ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-08-2022

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 126/2022 ಕಲಂ: 143, 147, 323, 341, 504, 506 ಸಂ. 149 ಐಪಿಸಿ: ಇಂದು ದಿನಾಂಕ. 15/08/2022 ರಂದು 8-30 ಪಿಎಂಕ್ಕೆ ಶ್ರೀ ಮರೆಪ್ಪ ತಂದೆ ಶಂಕ್ರೆಪ್ಪ ತಳವಾರ ವ|| 20 ವರ್ಷ ಜಾ|| ಮಾದಿಗ ಉ|| ಒಕ್ಕಲುತ ಸಾ|| ಹಾಲಗೇರಾ ತಾ|| ಸುರಪುರ ರವರು ಠಾಣೆಗೆ ಬಂದು ಒಂದು ದೂರು ಅಜರ್ಿಯನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ನಮ್ಮೂರ ನಮ್ಮ ಜನಾಂಗದ ಬಸಪ್ಪ ತಂದೆ ಮರೆಪ್ಪ ಹೆಮ್ಮಡಗಿ ಈತನು ಒಂದು ವರ್ಷದ ಹಿಂದೆ ನನ್ನ ಮತ್ತು ನಮ್ಮ ಮನೆಯವರ ಮೇಲೆ ಸುರಪೂರ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಿದ್ದರು. ಸದರಿ ಕೇಸಿನಲ್ಲಿ ನಾನು ಜೈಲಿಗೆ ಹೋಗಿ ಈಗ ಕೆಲವು ತಿಂಗಳಿಂದೆ ಬಿಡುಗಡೆ ಹೊಂದಿ ಊರಿಗೆ ಬಂದು, ಊರಲ್ಲಿ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ. ಸದರಿ ಬಸಪ್ಪ ಮತ್ತು ಅವನ ಮನೆಯವರು ಆಗಾಗ ನನಗೆ ಲೇ ಮರ್ಯಾ, ಜೈಲಿಗೆ ಹೋಗಿ ಬಂದರು ಇನ್ನೂ ನಿನ್ನ ಸೊಕ್ಕು ಮುರಿದಿಲ್ಲ ಸೂಳಿ ಮಗನೇ, ಆಗ ನೀನು ಜೈಲಿನಿಂದ ಬಿಡುಗಡೆ ಆಗಿದಿ ಮಗನೆ, ಈಗ ಮತ್ತೆ ಇವತ್ತಿಲ್ಲಾ ನಾಳೆ ನಿನಗೆ ಜೈಲಿಗೆ ಕಳಿಸ್ತಿವಿ ಅಂತಾ ವಿನಾ ಕಾರಣ ಅವಾಚ್ಯಾವಾಗಿ ಬೈಯುತ್ತಿದ್ದರು. ಈ ವಿಷಯವನ್ನು ನಾನು ನಮ್ಮ ಮನೆಯಲ್ಲಿ ನನ್ನ ತಾಯಿ ಮಾಳವ್ವ ಇವಳಿಗೆ ಹೇಳಿದಾಗ, ನನ್ನ ತಾಯಿಯು ನಾನು ಅವರಿಗೆ ಬುದ್ಧಿ ಹೇಳುತ್ತೇನೆ ಈಗ ನೀನು ಸುಮ್ಮನಿರು ಅಂತಾ ಹೇಳಿದ್ದರಿಂದ ನಾನು ಅಷ್ಟಕ್ಕೆ ಸುಮ್ಮನಾಗಿದ್ದೆನು. ಹಿಗಿದ್ದು ಇಂದು ದಿನಾಂಕ:15/08/2022 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ನಾನು ಹೆಮನೂರ ಕ್ರಾಸ್ನ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ನಮ್ಮ ಎದುರುಗಡೆಯಿಂದ ನಮ್ಮ ಗ್ರಾಮದ 1) ಬಸಪ್ಪ ತಂದೆ ಮರೆಪ್ಪ ಹೆಮ್ಮಡಗಿ, 2) ರಾಮಪ್ಪ ತಂದೆ ಮರೆಪ್ಪ ಹೇಮ್ಮಡಗಿ, 3) ಮಲ್ಲಪ್ಪ ತಂದೆ ಮರೆಪ್ಪ ಹೇಮ್ಮಡಗಿ, 4) ಮಲ್ಲಮ್ಮ ಗಂಡ ಮೆರೆಪ್ಪ ಹೇಮ್ಮಡಗಿ, 5) ಚನ್ನಮ್ಮ ಗಂಡ ಬಸಪ್ಪ ಹೇಮ್ಮಡಗಿ ಇವರೆಲ್ಲರು ಬರುತ್ತಿದ್ದರು ಆಗ ನಾನು ನಡೆದುಕೊಂಡು ಹೋಗತ್ತಿದ್ದನ್ನು ಕಂಡು ಅವರು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಸಮಾನ ಉದ್ದೇಶದಿಂದ ಎಲ್ಲರೂ ಕೂಡಿಕೊಂಡು ನನಗೆ ಲೇ ಸೂಳಿ ಮಗನೆ ಮರ್ಯಾ, ಊರಾಗ ನಿಂದ ಬಹಳಾ ಆಗ್ಯಾದ ನಿನಗೆ ಮತ್ತೇ ಜೈಲಿಗೆ ಕಳಿಸ್ತೀವಿ ನಿನ್ನ ಸೊಕ್ಕು ಮುರೀತಿವಿ ಮಗನೆ ಅಂತಾ ಅಂದಾಗ ನಾನು ಅವರಿಗೆ ಯಾಕೆ ಬೈಯುತ್ತಿರಿ ಹಿಂದೆ ಆದದ್ದೇಲ್ಲಾ ಆಯಿತು ಹೋಗಲೀ ಬಿಡಿರಿ ನಾನು ಅದೆಲ್ಲಾ ಮರೆತಿದ್ದೇನೆ ಈಗ ನಾನು ಬೇರೆ ಕಡೆಗೆ ಹೋಗಬೆಕು ದಾರಿ ಬಿಡಿರಿ ಅಂತಾ ಅಂದಿದ್ದಕ್ಕೆ ಅವರು ನೀನು ಮರೆತರು ನಾವು ಮರೆತಿಲ್ಲಾ ಮಗನ್ಯಾ ಅಂತಾ ಅವಾಚ್ಯವಾಗಿ ಬೈದಾಗ ನಾನು ಅವರಿಗೆ ಯಾವುದೋ ಕೆಲಸ ಮೇಲೆ ಹೊರಟಿದ್ದೇನೆ ಈಗ ನನಗೆ ಹೋಗಲು ಬಿಡಿರಿ ಅಂತಾ ಅಂದಾಗ ಅದೇಂಗಾ ಹೋಗುತ್ತಿ ಮಗನ್ಯಾ ಈಗ ನಮ್ಮ ಕೈಗೆ ಒಬ್ಬನೆ ಸಿಕ್ಕಿದಿ ನಿನಗೆ ಇವತ್ತು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಅವರಲ್ಲಿಯ ಬಸಪ್ಪ ತಂದೆ ಮರೆಪ್ಪ ಹೆಮ್ಮಡಗಿ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡುತ್ತಿರುವಾಗ ನನ್ನ ಮೈಮೆಲಿನ ಅಂಗಿ ಹರಿದು ಹೋಗಿ ನೆಲದ ಮೇಲೆ ಬಿದ್ದೆನು. ಆಗ ರಾಮಪ್ಪ ಮತ್ತು ಮಲ್ಲಪ್ಪ ಇಬ್ಬರು ನನಗೆ ಕೈಯಿಂದ ಹೊಡೆದು ಕಾಲಿನಿಂದ ಬೆನ್ನಿಗೆ ಒದ್ದರು. ಮಲ್ಲಮ್ಮ ಮತ್ತು ಚನ್ನಮ್ಮ ಇಬ್ಬರೂ ಕೈಯಿಂದ ಕಪಾಳಕ್ಕೆ ಹೊಡೆದರು, ಆಗ ನಾನು ಚೀರಾಡುತ್ತಿರುವಾಗ ಅಲ್ಲೇ ಹೊರಟಿದ್ದ ತಿಪ್ಪಣ್ಣ ತಳವಾರ, ಬಸಪ್ಪ ತಂದೆ ರಾಮಪ್ಪ ಹೇಮ್ಮಡಗಿ, ದೇವಪ್ಪ ತಾಯಿ ರಾಚವ್ವ ಗಿರಿಣಿ, ನಿಂದಪ್ಪ ತಾಯಿ ರಾಚವ್ವ ಗಿರಿಣಿ, ಅಂಬ್ರಪ್ಪ ತಂದೆ ತಿಪ್ಪಾಣ್ಣ ತಳವಾರ ಎಲ್ಲರು ಕೂಡಿ ಜಗಳನ್ನು ನೋಡಿ ಬಿಡಿಸಿಕೊಂಡರು. ನನಗೆ ಜಗಳದಲ್ಲಿ ಸಣ್ಣ ಪುಟ್ಟ ಗುಪ್ತಗಾಯವಾಗಿದ್ದರಿಂದ ನಾನು ಆಸ್ಪತ್ರೆಗೆ ತೋರಿಸಿರುವುದಿಲ್ಲ. ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿದ ಈ ಮೇಲಿನವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ.ಅಂತಾ ಕೊಟ್ಟಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 126/2022 ಕಲಂ.143, 147 341, 323, 504, 506 ಸಂ. 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 96/2022 ಕಲಂ 279, 338ಐಪಿಸಿ: ಇಂದು ದಿನಾಂಕ 15.08.2022 ರಂದು ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಫಿಯರ್ಾದಿಯ ಗಂಡ ಶಂಕರ @ ಶೇಟಜಿ ಇವನು ಮೋಟಾರ ಸೈಕಲ ನಂಬರ ಕೆ.ಎ-33, ಇ.ಬಿ-2613 ನೇದ್ದರ ಮೇಲೆ ಯಾದಗಿರಿಯಿಂದ ರಾಯಚೂರ ಕಡೆಗೆ ಹೋರಟಿದ್ದಾಗ ಕೂಡ್ಲೂರ ಸೀಮಾಂತರದ ತಾಯಮ್ಮ ದೇವಿ ಗುಡಿ ಹತ್ತಿರ ತನ್ನ ಬೈಕನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಬೈಕ ಮೇಲಿಂದ ರೋಡಿನ ಮೇಲೆ ಬಿದ್ದು ಗಾಯಗೊಂಡಿದ್ದು, ಅಪಘಾತದಲ್ಲಿ ಹಣೆಗೆ ರಕ್ತಗಾಯವಾಗಿದ್ದು, ಬಲಕಿವಿಯಲ್ಲಿ ರಕ್ತ ಬಂದಿರುತ್ತದೆ. ಎರಡೂ ಕಾಲುಗಳಿಗೆ ತೆರಚಿದ ಮತ್ತು ಬೈಕ ಸೈಲನಸರದಿಂದ ಸುಟ್ಟ ಗಾಯಗಳಾಗಿರುತ್ತವೆ.ಸದರಿ ಬೈಕ ಸವಾರನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 16-08-2022 11:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080