ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-02-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 25/2022 ಕಲಂ. 79, 80 ಕೆ.ಪಿ ಎಕ್ಟ್ : ಇಂದು ದಿನಾಂಕ.15/02/2022 ರಂದು 7-00 ಪಿಎಂಕ್ಕೆ ಶ್ರೀ ವೀರಣ್ಣ ಪಿ.ಎಸ್.ಐ (ತನಿಖೆ) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನಂದರೆ, ನಾನು ಇಂದು ದಿನಾಂಕ.15/02/2022 ರಂದು 4-00 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಗಂಜ ಕ್ರಾಸಿನಲ್ಲಿರುವ ಎಸ್.ವಿ.ಲಾಡ್ಜನ ರೂಂ ನಂ. 202 ರಲ್ಲಿ ಕೆಲವರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ದಾಳಿ ಕುರಿತು ಹೋಗಲು ಮಾನ್ಯ ಡಿ.ಎಸ್.ಪಿ.ಸಾಹೇಬರು ಯಾದಗಿರಿ ರವರಿಂದ ಸರ್ಚವಾರೆಂಟ ಪಡೆದುಕೊಂಡು ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಮೋನಪ್ಪ ಹೆಚ್.ಸಿ-156, ಅಬ್ದುಲ ಬಾಷಾ ಪಿಸಿ-237, ಸಾಬರೆಡ್ಡಿ ಪಿಸಿ-379 ರವರೊಂದಿಗೆ ಠಾಣೆಯಿಂದ 5-15 ಪಿಎಮ್ ಕ್ಕೆ ಸರಕಾರಿ ಜೀಪ ನಂ.ಕೆಎ 33 ಜಿ 0075 ನೇದ್ದರಲ್ಲಿ ಹೊರಟು ಗಂಜ ಕ್ರಾಸನ ಎಸ್.ವಿ.ಲಾಡ್ಜನ ರೂಂ ನಂ.202 ರಲ್ಲಿ ಹೋಗಿ ನೋಡಲಾಗಿ ಐದು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯಂದಿದ ಅಂದರ-ಬಾಹರ ದೈವಲೀಲೆ ಜೂಜಾಟ ಆಡುತ್ತಿದ್ದು ನೋಡಿ ಖಚಿತಪಡಿಸಿಕೊಂಡು 5-40 ಪಿಎಂಕ್ಕೆ ದಾಳಿ ಮಾಡಿ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ 5 ಜನರನ್ನು ಹಿಡಿದು ಅವರ ಹೆಸರು, ವಿಳಾಸ ವಿಚಾರಿಸಲಾಗಿ ತಮ್ಮ ಹೆಸರುಗಳು ಒಬ್ಬೋಬ್ಬರಾಗಿ 1) ಹಣಮರೆಡ್ಡಿ ತಂ. ಯಂಕಾರೆಡ್ಡಿ ಪಟ್ಟೆದಾರ ವಃ 33 ಜಾಃ ಲಿಂಗಾಯತ ಉಃ ಕಿರಾಣಿ ವ್ಯಾಪಾರ ಸಾಃ ಯಲ್ಹೇರಿ ತಾಃಗುರುಮಿಠಕಲ್ ಅಂತಾ ತಿಳಿಸಿದ್ದು ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ನಗದು ಹಣ 8800=00 ರೂ ಮತ್ತು 32 ಇಸ್ಪೇಟ ಎಲೆಗಳು ಸಿಕ್ಕಿದ್ದು 2) ಸಂಗಾರೆಡ್ಡಿ ತಂದೆ ಬಸವರಾಜಪ್ಪ ಕಾಜಾಪೂರ ವ; 52 ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಕಾಳೆಬೆಳಗುಂದಿ ತಾ; ಗುರುಮಿಠಕಲ್ ಜಿ; ಯಾದಗಿರಿ ಈತನ ಹತ್ತಿರ ನಗದು ಹಣ 9500=00 ರೂ ಸಿಕ್ಕಿದ್ದು 3) ಭೀಮರೆಡ್ಡಿ ತಂದೆ ಶರಣಪ್ಪ ಕಾಳೂರು ವ;35 ಜಾ; ಕಬ್ಬಲಿಗ ಉ; ಒಕ್ಕಲುತನ ಸಾ; ಯಲ್ಹೇರಿ ತಾ; ಗುರುಮಿಠಕಲ್ ಜಿ; ಯಾದಗಿರಿ ಈತನ ಹತ್ತಿರ ನಗದು ಹಣ 10500=00 ರೂ ಸಿಕ್ಕಿದ್ದು 4) ಮಹೇಶಕುಮಾರ ತಂದೆ ಮಲ್ಲರೆಡ್ಡಿ ಹೊಸಗೌಡರ ವ;36 ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಕೂಡ್ಲೂರ ತಾ; ಜಿ; ಯಾದಗಿರಿ ಈತನ ಹತ್ತಿರ ನಗದು ಹಣ 8500=00 ರೂ ಸಿಕ್ಕಿದ್ದು 5) ಸಂತೋಷ ತಂದೆ ನಾರಾಯಣ ಪುಸಾಲ ವ;39 ಜಾ; ಕಬ್ಬಲಿಗ ಉ; ಹೊಟೇಲ ಕೆಲಸ ಸಾ; ಜಿಲ್ಲಾಪೂರ ತಾ; ಜಿ; ನಾರಾಯಣಪೇಠ ಈತನ ಹತ್ತಿರ 6500-00 ಸಿಕ್ಕಿದ್ದು ಮತ್ತು ನೆಲದ ಮೇಲೆ ಬಿದ್ದಿದ್ದ 20 ಇಸ್ಪೀಟ ಎಲೆಗಳು ಸಿಕ್ಕಿದ್ದು, ಹಿಗೇ ಒಟ್ಟು ಹಣ 43800=00 ರೂ, ನಗದು ಹಣ ಮತ್ತು 52 ಇಸ್ಪೀಟ ಎಲೆಗೆಳು ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ನಮ್ಮ ತಾಬೆಗೆ ತೆಗೆದುಕೊಂಡು ನಂತರ ಜಪ್ತಿ ಪಂಚನಾಮೆಯನ್ನು ದಿನಾಂಕ; 15/02/2022 ರಂದು 5-40 ಪಿಎಮ್ ದಿಂದ 6-40 ಪಿಎಮ್ ವರೆಗೆ ಪಂಚರ ಸಮಕ್ಷಮ ಕೈಕೊಂಡು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 7-00 ಪಿಎಮ್ ಕ್ಕೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿಪಂಚನಾಮೆಯ ಸಮೇತ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ತಮಗೆ ಒಪ್ಪಿಸಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.25/2022 ಕಲಂ.79, 80 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ. 26/2022 ಕಲಂ. 269 ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 : ಇಂದು ದಿನಾಂಕ; 15/02/2022 ರಂದು 8-40 ಪಿ.ಎಮ್ ಕ್ಕೆ ಶ್ರೀ ವೀರಣ್ಣ ಪಿ.ಎಸ್.ಐ ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಕನರ್ಾಟಕ ರಾಜ್ಯ ಸರಕಾರ ಆದೇಶ ಸಂ.ಆರ್ಡಿ/158/ಟಿಎನ್ಆರ್/2020 ದಿನಾಂಕ; 29/01/2022 ನೇದ್ದರ ಹೊರಡಿಸಿದ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಕರ್ಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಯಾವುದೇ ಪ್ರತಿಭಟನೆಗಳು, ರ್ಯಾಲಿಗಳು, ಮಾಡದಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಹಿಗೀದ್ದು ದಿನಾಂಕ 15.02.2022 ರಂದು 12.00 ಪಿ.ಎಮ್ ಗಂಟೆ ಸುಮಾರಿಗೆ ಯಾದಗಿರಿ ನಗರದಲ್ಲಿ ರೈಲ್ವೆನಿಲ್ದಾಣದಿಂದ ಸರಕಾರಿ ಡಿಗ್ರಿ ಕಾಲೇಜವರೆಗೆ ಸಂತ ಶ್ರೀ ಸೇವಾಲಾಲ ಸಮಿತಿ ಯಾದಗಿರಿ ಜಿಲ್ಲಾ ವತಿಯಿಂದ ಸಂತ ಶ್ರೀ ಸೇವಾಲಾಲ ರವರ ಜಯಂತಿ ಆಚರಣೆ ಕುರಿತು ಮೆರವಣಿಗೆಯನ್ನು ಮಾಡುತ್ತಿದ್ದು ಬಂದೋಬಸ್ತ ಕುರಿತು ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಹೋದಾಗ ನಾನು ಮತ್ತು ಸಿಬ್ಬಂದಿಯವರಾದ ಅಬ್ದುಲಬಾಷಾ ಪಿ.ಸಿ.237 ಜೀಪ ಚಾಲಕ, ಸಾಬರೆಡ್ಡಿ ಪಿಸಿ-379 ರವರು ಕೂಡಿಕೊಂಡು ಹೋದಾಗ ಅಲ್ಲಿ ಸುಮಾರು 400-500 ಜನರು ಗುಂಪು ಗುಂಪಾಗಿ ಸೇರಿದ್ದು ಯಾವುದೇ ದೈಹಿಕ ಅಂತರ ಕಾಪಾಡಿಕೊಳ್ಳದೆ ಮೆರವಣಿಗೆಯಲ್ಲಿ ಭಾಗಿಯಾಗಿ ಡಿಗ್ರಿ ಕಾಲೇಜಗೆ ಮಧ್ಯಾಹ್ನ 3-15 ಗಂಟೆ ವರೆಗೆ ಮೆರವಣಿಗೆ ಸಾಗಿದ್ದು ಸದರಿ ಮೆರವಣಿಗೆಯಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಸಿಕೊಂಡು ನಿಂತು ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಸಕರ್ಾರದ ಆಧೇಶ ಪಾಲಿಸುವಂತೆ ಆದೇಶ ಇದ್ದರೂ ಕೂಡಾ ಸಕರ್ಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ. ಸದರಿ ಮೆರವಣಿಗೆಯಲ್ಲಿ ಸಂತ ಶ್ರೀ ಸೇವಾಲಾಲ ಸಮಿತಿ ಯಾದಗಿರಿ ಜಿಲ್ಲಾ ಆಯೋಜಕ ಅಧ್ಯಕ್ಷ ರಮೇಶ@ ರಾಮು ರಾಠೋಡ ಮತ್ತು ಉಪಾಧ್ಯಕ್ಷ ವಿನೋದ ಬಿ. ರಾಠೋಡ ರವರು ಕೂಡಿಕೊಂಡು ಸಕರ್ಾರದ ಆದೇಶ ಉಲ್ಲಂಘನೆ ಮಾಡಿದ್ದು ಈ ವಿಷಯದ ಬಗ್ಗೆ ಮೇಲಾಧಿಕಾರಿಗಳಲ್ಲಿ ಬಗ್ಗೆ ಚಚರ್ಿಸಿ ವರದಿ ನೀಡುತ್ತಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.26/2022 ಕಲಂ.269 ಐಪಿಸಿ ಮತ್ತು ಕಲಂ. 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
21/2022 ಕಲಂ. 279,337, 338, 304(ಎ) ಐಪಿಸಿ : ದಿನಾಂಕ 14-02-2022 ರಂದು ರಾತ್ರಿ 08-00 ಗಂಟೆಗೆ ಯಾದಗಿರಿ ಶರಣಬಸವ ಆಸ್ಪತ್ರೆಯಿಂದ ಎಮ್.ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಅಲ್ಲಿ ಗಾಯಾಳುವನ್ನು ವಿಚಾರಿಸಿ ಗಾಯಾಳು ಹೇಳಿಕೆ ನೀಡಿದ ಸಾರಂಶವೆನೆಂದರೆ ಇಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಹೊಲಕ್ಕೆ ಶೇಂಗಾ ಅರಿಯಲು ಹೋಗಿದ್ದು ಸಾಯಂಕಾಲ ಶೇಂಗಾ ಅರಿಯುವದು ಮುಗಿದ ನಂತರ ವಾಪಸ ಮನೆಗೆ ಹೋಗಬೇಕಂತ ರೋಡಿಗೆ ಬಂದಿದ್ದು ಆಗ ನಾನು ಮತ್ತು ನಮ್ಮೂರಿನ ಸಂಗಮ್ಮ ಮತ್ತು ಇತರರು ಸೇರಿ ನಿಂತಿರುವಾಗ ನಮ್ಮೂರಿನ ದೇವಿಂದ್ರಪ್ಪ ನ ಆಟೋ ಬಂತು ಆಗ ನಾವೆಲ್ಲರು ಕೂಡಿ ಆತನ ಆಟೋ ನಂ. ಕೆಎ-33. 3630 ನೇದ್ದರಲ್ಲಿ ಕುಳಿತು ಯರಗೊಳ ಗ್ರಾಮಕ್ಕೆ ಸಾಯಂಕಾಲ 06-30 ಗಂಟೆಗೆ ಬೈಪಾಸ ರೋಡಿನ ಮೇಲೆ ಹೋಗುತ್ತಿರುವಾಗ ಆಟೋ ಚಾಲಕನು ತಾನು ನಡೆಸುವ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೆ ಕಟ್ ಮಾಡಿದ್ದರಿಂದ ನಾನು ಮತ್ತು ಸಂಗಮ್ಮ ಇಬ್ಬರು ಆಟೋದಿಂದ ಕೆಳಗೆ ಬಿದ್ದೆವು ಕೆಳಗೆ ಬಿದ್ದಾಗ ನಮಗೆ ಭಾರಿ ಮತ್ತು ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ಅಂತಾ ಪಿಯರ್ಾಧಿ ಸಾರಂಶದ ಮೇಲೀಂದ ಠಾಣಾ ಗುನ್ನೆ ನಂ.21/2022 ಕಲಂ.279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಸದರಿ ಪ್ರಕರಣದಲ್ಲಿ ಗಾಯಾಳು ಸಂಗಮ್ಮ ಈಕೆಯು ದಿನಾಂಕ: 14-02-2022 ರಂದು ರಾತ್ರಿ 09-50 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಮೃತಳ ಅಳಿಯ ಈರಣ್ಣ ಈತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರ ಸಾರಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ. 304(ಎ) ಅಳವಡಿಸಿಕೊಂಡು ತನಿಖೆ ಕಯಗೊಂಡಿದ್ದು ಇರುತ್ತದೆ.

 

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 19/2022 ಕಲಂ 279, 338, 304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿಎಕ್ಟ್ : ನಿನ್ನೆದಿನಾಂಕ: 14/02/2022 ರಂದು ಸಾಯಂಕಾಲ ಫಿಯರ್ಾದಿಯಅಣ್ಣ ಮೃತ ಬಸವರಾಜ ಕೋತಳೆ ಮತ್ತು ಗಾಯಾಳುಗಳಾದ ಅಸದಅಲಿ ಗಳೂಗರ್ಿ, ಗುರುಬಸಪ್ಪ ಹುಂಬರಗಿಇವರುಕೂಡಿತಮ್ಮತಮ್ಮ ಉಳ್ಳಾಗಡ್ಡಿ ಚೀಲಗಳನ್ನು ಆರೋಪಿತನಗೂಡ್ಸ್ ವಾಹನ ಸಂಖ್ಯೆ:ಕೆಎ-06, ಎಬಿ-2350 ನೇದ್ದರಲ್ಲಿತಮ್ಮತಮ್ಮ ಊರುಗಳಿಂದ ಲೋಡ ಮಾಡಿಕೊಂಡು ಬೆಂಗಳೂರ ಕಡೆಗೆ ಹೊರಟಾಗಇಂದು ದಿನಾಂಕ:15/02/2022 ರಂದು 2.30 ಎ.ಎಮ್. ಸುಮಾರಿಗೆ ಮದ್ರಕಿ ಸೀಮಾಂತರದ ಶಹಾಪೂರ-ಕಲಬುರಗಿ ಮುಖ್ಯರಸ್ತೆಯ ಮೇಲೆ ಸಣ್ಣ ಮಾಪಣ್ಣಇವರ ಹೊಲದ ಹತ್ತಿರಆರೋಪಿತನುತನ್ನಗೂಡ್ಸ್ ವಾಹನವನ್ನುಅತಿವೇಗ ಮತ್ತುಅಲಕ್ಷನತದಿಂದ ನಡೆಸಿಕೊಂಡು ಬಂದಿದ್ದರಿಂದಗೂಡ್ಸ ವಾಹನ ಆರೋಪಿತನ ನಿಯಂತ್ರಣತಪ್ಪಿರಸ್ತೆಯಎಡಬದಿಯಲ್ಲಿ ಪಲ್ಟಿಯಾಗಿಅಪಘಾತವಾಗಿದ್ದು ಸದರಿಅಪಘಾತದಲ್ಲಿ ಫಿಯರ್ಾದಿಯಅಣ್ಣ ಬಸವರಾಜಈತನತಲೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಸದಅಲಿ ಈತನಎಡಗಾಲ ತೊಡೆಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದಿದ್ದು, ಗುರುಬಸಪ್ಪಈತನಎಡ ಹಣೆಗೆ ಭಾರಿಗುಪ್ತಗಾಯವಾಗಿ ಭಾವು ಬಂದಿರುತ್ತದೆ. ಆರೋಪಿತನುತನ್ನಗೂಡ್ಸ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸುವಂತೆದೂರುಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 35/2022 ಕಲಂ: 341,323,326,504,506 ಐಪಿಸಿ : ಇಂದು ದಿನಾಂಕ 15/02/2022 ರಂದು 9.00 ಪಿ.ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಈರಯ್ಯ ತಂದೆ ರಾಚಯ್ಯ ಹಿರೇಮಠ ವ|| 35ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಆಲ್ಹಾಳ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನ ಗಂಡು ಮಕ್ಕಳಿದ್ದು ಅವರಲ್ಲಿ 1ನೇದವನು ನಾನು, 2ನೇದವನು ಶಿವಯ್ಯ ಮತ್ತು 3ನೇಯವನು ಗುರಯ್ಯ ಅಂತಾ ಇರುತ್ತೇವೆ. ನಾವೆಲ್ಲರೂ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇವೆ. ಹೀಗಿದ್ದು ಇಂದು ದಿನಾಂಕ 15/02/2022 ರಂದು ಮಧ್ಯಾಹ್ನ 1.40 ಪಿಎಂ ಸುಮಾರಿಗೆ ನಾನು ನಮ್ಮೂರ ಅಗಸಿ ಕಟ್ಟೆಯ ಮೇಲೆ ಕುಳಿತಿದ್ದಾಗ ನಮ್ಮ ತಮ್ಮನಾದ ಶಿವಯ್ಯ ತಂದೆ ರಾಚಯ್ಯ ಹಿರೇಮಠ ವ|| 32ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಆಲ್ಹಾಳ ಈತನು ಮನೆಯಿಂದ ಹೊಲಕ್ಕೆ ಹೋಗುವ ಕುರಿತು ನಮ್ಮೂರ ಅಗಸಿಯ ಹತ್ತಿರ ಇರುವ ಗುರಣ್ಣಗೌಡ ಗೂಗಲ್ ಇವರ ಮನೆಯ ಪಕ್ಕದಲ್ಲಿ ರಸ್ತೆಯ ಮೇಲೆ ಹೋಗುತ್ತಿದ್ದಾಗ ನಮ್ಮೂರ ರೇವಣಸಿದ್ದಪ್ಪ ತಂದೆ ಸಾಯಬಣ್ಣ ರಾಜಾಪೂರ ಈತನು ಬಂದವನೇ ಏನಲೇ ಶಿವ್ಯಾ ಸೂಳೆ ಮಗನೇ ನೀನು ನನ್ನ ಮುಂದೆನೇ ಧಿಮಾಕು ಮಾಡುತ್ತಿಯಾ ಅಂತಾ ಶಿವಯ್ಯನಿಗೆ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯವಾಗಿ ಬೈಯುತ್ತಿದ್ದಾಗ ನಮ್ಮ ತಮ್ಮನು ಯಾಕೋ ರೇವಣಸಿದ್ದ ನಾನು ನಿನಗೇನು ಮಾಡೀನಿ ಅಂತಾ ಕೇಳಿದಾಗ ರೇವಣಸಿದ್ದಪ್ಪನು ನನಗೆ ಸೊಕ್ಕಿನಿಂದ ಮಾತನಾಡುತ್ತಿಯಾ ಮಗನೇ ಅಂದವನೇ ಅಲ್ಲಿಯೇ ನೆಲದ ಮೇಲೆ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಏಕಾಏಕಿ ನಮ್ಮ ತಮ್ಮನಾದ ಶಿವಯ್ಯನ ಬಲಗಡೆಯ ಕಪಾಳಕ್ಕೆ ಹೊಡೆದು ಭಾರೀ ಗುಪ್ತಗಾಯ ಮಾಡಿದನು. ಆಗ ನಮ್ಮ ತಮ್ಮನು ಸತ್ತೆನೆಪ್ಪೋ ಅಂತಾ ನೆಲಕ್ಕೆ ಬಿದ್ದಿದ್ದು ರೇವಣಸಿದ್ದಪ್ಪನು ಶಿವಯ್ಯನಿಗೆ ಕೈಯಿಂದ ಹೊಡೆಯುತ್ತಿದ್ದಾಗ ತಕ್ಷಣ ನಾನು ಮತ್ತು ಅಲ್ಲಿಯೇ ರಸ್ತೆ ಮೇಲೆ ಹೋಗುತ್ತಿದ್ದ ನಮ್ಮೂರ ರಾಮನಗೌಡ ತಂದೆ ಬಸನಗೌಡ ಗೂಗಲ್ ಇಬ್ಬರೂ ಕೂಡಿ ಹೋಗಿ ಜಗಳ ಬಿಡಿಸಿಕೊಂಡೆವು. ಆಗ ರೇವಣಸಿದ್ದಪ್ಪನು ನಮ್ಮ ತಮ್ಮನಿಗೆ ಹೊಡೆಯುವುದು ಬಿಟ್ಟು ಇದೊಂದು ಸಲ ಜಗಳ ಬಿಡಸ್ಯಾರ ಅಂತಾ ಉಳಿದೀದಿ ಮಗನೇ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದನು. ಆಗ ನಾವು ನಮ್ಮ ತಮ್ಮನಿಗೆ ಎಬ್ಬಿಸಿ ನೋಡಲಾಗಿ ಕಲ್ಲಿನ ಏಟಿನಿಂದ ಬಲಗಡೆಯ ದವಡೆಯ ಹಲ್ಲು ಮುರಿದು ಬಾಯಿಯಿಂದ ರಕ್ತ ಬರುತ್ತಿದ್ದುದರಿಂದ ನಾನು ಮತ್ತು ರಾಮನಗೌಡ ಇಬ್ಬರೂ ಕೂಡಿ ನಮ್ಮನಾದ ಶಿವಯ್ಯನಿಗೆ ರಾಮನಗೌಡರ ಕಾರಿನಲ್ಲಿ ಹಾಕಿಕೊಂಡು ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ನಮ್ಮ ತಮ್ಮನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ವಿಜಯಪೂರದ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಬಂದಿದ್ದು ಇರುತ್ತದೆ.ಆದ್ದರಿಂದ ವಿನಾಕಾರಣವಾಗಿ ನಮ್ಮ ತಮ್ಮನಾದ ಶಿವಯ್ಯ ಹಿರೇಮಠ ಈತನಿಗೆ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯವಾಗಿ ಬೈಯ್ದು ಕಲ್ಲಿನಿಂದ ಬಲಗಡೆ ಕಪಾಳಕ್ಕೆ ಹೊಡೆದು ಹಲ್ಲು ಮುರಿದು ಭಾರೀ ರಕ್ತಗಾಯ ಪಡಿಸಿದ ರೇವಣಸಿದ್ದಪ್ಪ ತಂದೆ ಸಾಯಬಣ್ಣ ರಾಜಾಪೂರ ಸಾ|| ಆಲ್ಹಾಳ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿಯಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 35/2022 ಕಲಂ 341, 323, 326, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ :-
ಗುನ್ನೆ ನಂ 11/2022 ಕಲಂ279, 337, 338, ಐಪಿಸಿ ಸಂ. 187 ಐ.ಎಮ್.ವ್ಹಿ ಕಾಯ್ದೆ : ದಿನಾಂಕ:15/02/2022 ರಂದು ಫಿರ್ಯಾದಿಯ ಬೀಗರು ಹೊರಹಟ್ಟಿಯಲ್ಲಿ ಗ್ರಾಮದಲ್ಲಿ ದೇವರ ಕಾರ್ಯಕ್ರಮ ಮಾಡಿದ್ದರಿಂದ ಫಿರ್ಯಾದಿ & ಗಾಯಾಳು ರಂಗನಾಥ ಇಬ್ಬರೂ ಕೂಡಿ ಹೊರಹಟ್ಟಿ ಗ್ರಾಮಕ್ಕೆ ಹೋಗಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ವಾಪಸು ಊರಿಗೆ ಹೋಗಲು ಮೋಟಾರ್ ಸೈಕಲ್ಲ ನಂ:ಕೆಎ-33ಯು-5925 ನೇದ್ದರ ಮೇಲೆ ಹೊರಟು ಹುಣಸಗಿ-ನಾರಾಯಣಪೂರ ರೊಡಿನ ಮೇಲೆ ಹುಣಸಗಿ ಸೀಮಾಂತರದ ಆಲಮೇಶ್ವರ ಕ್ಯಾಂಪ್ ಹತ್ತಿರ ರಸ್ತೆಯ ಮೇಲೆ ಹೊರಟಾಗ ಬಲಶೆಟ್ಟಿಹಾಳ ಕಡೆಯಿಂದ ಒಂದು ಕಾರ್ ನಂ: ಕೆಎ-33 ಎಮ್-9493 ನೇದ್ದರ ಚಾಲಕನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಹೊರಟ ಮೋಟಾರ್ ಸೈಕಲ್ಲಗೆ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ ಹಾಗೂ ಗಾಯಾಳು ಇಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದು, ಫಿರ್ಯಾದಿಗೆ ಎಡಗಡೆ ಗಲ್ಲಕೆ ಎಡಗೈ ಮುಂಗೈಗೆ & ಬಲಗಾಲ ಮೊಳಕಾಲ ಮೇಲ್ಬಾಗ ತರಚಿದ ರಕ್ತಗಾಯಗಳಾಗಿದ್ದು, ಗಾಯಾಳು ರಂಗನಾಥ ಈತನಿಗೆ ಎಡಗಾಲ ಮೊಳಕಾಲ ತೊಡೆಯ ಹತ್ತಿರ ಕಾಲು ಮುರಿದಿದ್ದು, & ತಲೆಗೆ ಭಾರಿ ಓಳಪೆಟ್ಟಾಗಿದ್ದು, ಎಡಗಡೆ ಕಿವಿಗೆ ಹತ್ತಿರ ಹಿಂಬಾಗದಲ್ಲಿ ಭಾರಿ ರಕ್ತಗಾಯವಾದ ಬಗ್ಗೆ ಅಪರಾಧ.

ಇತ್ತೀಚಿನ ನವೀಕರಣ​ : 16-02-2022 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080