ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-11-2022
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 118/2022 ಕಲಂ 454, 457, 380 ಐಪಿಸಿ: ನಾನು ಯಾದಗಿರಿ ನಗರದ ಗಾಂಧಿಚೌಕ್ ಹತ್ತಿರ ರಿಶಬ್ ಅಂತಾ ಮೆಡಿಕಲ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತೇನೆ. ನಮ್ಮ ಅಂಗಡಿಯಲ್ಲಿ 1] ರಾಕೇಶ ಶರ್ಮ ತಂದೆ ಕೀಮರಾಮ್ ಚೋಟ್ಯಾ ಸಾ|| ಶಾಂತಿ ನಗರ ಯಾದಗಿರಿ ಮತ್ತು ಶರಣು ತಂದೆ ಮಲ್ಲಿಕಾಜರ್ುನ ಅಂಭಾ ಸಾ|| ಕಮಲ ನೆಹರು ಪಾಕರ್್ ಯಾದಗಿರಿ ಇವರು ಕೆಲಸ ಮಾಡುತ್ತಾರೆ. ಹೀಗಿದ್ದು ನಾನು ದಿನಾಂಕ 10/05/2022 ರಂದು ಬೆಳಿಗ್ಗೆ 06-00 ಗಂಟೆಗೆ ನಾನು ಸೋಮನಾಥ ಜೋತಿಲರ್ಿಂಗ ದರ್ಶನ ಕುರಿತು ಗುಜುರಾತಗೆ ಹೋಗಿದ್ದು, ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ವ್ಯಾಪಾರ ಮಾಡಿಕೊಂಡು ಹೋಗಲು ತಿಳಿಸಿದ್ದೆನು. ನಾನು ಹೇಳಿದಂತೆ ಅವರು ಪ್ರತಿ ನಿತ್ಯ ಅಂಗಡಿ ವ್ಯಾಪಾರ ಮಾಡಿರುತ್ತಾರೆ. ನಿನ್ನೆ ದಿನಾಂಕ 14/11/2022 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನಾನು ಸೋಮನಾಥ ದಿಂದ ಮರಳಿ ಯಾದಗಿರಿಗೆ ಬರುತ್ತಿರುವಾಗ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ರಾಕೇಶ ಶರ್ಮ ತಂದೆ ಕೀಮರಾಮ್ ಚೋಟ್ಯಾ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಪ್ರತಿ ನಿತ್ಯದಂತೆ ನಿನ್ನೆ ದಿನಾಂಕ 13/11/2022 ರಂದು ನಾನು ಮತ್ತು ಶರಣು ತಂದೆ ಮಲ್ಲಿಕಾಜರ್ುನ ಅಂಭಾ ಇಬ್ಬರು ವ್ಯಾಪಾರ ಮಾಡಿ, ಸಾಯಂಕಾಲ 5-15 ಗಂಟೆಗೆ ಅಂಗಡಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ಇಂದು ದಿನಾಂಕ 14/11/2022 ರಂದು ಬೆಳಿಗ್ಗೆ 09-00 ಗಂಟೆಗೆ ನಾವಿಬ್ಬರು ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶೆಟ್ಟರ ಕೀಲಿ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಗಲ್ಲೆಯಲ್ಲಿ ಇದ್ದ ಮೂರು ದಿವಗಳ ವ್ಯಾಪಾರದ ಒಟ್ಟು ಹಣ 1,45,000/- ರೂ|| ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದನು. ನಂತರ ನಾನು ಆತನಿಗೆ ನಾನು ಕೂಡ ಯಾದಗಿರಿಗೆ ಬರುತ್ತಿದ್ದೇನೆ. ನಾನು ಬಂದ ನಂತರ ನೋಡಿ ದೂರು ಕೊಡೋಣ ಅಂತಾ ತಿಳಿಸಿದೆನು. ನಂತರ ನಾನು ಕೂಡ ನಿನ್ನೆ ಬೆಳಿಗ್ಗೆ 11-00 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶೆಟ್ಟರ ಕೀಲಿ ಮುರಿದಿದ್ದು, ಗಲ್ಲೆ ಕೂಡ ತೆಗೆದು ಅದರಲ್ಲಿ ಇಟ್ಟಿದ್ದ ಒಟ್ಟು ಮೂರು ದಿವಸಗಳ ವ್ಯಾಪಾರದ ಹಣ 1,45,000/-ರೂ|| ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡು ಬಂತು. ಯಾರೋ ಕಳ್ಳರು ನಮ್ಮ ಅಂಗಡಿಯ ಶೆಟ್ಟರ ಕೀಲಿ ಮುರಿದು ಒಳಗೆ ಬಂದು ಗಲ್ಲೆಯಲ್ಲಿ ಇಟ್ಟಿದ್ದ ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಅಂಗಡಿ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 119/2022 ಕಲಂ: 143, 341, 323, 504, 506 ಸಂ. 149 ಐಪಿಸಿ: ಇಂದು ದಿನಾಂಕ; 15/11/2022 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ; 12/11/2022 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಆಯಿಷಾ ಖಮರ, ತಾಯಿ ಶಾಜಾದಿ ಬೇಗಂ, ತಮ್ಮ ಫಿರೋಜ್ ಅಹ್ಮದ, ನನ್ನ ತಂಗಿ ಹಸೀನಾ ಬೇಗಂ, ಆಕೆಯ ಗಂಡ ಇಫ್ತಿಕಾರುದ್ದೀನ್ ರವರು ಯಾದಗಿರಿಯ ಬುಕಾರಿ ಮೊಹಲ್ಲಾದ ನಮ್ಮ ಮನೆಯಲ್ಲಿರುವಾಗ ನಮ್ಮ ಚಿಕ್ಕಮ್ಮನ ಮಗನಾದ ಶಬ್ಬೀರ್ ಅಹ್ಮದ, ಆತನ ಹೆಂಡತಿ ರುಕ್ಸಾನಾ ಬೇಗಂ, ಅವರ ಮಗ ಅಬ್ದುಲ್ ರಶೀದ್ ಅವರೊಂದಿಗೆ ಇನ್ನು 4 ಜನರು ಕೂಡಿಕೊಂಡು ನಮ್ಮ ಮನೆಯ ಮುಂದುಗಡೆ ಬಂದು ಲೇ ಫಾರೂಕ್ ಸೂಳೆ ಮಗನೇ ಹೊರಗಡೆ ಬಾ ನಿನಗೆ ಎಷ್ಟು ಸೊಕ್ಕು ಜೇವಗರ್ಿಗೆ ಹೋಗಿ ನಮ್ಮ ಮನೆಗೆ ಬೀಗ ಹಾಕಿತ್ತೀಯಾ ಅಂತಾ ಬೈದಾಡುತ್ತಿರುವಾಗ ನಾವು ಹೊರಗಡೆ ಬಂದು ಸುಮ್ಮನೆ ಯಾಕೆ ಬೈಯುತ್ತೀಯಾ ಮನೆ ನಿನ್ನದು ಇದ್ದರೆ ನಮಗೆ ಕಾಗದ ಪತ್ರ ತೋರಿಸು ನಾವು ಬಿಡುತ್ತೇವೆ ಸುಮ್ಮನೆ ಯಾಕೆ ಕಿರಿಕಿರಿ ಮಾಡುತ್ತೀರಿ ಅಂತಾ ನಾವು ಮನೆಯಲ್ಲಿ ಹೋಗುತ್ತಿರುವಾಗ ಅವರುಗಳು ನಮಗೆ ಎಲ್ಲಿಗೆ ಹೋಗುತ್ತೀರಿ ರಾಂಡಕೇ ಬಚ್ಚೆ ಅಂತಾ ಬೈದು, ನಮಗೆ ತಡೆದು ನಿಲ್ಲಿಸಿ, ಶಬ್ಬೀರ್ ಇತನು ನನಗೆ ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿದನು. ಶಬ್ಬೀರ ಜೊತೆಗೆ ಬಂದಿದ್ದ 4 ಜನರು ನನಗೆ ಬಿಗಿಯಾಗಿ ಹಿಡಿದುಕೊಂಡಿದ್ದು ರುಕ್ಸಾನಾ ಬೇಗಂ ಇವಳು ನನಗೆ ಕಪಾಳಕ್ಕೆ ಹೊಡೆದಳು. ಆಗ ಜಗಳ ಬಿಡಿಸಲು ಬಂದ ನಮ್ಮ ತಾಯಿಗೆ ಶಬ್ಬೀರ್ ಅಹ್ಮದ ಇತನು ದಬ್ಬಾಡಿ ಕೈಯಿಂದ ತಲೆಗೆ ಹೊಡೆದು ಗುಪ್ತಗಾಯಗೊಳಿಸಿದ್ದು, ರುಕ್ಸಾನಾ ಬೇಗಂ ಇವಳು ಕೈಯಿಂದ ಬೆನ್ನಿಗೆ ಹೊಡೆದಳು. ಇಪ್ತಿಕಾರುದ್ದೀನ್ ಇತನಿಗೆ ಶಬ್ಬೀರ್ ಮತ್ತು ಆತನ ಸಂಗಡ ಬಂದಿದ್ದ 4 ಜನರು ಕೈಯಿಂದ ಕಪಾಳಕ್ಕೆ ಹೊಡೆದು ಕೆಳಗಡೆ ಹಾಕಿ ಕಾಲಿನಿಂದ ಮನಬಂದಂತೆ ಒದ್ದರು. ಆಗ ನನ್ನ ಹೆಂಡತಿ ಆಯಿಷಾ ಖಮರ, ನನ್ನ ತಮ್ಮ ಫಿರೋಜ ಅಹ್ಮದ, ತಂಗಿ ಹಸೀನಾ ಬೇಗಂ ಇವರು ಹಾಗೂ ಜಗಳದ ಸಪ್ಪಳ ಕೇಳಿ ಬಂದ ಅಕ್ಕಪಕ್ಕದ ಮನೆಯವರಾದ ಮಹ್ಮದ ಹುಸೇನ ತಂದೆ ಶೇಖ್ ಮಹಿಬೂಬ ಮತ್ತು ಮಹ್ಮದ ಇಸಾಕ ತಂದೆ ಮಹ್ಮದ ಅಲಿ ರವರುಗಳು ಜಗಳ ಬಿಡಿಸದರು. ಆಗ ಅವರು ಇವತ್ತು ಬದುಕಿದ್ದೀರಿ ಸೂಳೆ ಮಕ್ಕಳೆ ಮತ್ತೆ ನೀವು ನಮ್ಮ ಮನೆ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ನನಗೆ ಮತ್ತು ನನ್ನ ತಾಯಿ ಶಾಜಾದಿ ಬೇಗಂ ಹಾಗೂ ನನ್ನ ತಂಗಿಯ ಗಂಡ ಇಫ್ತಿಕಾರುದ್ದೀನ್ ಇವರಿಗೆ ತಡೆದು ನಿಲ್ಲಿಸಿ ಹೊಡೆಬಡೆ ಮಾಡಿದ ಶಬ್ಬೀರ್ ಅಹ್ಮದ, ರುಕ್ಸಾನಾ ಬೇಗಂ, ಅಬ್ದುಲ್ ರಶೀದ್ ಮತ್ತು ಇನ್ನುಳಿದ 4 ಜನರು ಅಪರಿಚಿತರಿದ್ದು ಅವರ ಹೆಸರುಗಳು ನಂತರ ತಿಳಿದುಕೊಂಡು ತಮಗೆ ತಿಳಿಸುತ್ತೇನೆ. ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.119/2022 ಕಲಂ.143, 341, 323, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 145/2022 ಕಲಂ: 143, 147, 148, 323, 324, 307, 447, 504, 506 ಸಂಗಡ 149 ಐಪಿಸಿ: ಇಂದು ದಿ: 15/11/22 ರಂದು 4:30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಹೊನ್ನಯ್ಯ ತಂದೆ ಮಾನಪ್ಪ ಕನ್ನೆಳ್ಳಿ ವಯಾ|| 21 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ದೇವರಗೋನಾಲ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ಹೊಲ ಸವರ್ೇ ನಂ. 239 ನೇದ್ದರಲ್ಲಿ ಮನೆ ಕಟ್ಟಕೊಂಡು ಅಲ್ಲಿಯೇ ವಾಸವಾಗಿರುತ್ತೆವೆ. ನಮ್ಮ ತಂದೆ ತಾಯಿಗೆ ಐದು ಜನಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ದಿನಾಂಕ:13/11/2022 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿ ನಮ್ಮೂರ ನಮ್ಮ ಜನಾಂಗದ ಸತ್ಯಮೂತರ್ಿ ತಂದೆ ಶ್ರೀನಿವಾಸ ದೇಸಾಯಿ ಹಾಗೂ ತಿಪ್ಪರಾಜ ತಂದೆ ಶ್ರೀನಿವಾಸ ದೇಸಾಯಿ ಇಬ್ಬರು ದನ ಕಾಯುತ್ತಾ ನಮ್ಮ ಹೊಲದ ಬದುವಿನಲ್ಲಿ ದನಗಳನ್ನು ಮೇಯಿಸುತ್ತಿರುವಾಗ ನಮ್ಮ ನಾಯಿ ಅವರ ನಾಯಿಯನ್ನು ನೋಡಿ ಬೊಗಳಿ ಎರಡು ನಾಯಿಗಳು ಕಡದಾಡಿದ್ದರಿಂದ ಅವರು ನಮ್ಮ ನಾಯಿಗೆ ಯಾಕೆ ಕಡಿಸುತ್ತಿರಿ ಸೂಳೆ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ಅಲ್ಲಿಂದ ಹೊದರು. ಆದರೂ ನಾವು ಸುಮ್ಮನಿದ್ದೇವು. ಹಿಗಿದ್ದು ನಿನ್ನೆ ದಿನಾಂಕ:14/11/2022 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ ಮಾನಪ್ಪ, ತಾಯಿ ಮಾನಮ್ಮ, ಅಣ್ಣ ಶಂಕರಲಿಂಗ, ತಮ್ಮ ಅಯ್ಯಣ್ಣ, ಅಕ್ಕ ಮಾನಮ್ಮ ಹಾಗೂ ಅತ್ತಿಗೆ ರೇಣುಕಮ್ಮ ಎಲ್ಲರು ಊಟ ಮಾಡಿ ನಮ್ಮ ಹೊಲದಲ್ಲಿರುವ ಮನೆಯ ಮುಂದೆ ಕುಳಿತಾಗ ಅದೆ ಸಮಯಕ್ಕೆ ನಮ್ಮೂರ ನಮ್ಮ ಜನಾಂಗ 1) ಸಂಜೀವಪ್ಪ ತಂದೆ ಶ್ರೀನಿವಾಸ ದೇಸಾಯಿ, 2) ಸತ್ಯಮೂತರ್ಿ ತಂದೆ ಶ್ರೀನಿವಾಸ ದೇಸಾಯಿ, 3) ತಿಪ್ಪರಾಜ ತಂದೆ ಶ್ರೀನಿವಾಸ ದೇಸಾಯಿ, 4) ಶ್ರೀನಿವಾಸ ತಂದೆ ಸಂಜೀವಪ್ಪ ದೇಸಾಯಿ, 5) ದೇಸಾಯಿ (ಡಿಸೇಲ್) ತಂದೆ ಸಂಜೀವಪ್ಪ ದೇಸಾಯಿ, 6) ದೊಡ್ಡ ಸಂಜೀವಪ್ಪ ತಂದೆ ತಿಪ್ಪರಾಜ ದೇಸಾಯಿ, ಎಲ್ಲರು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಚಾಕು ಬಡಿಗೆ ಕಲ್ಲು ಹಿಡಿದುಕೊಂಡು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ಹೊಲದಲ್ಲಿರುವ ಮನೆಯ ಮುಂದೆ ಬಂದು ನಮ್ಮ ಅಣ್ಣ ಶಂಕರಲಿಂಗ ಇತನಿಗೆ ಏನಲೇ ಸೂಳೆ ಮಗನೆ ನಿನ್ನೆ ನಮ್ಮ ನಾಯಿಗೆ ನಿಮ್ಮ ನಾಯಿಂದ ಚೂ ಬಿಟ್ಟು ಕಡಿಸುತ್ತಿರೇನಲೇ ಸುಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಮ್ಮ ಅಣ್ಣನು ಯಾಕೆ ಈ ರೀತಿ ಬೈಯುತ್ತಿರಿ ನಾಯಿ-ನಾಯಿ ನೋಡಿ ಕಡದಾಡಿರುತ್ತವೆ ಅದಕ್ಕೆ ನಾವೇನು ಮಾಡಬೇಕು ಅಂತಾ ಅನ್ನುತ್ತಿದ್ದಾಗ ಸಂಜೀವಪ್ಪ ತಂದೆ ಶ್ರೀನಿವಾಸ ದೇಸಾಯಿ, ಇತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಅಣ್ಣ ಶಂಕರಲಿಂಗ ಇತನಿಗೆ ಚಾಕುವಿನಿಂದ ಎಡಗಡೆ ಹಣೆಯ ಮೇಲೆ, ಎಡಗಣ್ಣಿನ ಕೆಳಗೆ ಚುಚ್ಚಿ ರಕ್ತಗಾಯ ಮಾಡಿದನು. ಸತ್ಯಮೂತರ್ಿ ತಂದೆ ಶ್ರೀನಿವಾಸ ದೇಸಾಯಿ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅಣ್ಣ ಶಂಕರಲಿಂಗ ಇತನಿಗೆ ಎಡ ಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದನು. ಅಲ್ಲೆ ಇದ್ದ ಬಿಡಿಸಲು ಹೊದ ನನಗೆ ತಿಪ್ಪರಾಜ ಇತನು ಚಾಕುವಿನಿಂದ ಬೆನ್ನಿಗೆ ಚುಚ್ಚಲುಬಂದಾಗ ನಾನು ತಪ್ಪಿಸಿಕೊಳ್ಳಲಾಗಿ ಚಾಕುವಿನ ತುದಿ ನನ್ನ ಬೆನ್ನಿಗೆ ಚುಚ್ಚಿ ತರಚಿದ ರಕ್ತಗಾಯ ಆಗಿರುತ್ತದೆ. ಶ್ರೀನಿವಾಸ ತಂದೆ ಸಂಜೀವಪ್ಪ ದೇಸಾಯಿ ಇತನು ಬಡಿಗೆಯಿಂದ ಬಲಗೈ ಹೆಬ್ಬೆರಳು, ತೋರಬೆರಳಿಗೆ ಗುಪ್ತಗಾಯ ಮಾಡಿದನು. ನನ್ನ ತಾಯಿ ಮಾನಮ್ಮಳಿಗೆ ದೇಸಾಯಿ (ಡಿಸೇಲ್) ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿ ಅಲ್ಲದೆ ದೊಡ್ಡ ಸಂಜೀವಪ್ಪ ಇತನ ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಅಲ್ಲೆ ಇದ್ದ ನನ್ನ ತಂದೆ ಮಾನಪ್ಪ, ತಮ್ಮ ಅಯ್ಯಣ್ಣ, ಅಕ್ಕ ಮಾನಮ್ಮ, ಅತ್ತಿಗೆ ರೇಣುಕಮ್ಮ ಬಾಜು ಹೊಲದವರಾದ ಪರಶುರಾಮ ತಂದೆ ಬಾಲದಂಡಪ್ಪ ಕನ್ನೆಳ್ಳಿ ಎಲ್ಲರು ಕೂಡಿ ಲೈಟಿನ ಬೆಳಕಿನಲ್ಲಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರು ಹೊಡೆಯುವದನ್ನು ಬಿಟ್ಟು ಇವತ್ತು ಉಳದಿರಿ ಸೂಳೇ ಮಕ್ಕಳೆ ಇನ್ನೊಮ್ಮೊ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ತೆಗೆಯದೇ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಘಟನೆಯಲ್ಲಿ ಗಾಯಗೊಂಡ ನನಗೆ ಮತ್ತು ನಮ್ಮ ಅಣ್ಣ ಶಂಕರಲಿಂಗ ಇಬ್ಬರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಉಪಚಾರ ಪಡಿಸಿದ್ದು, ಇನ್ನೂ ನಮ್ಮ ಅಣ್ಣ ಸುರಪುರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದಾನೆ. ನಮ್ಮ ತಾಯಿಗೆ ಸಣ್ಣ ಪುಟ್ಟ ಗಾಯವಾಗಿದ್ದರಿಂದ ನಮ್ಮ ತಾಯಿ ಆಸ್ಪತ್ರೆಗೆ ತೋರಿಸಿರುವುದಿಲ್ಲ. ಮನೆಯಲ್ಲಿ ನಮ್ಮ ತಂದೆಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಈ ಮೇಲಿನ ಎಲ್ಲರೂ ನಮಗೆ ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 06 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 145/2022 ಕಲಂ: 143, 147, 148, 323, 324, 307, 447, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 146/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ: ಇಂದು ದಿನಾಂಕಃ 15/11/2022 ರಂದು 7:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ನಿಂಗಮ್ಮ ಗಂಡ ವೆಂಕಟೇಶ @ ಯಂಕಪ್ಪ ಎಲಿತೋಟ ವ|| 38 ವರ್ಷ ಜಾ|| ಗೊಲ್ಲ ಉ|| ಕೂಲಿ ಕೆಲಸ ಸಾ|| ರಂಗಂಪೇಠ ಹಾ.ವ|| ಬೈರಿಮಡ್ಡಿ ತಾ|| ಸುರಪುರ ಜಿ|| ಯಾದಗಿರಿ ಇದ್ದು, ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ನಾನು ಸುಮಾರು 19 ವರ್ಷಗಳ ಹಿಂದೆ ರಂಗಂಪೇಠದ ವೆಂಕಟೇಶ @ ಯಂಕಪ್ಪ ಈತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ನಾವು ಸುಮಾರು 5 ವರ್ಷಗಳಿಂದ ಬೈರಿಮಡ್ಡಿ ಗ್ರಾಮದಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇವೆ. ನಮ್ಮವು 4 ಆಕಳುಗಳಿದ್ದು, ಅವುಗಳನ್ನು ನಾನೇ ಮೇಯಿಸಿಕೊಂಡು ಬರುತ್ತೇನೆ. ಸುಮಾರು 1 ವಾರದ ಹಿಂದೆ ನಮ್ಮ ಆಕಳುಗಳನ್ನು ಮೇಯಿಸಲು ಹೋಗುತ್ತಿದ್ದಾಗ ನಮ್ಮೂರ ಬಸಪ್ಪ ತಂದೆ ಮರೆಪ್ಪ ಬನ್ನೆಟ್ಟಿ ಈತನ ಮನೆಯ ಮುಂದೆ ಒಂದು ಮೋಟರ ಸೈಕಲ್ ನಿಲ್ಲಿಸಿದ್ದು ನಮ್ಮ ದನಗಳು ಇರಿದಾಡುತ್ತಾ ಮೋಟರ ಸೈಕಲ್ಗೆ ಹಾಯ್ದಿದ್ದರಿಂದ ಮೋಟರ ಸೈಕಲ್ ಕೆಳಗೆ ಬಿದ್ದಿತು, ಅದಕ್ಕೆ ಬಸಪ್ಪ ಈತನು ನಮ್ಮ ಆಕಳಿಗೆ ಬಡಿಗೆಯಿಂದ ಹೊಟ್ಟಿಗೆ ಹೊಡೆಯುತ್ತಿದ್ದಾಗ ಯಾಕೆ ಹೊಡೆಯುತ್ತಿ ಅಣ್ಣ ಅವು ದನಗಳು ಇರಿದಾಡುತ್ತಾ ಹೋಗಿ ಹಾಯ್ದಿವೆ ಅಂತ ಅಂದಾಗ ಬಸಪ್ಪ ಈತನು ನನಗೆ ಬೈದಾಡಿದನು. ಆಗ ನಾನು ಸುಮ್ಮನೆ ದನಗಳನ್ನು ಹೊಡೆದುಕೊಂಡು ಹೋದೆನು. ಅಲ್ಲದೆ ಬಸಪ್ಪ ಈತನು ಅಟೋ ಪಾಳಿ ವಿಷಯದಲ್ಲಿ ನಮ್ಮ ಅಕ್ಕನ ಮಗನಾದ ಭಾಗೇಶ ತಂದೆ ಹಣಮಂತ ದೊಡಮನಿ ಈತನೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿರುವ ವಿಷಯ ನನಗೆ ಗೊತ್ತಿರುತ್ತದೆ. ಹೀಗಿದ್ದು ಇಂದು ದಿನಾಂಕ: 15/11/2022 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನಾನು ದನಗಳನ್ನು ಹೊಡೆದುಕೊಂಡು ಹೊಲಕ್ಕೆ ಹೋಗುತ್ತಿದ್ದಾಗ ನಮ್ಮೂರ ಸರಕಾರಿ ಶಾಲೆಯ ಮುಂದೆ ನಮ್ಮ ಅಕ್ಕನ ಮಗನಾದ ಭಾಗೇಶ ಈತನು ನಿಂತಿದ್ದು ನಾನು ಅವನೊಂದಿಗೆ ಮಾತಾಡುತ್ತಾ ನಿಂತಾಗ ಅದೇ ಸಮಯಕ್ಕೆ 1) ಬಸಪ್ಪ ತಂದೆ ಮರೆಪ್ಪ ಬನ್ನೆಟ್ಟಿ 2) ದೇವಪ್ಪ ತಂದೆ ಮರೆಪ್ಪ ಬನ್ನೆಟ್ಟಿ 3) ಭೀಮಣ್ಣ ತಂದೆ ಮರೆಪ್ಪ ಬನ್ನೆಟ್ಟಿ 4) ಮಂಜುನಾಥ ತಂದೆ ದೇವಪ್ಪ ಬನ್ನೆಟ್ಟಿ 5) ಶಿವರಾಜ ತಂದೆ ದೇವಪ್ಪ ಬನ್ನೆಟ್ಟಿ 6) ನಿಂಗಪ್ಪ ತಂದೆ ಮಹಾದೇವಪ್ಪ ಯಕ್ಷಿಂತಿ ಈ ಎಲ್ಲರು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಗುಂಪು ಕಟ್ಟಿಕೊಂಡು ಬಂದವರೇ ಅವರಲ್ಲಿಯ ಬಸಪ್ಪ ಈತನು ಏ ಸೂಳೆಮಕ್ಕಳೆ ನಿಮ್ಮ ಸೊಕ್ಕು ಬಾಳ ಆಗಿದೆ ಅಂತ ಅನ್ನುತ್ತಿದ್ದಾಗ ನಾನು ಯಾಕೇ ಬೈಯುತ್ತೀರಿ ನಾವೇನು ಮಾಡಿದ್ದೇವೆ ಅಂತ ಅಂದಿದ್ದಕ್ಕೆ ಬಸಪ್ಪ ಈತನು ನೀನೇನು ಕೇಳತಿಲೇ ಸೂಳೆ ಅಂತ ಅವಾಚ್ಯವಾಗಿ ಬೈದು, ಗಬರ್ಿಣಿಯಾದ ನನಗೆ ಕಾಲಿನಿಂದ ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿದನು. ದೇವಪ್ಪ ಈತನು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಪೆಟ್ಟು ಮಾಡಿದನು. ಭೀಮಣ್ಣ ಈತನು ನನ್ನ ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡುತ್ತಿದ್ದಾಗ ಬಿಡಿಸಲು ಬಂದ ನನ್ನ ಅಕ್ಕನ ಮಗನಾದ ಭಾಗೇಶ ಈತನಿಗೆ ಮಂಜುನಾಥ ಈತನು ಕಲ್ಲಿನಿಂದ ಬೆನ್ನಿಗೆ ಹೊಡೆದನು. ಶಿವರಾಜ ಈತನು ಬಡಿಗೆಯಿಂದ ಹೆಡಕಿಗೆ ಹೊಡೆದು ಗುಪ್ತಪೆಟ್ಟು ಮಾಡಿದನು. ನಿಂಗಪ್ಪ ಈತನು ಕೈಯಿಂದ ಮುಷ್ಠಿ ಮಾಡಿ ತಲೆಗೆ ಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಅಲ್ಲೇ ಶಾಲೆಯ ಹತ್ತಿರ ಇದ್ದ ನನ್ನ ಗಂಡನಾದ ವೆಂಕಟೇಶ ಹಾಗೂ ನಮ್ಮ ಅಕ್ಕನ ಗಂಡನಾದ ಹಣಮಂತ ತಂದೆ ಸಾಬಣ್ಣ ದೊಡ್ಡಮನಿ, ಮೈಲಾರೆಪ್ಪ ತಂದೆ ದೊಡ್ಡನಾಗಪ್ಪ ಯಾದವ, ನಿಂಗಪ್ಪ ತಂದೆ ಭೀಮಣ್ಣ ಕುರಿ, ರಂಗಣ್ಣ ತಂದೆ ಪಾಂಡಪ್ಪ ದೊರಿ ಇವರು ಬಂದು ಜಗಳವನ್ನು ನೋಡಿ ಬಿಡಿಸಿದರು. ಆಗ ಅವರು ಇವತ್ತು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿರಿ ಸೂಳೆ ಮಕ್ಕಳೆ ಇಲ್ಲದಿದ್ದರೆ ನಿಮ್ಮ ಜೀವಸಹಿತ ಬಿಡುತ್ತಿರಲಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನನಗೆ ಮತ್ತು ಭಾಗೇಶ ಇಬ್ಬರಿಗೂ ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಉಪಚಾರ ಪಡೆದುಕೊಂಡು ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ಮತ್ತು ನಮ್ಮ ಅಕ್ಕನ ಮಗ ಭಾಗೇಶನಿಗೆ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ, ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಆರೂ ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 146/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 147/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ: ಇಂದು ದಿನಾಂಕ:15/11/2022 ರಂದು 8:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರಳಾದ ಶ್ರೀಮತಿ ಲಕ್ಷ್ಮೀಗಂಡದೇವಪ್ಪ ಬನ್ನೆಟ್ಟಿ ವ|| 35 ವರ್ಷಜಾ|| ಕುರುಬ ಉ|| ಹೊಲಮನೆ ಕೆಲಸ ಸಾ|| ಬೈರಿಮಡ್ಡಿತಾ|| ಸುರಪೂರಇವರುಠಾಣೆಗೆ ಹಾಜರಾಗಿಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಹೀಗಿದ್ದುಒಂದು ವಾರದ ಹಿಂದೆ ನನ್ನ ಮೈದುನಾದ ಬಸಪ್ಪಈತನು ನಮ್ಮ ಮನೆಯ ಮುಂದೆ ಮೋಟರ್ ಸೈಕಲ್ ನಿಲ್ಲಿಸಿದ್ದು ಆಗ ನಮ್ಮಗ್ರಾಮದ ಭಾಗಪ್ಪತಂದೆ ಹಣಮಂತ ರತ್ತಾಳ ಇವರ ಆಕಳು ನಮ್ಮ ಮೋಟರ್ ಸೈಕಲಗೆ ತಿಕ್ಕಿದಾಗ ಮೋಟರ್ ಸೈಕಲ್ ಬಿದಿದ್ದು, ಆಗ ನಮ್ಮ ಮನೆಯವರು ಭಾಗಪ್ಪನ ಮನೆಯವರಿಗೆ ದನಗಳನ್ನು ನಿಮ್ಮ ಮನೆಯಕಡೆಗೆ ಹೊಡೆದುಕೊಂಡು ಹೋಗಿರಿ. ನಮ್ಮ ಮೋಟರ್ ಸೈಕಲಗೆ ತಿಕ್ಕಾಡಿದ್ದರಿಂದ ಮೋಟರ್ ಸೈಕಲ್ ಬಿದ್ದಿರುತ್ತದೆಅಂತಾ ಹೇಳಿದಾಗ ಅವರಿಗೂ ನಮಗೂ ಬಾಯಿ ತಕರಾರುಆಗಿರುತ್ತದೆ. ನಂತರಇಂದು ದಿನಾಂಕ:15/11/2022 ರಂದು ಬೆಳಿಗ್ಗೆ 10:45 ಗಂಟೆ ಸುಮಾರಿಗೆ ನಮ್ಮೂರ ಸರಕಾರಿ ಶಾಲೆಯ ಮುಂದುಗಡೆಆಟೋ ನಿಲ್ಲಿಸುವ ಸ್ಟ್ಯಾಂಡ್ ಹತ್ತಿರ ನಾನು, ನನ್ನ ನೆಗೆಣಿಯಾದಯಲ್ಲಮ್ಮ ಹಾಗೂ ನನ್ನ ಮಗನಾದ ಶ್ರೀಶೈಲ್ ಎಲ್ಲರೂಕೂಡಿಕೊಂಡು ಸುರಪೂರಕ್ಕೆ ಹೋಗುವ ಕುರಿತು ನನ್ನ ಮೈದುನ ಬಸಪ್ಪಈತನಆಟೋದಲ್ಲಿ ಕುಳಿತ್ತಿದ್ದೇವು. ನನ್ನ ಮೈದುನನುಆಟೋ ಲೈನನಲ್ಲಿ ಪಾಳೆ ಪ್ರಕಾರವಾಗಿಆಟೋ ಸಮೇತ ನಿಂತಿದ್ದನು. ಆಗ ನಮ್ಮೂರಿನ ಭಾಗಪ್ಪತಂದೆ ಹಣಮಂತ ರತ್ತಾಳ ಈತನೂಕೂಡತನ್ನಆಟೋತೆಗೆದುಕೊಂಡು ನಮ್ಮಆಟೋ ಮುಂದುಗಡೆ ಬಂದು ನಿಲ್ಲಿಸುತ್ತಿರುವಾಗ ನನ್ನ ಮೈದುನ ಬಸಪ್ಪಈತನುಆತನಿಗೆ ನನ್ನ ಪಾಳೆ ಇದೆ. ನೀನು ನಿನ್ನಆಟೋವನ್ನು ಸೈಡಿನಲ್ಲಿ ನಿಲ್ಲಿಸುವಂತೆ ಹೇಳಿದಾಗ ಆತನು ಮಗನೇ ಯಾವಾಗಲೂ ನಿಂದೆ ಪಾಳಿ ಇರುತ್ತದೇನಲೇ, ನಿನ್ನದು ಬಹಳ ಸೊಕ್ಕು ಇದೆ. ಊರಲ್ಲಿಕೂಡಒಂದು ವಾರದ ಹಿಂದೆಕೂಡ ನಮ್ಮ ಮನೆಯವರೊಂದಿಗೆತಕರಾರು ಮಾಡಿರುತ್ತಿ. ಈಗ ಮತ್ತೇ ನನ್ನದೇ ಮೋದಲುಆಟೋ ಪಾಳಿ ಅಂತಾ ಹೇಳುತ್ತಿ. ಇವತ್ತು ನಿನ್ನ ಸೊಕ್ಕು ಮುರಸ್ತಿನಿ ಅಂತಾಅವರ ಮನೆಯವರಿಗೆ ಪೋನ್ ಮಾಡಿದಾಗಅವರಅಣ್ಣ-ತಮ್ಮಂದಿರು ಸ್ಥಳಕ್ಕೆ ಬಂದಿದ್ದು ಆಗ 1) ಭಾಗಪ್ಪತಂದೆ ಹಣಮಂತ ರತ್ತಾಳ, 2) ಮೌನೇಶತಂದೆ ಹಣಮಂತ ರತ್ತಾಳ, 3) ಹಣಮಂತತಂದೆ ಸಾಯಬಣ್ಣ ರತ್ತಾಳ, 4) ಯಂಕಪ್ಪರಂಗಂಪೇಠ, 5) ನಿಂಗಪ್ಪತಂದೆಚಿನ್ನಪ್ಪಕುರಿ, 6) ಹೈಯಾಳಪ್ಪ ತಂದೆಚಿನ್ನಪ್ಪಕುರಿ, 7) ದೇವಪ್ಪತಂದೆ ಹಣಮಂತ ರತ್ತಾಳ, 8) ಚಿನ್ನಪ್ಪತಂದೆ ಹಣಮಂತ ರತ್ತಾಳ ಸಾ|| ಎಲ್ಲರೂ ಬೈರಿಮಡ್ಡಿಎಲ್ಲರೂಕೂಡಿಕೊಂಡುಅಕ್ರಮಕೂಟಕಟ್ಟಿಕೊಂಡು ಸಮಾನಉದ್ದೇಶದಿಂದಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದವರೆ, ಅವರಲ್ಲಿ ಭಾಗಪ್ಪಈತನು ಈ ಸೂಳೆ ಮಗನಿಗೆ ಜೀವ ಸಹಿತ ಬಿಡಬಾರದು. ಊರಲ್ಲಿಇವನದು ಬಹಳ ಸೊಕ್ಕು ಇದೆ. ಇವತ್ತು ನಿನ್ನ ಸೊಕ್ಕು ಮುರಸ್ತಿವಿ ಸೂಳೆ ಮಗನೇ ಅಂತಾ ಬೈದಾಗ ನನ್ನ ಮೈದುನನುಅವರಿಗೆಯಾಕೇ ಬೈಯುತ್ತಿರಿ ಸುಮ್ಮನೇ, ನಿಮಗಿಂತ ನಾನು ಆಟೋವನ್ನು ಮೊದಲುತೆಗೆದುಕೊಂಡು ಬಂದು ಪಾಳೆ ಪ್ರಕಾರ ನಿಲ್ಲಿಸಿರುತ್ತೇನೆ ಅಂತಾಅಂದಿದಕ್ಕೆ ಭಾಗಪ್ಪನು ಮತ್ತೇಆಟೋ ವಿಷಯನೇ ಹೇಳುತ್ತಾನೆ ಸೂಳೆ ಮಗ ಅಂತಾ ಕಾಲಿನಿಂದ ಮೈದುನನತೊರಡಿಗೆಒದ್ದನು. ಆಗ ಮೌನೇಶಈತನು ಬಡಿಗೆಯಿಂದ ನನ್ನ ಮೈದುನನ ಬಲ ಚೆಪ್ಪೆಗೆ ಹೊಡೆದುಗುಪ್ತಗಾಯ ಮಾಡಿದನು. ನಂತರ ನಾನು ಮತ್ತು ನನ್ನ ನೆಗೆಣಿಯಲ್ಲಮ್ಮ ಮತ್ತು ನನ್ನ ಮಗ ಶ್ರೀಶೈಲ್ ಜಗಳ ಬಿಡಿಸಲು ಹೋದಾಗ ಹಣಮಂತಈತನು ನಿವ್ಯಾಕೇಅಡ್ಡ ಬರುತ್ತಿರಿರಂಡೇರಅಂತಾ ನನಗೆ ಕೈಹಿಡಿದುಜಗ್ಗಾಡಿಅವಮಾನ ಮಾಡಿ, ಕೈಯಿಂದ ಬೆನ್ನಿಗೆ ಹೊಡೆದನು. ಯಲ್ಲಮ್ಮ ಇವಳಿಗೆ ಯಂಕಪ್ಪರಂಗಂಪೇಠಈತನುಇವರದುಊರಲ್ಲಿ ಬಹಳ ಆಗಿದೆಅಂತಾಕೈಹಿಡಿದು ಎಳೆದಾಡಿ, ಸೀರೆ ಸೆರಗು ಹಿಡಿದುಜಗ್ಗಾಡಿಕೈಯಿಂದ ಬೆನ್ನಿಗೆ ಹೊಡೆದುಅವಮಾನ ಮಾಡಿದನು. ಶ್ರೀಶೈಲ್ ಈತನಿಗೆ ನಿಂಗಪ್ಪಈತನು ಬಡಿಗೆಯಿಂದ ಬೆನ್ನಿಗೆ ಹೊಡೆದನು ಮತ್ತು ಹೈಯಾಳಪ್ಪ ಈತನು ಶ್ರೀಶೈಲನಿಗೆ ಕೈಯಿಂದ ಬಲಪಕ್ಕೆಗೆ ಗುದ್ದಿದನು. ದೇವಪ್ಪ ಮತ್ತುಚಿನ್ನಪ್ಪಇಬ್ಬರು ನನ್ನ ಮೈದುನ ಬಸಪ್ಪಈತನಿಗೆಕೈಯಿಂದ ಮೈಕೈಗೆ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದಒದ್ದಿರುತ್ತಾರೆ. ಆಗ ಅಜರ್ುನತಂದೆ ನಿಂಗಪ್ಪಯಕ್ಷಂತಿ, ಹಣಮಂತತಂದೆ ಬಸಣ್ಣ ಬನ್ನೆಟ್ಟಿಇವರು ಜಗಳ ಬಿಡಿಸಿರುತ್ತಾರೆ. ಸದರಿಘಟನೆಇಂದು ದಿನಾಂಕ: 15/11/2022 ರಂದು ಮುಂಜಾನೆ 11:00 ಗಂಟೆ ಸುಮಾರಿಗೆ ನಮ್ಮೂರ ಸರಕಾರಿ ಶಾಲೆಯ ಮುಂದುಗಡೆಇರುವಆಟೋ ನಿಲ್ಲುವ ಸ್ಥಳದಲ್ಲಿ ಜರುಗಿರುತ್ತದೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಈಗ ತಡವಾಗಿಠಾಣೆಗೆ ಬಂದುಅಜರ್ಿ ನೀಡಿದ್ದುಇರುತ್ತದೆ. ನನಗೆ ಮತ್ತುಯಲ್ಲಮ್ಮಇಬ್ಬರಿಗೂಯಾವುದೇ ಗಾಯಗಳು ಆಗದೇಇದ್ದುದ್ದರಿಂದಆಸ್ಪತ್ರೆಗೆ ತೋರಿಸಿರುವದಿಲ್ಲ. ಕಾರಣ ನಮಗೆ ಹೊಡೆ ಬಡೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿ ಅವಮಾನ ಮಾಡಿದವರ ಮೇಲೆ ಕಾನೂನು ಕ್ರಮಜರುಗಿಸಲು ಮಾನ್ಯರವರಲ್ಲಿ ವಿನಂತಿಅಂತಾಕೊಟ್ಟದೂರುಅಜರ್ಿಸರಾಂಶದ ಮೇಲಿಂದಠಾಣೆಗುನ್ನೆ ನಂ. 147/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.