಗೋಡೆಯನ್ನು ಆರೋಪಿ ನಂ.1 ನೇದ್ದವನು ಆರೋಪಿ ನಂ.2 ನೇದ್ದವಳೊಂದಿಗೆ ಕೆಡುವುವಾಗ ಪಿರ್ಯಾದಿಯು ತನ್ನ ಮನೆಯಿಂದ ಹೊರಗೆ ಬಂದು ಆರೋಪಿ ನಂ.1 ನೇದ್ದವನಿಗೆ ಏನು ಮಾವ ಇನ್ನೂ ನ್ಯಾಯ ಮುಗಿದಿಲ್ಲ, ಸ್ಟಾಂಪ್ ಬರೆದಿಲ್ಲ ಹೀಗೆ ಗೋಡೆಯನ್ನು ಕಡೆವುದರೆ ಏಗೆ ಅಂತಾ ಕೇಳಿದಾಗ ಆರೋಪಿ ನಂ.1 ನೇದ್ದವನು ಪಿರ್ಯಾದಿಗೆ ಏ ಸೂಳಿ ನನ್ನ ತಮ್ಮನಿಗಿಂತ ನಿನ್ನದೇ ಬಹಳ ಆಗಿದೆ, ಅಂತಾ ಅವಾಚ್ಯ ಶಬ್ದಗಳಿಂದೆ ಬೈದು ಕೊಲೆ ಮಾಡುವ ಉದ್ದೆಶದಿಂದ ಕಟ್ಟಿಗೆಯಿಂದ ಹಣೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ತಲೆಗೆ ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಪಡಿಸಿದ್ದು, ಅಲ್ಲದೇ ಇನ್ನೂಳಿದ ಆರೋಪಿತರು ಕೈಯಿಂದ ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 323,324, 504,506 ಸಂಗಡ 34 ಐಪಿಸಿ: ಸುಮಾರು ದಿವಸಗಳಿಂದ ಪಿರ್ಯಾದಿಯ ಗಂಡ ಮತ್ತು ಆರೋಪಿ ನಂ.2 ನೇದ್ದವನಿಗೆ ಹೊಲ - ಮನೆ ಹಂಚಿಕೆ ಸಂಬಂದ ತಕರಾರು ನಡೆದಿದ್ದು ನ್ಯಾಯ ಪಂಚಾಯತಿ ಮಾಡಿದ್ದರು ಸಹ ಹಾಗೆಯೆ ತಕರಾರು ಮುಗಿಯದೆ ಇದ್ದು ಇಂದು  ದಿನಾಂಕ 14/12/2022 ರಂದು 7.30 ಗಂಟೆಯ ಸುಮಾರಿಗೆ ಪಿರ್ಯಾದಿಗೆ & ಆರೋಪಿತರ ಮದ್ಯ ಇರುವ ಗೋಡೆಯನ್ನು ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ನೋಡುವಾಗ ಆರೋಪಿ ನಂ.1 ನೇದ್ದವಳು ಹೊರಗಡೆ ಬಂದು ಇನ್ನೂ ನ್ಯಾಯಾ ಪಂಚಾಯತಿ ಮುಗಿದಿಲ್ಲ, ಇನ್ನು ಸ್ಟಾಂಪ್ ಬರೆದಿಲ್ಲಾ ಅಂತಾ ನನಗೆ ಏ ಸೂಳಿ ನಿನ್ನ ಗಂಡ ನೀನು ಕೂಡಿ ಮನೆ ಕೆಡುವುತಿರೆನು ಅಂತಾ ಅಂದಾಗ ಪಿರ್ಯಾದಿಯು ಸ್ಟಾಂಪ್ ಬರೆಯುವುವರೆಗೆ ಗೋಡೆ ಕೆಡುವುದಿಲ್ಲ ಅಂತಾ ಅಂದಾಗ ಅಷ್ಟಕ್ಕೆ ಆರೋಪಿ ನಂ.2 ನೇದ್ದವನು ಇತನು ಮನೆಯಿಂದ ಹೊರಗಡೆ ಬಂದವನೇ ಏ ಸೂಳಿ ನಿನ್ನದು ಬಹಳ ಆಗ್ಯಾದ ಅಂತಾ ಅಂದು ಅಲ್ಲೇ ಅಂಗಳದಲ್ಲಿ ಬಿದ್ದು ಒಂದು ಕಲ್ಲು ತಗೆದುಕೊಂಡು ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಪಿರ್ಯಾದಿಯ ಗಂಡನಿಗೆ ಆರೋಪಿ ನಂ.1 ನೇದ್ದವಳು ಇವಳು ಅಂಗಳದಲ್ಲಿ ಇದ್ದು ಕಟ್ಟಿಗೆಯನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ಬಾಯಿ ಇಂದ ಎಡಗೈ ಹೆಬ್ಬೆರಳ ಸಂಧಿಗೆ ಜೋರಾಗಿ ಹಲ್ಲಿನಿಂದ ಕಡೆದು ರಕ್ತಗಾಯ ಪಡಿಸಿದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ  ಹಾಕಿದ ಬಗ್ಗೆ ಅಪರಾಧ

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 94/2022 ಕಲಂ 457, 380, 511 ಐಪಿಸಿ: ನಿನ್ನೆ ದಿನಾಂಕ:13/12/2022ರಂದು5.30 ಪಿ.ಎಮ್. ದಿಂದಇಂದು ದಿನಾಂಕ:14/12/2022ರಂದು10 ಎ.ಎಮ್. ಮಧ್ಯದಅವಧಿಯಲ್ಲಿಯಾರೋ ಕಳ್ಳರು ಶಿರವಾಳ ಗ್ರಾಮದಭಾರತಗ್ಯಾಸ್ಏಜೆನ್ಸಿಆಫಿಸನ ಹಿಂಬದಿಯಗೋಡೆಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದು ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟ ಫಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.
 
ಶೋರಾಪೂರ  ಪೊಲೀಸ್ ಠಾಣೆ:-
ಗುನ್ನೆ ನಂ: 165/2022 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ: ಇಂದು ದಿ: 14/12/2022 ರಂದು 01:00 ಪಿ. ಎಮ್ಕ್ಕೆ ಶ್ರೀಮತಿ ಭಾಗ್ಯ ಗಂಡ ಹಣಮಂತ್ರಾಯ ಮೇಲಗಿರಿ ವಯಸ್ಸು|| 24 ವರ್ಷ ಜಾ|| ಬೇಡರ ಉ|| ಕೂಲಿಕೆಲಸ ಸಾ|| ವಡಗೇರಿ ತಾ|| ಯಡ್ರಾಮಿ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆೆ, ನನ್ನ ತವರೂರು ಸುರಪುರ ತಾಲೂಕಿನ ದೇವರ ಗೊನಾಲ ಗ್ರಾಮವಿದ್ದು, ನನಗೆ ಸುಮಾರು 5 ವರ್ಷಗಳ ಹಿಂದೆ ವಡಗೇರಿ ಗ್ರಾಮದ ಹಣಮಂತ್ರಾಯ ತಂದೆ ಚಂದಪ್ಪ ಮೇಲಗಿರಿ ವಯಸ್ಸು|| 32 ವರ್ಷ ಜಾ|| ಬೇಡರ ಉ|| ಕೂಲಿಕೆಲಸ ಈತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಈಗ ನಮಗೆ ಅಭಿಷೇಕ ವಯಸ್ಸು|| 3 ವರ್ಷ ವಯಸ್ಸಿನ ಒಬ್ಬ ಗಂಡುಮಗನಿರುತ್ತಾನೆ. ದೇವರಗೊನಾಲ ಗ್ರಾಮದಲ್ಲಿ ನಿನ್ನೆ ಮಂಗಳವಾರ ದ್ಯಾಮವ್ವ ದೇವಿ ಗ್ರಾಮದೇವತೆ ಜಾತ್ರೆ ಇದ್ದ ಪ್ರಯುಕ್ತ ನಾವು ಗಂಡ ಹೆಂಡತಿ ನಮ್ಮ ಮಗುವಿನೊಂದಿಗೆ ದಿನಾಂಕ: 11/12/2022 ರಂದು ನನ್ನ ತವರು ಮನೆಗೆ ಬಂದಿದ್ದೆವು. ಇಂದು ದಿನಾಂಕ: 14/12/2022 ರಂದು ಮುಂಜಾನೆ ನನ್ನ ಗಂಡನು ಊಟ ಮಾಡಿದ ಬಳಿಕ ನನಗೆ ನೀನು ಒಂದು ವಾರ ತವರು ಮನೆಯಲ್ಲಿ ಇದ್ದು ಬರುವಂತೆ ಹೇಳಿ ನಮ್ಮ ಹೊಸ ಸ್ಪ್ಲೆಂಡರ್ ಪ್ಲಸ್ ಮೋಟರ ಸೈಕಲ್ ಮೇಲೆ ನನ್ನ ಮಗನಾದ ಅಭಿಷೇಕನಿಗೆ ಕೂಡಿಸಿಕೊಂಡು ವಡಗೇರಿ ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿ 11 ಎಎಮ್ ಸುಮಾರಿಗೆ ಹೋದನು. ನಂತರ 11-30 ಎಎಮ್ ಸುಮಾರಿಗೆ ನನ್ನ ಅಣ್ಣತಮ್ಮಕಿಯ ಅಯ್ಯಪ್ಪ ತಂದೆ ಮಾನಪ್ಪ ಬನ್ನೆಟ್ಟಿ ಸಾ|| ದೇವರಗೊನಾಲ ಈತನು ನನ್ನ ತಂದೆಯವರಿಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ದೇವಿಂದ್ರಪ್ಪ ತಂದೆ ಭೀಮಣ್ಣ ರುಕ್ಮಾಪುರ ಇಬ್ಬರು ಮೋಟರ ಸೈಕಲ ಮೇಲೆ ದೇವರಗೊನಾಲ ದಿಂದ ಮಾಚಗುಂಡಾಳ ಕಡೆಗೆ ಹೊರಟಿದ್ದಾಗ ನಮ್ಮ ಮುಂದುಗಡೆ ನಿಮ್ಮ ಅಳಿಯನಾದ ವಡಗೇರಿ ಗ್ರಾಮದ ಹಣಮಂತ್ರಾಯ ಮೇಲಗಿರಿ ಈತನು ತನ್ನ ಮಗನೊಂದಿಗೆ ಮೋಟರ ಸೈಕಲ್ ನಡೆಸಿಕೊಂಡು ಹೊರಟಿದ್ದು, ಈಗ್ಗೆ 11-20 ಎಎಮ್ ಸುಮಾರಿಗೆ ಚೆಳ್ಳಿಗೇನಗೌಡರ ಹೊಲದ ಹತ್ತಿರ ಎದುರಿನಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿನ್ನ ಅಳಿಯನ ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಿನ್ನ ಅಳಿಯ ಹಾಗೂ ಮೊಮ್ಮಗ ಅಭಿಷೇಕ ಇಬ್ಬರೂ ಮೋಟರ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದರು. ತಕ್ಷಣ ನಾನು ಮತ್ತು ದೇವಿಂದ್ರಪ್ಪ ಇಬ್ಬರು ಓಡಿ ಹೋಗಿ ನಿಮ್ಮ ಅಳಿಯ ಹಾಗೂ ಮೊಮ್ಮಗ ಇಬ್ಬರಿಗೂ ಎಬ್ಬಿಸಿ ರಸ್ತೆಯ ಪಕ್ಕ ಮಲಗಿಸಿ ನೋಡಲಾಗಿ ಹಣಮಂತ್ರಾಯ ಈತನ ಬಲಗಣ್ಣಿನ ಹುಬ್ಬಿನ ಹತ್ತಿರ, ಬಲಗಲ್ಲದ ಮೇಲೆ ಮೂಗಿನಿಂದ ತುಟಿಯ ವರೆಗೆ ಭಾರಿ ರಕ್ತಗಾಯಗಳಾಗಿ ಬಾಯಿಯಿಂದ ರಕ್ತಸ್ರಾವ ಆಗುತ್ತಿದ್ದು, ಬಲಕುತ್ತಿಗೆಗೆ ಹಾಗೂ ಬಲಮೊಳಕಾಲ ಹತ್ತಿರ ರಕ್ತಗಾಯಗಳಾಗಿರುತ್ತವೆ. ಅಭಿಷೇಕನ ಬಲಗೈ ರಟ್ಟೆಯಲ್ಲಿ ಒಳಪೆಟ್ಟಾದಂತಾಗಿ ನರಳುತ್ತಿದ್ದಾನೆ ಅಂತ ತಿಳಿಸಿದ್ದು ಸದರಿ ವಿಷಯ ಫೋನಿನಲ್ಲಿ ನಾನೂ ಸಹ ಕೇಳಿಸಿಕೊಂಡಿರುತ್ತೇನೆ. ತಕ್ಷಣ ಗಾಬರಿಯಾಗಿ ನಾನು ಮತ್ತು ನನ್ನ ತಂದೆೆಯಾದ ಮಾನಪ್ಪ ಜೇವಗರ್ಿ ಇಬ್ಬರು ಸ್ಥಳಕ್ಕೆ ಹೋಗಿ ನನ್ನ ಗಂಡ ಹಾಗು ಮಗನಿಗೆ ಮೇಲಿನಂತೆ ಗಾಯಗಳಾಗಿರುವದನ್ನು ನೋಡಿರುತ್ತೇವೆ. ಅಪಘಾತಪಡಿಸಿದ ಕಾರ್ ಸ್ಥಳದಲ್ಲಿ ನಿಂತಿದ್ದು, ಅದರ ನಂಬರ ನೋಡಲಾಗಿ ಕೆಎ-33 ಎಮ್-8679 ಇದ್ದು ಅದರ ಚಾಲಕನು ಅಪಘಾತ ಪಡಿಸಿದ ಬಳಿಕ ಕಾರ್ ನಿಲ್ಲಿಸಿ ಓಡಿಹೋಗಿರುವ ಬಗ್ಗೆ ಕೇಳಿ ಗೊತ್ತಾಗಿರುತ್ತದೆ. ಕಾರ್ ಚಾಲಕನ ಹೆಸರು ವಿಳಾಸ ನಮಗೆ ಗೊತ್ತಿರುವದಿಲ್ಲ. ಸದರಿ ಚಾಲಕನಿಗೆ ನೋಡಿದಲ್ಲಿ ಗುತರ್ಿಸುವದಾಗಿ ಅಯ್ಯಪ್ಪ ಹಾಗೂ ದೇವಿಂದ್ರಪ್ಪ ಇಬ್ಬರು ತಿಳಿಸಿರುತ್ತಾರೆ. ನಂತರ ನಾವು ಅದೇ ರಸ್ತೆಯಲ್ಲಿ ಬಂದ ಒಂದು ಬುಲೆರೋ ಜೀಪ್ ನಿಲ್ಲಿಸಿ ಅದರಲ್ಲಿ ನನ್ನ ಗಂಡ ಹಾಗೂ ಮಗನಿಗೆ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪುರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿರುತ್ತೇವೆ. ಸುರಪುರ ಆಸ್ಪತ್ರೆಯಲ್ಲಿ ವೈದ್ಯರು ಇಬ್ಬರಿಗೂ ಪ್ರಥಮ ಉಪಚಾರ ಮಾಡಿ ನನ್ನ ಗಂಡನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ನನ್ನ ತಂದೆಯವರು ನನ್ನ ಗಂಡನಿಗೆ ಅಂಬ್ಯುಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ. ನಮ್ಮ ಮೋಟರ ಸೈಕಲ್ ಇಂಜಿನ್ ನಂಬರ ಊಂ11ಇಙಒ4ಊ08579 ಇರುತ್ತದೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಕಾರ್ ನಡೆಸಿ ಅಪಘಾತಪಡಿಸಿದ ಕಾರ್ ನಂ. ಕೆಎ-33 ಎಮ್-8679 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.165/2022 ಕಲಂ:279, 337, 338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ನಾರಾಯಣಪೂರ ಪೊಲೀಸ್ ಠಾಣೆ:-
 ಗುನ್ನೆ ನಂ: 41/2022  ಕಲಂ: 32, 34 ಕೆ.ಇ ಆಕ್ಟ್: ಇಂದು ದಿನಾಂಕ 14/12/2022 ರಂದು 6:10 ಪಿ ಪಿ.ಎಂ ಕ್ಕೆ ಶ್ರೀಮತಿ ದಿವ್ಯಾ ಮಹಾದೇವ್ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ: 14/12/2022 ರಂದು 4:00 ಪಿ.ಎಮ್.ಕ್ಕೆ ತಾವು ಠಾಣೆಯಲ್ಲಿದ್ದಾಗ ನಾರಾಯಣಪೂರ ಗ್ರಾಮದ ಸುಂದರ ಕಿರಾಣಿ ಅಂಗಡಿಯ ಹಿಂದೆ ಇರವ ಒಂದು ಕೂಲ್ಡಡ್ರಿಂಕ್ಸ ಅಂಗಡಿಯ ಮುಂದೆ ಅನಧಿಕೃತವಾಗಿ ಸರಾಯಿ ಮಾರಟ ಮಾಡಲಾಗುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಾನು, ಸಿಬ್ಬಂದಿಯವರಿಗೆ ಮತ್ತು ಪಂಚರೊಂದಿಗೆ 5:00 ಪಿ.ಎಮ್.ಕ್ಕೆ ಸಾರಾಯಿ ಮಾರಾಟ ಮಾಡುತ್ತಿದ್ದವನ ಮೇಲೆ ದಾಳಿಮಾಡಿ ಅಂಗಡಿಯ ಮುಂದೆ ಇದ್ದ ಸರಾಯಿ ಮಾರಾಟ ಮಾಡುತ್ತಿದ್ದವನಿಗೆ ಹಿಡಿದುಕೊಂಡು ವಿಚಾರಿಸಲಾಗಿ ಅವನು ತನ್ನ ಹೆಸರು ಅಮರೇಶ ತಂದೆ ಶಂಕ್ರಪ್ಪ ಅಂಬಿಗೇರ ವ:20 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಅಂಬಿಗೇರ ಸಾ:ಆಯನೂರ ತಾ:ಸಿಂದನೂರ ಜಿ:ರಾಯಚೂರ ಹಾ:ವ: ನಾರಾಯಣಪೂರ ಅಂತಾ ತಿಳಿಸಿದನು, ನಂತರ ಅಂಗಡಿಯ ಮುಂದೆ ಮೂರು ರಟ್ಟಿನ ಬಾಕ್ಸಗಳು ಇದ್ದು ಅವಗಳನ್ನು ಪಂಚರ ಸಮಕ್ಷಮದಲ್ಲಿ ತರೆದು ನೋಡಲಾಗಿ ಮೊದಲನೇ ರಟ್ಟಿನ ಬಾಕ್ಸನಲ್ಲಿ 90 ಎಂ.ಎಲ್.ದ 80 ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದವು ಒಂದು ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 35.13/- ರೂ ಇದ್ದು 80 ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 2810.4/- ರೂ ಆಗುತ್ತದೆ.  ನಂತರ ಎರಡನೆ ರಟ್ಟಿನ ಬಾಕ್ಸ ತೆರೆದು ನೋಡಲಾಗಿ ಅದರಲ್ಲಿ 90 ಎಂ.ಎಲ್.ದ 96 ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದವು. ಒಂದು ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 35.13/- ರೂ ಇದ್ದು 96 ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 3372.48/- ರೂ ಆಗುತ್ತದೆ.  ಮೂರನೇ ರಟ್ಟಿನ ಬಾಕ್ಸ ತೆರೆದು ನೋಡಲಾಗಿ ಅದರಲ್ಲಿ 90 ಎಂ.ಎಲ್.ದ 96 ಒರಿಜಿನಲ್ ಚ್ವಾಯ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದವು. ಒಂದು ಒರಿಜಿನಲ್ ಚ್ವಾಯ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 35.13/- ರೂ ಇದ್ದು 96 ಒರಿಜಿನಲ್ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 3372.48/- ರೂ ಆಗುತ್ತದೆ. ಒಟ್ಟು 24.48 ಲೀಟರ ಸಾರಾಯಿ ಇದ್ದು ಅದರ ಮೌಲ್ಯ 9555/- ರೂ ಆಗುತ್ತಿದ್ದು. ನಂತರ ಸಾರಾಯಿ ಮಾರಾಟ ಮಾಡುವವನಿಗೆ ಸಾರಾಯಿ ಮಾರಾಟ ಮಾಡಲು ಪರವಾನಿಗೆ ಇರುವ ಬಗ್ಗೆ ವಿಚಾರಿಸಲಾಗಿ ಅವನು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವದಿಲ್ಲ ತಾನು ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದೇನೆ ಅಂತಾ ತಿಳಿಸಿದನು. ನಂತರ ಸ್ಥಳದಲ್ಲಿ ಇದ್ದ ಸರಾಯಿ ಟೆಟ್ರಾಪ್ಯಾಕುಗಳು ಇದ್ದ  ಮೂರು ರಟ್ಟಿನ ಬಾಕ್ಸಗಳನ್ನು ಪ್ರತ್ಯೇಕವಾಗಿ ಬಿಳಿಯ ಅರಿವೆಯಿಂದ ಕಟ್ಟಿ ಅರಗಿನಿಂದ ಎನ್ ಎಂಬ ಅಕ್ಷರದ ಶೀಲ್ನಿಂದ ಶೀಲ್ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸುವ ಕುರಿತು ವಶಕ್ಕೆ ತಗೆದುಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆಯನ್ನು 5:00 ಪಿ.ಎಮ್. ದಿಂದ 6:00 ಪಿ.ಎಮ್ ವರೆಗೆ ಕೈಕೊಂಡು 6:10 ಪಿ.ಎಂ ಕ್ಕೆ ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಒಬ್ಬ ಆರೋಪಿತನೊಂದಿಗೆ ಈ ಅಸಲ್ ಜಪ್ತಿ ಪಂಚನಾಮೆಯನ್ನು ಹಾಜರು ಪಡೆಸಿದ್ದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. .ಅಂತಾ ನೀಡಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 41/2022 ಕಲಂ : 32, 34 ಕೆ.ಇ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 16-12-2022 12:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080