ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-06-2022


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ. ಮನುಷ್ಯಕಾಣೆ: ದಿನಾಂಕ; 13/05/2022 ರಂದು ಬೆಳೆಗ್ಗೆ 7-15 ಗಂಟೆ ಸುಮಾರಿಗೆ ಪಿರ್ಯಾಧಿ ಹಾಗೂ ತನ್ನ ಮಗ ಮೋನಪ್ಪ ಮತ್ತು ಇತರರು ಕೂಡಿಕೊಂಡು ತನ್ನ ಮಗ ಮೋನಪ್ಪ ಇತನಿಗೆ ಆಸ್ಪತ್ರೆ ತೋರಿಸುವ ಸಲುವಾಗಿ ಕಲಬುರಗಿಗೆ ಹೋಗುವುದಕ್ಕಾಗಿ ಯಾದಗಿರಯ ಹೊಸ ಬಸ ನಿಲ್ದಾಣಕ್ಕೆ ಬಂದು ಬಸ್ಸಿಗೆ ಹೋದರಾಯಿತು ಅಂತಾ ಕಲಬುರಗಿಗೆ ಹೋಗುವ ಬಸ್ ನಿಲುಗಡೆಯ ಸ್ಥಳದಲ್ಲಿ ಕುಳಿತುಕೊಂಡಾಗ ನನ್ನ ಮಗ ಮೋನಪ್ಪ ಇತನು ಏಕಿ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಗಿ ಮರಳಿ ಬರಲಿಲ್ಲ. ನಂತರ ಎಲ್ಲರೂ ಕೂಡಿಕೊಂಡು ಯಾದಗಿರಿಯ ಇತರೆ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಮಗ ಮೋನಪ್ಪ ಇತನು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗ ಮೋನಪ್ಪ ಇತನಿಗೆ ಇಲ್ಲಿಯವರೆಗೆ ಹುಡುಕಾಡಲಾಗಿ ಪತ್ತೆಯಾಗಿರದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾಣೆಯಾದ ನನ್ನ ಮಗನಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಪಿರ್ಯಾಧಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.73/2022 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 103/2022. ಕಲಂ 212, ಸಂಗಡ 34 ಐ.ಪಿ.ಸಿ: ಇಂದು ದಿನಾಂಕ 15/06/2022 ರಂದು, ಸಾಯಂಕಾಲ 7-45 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇವರು ಶಹಾಪೂರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 67/2022 ಕಲಂ 143, 147, 504, 323, 506 ಸಂ 149 ಐಪಿಸಿ ಮತ್ತು ಕಲಂ:3(1) (ಆರ್)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್ 1989 ಅಡಿಯಲ್ಲಿ ಪ್ರಕರಣದಲ್ಲಿ ಭಾಗಿ ಇದ್ದ ಭಾಗಿ ಇದ್ದ ಆರೋಪಿ ನಂ 2 ಪಿ.ಡ್ಡಪ್ಪ ತಂದೆ ಶರಣಪ್ಪ ದಾಳಿ ಸಾಃ ಗೊಂದೆನೂರ ಈತನ ಮೊಬೈಲ್ನಲ್ಲಿ ಬಳಕೆಯಾದ ಮೊಬೈಲ್ ನಂ. 9880321706 ನೇದ್ದರ ಲೊಕೇಶನ್ ಆಧಾರದ ಮೇಲೆ ಪತ್ತೆ ಕುರಿತು ಬೇವಿನಹಳ್ಳಿ ಗ್ರಾಮ ಮತ್ತು ಅದರ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ತಿರುಗಾಡಿ ಉಪಯುಕ್ತ ಮಾಹಿತಿ ಪಡೆದುಕೊಂಡು, ರಾತ್ರಿ 10-00 ಗಂಟೆ ಸುಮಾರಿಗೆ ಮೊಬೈಲ್ ನಂಬರದ ಲೊಕೇಶನ ಆಧಾರದ ಮೇಲೆ ಮತ್ತು ಸದರಿ ನಂಬರಿನ ಎಸ್.ಡಿ.ಆರ್ ಮಾಹಿತಿ ಪಡೆದುಕೊಂಡು ಆರೋಪಿಯನ್ನು ಹಿಡಿಯಲು ಹೊರಟಿದ್ದಾಗ, ಗ್ರಾಮದ ಮಾಳಪ್ಪ ತಂದೆ ಮಲ್ಲಣ್ಣಗೌಡ ಈತನು ನೋಡಿ ತನ್ನ ಮೊಬೈಲ್ನಿಂದ ಕರೆ ಮಾಡಿ ಊರಲ್ಲಿ ಪೊಲೀಸರು ಬಂದಿದ್ದಾರೆ ನೀನು ಅಲ್ಲಿಂದ ಓಡಿ ಹೋಗು ಅಂತಾ ಹೇಳವುದನ್ನು ಕೇಳಿಸಿಕೊಂಡು ಸದರಿ ವ್ಯಕ್ತಿಯನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ ಕರೆ ಮಾಡಿದ ನಂಬರ ಮತ್ತು ನಾವು ಮೊಬೈಲ್ ನಂ. ಲೊಕೇಶನ ಹುಡುಕಿಕೊಂಡು ಬಂದಿದ್ದ ನಂ. 9880321706 ಒಂದೆ ಆಗಿದ್ದು, ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ವಿಚಾರಿಸಿಲಾಗಿ ಮಾಳಪ್ಪ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ವ:26, ಜಾ:ಕುರುಬರ, ಉ:ಒಕ್ಕಲುತನ ಸಾ:ಬೇವಿನಹಳ್ಳಿ ತಾ:ಶಹಾಪೂರ ಅಂತಾ ತಿಳಿಸಿದನು.
ಮಾಳಪ್ಪನಿಗೆ ನೀನು ಯಾರಿಗೆ ಮಾತಾಡಿದ್ದು ಅಂತಾ ವಿಚಾರಿಸಿದಾಗ, ಪಿಡ್ಡಪ್ಪ ತಂದೆ ಶರಣಪ್ಪ ದಾಳಿ ಸಾಃ ಗೊಂದೆನೂರ ಈತನೊಂದಿಗೆ ಮಾತನಾಡಿದ್ದು, ಗೊಂದೆನೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರೊಂದಿಗೆ ಜಗಳ ಮಾಡಿಕೊಂಡು ಅಟ್ರಾಸಿಟಿ ಕೇಸ್ ಆಗಿದ್ದು, ಆತನನ್ನು ಪೊಲೀಸರು ಹಿಡಿಯಬಾರದು ಅಂತಾ ಮಾನಪ್ಪ ತಂದೆ ಸಿದ್ದಣ್ಣಗೌಡ ಗೊಂದೆನೂರು ಸಾ: ಬೇವಿನಹಳ್ಳಿ ಈತನು ತನ್ನ ಮನೆಯಲ್ಲಿ ಆಶ್ರಯ ನೀಡಿರುತ್ತಾನೆ.
ಕಾರಣ ಪಿಡ್ಡಪ್ಪ ಗೊಂದೆನೂರ ಎಂಬುವನು ಜಾತಿ ನಿಂದನೆಯಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಭಾಗಿ ಇದ್ದ ಬಗ್ಗೆ ಗೊತ್ತಿದ್ದರು ಸಹಿತಿ ಮಾನಪ್ಪ ಮತ್ತು ಮಾಳಪ್ಪ ಇಬ್ಬರೂ ಕೂಡಿ ಪಿಡ್ಡಪ್ಪನಿಗೆ ಆಶ್ರಯ ಕೊಟ್ಟು ಮತ್ತು ನಾವು ಹಿಡಿಯಲು ಬಂದಿರುವ ಮಾಹಿತಿಯನ್ನು ಪಿಡ್ಡಪ್ಪನಿಗೆ ಹೇಳಿ ಅವನು ಓಡಿ ಹೋಗಲು ಸಹಾಯ ಮಾಡಿರುತ್ತಾರೆ. ಆದ್ದರಿಂದ ಸದರಿಯವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 103/2022 ಕಲಂ 212 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ

ಇತ್ತೀಚಿನ ನವೀಕರಣ​ : 17-06-2022 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080