ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 139/2022, ಕಲಂ, 323,324, 504.506. ಸಂಗಡ 34 ಐ.ಪಿ.ಸಿ: ಇಂದು ದಿನಾಂಕ:15-09-2022 ರಂದು ವ್ಮದ್ಯಾಹ್ನ 2-10 ಗಂಟೆಯ ಸುಮಾರಿಗೆ ಫಿರ್ಯಾಧಿದಾರಳಾದ ಶ್ರೀ ಮತಿ ಈರಮ್ಮ ಗಂಡ ದೊಡ್ಡ ಸಾಬಣ್ಣ ಪಸಪೂಲ ವ||61 ವರ್ಷ ಜಾ||ಕುರುಬ ಉ||ಹೊಲಮನೆ ಕೆಲಸ ಸಾ|| ವಡ್ನಳ್ಳಿ ತಾ||ಜಿ||ಯಾದಗಿರಿ ಇದ್ದು ನಮಗೆ ವಡ್ನಳ್ಳಿ ಸೀಮಾಂತರದಲ್ಲಿ ಹಿರಿಯರಿಂದ ಬಂದ ಹೊಲದಲ್ಲಿ ಹತ್ತಿ ಬೆಳೆ ಬೆಳೆದಿದ್ದು ಇರುತ್ತದೆ ನಮ್ಮ ಅಣ್ಣತಮ್ಮಕಿಯವರ ಹೊಲವಿದ್ದು ಅದು ಕೊಡಾ ನಾವೇ ಮಾಡಿಕೊಂಡು ಹೋಗುತ್ತಿರುತ್ತೆವೆ, ಅದಕ್ಕೆ ನಾವು ವರ್ಷಕ್ಕೆ ಇಷ್ಟು ಅಂತಾ ಹೇಳಿ ಹಣ ನೀಡುತ್ತಿದ್ದೆವು. ಹಿಗಿದ್ದು ನೀನ್ನೆ ದಿನಾಂಕ:14-09-2022 ರಂದು ಬೆಳಗ್ಗೆ 11:00 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದ್ದ ಮ್ಯಾರಿಯಲ್ಲಿ ಎತ್ತುಗಳು ಮೆಯಿಸುತ್ತಿರುವಾಗ ಮರಿಯಮ್ಮ ಗಂಡ ಸಣ್ಣ ಸಾಬಣ್ಣ ಈಕೆಯು ಅಲ್ಲಿಗೆ ಬಂದು ನಮ್ಮ ಗ್ರಾಮದ ಮೈಲಾರಿ ತಂದೆ ಹಣಮಂತ ರಾಂಪುರ ಮತ್ತು ಆತನ ಹೆಂಡತಿ ಸಿದ್ದಮ್ಮ ಗಂಡ ಮೈಲಾರಿ ರಾಂಪುರ ಇವರು ಜೊತೆಗೂಡಿಕೊಂಡು ಬಂದು ನಮಗೆ ಸಾಗುವಳಿ ಮಾಡಲು ನೀಡಿದ ಹೋಲದಲ್ಲಿ ಗಳೆ ಹೊಡೆಯಲು ಬಂದಿದ್ದರು ನಾನು ಯಾಕೇ ಗಳೆ ಹೊಡೆಯುತ್ತಿರಿ ಮರಿಯಮ್ಮ ಈ ಹೊಲ ನಮಗೆ ಸಾಗುವಳಿ ಮಾಡು ಅಂತಾ ಹೇಳಿ ಈ ವರ್ಷದ ಹಣ ಪಡೆದುಕೊಂಡಿದ್ದಿಯಲ್ಲ ಅಂತಾ ಕೇಳಿದ್ದಕ್ಕೆ ಇಲ್ಲಾ ಈ ಸಲ ನಾನು ನನ್ನ ಪಾಲಿನ ಹೊಲ ಸಾಗುವಳಿ ಮಾಡಲು ನಾನು ಮೈಲಾರಿಯವರಿಗೆ ನೀಡಿದ್ದೆನೆ ನೀನು ಯಾರೂ ಕೆಳಲು ಲೇ ಸೂಳೆ ರಂಡಿ ನೀನು ನನಗೆ ಯಾವ ಹಣ ಕೊಟ್ಟಿಲ್ಲ ಏನು ಇಲ್ಲಾ ಅಂತಾ ಹೇಳಿದಾಗ ನಾನು ಇಲ್ಲಾ ನನ್ನ ಹಣ ಕೊಟ್ಟು ಗಳೆ ಹೊಡೆಯಿರಿ ಅಂತಾ ಹೇಳಿದಕ್ಕೆ, ಸಿದ್ದಮ್ಮ ಗಂಡ ಮೈಲಾರಿ ಈಕೆ ಲೇ ರಂಡಿ ನಮ್ಮಗೆ ರೊಕ್ಕ ಕೇಳುತ್ತಿಯಾ ಅಂತ ಅಲ್ಲೆ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲು ತೆಗೆದುಕೊಂಡು ಹೊಟ್ಟೆಗೆ ಮತ್ತು ಬೆನ್ನಿಗೆ ಗುದ್ದಿ ಗುಪ್ತಗಾಯ ಮಾಡಿ ನೆಲಕ್ಕೆ ಹಾಕಿ ನನ್ನ ಮೇಲೆ ಕುಳಿತುಕೊಂಡು ಗುದ್ದುತ್ತಿರುವಾಗ ಮರಿಯಮ್ಮ ಈಕೆ ಕಾಲಿನಿಂದ ಒದ್ದು ಈ ಸೂಳೇ ರಂಡಿ ಮಗಳಿಗೆ ಖಲಾಸ ಮಾಡರಿ ಇವತ್ತು ಬಿಡಬ್ಯಾಡರಿ ಈಕೆನೆ ಎಲ್ಲಾರಿಗೆ ಸೇರಿಸಿಕೊಂಡು ನಮಗೆ ಸರಿಯಾಗಿ ಹಣ ಕೊಡುತ್ತಿರಲಿಲ್ಲ ಅಂತಾ ಹೇಳಿ ಮನ ಬಂದಂತೆ ಕೈಯಿಂದ ಮತ್ತು ಕಾಲಿನಿಂದ ಒದ್ದಿರುತ್ತಾಳೆ, ಮೈಲಾರಿ ಇತನು ನನ್ನ ಎರಡು ಕೈಗಳನ್ನು ತಿರುವಿ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ. ನಾನು ಚಿರಾಡುತ್ತಿರುವಾಗ ನಮ್ಮ ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ದೇವಿಂದ್ರಮ್ಮ ಗಂಡ ಶರಣಪ್ಪ ಮತ್ತು ಹೊನ್ನಮ್ಮ ಗಂಡ ಮಲ್ಲಯ್ಯ ಇವರು ಓಡೋಡಿ ಬಂದು ಜಗಳ ಬಡಿಸಿಕೊಂಡಿರುತ್ತಾರೆ. ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿದಿ ರಂಡಿ ಸೂಳೇ ಇನ್ನೊಂದ ಸಲ ಒಬ್ಬಾಕಿ ಸಿಗು ಅವಾಗ ನಿನಗ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನನಗೆ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ಮೇಲೆ ಹೇಳಲಾದ ಮರಿಯಮ್ಮ ಗಂಡ ಸಣ್ಣ ಸಾಬಣ್ಣ, ಮೈಲಾರಿ ತಂದೆ ಹಣಮಂತ, ಮತ್ತು ಸಿದ್ದಮ್ಮ ಗಂಡ ಮೈಲಾರಿ ಸಾ||ವಡ್ನಳ್ಳಿ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ.ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.139/2022 ಕಲಂ.323, 324, 504, 506, ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 16-09-2022 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080