ಅಭಿಪ್ರಾಯ / ಸಲಹೆಗಳು

                                                         ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-01-2023

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 08/2023 ಕಲಂ: 279, 337, 338, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ : ಇಂದು ದಿನಾಂಕ:15/01/2023 ರಂದು 7:10 ಪಿ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಡೆತ್ ಎಮ್.ಎಲ್.ಸಿ. ಮಾಹಿತಿ ಬಂದಿದ್ದರಿಂದ ನಾನು ಆಸ್ಪತ್ರೆಗೆ ಭೇಟಿನೀಡಿ 7:40 ಪಿ.ಎಮ್.ಕ್ಕೆ ಎಮ್.ಎಲ್.ಸಿ. ಸ್ವೀಕೃತಮಾಡಿಕೊಂಡು ಮೃತನ ಸಂಬಂಧಿಕರಿಗೆ ವಿಚಾರಿಸಲಾಗಿ ಮೃತನ ತಮ್ಮನಾದ ಶರಣಬಸ್ಸು ತಂದೆ ಮಲ್ಲೇಶಪ್ಪ ಮುದನೂರ, ವಯಸ್ಸು 26 ವರ್ಷ ಜಾತಿ:ಕುರುಬ, ಉ||ವಿದ್ಯಾಥರ್ಿ, ಸಾ||ಕೆಂಭಾವಿ, ತಾ||ಸುರಪೂರ ಈತನು ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಹಾಜರಪಡಿಸಿದ್ದು ಸಾರಾಂಶವೇನಂದರೆ ಇಂದು ದಿನಾಂಕ:15/01/2023 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು ಕೆಲಸದ ನಿಮಿತ್ಯ ಶಹಾಪೂರಕ್ಕೆ ಬಂದಿದ್ದಾಗ ನನ್ನ ಅಣ್ಣನ ಹೆಂಡತಿಯ ಅಣ್ಣನಾದ ಸಿದ್ದರಾಮಪ್ಪ ತಂದೆ ಮರೆಪ್ಪ ಜಡಿ ಸಾ||ವಡಗೇರಾ ಈತನು ನನಗೆ ಫೋನ್ಮಾಡಿ ಹೇಳಿದ್ದೇನೆಂದರೆ, ಈಗ 6:00 ಪಿ.ಎಮ್. ಸುಮಾರಿಗೆ ನಿಮ್ಮಣ್ಣ ಚಂದ್ರಶೇಖರನು ತನ್ನ ಹೆಂಡತಿ ವನಿತಾ ಮತ್ತು ಮಗ ಮಣಿಕಂಠನೊಂದಿಗೆ ವಡಗೇರಾದಿಂದ ತನ್ನ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಹೋಗುತ್ತಿದ್ದಾಗ ವಡಗೇರಾ-ಯಾದಗಿರಿ ಮುಖ್ಯ ರಸ್ತೆಯ ಹಾಲಗೇರಾ ಸರಕಾರಿ ಪ್ರೌಢ ಶಾಲೆಯ ಸಮೀಪ ಚಂದ್ರಶೇಖರನಿಗೆ ಕಾರ್ ಅಪಘಾತವಾಗಿದ್ದು, ಚಂದ್ರಶೇಖರನಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವನಿತಾ ಮತ್ತು ಮಣಿಕಂಠನಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಅವರಿಗೆ ಯಾದಗಿರಿಗೆ ಹಾಕಿಕೊಂಡು ಹೋಗುತ್ತಿದ್ದೇವೆ, ನೀನು ಯಾದಗಿರಿಗೆ ಬಾ ಅಂತಾ ಹೇಳಿದ್ದರಿಂದ ನಾನು ಕೂಡಲೇ ನನ್ನ ತಾಯಿ ತಿಪ್ಪಮ್ಮರವರಿಗೆ ಫೋನ್ಮಾಡಿ ವಿಷಯ ತಿಳಿಸಿ ಯಾದಗಿರಿಗೆ ಬರುವಂತೆ ಹೇಳಿ ನಾನು ನನ್ನ ಮೋಟರ್ ಸೈಕಲ್ ಮೇಲೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಶವಗಾರ ಕೋಣೆಯಲ್ಲಿ ಹಾಕಿದ್ದ ನನ್ನ ಅಣ್ಣ ಚಂದ್ರಶೇಖರನ ಶವವನ್ನು ನೋಡಿ ಗುರುತಿಸಿದ್ದು, ಆತನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ರಕ್ತಸ್ರಾವವಾಗಿದ್ದು, ಬಲಕಪಾಳ ಮತ್ತು ಬಲ ಮೆಲಕಿಗೆ ತರಚಿದ ಗಾಯ, ಬಲಕಾಲು ನಡುವಿನ ಎರಡು ಬೆರಳುಗಳಿಗೆ ತರಚಿದ ಗಾಯಗಳು, ಎಡಕಾಲು ಪಾದಕ್ಕೆ ತರಚಿದ ಗಾಯಗಳಾಗಿದ್ದವು. ನನ್ನ ಅತ್ತಿಗೆ ವನಿತಾ ಮತ್ತು ಮಣಿಕಂಠನಿಗೆ ಸಹ ಗಾಯಗಳಾಗಿದ್ದು, ಅವರಿಗೆ ಉಪಚಾರಕ್ಕಾಗಿ ಯಾದಗಿರಿಯ ಶರಣಬಸವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡ ಹೋದ ಬಗ್ಗೆ ತಿಳಿದುಬಂತು. ಅಲ್ಲಿಯೇ ಇದ್ದ ನಮ್ಮ ಸಂಬಂಧಿಕ ಸಿದ್ದರಾಮಪ್ಪನಿಗೆ ಕೇಳಿದಾಗ ಅವರು ಹೇಳಿದ್ದೇನೆಂದರೆ, ಚಂದ್ರಶೇಖರ, ವನಿತಾ ಮತ್ತು ಅವರ ಮಗ ಮಣಿಕಂಠ ಮೂರು ಜನರು ತಮ್ಮ ಮೋಟರ್ ಸೈಕಲ್ ಮೇಲೆ ಇಂದು ಬೆಳಗ್ಗೆ ನಮ್ಮ ಮನೆಗೆ ಬಂದಿದ್ದು, ಸಾಯಂಕಾಲ ಯಾದಗಿರಿಗೆ ಹೋಗುತ್ತೇವೆ ಎಂದು ಹೇಳಿ ಮೂರು ಜನರು ತಮ್ಮ ನೋಂದಣಿ ನಂಬರ್ ಇಲ್ಲದ ಮೋಟರ್ ಸೈಕಲ್ ಚೆಸ್ಸಿ ನಂ:ಒಇ4ಎಅ65ಃಉಎಖಿ061945 ರ ಮೇಲೆ ಕುಳಿತುಕೊಂಡು ಹೋಗುತ್ತಿದ್ದರು, ನನಗೆ ಯಾದಗಿರಿಯಲ್ಲಿ ಕೆಲಸ ಇದ್ದರಿಂದ ನಾನು ಮತ್ತು ನಮ್ಮೂರಿನ ದೇವಪ್ಪ ಕಡೆಚೂರ ಇಬ್ಬರು ನನ್ನ ಮೋಟರ್ ಸೈಕಲ್ ಮೇಲೆ ಅವರ ಹಿಂದೆಯೇ ಹೋಗುತ್ತಿದ್ದೆವು. ವಡಗೇರಾ-ಯಾದಗಿರಿ ಮುಖ್ಯ ರಸ್ತೆಯ ಹಾಲಗೇರಾ ಸರಕಾರಿ ಪ್ರೌಢ ಶಾಲೆಯ ಸಮೀಪ 6:00 ಪಿ.ಎಮ್. ಸುಮಾರಿಗೆ ಯಾದಗಿರಿ ಕಡೆಯಿಂದ ಟೊಯೋಟಾ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದುಗಡೆ ಹೋಗುತ್ತಿದ್ದ ಚಂದ್ರಶೇಖರನ ಮೋಟರ್ ಸೈಕಲ್ಗೆ ನೇರವಾಗಿ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಚಂದ್ರಶೇಖರನು ಮೋಟರ್ ಸೈಕಲ್ ಸಮೇತ ಕೆಳಗಡೆ ರಸ್ತೆಯ ಮೇಲೆ ಬಿದ್ದು ಭಾರಿರಕ್ತಗಾಯ ಹಾಗು ಗುಪ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟನು. ಹಿಂದುಗಡೆ ಕುಳಿತಿದ್ದ ನನ್ನ ತಂಗಿ ವನಿತ ಮತ್ತು ಅಳಿಯ ಮಣಿಕಂಠನಿಗೆ ಭಾರಿರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದವು. ಅಪಘಾತಪಡಿಸಿದ ಕಾರ್ ನೋಡಲಾಗಿ ಅದಕ್ಕೆ ನೋಂದಣಿ ನಂಬರ್ ಇರಲಿಲ್ಲ. ಅಪಘಾತಪಡಿಸಿದ ಕಾರ್ ಚಾಲಕನು ನಮ್ಮನ್ನು ನೋಡಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು, ಆತನಿಗೆ ನೋಡಿದರೆ ಗುರುತಿಸುತ್ತೇನೆ. ನೋಂದಣಿ ನಂಬರ್ ಇಲ್ಲದ ಕಾರನ್ನು ಪರಿಶೀಲಿಸಿ ನೊಡಲಾಗಿ ಚೆಸ್ಸಿ ನಂ:ಒಃಊಎಘಅ13ಖಓಐ308934 ಇಂಜಿನ್ ನಂ: ಏ12ಓಕ7171372 ಇರುತ್ತದೆ. ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಹಣಮಂತ ತಂದೆ ಮಲ್ಲಯ್ಯ ತೇಕರಾಳ ಇವರ ಕಾರಿನಲ್ಲಿ ಗಾಯಗೊಂಡ ನನ್ನ ತಂಗಿ ವನಿತಾ ಮತ್ತು ಮಣಿಕಂಠನಿಗೆ ಯಾದಗಿರಿ ಶರಣಬಸವ ಆಸ್ಪತ್ರೆಗೆ ಕಳುಹಿಸಿದೆವು. ಮೃತ ಚಂದ್ರಶೇಖರನ ಶವವನ್ನು ಯಾದಗಿರಿ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದಿರುತ್ತೇವೆ ಎಂದು ಹೇಳಿದನು. ಕಾರಣ ಅಪಘಾತಪಡಿಸಿದ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರನ್ನು ಪಡೆದುಕೊಂಡು ಮರಳಿ ಠಾಣೆಗೆ 8:45 ಪಿ.ಎಮ್.ಕ್ಕೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 08/2023 ಕಲಂ: 279, 337, 338, 304(ಎ) ಐಪಿಸಿ & ಕಲಂ:187 ಐ.ಎಮ್.ವಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 16-01-2023 11:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080