ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-08-2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 43/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 15/08/2021 ರಂದು ಸಾಯಂಕಾಲ ಸಮಯ 7-30 ಎ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ನೂರ್ ರೈಸ್ ಮಿಲ್ ಹತ್ತಿರ ಈ ಕೇಸಿನ ಪಿಯರ್ಾದಿಯು ಮೋಟಾರು ಸೈಕಲ್ ನಂಬರ ಕೆಎ-33, ಎಚ್-8514 ನೇದ್ದರ ಮೇಲೆ ಯಾದಗಿರಿಯಿಂದ ಆರ್.ಹೊಸಳ್ಳಿಗೆ ಹೋಗುವಾಗ ಕಾರ್ ನಂಬರ ಕೆಎ-04, ಎಮ್.ಡಬ್ಲ್ಯು-2829 ನೇದ್ದರ ಚಾಲಕನು ಮುಂಡರಗಿ ಕಡೆಯಿಂದ ಯಾದಗಿರಿ ಕಡೆಗೆ ಬರುವಾಗ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಜೋರಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ಪಿಯರ್ಾದಿಗೆ ತಲೆಗೆ, ಎಡಗಾಲು ಮೊಣಕಾಲಿಗೆ, ಎಡಗಾಲು ಪಾದದ ಹೆಬ್ಬರಳಿಗೆ ಸಾದಾ ರಕ್ತಗಾಯ ಮತ್ತು ಬಾಯಿಗೆ ಭಾರೀ ರಕ್ತಗಾಯವಾಗಿ ಒಂದು ಹಲ್ಲು ಮುರಿದಿರುತ್ತದೆ, ಮೋಟಾರು ಸೈಕಲ್ ಸವಾರ ದಶರಥನಿಗೆ ತಲೆಗೆ ಒಳಪೆಟ್ಟಾಗಿದ್ದು, ಬಲಗಾಲಿನ ಪಾದದ ಮೇಲೆ, ಹಣೆಗೆ ಸಾದಾ ರಕ್ತಗಾಯ, ಬಲಗಾಲಿನ ತೊಡೆಗೆ ಭಾರೀ ಒಳಪೆಟ್ಟಾಗಿ ಮುರಿದಂತೆ ಕಂಡು ಬಂದಿರುತ್ತದೆ. ಕಾರ್ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 43/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 62/2021 ಕಲಂ: 341, 323, 324, 354(ಬಿ), 504, 506 ಸಂಗಡ 34 ಐಪಿಸಿ : ದಿನಾಂಕ:15/08/2021 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಫಿರ್ಯಾದಿ & ಫಿರ್ಯಾದಿಯ ಗಂಡ ಕೂಡಿ ತಮ್ಮ ಹಲಕ್ಕೆ ಬಿತ್ತಲು ಹೋದಾಗ ಆರೋಪಿತರು ಫಿರ್ಯಾದಿಯ ಹೊಲದಲ್ಲಿ ಬಂದು ಬಿತ್ತಲುನ ತಂದ ಟ್ಯಾಕ್ಟರ್ ಬಂದ್ ಮಾಡಿಸಿದ್ದು, ಫಿರ್ಯಾದಿ &ಫಿರ್ಯಾದಿಯ ಗಂಡ ಕೂಡಿ ಹೊಲದಲ್ಲಿ ಬಿತ್ತನೆ ಮಾಡುವದು ಏಕೆ ನಿಲ್ಲಿಸಿದ್ದರಿ ಅಂತಾ ಕೇಳಿದ್ದಕ್ಕೆ ಆರೋಪಿ ನಂ: 1 ನೇದ್ದವನು ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಕೈಯಿಂದ & ಹೆಂಟಿಯಿಂದ ಹೊಡೆದಿದ್ದು, ಫಿರ್ಯಾದಿಯ ಗಂಡನಿಗೆ ಸಹ ಹೆಂಟಿಯಿಂದ ಹೊಡೆದಿದ್ದು ಅಲ್ಲದೆ ಫಿರ್ಯಾದಿಗೆ ಆರೋಪಿ ನಂ:2 ನೇದ್ದವಳು ತಲೆಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿದ್ದು ಅವಾಚ್ಯ ಶಬ್ದಗಳಿಂದ ಒದರಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

 

ಭೀಗುಡಿ ಪೊಲೀಸ್ ಠಾಣೆ
58/2021 ಕಲಂ ಮಹಿಳೆ ಕಾಣೆಯಾದ ಬಗ್ಗೆ. : ನಿನ್ನೆ ದಿನಾಂಕ:14/08/2021 ರಂದು ಸಾಯಂಕಾಲ 4.30 ಗಂಟೆ ಸುಮಾರಿಗೆ ಫಿಯರ್ಾದಿಯ ಮಗಳಾದ ಸಂಗೀತಾ ಇವಳು ತನ್ನ ಬಟ್ಟೆಗಳು ಲೂಜ ಆಗಿವೆ ಟೇಲರ್ ಹತ್ತಿರ ಹೊಲಿಸಿಕೊಂಡು ಬರುತ್ತೇನೆಅಂತಾ ಹೇಳಿ ಮನೆಯಿಂದ ಹೋದವಳು ರಾತ್ರಿಯಾದರೂ ಮರಳಿ ಮನೆಗೆ ಬಂದಿರುವದಿಲ್ಲ. ನಿನ್ನೆರಾತ್ರಿಯಾಗಿದ್ದರಿಂದ ಮನೆಯಲ್ಲಿ ಮಲಗಿ ಇಂದು ದಿನಾಂಕ:15/08/2021 ರಂದು ಮುಂಜಾನೆಯಿಂದ ಹುಡುಕಾಡಿ ವಿಚಾರಿಸಲಾಗಿಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಆದ್ದರಿಂದಇಂದುತಡವಾಗಿಠಾಣೆಗೆ ಬಂದುದೂರು ನೀಡಿದ್ದುಇರುತ್ತದೆ. ಕಾಣೆಯಾದ ಸಂಗೀತಾ ಇವಳಿಗೆ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟದೂರಿನ ಮೇಲಿಂದ ಪ್ರಕರಣದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-08-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ