ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-10-2022

 

 

ಸೈದಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 115/2022 ಕಲಂ 279,338, 304(ಎ) ಐಪಿಸಿ: ಇಂದು ದಿನಾಂಕ 15.10.2022 ರಂದು ಬೆಳಿಗ್ಗೆ 9-30 ಗಂಟೆಗೆ ಬನ್ನಪ್ಪ ತಂದೆ ನಿಂಗಪ್ಪ ಬಾಡದೋರ ವಯ|| 28ವರ್ಷ, ಜಾ|| ಕುರುಬರ ಉ|| ಒಕ್ಕಲುತನ ಸಾ|| ಕಣೇಕಲ್ ಗ್ರಾಮ ಇವರು ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿ ಸಲ್ಲಿಸಿರುತ್ತಾರೆ. ದೂರಿನ ಸಾರಾಂಶವೇನೆಂದರೆ, ದಿನಾಂಕ 15.10.2022 ರಂದು ಬೆಳಿಗ್ಗೆ ನಮ್ಮ ಅಣ್ಣನ ಮಗ ಕೃಷ್ಣಾ ಇವನು ರಾಜಕೋಟದಿಂದ ಚೆನ್ನೈ ಸೂಪರ ಫಾಸ್ಟ ರೈಲ್ವೇದಲ್ಲಿ ಸೈದಾಪೂರಗೆ ಬಂದಿದ್ದು ಅವನನ್ನು ಕರೆಯಲು ನಾನು ನನ್ನ ಮೋಟಾರ ಸೈಕಲ ಮೇಲೆ ಸೈದಾಪೂರ ರೈಲ್ವೇ ಸ್ಟೇಶನಗೆ ಹೋಗಿದ್ದೆನು. ಅಷ್ಟರಲ್ಲಿ ಕೃಷ್ಣಾ ಇವನು ತನ್ನ ಗೆಳೆಯ ಮಹೇಶ ತಂದೆ ನರಸಪ್ಪ ಈತನ ಮೋಟಾರ ಸೈಕಲ ಮೇಲೆ ಸೈದಾಪೂರದಿಂದ ಕಣೇಕಲಗೆ ಹೊರಟಿದ್ದನು. ನಾನು ಕೃಷ್ಣಾನ ಲಗೇಜ ತೆಗೆದುಕೊಂಡು ಅವರ ಬೈಕ ಹಿಂದೆ ಬಂದೆನು. ಕರಿಬೆಟ್ಟ ಕ್ರಾಸ ಬಳಿ ಮಹೇಶ ತನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಕ್ರಾಸ ದಾಟುತ್ತಿದ್ದಾಗ ಇಂದು ಬೆಳಿಗ್ಗೆ 7-45 ಗಂಟೆ ಸುಮಾರಿಗೆ ಯಾದಗಿರಿ ಕಡೆಯಿಂದ ಬಂದ ಲಾರಿಯೊಂದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಿಯಂತ್ರಿಸದೆ ಮಹೇಶನು ನಡೆಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಮೋಟಾರ ಸೈಕಲ ಮೇಲಿಂದ ಇಬ್ಬರೂ ರೋಡಿನ ಮೇಲೆ ಬಿದ್ದಿದ್ದು ಹೋಗಿ ನೋಡಲಾಗಿ ನನ್ನ ಅಣ್ಣನ ಮಗ ಕೃಷ್ಣನಿಗೆ ಕುತ್ತಿಗೆಗೆ ಕೊರದಂತಾಗಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮೋಟಾರ ಸೈಕಲ ನಡೆಸುತ್ತಿದ್ದ ಮಹೇಶನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಒದ್ದಾಡುತ್ತಿದ್ದನು. ಕೂಡಲೇ 108 ಅಂಬುಲೆನ್ಸಗೆ ಫೊನ ಮಾಡಿ ಸ್ಥಳಕ್ಕೆ ಕರೆಯಿಸಿದ್ದು, ಸ್ಥಳಕ್ಕೆ ಬಂದ ಅಂಬುಲೆನ್ಸದಲ್ಲಿ ಕೂಡಲೇ ಆಸ್ಪತ್ರೆಗೆ ಕಳಿಸಲಾಯಿತು. ಮೋಟಾರ ಸೈಕಲಗೆ ಡಿಕ್ಕಿಪಡಿಸಿದ ಬೂದಿ ಲಾರಿ ನಂಬರ ನೋಡಲಾಗಿ ಕೆಎ-32, ಡಿ-3436 ಅಂತ ಇದ್ದು ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರಜಾಕಮಿಯ್ಯಾ ತಂದೆ ಮಹ್ಮದ ಮಿಯ್ಯಾ ವಯ|| 35 ವರ್ಷ, ಜಾ|| ಮುಸ್ಲಿಂ, ಉ|| ಲಾರಿ ಡ್ರೈವರ ಸಾ|| ವಾಡಿ ತಾ|| ಚಿತಾಪೂರ ಜಿ|| ಕಲಬುರಗಿ ಅಂತಾ ಗೊತ್ತಾಗಿರುತ್ತದೆ. ಮಹೇಶನು ನಡೆಸಿಕೊಂಡು ಹೋದ ಹೀರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ ಇಂಜಿನ ನಂಬರ 06ಆ15311227 ಅಊಇಖಖಖ ಓಔ- 06ಆ16ಈ13295 ಅಂತಾ ಇರುತ್ತದೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಲಾರಿಯನ್ನು ಓಡಿಸಿಕೊಂಡು ಬಂದು ನಿಯಂತ್ರಿಸಲಾಗದೆ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ನಡೆದು ಹೋಗಲು ಕಾರಣನಾದ ಲಾರಿ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ..

 

ಶಹಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 175/2022 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್: ಇಂದು ದಿನಾಂಕ 15/10/2022 ರಂದು 11-00 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀನಿವಾಸ ವಿ. ಅಲ್ಲಾಪೂರ ಪಿ.ಐ. ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ, ಒಬ್ಬ ಆರೋಪಿ ಹಾಗು ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ. ಇಂದು ದಿನಾಂಕ 15/10/2022 ರಂದು ಬೆಳಿಗ್ಗೆ 07.45 ಗಂಟೆಗೆ ಅಕ್ರಮ ಮರಳು ತಡೆಗಟ್ಟುವ ಸಲುವಾಗಿ ಪೆಟ್ರೋಲಿಂಗ ಕರ್ತವ್ಯ ಕುರಿತು ಸಂಗಡ ಶಿವಲಿಂಗಪ್ಪ ಹೆಚ್.ಸಿ. 185 ಹಾಗು ನಮ್ಮ ಸರಕಾರಿ ಜೀಪ್. ನಂ. ಕೆಎ-33 ಜಿ-0316 ನೇದ್ದರ ಚಾಲಕ ರುದ್ರಗೌಡ ಎ.ಪಿ.ಸಿ-34 ರವರನ್ನು ಕರೆದುಕೊಂಡು ಶಹಾಪೂರದಿಂದ ಹೊರಟು ಹತ್ತಿಗುಡೂರ, ದೇವದುಗರ್ಾ ಕ್ರಾಸ್ವರೆಗೆ ಪೇಟ್ರೋಲಿಂಗ ಮಾಡುತ್ತ ಬೆಳಿಗ್ಗೆ 08.30 ಗಂಟೆಗೆ ಹತ್ತಿಗುಡೂರ ಚೆಕ್ ಪೋಸ್ಟ ಹತ್ತಿರ ನಾನು ಹಾಗು ಸಿಬ್ಬಂದಿಯವರಾದ ಶಿವಲಿಂಗಪ್ಪ ಹೆಚ್.ಸಿ. 185 ಹಾಗು ನಮ್ಮ ಜೀಪ್. ನಂ. ಕೆಎ-33 ಜಿ-0316 ನೇದ್ದರ ಚಾಲಕ ರುದ್ರಗೌಡ ಎ.ಪಿ.ಸಿ-34 ಹಾಗು ಚೆಕ್ ಪೋಸ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಶರಣಪ್ಪ ಪಿಸಿ 224 ಎಲ್ಲರೂ ನಿಂತಾಗ ಮಾಹಿತಿ ಬಂದಿದ್ದೇನಂದರೆ ದೇವದುಗರ್ಾ ಕಡೆಯಿಂದ ಶಹಾಪೂರ ಕಡೆಗೆ ಒಂದು ಟಿಪ್ಪರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ದಾಳಿ ಮಾಡುವ ಸಲುವಾಗಿ ಇಬ್ಬರು ಪಂಚರಾದ 1] ಶರಣಪ್ಪ ತಂದೆ ಶಿವಪ್ಪ ಅಂಗಡಿ ವ|| 30 ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2] ಶ್ರೀ ಮೌನೇಶ ತಂದೆ ಸಾಯಬಣ್ಣ ವಿಶ್ವಕರ್ಮ ವ|| 23 ಜಾ|| ವಿಶ್ವಕರ್ಮ ಉ|| ಒಕ್ಕಲುತನ ಸಾ|| ವಿಬೂತಿಹಳ್ಳಿ ರವರಿಗೆ ಕರೆದ ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಇದ್ದು ಪಂಚರಾಗಿ ಪಂಚನಾಮೆ ಬರೆಯಿಸಿಕೊಡಲು ಸಹಕರಿಸಬೇಕು ಅಂತ ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ದಾಳಿ ಮಾಡುವ ಕುರಿತು ಹತ್ತಿಗುಡೂರ ಕ್ರಾಸಿನ ಸುರಪೂರ -ಶಹಾಪೂರ ಮುಖ್ಯ ರಸ್ತೆಯ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಮರಳು ತುಂಬಿದ ಟಿಪ್ಪರ ಬರುವದನ್ನು ನಿಗಾಮಾಡುತ್ತ ನಿಂತಾಗ ಬೆಳಿಗ್ಗೆ 09.00 ಗಂಟೆಗೆ ದೇವದುರ್ಗ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊಂದಿಗೆ ಸದರಿ ಟಿಪ್ಪರ ಹಾಗು ಚಾಲಕನನ್ನು ಹಿಡಿದು ವಿಚಾರಿಸಲಾಗಿ ಚಾಲಕನು ತನ್ನ ಹೆಸರು ಮಡಿವಾಳಪ್ಪ ತಂದೆ ಬಸವರಾಜ ಪೋಲಿಸ್ ಪಾಟೀಲ ಸಾ|| ಹೆಗ್ಗಣದೊಡ್ಡಿ ತಾ|| ಸುರಪೂರ ಅಂತ ತಿಳಿಸಿದನು. ನಂತರ ಸದರಿ ಟಿಪ್ಪರದಲ್ಲಿದ್ದ ಮರಳಿನ ಬಗ್ಗೆ ವಾಹನದ ದಾಖಲಾತಿಗಳನ್ನು ಹಾಜರುಪಡಿಸುವಂತೆ ಕೇಳಿದಾಗ ಆತನು ತನ್ನ ಹತ್ತಿರ ಯಾವದೇ ದಾಖಲಾತಿಗಳು ಇರುವದಿಲ್ಲ ಸದರಿ ಮರಳನ್ನು ತಮ್ಮ ಮಾಲೀಕರು ಹೇಳಿದಂತೆ ದೇವದುಗರ್ಾದಿಂದ ತೆಗೆದುಕೊಂಡು ಬಂರುತ್ತಿದ್ದು ನಮ್ಮ ಮಾಲೀಕರ ಹೆಸರು ರವಿಕಿರಣ ತಂದೆ ಭೀಮರಾವ ನರೋಣ ಸಾ|| ಸರಫ್ ಬಜಾರ ಭೋವಿಗಲ್ಲಿ ಕಲಬುಗರ್ಿ ಅಂತ ತಿಳಿಸಿದನು. ನಂತರ ಅಲ್ಲಿಯೇ ನಿಂತಿದ್ದ ಟಿಪ್ಪರ ನಂಬರ ನೋಡಲಾಗಿ ಅದು ಅಶೋಕ ಲೆಲ್ಯಾಂಡ್ ಕಂಪನಿಯ ಟಿಪ್ಪರಿದ್ದು ಅದರ ನಂಬರ ನೋಡಲಾಗಿ ಕೆಎ-32 ಎಎ-0332 ಅಂತ ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 12 ಕ್ಯೂಬಿಕ ಮೀಟರ್ ಮರಳು ಇದ್ದು ಅದರ ಅ:ಕಿ: 9,000=00 ರೂ ಇರುತ್ತದೆ. ಹಾಗು ಟಿಪ್ಪರನ ಅಂದಾಜು ಕಿಮ್ಮತ್ತು 10,00,000/- ರೂ ಗಳಷ್ಟು ಆಗುತ್ತಿದ್ದು ಸದರಿ ಟಿಪ್ಪರ ಚಾಲಕನು ಸರಕಾರದಿಂದ ಯಾವದೇ ಮರಳು ಸಾಗಾಣಿಕೆ ಪರವಾನಗಿ ಪತ್ರ ಪಡೆಯದೇ ಮರಳನ್ನು ಕಳತನದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 09-15 ಎ.ಎಮ್. ದಿಂದ 10.15 ಎ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಟಿಪ್ಪರನ್ನು ಸದರಿ ಚಾಲಕನ ಸಹಾಯದಿಂದ ಠಾಣೆಗೆ 11.00 ಗಂಟೆಗೆ ತೆಗೆದುಕೊಂಡು ಬಂದು ಒಂದು ವರದಿಯನ್ನು ತಯ್ಯಾರಿಸಿ, ಮರಳು ತುಂಬಿದ ಟಿಪ್ಪರ, ಹಾಗು ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ಸ||ತ|| ಫಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 175/2022 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

 

 

 

 

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-

ಗುನ್ನೆ ನಂ: 151/2022, ಕಲಂ, 323, 324, 504.506. ಸಂಗಡ 34 ಐ ಪಿ ಸಿ: ಇಂದು ದಿನಾಂಕ: 15-10-2022 ರಂದು ಸಾಯಂಕಾಲ 7-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ಇಂದು ದಿನಾಂಕ: 15-10-2022 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ನಮ್ಮ ಹತ್ತಿಬಿಡಿಸುವ ಹೊಲಕ್ಕೆ ಹೋದಾಗ ಅಲ್ಲಿ ನಮ್ಮೂರಿನ ಮಲ್ಲಪ್ಪ ತಂದೆ ಮೈಲಾರಿ, ಭೀರಪ್ಪ ತಂದೆ ಮಲ್ಲಪ್ಪ, ಇವರಿಬ್ಬರು ನಮ್ಮ ಹತ್ತಿ ಹೊಲದಲ್ಲಿ ಕುರಿಗಳನ್ನು ಬಿಟ್ಟು ಹತ್ತಿ ಹೊಲ ಮೇಯಿಸುತಿದ್ದರು ಆಗ ನಾನು ಅವರಿಗೆ ಯಾಕೆ ನಮ್ಮ ಹತ್ತಿ ಹೊಲದಲ್ಲಿ ಕುರಿಗಳನ್ನು ಬಿಟ್ಟಿದ್ದಿರಿ ಅಂತಾ ಕೇಳಿದ್ದಕ್ಕೆ ಲೇ ಸೂಳೆ ಮಗನೆ ಎಲ್ಲಿ ನಿಮ್ಮ ಹೊಲದಲ್ಲಿ ಕುರಿಗಳು ಬಿಟ್ಟಿವೇಲೆ ಮಗನೆ ಸುಮ್ಮನೆ ಹೇಳುತ್ತಿ ಬೋಸಡಿ ಮಗನೆ ಅಂತಾ ಬೈದು ಅವರಲ್ಲಿ ಮಲ್ಲಪ್ಪ ಈತನು ಲೇ ಸೂಳೆ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ಅಂದು ಕಟ್ಟಿಗೆಯ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ಎಡಗೈ ಮೋಣಕೈಗೆ ಕಲ್ಲಿನಿಂದ ಹೊಡೆದು ಗುಪ್ತ ಪೆಟ್ಟು ಮಾಡಿ, ಬಾಯಿಯಿಂದ ನನ್ನ ಎಡಗೈ ನಡುಬೆರಳಿಗೆ ಕಚ್ಚಿರುತ್ತಾನೆ ಆಗ ನಾನು ಅವರಿಗೆ ನನ್ನ ಹೊಲದಲ್ಲಿ ಕುರಿಗಳು ಬಿಟ್ಟು ನನಗೆ ಹೊಡೆಯುತ್ತಿರೇನು ಅಂತಾ ಹೇಳಿದ್ದಾಗ ಭೀರಪ್ಪ ಈತನು ನನಗೆ ಲೇ ಬೊಸಡಿ ಮಗನೆ ಅಂದು ಕೈಯಿಂದ ಕಪಾಳಕ್ಕೆ ಹೊಡೆದು ಜಾಡಿಸಿ ದಬ್ಬಿ ನೇಲಕ್ಕೆ ಬಿಳಿಸಿ ಲೇ ಸೂಳೆ ಮಗನೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಬೈಯುತ್ತಿರುವಾಗ ನಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿರುವ ಮಲ್ಲಮ್ಮ ಗಂಡ ಶರಣಪ್ಪ ತಾತಳಗೇರಾ ಈಕೆಯು ಜಗಳ ಬಿಡಿಸಲು ಬಂದರೆ ಆಕೆಗೆ ಮಲ್ಲಪ್ಪ ಈತನು ಕೈಯಿಂದ ಹೊಟ್ಟೆಗೆ ಗುದ್ದಿ ಗುಪ್ತ ಪೆಟ್ಟು ಮಾಡಿದ್ದು, ಮಾಳಮ್ಮ ಗಂಡ ಮಲ್ಲಪ್ಪ ಈಕೆಯು ಆಕೆಗೆ ಕೂದಲು ಹಿಡಿದು ಎಳದಾಡಿ ಲೇ ಸೂಳೆ ಮಗನೆ ನೀನು ಯಾಕೆ ಅಡ್ಡ ಬರುತ್ತಿ ಸುಳೆ ಮಗಳೆ ಅಂತಾ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ

 

ಇತ್ತೀಚಿನ ನವೀಕರಣ​ : 16-10-2022 10:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080