ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-04-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ 143,147,148, 323, 324, 354, 504, 506 ಸಂ 149 ಐ.ಪಿ.ಸಿ : ದಿನಾಂಕ:15.04.2022 ರಂದು 07.00 ಎಎಮ್ ಪಿರ್ಯಾಧಿಯು ತಮ್ಮ ತಿಪ್ಪೆಯಲ್ಲಿ ಕಸ ಚಲ್ಲುವದಕ್ಕೆ ಹೋದಾಗ ಆರೋಪಿತಳು ಸಂಡಾಸ್ ಕುಳಿತ್ತಿದ್ದು ಇಲ್ಲಿ ಯಾಕೆ ಸಂಡಾಸ್ ಕುಳಿತ್ತಿದಿ ಅಂತಾ ಕೇಳಿದಕ್ಕೆ ಜಗಳ ತೆಗದಿದ್ದು ಈ ಜಗಳವನ್ನು ನೋಡಿ ಉಳಿದ ಆರೋಪಿತರು ಕಲ್ಲು ಬಡಿಗೆ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 56/2022 ಕಲಂ 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 15/04/2022 ರಂದು 11 ಎ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಸರಕಾರಿ ತಪರ್ೆ ಪಿಯರ್ಾದಿದಾರರಾದ ಶ್ರೀ ಸುನೀಲ್ ವಿ ಮೂಲಿಮನಿ ಪಿಐ ಶೊರಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ:15/04/2022 ರಂದು 8 ಎ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಾಸಪೂರ ಸೀಮಾಂತರದ ಕೆನಾಲ ಹತ್ತಿರ ಇರುವ ಸರಕಾರಿ ಗುಡ್ಡದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿಯಲ್ಲಿದ್ದ ಸಿಬ್ಬಂದಿಯವರಾದ 1) ಮಹೇಶಸಿಹೆಚ್.ಸಿ-126 2) ಹುಸೇನ್ ಸಿಪಿಸಿ-236 3) ಸಿದ್ರಾಮರೆಡ್ಡಿ ಸಿಪಿಸಿ-423 ಇವರೆಲ್ಲರಿಗೂ ವಿಷಯ ತಿಳಿಸಿ, ಸಿದ್ದರಾಮರೆಡ್ಡಿ ಸಿಪಿಸಿ-423 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ ಸಿದ್ದರಾಮರೆಡ್ಡಿ ಸಿಪಿಸಿ ರವರು ಇಬ್ಬರು ಪಂಚರಾದ 1) ರಾಚಯ್ಯಸ್ವಾಮಿ ತಂದೆ ಚನ್ನಬಸಯ್ಯಸ್ವಾಮಿ ಹಿರೇಮಠ ವ|| 37 ವರ್ಷ ಜಾ|| ಜಂಗಮ ಉ|| ಒಕ್ಕಲುತನ ಸಾ|| ಲಕ್ಷ್ಮೀಪೂರ ತಾ|| ಸುರಪೂರ 2) ನಾಗಪ್ಪ ತಂದೆ ರಾಮಣ್ಣ ಬಾಲರ ವ|| 20 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕೃಷ್ಣಾಪೂರ ತಾ|| ಸುರಪೂರ ಇವರನ್ನು 8:30 ಎ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 8:45 ಎ.ಎಂ ಕ್ಕೆ ಸರಕಾರಿ ಜೀಪ್ ನಂ. ಕೆಎ-33 ಜಿ-0238 ನೇದ್ದರಲ್ಲಿ ಠಾಣೆಯಿಂದ ಹೊರಟು 9:15 ಎ.ಎಂ ಕ್ಕೆ ಬಿಜಾಸಪೂರ ಗ್ರಾಮದ ಕೇನಾಲ ಹತ್ತಿರ ಇರುವ ಸರಕಾರಿ ಗುಡ್ಡದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸರಕಾರಿ ಗುಡ್ಡದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 9:20 ಎ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 04 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಮಲ್ಲಪ್ಪ ತಂದೆ ದಂಡಪ್ಪ ಕನಕಗಿರಿ ವ|| 40 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಹತ್ತಿಗುಡುರ ತಾ|| ಶಹಾಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂ.ಗಳು ವಶಪಡಿಸಿಕೊಳ್ಳಲಾಯಿತು. 2) ಭೀಮಣ್ಣ ತಂದೆ ಮಲ್ಲಯ್ಯ ಮಾತರ್ಾಳವ|| 50 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಲಕ್ಷ್ಮಿಪುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 250/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಮಾಳಪ್ಪ ತಂದೆ ನಿಂಗಪ್ಪ ಗುಡಸಲದಾರ ವ|| 30 ವರ್ಷ ಜಾ|| ಕುರಬರ ಉ|| ಕುರಿ ಕಾಯುವ ಕೆಲಸ ಸಾ|| ಲಕ್ಷ್ಮಿಪುರ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 200/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಹಣಮಂತ ತಂದೆ ದಂಡಪ್ಪ ಗವಿ ವ|| 28 ವರ್ಷ ಜಾ|| ಕುರಬರ ಉ|| ಚಾಲಕ ಸಾ|| ದಿವಳಗುಡ್ಡ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 200/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 1500/-ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 2500/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 9:20 ಎ.ಎಮ್ ದಿಂದ 10:20 ಎ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 04 ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 10:40 ಎ.ಎಂ ಕ್ಕೆ ಬಂದಿದ್ದು, ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿ ಸಾರಾಂಶ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 68/2022 ಕಲಂ: 448, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 15/04/2022 ರಂದು 5.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶಶಿಕಲಾ ಗಂಡ ತುಳಜಪ್ಪ ರಾಠೋಡ ವ|| 45ವರ್ಷ ಜಾ|| ಚೆನ್ನದಾಸರ ಉ|| ಮುಖ್ಯ ಗುರುಗಳು ಸಕರ್ಾರಿ ಪ್ರೌಢಶಾಲೆ ಗಾಣದಾಳ ತಾ|| ಜಿ|| ರಾಯಚೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿಯ ಸಾರಾಂಶವೇನೆಂದರೆ, ನನ್ನ ಗಂಡನಾದ ತುಳಜಪ್ಪ ತಂದೆ ದೇವಪ್ಪ ರಾಠೋಡ ಇವರು ಈ ಹಿಂದೆ ಗುತ್ತಿಗೆದಾರರಾಗಿ ಕೆಲಸ ಮಾಡುವಾಗ ಕೆಂಭಾವಿಯಲ್ಲಿ ನನಗೂ ಅವರಿಗೂ ಪರಿಚಯವಾಗಿ ಇಬ್ಬರೂ ಅಂತಜರ್ಾತಿ ವಿವಾಹ ಮಾಡಿಕೊಂಡು ಕೆಂಭಾವಿಯಲ್ಲಿ ವಾಸವಾಗಿದ್ದೆವು. ನಂತರ ನನ್ನ ಗಂಡನಿಗೆ ರಾಯಚೂರ ಶಕ್ತಿನಗರದ ಥರ್ಮಲ್ ಪ್ಲಾಂಟನಲ್ಲಿ ಜೂನಿಯರ್ ಇಂಜಿನೀಯರ ಕರ್ತವ್ಯ ನಿರ್ವಹಿಸುತ್ತಿದ್ದರು. ನಾವು ಕೆಂಭಾವಿಯಲ್ಲಿ ವಾಸವಾಗಿದ್ದಾಗ ನನ್ನ ಗಂಡನವರಾದ ತುಳಜಪ್ಪರವರು 20ವರ್ಷಗಳ ಹಿಂದೆ ಕೆಂಭಾವಿ ಪಟ್ಟಣದ ಪ್ಲಾಟ ನಂ 16-43 ನೇದ್ದನ್ನು ಖರೀದಿಸಿ ಸದರಿ ಪ್ಲಾಟಿನಲ್ಲಿ ಒಂದು ಕಾಂಪ್ಲೆಕ್ಸ್ ನಿಮರ್ಾಣ ಮಾಡಿದ್ದು ನಾನು ಮತ್ತು ನನ್ನ ಗಂಡ ಇಬ್ಬರೂ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದುದರಿಂದ ನಮ್ಮ ಕಾಂಪ್ಲೆಕ್ಸನ್ನು ಬಾಡಿಗೆಗೆ ಕೊಡುತ್ತಾ ಬಂದಿದ್ದೇವೆ. ಕಾಂಪ್ಲೆಕ್ಸ್ ನನ್ನ ಗಂಡನ ಹೆಸರಿನಲ್ಲಿದ್ದು ನನ್ನ ಗಂಡನು 14ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದು ನನ್ನ ಗಂಡನ ಮರಣದ ನಂತರ ಸದರಿ ಕಾಂಪ್ಲೆಕ್ಸನ್ನು ನನ್ನ ಹೆಸರಿಗೆ ವಗರ್ಾಯಿಸಿಕೊಳ್ಳಲು ನಾನು ಉಪನೋಂದಣಾಧಿಕಾರಿಗಳು ಸುರಪೂರರವರಲ್ಲಿ ಅಜರ್ಿ ಸಲ್ಲಿಸಿದಾಗ ನನ್ನ ಗಂಡನ ಅಣ್ಣ ತಮ್ಮಂದಿರರು ಅದಕ್ಕೆ ತಕರಾರು ಮಾಡಿ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಮಾನ್ಯ ಜೆ.ಎಂ.ಎಫ್.ಸಿ ಸುರಪೂರದಲ್ಲಿ ದಾವೆ ನಡೆದು ನನ್ನ ಹೆಸರಿಗೆ ಕಾಂಪ್ಲೆಕ್ಸ್ ವಗರ್ಾವಣೆಯಾಗಲು ಆದೇಶ ಮಾಡಿದ್ದರಿಂದ ನಾನು ನನ್ನ ಹೆಸರಿಗೆ 2012 ನೇ ಸಾಲಿನಲ್ಲಿ ವಗರ್ಾವಣೆ ಮಾಡಿಕೊಂಡು ಅದನ್ನು ಬಾಡಿಗೆಗೆ ಕೊಡಲು ಬಂದಾಗ ನನ್ನ ಗಂಡನ ಅಣ್ಣ ತಮ್ಮಂದಿರರು ಬಾಡಿಗೆ ತೆಗೆದುಕೊಳ್ಳುವವರಿಗೆ ತಕರಾರು ಮಾಡುತ್ತಾ ಬಂದಿದ್ದರಿಂದ ಇಲ್ಲಿಯವರೆಗೆ ಖಾಲಿ ಬಿಟ್ಟಿರುತ್ತೇನೆ. ಆದರೆ ನಾನು ಈ ವರ್ಷ ನನಗೆ ಪರಿಚಯ ಇರುವ ಸೋಫಿಸಾಬ ನಾಶಿ ಸಾ|| ಕೆಂಭಾವಿ ಇವರಿಗೆ ಕರಾರಿನ ಮೇರೆಗೆ ಕಾಂಪ್ಲೆಕ್ಸನ್ನು ಬಾಡಿಗೆಗೆ ಕೊಟ್ಟಿದ್ದೇನೆ. ಹೀಗಿದ್ದು 15 ದಿನಗಳ ಹಿಂದೆ ನಮ್ಮ ಅಂಗಡಿ ಬಾಡಿಗೆಗೆ ತೆಗೆದುಕೊಂಡಿರುವ ಸೋಫಿಸಾಬ ನಾಶಿ ಇವರು ಅಂಗಡಿಯನ್ನು ತೆರೆದು ಅದರಲ್ಲಿ ಸಾಮಾನು ಇಡಲು ಹೋದಾಗ ನನ್ನ ಗಂಡನ ಅಣ್ಣ ತಮ್ಮಂದಿರರಾದ 1) ಮಾನಪ್ಪ ತಂದೆ ದೇವಪ್ಪ ರಾಠೋಡ, 2) ಗ್ಯಾನಪ್ಪ ತಂದೆ ದೇವಪ್ಪ ರಾಠೋಡ, 3) ಚಂದ್ರಶೇಖರ ತಂದೆ ದೇವಪ್ಪ ರಾಠೋಡ, 4) ಚಾಂದಿಬಾಯಿ ಗಂಡ ಚಂದ್ರಶೇಖರ ರಾಠೋಡ ಇವರು ನಮ್ಮ ಕಾಂಪ್ಲೆಕ್ಸಗೆ ಬಂದು ನಮ್ಮ ಅಂಗಡಿ ಬಾಡಿಗೆಗೆ ತೆಗೆದುಕೊಂಡ ಸೋಫಿಸಾಬ ಇವರಿಗೆ ದೂರವಾಣಿ ಮೂಲಕ ಹೆದರಿಸುತ್ತಾ ಈ ಅಂಗಡಿ ನಮ್ಮದು ಇದರಲ್ಲಿ ಯಾರೂ ಬಾಡಿಗೆ ಇರುವಂತಿಲ್ಲ ಅಂತಾ ತಕರಾರು ಮಾಡಿ ಅಂಗಡಿಗೆ ಬೀಗ ಹಾಕಿದ್ದರಿಂದ ಸೋಫಿಸಾಬ ಇವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದರು. ನಂತರ ದಿನಾಂಕ 01/04/2022 ರಂದು 7.00 ಪಿಎಂ ಸುಮಾರಿಗೆ ನಾನು ಕೆಂಭಾವಿಗೆ ಬಂದು ನಮ್ಮ ಕಾಂಪ್ಲೆಕ್ಸ್ ಹತ್ತಿರ ಹೋಗಿ ನಮ್ಮ ಅಂಗಡಿ ಬಾಡಿಗೆಗೆ ತೆಗೆದುಕೊಂಡ ಸೋಫಿಸಾಬ ಇವರಿಗೆ ಹೇಳಿ ಅಂಗಡಿಯ ಬೀಗ ತೆಗೆಸಿ ನಾನು ಅಂಗಡಿಯ ಒಳಗೆ ಕುಳಿತೆನು. ಅದೇ ಸಮಯಕ್ಕೆ ಮೇಲ್ಕಾಣಿಸಿದ ನನ್ನ ಗಂಡನ ಅಣ್ಣ ತಮ್ಮಕೀಯ ಚಂದ್ರಶೇಖರ ತಂದೆ ದೇವಪ್ಪ ರಾಠೋಡ ಮತ್ತು ಚಾಂದಿಬಾಯಿ ಗಂಡ ಚಂದ್ರಶೇಖರ ರಾಠೋಡ ಇವರು ನಮ್ಮ ಅಂಗಡಿಯ ಒಳಗೆ ಅತಿಕ್ರಮ ಪ್ರವೇಶ ಮಾಡಿ ಈ ಅಂಗಡಿ ನಮ್ಮ ತಮ್ಮನದು ಇದೆ ನಿನಗೆ ಇಲ್ಲಿ ಅವಕಾಶವಿಲ್ಲ ಹೊರಗೆ ನಡೆ ಅಂತಾ ನನಗೆ ಬೈಯುತ್ತಾ ನನ್ನ ಅಂಗಡಿಯಿಂದ ನನಗೆ ಹೊರಗೆ ಹಾಕಲು ಪ್ರಯತ್ನಿಸಿದಾಗ ನಾನು ನನ್ನ ಗಂಡನ ಅಂಗಡಿ ನನ್ನ ಹೆಸರಿಗೆ ಇದೆ. ಇದಕ್ಕೂ ನಿಮಗೂ ಯಾವುದೇ ಸಂಬಂಧ ಇಲ್ಲ. ನೀವು ನಮ್ಮ ಅಂಗಡಿಯಲ್ಲಿ ಏಕೆ ಬಂದಿದ್ದಿರಿ ಅಂದಾಗ ಅವರು ನನಗೆ ಅವಾಚ್ಯವಾಗಿ ಬೈಯುತ್ತಾ ಇನ್ನು ಮುಂದೆ ಯಾರಿಗಾದರೂ ಬಾಡಿಗೆಗೆ ಕೊಟ್ಟರೆ ಅಂಗಡಿ ಬೀಗ ಹಾಕುವುದಲ್ಲದೇ ಅಂಗಡಿಯ ಸಮೀಪ ಇನ್ನೊಮ್ಮೆ ಬಂದರೆ ನಿನಗೆ ಜೀವಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ನಂತರ ಅವರು ಸುಮ್ಮನೆ ಬಿಡುತ್ತಾರೆ ಅಂತಾ ತಿಳಿದು ನಾನು ರಾಯಚೂರಿಗೆ ಹೋದೆನು. ಆದರೆ ಅವರು ಮತ್ತೆ ನಮ್ಮ ಅಂಗಡಿ ಬಾಡಿಗೆಗೆ ತೆಗೆದುಕೊಂಡ ಸೋಫಿಸಾಬನು ಅಂಗಡಿಯ ಹತ್ತಿರ ಹೋದಾಗ ಬೀಗ ಹಾಕಿ ಅಂಗಡಿ ತೆಗೆಯದಂತೆ ಮಾಡುತ್ತಿದ್ದು, ಇದರ ಬಗ್ಗೆ ನಾನು ಮನೆಯಲ್ಲಿ ವಿಚಾರಿಸಿಕೊಂಡು ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು ನನ್ನ ಕಾಂಪ್ಲೆಕ್ಸನಲ್ಲಿ ಅತಿಕ್ರಮ ಪ್ರವೇಶ ಮಾಡಿ ಅಂಗಡಿಯನ್ನು ತೆಗೆಯದಂತೆ ಬಾಡಿಗೆದಾರರಿಗೆ ತೊಂದರೆ ಕೊಟ್ಟಿದ್ದು ಅಲ್ಲದೇ ಕೇಳಲು ಹೋದ ನನಗೂ ಕೂಡ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಅಂಗಡಿಯ ಬೀಗ ತೆಗೆಯದ ಮಾನಪ್ಪ ರಾಠೋಡ ಹಾಗೂ ಇತರ 3 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 68/2022 ಕಲಂ 448, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 48/2022.ಕಲಂ. ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 : ಇಂದು ದಿನಾಂಕ:15/04/2022 ರಂದು 06:30 ಪಿ.ಎಮ್ ಕ್ಕೆ ಶ್ರೀರಾಜಕುಮಾರ ಜಾಮಗೊಂಡ. ಪಿ.ಎಸ್.ಐ.(ಕಾ.ಸು) ಯಾದಗಿರಿ ಗ್ರಾಮೀಣ ಠಾಣೆ ರವರು ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೋಂದಿಗೆ ಠಾಣೆಗೆ ಒಂದು ವರದಿ ನೀಡಿದ ಸಾರಾಂಶವೆನೆಂದರೆ, ನಾನು ರಾಜಕುಮಾರ ಜಾಮಗೊಂಡ. ಪಿ.ಎಸ್.ಐ.(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಸಂಗಡ ಸಿಬ್ಬಂದಿಯವರಾದ ಬಸವರಾಜ ಪಿ.ಸಿ -185, ಭಿಮರಾಯ-33 ಎಲ್ಲರು ಕೂಡಿಕೊಂಡು ಸರಕಾರಿ ವಾಹನ ಸಂಖ್ಯೆ ಕೆಎ33/ಜಿ/0115 ನೇದ್ದರಲ್ಲಿ ಕುಳಿತುಕೊಂಡು ಇಂದು ದಿನಾಂಕ 15/04/2022 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಮುಂಡರಗಿ ಗ್ರಾಮಕ್ಕೆ ಭೇಟಿ ನೀಡಿ ಮರಳಿ ಯಾದಗಿರಿ ಕಡೆ ಬರುವಾಗ ಒಂದು ಬಾತ್ಮಿ ಬಂದಿದ್ದೆನೆಂದರೆ ರಾಮಸಮುದ್ರ ಗ್ರಾಮದಲ್ಲಿ ಯಾರೊ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾವು ಮತ್ತು ಸಹಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಾದ 1) ಶ್ರೀ ಮುನಿಯಪ್ಪ ತಂದೆ ದೇವಿಂದ್ರಪ್ಪ ಕಡೆಚೂರ ವ:32 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಅರಿಕೆರಿ(ಕೆ) ಮೊ,ನಂ9008240729. 2) ಶ್ರೀ ಕೇಸು ತಂದೆ ಗಾಂಜಿ ಪವಾರ ವ :45 ವರ್ಷ ಜಾ :ಲಮಾಣಿ ಉ :ಒಕ್ಕಲುತನ ಸಾ :ರಾಮಸಮುದ್ರ ತಾಂಡ.ಮೊ,ನಂ,9632024134. ಇವರಿಗೆ ದಾಳಿಯ ಬಗ್ಗೆ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ರಾಮಸಮುದ್ರ ಗ್ರಾಮದ ಹಾಲಿನ ಡೈರಿ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಅಂತಾ ಕೂಗುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮದ್ಯಾಹ್ನ 4:45 ಗಂಟೆಗೆ ಅವನನ್ನು ನಮ್ಮ ವಶಕ್ಕೆ ಪಡೆದು ಅವನು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ರವಿ ತಂದೆ ಮಹಾದೇವಪ್ಪ ದುಗನೂರು ವಯ:22 ಜಾ; ಬೇಡರ ಉ: ಒಕ್ಕಲತನ ಸಾ:ರಾಮಸಮುದ್ರ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ನಗದು ಹಣ 1250/ ರೂ 2)ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು 4) ಒಂದು ಬಾಲಪೆನ್.ಅ.ಕಿ=.00 ಒಟ್ಟು 1250/-ರೂ ಗಳ ಸಿಕ್ಕಿದ್ದು. ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಮಟಕಾ ನಂಬರ ಯಾರಿಗೆ ಕೊಡುತ್ತಿ ಎಂದು ವಿಚಾರಿಸಿದಾಗ ನಾನೇ ಇಟ್ಟುಕೊಳ್ಳುತ್ತೆನೆ ಎಂದು ಹೇಳಿದನು .ಈ ಸವಿಸ್ತಾರವಾದ ಪಂಚನಾಮೆಯನ್ನು ಮದ್ಯಾಹ್ನ 5:00 ಗಂಟೆಯಿಂದ 6:00 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಸಾಯಂಕಾಲ 06:30 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಮುಂದಿನ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ.ಅಂತಾ ಒಂದು ವರದಿ ಸಾರಂಶದ ಪ್ರಕಾರ ಠಾಣೆ ಗುನ್ನೆ.ನಂ. 48/2022 .ಕಲಂ. ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ ಕಾಯ್ದೆ 2021 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 30/2022 ಕಲಂ: 279, 338 ಐಪಿಸಿ ಸಂಗಡ 187 ಐಎಮ್.ವಿ ಯಾಕ್ಟ : ಇಂದು ದಿನಾಂಕ: 15/04/2022 ರಂದು 07.15 ಪಿ.ಎಮ್ ಕ್ಕೆ ಶ್ರೀಮತಿ. ಯಲ್ಲಮ್ಮ ಗಂಡ ಬಸ್ಸಣ್ಣ ಇಳಗೇರ ವಯಾ:60 ವರ್ಷ ಉ: ಮನೆಗೆಲಸ ಜಾ: ಇಳಗೇರ ಸಾ: ಪಿಲ್ಟರ್ ಬೆಡ್ ಏರಿಯಾ ಶಹಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರು ಒಂದು ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಮಗನಾದ ಶಿವಕುಮಾರ ತಂದೆ ಬಸ್ಸಣ್ಣ ಮೂರು ಜನರು ವಾಸವಾಗಿರುತ್ತೇವೆ. ನನ್ನ ಮಗ ಶಿವಕುಮಾರ ಈತನು ಗೌಂಡಿ ಕೆಲಸ ಮಾಡಿಕೊಂಡು ನಮ್ಮ ಮನೆಯ ಜವಬ್ದಾರಿಯನ್ನು ನೋಡಿಕೊಂಡು ಹೋಗುತ್ತಾನೆ. ಹೀಗಿದ್ದು, ದಿನಾಂಕ: 12/04/2022 ರಂದು ಬೇಳಿಗ್ಗೆ 10.30 ಗಂಟೆ ಸುಮಾರಿಗೆ ನನ್ನ ಮಗನಾದ ಶಿವಕುಮಾರ ತಂದೆ ಬಸ್ಸಣ್ಣ ಇಳಗೇರ ವಯಾ:25 ಜಾ: ಇಳಗೇರ ಈತನು ಕೆಂಬಾವಿಯಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮೋಟಾರ ಸೈಕಲ್ ನಂ: ಕೆಎ-03-ಎಲ್-8235 ನೇದ್ದನ್ನು ತಗೆದುಕೊಂಡು ಹೋಗಿದ್ದನು. ನಂತರ ಸ್ವಲ್ಪ ಸಮಯದಲ್ಲಿಯೇ ಅಂದರೆ, ಬೆಳಿಗ್ಗೆ 10.45 ಎಎಂ ಸುಮಾರಿಗೆ ನನ್ನ ಮಗನು ತನ್ನ ಮೋಟಾರ ಸೈಕಲ್ ಮೇಲೆ ಶಹಾಪೂರ-ಸಿಂದಗಿ ಮೇನ್ ರೋಡಿನ ಗೋಗಿ ಕೆ ಗ್ರಾಮದಲ್ಲಿಯ ಸರಕಾರಿ ಆಸ್ಪತ್ರೆಯ ಕ್ರಾಸ್ ದಿಂದ 30 ಮೀಟರ ಪೂರ್ವಕ್ಕೆ ರೋಡಿನಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಬಂದ ಒಂದು ಟಾಟಾ ಏಸ್ ಗೂಡ್ಸ ವಾಹನ ನಂ: ಕೆಎ-33-ಬಿ-2959 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮಗನು ನಡೆಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ನಂ: ಕೆಎ-03-ಎಲ್-8235 ನೇದ್ದಕ್ಕೆೆ ಎದುರಿನಿಂದ ಡಿಕ್ಕಿ ಪಡೆಸಿ ಅಪಘಾತ ಮಾಡಿರುತ್ತಾನೆ. ಅಪಘಾತದಿಂದ ನನ್ನ ಮಗನಿಗೆ ಎಡಗಾಲಿನ ಮೋಳಕಾಲಿಗೆ ಮತ್ತು ಮೋಳಕಾಲಿನ ಕೆಳಗೆ ಭಾರಿ ರಕ್ತಗಾಯ ಆಗಿದ್ದು, ಎಡಗೈ ಬೆರಳಿಗೆ ಮತ್ತು ಬಲಗೈ ಬುಜದ ಹತ್ತಿರ ಭಾರಿ ಗುಪ್ತಗಾಯಗಳಾಗಿರುತ್ತವೆ. ಅಪಘಾತ ಮಾಡಿದ ವಾಹನ ಚಾಲಕ ವಾಹನ ಸಮೇತವಾಗಿ ಓಡಿ ಹೋಗಿರುತ್ತಾನೆ. ನಂತರ ನನ್ನ ಮಗನಿಗೆ ಗೋಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಅಲ್ಲಿಂದ ಮಣೂರ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ. ಅಂತಾ ಅಲ್ಲೆ ಹೊರಟಿದ್ದ ಬಸವಂತಪ್ಪ ತಂದೆ ಕೃಷ್ಣಪ್ಪ ದ್ಯಾವಪೂರ ಸಾ: ಶಹಾಪೂರ ಮತ್ತು ನಾಗರಾಜ ತಂದೆ ಅಂಬ್ಲಪ್ಪ ಬೇವಿನಳ್ಳಿ ಸಾ: ಶಹಾಪೂರ ಇವರುಗಳು ಘಟನೆಯನ್ನು ನೋಡಿದ್ದು. ನಂತರ ಬಸವಂತಪ್ಪ ತಂದೆ ಕೃಷ್ಣಪ್ಪ ದ್ಯಾವಪೂರ ಸಾ: ಶಹಾಪೂರ ಇವರಿಂದ ನನಗೆ ವಿಷಯ ಗೊತ್ತಾಗಿ ನಾನು ಕೂಡ ಸದರಿ ಮಣೂರ ಆಸ್ಪತ್ರೆ ಕಲಬುರಗಿಗೆ ಬೇಟಿ ಮಾಡಿ ನೋಡಲಾಗಿ ನನ್ನ ಮಗನಿಗೆ ಎಡಗಾಲಿನ ಮೋಳಕಾಲಿಗೆ ಮತ್ತು ಮೋಳಕಾಲಿನ ಕೆಳಗೆ ಭಾರಿ ರಕ್ತಗಾಯ ಆಗಿದ್ದು, ಎಡಗೈ ಬೆರಳಿಗೆ ಮತ್ತು ಬಲಗೈ ಭುಜದ ಹತ್ತಿರ ಭಾರಿ ಗುಪ್ತಗಾಯಗಳಾಗಿದ್ದರಿಂದ ಉಪಚಾರ ಪಡೆಯುತ್ತಿದ್ದ. ನಮಗೆ ಕಾನೂನಿನ ತಿಳುವಳಿಕೆ ಇಲ್ಲದರಿಂದ ಮತ್ತು ನನ್ನ ಮಗನಿಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಆತನಿಗೆ ಆಪರೇಷೇನ್ ಮಾಡಿದ ನಂತರ ತಡವಾಗಿ ಇಂದು ದಿನಾಂಕ:15/04/2022 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಟಾಟಾ ಏಸ್ ಗೂಡ್ಸ ವಾಹನ ನಂ: ಕೆಎ-33-ಬಿ-2959 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿದ್ದರಿಂದ ನನ್ನ ಮಗನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿವೆ ಸದರಿ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 30/2022 ಕಲಂ: 279, 338 ಐಪಿಸಿ ಸಂಗಡ 187 ಐಎಮ್.ವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ. 269, 278, 429 ಐಪಿಸಿ ಮತ್ತು ಕಲಂ 4, 12 ಕನರ್ಾಟಕ ಪ್ರಿವೆಷನ್ ಆಫ್, ಸ್ಲಾಟರ ಐಂಡ ಪ್ರಿಜರವೆಶನ ಆಫ್ ಕೆಟಲ್ ಕಾಯ್ದೆ-2020 : ಇಂದು ದಿನಾಂಕ; 15/04/2022 ರಂದು 4-30 ಪಿಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಅಜರ್ಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ; 15/04/2022 ರಂದು ಮದ್ಯಾಹ್ನ 4-00 ಗಂಟೆ ಸುಮಾರಿಗೆ ಯಾದಗಿರಿ ನಗರದ ಹಳೆ ಬಸ ನಿಲ್ದಾಣದ ಮುಂದುಗಡೆ ನಾನು ಮತ್ತು ಶಶಾಂಕ ನಾಲಡಗಿ, ನಿತೇಶ ಆಲಮಟ್ಟಿ ರವರು ಕೂಡಿಕೊಂಡು ನಿಂತಿರುವಾಗ ಮದನಪೂರಗಲ್ಲಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಶಹಾಪೂರ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂದು ಲಾರಿಯಿಂದ ಕೆಟ್ಟ ಹೊಲಸು ವಾಸನೆ ಬರುತ್ತಿದ್ದು ಆಗ ಲಾರಿಯ ಹತ್ತಿರ ಹೋಗಿ ನೋಡಲಾಗಿ ಲಾರಿ ನಂ. ಟಿಎಸ್.12.ಯುಸಿ.9646 ನೇದ್ದು ಇದ್ದು ಅದರಲ್ಲಿ ಜಾನುವಾರುಗಳ ಮೂಳೆಗಳು(ಎಲುಬುಗಳು) ತುಂಬಿದ್ದು ಲಾರಿಯಿಂದ ಹೊಲಸು ವಾಸನೆ ಬರುತ್ತಿದ್ದು ಲಾರಿಯಲ್ಲಿದ್ದ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಮೊಹಬ್ಬತ ಅಲೀ ತಂದೆ ಕೌಸರ ಅಲೀ ವ;30 ಜಾ; ಮುಸ್ಲಿಂ ಉ; ಲಾರಿ ಚಾಲಕ ಸಾ; ಗೌರಾಮಾಯ, ಬುದಾಯು (ಉತ್ತರಪ್ರದೇಶ) ಅಂತಾ ತಿಳಿಸಿ ನಂತರ ಲಾರಿಯಲ್ಲಿದ್ದ ಜಾನುವಾರುಗಳ ಮೂಳೆಗಳ ಬಗ್ಗೆ ವಿಚಾರಿಸಲು ತಿಳಿಸಿದ್ದೆನೆಂದರೆ, ನಮ್ಮ ಲಾರಿ ಮಾಲೀಕರಾದ ಸುಜಾವುದ್ದೀನ್ ತಂದೆ ಹಫೀಜುದ್ದೀನ್ ರವರು ನಿನ್ನೆ ದಿನಾಂಕ; 14/04/2022 ರಂದು ನನಗೆ ಕಲಬುರಗಿ ನಗರದಲ್ಲಿರುವ ಹಸನ ಎಂಟರಪ್ರೈಸಸ್ ರವರಲ್ಲಿ ಹೋಗಿ ಜಾನುವಾರುಗಳ ಮೂಳೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಮಹಿಬೂಬ ನಗರ ಜಿಲ್ಲೆಯ ಜಡಚರಲಾದಲ್ಲಿರುವ ಆಲ್ ನಸರ ಬೂನ್ಸ್ ಪ್ರೊಡಕ್ಟ ರವರಲ್ಲಿ ತಂದು ಮುಟ್ಟಿಸುವಂತೆ ತಿಳಿಸಿದ್ದರಿಂದ ನಾನು ಲಾರಿಯಲ್ಲಿ ಜಾನುವಾರುಗಳ ಮೂಳೆಗಳನ್ನು ತುಂಬಿಕೊಂಡು ಹೋಗುತ್ತಿದ್ದೇನೆ ಅಂತಾ ತಿಳಿಸಿದ್ದು ಇರುತ್ತದೆ. ಸದರಿ ಲಾರಿಯಿಂದ ಬರುತ್ತಿರುವ ಕೆಟ್ಟ ಹೊಲಸು ದುವರ್ಾಸನೆಯಿಂದ ವಾತಾವರಣ ಹಾನಿಯಾಗಿ ಇತರರ ಪ್ರಾಣಕ್ಕೆ ಅಪಾಯವುಂಟಾಗುವ ರೋಗದ ಸೋಂಕು ಹರಡುವ ಸಂಭವವಿದ್ದು ಈ ಬಗ್ಗೆ ಆರೋಪಿತರು ನಿರ್ಲಕ್ಷತನ ವಹಿಸಿದ್ದು ಇರುತ್ತದೆ. ಸದ್ಯ ಕನರ್ಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯು ಜಾರಿಯಲ್ಲಿದರೂ ಕೂಡಾ ಗೋವು ಮತ್ತು ಇತರೆ ಸಾಕು ಜಾನುವಾರುಗಳ ಮೂಳೆಗಳನ್ನು ಅಕ್ರಮವಾಗಿ ಅನಧಿಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸದರಿ ವಾಹನದಲ್ಲಿ ಜಾನುವಾರುಗಳ ಮೂಳೆಗಳನ್ನು ಸಾಗಾಣಿಕೆ ಮಾಡುತ್ತಿದ್ದು ವಾಹನ ಚಾಲಕ ಮತ್ತು ಮಾಲೀಕ ಹಾಗೂ ಇದರಲ್ಲಿ ಶಾಮೀಲಾಗಿರುವ ಇತರರ ವಿರುದ್ದ ಕಾನೂನು ಕ್ರಮ ಜರುಗಿಸುವ ಕುರಿತು ನಾನು, ಸದರಿ ಲಾರಿಯ ಹತ್ತಿರ ನನ್ನೊಂದಿಗಿದ್ದ ಶಶಾಂಕ ನಾಲಡಗಿ, ನಿತೇಶ ಆಲಮಟ್ಟಿ ರವರನ್ನು ಅಲ್ಲೇ ಸ್ಥಳದಲ್ಲಿ ಬಿಟ್ಟು ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 39/2022 ಕಲಂ. 269 278 429 ಐಪಿಸಿ ಹಾಗೂ ಕಲಂ 4, 12 ಕನರ್ಾಟಕ ಪ್ರಿವೆಷನ್ ಆಫ್, ಸ್ಲಾಟರ ಐಂಡ ಪ್ರಿಜರವೆಶನ ಆಫ್ ಕೆಟಲ್ ಕಾಯ್ದೆ-2020 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 16-04-2022 04:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080