Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16-05-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 66/2021 ಕಲಂ 323, 324, 504, 506 ಸಂ 324 ಐ.ಪಿ.ಸಿ : ದಿನಾಂಕ 07/05/2021 ರಂದು ರಾತ್ರಿ 10-00 ಪಿ.ಎಮ್ ಕ್ಕೆ ಪಿರ್ಯಾಧಿ ಮತ್ತು ಅವನ ಮನೆಯವರೆಲ್ಲರೂ ತಮ್ಮ ಮನೆ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಹಳೇ ದ್ವೇಶದಿಂದ ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಫಿರ್ಯಾಧಿಗೆ ಕಲ್ಲಿನಿಂದ ಹೊಡೆದು ರಕ್ತಗಾಯ, ಗುಪ್ತಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಪ್ರಕರಣದ ದಾಖಲು ಆಗಿರುತ್ತದೆ.

ಶೋರಾಪೂರವ ಪೊಲೀಸ್ ಠಾಣೆ :- 78/2021 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ,ಎಮ್,ಎಮ್,ಸಿ,ಆರ್.ಆಕ್ಟ 1994 : ಇಂದು ದಿನಾಂಕ:15-05-2021 ರಂದು 11 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿ.ಐ ಸುರಪೂರ ಪೊಲೀಸ್ ಠಾಣೆ ರವರು ಎರಡು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:15-05-2021 ರಂದು ಬೆಳಿಗ್ಗೆ 7-15 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ವ್ಯಕ್ತಿಗಳು ತಮ್ಮ ಟ್ಯಾಕ್ಟರಗಳಲ್ಲಿ ಶೆಳ್ಳಗಿ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ದೇವಾಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತವಾದ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಹೆಚ್.ಸಿ-176, ಶ್ರೀ ಮಂಜುನಾಥ ಸಿಪಿಸಿ-271 ಹಾಗೂ ಜೀಪ ಚಾಲಕನಾದ ಶ್ರೀ ಮಹಾಂತೇಶ ಎಪಿಸಿ-48 ಮೂವರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್.ಸಿ. ರವರಿಗೆೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್.ಸಿ. ರವರು ಇಬ್ಬರು ಪಂಚರಾದ 1) ಶ್ರೀ ದೇವಿಂದ್ರಪ್ಪಗೌಡ ತಂದೆ ಭೀಮನಗೌಡ ಮಾಲಿಪಾಟೀಲ್ ವ|| 39 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ದೇವರಗೋನಾಲ ತಾ|| ಸುರಪುರ 2) ಶ್ರೀ ಶರಣಬಸವ ತಂದೆ ದೇವಪ್ಪ ರಯಕ್ಮಾಪೂರ ವ|| 26 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮಾಚಗುಂಡಾಳ ತಾ|| ಸುರಪುರ ಇವರನ್ನು ಬೆಳಿಗ್ಗೆ 7-30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 7-45 ಗಂಟೆ ಸುಮಾರಿಗೆ ಠಾಣೆಯಿಂದ ಹೊರಟು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ದೇವಾಪೂರ ಕ್ರಾಸ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಿಂತುಕೊಂಡಾಗ ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಶೆಳ್ಳಗಿ ಕ್ರಾಸ್ ಕಡೆಯಿಂದ ಎರಡು ಟ್ಯಾಕ್ಟರ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಸಿಬ್ಬಂಧಿಯವರ ಸಹಾಯದಿಂದ ಟ್ಯಾಕ್ಟರ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಸದರಿ ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ಎರಡು ಟ್ಯಾಕ್ಟರಗಳನ್ನು ಸೈಡಿಗೆ ನಿಲ್ಲಿಸಿ, ಕೆಳಗೆ ಇಳಿದು ಓಡಿ ಹೋದರು. ನಾವು ಸದರಿ ಟ್ಯಾಕ್ಟರ ಹತ್ತಿರ ಹೋಗಿ ಟ್ಯಾಕ್ಟರನ್ನು ಪಂಚರ ಸಮಕ್ಷಮ ಪರೀಶಿಲಿಸಿ ನೋಡಲು 1) ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ನಂಬರ ಕೆಎ-32, ಟಿಬಿ-0463 ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತಿದ್ದು, ಇನ್ನೊಂದು ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು 2) ಒಂದು ಜಾನ್ ದೀರೆ ಕಂಪನಿಯ ಟ್ಯಾಕ್ಟರ ಇದ್ದು, ಅದರ ಇಂಜಿನ ನಂಬರ ಕಙ3029ಆ208186 ಚೆಸ್ಸಿ ನಂಬರ ಕಙ5103ಖ017853 ಇದ್ದು, ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತಿದ್ದು, ಹೀಗೆ ಎರಡು ಟ್ಯಾಕ್ಟರಗಳಲ್ಲಿಯ ಒಟ್ಯು 4 ಘನ ಮೀಟರ ಮರಳು ಅ.ಕಿ 3200/- ರೂಗಳ ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 08-30 ಗಂಟೆಯಿಂದ 9-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರ ಚಾಲಕರು ಮತ್ತು ಮಾಲಿಕರು ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 3200/- ರೂ.ಗಳ ಕಿಮ್ಮತ್ತಿನ ಅಂದಾಜು 04 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 11 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

Last Updated: 17-05-2021 09:45 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080