ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-11-2021

ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 165/2021 ಕಲಂ 143, 147, 341, 323, ,307, 109 504. 506 ಸಂಗಡ 149 ಐ ಪಿ ಸಿ : ದಿನಾಂಕ. 16-11-2021 ರಂದು 00-30 ಗಂಟೆಗೆ ಶ್ರೀ ಭೀಮರೆಡ್ಡಿ ಎ.ಎಸ್.ಐ ಸೈದಾಪೂರ ಠಾಣೆ ರವರು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಒಂದು ಲಿಖಿತ ದೂರು ಪಡೆದುಕೊಂಡು ತಂದು ಹಾಜರುಪಡಿಸಿದರು. ದೂರಿನ ಸಾರಂಶವೇನೆಂದರೆ. ನಾನು ಡ್ಯೂಟಿ ಮುಗಿಸಿಕೊಂಡು ಊರಿಗೆ ಹೋದೆ, ಹೋಗುವ ವೇಳೆಯಲ್ಲಿ ನನ್ನ ಗಾಡಿಗೆ ಅಡ್ಡ ಹಾಕಿ ನಿನ್ನ ಜೋತೆ ಮಾತನಾಡಬೇಕು ಎಂದು ನಿಲ್ಲಿಸಿದರು ಏನುಮಾತನಾಡುವುದಪ್ಪ ಬೆಳಿಗ್ಗೆ ಮಾತಾಡೊಣ ಎಂದೆ. ಆದರೂ ಈಗಲೇ ಮಾತನಾಡಬೇಕು ಅಂದರು. ಹೇಳಿ ಅಂದೆ ನಿನಗೆ ಹೊಡಿಬೇಕುಂತ ಮಾಡಿವಿ ನೀನು ಗಾಂಡು ಇದ್ದಿ ಹೊಡಿಬೇಕು ಎಂದರು. ಪೊಲೀಸರಿಗೆ ಹೇಳುತ್ತಿಯಾ ಹೇಳು ಯಾರಿಗೆ ಹೇಳುತ್ತಿ ಹೇಳು 5 ನಿಮೀಷದಲ್ಲಿ ಹೊರಗೆ ಬರುತ್ತೆವೆ ಕಾನೂನು ..... ಸಮ ನಾವು 5 ನಿಮಿಷದಲ್ಲಿ ಹೊರಗೆ ಬರುತ್ತೆವೆ ಲೇ ಎನ್ನುತ್ತಾ ಲಾಲಬೀ ಎಂಬುವವ ನನ್ನ ಮೇಲೆ ಹಲ್ಲೆ ಮಾಡಿದ ಅವನ ಮನೆಯ ನಾಲ್ವರು ಸೇರಿದಲ್ಲದೆ ಬೇರೆ ಬೇರೆ 10-12 ಜನ ಸೇರಿ ನೆಲಕ್ಕೆ ಕಡೆವಿ ಎದಗೆ ಗುದ್ದಿದರು ಯಾವನೋ ಒಬ್ಬ ಮಮರ್ಾಂಗ ಹಿಡಿದು ಹಿಸಿಕಿಸಿದ ಇನ್ನೋಬ ಕಪಾಳಕ್ಕೆ ಮುಖಕ್ಕೆ ಹೊಡೆದ. ಆಗ ನಾನು ಭಯ ಬೀತನಾಗಿ ಅಳ್ಳು ಹೋದೇನು ಏನು ನಡೆತಿದೆ ಗೋತ್ತಾಗಲಿಲ್ಲಾ ನಂತರ ಸ್ವಲ್ಪ ಹೊತ್ತಾದ ಮೇಲೆ ಇಬ್ಬರು ಎಬ್ಬಿಸಿದರು ನಂತರ ನನ್ನ ಮೇಲೆ ಹಲ್ಲೆ ಆಗಿದ್ದು ಗೋತ್ತಾಯಿತು ಅಗಸಿ ಮೇಲಿನ ಟಿಪ್ಪು ಧ್ವಜ ಹಾಕಿದ್ದನ್ನು ತೆರೆವು ಗೋಳಿಸಲು ಎಸ್.ಪಿ ಸಾಹೇಬರಿಗೆ ಮನವಿ ಮಾಡಿ ಇದರಿಂದ ಕೋಮು ಗಲಭೆ ಆಗುತ್ತದೆ ತೆಗೆಸಿ ಎಂದು ಮನವಿ ಮಾಡಿದ್ದೆನು. ಮೋದಿನ ಎಂಬುವವ ಇವನ ಪತ್ನಿ ಗ್ರಾ. ಪಂ ಸದಸ್ಯ ಇದ್ದಾರೆ ಈತ ಹೊಡೆಯರಿಲೇ ಅವನು ಕಾಲು ಮುರಿರಲೇ 5 ನಿಮಷದಲ್ಲಿ ಬಿಡಿಸಿಕೊಂಡು ಬರುತ್ತೇನೆ ಎಂದು ಪ್ರಚೋದನೇಕಾರಿಯಾಗಿ ಹುಡಗರಿಗೆ ಕುಮ್ಮಕ್ಕು ನೀಡಿದ.ಲಾಲಬೀ, ದಾವೂದ್, ಚಾಹುಸೇನ, ಮೋದೀನ್, ಮೋದಿನನ ಚಿಕ್ಕಪ್ಪ/ ದೊಡ್ಡಪ್ಪನ ಮಗ ಸೇರಿದಂತೆ ಇವರೆಲ್ಲರು ಸೇರಿ ನನ್ನನ್ನು ಹೊಡೆಯಬೇಕು ಅಂತಾ (ಅಂದರೆ ಕೋಲೆ ಮಾಡುವದು) ದಾಳಿ ಮಾಡಿ ನಿನ್ನನ್ನು ಹೊಡೆಯುತ್ತೇವೆಲೆ ಗಾಂಡು ಎನ್ನುತ್ತ ನನ್ನನ್ನು ಹೊಡೆಯಲು ಮುಂದಾದರು ನಂತರದ ವಿಷಯ ಏನಾಯಿತೋ ಗೋತ್ತಿಲ್ಲ ಸದರಿ ಘಟನೆ ದಿನಾಂಕ: 15-11-2021 ರಂದು ಸಂಜೆ 07: 30 ಕ್ಕೆ ಕಿಲ್ಲನಕೇರಾ ಗ್ರಾಮದಲ್ಲಿ ಮಹಿಬೂಬನ ಅಂಗಡಿಯ ಮುಂದೆ ಜರುಗಿದ್ದು ಇರುತ್ತದೆ.ಅಂತಾ ಪಿಯರ್ಾಧಿ.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 164/2021 ಕಲಂ ಮಹಿಳೆ ಕಾಣೆ : ದಿನಾಂಕ: 15-11-2021 ರಂದು ಮದ್ಯಾಹ್ನ 01-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ.. ದಿನಾಂಕ: 15-03-2006 ರಲ್ಲಿ ಕೂಡ್ಲೂರ ಗ್ರಾಮದ ದಾಸರ ಲಕ್ಷ್ಮಣ ಮಠದ ಮುಂದೆ ಹಿಂದು ಸಂಪ್ರದಾಯದಂತೆ ಗುರುಹಿರಿಯ ಸಮಕ್ಷಮದಲ್ಲಿ ವರ್ಕನಳ್ಳಿ ಗ್ರಾಮದ ಚಂದಮ್ಮ ತಂದೆ ಹಣಮಂತ ಈಕೆಯ ಜೊತೆ ಮದುವೆಯಾಗಿರುತ್ತೇನೆ. ನಮಗೆ 4 ಜನ ಮಕ್ಕಳಿದ್ದು 1) ತಾಯಮ್ಮ, 2) ಕಾಶಪ್ಪ 3) ಲಕ್ಷ್ಮೀ 4) ನಾಗಮ್ಮ ಅಂತಾ ಇರುತ್ತಾರೆ. ನಾನು ನನ್ನ ಹೆಂಡತಿ ಮಕ್ಕಳು ಹೊಲದ ಕೆಲಸ ಮತ್ತು ಕೂಲಿ ಕೆಲಸ ಮಾಡಿಕೊಂಡಿರುತ್ತೇವೆ, ದಿನಾಂಕ: 20-09-2021 ರಂದು ನನ್ನ ಹೆಂಡತಿ ಚಂದಮ್ಮ ಈಕೆಯು ಬೆಳಿಗ್ಗೆ 06-00 ಗಂಟೆಗೆ ನಾನು ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮತ್ತೆ ಮನೆಗೆ ಬರಲಿಲ್ಲ ನಂತರ ನಾನು ನನ್ನ ಮಕ್ಕಳು ಎಲ್ಲರು ಕೂಡಿ ನನ್ನ ಹೆಂಡತಿ ಚಂದಮ್ಮ ಈಕೆ ಹೊಲಕ್ಕೆ ಅಥವಾ ಎಲ್ಲಾದರು ಹೋಗಿರಬಹುದು ಅಂತಾ ನಾವು ಹೊಲಕ್ಕೆ ಮತ್ತು ರೋಡಿಗೆ ಹೋಗಿ ನೋಡಲಾಗಿ ನನ್ನ ಹೆಂಡತಿ ಇರಲಿಲ್ಲ ನಂತರ ಆಕೆ ಆಕೆಯ ತವರು ಮನೆಗೆ ಹೋಗಿರಬಹುದು ಅಂತಾ ನಾವು ವರ್ಕನಳ್ಳಿ ಗ್ರಾಮಕ್ಕೆ ಹೋಗಿ ಆಕೆಯ ತವರು ಮನೆಗೆ ಹೋಗಿ ವಿಚಾರಿಸಲಾಗಿ ಆಕೆಯು ಇಲ್ಲಿಗೆ ಬಂದಿಲ್ಲ ಅಂತಾ ಹೇಳಿದರು ನಂತರ ನಾವು ಆಕೆಯ ತಂಗಿಯ ಊರಾದ ಕಂಚಗಾರಹಳ್ಳಿ ಗ್ರಾಮಕ್ಕೆ ಹೋಗಿ ವಿಚಾರಣೆ ಮಾಡಲಾಗಿ ಆಕೆ ಬಂದಿರುವದಿಲ್ಲ ಅಂತಾ ತಿಳಿಸಿದರು. ನನ್ನ ಹೆಂಡತಿ ಎಲ್ಲಿಗಾದರೂ ಹೋಗಿರಬಹುದು ಮತ್ತೆೆ ಬರಬಹುದು ಅಂತಾ ಸುಮ್ಮನಿದ್ದೆವು. ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವದಿಲ್ಲ. ಕಾಣೆಯಾಗಿರುತ್ತಾಳೆ ಅಂತಾ ಪಿಯರ್ಾಧಿ.

 

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 133/2021 ಕಲಂ: 379 ಐಪಿಸಿ : ಇಂದು ದಿನಾಂಕ: 15/11/2021 ರಂದು 05:30 ಪಿಎಮ್ ಕ್ಕೆ ಶ್ರೀ ಸಂಜೀವ ಕಂದಾಯ ನಿರೀಕ್ಷಕರು ವಡಿಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾವುಗಳಾದ ಮಾನ್ಯ ತಹಸೀಲ್ದಾರರು ವಡಿಗೇರಾರವರ ಜೊತೆ ತಹಸಿಲ್ದಾರ ಕಛೇರಿಯಲ್ಲಿದ್ದಾಗ ಮಾನ್ಯ ತಹಸಿಲ್ದಾರರು ನಮ್ಮನ್ನು ಕರೆದು ಯಾದಗಿರಿ-ವಡಿಗೇರಾ ಮುಖ್ಯರಸ್ತೆಯಲ್ಲಿ ಭಾರತ್ ಬೆಂಜ್ ಟಿಪ್ಪರ್ ನಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ವಡಿಗೇರಾ ಠಾಣೆಯ ಮಹಿಂದ್ರಾ ಪಿಸಿ 254 ರವರನ್ನು ನಮ್ಮ ಜೀಪಿನಲ್ಲಿ ಕರೆದುಕೊಂಡು ಹೊರಟು ಹಾಲಗೇರ ಗೇಟ್ ಹತ್ತಿರ ಭಾರತ್ ಬೆಂಜ್ ಟಿಪ್ಪರ್ ನಂ ಕೆಎ-51 ಎಬಿ-6609 ನೇದ್ದನ್ನು ತಡೆದು ನಿಲ್ಲಿಸಿ ಸದರಿ ವಾಹನದಲ್ಲಿ ಮರಳು ತುಂಬಿದ್ದು ಅದರ ರಾಯಲ್ಟಿ(ರಾಜಧನ) ಚೆಕ್ ಮಾಡಿದಾಗ ನಮ್ಮ ಹತ್ತಿರ ಇರುವುದಿಲ್ಲಾ ಹೇಳಿ ಟಿಪ್ಪರ್ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ್ ನಲ್ಲಿ ರಾಯಲ್ಟಿ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದರಿಂದ ಸದರಿ ಟಿಪ್ಪರ್ ಬೇರೊಬ್ಬ ಚಾಲಕನ ಸಹಾಯದಿಂದ ಠಾಣೆಗೆ ತಂದಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದರಿಂದ ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 133/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 134/2021 ಕಲಂ: 379 ಐಪಿಸಿ : ಇಂದು ದಿನಾಂಕ:15/11/2021 ರಂದು 8-25 ಪಿಎಮ್ ಕ್ಕೆ ಪಿಯರ್ಾಧಿಯಾದ ಶ್ರೀ ಸಂಜೀವ ಕಂದಾಯ ನಿರೀಕ್ಷಕರು ವಡಗೇರಾ ತಹಸೀಲ್ದಾರರು ಇವರು ಠಾಣೆಗೆ ಹಾಜರಾಗಿ ನೀಡಿದ ಸಲ್ಲಿಸದ ದೂರು ಅಜರ್ಿಯೇನೆಂದರೆಮಾನ್ಯ ತಹಸೀಲ್ದಾರರು ಕರೆಯ ಮೇರೆಗೆ ಇಂದು ದಿನಾಂಕ: 15/11/2021 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಕಛೇರಿಗೆ ಬರಲು ತಿಳಿಸಿದರು ಅದರಂತೆ ಹೋಗಲಾಗಿ ಗೋನಾಲ ಬೆಂಡೆಬೆಂಬಳ್ಳಿ ಗ್ರಾಮಲೆಕ್ಕಿಗರು ಬಂದಿದ್ದು ಆಗ ಅಲ್ಲಿ ಮಾನ್ಯ ಸಹಾಯಕ ಆಯುಕ್ತಕರು ಯಾದಗಿರಿ ಹಾಜರಿದ್ದು, ಗೋನಾಲ ಗ್ರಾಮಕ್ಕೆ ನಡೆಯಿರಿ ಎಂದು ತಿಳಿಸಿದ್ದರು ಮಾನ್ಯ ತಹಸೀಲ್ದಾರರು ಜೀಪಿನಲ್ಲಿ ನಾನು ಮತ್ತು ಗ್ರಾಮಲೆಕ್ಕಿಗರು ಹಾಗೂ ವಡಗೇರಾ ಪೋಲಿಸ ಠಾಣೆಯ ಸಿಬ್ಬಂದಿ ಮಹೇಂದ್ರ ಪಿಸಿ 254 ರವರ ಜೊತೆಗೂಡಿ ಮಾನ್ಯ ತಹಸೀಲ್ದಾರರು ಜೀಪಿನಲ್ಲಿ ಹಾಗೂ ಮಾನ್ಯ ಸಹಾಯಕ ಆಯುಕ್ತಕರ ವಾಹನ ಜೊತೆಗೂಡಿ ತಹಸೀಲ್ದಾರ ಜೀಪ್ ಮುಂದೆ ಹೊರಟಿತ್ತು. ಹಿಂದೆ ಮಾನ್ಯ ಆಯುಕ್ತಕರ ಜೀಪ್ ಹಿಂದೆ ಹೊರಟಿತ್ತು. ಬೆಂಡಬೆಂಬಳ್ಳಿ ದಾಟಿದ ನಂತರ ಗೋನಾಲ ಸಮೀಪ ಅಕ್ರಮವಾಗಿ ತುಂಬಿಕೊಂಡು ವಾಹನ ಬರುತ್ತಿತ್ತು. ಅದನ್ನು ತಡೆದು ನಿಲ್ಲಿಸಿ ಚೆಕ್ ಮಾಡಲಾಗಿ ವಾಹನದಿಂದ ಡ್ರೈವರ ಇಳಿದು ಲಾರಿ ನಿಲ್ಲಿಸಿ ಓಡಿ ಹೋದನು. ಭಾರತ ಬೆಂಜ್ ಲಾರಿ ನಂಬರ : ಕೆಎ: 28 ಸಿ 2145 ಇರುತ್ತದೆ. ನಂತರ ಮಾನ್ಯ ತಹಸೀಲ್ದಾರರು ಮಾನ್ಯ ಸಹಾಯಕ ಆಯುಕ್ತಕರು ಗ್ರಾಮ ಲೆಕ್ಕಿಗರು ಬೆಂಡಬೆಂಬಳ್ಳಿ ಗೋನಾಲ ಹಾಗೂ ಪಿಸಿ ಮಹೇಂದ್ರ 254 ನಮಗೆ ವಾಹನ ತೆಗೆದುಕೊಂಡು ಹೋಗಿ ವಡಗೇರಾ ಪೋಲಿಸ ಠಾಣೆಗೆ ಹಚ್ಚಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು ಸದರಿಯವರ ನಿದರ್ೇಶನ ದಂತೆ ನಾನು ಗ್ರಾಮಲೆಕ್ಕಿಗರು ಹಾಗೂ ಮಹೇಂದ್ರ ಪಿಸಿ 254 ಹಾಗೂ ಜೊತೆಗೂಡಿ ಇನ್ನೊಬ್ಬ ವಾಹನ ಚಾಲಕ ಬಾಡಿಗೆ ಪಡೆದು ಆತನಿಂದ ವಾಹನ ತೆಗೆದುಕೊಂಡು 8-25 ಸಮಯ ರಾತ್ರಿ ಕಛೇರಿಗೆ ತಂದು ಹಚ್ಚಲಾಯಿತ್ತು. ಕಾರಣ ಸದರಿ ಪರವಾಗಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನದ ಮೇಲೆ ಪ್ರಕರಣ ದಾಖಲಿಸಲು ಈ ಅಜರ್ಿಯ ಮೂಲಕ ಮಾನ್ಯರವರಲ್ಲಿ ಗ್ರಾಮ ಲೆಕ್ಕಿಗರು ಬೆಂಡಬೆಂಬಳ್ಳಿ ಹಾಗೂ ಕಂದಾಯ ನಿರೀಕ್ಷಕರು ನಾನು ಈ ಅಜರ್ಿಯ ಮೂಲಕ ತಮ್ಮಲ್ಲಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 134/2021 ಕಲಂ: ಕಲಂ:379 ಐಪಿಸಿ ಅಡಯಲ್ಲಿ ಪ್ರರಕಣ ದಾಖಲು ತನಿಖೆ ಕೈಗೊಂಡೆನು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 174/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 : ಇಂದು ದಿನಾಂಕ:15/11/2021 ರಂದು 6-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗಶ್ರೀ ಕಿರಣ ಡಿ.ಆರ್. ಬೂವಿಜ್ಞಾನಿಗಳು, ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಯಾದಗಿರಿ ಜಿಲ್ಲೆರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಹಾಗೂ ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಸಾರಾಂಶವೆನೆಂದರೆಇಂದು ದಿನಾಂಕ:15/11/2021 ರಂದು ಬೆಳಿಗ್ಗೆ 07 ಗಂಟೆ ಸುಮಾರಿಗೆ ಯಾದಗಿರಿದಲ್ಲಿರುವಾಗ ಶ್ರೀ ಸುಬ್ಬಣ್ಣ ಜಮಖಂಡಿ ತಹಸೀಲ್ದಾರರು ಸುರಪುರ ರವರು ನನಗೆ ದೂರವಾಣಿ ಮೂಲಕ ಕರೆಮಾಡಿ ತಿಳಿಸಿದ್ದೇನೆಂದರೆ, ಸುರಪೂರ ತಾಲ್ಲೂಕಿನ ಚೌಡೇಶ್ವರಹಾಳ ಸೀಮಾಂತರದ ಜಮೀನುಗಳಲ್ಲಿ ಕೃಷ್ಣಾ ನದಿಯ ನೈಸಗರ್ಿಕ ಮರಳನ್ನು ಕಳ್ಳತನದಿಂದ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ನೀವು ಸುರಪೂರಕ್ಕೆ ಬನ್ನಿರಿ ಅಂತಾ ಮಾಹಿತಿ ತಿಳಿಸಿದ ಮೇರೆಗೆ, ನಾನು ನಮ್ಮ ಸರಕಾರಿ ಜೀಪ್ ನಂ. ಕೆಎ-32 ಜಿ-437 ನೇದ್ದರಲ್ಲಿ ನಾನು ಮತ್ತು ಲಿಂಗರಾಜ ಭೂ ವಿಜ್ಞಾನಿ ಇಬ್ಬರು ಯಾದಗಿರಿಯಿಂದ ಬೆಳಿಗ್ಗೆ 7:30 ಗಂಟೆ ಸುಮಾರಿಗೆ ಹೊರಟು ಸುರಪೂರ ತಹಸೀಲ ಕಾಯರ್ಾಲಯಕ್ಕೆ ತಲುಪಿದೇವು. ತಹಸೀಲ ಕಾಯರ್ಾಲಯದಲ್ಲಿ ಶ್ರೀ ಸುಬ್ಬಣ್ಣ ಜಮಖಂಡಿ ತಹಸೀಲ್ದಾರರು ಸುರಪುರ ಹಾಗೂ ಅವರ ಸಿಬ್ಬಂದಿಯವರಾದ ಶ್ರೀ ಗುರುಬಸಪ್ಪ ಪಾಟೀಲ್, ಕುಮಾರಿ ಸಾವಿತ್ರಿ ಮಗ್ಗದ ಗ್ರಾಮ ಲೇಖಪಾಲಕರು ಚೌಡೇಶ್ವರಹಾಳ, ಶ್ರೀ ಯಂಕಪ್ಪ ತಂದೆ ದ್ಯಾವಪ್ಪ ಗ್ರಾಮದ ಸಹಾಯಕರು ಚೌಡೇಶ್ವರಹಾಳ, ಮತ್ತು ಸುರಪುರ ಲೋಕೋಪಯೋಗಿ ಇಲಾಖೆಯ ಶ್ರೀ ಸಾಹೇಬಗೌಡ ತಂದೆ ಗುರುನಾಥಗೌಡ ಪಾಟೀಲ್ ಸಹಾಯಕ ಕಾಯರ್ಾನಿವರ್ಾಹಕ ಅಭಿಯಂತರರು, ಶ್ರೀ ದಿಗಂಬರ ತಂದೆ ಶಂಕರ್ರಾವ್ ಕಾಂಬ್ಳೆ ಸಹಾಯಕ ಅಭಿಯಂತರರು(2), ಶ್ರೀ ತಿಪ್ಪಣ್ಣ ತಂದೆ ಶರಣಪ್ಪ ಕಲಬುರಗಿ ಡಿ ದಜರ್ೇ ನೌಕರ, ಹಾಗೂ ಸುರಪುರ ಪೊಲೀಸ್ ಠಾಣೆಯ ಶ್ರೀ ಸುನೀಲ್ ಮೂಲಿಮನಿ ಪಿಐ, ಶ್ರೀ ಹೊನ್ನಪ್ಪ ಸಿಪಿಸಿ-427, ಶ್ರೀ ಮನೋಹರ ಹೆಚ್ಸಿ-105, ಶ್ರೀ ಜಗದೀಶ ಸಿಪಿಸಿ-335 ಇದ್ದರು. ಆಗ ತಹಶೀಲ್ದಾರರು ತಮ್ಮ ಸಿಬ್ಬಂದಿಯವರ ಮುಖಾಂತರ ಪಂಚರನ್ನಾಗಿ 1) ಶ್ರೀ ಸೈಯ್ಯದ ಖುಷರ್ಿದ ಪಾಶಾ ತಂದೆ ಅಬ್ದುಲ್ ಹಮೀದ ವ|| 58 ವರ್ಷ ಜಾ|| ಮುಸ್ಲಿಂ ಉ|| ಪಿ.ಡಬ್ಲ್ಯೂ.ಡಿ ಆಸೀಫ್ನಲ್ಲಿ ವರ್ಕ ಇನ್ಸಪೇಕ್ಟರ ಸಾ|| ಆಸರ ಮೊಹಲ್ಲ ಸುರಪುರ 2) ಶ್ರೀ ದುಶ್ಯಾಂತ ತಂದೆ ಪಕೀರಪ್ಪ ಕಮ್ಮಾರ ವ|| 30 ವರ್ಷ ಜಾ|| ವಿಶ್ವಕರ್ಮ ಉ|| ಗ್ರಾಮ ಲೇಖಾಧಿಕಾರಿಗಳು ಶಳ್ಳಿಗಿ ಗ್ರಾಮ ಸಾ|| ಹ್ಯಾರಡ ತಾ|| ಹುವಿನಹಡಗಲಿ ಹಾ||ವ|| ತಹಶೀಲ್ ಕಾಯರ್ಾಲಯ ಸುರಪುರ ಇವರನ್ನು ಕರೆಯಿಸಿ ಚೌಡೇಶ್ವರಹಾಳ ಸಿಮಾಂತರದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಜಪ್ತಿ ಪಡಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು ನೀವು ಸಂಗಂಡ ಬಂದು ಜಪ್ತಿ ಪಂಚನಾಮೆ ಬರೆಯಿಸಿಕೊಡುವಂತೆ ಕೆಳಿಕೊಂಡಾಗ ಅವರು ಒಪ್ಪಿಕೊಂಡರು. ನಂತರ ನಾವೇಲ್ಲರು ಪಂಚರೊಂದಿಗೆ ನಮ್ಮ ನಮ್ಮ ಇಲಾಖೆಯ ಸರಕಾರಿ ವಾಹನಗಳಲ್ಲಿ 9:30 ಎ.ಎಂ ಕ್ಕೆ ಹೊರಟು ಚೌಡೇಶ್ವರಹಾಳ ಗ್ರಾಮಕ್ಕೆ ಅಂದಾಜು ಸಮಯ ಬೆಳಿಗ್ಗೆ 10:00 ಎ.ಎಂ ಗೆ ತಲುಪಿದ್ದು ಅಲ್ಲಿಗೆ ಡಾ|| ದೇವರಾಜ ಡಿ.ಎಸ್.ಪಿ ಸುರಪುರ ಉಪ-ವಿಭಾಗ ಹಾಗೂ ಉಮಾಕಾಂತ ಹೆಚ್ಸಿ-192 ಇವರು ಸಹ ಬಂದಿದ್ದು ನಾವೇಲ್ಲರೂ ಕೂಡಿ ಈ ಕೇಳಗಿನಂತೆ ಮರಳನ್ನು ಸಂಗ್ರಹಿಸಿದ್ದು ಇರುತ್ತದೆ. 1) ಚೌಡೇಶ್ವರಹಾಳ ಸಿಮಾಂತರದ ಜಮೀನು ಸವರ್ೇ ನಂಬರ 39/* ರಲ್ಲಿ 1) ನಿಂಗನಗೌಡ ತಂದೆ ಗೋವಿಂದಪ್ಪಗೌಡ ಸಾ|| ಚೌಡೇಶ್ವರಹಾಳ ಇವರು ಒಟ್ಟು 787 ಘನ ಮೀಟರ ಮರಳು ಅ.ಕಿ 10,62,450/- ರೂ. ಗಳು ನೇದ್ದನ್ನು ಸಂಗ್ರಹಿಸಿರುತ್ತಾರೆ. 2) ಶಿವಪ್ಪ ತಂದೆ ನರಸಪ್ಪ ಬಿರೆದಾರ, 3) ಮರಲಿಂಗಪ್ಪ ತಂದೆ ನರಸಪ್ಪ ಬಿರೆದಾರ ಇವರ ಜಮೀನಿನಲ್ಲಿ 405 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದು ಅದರ ಮೌಲ್ಯ 5,46,750 ರೂ. ಆಗುತ್ತದೆ. 4) ಗಂಗಮ್ಮ ಗಂಡ ದ್ಯಾವಪ್ಪಗೌಡ, 5) ಶಿವಪ್ಪ ತಂದೆ ದ್ಯಾವಪ್ಪಗೌಡ ಇವರ ಜಮೀನಿನಲ್ಲಿ ಸುಮಾರು 160 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದು ಅದರ ಮೌಲ್ಯ 2,16,000 ರೂ. ಆಗುತ್ತದೆ. 6) ಹಣಮಗೌಡ ತಂದೆ ದ್ಯಾವಪ್ಪಗೌಡ ಇವರ ಜಮೀನಿನಲ್ಲಿ ಸುಮಾರು 167 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದು ಅದರ ಮೌಲ್ಯ 2,25,450 ರೂ. ಆಗುತ್ತದೆ 2) ಸವರ್ೆ ನಂ.37/ಫೋ/1 ರ ಜಮೀನಿನ ಮಾಲಿಕಾರದ 7) ಹಣಮಂತ್ರಾಯ ತಂದೆ ಮುಖಪ್ಪ, 8) ಮಾನಶಪ್ಪ ತಂದೆ ಮಾನಶಪ್ಪ, 9) ರಂಗಣ್ಣ ತಂದೆ ಉಮ್ಮಣ್ಣ ಇವರ ಜಮೀನಿನಲ್ಲಿ ಸಂಗ್ರಹಿಸಿದ ಸುಮಾರು 24 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದು ಅದರ ಮೌಲ್ಯ 32,400 ರೂ. ಆಗುತ್ತದೆ. 3) ಸವರ್ೆ ನಂ.35/ಪೋ/1 ರ ಜಮೀನಿನ ಮಾಲಿಕಾರದ 10) ಶ್ರೀನಿವಾಸ ತಂದೆ ಸಾಹೇಬಗೌಡ ಪಾಟೀಲ್ ಇವರ ಜಮೀನಿನಲ್ಲಿ ಸುಮಾರು 112 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದು ಅದರ ಮೌಲ್ಯ 1,51,200 ರೂ. ಆಗುತ್ತದೆ ಹೀಗೆ ಒಟ್ಟು 1655 ಘನ ಮೀಟರ ಮರಳು, ಅದರ ಅ.ಕಿ 22,34,250/- ರೂಗಳ ಬೆಲೆ ಬಾಳುವ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣಾ ನದಿಯಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ತಮ್ಮ ಜಮೀನುಗಳಲ್ಲಿ ಸಂಗ್ರಹಣೆ ಮಾಡಿದ್ದು ಮೇಲ್ಕಂಡ 10 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಎಲ್ಲಾ ಸ್ಥಳಗಳ ಜಪ್ತಿ ಪಂಚನಾಮೆಯನ್ನು ಮಾಡಿಕೊಂಡು ಸದರಿ ಪಂಚನಾಮೆಯನ್ನು ಈ ಕೂಡ ಲಗತ್ತಿಟ್ಟು ಸಲ್ಲಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಸಲು ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ ಠಾಣೆ
175/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 : ದಿನಾಂಕ:15/11/2021 ರಂದು 8 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಕಿರಣ ಡಿ.ಆರ್. ಭೂವಿಜ್ಷಾನಿ ಗಣಿ ಮತ್ತು ಭೂವಿಜ್ಷಾನ ಇಲಾಖೆ ಯಾದಗಿರಿ ಜಿಲ್ಲೆರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಒಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15/11/2021 ರಂದು ಮದ್ಯಾಹ್ನ ಚೌಡೇಶ್ವರಿಹಾಳ ಸಿಮಾಂತರದಲ್ಲಿ ಮರಳು ಜಪ್ತಿ ಪಂಚನಾಮೆ ಪೂರೈಸಿದ ನಂತರ ಹೆಮ್ಮಡಗಿ ಸಿಮಾಂತರದಲ್ಲಿ ಸಹ ಅನಧಿಕೃತವಾಗಿ ಮರಳು ಸಂಗ್ರಹಣೆ ಮಾಡಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಪಂಚರಾದ 1) ಶ್ರೀ ಸೈಯ್ಯದ ಖುಷರ್ಿದ ಪಾಶಾ ತಂದೆ ಅಬ್ದುಲ್ ಹಮೀದ ವ|| 58 ವರ್ಷ ಜಾ|| ಮುಸ್ಲಿಂ ಉ|| ಪಿ.ಡಬ್ಲ್ಯೂ.ಡಿ ಆಸೀಫ್ನಲ್ಲಿ ವರ್ಕ ಇನ್ಸಪೇಕ್ಟರ ಸಾ|| ಆಸರ ಮೊಹಲ್ಲ ಸುರಪುರ 2) ಶ್ರೀ ದುಶ್ಯಾಂತ ತಂದೆ ಪಕೀರಪ್ಪ ಕಮ್ಮಾರ ವ|| 30 ವರ್ಷ ಜಾ|| ವಿಶ್ವಕರ್ಮ ಉ|| ಗ್ರಾಮ ಲೇಖಾಧಿಕಾರಿಗಳು ಶಳ್ಳಿಗಿ ಗ್ರಾಮ ಸಾ|| ಹ್ಯಾರಡ ತಾ|| ಹುವಿನಹಡಗಲಿ ಹಾ||ವ|| ತಹಶೀಲ್ ಕಾಯರ್ಾಲಯ ಸುರಪುರ ಇವರಿಗೆ ಹೆಮ್ಮಡಗಿ ಸಿಮಾಂತರದಲ್ಲಿ ಬಂದು ಮರಳು ಜಪ್ತಿ ಪಂಚನಾಮೆ ಬರೆಯಿಸಿಕೊಡುವಂತೆ ಕೆಳಿಕೊಂಡಾಗ ಸದರಿಯವರು ಒಪ್ಪಿಕೊಂಡರು. ನಂತರ ನಮ್ಮ ಸರಕಾರಿ ಜೀಪ್ ನಂ. ಕೆಎ-32 ಜಿ-437 ನೇದ್ದರಲ್ಲಿ ಲಿಂಗರಾಜ ಭೂ ವಿಜ್ಞಾನಿ ಹಾಗೂ ಇಬ್ಬರು ಪಂಚರು ಕುಳಿತುಕೊಂಡಿದ್ದು, ಶ್ರೀ ಸುಬ್ಬಣ್ಣ ಜಮಖಂಡಿ ತಹಸೀಲ್ದಾರರು ಸುರಪುರ ರವರು ತಮ್ಮ ಜೀಪಿನಲ್ಲಿ ಅವರ ಸಿಬ್ಬಂದಿಯವರಾದ ಶ್ರೀ ಗುರುಬಸಪ್ಪ ಪಾಟೀಲ್, ಕುಮಾರಿ ಸಾವಿತ್ರಿ ಮಗ್ಗದ ಗ್ರಾಮ ಲೇಖಪಾಲಕರು ಚೌಡೇಶ್ವರಹಾಳ, ಶ್ರೀ ಯಂಕಪ್ಪ ತಂದೆ ದ್ಯಾವಪ್ಪ ಗ್ರಾಮದ ಸಹಾಯಕರು ಚೌಡೇಶ್ವರಹಾಳ ಇವರನ್ನು ಕೂಡಿಸಿಕೊಂಡರು. ಹಾಗೂ ಶ್ರೀ ಸಾಹೇಬಗೌಡ ಸಹಾಯಕ ಕಾಯರ್ಾನಿವರ್ಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಸುರಪುರ ರವರು ತಮ್ಮ ವಾಹನದಲ್ಲಿ, ಅವರ ಸಿಬ್ಬಂದಿಯವರಾದ ಶ್ರೀ ದಿಗಂಬರ ತಂದೆ ಶಂಕರ್ರಾವ್ ಕಾಂಬ್ಳೆ ಸಹಾಯಕ ಅಭಿಯಂತರರು(2), ಶ್ರೀ ತಿಪ್ಪಣ್ಣ ತಂದೆ ಶರಣಪ್ಪ ಕಲಬುರಗಿ ಡಿ ದಜರ್ೇ ನೌಕರ ಇವರಿಗೆ ಕುಡಿಸಿಕೊಂಡಿದ್ದು ಹಾಗೂ ಶ್ರೀ ಸುನೀಲ್ ಮೂಲಿಮನಿ ಪಿಐ ಸುರಪುರ ರವರು ತಮ್ಮ ಸಿಬ್ಬಂದಿಯವರಾದ ಶ್ರೀ ಹೊನ್ನಪ್ಪ ಸಿಪಿಸಿ-427, ಶ್ರೀ ಮನೋಹರ ಹೆಚ್ಸಿ-105, ಶ್ರೀ ಜಗದೀಶ ಸಿಪಿಸಿ-335 ರವರಿಗೆ ತಮ್ಮ ವಾಹನದಲ್ಲಿ ಹಾಗೂ ಡಾ|| ದೇವರಾಜ ಡಿ.ಎಸ್.ಪಿ ಸಾಹೇಬರು ಹಾಗೂ ಅವರ ಸಿಬ್ಬಂದಿಯಾದ ಉಮಾಕಾಂತ ಹೆಚ್ಸಿ-192 ರವರು ತಮ್ಮ ವಾಹನದಲ್ಲಿ ಕೂಡಿಸಿಕೊಂಡರು. ನಾವೇಲ್ಲರು ಅಲ್ಲಿಂದ 1:30 ಪಿಎಂ ಕ್ಕೆ ಹೊರಟು ಎರಡು 2:00 ಪಿ.ಎಂ ಕ್ಕೆ ಹೆಮ್ಮಡಗಿ ಸಿಮಾಂತರದಲ್ಲಿ ಕೃಷ್ಣಾ ನದಿಗೆ ಹೊಗುವ ಮಾರ್ಗದ ಹತ್ತಿರ ಇರುವ ಜಮೀನು ಸವರ್ೆ ನಂ. 100/* ನೇದ್ದರಲ್ಲಿ ಹೊಗಿ ಸದರಿ ಜಮೀನಿನಲ್ಲಿ ಸಂಗ್ರಹಿಸಿದ ಮರಳನ್ನು ಲೋಕೋಪಯೋಗಿ ಇಲಾಖೆಯವರ ಅಳತೆ ಮಾಡಿ ನೋಡಲಾಗಿ 637 ಘನ ಮೀಟರ ಮರಳು ಇದ್ದು ಅದರ ಅ.ಕಿ 8,59,950/- ರೂ. ಗಳಾಗುತ್ತದೆ ಅಂತಾ ತಿಳಿಸಿದರು. ಸದರಿ ಜಮೀನಿನ ಮಾಲಿಕತ್ವದ ಬಗ್ಗ ಕಂದಾಯ ಇಲಾಖೆಯಿಂದ ಪರಿಶೀಲನೆ ಮಾಡಿದಾಗ ಸದರಿ ಜಮೀನಿನ ಮಾಲಿಕರು 1) ಬಸಮ್ಮ ಗಂಡ ಬಸನಗೌಡ, 2) ಗುರುಲಿಂಗಪ್ಪ ತಂದೆ ಹೊನ್ನಪ್ಪ 3) ಸೊಪಮಾ ಗಂಡ ಹುಸೇನಸಾಬ, 4) ಇಸ್ಮಾಯಿಲ್ ತಂದೆ ಖಾಜಾಸಾಬ, 5) ಸಂಗಪ್ಪ ತಂದೆ ಸಾಹೇಬಣ್ಣ, 6) ತಿಪ್ಪಣ್ಣ ತಂದೆ ಬಸಪ್ಪ 7) ನಿಂಗಪ್ಪ ಗಂಡ ನಿಂಗಪ್ಪ, 8) ಅಯ್ಯಪ್ಪ ತಂದೆ ಹಣಮಪ್ಪ ಹರಿಜನ, 9) ದೇವಿಂದ್ರಪ್ಪ ಗಂಡ ಕನಕಪ್ಪ ದಾಸರ ಎಲ್ಲರು ಸಾ|| ಹೆಮ್ಮಡಗಿ ಅಂತ ತಿಳಿಸಿದರು. ಹೀಗೆ ಸವರ್ೆ ನಂ.100/* ನೇದ್ದರ ಮೇಲ್ಕಾಣಿಸಿದ 9 ಜನ ಮಾಲಿಕರು ಸರಕಾರಕ್ಕೆ ರಾಜಧನ ತುಂಬದೆ ಹಾಗೂ ಸರಕಾರದಿಂದ ಯಾವುದೇ ಅನುಮತಿ ಪಡೆಯದೆ ಮರಳನ್ನು ಕಳ್ಳತನದಿಂದ ಮಾರಾಟ ಮಾಡುವ ಉದ್ದೇಶದಿಂದ ಕೃಷ್ಣಾ ನದಿಯ ನೈಸಗರ್ಿಕವಾದ ಒಟ್ಟು 637 ಘನ ಮೀಟರ ಮರಳು ಅ.ಕಿ 8,59,950/- ರೂ. ಗಳು ನೇದ್ದನ್ನು ಅಕ್ರಮವಾಗಿ ಸಂಗ್ರಹಿಸಿರವದರಿಂದ ಸದರಿ ಮರಳಿನ ಜಪ್ತಿ ಪಂಚನಾಮೆಯನ್ನು 2:00 ಪಿ.ಎಂ ದಿಂದ 3:00 ಪಿ.ಎಂ ದ ವರೆಗೆ ಪೂರೈಸಿಕೊಂಡು ಬಂದಿದ್ದು. ಸದರಿ ಸದಪಂಚನಾಮೆಯನ್ನು ಈ ಕೂಡ ಲಗತ್ತಿಟ್ಟು ಸಲ್ಲಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಸಲು ವಿನಂತಿ ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 175/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 176/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 : ಇಂದು ದಿನಾಂಕ:15/11/2021 ರಂದು 9:00 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಕಿರಣ ಡಿ.ಆರ್. ಭೂವಿಜ್ಷಾನಿ ಗಣಿ ಮತ್ತು ಭೂವಿಜ್ಷಾನ ಇಲಾಖೆ ಯಾದಗಿರಿ ಜಿಲ್ಲೆರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಒಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15/11/2021 ರಂದು ಮದ್ಯಾಹ್ನ ಹೆಮ್ಮಡಗಿ ಸಿಮಾಂತರದ ಸವರ್ೆ ನಂ.100/* ರಲ್ಲಿ ಮರಳು ಜಪ್ತಿ ಪಂಚನಾಮೆ ಪೂರೈಸಿದ ನಂತರ ಹೆಮ್ಮಡಗಿ ಸಿಮಾಂತರದಲ್ಲಿ ಇನ್ನೂ ಎರಡು ಕಡೆ ಜಮೀನುಗಳಲ್ಲಿ ಸಹ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಪಂಚರಾದ 1) ಶ್ರೀ ಸೈಯ್ಯದ ಖುಷರ್ಿದ ಪಾಶಾ ತಂದೆ ಅಬ್ದುಲ್ ಹಮೀದ ವ|| 58 ವರ್ಷ ಜಾ|| ಮುಸ್ಲಿಂ ಉ|| ಪಿ.ಡಬ್ಲ್ಯೂ.ಡಿ ಆಸೀಫ್ನಲ್ಲಿ ವರ್ಕ ಇನ್ಸಪೇಕ್ಟರ ಸಾ|| ಆಸರ ಮೊಹಲ್ಲ ಸುರಪುರ 2) ಶ್ರೀ ದುಶ್ಯಾಂತ ತಂದೆ ಪಕೀರಪ್ಪ ಕಮ್ಮಾರ ವ|| 30 ವರ್ಷ ಜಾ|| ವಿಶ್ವಕರ್ಮ ಉ|| ಗ್ರಾಮ ಲೇಖಾಧಿಕಾರಿಗಳು ಶಳ್ಳಿಗಿ ಗ್ರಾಮ ಸಾ|| ಹ್ಯಾರಡ ತಾ|| ಹುವಿನಹಡಗಲಿ ಹಾ||ವ|| ತಹಶೀಲ್ ಕಾಯರ್ಾಲಯ ಸುರಪುರ ಇವರಿಗೆ ಸದರಿ ಸ್ಥಳಗಳಿಗೆ ಬಂದು ಮರಳು ಜಪ್ತಿ ಪಂಚನಾಮೆ ಬರೆಯಿಸಿಕೊಡುವಂತೆ ಕೆಳಿಕೊಂಡಾಗ ಸದರಿಯವರು ಒಪ್ಪಿಕೊಂಡರು. ನಂತರ ನಮ್ಮ ಸರಕಾರಿ ಜೀಪ್ ನಂ. ಕೆಎ-32 ಜಿ-437 ನೇದ್ದರಲ್ಲಿ ಲಿಂಗರಾಜ ಭೂ ವಿಜ್ಞಾನಿ ಹಾಗೂ ಇಬ್ಬರು ಪಂಚರು ಕುಳಿತುಕೊಂಡಿದ್ದು, ಶ್ರೀ ಸುಬ್ಬಣ್ಣ ಜಮಖಂಡಿ ತಹಸೀಲ್ದಾರರು ಸುರಪುರ ರವರು ತಮ್ಮ ಜೀಪಿನಲ್ಲಿ ಅವರ ಸಿಬ್ಬಂದಿಯವರಾದ ಶ್ರೀ ಗುರುಬಸಪ್ಪ ಪಾಟೀಲ್, ಕುಮಾರಿ ಸಾವಿತ್ರಿ ಮಗ್ಗದ ಗ್ರಾಮ ಲೇಖಪಾಲಕರು ಚೌಡೇಶ್ವರಹಾಳ, ಶ್ರೀ ಯಂಕಪ್ಪ ತಂದೆ ದ್ಯಾವಪ್ಪ ಗ್ರಾಮದ ಸಹಾಯಕರು ಚೌಡೇಶ್ವರಹಾಳ ಇವರನ್ನು ಕೂಡಿಸಿಕೊಂಡರು. ಹಾಗೂ ಶ್ರೀ ಸಾಹೇಬಗೌಡ ಸಹಾಯಕ ಕಾಯರ್ಾನಿವರ್ಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಸುರಪುರ ರವರು ತಮ್ಮ ವಾಹನದಲ್ಲಿ, ಅವರ ಸಿಬ್ಬಂದಿಯವರಾದ ಶ್ರೀ ದಿಗಂಬರ ತಂದೆ ಶಂಕರ್ರಾವ್ ಕಾಂಬ್ಳೆ ಸಹಾಯಕ ಅಭಿಯಂತರರು(2), ಶ್ರೀ ತಿಪ್ಪಣ್ಣ ತಂದೆ ಶರಣಪ್ಪ ಕಲಬುರಗಿ ಡಿ ದಜರ್ೇ ನೌಕರ ಇವರಿಗೆ ಕುಡಿಸಿಕೊಂಡಿದ್ದು ಹಾಗೂ ಶ್ರೀ ಸುನೀಲ್ ಮೂಲಿಮನಿ ಪಿಐ ಸುರಪುರ ರವರು ತಮ್ಮ ಸಿಬ್ಬಂದಿಯವರಾದ ಶ್ರೀ ಹೊನ್ನಪ್ಪ ಸಿಪಿಸಿ-427, ಶ್ರೀ ಮನೋಹರ ಹೆಚ್ಸಿ-105, ಶ್ರೀ ಜಗದೀಶ ಸಿಪಿಸಿ-335 ರವರಿಗೆ ತಮ್ಮ ವಾಹನದಲ್ಲಿ ಹಾಗೂ ಡಾ|| ದೇವರಾಜ ಡಿ.ಎಸ್.ಪಿ ಸಾಹೇಬರು ಹಾಗೂ ಅವರ ಸಿಬ್ಬಂದಿಯಾದ ಉಮಾಕಾಂತ ಹೆಚ್ಸಿ-192 ರವರು ತಮ್ಮ ವಾಹನದಲ್ಲಿ ಕೂಡಿಸಿಕೊಂಡರು. ನಾವೇಲ್ಲರು ಅಲ್ಲಿಂದ 3:30 ಪಿಎಂ ಕ್ಕೆ ಹೊರಟು 4:00 ಪಿ.ಎಂ ಕ್ಕೆ ಮರಳು ಸಂಗ್ರಹಿಸಿರುವ ಸ್ಥಳಕ್ಕೆ ತಲುಪಿ ಈ ಕೆಳಗಿನಂತೆ ಮರಳನ್ನು ಜಪ್ತಿ ಪಡಿಸಿಕೊಳ್ಳಲಾಯಿತು.
1) ಜಮೀನು ಸವರ್ೆ ನಂ. 239/* ನೇದ್ದರಲ್ಲಿ ಸಂಗ್ರಹಿಸಿದ ಮರಳನ್ನು ಲೋಕೋಪಯೋಗಿ ಇಲಾಖೆಯವರ ಅಳತೆ ಮಾಡಿ ನೋಡಲಾಗಿ 396 ಘನ ಮೀಟರ ಮರಳು ಇದ್ದು ಅದರ ಅ.ಕಿ 5,34,600/- ರೂ. ಗಳಾಗುತ್ತದೆ ಅಂತಾ ತಿಳಿಸಿದರು. ಸದರಿ ಜಮೀನಿನ ಮಾಲಿಕತ್ವದ ಬಗ್ಗ ಕಂದಾಯ ಇಲಾಖೆಯಿಂದ ಪರಿಶೀಲನೆ ಮಾಡಿದಾಗ ಸದರಿ ಜಮೀನಿನ ಮಾಲಿಕರು 1) ಪದ್ಮಾ ಗಂಡ ಶಿವಪ್ಪ, 2) ಚನ್ನಯ್ಯ ತಂದೆ ಶಿವಪ್ಪ, 3) ಯಂಕಪ್ಪ ತಂದೆ ಶಿವಪ್ಪ, 4) ದೇವಪ್ಪ ತಂದೆ ಶಿವಪ್ಪ, 5) ನಿಂಗಪ್ಪ ತಂದೆ ರಾಮಣ್ಣ, 6) ಮಡಿವಾಳಪ್ಪ ತಂದೆ ಸಾಹೇಬಣ್ಣ, ಎಲ್ಲರು ಸಾ|| ಹೆಮ್ಮಡಗಿ ಅಂತ ತಿಳಿಸಿದರು.
2) ಸವರ್ೆ ನಂ.199/* ರ ಜಮೀನಿನ ಮಾಲಿಕರಾದ 7) ಬಸಪ್ಪಗೌಡ ತಂದೆ ಸಾಹೇಬಗೌಡ, 8) ಅಕ್ಕಮ್ಮ ಗಂಡ ಭೀಮಣ್ಣ ಇಬ್ಬರು ಸಾ|| ಹೆಮ್ಮಡಗಿ ಇವರ ಜಮೀನಿನಲ್ಲಿ 1183 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದು ಅದರ ಮೌಲ್ಯ 15,97,050 ರೂ. ಆಗುತ್ತದೆ
ಹೀಗೆ ಒಟ್ಟು 1579 ಘನ ಮೀಟರ ಮರಳು, ಅದರ ಅ.ಕಿ 21,31,650/- ರೂಗಳ ಬೆಲೆ ಬಾಳುವ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣಾ ನದಿಯಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ತಮ್ಮ ಜಮೀನುಗಳಲ್ಲಿ ಸಂಗ್ರಹಣೆ ಮಾಡಿದ್ದು ಮೇಲ್ಕಂಡ 8 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಎಲ್ಲಾ ಸ್ಥಳಗಳ ಜಪ್ತಿ ಪಂಚನಾಮೆಯನ್ನು ಮಾಡಿಕೊಂಡು ಸದರಿ ಪಂಚನಾಮೆಯನ್ನು ಈ ಕೂಡ ಲಗತ್ತಿಟ್ಟು ಸಲ್ಲಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 176/2021 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ: 70/2021 ಕಲಂ: 323, 324, 325, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ:15.11.2021 ರಂದು 10:00 ಎ.ಎಮ್ಕ್ಕೆ ವೈದ್ಯಾಧೀಕಾರಿಗಳು ಇಎಸ್ಎಮ್ ಆಸ್ಪತ್ರೆ ಕಲಬುರಗಿ ರವರು ಫೋನ್ ಮಾಡಿ ನಿಂಗಪ್ಪ ತಂದೆ ಮಡಿವಾಳಪ್ಪ ಪೂಜಾರಿ ವ:40 ವರ್ಷ ಸಾ:ಗೆದ್ದಲಮರಿ ತಾ:ಹುಣಸಗಿ ಇವರು ಜಗಳದಲ್ಲಿ ಗಾಯಹೊಂದಿ ಉಪಚಾರಕ್ಕಾಗಿ ತಮ್ಮ ಆಸ್ಪತ್ರೆಗೆ ಸೇರಿಕೆಯಾಗಿದ್ದು ಹದ್ದಿ ಪ್ರಯುಕ್ತ ಆಸ್ಪತ್ರೆಗೆ ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ತಿಳಿಸಿದ್ದರಿಂದ ನಾನು ಸದರಿ ಎಮ್ಎಲ್ಸಿ ವಿಚಾರಣೆ ಕುರಿತು ಪಿಸಿ-206 ಹಣಮಂತ ರವರನ್ನು ಕರೆದುಕೊಂಡು ಠಾಣೆಯಿಂದ 10:15 ಎ.ಎಮ್ಕ್ಕೆ ಹೊರಟು ಇಂದು 1:30 ಪಿಎಮ್ಕ್ಕೆ ಕಲಬುರಗಿಯ ಎಎಸ್ಎಮ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವ ಗಾಯಾಳು/ಪಿಯರ್ಾದಿ ಶ್ರೀ ನಿಂಗಪ್ಪ ತಂದೆ ಮಡಿವಾಳಪ್ಪ ಪೂಜಾರಿ ವ:40 ವರ್ಷ ಜಾ:ಹಿಂದೂ ಕುರಬರ ಉ:ಒಕ್ಕಲುತನ ಸಾ:ಗೆದ್ದಲಮರಿ ತಾ:ಹುಣಸಗಿ ಇವರಿಗೆ ಘಟನೆಯ ಬಗ್ಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು 1:45 ಪಿಎಮ್ ದಿಂದ 2:45 ಪಿಎಮ್ ವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಸದರಿ ಪಿಯರ್ಾದಿಯ ಹೇಳಿಕೆಯೊಂದಿಗೆ ಮರಳಿ ಠಾಣೆಗೆ 7:00 ಪಿಎಮ್ಕ್ಕೆ ಬಂದಿದ್ದು, ಸದರಿ ಪಿರ್ಯದಿಯ ಹೇಳಿಕೆಯ ಸಾರಾಂಶ ಏನೆಂದರೆ, ನಾನು ಒಕ್ಕಲುತನ ಕೆಲಸಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತಿದ್ದುದು ಇರುತ್ತದೆ. ನನಗೆ ವಿಜಯಲಕ್ಷ್ಮೀ, ಅಕ್ಷತಾ, ಪೂಜಾ ಅಂತಾ ಮೂರು ಹೆಣ್ಣು ಮಕ್ಕಳು & ಮಡಿವಾಳಪ್ಪ ಅಂತಾ ಒಬ್ಬ ಗಂಡು ಮಗನಿದ್ದು ಮನೆಯಲ್ಲಿ ನಾನು, ನನ್ನ ಹೆಂಡತಿ ಮಡಿವಾಳಮ್ಮ ಹಾಗೂ ನಮ್ಮ ತಾಯಿ ಹೊಳೆಮ್ಮ ಕೂಡಿಕೊಂಡು ವಾಸವಾಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ:14.11.2021 ರಂದು ರಾತ್ರಿ 8:30 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಜಾಗೆಯಲ್ಲಿ ನನ್ನ ಹೆಂಡತಿ & ತಾಯಿಯೊಂದಿಗೆ ಇದ್ದಾಗ ನಮ್ಮೂರ ಶಾಂತಪ್ಪ ತಂದೆ ಬಸಣ್ಣ ಗುರಿಕಾರ, ಹುಲಗಪ್ಪ ತಂದೆ ಬಸಣ್ಣ ಗುರಿಕಾರ, ಭೀಮಪ್ಪ ತಂದೆ ಬಸಣ್ಣ ಗುರಿಕಾರ ಇವರುಗಳು ಬಂದು ನನಗೆ ಲೇ ಸೂಳೇ ಮಗನೇ ನಮ್ಮ ಗಂಗಮ್ಮಳಿಗೆ ಮನೆ ಕೊಡಿಸೀನಿ, ಜಾಗೆ ಕೊಡಿಸೀನಿ ಅಂತಾ ಬೇರೆಯವರ ಮುಂದೆ ಹೇಳಿಕೊಂಡು ತಿರುಗಾಡುತ್ತೀಯಾ ಅಂತಾ ನಿನ್ನ ಮೈಯಲ್ಲಿ ಸೊಕ್ಕು ಜಾಸ್ತಿ ಆಗ್ಯಾದ ಅದಕ್ಕೆ ಹೀಗೆ ಮಾತನಾಡುತ್ತೀಯಾ ಇವತ್ತು ನಿನ್ನ ಸೊಕ್ಕು ಕಡಿಮೆ ಮಾಡುತ್ತೇವೆ ಅಂತಾ ಅವಾಚ್ಛ ಶಬ್ಧಗಳಿಂದ ಬೈದು ಜಗಳ ತೆಗೆದಾಗ ನಾನು ಅವರಿಗೆ, ನಿಮ್ಮ ಗಂಗಮ್ಮಳ ಬಗ್ಗೆ ಏನೂ ಮಾತಾಡಿಲ್ಲ ಬೇಕಾದರೆ ಅವಳನ್ನು ಕರೆಯಿಸಿ ನಿಜ ಮಾಡ್ರಿ ಅಂತಾ ಅಂದಾಗ ಭೀಮಪ್ಪ ಗುರಿಕಾರ ಈತನು ನನ್ನೊಂದಿಗೆ ತೆಕ್ಕೆ ಕುಸ್ತಿಗೆ ಬಿದ್ದಿದ್ದು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದ ಬಡಿಗೆಯಿಂದ ಶಾಂತಪ್ಪ ಗುರಿಕಾರ ಈತನು ನನ್ನ ತಲೆಯ ಮೇಲೆ ಎಡಭಾಗಕ್ಕೆ ಹೊಡೆದು ಭಾರೀ ರಕ್ತಗಾಯ ಪಡಿಸಿದ್ದು, ಹುಲಗಪ್ಪ ಗುರಿಗಾರ ಈತನು ಬಡಿಗೆಯಿಂದ ನನ್ನ ಡುಬ್ಬಕ್ಕೆ, ಎಡಗೈ ಮೊಣಕೈ ಕೆಳಗೆ ಹೊಡೆದು ಒಳಪೆಟ್ಟು ಪಡಿಸಿದ್ದು ನಾನು ಸತ್ತೇನಪ್ಪೋ ಅಂತಾ ಬಿದ್ದು ಒದ್ದಾಡುತ್ತಿದ್ದಾಗ ನನ್ನ ಹೆಂಡತಿ ಮಡಿವಾಳಮ್ಮ, ನನ್ನ ತಾಯಿ ಹೊಳೆಮ್ಮ ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದ್ದು, ನಂತರ ಅವರೆಲ್ಲರೂ ನನಗೆ ಹೊಡೆಯುವುದನ್ನು ಬಿಟ್ಟು ನನಗೆ ಇವತ್ತು ಉಳಿದುಕೊಂಡೀಯಾ ಇನ್ನೊಮ್ಮೆ ನಿನಗೆಜೀವಂತ ಬಿಡುವುದಿಲ್ಲ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ಜಗಳದಲ್ಲಿ ಭಾರೀ ರಕ್ತಗಾಯಹೊಂದಿದ ನನಗೆ ನನ್ನ ಹೆಂಡತಿ & ಅಣ್ಣನಾದ ಭೀಮಣ್ಣ ಇವರು ಕೂಡಿ ರಾಜನಕೋಳೂರ ಸರಕಾರಿ ಆಸ್ಪತ್ರೆಗೆ, ಲಿಂಗಸ್ಗೂರ ಸರಕಾರಿ ಆಸ್ಪತ್ರೆಗೆ, ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಉಪಚಾರ ಮಾಡಿಸಿ ನಂತರ ಈ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆಮಾಡಿದ್ದು ಕಾರಣ ನನಗೆ ಹೊಡೆಬಡೆ ಮಾಡಿ, ಭಾರೀ ರಕ್ತಗಾಯ ಪಡಿಸಿ, ಜೀವದ ಬೆದರಿಕೆ ಹಾಕಿದವರ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:70/2021 ಕಲಂ: 323, 324, 325, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 16-11-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080