Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16-06-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 82/2021 ಕಲಂ: 323, 498 (ಎ), 504, 506, 34 ಐಪಿಸಿ : 15.06.2021 ರಂದು 4.30 ಪಿಎಮ್ಕ್ಕೆ ಶ್ರೀಮತಿ ಮಹಾದೇವಿ ಗಂಡ ಯಂಕಪ್ಪ ಗೋಗಡಿಹಾಳ ವಯಾ|| 26 ಜಾ|| ಬೇಡರ ಉ|| ಕೂಲಿಕೆಲಸ ಸಾ|| ಗೌಡಗೇರಾ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನನ್ನ ತವರು ಮನೆಯು ತಾಳಿಕೋಟಿ ತಾಲೂಕಿನ ತಮದೊಡ್ಡಿ ಗ್ರಾಮವಾಗಿದ್ದು ಸುಮಾರು ಏಳು ವರ್ಷಗಳ ಹಿಂದೆ ನನಗೆ ಗೌಡಗೇರಾ ಗ್ರಾಮದ ಯಂಕಪ್ಪ ತಂದೆ ಸೂಗಪ್ಪ ಗೋಗಡಿಹಾಳ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಾನು ಹಾಗೂ ನನ್ನ ಗಂಡ ಸುಮಾರು 4 ವರ್ಷದ ವರೆಗೆ ಚೆನ್ನಾಗಿದ್ದವರು ನಂತರದ ದಿನಗಳಲ್ಲಿ ನೀನು ಚೆನ್ನಾಗಿಲ್ಲ ಕುಳ್ಳಿ ಇದ್ದಿ, ಕಪ್ಪಾಗಿದ್ದಿ ನಿನಗೆ ಯಾವದೇ ಅಡುಗೆ ಮಾಡಲು ಬರುವದಿಲ್ಲ ಅಂತ ನನ್ನ ಗಂಡನಾದ 1] ಯಂಕಪ್ಪ ತಂದೆ ಸೂಗಪ್ಪ ಗೋಗಡಿಹಾಳ ಹಾಗು ಮಾವನಾದ 2] ಸೂಗಪ್ಪ ತಂದೆ ಬಸವಂತ್ರಾಯ ಗೋಗಡಿಹಾಳ ಹಾಗು ನಾದನಿಯಾದ 3] ಭೀಮಬಾಯಿ ಗಂಡ ಹೈಯಾಳಪ್ಪ ಗೋಗಡಿಹಾಳ, 4) ಹೈಯಾಳಪ್ಪ ಗೋಗಡಿಹಾಳ ಸಾ|| ಎಲ್ಲರೂ ಗೌಡಗೇರಾ ಈ ಎಲ್ಲಾ ಜನರು ಸೇರಿ ವಿನಾಕಾರಣವಾಗಿ ದಿನಾಲು ನನಗೆ ಮಾನಸಿಕ ಹಾಗು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದರು. ಸದರ ವಿಷಯವನ್ನು ನಾನು ನನ್ನ ತಾಯಿಯಾದ ನಿಂಗಮ್ಮ ಗಂಡ ಶಿವಣ್ಣ ಆಂದೇಲಿ ಹಾಗೂ ತಂದೆಯಾದ ಶಿವಣ್ಣ ತಂದೆ ನಾಗಪ್ಪ ಆಂದೇಲಿ ಇವರ ಮುಂದೆ ತಿಳಿಸಿದ್ದು ಇರುತ್ತದೆ. ನಮ್ಮ ತಂದೆ-ತಾಯಿಯವರು ಆಯಿತು ನಾವು ಬಂದು ಹೇಳುತ್ತೇವೆ ಅಂತ ತಿಳಿ ಹೇಳಿದ್ದರು. ಅಲ್ಲದೆ ಸದ್ಯ ನನಗೆ 5 ವರ್ಷದ ಸಮರ್ಥ ಎನ್ನುವ ಗಂಡು ಮಗ ಹಾಗು 7 ತಿಂಗಳ ಸರೋಜನಿ ಎನ್ನುವ ಹೆಣ್ಣು ಮಗಳಿರುತ್ತಾಳೆ. ನನ್ನ ಗಂಡನು ನನಗೆ ದಿನಾಲು ಕಿರುಕುಳ ನೀಡುತ್ತಿದ್ದವನು ಸುಮಾರು ಒಂದು ವರ್ಷದ ಹಿಂದೆ ನನಗೆ ಗೌಡಗೇರಾದಲ್ಲಿ ಬಿಟ್ಟು ಹೋಗಿರುತ್ತಾನೆ. ಹೀಗಿದ್ದು ದಿನಾಂಕ 07.06.2021 ರಂದು ರಾತ್ರಿ 7.30 ಗಂಟೆಗೆ ನಾನು ನನ್ನ ಮಕ್ಕಳೊಂದಿಗೆ ನನ್ನ ಗಂಡನ ಮನೆಯಲ್ಲಿದ್ದಾಗ ಮಾವನಾದ 1] ಸೂಗಪ್ಪ ತಂದೆ ಬಸವಂತ್ರಾಯ ಗೋಗಡಿಹಾಳ ಹಾಗು ನಾದನಿಯಾದ 2] ಭೀಮಬಾಯಿ ಗಂಡ ಹೈಯಾಳಪ್ಪ ಗೋಗಡಿಹಾಳ, ನಾದನಿಯ ಗಂಡನಾದ 3) ಹೈಯಾಳಪ್ಪ ಗೋಗಡಿಹಾಳ ಈ ಎಲ್ಲಾ ಜನರು ಸೇರಿ ಈ ಸೂಳೆಯದು ಸೊಕ್ಕುಬಾಳ ಆಗಿದೆ ಅಂತ ಎಲ್ಲರೂ ಕೈಯಿಂದ ಹೊಡೆಬಡೆ ಮಾಡಿ ನನಗೆ ನಮ್ಮ ಮನೆಯಿಂದ ಹೊರಗೆ ಹಾಕಿ ಇನ್ನೊಮ್ಮೆ ನೀನು ನಮ್ಮ ಮನೆ ಕಡೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದ್ದು, ನಂತರ ನಾನು ನಮ್ಮ ತಂದೆಯವರಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದ್ದು, ಅವರು ಬಂದು ನನಗೆ ನಮ್ಮ ತವರು ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು, ಕಾರಣ ಮೇಲ್ಕಾಣಿಸಿದ ಎಲ್ಲಾ 04 ಜನರು ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 82/2021 ಕಲಂ: 323, 498ಎ, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 83/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 15.06.2021 ರಂದು 1745 ಗಂಟೆಗೆ ಮಾನ್ಯ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ, ಇಂದು ದಿನಾಂಕ: 15.06.2021 ರಂದು ಕರಡಕಲ ಗ್ರಾಮದ ಕೋರಿಸಿದ್ದೇಶ್ವರ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದರಿ ಸ್ಥಳಕ್ಕೆ 6 ಪಿಎಮ್ಕ್ಕೆ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ನಂದಪ್ಪ ತಂದೆ ಚಂದ್ರಪ್ಪ ಕುಂಬಾರ ವ|| 40 ಜಾ|| ಕುಂಬಾರ ಉ|| ಕೂಲಿ ಸಾ|| ಕರಡಕಲ ತಾ|| ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 810/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 6 ಪಿಎಮ್ದಿಂದ 7 ಪಿಎಮ್ವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಇರುತ್ತದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 83/2021 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ :64/2021 ಕಲಂ279, 304(ಎ) ಐಪಿಸಿ : ಇಂದು ದಿನಾಂಕ: 15/06/2021 ರಂದು ಆರೋಪಿ ಹಣಮಂತ್ರಾಯ ತಂದೆ ಮಲ್ಲಯ್ಯ ಪೊಲೀಸ್ ಪಾಟೀಲ್ ಈತನು ಪಿಯರ್ಾಧಿಯ ಹೆಂಡತಿಯಾದ ಶ್ರೀಮತಿ ಲಕ್ಷ್ಮಿ ಗಂಡ ರಾಮಣ್ಣ ಶಿವಣ್ಣನವರ ವಯಾ: 50 ವರ್ಷ ಸಾ: ತೇಕರಾಳ ಇವಳನ್ನು ಮೋಟಾರ್ ಸೈಕಲ್ ನಂ: ಕೆ.ಎ-33 ವೈ-6848 ನೇದ್ದರಲ್ಲಿ ಕೂಡಿಸಿಕೊಂಡು ಶಹಾಪೂರ ತಾಲೂಕಿನ ವನದುರ್ಗ ಗ್ರಾಮಕ್ಕೆ ಹೋಗಿ ಮಗಳಿಗೆ ಮಾತನಾಡಿಸಿ ಮರಳಿ ತೇಕರಾಳ ಗ್ರಾಮಕ್ಕೆ ಬರುವ ಸಲುವಾಗಿ 12:30 ಪಿ.ಎಮ್.ಕ್ಕೆ ಹೊಸಕೇರಾ-ಗೋಗಿ ರಸ್ತೆಯ ಸೈಯದ್ ಹುಸೇನ್ ಇವರ ಹೊಲದ ಹತ್ತಿರ ರೋಡಿನ ಮೇಲೆ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡ್ ಬ್ರೇಕರ್ ಹಾರಿಸಿದಾಗ ಮೋಟಾರ ಸೈಕಲ್ ಸಮೇತ ಇಬ್ಬರು ಬಿದ್ದಿರುತ್ತಾರೆ. ಲಕ್ಷ್ಮಿ ಇವಳಿಗೆ ತಲೆಗೆ ಭಾರಿಗಾಯವಾಗಿ ರಕ್ತ ಸೋರಿದ್ದು ಇರುತ್ತದೆ. 108 ವಾಹನದಲ್ಲಿ ಲಕ್ಷ್ಮಿ ಇವಳನ್ನು ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾಳೆ. ಮೋಟಾರ ಸೈಕಲ್ ಸವಾರ ಹಣಮಂತ್ರಾಯ ತಂದೆ ಮಲ್ಲಯ್ಯ ಪೊಲೀಸ್ ಪಾಟೀಲ್ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಾರಾಂಶವಿರುತ್ತದೆ.


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ:36/2021 ಕಲಂ.279, 337 338 ಐಪಿಸಿ & 187 ಐ.ಎಮ್.ವ್ಹಿ ಕಾಯ್ದೆ : ದಿ:15/06/2021 ರಂದು ಮದ್ಯಾಹ್ನ 13.45 ಗಂಟೆಯ ಸುಮಾರಿಗೆ ಗಾಯಾಳುಗಳು ಇಬ್ಬರೂ ಕೂಡಿ ಅರಕೆರಾ(ಜೆ) ದಿಂದ ಗುಂಡಲಗೇರಾ ಗ್ರಾಮಕ್ಕೆ ಬಿತ್ತನೆ ಮಾಡಲು ತೊಗರಿ ಬೀಜ ತರಲು ಗಾಯಾಳು ಚಂದಪ್ಪ ಈತನ ಮೋಟಾರ್ ಸೈಕಲ್ ನಂ: ಕೆಎ-33 ಆರ್-8312 ನೇದ್ದರ ಮೇಲೆ ಹೊರಟಾಗ ಗುಂಡಲಗೇರಾ ಊರೊಳಗಿಂದ ಆರೋಪಿತನು ತನ್ನ ಟ್ಯಾಕ್ಟರ್ ಇಂಜಿನ್ ನಂ:ಕೆಎ-33 ಟಿ.ಎ-3432 ನೇದ್ದಕ್ಕೆ ಕಬ್ಬಿಣದ ಹೊಲ ಹರಗುವ ಕುಂಟಿಯನ್ನು ಹಿಂದೆ ಕಟ್ಟಿಕೊಂಡು ಗುಂಡಲಗೇರಾ ಊರೊಳಗೆ ಹೋಗುವ ರೋಡಿನ ಸಿಡಿ ಹತ್ತಿರ ಟ್ಯಾಕ್ಟರನ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡೌನ್ದಲ್ಲಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಟ್ಯಾಕ್ಟರ ಇಂಜಿನಗೆ ಕಟ್ಟಿದ ಕುಂಟಿಯು ಗಾಯಾಳುಗಳ ಹೊರಟ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಗಾಯಾಳುಗಳಿಗೆ ಕಬ್ಬಿಣದ ಕುಂಟಿ ತಾಕಿ ಬಲಗಾಲ & ಬಲ ಬುಜಕ್ಕೆ ಭಾರಿ ರಕ್ತಗಾಯಗಳಾಗಿ ಕಾಲಿನ ಎಲುಬುಗಳು ಮುರಿದು ಭಾರಿ ರಕ್ತಗಾಯಗಳಾಗಿದ್ದು, ಆರೋಪಿತನು ಅಪಘಾತಪಡಿಸಿ ಟ್ಯಾಕ್ಟರ ಇಂಜಿನನ್ನು ಪಲ್ಟಿ ಮಾಡಿ ಓಡಿ ಹೋದವನ ವಿರುದ್ದ ಕ್ರಮ ಕೈಕೊಳ್ಳಲು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಇಂದು ದಿನಾಂಕ:15/06/2021 ರಂದು ಸಾಯಂಕಾಲ 19.10 ಗಂಟೆಗೆ ಪ್ರಕರಣದಲ್ಲಿ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಪುರವಣಿ ಹೇಳಿಕೆ ಕೊಟ್ಟಿದ್ದು ಏನೆಂದರೆ, ಇಂದು ದಿನಾಂಕ:15/06/2021 ರಂದು ಅಪಘಾತದಲ್ಲಿ ಗಾಯವಾಗಿದ್ದ ಚಂದಪ್ಪ ತಂದೆ ಹಣಮಂತ್ರಾಯ ಪಟ್ಟೇದಾರ ವಯಾ-32 ವರ್ಷ, ಜಾ:ಬೇಡರ ಉ:ಒಕ್ಕಲುತನ ಸಾ:ಅರಕೇರಾ(ಜೆ) ತಾ:ಹುಣಸಗಿ ಯಾದಗಿರ ಈತನಿಗೆ ಹುಣಸಗಿ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ವಿಜಯಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬಸವನಬಾಗೇವಾಡಿ ದಾಟಿದ ಮೇಲೆ ಸಾಯಂಕಾಲ 17.30 ಗಂಟೆಗೆ ಗಾಯಾಳು ಚಂದಪ್ಪನು ಮೃತಪಟ್ಟಿದ್ದು ಇರುತ್ತದೆ. ನಂತರ ಸದರಿ ಶವವನ್ನು ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತಾ ಇತ್ಯಾದಿ ಪುರವಣಿ ಹೇಳಿಕೆ ಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ ಅಂತಾ ಪ್ರಕರಣದಲ್ಲಿ ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 89/2021 ಕಲಂ 406,420,468 ಸಂ 34 ಐ.ಪಿ.ಸಿ : ದಿನಾಂಕ 15-06-2021 ರಂದು ಸಾಯಂಕಾಲ 6-00 ಪಿ.ಎಮ ಕ್ಕೆ ಮಾನ್ಯ ಎಸ.ಪಿ ಸಾಹೇಬರ ರವರ ಕಾಯರ್ಾಲಯದದಿಂದ ವಸೂಲಾದ ಜ್ಞಾಪನ ಪತ್ರದ ಸಾರಾಂಶವೇನೆಂದರೆ ಅಜರ್ಿದಾರರಾದ ಶ್ರೀಮತಿ ಗಿರೀಜಾ ಪಾಟೀಲ್ ಸಾ:ಹೊನಗೇರಾ ತಾ:ಜಿ:ಯಾದಗಿರಿ ಇವರು ಹೊನಗೇರಾ ಗ್ರಾಮದಲ್ಲಿ ನಿಜಲಿಂಗಪ್ಪ ಸ್ವಾಮಿ ಹಾಗೂ ಇನ್ನಿತರರು ಕೂಡಿಕೊಂಡು ಅನಧಿಕೃತವಾಗಿ ಸಂಸ್ಥೆಯನ್ನು ತರೆದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿ ಅಪರಾಧಿಕ ಇನ್ನಿತರ ಚಟುವಟಿಕೆಗಳಲ್ಲಿ ಹಣವನ್ನು ಬಳಕೆ ಮಾಡಿ ದುರುಪಯೋಗ ಮಾಡುತ್ತಿದ್ದಾರೆ. ಇಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಿರಿ ಅಂತಾ ಉಲ್ಲೇಖ 1 ರ ಪ್ರಕಾರ ಕಾಯರ್ಾಲಯಕ್ಕೆ ಅಜರ್ಿ ಸಲ್ಲಿಸಿರುತ್ತಾರೆ. ಉಲ್ಲೇಖ 2 ರ ಪ್ರಕಾರ ಸದರಿ ಅಜರ್ಿಯನ್ನು ಕೂಲಂಕೂಷವಾಗಿ ಪರಿಶೀಲಿಸಿ ವಿಚಾರಣೆ ಕೈಗೊಂಡು ವರದಿ ಸಲ್ಲಿಸುವಂತೆ ಪಿ.ಐ ಸೆನ್ ಠಾಣೆ ರವರಿಗೆ ಸೂಚಿಸಿದ್ದು, ಪಿ.ಐ ಸೆನ್ ಪೊಲೀಸ ಠಾಣೆ ರವರು ಅಜರ್ಿಯನ್ನು ವಿಚಾರಣೆ ಕೈಗೊಂಡು ಉಲ್ಲೇಖ-3 ರ ಪ್ರಕಾರ ವರದಿಯನ್ನು ಸಲ್ಲಿಸಿರುತ್ತಾರೆ.ಪಿ.ಐ ರವರು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಹೊನಗೇರಾ ಗ್ರಾಮದ ಹೊನ್ನಯ್ಯ ತಾತಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ 2015 ರಲ್ಲಿ ರಜಿಸ್ಟರ ಆಗಿದ್ದು ಮಹಾತ್ಮ ಅಮಾತೆಯ್ಯ ತಾತಾನವರ ಗುಡಿಯ ಕಟ್ಟಡಕ್ಕೆ ಹೊನಗೆರಾ ಗ್ರಾಮದ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ದೇವಸ್ಥಾನ ಟ್ರಸ್ಟಗೆ ದೇಣಿಕೆ ರೂಪದಲ್ಲಿ ಹಣ ಕೊಡುತ್ತಾರೆ ಈ ಬಗ್ಗೆ ಟ್ರಸ್ಟನವರು ಬ್ಯಾಂಕ ಆಫ್ ಬರೋಡ ಶಾಖೆ ಯಾದಗಿರಿಯಲ್ಲಿ ಖಾತೆ ಸಂಖ್ಯೆ 42740100004627 ಹೊಂದಿದ್ದು. ಇದನ್ನು ಟ್ರಸ್ಟಿನ ಅಧ್ಯಕ್ಷರಾದ ನಿಜಲಿಂಗಪ್ಪ ಸ್ವಾಮಿ ತಂದೆ ಮಲ್ಲಿಕಾಜರ್ುನ ಸ್ವಾಮಿ ಟ್ರಸ್ಟಿನ ಕಾರ್ಯದಶರ್ಿ ನಿಂಗಪ್ಪ ತಂದೆ ದೇವಿಂದ್ರಪ್ಪ, ಈಶಪ್ಪ ತಂದೆ ಸಣ್ಣಬಸವರಾಜಪ್ಪ ರ್ಯಾಖಾ, ರವಿಂದ್ರ ತಂದೆ ಗೋಪಾಲ ಬಂದಳ್ಳಿ ರವರು ನಿರ್ವವಣೆ ಮಾಡುತ್ತಾರೆ. ಇವರು ಗುಡಿಯಕಟ್ಟಡ ಕಾಮಗಾರಿಯ ಖಚರ್ು ವೆಚ್ಚು ಹಾಗೂ ಇತರೇ ಖಚರ್ು ವೆಚ್ಚದ ಮಾಹಿತಿ ಸರಿಯಾಗಿ ಸಲ್ಲಿಸಿರುವದಿಲ್ಲ ಮತ್ತು ಲೆಕ್ಕ ಪತ್ರದ ಅಡಿಟ್ ವರದಿ ನಿಯಮಾನುಸಾರ ಮಾಡಿಸಿರುವದಿಲ್ಲ. ಅಡಿಟ್ (ಲೆಕ್ಕಪರಿಶೋಧನೆ ಮಾಹಿತಿ ನಿಯಮಾನುಸಾರ) ಮಾಡಿಸಿರುವದಿಲ್ಲ. ಹಾಗೂ ಟ್ರಸ್ಟಿಗೆ ಸಂಬಂಧಿಸಿದ ಹಣ ಬಳಕೆಯ ಬಗ್ಗೆ ನಿಖರವಾದ ಮಾಹಿತಿ ಸಲ್ಲಿಸಿರುವದಿಲ್ಲ. ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳು ಸೂಚಿಸಲಾಗಿದೆ ಅಂತಾ ವಿಚಾರಣಾ ವರದಿಯ ಆಧಾರದ ಮೇಲಿಂದ ಮತ್ತು ಮಾನ್ಯ ಎಸ.ಪಿ ಯಾದಗಿರ ರವರ ಜ್ಞಾಪನ ಪತ್ರ ಆಧಾರದ ಮೇಲಿಂದ ಯಾದಗಿರಿ ಗ್ರಾಮೀಣ ಪೊಲೀಸ ಠಾಣೆಯ ಗುನ್ನೆ ನಂ 89/2021 ಕಲಂ 406, 420, 468 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 92/2021 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 15.06.2021 ರಂದು ಸಾಯಂಕಾಲ 7.30 ಗಂಟೆಗೆ ಗುರುಮಠಕಲ್ ಪಟ್ಟಣದ ಮಿಟ್ಟಿಬಾಡಿ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ಠಾಣೆ ಎನ್.ಸಿ. ನಂಬರ 14/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿಐ ಸಾಹೇಬರು ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ದಿನಾಂಕ:15.06.2021 ರಂದು 10.45 ಪಿಮ್ ಕ್ಕೆ ಕ್ಕೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ 11.50 ಪಿಎಮ್ ಕ್ಕೆ ಎಎಮ್ ಕ್ಕೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಚಂದ್ರಕಾಂತ ಹೆಚ್ಸಿ-109 ಗುರುಮಠಕಲ್ ಠಾಣೆ ಗುನ್ನೆ ನಂಬರ 92/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

Last Updated: 16-06-2021 03:49 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080