ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-10-2021

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ.63/2021 ಕಲಂ: 143, 147, 148, 323, 324, 307, 341, 354, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ 15/10/2021 ರಂದು 12:30 ಪಿ.ಎಂ ಕ್ಕೆ ಶ್ರೀ ಬಸಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ವ:30 ವರ್ಷ ಉ:ಒಕ್ಕಲುತನ ಜಾ:ಹಿಂದು ಬೇಡರ ಸಾ:ಯರಕಿಹಾಳ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು ಐದು ಜನ ಗಂಡು ಮಕ್ಕಳಿದ್ದು ನಮ್ಮ ಮನೆಯವರು ಯರಕಿಹಾಳದಲ್ಲಿ ಇರುವ ನಮ್ಮ ಹೊಲದಲ್ಲಿ ಮನೆಯನ್ನು ಕಟ್ಟಿಕೊಂಡು ಹೊಲದಲ್ಲಯೇ ವಾಸವಿರುತ್ತೇವೆ. ನಮ್ಮ ಹೊಲದ ಪಕ್ಕದಲ್ಲಿಯೇ ನಮ್ಮ ಅಣ್ಣತಮ್ಮಕೀಯ ಶರಣಪ್ಪ ರವರ ಹೊಲವಿದ್ದು ನಮಗೂ ಮತ್ತು ಶರಣಪ್ಪ ರವರಿಗೂ ಈ ಮೊದಲಿನಿಂದಲೂ ದಾರಿಯ ವಿಷಯದಲ್ಲಿ ತಕರಾರು ಇರುತ್ತದೆ. ಹೀಗಿದ್ದು ದಿನಾಂಕ 14/10/2021 ರಂದು 5:00 ಪಿ.ಎಂ ಕ್ಕೆ ನಾನು ಹಾಗೂ ನನ್ನ ತಂದೆ ಹಣಮಂತ್ರಾಯ ತಂದೆ ಬಾಲಪ್ಪ ಹುಲಿಕೇರಿ ವ:60 ವರ್ಷ ಹಾಗೂ ನಮ್ಮ ತಾಯಿ ರತ್ನಮ್ಮ ವ:55 ವರ್ಷ ಮೂರು ಜನ ಕೂಡಿಕೊಂಡು ನಮ್ಮೂರಿನಿಂದ ಹೊಲದಲ್ಲಿ ಇರುವ ನಮ್ಮ ಹೊಲಕ್ಕೆ ಶರಣಪ್ಪ ರವರ ಹೊಲದ ಪಕ್ಕದಲ್ಲಿ ಇರುವ ದಾರಿಯ ಮೇಲಿಂದ ಹೋಗುತ್ತಿದ್ದಾಗ ಅಲ್ಲಿಗೇ ಬಂದ 1).ಬಸಪ್ಪ @ ಮುತ್ತಪ್ಪ ತಂದೆ ಶರಣಪ್ಪ ಹುಲಿಕೆರಿ ಸಾ:ಯರಕಿಹಾಳ 2). ಹಣಮಂತ ಗುರಿಕಾರ ಸಾ:ನಾಲತವಾಡ 3) ಸೋಮಣ್ಣ ಗುರಿಕಾರ ಸಾ:ನಾಲತವಾಡ 4) ಅಮರೇಶ ತಂದೆ ಶರಣಪ್ಪ ಹುಲಿಕೇರಿ ಸಾ:ಯರಕಿಹಾಳ 5) ಮಲ್ಲಮ್ಮ ಗಂಡ ಶರಣಪ್ಪ ಹುಲಿಕೇರಿ ಸಾ:ಯರಕಿಹಾಳ 6). ಶರಣಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ಸಾ:ಯರಕಿಹಾಳ 7). ಮೌನೇಶ ತಂದೆ ಬಸಪ್ಪ ಗುರಿಕಾರಿ ಸಾ:ನಾಲತವಾಡ ರವರು ಕೂಡಿಕೊಂಡು ತಮ್ಮ ಕೈಯಲ್ಲಿ ಕೊಡ್ಲಿ ಮತ್ತು ರಾಡುಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದು ಅವರೆಲ್ಲರೂ ಕೂಡಿ ನಾವು ಹೋಗುತ್ತಿದ್ದಾಗ ನಮಗೆ ತಡೆದು ನಿಲ್ಲಿಸಿ ಅವರಲ್ಲಿಯ ಬಸಪ್ಪ @ ಮುತ್ತಪ್ಪ ಈತನು ನನಗೆ ಬೋಸುಡಿ ಮಕ್ಕಳೆ ನಮ್ಮ ಹೊಲದಲ್ಲಿ ನಿಮಗೆ ದಾರಿ ಇಲ್ಲ ಅಂತ ಅಂದರು ನಮ್ಮ ಹೊಲದಲ್ಲಿ ಯಾಕೆ ತಿರುಗಾಡುತ್ತಿರಿ ಅಂತಾ ಅಂದನು ಆಗ ನಮ್ಮ ಅಪ್ಪ ಹಣಮಂತ್ರಾಯನು ನೀಮ್ಮ ಹೊಲದಲ್ಲಿ ತಿರುಗಾಡ ಬೇಡ ಅಂತಾ ಅಂದ ದಿನದಿಂದ ನಾವು ನಿಮ್ಮ ಹೊಲದಲ್ಲಿ ತಿರುಗಾಡುವದನ್ನು ಬಿಟ್ಟಿರುತ್ತೆವೆ ನಾವು ಸರಕಾರಿ ಹಳ್ಳದಲ್ಲಿ ತಿರುಗಾಡುತ್ತಿದ್ದೆವೆ ಅಂತಾ ಅಂದನು ಆಗ ಅವರಲ್ಲಿಯ ಹಣಮಂತ ಗುರಿಕಾರ ಈತನು ರಂಡಿ ಮಕ್ಕಳ ಹೊಲದಲ್ಲಿ ತಿರುಗಾಡಿ ಇಲ್ಲ ಅಂತಾ ಸುಳ್ಳು ಬೊಗಳ್ಳುತ್ತಿರಾ ಅಂತಾ ಅನ್ನುತ್ತಿದ್ದನು ಆಗ ನಮ್ಮ ಅಪ್ಪ ಹಣಮಂತ್ರಾಯನು ಹಣಮಂತ ಗುರಿಕಾರ ಈತನಿಗೆ ಸರಿಯಾಗಿ ಮಾತಡಪಾ ಅಂತಾ ಅಂದಾಗ ಅವರಲ್ಲಿಯ ಬಸಪ್ಪ @ ಮುತ್ತಪ್ಪ ಹಾಗೂ ಹಣಮಂತ ಹಾಗೂ ಸೋಮಣ್ಣ ರವರು ಈ ಸೂಳಿ ಮಕ್ಕಳನ್ನು ಈಗೆ ಬಿಟ್ಟರೆ ಇವರು ತಿರುಗಾಡುವದು ಬಿಡುವದಿಲ್ಲ ಇವರನ್ನು ಇವತ್ತು ಇಲ್ಲೆ ಕಲಾಸ ಮಾಡಿಬಿಟ್ಟರ ಇವರ ಅಣ್ಣತಮ್ಮಂದಿರು ಇಲ್ಲಿ ತಿರುಗಾಡುವದು ಬಿಡುತ್ತಾರೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ಬಸಪ್ಪ ಈತನು ತನ್ನ ಕೈಯಲ್ಲಿಯ ಕೊಡಲಿ ತುಂಬಿನಿಂದ ನಮ್ಮ ಅಪ್ಪ ಹಣಮಂತ್ರಾಯನ ತಲೇಗೆ ಹೊಡೆಯಲು ಬಂದಿದ್ದು ನಮ್ಮ ಅಪ್ಪ ಹಣಮಂತ್ರಾಯನು ಸತ್ತಿನೆಪ್ಪ ಅಂತಾ ತಪ್ಪಿಸಿಕೊಂಡಾಗ ಆ ಏಟು ನಮ್ಮ ಅಪ್ಪನ ಎಡಗಡೆ ಮುಡ್ಡಿಯ ಹಿಂದೆ ಬಿದ್ದಿದ್ದು ಇದರಿಂದ ನಮ್ಮ ಅಪ್ಪನ ಎಡಗಡೆ ಹಿಂದುಗಡೆ ಕಂದು ಗಟ್ಟಿದ ಗುಪ್ತ ಪೆಟ್ಟು ಆಗಿ ನಮ್ಮ ಅಪ್ಪನು ಕೆಳಗೆ ಬಿದ್ದನು, ನಮ್ಮ ಅಪ್ಪನು ಕೆಳಗಡೆ ಬಿದ್ದ ನಂತರ ಅವರಲ್ಲಿಯ ಸೋಮಣ್ಣ ಗುರಿಕಾರಿ ಈತನು ತನ್ನ ಕೈಯಲ್ಲಿಯ ರಾಡಿನಿಂದ ನಮ್ಮ ಅಪ್ಪನ ಎಡಗಡೆ ಚೆಪ್ಪೆಯ ಮೇಲೆ ಹೊಡೆದಿದ್ದು ಇದರಿಂದ ನಮ್ಮ ಅಪ್ಪನ ಎಡಗಡೆ ಚಪ್ಪಿಯಲ್ಲಿ ಗುಪ್ತ ಪೆಟ್ಟಾಗಿದ್ದು ಇರುತ್ತದೆ. ನಂತರ ನಪ್ಪನಿಗೆ ಹೊಡೆಯುವದನ್ನು ನಾನು ಬಿಡಿಸಿಕೊಳ್ಳಲು ಹೋದಾಗ ಅವರಲ್ಲಿಯ ಅಮರೇಶ ಹುಲಿಕೇರಿ ಈತನು ತನ್ನ ಕೈಯಲ್ಲಿಯ ರಾಡಿನಿಂದ ನನ್ನ ತಲೆಗೆ ಹೊಡೆದಿದ್ದು ಇದರಿಂದ ನನ್ನ ತಲೆಯಲ್ಲಿ ರಕ್ತಗಾಯವಾಗಿರುತ್ತದೆ. ನಂತರ ನಮ್ಮಿಬ್ಬರಿಗೆ ಹೊಡೆಯುವದನ್ನು ಬಿಡಿಸಿಕೊಳ್ಳಲು ಬಂದ ನಮ್ಮ ತಾಯಿ ರತ್ನಮ್ಮ ಇವಳಿಗೆ ಅವರಲ್ಲಿಯ ಅಮರೇಶ ಈತನು ಕಾಲಿನಿಂದ ಎದೆಗೆ ಒದ್ದು ಅವಳ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದ್ದು ಮಲ್ಲಮ್ಮ ಇವಳು ಕೈಯಿಂದ ನಮ್ಮ ತಾಯಿಯ ಕಪಾಳಕ್ಕೆ ಹೊಡೆದು ಅವಾಚ್ಯವಾಗಿ ಬೈಯುತ್ತಿದ್ದಾಗ ಅಲ್ಲಿಯೇ ದಾರಿ ಮೇಲಿಂದ ಬರುತ್ತಿದ್ದ ನಮ್ಮೂರ ಹಣಮಂತ್ರಾಯಗೌಡ ತಂದೆ ಬಸನಗೌಡ ಮಾಲಿಪಾಟೀಲ, ಗಂಗಪ್ಪ ತಂದೆ ಬಸಪ್ಪ ಗಿರಣಿ, ಶರಣಪ್ಪ ತಂದೆ ಬಸಪ್ಪ ಹವಲ್ದಾರ ರವರು ಬಂದು ಜಗಳ ಬಿಡಿಸಿದರು. ನಂತರ ಅವರಲ್ಲಿಯ ಶರಣಪ್ಪ ಹುಲಕೇರಿ, ಹಾಗೂ ಮೌನೇಶ ಗುರಿಕಾರ ರವರು ನಮಗೆ ಬೋಸುಡಿ ಮಕ್ಕಳೆ ಇವರು ಬಂದು ಬಿಡಿಸಿಕೊಂಡರು ಅಂತಾ ಉಳಿದುಕೊಂಡಿದ್ದಿರಿ ಇನ್ನೊಮ್ಮೆ ನಮ್ಮ ಹೊಲದ ಕಡೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಿನ್ನೆ ದಿನ ನಮ್ಮ ತಂದೆಯನ್ನು ಲಿಂಗಸೂರ ದವಾಖಾನೆಗೆ ಕರೆದುಕೊಂಡು ಹೋಗಿದ್ದು ನಾನು ಮತ್ತು ನಮ್ಮ ತಾಯಿ ರತ್ಮಮ್ಮ ರವರು ನಿನ್ನೆ ದಿನ ಕೊಡೆಕಲ್ಲ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡು ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಇಂದು ಇಲ್ಲಿಗೆ ಬಂದು ಪಿಯರ್ಾದಿ ಕೊಟ್ಟಿದ್ದು ನಮಗೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆಮಾಡಿದವರ ಮೇಲೆ ಕೇಸುಮಾಡಬೇಕು ಅಂತಾ ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 63/2021 ಕಲಂ: 143, 147, 148, 323, 324, 307, 341, 354, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಪಿ,ಎ,ಆರ್.ನಂ.03/2021 ಕಲಂ 107 ಸಿ.ಆರ್.ಪಿ.ಸಿ. : ಇಂದು ದಿನಾಂಕ: 15/10/2021 ರಂದು 12-30 ಗಂಟೆಗೆ ಸಕರ್ಾರಿ ತಫರ್ೆ ಫಿಯರ್ಾದಿ ಶ್ರೀ ಹಣಮಂತ ಬಿ. ಪಿ.ಎಸ್.ಐ. ಶಹಾಪುರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದರ ಸಾರಾಂಶವೇನೆಂದರೆ, ದಿನಾಂಕ: 15/10/2021 ರಂದು ಚಟ್ನಳ್ಳಿ ಗ್ರಾಮಕ್ಕೆ ಬೇಟಿ ಕುರಿತು ಠಾಣೆಯಿಂದ 9-00 ಗಂಟೆಗೆ ಹೊರಟು 10-00 ಗಂಟೆಗೆ ಚಟ್ನಳ್ಳಿ ಗ್ರಾಮಕ್ಕೆ ಹೋದಾಗ ನನಗೆ ಪೊಲೀಸ್ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಎನೆಂದರೆ ಚಟ್ನಳ್ಳಿ ಗ್ರಾಮದ ಪಾಟರ್ಿ-ಒಂದು 1] ಮಲ್ಲಣ್ಣ ತಂದೆ ಬಸವಂತ್ರಾಯಗೌಡ ಭೀಮನಳ್ಳಿ ವ|| 45 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪುರ 2] ವಿಶ್ವನಾಥರೆಡ್ಡಿ ತಂದೆ ಬಸವಂತ್ರಾಯಗೌಡ ವ|| 40 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪುರ 3] ಶಿವು @ ಶಿವುಕಾಮಾರ ತಂದೆ ಬಸರಾಜಪ್ಪಗೌಡ ವ|| 28 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪುರ ಇವರು ಹಿರಿಯರ ಆಸ್ತಿಯ ಸವರ್ೇ ನಂ 436/2 ನೇದ್ದರ 00-20 ಗುಂಟೆಯ ಹೋಲದ ಸಂಬಂದವಾಗಿ 1] ಬಸವಂತ್ರಾಯಗೌಡ ತಂದೆ ಸಿದ್ಲಿಂಗಪ್ಪಗೌಡ ಬಿರಾದಾರ ಪಾಟೀಲ ವ|| 62 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪುರ 2] ಸಿದ್ರಾಮರೆಡ್ಡಿ ತಂದೆ ಬಸವಂತ್ರಾಯಗೌಡ ಬಿರಾದಾರ ಪಾಟೀಲ್ ವ|| 34 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ಶಹಾಪುರ ಇವರೊಂದಿಗೆ ಸುಮಾರು 5-6 ವರ್ಷಗಳಿಂದ ತಕರಾರು ಮಾಡುತ್ತ ಬಂದಿದ್ದು ಒಬ್ಬರಿಗೊಬ್ಬರು ದ್ವೇಶಸಾದಿಸುತ್ತ ಬಂದಿದ್ದು ಯಾವ ಸಮಯದಲ್ಲಾದರು ಗ್ರಾಮದಲ್ಲಿ ಗಲಾಟೆ ಮಾಡಿ ಸಾರ್ವಜನಿಕರ ಶಾಂತತಾ ಭಂಗವುಂಟು ಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿ ಪ್ರಾಣ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ದಕ್ಕೆವುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ, ಮಾನ್ಯ ತಾಲೂಕಾ ದಂಡಾಧಿಕಾರಿಗಳು ಶಹಾಪೂರ ರವರು ಸದರಿ ಮೋದಲನೆ 1 ನೇ ಪಾಟರ್ಿಯವರಾದ 1] ಮಲ್ಲಣ್ಣ 2] ವಿಶ್ವನಾಥರೆಡ್ಡಿ 3] ಶಿವು @ ಶಿವುಕಾಮಾರ ಇವರು ಸದ್ವರ್ತನೆಯಿಂದ ಇರಲು ಸೂಕ್ತ ಬಾಂಡ ಬರೆಯಿಸಿಕೊಳ್ಳುವ ಅವಶ್ಯಕತೆ ಇರುವುದರಿಂದ ಮರಳಿ ಠಾಣೆಗೆ ಇಂದು ದಿನಾಂಕ 15/10/2021 ರಂದು 12-00 ಗಂಟೆಗೆ ಬಂದು ಮೇಲ್ಕಂಡ ಮೋದಲನೆ ಪಾಟರ್ಿಜನರ ವಿರುದ್ದ ವರದಿಯನ್ನು ತಯ್ಯಾರಿಸಿ 12-30 ಗಂಟೆಗೆ ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಪಿ,ಎ,ಆರ್,ನಂ 03/2021 ಕಲಂ 107 ಸಿ.ಆರ್.ಪಿ.ಸಿ. ನ್ನೆದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

 

ಗೋಗಿ ಪೊಲೀಸ್ ಠಾಣೆ
ಪಿಎಆರ್ ನಂ: 21/2021 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 14/10/2021 ರಂದು 9-25 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಬಸ್ಸಮ್ಮ ಗಂಡ ಮರೆಪ್ಪ ತಳವಾರ ವಯ|| 54 ಜಾತಿ|| ತಳವಾರ ಉ|| ಕೂಲಿಕೆಲಸ ಸಾ|| ಚನ್ನೂರ.ಕೆ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ದಸ್ತೂರ ಮೂಲಕ ಬರೆಯಿಸಿದ ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮಗೆ 3 ಜನಗಂಡು ಮಕ್ಕಳು 3 ಜನ ಹೆಣ್ಣುಮಕ್ಕಳಿದ್ದು ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದು ಒಬ್ಬಳು ಸಣ್ಣ ಮಗಳಾದ ಸಿದ್ದಮ್ಮ ಮತ್ತು ಗಂಡು ಮಕ್ಕಳಾದ ಮಲ್ಲಪ್ಪ, ಯಲ್ಲಪ್ಪ, ಮತ್ತು ಭೀಮರಾಯ (ಭಲಭೀಮ) ಹಾಗೂ ದೋಡ್ಡ ಮಗನ ಹೆಂಡತಿಯಾದ ಮಲ್ಲಮ್ಮ ಎಲ್ಲರೂ ಕೂಡಿ ವಾಸವಾಗಿರುತ್ತೆವೆ. ನನ್ನ ಗಂಡನ ಹೆಸರಿನಲ್ಲಿ ಚನ್ನೂರ.ಕೆ ಸಿಮಾಂತರದಲ್ಲಿ ಹೋಲ ಸವರ್ೆ ನಂಬರ:236 ವಿಸ್ತೀರ್ಣ 1ಎಕರೆ 6 ಗುಂಟೆ ಜಮೀನು ಇದ್ದು ನನ್ನ ಗಂಡನೆ ಒಕ್ಕಲುತನ ಮಾಡಿಕೊಂಡು ನನ್ನ ಸಂಸಾರ ನೋಡಿಕೊಂಡು ಹೂಗುತ್ತಿದ್ದಾ ಕೃಷಿ ಕೆಲಸಕ್ಕೆ ಮತ್ತು ಸಂಸಾರದ ಅಡಚಣೆಗಾಗಿ ನನ್ನ ಗಂಡನು ಕೆ.ಜಿ.ಬಿ ಬ್ಯಾಂಕ ವನದುರ್ಗದಲ್ಲಿ 50000 ರೂಪಾಯಿ ಸಾಳ ಮಾಡಿದ್ದ ಮತ್ತು ಕೈ ಸಾಲವಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದನು ಸಾಲ ತೀರಿಸುವುದು ಹೇಗೆ ಅಂತಾ ಚಿಂತೆ ಮಾಡುತ್ತಿದ್ದ ನಾವುಗಳು ಚಿಂತೆಮಾಡ ಬೇಡಾ ಅಂತಾ ಸಮಾಧನಾ ಹೇಳುತ್ತಿದ್ದೆವು. ಹಿಗಿದ್ದು ದಿನಾಂಕ: 14/10/2021 ರಂದು ನಮ್ಮ ಸೋಸೆ ಹೋಲದಲ್ಲಿ ಹತ್ತಿ ಬೆಳೆಯಲ್ಲಿ ಕಸ ತೆಗೆಯುತ್ತಿದ್ದಾಗ ನನ್ನ ಗಂಡನಾದ ಮರೆಪ್ಪ ಈತನು ಹೋಲಕ್ಕೆ ಹೋಗಿ ಇಂದು ಮದ್ಯಾಹ್ನ 2-00 ಪಿ.ಎಮ್ ಸುಮಾರಿಗೆ ಕ್ರಿಮಿನಾಶಕ ಎಣ್ಣೆ ಕುಡಿದ್ದಿದ್ದು ನೋಡಿ ಚೀರಾಡಿದಾಗ ಪಕ್ಕದ ಹೋಲದವರಾದ ರವಿ ತಂದೆ ಮಹಾದೇವಪ್ಪ ಬೋಯೆರ , ಬಸವರಾಜ ತಂದೆ ಶಿವಣ್ಣ ಲಕ್ಕಿ ಇವರು ಮತ್ತು ನಮ್ಮ ಸೋಸೆ ಮಲ್ಲಮ್ಮ ಇವರು ಕೂಡಿ ನನ್ನ ಗಂಡನಿಗೆ ಮನೆಗೆ ಕರೆದುಕೊಂಡು ಬಂದಿದ್ದು ಉಪಚರಿಸಿದಾಗ ಸಾಲ ಬಹಳಾಗಿದೆ ಅಂತಾ ಚಿಂತೆಯಲ್ಲಿ ಎಣ್ಣೆ ಕುಡಿದ್ದಿದ್ದಾಗಿ ಹೇಳೆ ಅಳತೋಡಗಿದ ಕೂಡಲೇ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ನಾನು ನನ್ನ ಮಗ ಮಲ್ಲಪ್ಪ ನಮ್ಮ ಮೈದುನ ಎಲ್ಲರೂ ಕೂಡಿ ಕಲಬುಗರ್ಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯ ನನ್ನ ಗಂಡನಾದ ಮರೆಪ್ಪ ಈತನು ಇಂದು ದಿನಾಂಕ 14/10/2021 ರಂದು 6-40 ಪಿ.ಎಮ್ ಸುಮಾರಿಗೆ ಜೇವಗರ್ಿ ಹತ್ತಿರ ಮೃತಪಟ್ಟಿರುತ್ತಾನೆ ನನ್ನ ಗಂಡನ ಶವವನ್ನು ಮರಳಿ ಶಹಾಪೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದೆವೆ ನನ್ನ ಗಂಡನಾದ ಮರೆಪ್ಪ ಈತನು ಸಾಲದ ಬಗ್ಗೆ ಚಿಂತೆಮಾಡುತ್ತಾ ಅದೆ ಚಿಂತೆಯಲ್ಲಿ ಇಂದು ದಿನಾಂಕ:14/10/2021 ರಂದು 2-00 ಪಿ.ಎಮ್ ಸುಮಾರಿಗೆ ನಮ್ಮ ಹೋಲದಲ್ಲಿ ಕ್ರಿಮಿನಾಶಕ ಎಣ್ಣೆ ಕುಡಿದು ಉಪಚಾರಕ್ಕೆ ಕಲಬುಗರ್ಿಗೆ ಕರೆದುಕೊಂಡು ಹೋಗುವಾಗ 6-40 ಪಿ.ಎಮ್ ಸುಮಾರಿಗೆ ಜೇವಗರ್ಿ ಹತ್ತಿರ ಮೃತಪಟ್ಟಿರುತ್ತಾನೆ ನನ್ನ ಗಂಡನ ಸಾವಿನ ವಿಷಯದಲ್ಲಿ ನನ್ನದು ಆಥವಾ ನಮ್ಮ ಮನೆಯವರದು ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಕಾರಣ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 21/2021 ಕಲಂ: 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 16-10-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080