ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-12-2022


 ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 166/2022 ಕಲಂ 279, 304(ಎ) ಐಪಿಸಿಮತ್ತು 187 ಐ.ಎಮ್.ವಿಆಕ್ಟ್ ಇಂದು ದಿನಾಂಕಃ 15-12-2022 ರಂದು 2-30 ಪಿ.ಎಮ್ ಕ್ಕೆ ಶ್ರೀಮತಿ ದೇವಮ್ಮಗಂಡಅಂಬ್ರೇಶ ಪೈದೊಡ್ಡಿ ಸಾಃ ದೇವಾಪೂರಇವರುಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾವು ಕಳೆದ 2 ವರ್ಷಗಳಿಂದ ಹಾವಿನಾಳ ಕ್ರಾಸ್ ಸಮೀಪದಲ್ಲಿರುವ ವೆಂಕಟರೆಡ್ಡಿಇವರ ಹೊಲವನ್ನು ಲೀಜಿಗೆ ಹಾಕಿಕೊಂಡುಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇವೆ. ಸದರಿ ಹೊಲದಲ್ಲಿ ಸದ್ಯ ನಾವು ಭತ್ತದ ಸಸಿ ಹಾಕಿರುತ್ತೇವೆ. ಇಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಾವನಾದ ಭೀಮಣ್ಣ, ಅತ್ತೆಯಾದ ಲಕ್ಷ್ಮೀಎಲ್ಲರೂ ಮನೆಯಲ್ಲಿದ್ದಾಗ ನನ್ನಗಂಡನಾದಅಂಬ್ರೇಶತಂದೆ ಭೀಮಣ್ಣ ಪೈದೊಡ್ಡಿಇತನು ಹೊಲಕ್ಕೆ ಹೋಗಿ ಭತ್ತದ ಸಸಿಮಡಿಯಲ್ಲಿ ನೀರು ಬಿಟ್ಟು ಬರುತ್ತೇನೆಂದು ನಮಗೆ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆ.ಎ 33 ಆರ್ 3032 ನೇದ್ದನ್ನು ನಡೆಸಿಕೊಂಡು ಹೋದನು. ನಂತರ ಮದ್ಯಾಹ್ನ 12-55 ಗಂಟೆಯ ಸುಮಾರಿಗೆ ನಮ್ಮೂರಿನಚನ್ನಬಸವ ತಂದೆಅಮರಣ್ಣಜಕ್ಕನಗೌಡರಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ನಮ್ಮೂರಿನ ಸಂತೋಷತಂದೆ ಬಸವರಾಜ ಬಾಕ್ಲಿಇಬ್ಬರೂ ನನ್ನ ಮೋಟಾರ ಸೈಕಲ್ ಮೇಲೆ ದೇವಾಪೂರದಿಂದ ಸುರಪೂರಕ್ಕೆ ಹೊರಟಿದ್ದಾಗ, ನಮ್ಮ ಮುಂದೆಗಡೆ ಸ್ವಲ್ಪದೂರದಲ್ಲಿ ನಿನ್ನಗಂಡನುತನ್ನ ಮೋಟಾರ ಸೈಕಲ್ ನಡೆಸಿಕೊಂಡು ರಸ್ತೆಯಎಡಭಾಗದಲ್ಲಿತನ್ನ ಸೈಡಿಗೆ ಹೊರಟಿದ್ದನು. ದೇವಾಪೂರಕ್ರಾಸ್ದಾಟಿದ ಬಳಿಕ 12-45 ಪಿ.ಎಮ್ ಸುಮಾರಿಗೆ ಹಿಂದಿನಿಂದ ಲಾರಿ ನಂಬರಎಮ್.ಹೆಚ್ 43 ಯು 2278 ನೇದ್ದರ ಚಾಲಕನು ತನ್ನ ಲಾರಿಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಹಾರ್ನ ಹಾಕುತ್ತ ನಮ್ಮ ಮೋ.ಸೈಕಲಿಗೆ ಸೈಡ್ ಹೊಡೆದು ಮುಂದುಗಡೆ ಹೋದವನೇ ಬಾಬುರೆಡ್ಡಿಇವರ ಹೊಲದ ಹತ್ತಿರ ನಿನ್ನಗಂಡನ ಮೋಟಾರ ಸೈಕಲಿಗೆ ಹಿಂದಿನಿಂದಜೋರಾಗಿ ಡಿಕ್ಕಿಪಡಿಸಿದರಿಂದ ನಿನ್ನಗಂಡನುರಸ್ತೆಯ ಮೇಲೆ ಬಿದ್ದಾಗ ವೇಗದಲ್ಲಿ ಲಾರಿಯ ಗಾಲಿಗಳು ನಿನ್ನಗಂಡನತಲೆ ಹಾಗು ಎದೆಯ ಮೇಲಿಂದ ಹಾದು ಹೋಗಿದ್ದರಿಂದತಲೆ ಬುರಡೆಒಡೆದು ಸಂಪೂರ್ಣ ಮುಖ ಹಾಗು ಎದೆಯ ಭಾಗಚಪ್ಪಟೆ ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆಅಂತ ತಿಳಿಸಿದನು. ಆಗ ನಾವು ಗಾಬರಿಯಾಗಿ ನಾನು ಮತ್ತು ನನ್ನಅತ್ತೆ-ಮಾವಎಲ್ಲರೂ ಅಳುತ್ತ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ನನ್ನಗಂಡನು ಮೃತಪಟ್ಟುತಲೆಯಿಂದ ಹೊಟ್ಟೆಯವರೆಗೆದೇಹ ಸಂಪೂರ್ಣ ನುಜ್ಜುಗೊಜ್ಜಾಗಿ ಮೆದಳು, ರಕ್ತ, ಮಾಂಸರಸ್ತೆಯ ಮೇಲೆ ಚೆಲ್ಲಿರುತ್ತದೆ. ಅಪಘಾತಪಡಿಸಿದ ಬಳಿಕ ಲಾರಿ ಚಾಲಕನು ತನ್ನ ಲಾರಿ ಸಮೇತ ಓಡಿ ಹೋಗಿದ್ದು, ಆತನ ಹೆಸರುಅಬ್ದುಲ್ಗಫೂರತಂದೆಉಸ್ಮಾನಸಾಬ ಮುಲ್ಲಾ ಸಾಃ ಧನಗರಗಲ್ಲಿ ಆಳಂದ ಅಂತಗೊತ್ತಾಗಿರುತ್ತದೆ.  ಕಾರಣ ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 166/2022 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿಆಕ್ಟ್ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 137/2022 ಕಲಂ: 379 ಐಪಿಸಿ: ಇಂದು ದಿನಾಂಕ:15/12/2022 ರಂದು 7-30 ಎಎಮ್ ಕ್ಕೆ ಶ್ರೀ ಕಿರಣ್ ಡಿ.ಆರ್ ತಂದೆ ರಾಧಾಕೃಷ್ಣ ವ:38, ಉ:ಭೂ ವಿಜ್ಞಾನಿ ಕಛೇರಿ ವಿಳಾಸ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ಜಿಲ್ಲೆ ರವರು ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ:14/12/2022 ರಂದು ರಾತ್ರಿ 09:00 ಗಂಟೆಗೆ ಮಾನ್ಯ ತಹಸೀಲ್ದಾರರು ವಡಗೇರಾ ತಾಲೂಕಾ ರವರಾದ ಶ್ರೀ ಸುರೇಶ ಅಂಕಲಗಿ ರವರು ನನಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದೇನಂದರೆ ವಡಗೇರಾ ತಾಲೂಕಿನ ಗೋನಾಳ ಸೀಮಾಂತರದ ಕೃಷ್ಣಾ ನದಿ ವ್ಯಾಪ್ತಿಯಲ್ಲಿನ ನೈಸಗರ್ಿಕ ಮರಳನ್ನು ಯಾರೋ ಕಳ್ಳರು ಟಿಪ್ಪರಗಳ ಮೂಲಕ ಉಪ-ಖನಿಜ ನೈಸಗರ್ಿಕ ಮರಳನ್ನು ಸಾಗಿಸುತ್ತಿರುವುದಾಗಿ ಬಾತ್ಮಿಮಾಹಿತಿ ಬಂದಿರುವ ಕಾರಣ ರಾತ್ರಿ 10-30 ಗಂಟೆ ಸುಮಾರಿಗೆ ವಡಗೇರಾ ತಹಸೀಲ್ದಾರರ ಕಾರ್ಯಲಯದಲ್ಲಿ ಹಾಜರಿರಲು ಸೂಚಿಸಿದ ಮೇರೆಗೆ ನಾನು ಹಾಗೂ ಲಿಂಗರಾಜ ಭೂ ವಿಜ್ಞಾನಿ ಹಾಗೂ ನಮ್ಮ ಇಲಾಖೆಯ ಜೀಪ ಚಾಲಕರಾದ ಶ್ರೀ ವಿನೋದ ರವರೊಂದಿಗೆ ಇಲಾಖೆಯ ಸರಕಾರಿ ಜೀಪ ನಂ. ಕೆಎ 04 ಜಿ 1490 ನೇದರಲ್ಲಿ ಕುಳಿತುಕೊಂಡು ಎಲ್ಲರೂ ಅಂದಾಜು ರಾತ್ರಿ ಸಮಯ 10-30 ಗಂಟೆಗೆ ವಡಗೇರಾ ತಹಸೀಲ್ದಾರರ ಕಾರ್ಯಲಯಕ್ಕೆ ಬಂದು ಹಾಜರಾದೇವು. ಸದರಿ ತಹಸೀಲ್ದಾರರ ಕಾರ್ಯಲಯದಲ್ಲಿ ತಹಸೀಲ್ದಾರರಾದ ಶ್ರೀ ಸರೇಶ ಅಂಕಲಗಿ, ಕಂದಾಯ ನಿರೀಕ್ಷಕರು ವಡಗೇರಾ ವಲಯದ ಶ್ರೀ ಗಿರೀಶ ರವರು ಹಾಗೂ ಗ್ರಾಮ ಲೇಖಾಧಿಕಾರಿ ಗೋನಾಲ ಗ್ರಾಮ ಶ್ರೀ ನಾಗರಾಜ ರವರು ಮತ್ತು ವಡಗೇರಾ ಪೊಲೀಸ್ ಠಾಣೆಯ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ಮತ್ತು ಅವರ ಸಿಬ್ಬಂದಿಯವರಾದ ಶಿವಶಂಕರ ಹೆಚ್.ಸಿ 175, ವೆಂಕೋಬ ಪಿಸಿ 384 ಮತ್ತು ತಾಯಪ್ಪ ಹೆಚ್.ಸಿ 79 ಜೀಪ ಚಾಲಕ ರವರು ವಡಗೇರಾ ತಹಸೀಲ್ದಾರರ ಕಾರ್ಯಲಯಕ್ಕೆ ಬಂದಿದ್ದು, ನಾವೆಲ್ಲರೂ ಸೇರಿ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಕೃಷ್ಣಾ ನದಿಗೆ ಹೋಗಲು ತೀಮರ್ಾನಿಸಿ, ಅದರಂತೆ ತಹಸೀಲ್ದಾರರು ಮತ್ತು ಅವರ ಸಿಬ್ಬಂದಿಯವರು ತಹಸೀಲ್ದಾರರ ಜೀಪ ನಂ. ಕೆಎ 33 ಜಿ 4567 ರಲ್ಲಿ ಕುಳಿತುಕೊಂಡರು. ನಾವು ನಮ್ಮ ಇಲಾಖೆಯ ಜೀಪಿನಲ್ಲಿ ಕುಳಿತುಕೊಂಡೆವು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ಸರಕಾರಿ ಜೀಪ ನಂ. ಕೆಎ 33 ಜಿ 0164 ರಲ್ಲಿ ಕುಳಿತುಕೊಂಡರು. ಎಲ್ಲರೂ ಸೇರಿ ರಾತ್ರಿ 11:00 ಗಂಟೆಗೆ ತಹಸೀಲ್ದಾರರ ಕಾರ್ಯಲಯದಿಂದ ಹೊರಟು ವಡಗೇರಾ ತಾಲೂಕಿನ ಹತ್ತಿಗೂಡುರು-ಸಂಗಮ ಮೇನ ರೋಡ ಮೇಲೆ ಹೊರಟಿರುವಾಗ ರಾತ್ರಿ ಅಂದಾಜು ರಾತ್ರಿ 11-45 ಗಂಟೆ ಸುಮಾರಿಗೆ ಬೆಂಡೆಬೆಂಬಳ್ಳಿ ಗ್ರಾಮದ ಹತ್ತಿರ ಗೋನಾಲ ಗ್ರಾಮದ ಕಡೆಯಿಂದ ಟಿಪ್ಪರ ವಾಹನ ಸಂ. 1) ಕೆಎ 33 ಬಿ 3654, 2) ಎಮ್.ಹೆಚ್ 05 ಇಎಲ್ 3782 ನೇದವುಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನಾವೆಲ್ಲರೂ ವಾಹನಗಳನ್ನು ತಡೆದು ನಿಲ್ಲಿಸಿ, ಟಿಪ್ಪರ ವಾಹನ ಸಂ. ಕೆಎ 33 ಬಿ 3654 ವಾಹನ ಚಾಲಕನನ್ನು ವಿಚಾರಿಸಲಾಗಿ ಸದರಿ ವಾಹನ ಚಾಲಕನು ಗೋನಾಲ ಗ್ರಾಮದ ಸೀಮಾಂತರದ ಕೃಷ್ಣಾ ನದಿಯಿಂದ ಮರಳನ್ನು ತುಂಬಿಕೊಂಡು ಬರಲು ಸದರಿ ವಾಹನದ ಮಾಲಿಕರು ತಿಳಿಸಿರುತ್ತಾರೆ ಎಂದು ಹೇಳಿದನು. ನಂತರ ನಾವು ವಾಹನಗಳ ನಂಬರ ನೋಡಲು ಮತ್ತು ಟಿಪ್ಪರಗಳನ್ನು ಪರಿಶೀಲಿಸುವ ಸಮಯದಲ್ಲಿ ಸದರಿ ಎರಡು ಟಿಪ್ಪರಗಳ ವಾಹನ ಚಾಲಕರು ಟಿಪ್ಪರಗಳನ್ನು ಅಲ್ಲಿಯೇ ನಿಲ್ಲಿಸಿ, ಓಡಿ ಹೋಗಿರುತ್ತಾರೆ. ಅದರಂತೆ ನಾವು 1) ಕೆಎ 33 ಬಿ 3654 ಟಿಪ್ಪರನ್ನು ಪರಿಶೀಲಿಸಿದಾಗ ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಆಗಿರುತ್ತದೆ. ಅದರ ಮಾರುಕಟ್ಟೆ ಮೌಲ್ಯವು ಅಂದಾಜು 40,000/- ಆಗುತ್ತದೆ. 2) ಟಿಪ್ಪರ ನೋಂದಣಿ ನಂ. ಎಮ್.ಹೆಚ್ 05 ಇಎಲ್ 3782 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಮಾರುಕಟ್ಟೆ ದರವು ಅಂದಾಜು 40,000/- ಇರುತ್ತದೆ. ಈ ಮೇಲಿನ 2 ಟಿಪ್ಪರ ವಾಹನಗಳ ಚಾಲಕರು ಹಾಗೂ ಮಾಲಿಕರು ಸರಕಾರಕ್ಕೆ ಯಾವುದೇ ರಾಜಧನ ಹಾಗೂ ಇತರೆ ತೆರಿಗೆಗಳನ್ನು ಪಾವತಿಸದೆ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಗೋನಾಲ ಗ್ರಾಮದ ಸೀಮಾಂತರದ ಕೃಷ್ಣಾ ನದಿಯಿಂದ ಮರಳನ್ನು ಕಳ್ಳತನ ಮಾಡಿ ಮಾರಾಟದ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿರುತ್ತದೆ. ಸದರಿ 2 ಟಿಪ್ಪರಗಳ ಚಾಲಕರು ಓಡಿ ಹೋಗಿರುವ ಕಾರಣ ಅನ್ಯ ವಾಹನ ಚಾಲಕರ ಸಹಾಯವನ್ನು ಪಡೆದು ದಿನಾಂಕ:15/12/2022 ರಂದು ಬೆಳಗ್ಗೆ 7-30 ಎಎಮ್ ಕ್ಕೆ ಟಿಪ್ಪರಗಳೊಂದಿಗೆ ತಮ್ಮ ಠಾಣೆಗೆ ಬಂದಿದ್ದು, ಈ ಮೂಲಕ ತಮಗೆ ಲಿಖಿತ ದೂರು ಸಲ್ಲಿಸಿದ್ದು ಇರುತ್ತದೆ. ಮಾನ್ಯರವರು ಸದರಿಯವರ ಮೇಲೆ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ಕೋರಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 137/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 279 337 338 ಐಪಿಸಿ: ದಿನಾಂಕ:15/12/2022 ರಂದು ಬೆಳಿಗ್ಗೆ ಫಿರ್ಯಾದಿಯು ತನ್ನ ಮ್ಯಾಕ್ಸಿ ಟ್ರಕ್ ಬುಲೆರೊ  ನಂ: ಕೆಎ-33 ಬಿ-1600 ನೇದ್ದರಲ್ಲಿ ಗಾಯಾಳುದಾರರಿಗೆ ಕೂಡಿಸಿಕೊಂಡು ಏವೂರ ಸೀಮಾಂತರದಲ್ಲಿ ತಾನು ಲೀಜಿಗೆ ಮಾಡಿದ ಹೊಲಕ್ಕೆ ಹತ್ತಿ ಬಿಡಿಸಲು ತಮ್ಮೂರಿನಿಂದ ಹೊರಟು ಬೆಳಿಗ್ಗೆ 10.10 ಗಂಟೆಯ ಸುಮಾರಿಗೆ ಹುಣಸಗಿ ಕೆಂಭಾವಿ ರೋಡಿನ  ಮೇಲೆ ಮದ್ದಿನಮನಿ ಕ್ಯಾಂಪ್ ದಾಟಿ ಡಿಬ್ಬಿ ಹತ್ತಿರ ಹೊರಟಾಗ, ಆರೋಪಿತನು ತಾನು ಚಲಾಯಿಸುವ ಕ್ಯಾಂಟರ್ ಲಾರಿ ನಂ:ಕೆಎ-33, ಬಿ-1933 ನೇದ್ದರಲ್ಲಿ ರಾಶಿ ಮಿಶನ್ ಹಾಕಿಕೊಂಡು ಹಿಂದಿನಿಂದ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಫಿರ್ಯಾದಿಯ ಬೊಲೆರೋ ಗಾಡಿಗೆ ತರಚಿಕೊಂಡು ಹೋಗಿದ್ದರಿಂದ ಗಾಯಾಳು ನಂದಮ್ಮ ಇವಳಿಗೆ ಎಡಗಾಲು ಮುರಿದು ಭಾರಿ ರಕ್ತಗಾಯವಾಗಿದ್ದು, ಇನ್ನುಳಿದ ಇಬ್ಬರೂ ಗಾಯಾಳುಗಳಿಗೆ ಬೆನ್ನಿಗೆ ಸಾದಾ ರಕ್ತಗಾಯಗಳಾದ ಬಗ್ಗೆ ಅಪರಾಧ.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 131/22   ಕಲಂ: 341, 323, 504, 506 ಸಂ. 34 ಐಪಿಸಿ : ಇಂದು ದಿನಾಂಕ; 15/12/2022 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾವು ಮೂಲತಃ ಯಾದಗಿರಿ  ನಗರದವರಾಗಿದ್ದು ಸುಮಾರು 55-56 ವರ್ಷಗಳಿಂದ ಚೆನ್ನೈ ನಗರದ ಮೇಲ್ಕಂಡ ವಿಳಾಸದಲ್ಲಿ ಕುಟುಂಬ ಸಮೇತವಾಗಿ ವಾಸವಾಗಿರುತ್ತೇವೆ. 2012 ನೇ ಸಾಲಿನಿಂದ ಯಾದಗಿರಿ ನಗರದಲ್ಲಿರುವ ನಮ್ಮ ಆಸ್ತಿ ಮನೆ ನಂ.3-10-120, 3-11-20 ನೇದ್ದವುಗಳ ವಿಷಯದಲ್ಲಿ ನಮಗೂ ಮತ್ತು ನಮ್ಮ ತಮ್ಮನಾದ ಮಿಥಾಲಾಲ್ ಜೈನ್ ಇತನ ಮಕ್ಕಳಾದ ಸಂದೀಪ್ ದೋಖಾ ಮತ್ತು ವೇದಾಂತ ದೋಖಾ ಇವರ ಮಧ್ಯೆ ವಿವಾದವಿದ್ದು ಸದರಿ ಆಸ್ತಿಯನ್ನು ಅಕ್ರಮವಾಗಿ ನೊಂದಣಿ ಮಾಡಿಕೊಂಡಿರುವ ಬಗ್ಗೆ ಯಾದಗಿರಿ ನಗರ ಪೊಲೀಸ್ ಠಾಣೆಯ ಗುನ್ನೆ ನಂ.155/2012 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಸದರಿ ಪ್ರಕರಣದ ವಿಚಾರಣೆ ಯಾದಗಿರಿ ನ್ಯಾಯಾಲಯದಲ್ಲಿ ನಡೆದಿದ್ದು ದಿನಾಂಕ; 30/11/2022 ರಂದು ನಾನು ಮತ್ತು ನಮ್ಮ ತಮ್ಮನಾದ ಧನರಾಜ್ ದೋಖಾ, ಆರ್, ಶ್ರವಣನ್ ಹಾಗೂ ನಮ್ಮ ಕಾರ್ ಚಾಲಕ ಮಹ್ಮದ ವಾಜೀದ ಅಲಿ ಎಲ್ಲರೂ ಕೂಡಿಕೊಂಡು ಯಾದಗಿರಿಗೆ ಬಂದು ನಮ್ಮ ಶಿಕ್ಷಣ ಸಂಸ್ಥೆಗೆ ಹೋಗಿ ಅಲ್ಲಿನ ಹಾಗೂ ಹೋಗುಗಳನ್ನು ನೋಡಿಕೊಂಡು ನಂತರ ನಮ್ಮ ಸಂಭಂದಿಕರಾದ ವಿದ್ಯಾದೇವಿ ದೋಖಾ ಇವರನ್ನು ಭೇಟಿಯಾಗಿ 5-25 ಪಿಎಮ್ ಸುಮಾರಿಗೆ ಕಾಜಗಾರವಾಡಿಯಲ್ಲಿರುವ ವಿದ್ಯಾದೇವಿ ಇವರ ಮನೆಯಿಂದ ಹೊರಟು ಮುಖ್ಯ ಬಜಾರ ಕಡೆಗೆ ಬರುತ್ತಿದ್ದಾಗ ನಮ್ಮನ್ನು ಹಿಂಬಾಲಿಸಿದ ಸಂದೀಪ್ ದೋಖಾ ಮತ್ತು ವೇದಾಂತ ದೋಖಾ ಇವರು ಗಾಂಧಿಚೌಕ ಸಮೀಪದ ಅಂಬಿಕಾ ಕ್ಲಾಥ ಸ್ಟೋರ್ ಹತ್ತಿರ ನಮ್ಮ ಕಾರ ಮುಂದುಗಡೆ ಬಂದು ತಡೆದು ನಿಲ್ಲಿಸಿ, ಲೇ ಬೊಸಡೀ ಮಕ್ಕಳೆ ನಮ್ಮ ಆಸ್ತಿ ಬಗ್ಗೆ ನೀವು ಕೇಸ್ ಮಾಡಿಸಿ ನಮಗೆ ತೊಂದರೆ ಮಾಡುತ್ತಿದ್ದೀರಿ ಸೂಳೆ ಮಕ್ಕಳೆ  ಅಂತಾ ಅವಾಚ್ಯವಾಗಿ ಬೈದು, ವೇದಾಂತ ದೋಖಾ ಇತನು ನಮ್ಮ ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಧನರಾಜ ಜೈನ್ ಇವರು ಕುಳಿತಿದ್ದ ಕಾರಿನ ಸೈಡಿನ ಬಾಗಿಲು ತೆಗೆದು ಅವರ ಎದೆಯ ಮೇಲಿನ ಅಂಗಿ ಹಿಡಿದು ಎಡಗಡೆ ಕಪಾಳಕ್ಕೆ ಹೊಡೆದಿದ್ದು ಆಗ ನಾವೆಲ್ಲರೂ ಕಾರಿನಿಂದ ಇಳಿದು ಧನರಾಜ ಇತನಿಗೆ ಹೊಡೆಯುವುದು ಬಿಡಿಸಲು ಹೋದಾಗ ಸಂದೀಪ ಮತ್ತು ವೇದಾಂತ ಇವರು ಏನಪ್ಪಾ ನಿನ್ನದು ಸುದ್ದಿ ಅಂತಾ ಕೇಳಲಾಗಿ ಅವರಿಬ್ಬರು ನಮಗೆ ಸೂಳೆ ಮಕ್ಕಳೆ ಇವತ್ತು ನೀವು ಇಲ್ಲಿಂದ ಹೇಗೆ ಹೋಗುತ್ತೀರಿ ಅಂತಾ ನಮಗೆ ಜೀವ ಬೆದರಿಕೆ ಹಾಕಿದರು. ಇವರೊಂದಿಗೆ ತಕರಾರು ಮಾಡುವುದು ಬೇಡ ಅಂತಾ ನಾವು ಸುಮ್ಮನಾಗಿ ಅಲ್ಲಿಂದ ಹೊರಟು ಹೋಗಿದ್ದು ಇರುತ್ತದೆ. ನಾವು ಅವಸರವಾಗಿ ಊರಿಗೆ ಹೋಗಬೇಕಾಗಿದ್ದರಿಂದ ಯಾದಗಿರಿಯಿಂದ ಹೋಗಿದ್ದು ಇಂದು ಯಾದಗಿರಿಗೆ ಬಂದು ತಮ್ಮಲ್ಲಿ ತಡವಾಗಿ ದೂರು ನೀಡಿದ್ದು ಸದರಿ ಸಂದೀಪ್ ದೋಖಾ ಮತ್ತು ವೇದಾಂತ ದೋಖಾ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.131/2022 ಕಲಂ.341, 323, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.  

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 134/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 15.12.2022 ರಂದು ರಾಯಚೂರ ರಿಮ್ಸ್ ಆಸ್ಪತ್ರೆಗೆ ಎಮ್.ಎಲ್.ಸಿ ಕುರಿತು ಹೋದ ಶ್ರೀ ಗೌತಮ ಎ.ಎಸ್.ಐ ರವರು ಫಿಯರ್ಾದಿ ಹೇಳಿಕೆ ಪಡೆದುಕೊಂಡು ರಾತ್ರಿ 8-30 ಗಂಟೆಗೆ ಮರಳಿ ಠಾಣೆಗೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 13.12.2022 ರಂದು ನಾನು ನನ್ನ ಅಳಿಯ ಗಂಗಾಧರ ಇವನೊಂದಿಗೆ ಸೈದಾಪೂರಕ್ಕೆ ಹೋಗಿ ಮಾಕರ್ೆಟದಲ್ಲಿ ಸಾಮಾನುಗಳನ್ನು ಖರೀದಿ ಮಾಡಿಕೊಂಡು ಮರಳಿ ನಮ್ಮೂರಾದ ಗುಡ್ಲಗುಂಟಾ ಗ್ರಾಮಕ್ಕೆ ನನ್ನ ಅಳಿಯನ ಹಿರೋ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂಬರ ಕೆ.ಎ-33, ಇ.ಸಿ-4266 ನೇದ್ದರ ಮೇಲೆ ಹಿಂದೆ ಕುಳಿತು ಹೊರಟಿದ್ದೆನು. ಸಮಯ ರಾತ್ರಿ 7-30 ಗಂಟೆ ನನ್ನ ಅಳಿಯ ಗಂಗಾಧರ ಈತನು ಗುಡ್ಲಗುಂಟಾ ಸೀಮಾಂತರದ ಬುಡಬುಡಕೇರ ಜಮೀನು ಹತ್ತಿರ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿದ್ದು, ರಸ್ತೆಗೆ ಅಡ್ಡವಾಗಿ ಹೊರಟಿದ್ದ ಹಂದಿಗೆ ಡಿಕ್ಕಿಪಡಿಸಿದ್ದರಿಂದ ಬೈಕ ಮೇಲಿಂದ ಕೆಳಗೆ ಬಿದ್ದ ನನಗೆ ಎಡಕಾಲು ಮೊಳಕಾಲಿಗೆ ಭಾರಿರಕ್ತಗಾಯವಾಗಿದ್ದು, ಮೂಳೆ ಮುರಿದಿರುತ್ತದೆ. ಬಲಗಾಲ ಮೊಳಕಾಲು ಮತ್ತು ಪಾದದ ಹತ್ತಿರ ತೆರಚಿದ ಸಾದಾಗಾಯವಾಗಿರುತ್ತದೆ. ಮೋಟಾರ ಸೈಕಲ ನಡೆಸುತ್ತಿದ್ದ ನನ್ನ ಅಳಿಯ ಗಂಗಾಧರ ಈತನಿಗೆ ಯಾವುದೆ ಗಾಯಗಳಾಗಿರುವದಿಲ್ಲ. ಕಾರಣ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಫಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನೆ ನಂಬರ 134/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಇತ್ತೀಚಿನ ನವೀಕರಣ​ : 16-12-2022 01:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080