ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16-07-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 101/2021 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 15-07-2021 ರಂದು 12-10 ಪಿ.ಎಮ್ ಕ್ಕೆ ಆರೋಪಿ ಭೀಮರಾಯ ತಂದೆ ಸಾಬಣ್ಣಾ ಉಪ್ಪಾರ ವಯಾ:35 ಜಾ:ಉಪ್ಪಾರ ಉ: ಹೋಟೇಲ್ ಕೆಲಸ ಸಾ: ಹೋನಗೇರಾ ಇವರು ಹೋನಗೇರಾ ಗ್ರಾಮದಲ್ಲಿ ಶ್ರೀ ಸಾಬಮ್ಮಾ ಆಯಿ ಗುಡಿಯ ಹತ್ತಿರ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತನಿಂದ 780/-ರೂ ನಗದು ಹಣ ಮತ್ತು ಮಟಕಾ ಎರಡು ಚೀಟಿಗಳನ್ನು ಹಾಗೂ ಒಂದು ಬಾಲಪೆನ್ನು ಜಪ್ತಿಪಡಿಸಿಕೊಂಡಿದ್ದು ಮತ್ತು ಸದರಿ ಆರೋಪಿತನು ತಾನು ಮಟಕಾ ಜೂಜಾಟದಿಂದ ಸಂಗ್ರಹಿಸಿದ ಹಣ ಮತ್ತು ಮಟಕಾ ನಂಬರಗಳು ರಾಮಸಮುದ್ರ ಗ್ರಾಮದ ಇನ್ನೊಬ್ಬ ಆರೋಪಿ ಮಲ್ಲಪ್ಪಾ ಅಚ್ಚಿಕೇರಿ ಇವನಿಗೆ ಕೊಡುವುದು ತಿಳಿಸಿದ್ದು ಇರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ .ನಂ: 102/2021 ಕಲಂ 87 ಕೆ.ಪಿ ಎಕ್ಟ : ಇಂದು ದಿನಾಂಕ 15-07-2021 ರಂದು 2-30 ಪಿ.ಎಮ್ ಕ್ಕೆ ಫಿರ್ಯಾಧಿದಾರರು ಠಾಣೆಯಲ್ಲಿದ್ದಾಗ ನನಗೆ ಮಾಹಿತಿ ಬಂದಿದ್ದೆನೆಂದರೆ ಯರಗೋಳ ಗ್ರಾಮದ ಸೀಮಾಂತರದಲ್ಲಿ ಬರುವ ಚೀಲಗುಡ್ಡದಲಿ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಅಂದರ ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದಾರೆೆ ಅಂತಾ ಮಾಹಿತಿ ಪಡೆದುಕೊಂಡು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಕೈಗೆ ಸಿಕ್ಕ 6 ಜನರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 7600/ರೂ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು ಆರೋಪಿತರ ಪೈಕಿ ಮೂರು ಜನರು ಹಾಗೂ ಇತರರು ಓಡಿ ಹೋಗಿದ್ದು ಇರುತ್ತದೆ.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 92/2021 ಕಲಂ: 341, 504, 323, 324 ಸಂ 34 ಐಪಿಸಿ : ಇಂದು ದಿನಾಂಕ: 15/07/2021 ರಂದು 1-45 ಪಿಎಮ್ ಕ್ಕೆ ಶ್ರೀ ಹಣಮಂತ ತಂದೆ ಭೀಮಪ್ಪ ಮಳ್ಳಳ್ಳಿ ವ:30, ಜಾ:ಮಾದಿಗ, ಉ:ಕೂಲಿಕೆಲಸ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಹೀಗೆ ಸುಮಾರು ಎರಡು ತಿಂಗಳ ಹಿಂದೆ ನಮ್ಮೂರ ನಮ್ಮ ಜಾತಿಯ ನಾಗಪ್ಪ ತಂದೆ ಹಣಮಂತ ಮಳ್ಳಳ್ಳಿ ಇವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದೇನು. ಕೆಲಸ ಮಾಡಿದ ನಂತರ ಕೂಲಿ ಹಣ ಕೊಡು ಅಂತಾ ಕೇಳಿದರೆ ಈಗ ಕೊಡುತ್ತೇನೆ ಆಗ ಕೊಡುತ್ತೇನೆ ಅಂತಾ ನಮಗೆ ಸತಾಯಿಸುತ್ತಿದ್ದುನು. ಹೀಗಿದು ನಿನ್ನೆ ದಿನಾಂಕ:17/07/2021 ರಂದು ಸಂಜೆ 5 ಗಂಟೆ ಸುಮಾರಿಗೆ ನಾನು ಹೊಟೇಲ್ ಕ್ಕೆ ಹೋಗಿ ಚಹಾ ಕುಡಿದು ಮರಳಿ ಬರುತ್ತಿದ್ದಾಗ ನಮ್ಮೂರು ಅಗಸಿ ಹತ್ತಿರ ನಾಗಪ್ಪ ತಂದೆ ಹಣಮಂತ ಮಳ್ಳಳ್ಳಿ ಮತ್ತು ಅವನ ತಮ್ಮ ಬಾಲಪ್ಪ ತಂದೆ ಹಣಮಂತ ಮಳ್ಳಳ್ಲಿ ಇಬ್ಬರೂ ಸೇರಿ ಊರು ಒಳಗೆ ಹೋಗುತ್ತಿದ್ದು ನಾಗಪ್ಪನು ನನಗೆ ಡಿಕ್ಕಿ ಹೊಡೆದು ಎಡಗಾಲು ತುಳಿದ್ದನು ಆಗ ನಾನು ಏಕೆ ಡಿಕ್ಕಿ ಹೊಡೆದಿ ಎಂದು ಕೇಳಿದಕ್ಕೆ ನಮಗೆ ಎದರು ಮಾತನಾಡುತ್ತಿಯಾ ಬೋಸುಡಿ ಮಗನೆ ಅಂತಾ ಅವ್ಯಾಚ ಬೈದು ಜಗಳ ತೆಗೆದವರೆ ಬಾಲಪ್ಪನು ನನಗೆ ತಡೆದು ನಿಲ್ಲಿಸಿದಾಗ ನಾಗಪ್ಪನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ಎಡ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿದನು. ಬಾಲಪ್ಪನು ಕಥ ಮುಷ್ಠಿ ಮಾಡಿ ಬಾಯಿಗೆ ಗುದ್ದಿದರಿಂದ ನನ್ನ ಮೇಲತುಟ್ಟಿಗೆ ಹೊಡೆದು ಗಾಯ ಮಾಡಿದನು. ಆಗ ಅಲ್ಲಿಯೇ ಇದ್ದ ನನ್ನ ತಂದೆ ಬೀಮಪ್ಪ ಈತನು ಜಗಳ ಬೀಡಿಸಲು ಬಂದರೆ ಆತನಿಗೆ ನೀನು ನಡುವೆ ಬರುತ್ತಿಯಾ ಬೋಸಡಿ ಮಗನೆ ಅಂತಾ ಬೈದು ಅದೇ ಕಟ್ಟಿಗೆಯಿಂದ ನನ್ನ ತಂದೆಯ ತೆಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಮಲ್ಲಪ್ಪ ತಂದೆ ಯಂಕಪ್ಪ ಹಳ್ಳಿ ಮತ್ತು ನಾಗಪ್ಪ ತಂದೆ ಸಾಬಣ್ಣ ಮಳ್ಳಳ್ಳಿ ಇವರು ಇಬ್ಬರೂ ಬಂದು ಬೀಡಿಸಿರುತ್ತಾರೆ ಅಲ್ಲಿಂದ ನಾವು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದಿರುತ್ತೇವೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 92/2021 ಕಲಂ: 504, 341, 324, 323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 97/2021 ಕಲಂ: 87 ಕೆಪಿ ಆಕ್ಟ: ಇಂದು ದಿನಾಂಕ: 15.07.2021 ಕಿರದಳ್ಳಿ ತಾಂಡದ ಸೇವಲಾಲ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಸದರ ಸ್ಥಳಕ್ಕೆ ಹೋಗಿ ಸೇವಲಾಲ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 7.00 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 1) ರಾಘವೇಂದ್ರ ತಂದೆ ಗೋಪಾಲ ರಾಠೊಡ ವ||35 ಜಾ: ಲಂಭಾಣಿ ಉ:ಕೂಲಿ ಸಾ: ಕಿರದಳ್ಳಿ ತಾಂಡ 2) ಕುಮಾರ ತಂದೆ ಶರಣು ಚವ್ಹಾಣ ವ:24 ಜಾ: ಲಂಭಾಣಿ ಉ: ಒಕ್ಕಲುತನ ಸಾ: ಕಾಚಾಪೂರ 3) ಪಾಪು ತಂದೆ ಪಾಂಡು ಚವ್ಹಾಣ ವ:36 ಜಾ: ಲಂಭಾಣಿ ಉ:ಒಕ್ಕಲುತನ ಸಾ: ಕಿರದಳ್ಳಿ ತಾಂಡ 4)ಶರಣಪ್ಪ ತಂದೆ ರಾಮಲಿಂಗಪ್ಪ ರಾಠೋಡ ವ:34 ಜಾ: ಲಂಭಾಣಿ ಉ:ಒಕ್ಕಲುತನ ಸಾ: ಕಿರದಳ್ಳಿ ತಾಂಡ 5)ಅಶೋಕ ತಂದೆ ಹಣಮಂತ್ರಾಯ ಮಾಲಿ ಬಿರಾದಾರ ವ:37 ಜಾ: ದೊರಿ ಸಾ: ಗೌಡಗೇರಾ 6) ಮಲ್ಲಿಕಾಜರ್ುನ ತಂದೆ ಸುಬ್ಬನಗೌಡ ಗೂಡುರು ವ:30 ಜಾ: ದೊರಿ ಉ:ಒಕ್ಕಲುತನ ಸಾ: ಗೌಡಗೇರ 7) ಅಂಜಿನೇಯ ತಂದೆ ರಾಮಣ್ಣ ಸಿಂಧನೂರು ವ:30 ಜಾ: ದೊರಿ ಸಾ: ಗೌಡಗೇರಾ 8)ಮಲ್ಲಿನಾಥ ತಂದೆ ಬಸನಗೌಡ ಮಾಲಿ ಬಿರಾದಾರ ವ:40 ಜಾ:ದೊರಿ ಉ:ಒಕ್ಕಲುತನ ಸಾ: ಗೌಡಗೇರಾ 9) ಆದಪ್ಪಗೌಡ ತಂದೆ ಬಸನಗೌಡ ಪೋಲೀಸ್ ಪಾಟೀಲ ವ:36 ಜಾ: ರೆಡ್ಡಿ ಸಾ: ಕಿರದಳ್ಳಿ ಒಟ್ಟು 09 ಜನ ಆರೋಪಿತರಿದ್ದು. ಮತ್ತು ಒಟ್ಟು 23000/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 06.30 ಎ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 06.00 ಗಂಟೆಗೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 97/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 16-07-2021 01:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080