ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-12-2021

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 190/2021 ಕಲಂ 279, 337, 338, ಐಪಿಸಿ ಮತ್ತು ಕಲಂ 177 ಐ.ಎಮ್.ವಿ ಆಕ್ಟ್. ಕಲಂ: 304(ಎ) ಐ.ಪಿ.ಸಿ ಅಳವಡಿಸಲಾಗಿದೆ. : ನಿನ್ನೆ ದಿನಾಂಕ 14.12.2021 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಫಿರ್ಯಾದಿಯ ಮೋಟಾರು ಸೈಕಲ್ ನಂ.ಕೆ.ಎ-33-ಡಬ್ಲೂ-0862 ನೇದ್ದರ ಮೇಲೆ ಗಾಯಾಳುದಾರರಾದ ಬಾಬು, ನರಸಪ್ಪ ಹಾಗೂ ರಂಜಾನ ಮೂರು ಜನರು ಕೂಡಿಕೊಂಡು ಹಂದರಕಿ ಗ್ರಾಮದಿಂದ ಹೊರಟು ಗುರುಮಠಕಲ್ ಮಾರ್ಗವಾಗಿ ಕೊಂಕಲ್ ಗ್ರಾಮಕ್ಕೆ ಹೋಗುತ್ತಿದ್ದಾಗ ಸದರಿ ಮೋಟಾರು ಸೈಕಲ್ಲನ್ನು ಆರೋಪಿತನಾದ ಬಾಬು ಈತನು ಚಲಾಯಿಸುತ್ತಿದ್ದು ಆತನ ಹಿಂದೆ ನರಸಪ್ಪ, ರಂಜಾನ ಇವರು ಕುಳಿತುಕೊಂಡು ಕೊಂಕಲ್ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ರಾತ್ರಿ 11:30 ಗಂಟೆಯ ಸುಮಾರಿಗೆ ಬಾಬು ಈತನು ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಬೋರಬಂಡ-ಧರ್ಮಪೂರ ಗೇಟ್ಗಳ ನಡುವೆ ಧರ್ಮಪೂರ ಘಾಟ್ನಲ್ಲಿ ಮೋಟ1ಆರು ಸೈಕಲನ್ನು ನಿಯಂತ್ರಿಸಲು ಸಾಧ್ಯಾವಾಗದೇ ರಸ್ತೆಯ ಬಲಬದಿಗೆ ಹೋಗಿ ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಆರೋಪಿ ಬಾಬು ಈತನಿಗೆ ಭಾರಿ ಸ್ವರೂಪದ ರಕ್ತಗಾಯ ಮತ್ತು ಫಿರ್ಯಾದಿ ನರಸಪ್ಪ ಈತನಿಗೆ ಭಾರಿ ಹಾಗೂ ಸಾಧಾ ಸ್ವರೂಪದ ಗಾಯಗಳಾಗಿದ್ದ ಬಗ್ಗೆ ಫಿರ್ಯಾದಿಯು ನೀಡಿದ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 190/2021 ಕಲಂ 279, 337, 338 ಐಪಿಸಿ ಮತ್ತು ಕಲಂ 177 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ನಂತರ ಇಂದೆ ದಿನಾಂಕ 15.12.2021 ರಂದು 03.30 ಎ.ಎಮ್ ಕ್ಕೆ ಅಪಘಾತದಲ್ಲಿ ಗಾಯಗೊಂಡ ಬಾಬು ತಂದೆ ಹಣಮಂತು ಕೊಂಡಲ್ ಈತನು ಮೃತಪಟ್ಟಿದ್ದು ಆ ಬಗ್ಗೆ ಮೃತನ ಸಂಬಂದಿ ಗೋಪಾಲ ತಂದೆ ಹಣಮಂತ ಬೊಂಬಯಿ ವ||24 ವರ್ಷ ಜಾ||ಮಾದಿಗ ಉ||ಕೂಲಿ ಕೆಲಸ ಸಾ||ಕೊಂಕಲ್ ತಾ||ಗುರುಮಠಕಲ್ ಈತನು ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮುಖಾಂತರ ನಿವೇದಿಸಿಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 188/2021 ಕಲಂ: 3& 7 ಇಅ ಂಅಖಿ 1955 : ದಿನಾಂಕ15/12/2021 ರಂದು 4 ಪಿ.ಎಂ ಕ್ಕೆ ಶ್ರೀ ಕಾಶಿನಾಥ ತಂದೆ ಮರಲಿಂಗಪ್ಪ ನಾಟಿಕಾರ ವ|| 31 ವರ್ಷ ಜಾ|| ಹೊಲೇಯ ಉ|| ಸಮಾಜ ಸೇವಕ ಸಾ|| ಬಿರನಾಳ ತಾ|| ವಡಗೇರಾ ಜಿ|| ಯಾದಗಿರಿ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ 14/12/2021 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ನಾನು ಮತ್ತು ಮೂತರ್ಿ ತಂದೆ ಹಣಮಂತ ಹೊಸಮನಿ ಸಾ|| ಟಿ. ಬೊಮ್ಮನಳ್ಳಿ, ಅಜಯ ತಂದೆ ದತ್ತಾತ್ರೆಯ ಯಳಸಂಗಿಕರ ಸಾ|| ಭಿ. ಗುಡಿ ತಾ|| ಶಹಾಪುರ ಎಲ್ಲರು ಸುರಪುರ ನಗರದ ವೆಂಕಟಪ್ಪ ನಾಯಕ್ ವೃತ್ತದ ಹತ್ತಿರ ಇದ್ದಾಗ ಮಕ್ಕಳಿಗೆ ಮದ್ಯಾಹ್ನ ಬಿಸಿ ಊಟಕ್ಕಾಗಿ ಹಾಲಿನ ಪೌಡರಗಳನ್ನು ಕಾಳ ಸಂತೆಯಲ್ಲಿ ಮಾರಟ ಮಾಡಲು ಕೃಷ್ಣಾಪುರ ಹತ್ತಿರ ಹೊಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮರೆಗೆ, ನಾವೇಲ್ಲರು ಕೂಡಿ ಕೃಷ್ಣಾಪುರ ಕ್ರಾಸ ಹತ್ತಿರ ಹೊದಾಗ ಸಾಯಂಕಾಲ ಅಂದಾಜು 06:00 ಗಂಟೆಗೆ ಆಗಿತ್ತು. ಅಲ್ಲಿ ಮಹಿಂದ್ರಾ ಪೀಕಪ್ ವಾಹನ ನಂ. ಕೆಎ-33 ಎ-7658 ನೇದ್ದರಲ್ಲಿ ಕನರ್ಾಟಕ ಸರಕಾರದ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ವಿದ್ಯಾಥರ್ಿಗಳಿಗೆ ಉಚಿತ ಹಾಲಿನ ಪುಡಿ ವಿತರಣೆ ಮಾಡುವ ಪೌಡರ ಪಾಕೀಟಗಳು ಇದ್ದವು. ಆಗ ನಾವೆಲ್ಲರೂ ವಾಹನದ ಚಾಲಕರಿಗೆ ವಿಚಾರಣೆ ಮಾಡಲಾಗಿ ವಾಹನದ ಚಾಲಕನು ನನಗೆ ಗೊತ್ತಿರುವುದಿಲ್ಲ, ನಮ್ಮ ಮಾಲಿಕರಿಗೆ ಗೊತ್ತು ಇರುತ್ತದೆ ಅಂತಾ ಅಂದಾಗ ನಾನು ಸುರಪುರ ಪೊಲೀಸ್ ಠಾಣೆಯ ಪಿಐ ಸಾಹೇಬರಿಗೆ ಪೊನ ಮಾಡಿ ತಿಳಿಸಿದಾಗ ಪಿಐ ಸರ್ ರವರ ತಮ್ಮ ಸಿಬ್ಬಂದಿಯಾದ ಹೊನ್ನಪ್ಪ ಸಿಪಿಸಿ-427 ರವರನ್ನು ಕಳುಹಿಸಿಕೊಟ್ಟು ನಂತರ ಅವರು ನಾವು ಕೂಡಿ ಪೀಕಪ್ ವಾಹನದಲ್ಲಿದ್ದ ಹಾಲಿನ ಪೌಡರ ಪಾಕೀಟಗಳನ್ನು ನೋಡಲಾಗಿ ಅವುಗಳ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಲೋಗೊ ಇದ್ದು ಕನರ್ಾಟಕ ಸರಕಾರದ ಕ್ಷೀರ ಭಾಗ್ಯ ಯೋಜನೆ ಅಂತ ಬರೆದಿರುತ್ತದೆ. ವಾಹನದಲ್ಲಿ ಹಾಲಿನ ಪೌಡರ ಇರುವ ಪಾಕೀಟಗಳು ತುಂಬಿರುವ ಒಟ್ಟು 22 ಚೀಲಗಳು ಇದ್ದು, ಒಂದು ಚಿಲದಲ್ಲಿ 1 ಕೆ.ಜಿಯ 20 ಪಾಕೇಟ್ ಇರುತ್ತವೆ. ಪ್ರತಿ ಕೆ.ಜಿ ಹಾಲಿನ ಪೌಡರ ಪಾಕೇಟ್ಗೆ ಅಂದಾಜು ಕಿಮ್ಮತ್ತು 300=00 ರೂ. ಒಟ್ಟು ಅ.ಕಿ 1,32,000=00 ರೂ.ಗಳು ಆಗುತ್ತದೆ. ಆಗ ವಾಹನ ಮತ್ತು ಹಾಲಿನ ಪೌಡರ ಸಮೇತ ಹೊನ್ನಪ್ಪ ಪೊಲೀಸ್ ಮತ್ತು ನಾವೇಲ್ಲರು ಕೂಡಿ ಠಾಣೆಗೆ ತಂದೆವು. ನಿನ್ನೆ ಎ.ಡಿ ರವರು ಬಂದು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದರು. ಆದರೂ ಇಲ್ಲಿಯವರೆಗೆ ದೂರು ನೀಡದೆ ಇದ್ದ ಕಾರಣ ನಾನು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಶಾಲಾ ಮಕ್ಕಳ ಸಲುವಾಗಿ ವಿತರಣೆ ಮಾಡಬೇಕಾಗಿದ್ದ ಹಾಲಿನ ಪೌಡರ ಪಾಕೀಟಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ವಾಹನದಲ್ಲಿ ಹಾಕಿ ಕೊಟ್ಟು ಕಳುಹಿಸಿರುವ ಕಲಬುರಗಿಯ ಟ್ರಾನ್ಸಪೋರ್ಟ ಮಾಲಿಕ ಸುರೇಶ ತಂದೆ ಶಿವಶರಣಪ್ಪ ಬಾಳಿಯವರ ಮತ್ತು ಎ.ಡಿ ಮದ್ಯಾಹ್ನ ಬಿಸಿ ಊಟ ಯೋಜನಾದಿಕಾರಿಗಳು ಸುರಪುರ ಇವರುಗಳ ಮೇಲೆ ಕಾನೂನು ಕ್ರಮ ಜರಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 188/2021 ಕಲಂ: 3& 7 ಇಅ ಂಅಖಿ 1955 ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ:163/2021 ಕಲಂ.279,338,.ಐ.ಪಿ.ಸಿ.ಕಾಯ್ದೆ : ದಿನಾಂಕ 14/12/2021 ರಮದು ಸಾಯಂಕಲ 05:30 ಪಿ.ಎಮ್ ಸುಮಾರಿಗೆ ಜಿ.ಜಿ.ಹೆಚ್ ಯಾದಗಿರಿ ಎಮ್ ಎಲ್ ಸಿ ವಸೂಲಾಗಿದ್ದು ಗಾಯಾಳದಾರನ ಹೇಳಿಕೆ ಪಡೆದುಕೊಂಡು ಸದರಿಯವರು ಮನೆಯ ಹಿರಿಯರೊಂದಿಗೆ ವಿಚಾರಿಸಿ ಫಿಯರ್ಾದಿ ನೀಡುವುದುದಾಗಿ ಹೇಳಿದ್ದು ಅದರಂತೆ ಇಂದು ದಿನಾಂಕ 15/12/2021 ರಂದು ಮಧ್ಯಾಹ್ನ 12-30 ಗಂಟೆಗೆ ಸದರಿ ಹೇಳಿಕೆ ನೀಡಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 14/12/2021 ರಂದು ಮಧ್ಯಾಹ್ನ 12:0 ಗಂಟೆಯ ಸುಮಾರಿಗೆ ನಾನು ಮತ್ತು ಅರುಣುಕುಮರ ತಂದೆ ದೊಡ್ಡಯ್ಯ ಮರಗ್ಯನೋರ ಇಬ್ಬರು ಸೇರಿ ಮೈಲಾಪುರು ಗ್ರಾಮಕ್ಕೆ ಒಂದು ಲೇಟರ ಕೊಡಲು ಮೋಟರ ಸೈಕಲ ಕೆಎ/33/ಎಸ್/9377 ಫ್ಯಾಶನ್ ಪ್ರೋ ನೇದ್ದರ ಮೇಲೆ ನಾನು ಹಿಂದುಗಡೆ ಕುಳಿತು ಹೋಗಿದ್ದು ಮರಳಿ ಸಮಯ ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಮ್ಮ ಊರಿಗೆ ಬರುವಾಗ ನಮ್ಮ ಊರು ಕೇರೆ ಹತ್ತಿರ ಕಂಬಾರ ಹೊಲದ ಸಮೀಪ ರಸ್ತೆಯಲ್ಲಿ ಒಂದು ತೆಗ್ಗು ಇದ್ದು ಅದನ್ನು ತಪ್ಪಿಸಲು ಒಮ್ಮಲೇ ಬೇಕ್ ಹಾಕಿದ್ದರಿಂದ ಮೋಟರ ಸೈಕಲು ಸ್ಕೀಡಾಗಿ ರಸ್ತೆಯ ಮೇಲೆ ಬಿದ್ದದರಿಂದ ಬಿದ್ದ ರಭಸಕ್ಕೆ ನನಗೆ ಬಲಗಾಲಿನ ಕೀಲು ಮುರಿದು ಗಂಭಿರ ಸ್ವರೂಪದ ಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ. ಅರುಣುಕುಮಾರನು ನನ್ನು ಅಲ್ಲೆ ಬಿಟ್ಟು ಗಾಡಿಯನ್ನು ತೆಗದುಕೊಂಡು ಹೋದನು ನಂತರ ನಮ್ಮ ಊರಿನವರಾದ ಸಾಬಯ್ಯ ತಂದೆ ದೊಡ್ಡಮಲ್ಲಯ್ಯ ಅದೇ ರಸ್ತೆಯಲ್ಲಿ ಬರುವಾಗ ನನ್ನನು ನೋಡಿ ಗಾಡಿ ನಿಲ್ಲಿಸಿ ಎನಾಯಿತು ಅಂತ ಕೇಳಿ ನಂತರ ಇತನ ಮೊಬೈಲ್ನಿಂದ ನಮ್ಮ ಸಂಬಂದಿಕಾರ ಆಂಜನೇಯ ತಂದೆ ಹಣಮಂತ, ಸುರೇಶ ತಂದೆ ಗಾಳೇಪ ಇವರಿಗೆ ವಿಷಯ ತಿಳಿಸಿದಾಗ ಇವರು ಸ್ಥಳಕ್ಕೆ ಬಂದು ಅಪಘಾತದಲ್ಲಿ ಗಾಯ ಹೊಂದಿದ್ದ ನನ್ನನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಒಯ್ದು ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ, ಈ ಅಪಘಾತವು ಅರುಣಕುಮಾರ ತಂದೆ ದೊಡ್ಡಯ್ಯ ಇತನ ಅತಿ ವೇಗ ಮತ್ತು ನಿರ್ಲಕ್ಷತನದಿಂದ ಅಪಘಾತ ನಡೆದಿರುತ್ತದೆ, ನಾನು ನಮ್ಮ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿಕೊಂಡು ಬರಲು ತಡವಾಗಿರುತ್ತದೆ. ಅವನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ಸದರಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 163/2021 ಕಲಂ 279, 338 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 164/2021 ಕಲಂ.ಮನುಷ್ಯ ಕಾಣೆ : ದಿನಾಂಕ 15/12/2021 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಿಕಾಜರ್ುನ ದಂಡಿನೋರ ವಯಾಃ 38 ವರ್ಷ ಜಾಃ ಮಾದಿಗ ಉಃ ಕೂಲಿಕೆಲಸ ಸಾಃ ಹಳಗೇರಾ ಇವರು ಠಾಣೆಗೆ ಬಂದು ಸದರಿ ಹೇಳಿಕೆ ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನಗೆ 04 ಜನ ಗಂಡು ಮಕ್ಕಳು ಮತ್ತು 02 ಹೆಣ್ಣು ಮಕ್ಕಳಿದ್ದು ನನ್ನ ದೊಡ್ಡ ಮಗಳು ಹೆಸರು ಗಂಗಿಮಾಳಮ್ಮ ಗಂಡ ಶಿವಪ್ಪ ಇವಳ್ನುಕರಣಗಿಗೆ ಮದುವೆ ಮಾಡಿಕೊಟ್ಟಿರುತ್ತವೆ ಮೂರನೇಯ ಮಗ ರಮೇಶ, ನಾಲ್ಕನೇಯವನು ಚಂದ್ರಶೇಖರ, ಐದನೇಯವನು ಸುರೇಶ, ಆರನೇಯವನು ನಾಗೇಶ ಅಂತ ಇದ್ದು. ನನ್ನ ಎರಡನೇಯವಳಾದ ಶರಣಮ್ಮ ತಂದೆ ಮಲ್ಲಿಕಾಜರ್ುನ ದಂಡಿನೋರ ವಯ: 19 ವರ್ಷಗಳಿರುತ್ತವೆ.ಹೀಗಿರುವಾಗ ದಿನಾಂಕ 10/12/2021 ರಂದು ಬೆಳಿಗ್ಗೆ 10 :00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗಳಾದ ಗಂಗಿಮಾಳಮ್ಮ ಗಂಡ ಶಿವಪ್ಪ ಇವಳನನ್ನು ಆಸ್ಪತ್ರೆಗೆ ತೋರಿಸಲು ಯಾದಗಿರಿಗೆ ನಾನು ಮತ್ತು ನನ್ನ ಗಂಡ ಮಲ್ಲಿಕಾಜರ್ುನ ತಂದೆ ರಾಮಣ್ಣ ನಾವು ಮೂರು ಜನರು ಬಂದಿದ್ದು ಆಗ ಮನೆಯಲ್ಲಿ ನನ್ನ ಮಗಳಾದ ಶರಣಮ್ಮ ಮತ್ತು ನಾಗೇಶ ಇಬ್ಬರು ಮನೆಯಲ್ಲಿ ಬಿಟ್ಟು ಬಂದಿದ್ದೇವೆ. ಮರಳಿ ನಾವು ಆಸ್ಪತ್ರೆಗೆ ತೊರಿಸಿಕೊಂಡು ಮಧ್ಯಾಹ ಸುಮಾರು 1:00 ಗಂಟೆಗ ನಮ್ಮ ಊರು ಹಳಿಗೇರಕ್ಕೆ ಹೋಗಿದ್ದು ನಾವು ಮನೆಗೆ ಹೋದಾಗ ನನ್ನ ಮಗ ನಾಗೇಶ ಇತನು ಗಾಬರಿಯಿಂದ ಅಕ್ಕ ಸಂಡಸಕ್ಕೆ ಅಂತ ಮುಂಜಾನೆ ಹೋಗಿದವಳು ಇನ್ನು ಬಂದಿಲ್ಲ ಅಂತ ಹೇಳಿದನು. ಆಗ ನಾನು ಎಲ್ಲಾ ಕಡೆ ನೋಡಿ ನಮ್ಮ ಓಣಿಯ ಜನರಿಗೆ ಕೇಳಿದರು ಸಂಜೆ 7:00 ಗಂಟೆಯಾದರು ಬರದ ಕಾರಣ ರಾತ್ರಿಯಾದರಿಂದ ಸುಮ್ನನಾಗಿ ಮರು ದಿವಸ ನಾನು ನನ್ನಗಂಡ ಮತ್ತು ನನ್ನ ಮಕ್ಕಳು ಎಲ್ಲರು ಸೇರಿ ನಮ್ಮೂರಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದೆವು ಆದರೂ ಕೂಡಾ ಅವಳ ಸುಳಿವು ಸಿಗಲಿಲ್ಲ, ನಂತರ ನಾವೆಲ್ಲರೂ ನಮ್ಮ ಬೀಗರು ನೆಂಟರಿಗೆ ಪೋನ ಮಾಡಿ ಕೇಳಿದರು ಕೂಡಾ ಅವಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ, ನನ್ನ ಮಗಳು ಶರಣಮ್ಮ ಇವಳು ಮನೆಯ ಬಿಟ್ಟು ಹೋಗುವಾಗ ಅವಳ ಮೈಮೇಲೆ ತಿಳಿ ನೀಲಿ ಡ್ರೇಸ್ ಮತ್ತು ಕಪ್ಪು ಬಣ್ಣದ ಪ್ಯಾಂಟ ಮತ್ತು ಕಪ್ಪ ಬಣ್ಣದ ಒಡಣಿ ಇರುತ್ತದೆ, ಅವಳ ಚಹರೆ ಪಟ್ಟಿ ಸಾಧಾರಣವಾದ ಮೈಕಟ್ಟು, ಗೋದಿ ಬಣ್ಣದ ಮುಖ, ನೆಟ್ಟನೆ ಮೂಗು, ತಲೆಯ ಕಪ್ಪು ಕೂದಲು, ಎತ್ತರ 4 ಫೀಟ 8 ಇಂಚು ಇದ್ದಿರುತ್ತಾಳೆ. ಈ ಘಟನೆಯು ದಿನಾಂಕ 10/12/2021 ರಂದು ಮಧ್ಯಾಹ್ನ 2:00 ಗಂಟೆಗೆ ನಮ್ಮ ಮನೆಯಂದ ಕಾಣೆಯಾಗಿರುತ್ತಾಳೆ. ಹಾಗೂ ನಮ್ಮ ಮಗಳು ಕಾಣೆಯಾದಗಿನಿಂದ ನಮ್ಮ ಓಣಿಯ ಹುಡಗನಾದ ಬಸಲಿಂಗ ತಂದೆ ದೊಡ್ಡಪ್ಪ ಗುರುಲೋರ ಸಾ: ಹಳಿಗೇರ ಇತನು ಕಾಣತಿಲ್ಲ ಆದ ಕಾರಣ ಇತನ ಮೇಲೆ ನಮ್ಮಗೆ ಸಂಶಯವಿರುತ್ತದೆ. ಆದ್ದರಿಂದ ನನ್ನ ಮಗಳನು ಹುಡುಕಾಡಿ ಎಲ್ಲಾ ಕಡೆ ವಿಚಾರಿಸಿದರು ಕೂಡಾ ನನ್ನ ಮಗಳು ಶರಣಮ್ಮ ಇವಳು ಸಿಗದ ಕಾರಣ ಇಂದು ದಿನಾಂಕ 15/12/2021 ರಂದು ಸಾಯಂಕಾಲ 5-00 ಗಂಟೆಗೆ ತಡವಾಗಿ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು ನನ್ನ ಮಗಳನು ಹುಡುಕಿ ಕೊಡಬೆಕಾಗಿ ಮಾನ್ಯರವರಲ್ಲಿ ವಿನಂತಿ. ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 164/2021 ಕಲಂ. ಮಹಿಳಾ ಕಾಣೆಯಾದ ಬಗ್ಗೆ ಅಂತಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 181/2021 ಕಲಂ: 143,147,148,323,324,504,506, ಸಂಗಡ 149 ಐಪಿಸಿ : ಇಂದು ದಿನಾಂಕ 15.12.2021 ರಂದು 06.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಕೃಷ್ಣಪ್ಪ ತಂದೆ ಹಳ್ಳೆಪ್ಪ ಹರವಾಳ ವ|| 48 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ತಳ್ಳಳ್ಳಿ(ಬಿ) ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮೂರ ನಮ್ಮ ಜನಾಂಗದ ಹಣಮಂತ್ರಾಯ ತಂದೆ ಬಸಪ್ಪ ಕುಳಗೇರಿ ಇವರಿಗೂ ನಮಗೂ ಸಣ್ಣಪುಟ್ಟ ಮಾತಿಗೆ ಹಲವು ಸಲ ಬಾಯಿ ಮಾತಿನ ಜಗಳವಾಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 14/12/2021 ರಂದು ರಾತ್ರಿ 9.30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರ ಇರುವ ಮಸೂತಿಯ ಕಟ್ಟೆಯ ಮೇಲೆ ಕುಳಿತಿದ್ದಾಗ ನಮ್ಮೂರ ನಮ್ಮ ಜನಾಂಗದ 1) ಹಣಮಂತ್ರಾಯ ತಂದೆ ಬಸಪ್ಪ ಕುಳಗೇರಿ 2] ವೀರೇಶ ತಂದೆ ಹಣಮಂತ್ರಾಯ ಕುಳಗೇರಿ 3] ಶ್ರೀಶೈಲ ತಂದೆ ಬಸಣ್ಣ ಕುಳಗೇರಿ 4] ಶರಣಪ್ಪ ತಂದೆ ಬಸಣ್ಣ ಕುಳಗೇರಿ 5] ವಿಜಯಕುಮಾರ ತಂದೆ ಬಸಣ್ಣ ಕುಳಗೇರಿ ಈ ಎಲ್ಲಾ 5 ಜನರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದವರೇ ನನಗೆ ಏನಲೇ ಕೃಷ್ಣ್ಯಾ ಸೂಳೆ ಮಗನೇ ನಿನಗೆ ಎಷ್ಟು ಸೊಕ್ಕು ಇದೆ ನಾವು ಬೇರೆಯವರೊಂದಿಗೆ ಜಗಳ ಮಾಡಿದರೆ ನೀನು ಬಿಡಿಸಲು ಬರುವುದಲ್ಲದೇ ನಮ್ಮ ವಿರುದ್ದ ಸೇರಿಕೊಂಡು ಜಗಳ ಮಾಡುತ್ತಿಯಾ ಅಂದ್ರೆ ನಿನಗೆ ಸೊಕ್ಕು ಜಾಸ್ತಿಯಾಗಿದೆ ಮಗನೇ ನಮ್ಮ ತಂಟೆಗೆ ಬರಬೇಡ ಅಂದರೂ ನೀನು ಮೊನ್ನೆ ನಮ್ಮ ವಿರುದ್ದ ಜಗಳ ಮಾಡಿದವರೊಂದಿಗೆ ಸೇರುತ್ತಿಯಾ ಏನಲೇ ಅಂತಾ ಕೇಳಿದಾಗ ನಾನು ಯಾರ ಪರವಾಗಿನೂ ಇಲ್ಲ ಮೊನ್ನೆ ನಾನು ಇಬ್ಬರು ಜಗಳ ಮಾಡಬಾರದು ಅಂತಾ ಜಗಳ ಬಿಡಿಸಿದ್ದೀನಿ ಇನ್ನು ಮುಂದೆ ನೀವು ಜಗಳ ಬಿಡಿಸಲು ಬರಬೇಡ ಅಂದ್ರೆ ಬರಲ್ಲ ಅಂದಿದ್ದಕ್ಕೆ ಹಣಮಂತ್ರಾಯನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ವೀರೇಶನು ನನಗೆ ಕಾಲಿನಿಂದ ಒದ್ದು ನೆಲಕ್ಕೆ ಕೆಡವಿದನು. ಆಗ ಶ್ರೀಶೈಲ, ಶರಣಪ್ಪ ಮತ್ತು ವಿಜಯಕುಮಾರ ಇವರು ನನ್ನ ಬೆನ್ನಿಗೆ, ಬಲಗಾಲಿನ ತೊಡೆಗೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಗಾಯ ಮಾಡಿ ಹೊಡೆಯುತ್ತಿದ್ದಾಗ ನಾನು ಸತ್ತೆನೆಪ್ಪೋ ಅಂತಾ ಚೀರುತ್ತಿದ್ದೆನು. ನಾನು ಚೀರುವ ಸಪ್ಪಳ ಕೇಳಿ ಅಲ್ಲಿಯೇ ಮನೆಯಲ್ಲಿದ್ದ ನನ್ನ ಹೆಂಡತಿಯಾದ ಮಲ್ಲಮ್ಮ ಗಂಡ ಕೃಷ್ಣಪ್ಪ ಹರವಾಳ ಇವಳು ಬಿಡಿಸಿಕೊಳ್ಳಲು ಬಂದಾಗ ಅವಳಿಗೂ ಸಹ ಈ ಸೂಳೆಯ ಸೊಕ್ಕು ಬಹಾಳ ಆಗಿದೆ ಅಂತ ಎಲ್ಲರೂ ಅವಾಚ್ಯವಾಗಿ ಬೈದಿರುತ್ತಾರೆ. ನಂತರ ಅಲ್ಲಿಯೇ ಇದ್ದ ನಮ್ಮೂರ ಬಾಲಪ್ಪ ತಂದೆ ಲಕ್ಷ್ಮಣ ಸಾತಿಹಾಳ ಮತ್ತು ಯಲ್ಲಪ್ಪ ತಂದೆ ಭೀಮರಾಯ ಬೆಕಿನಾಳ ಇಬ್ಬರೂ ಬಂದು ಸದರಿಯವರು ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಗಾಯವಾಗಿದ್ದರಿಂದ ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರಿಸಿ ತಡವಾಗಿ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹಾಗೂ ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿ ನನಗೂ ಹಾಗು ನನ್ನ ಹೆಂಡತಿಗೆ ಅವಾಚ್ಯವಾಗಿ ಬೈದು, ಜೀವದ ಭಯ ಹಾಕಿದ ಮೇಲ್ಕಾಣಿಸಿದ 05 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 181/2021 ಕಲಂ 143,147,148,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 90/2021 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994 : ಇಂದು ದಿನಾಂಕ: 15/12/2021 ರಂದು 5.45 ಎ.ಎಮ್ ಕ್ಕೆ ಫಿಯರ್ಾದಿದಾರರು ಶಕಾಪುರಕ್ರಾಸ್ ಹತ್ತಿರ ಹೋಗಿ ನಿಂತಾಗಅದೇ ಸಮಯಕ್ಕೆ ಶಹಾಪುರಕಡೆಯಿಂದಎರಡು ಮರಳು ತುಂಬಿದ ಟಿಪ್ಪರ್ಗಳು ಪಾಸಿಂಗ್ ನಂಬರ್ಇರುವದಿಲ್ಲ ಅವುಗಳಲ್ಲಿ ಮರಳು ತುಂಬಿಕೊಂಡು ಬಂದಾಗಟಿಪ್ಪರ್ಚಾಲಕರಿಗೆ ಹಿಡಿದು ವಿಚಾರಿಸಲಾಗಿಚಾಲಕರು ಮತ್ತುಟಿಪ್ಪರ್ ಮಾಲಿಕರು ಸಕರ್ಾರಕ್ಕೆರಾಜಧನ(ರಾಯಲ್ಟಿ)ವನ್ನುಕಟ್ಟದೇಟಿಪ್ಪರದಲ್ಲಿ ನಿಲವಂಜಿಸೀಮಾಂತರದಲ್ಲಿ ಬರುವ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡುಅಕ್ರಮವಾಗಿ ಸಾಗಿಸಿದ್ದು ಇರುತ್ತದೆಅಂತಾ ತಿಳಿಸಿದ್ದರಿಂದ ಪಂಚರ ಸಮಕ್ಷಮ 5.15 ಎ.ಎಮ್. ದಿಂದ 6.45 ಎ.ಎಮ್. ವರೆಗೆಜಪ್ತಿ ಪಂಚನಾಮೆ ಕೈಕೊಂಡುಆರೋಪಿತರು ಮತ್ತು ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡುಠಾಣೆಗೆ ಬಂದು ಮುಂದಿನ ಕ್ರಮಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿಠಾಣೆಗುನ್ನೆ ನಂ:90/2021 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ್ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಅದೆ.

 

 

ಇತ್ತೀಚಿನ ನವೀಕರಣ​ : 16-12-2021 04:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080