ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-01-2022

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ 11/2022 ಕಲಂ 392 ಐಪಿಸಿ : ಸಾರಾಂಶವೇನೆಂದರೆ, ನಾನು ನರೇಂದ್ರ ತಂದೆ ಸಾಕಲಚಂದ್ ಸೋಲಂಕಿ ಸಾ||ಯಾದಗಿರಿ ಇವರ ಗೌತಮ್ ಟ್ರೇಡಿಂಗ್ ಕಿರಾಣಾ ಹೋಲ್ಸೇಲ್ ಅಂಗಡಿಯಲ್ಲಿ ಸುಮಾರು 8 ವರ್ಷಗಳಿಂದ ಕೆಲಸಮಾಡಿಕೊಂಡಿರುತ್ತೇನೆ. ನಮ್ಮ ಮಾಲೀಕರ ಅಂಗಡಿಯಿಂದ ಸಾಮಾನುಗಳನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಅಂಗಡಿಯವರಿಗೆ ಕೊಟ್ಟು ಹಣ ಪಡೆದುಕೊಂಡು ಬರುವ ಕೆಲಸ ಮಾಡುತ್ತೇನೆ. ನಿನ್ನೆ ದಿನಾಂಕ:14/01/2022 ರಂದು ಮಧ್ಯಾಹ್ನ ನಮ್ಮ ಮಾಲೀಕರು ಹೇಳಿದಂತೆ ನಾನು ಯಾದಗಿರಿಯಿಂದ ಗುರುಮಿಟಕಲ್ಗೆ ಹೋಗಿ ಅಲ್ಲಿ ಕೆಲವು ಅಂಗಡಿಗಳಲ್ಲಿ ಬರಬೇಕಾದ ಒಟ್ಟು ರೂ.44800/- ಹಣವನ್ನು ವಸೂಲು ಮಾಡಿಕೊಂಡು ಮರಳಿ ಗುರುಮಿಟಕಲ್ದಿಂದ ರಾತ್ರಿ 8:00 ಗಂಟೆ ಸುಮಾರಿಗೆ ಹೈದ್ರಾಬಾದ್-ಯಾದಗಿರಿ ಬಸ್ (ತೆಲಂಗಾಣ ಬಸ್) ಗೆ ಹತ್ತಿಕೊಂಡು ಯಾದಗಿರಿಗೆ ಬಂದು ಗಂಜ್ ಸರ್ಕಲ್ ಹತ್ತಿರ ರಾತ್ರಿ 9:15 ಗಂಟೆಯ ಸುಮಾರಿಗೆ ಇಳಿದುಕೊಂಡೆನು. ನಂತರ ಅಲ್ಲಿಯೇ ಸರ್ಕಲ್ದಲ್ಲಿ ನಿಲ್ಲಿಸಿದ್ದ ನನ್ನ ಮೋಟರ್ ಸೈಕಲ್ ಹತ್ತಿರ ಹೋಗಿ ನನ್ನ ಹತ್ತಿರ ಇದ್ದ ಹಣವನ್ನು ಮತ್ತೊಮ್ಮೆ ಹೊರಗಡೆ ತೆಗೆದು ನೋಡಿ ಚೀಲದಲ್ಲಿಟ್ಟು ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರ್ನಲ್ಲಿ ಇಟ್ಟುಕೊಂಡು ಮೋಟರ್ ಸೈಕಲ್ ಮೇಲೆ ಕುಳಿತಿದು ಮೋಟರ್ ಸೈಕಲ್ ಚಾಲು ಮಾಡಬೇಕೆನ್ನುವಷ್ಟರಲ್ಲಿ ಒಮ್ಮೆಲೆ ಒಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ನನ್ನ ಮುಖಕ್ಕೆ ಖಾರದಪುಡಿ ಎಸೆದಾಗ ನಾನು ಪಕ್ಕಕ್ಕೆ ತಿರುಗಿದ್ದು, ಅಷ್ಟರಲ್ಲಿ ಆ ವ್ಯಕ್ತಿ ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರಿನಲ್ಲಿದ್ದ ಹಣದ ಚೀಲವನ್ನು ತೆಗೆದುಕೊಂಡು ಓಡಲಾರಂಭಿಸಿದನು. ಆಗ ನಾನು ಕಳ್ಳ ಕಳ್ಳ ಅಂತಾ ಅವನ ಹಿಂದೆ ಬೆನ್ನಟ್ಟಿ ಓಡುವಾಗ ಅಲ್ಲಿಯೇ ಇದ್ದ ನನಗೆ ಪರಿಚಯದ 1)ಹೊನ್ನಪ್ಪ ತಂದೆ ಮಹಾದೇವಪ್ಪ ಗಣಪೂರ, 2)ಶಿವರಾಮ ತಂದೆ ಮಹಾದೇವಪ್ಪ ಗಣಪೂರ ಮತ್ತು 3)ವಿನೋದ ತಂದೆ ಭೀಮರಾಯ ನಾಯಕ ರವರು ಸಹ ಓಡಿಬಂದಿದ್ದು ಎಲ್ಲರು ಕೂಡಿ ಅವನಿಗೆ ಹಿಡಿದುಕೊಂಡಾಗ ಅವನು ನಮ್ಮನ್ನು ನೂಕಿಸಿಕೊಟ್ಟು ಹಣದ ಚೀಲದೊಂದಿಗೆ ಓಡಿಹೋದನು. ಆ ವ್ಯಕ್ತಿಯು ಬಿಳಿಬಣ್ಣದ ಕಪ್ಪು ಗೆರೆಗಳುಳ್ಳ ಅಂಗಿ, ಬೂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಉದ್ದನೆಯ ಕೂದಲು ಬಿಟ್ಟಿದ್ದು, ಮುಖದ ಮೇಲೆ ಮೀಸೆ, ಗಡ್ಡ ಇರುತ್ತದೆ, ಆ ವ್ಯಕ್ತಿಯನ್ನು ಗಂಜ್ ಸರ್ಕಲ್ ಹತ್ತಿರ ಇರುವ ಸ್ಟ್ರೀಟ್ ಲೈಟ್ ಬೆಳಕಿನಲ್ಲಿ ಮತ್ತು ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು, ಆತನಿಗೆ ನೋಡಿದರೆ ಗುರುತಿಸುತ್ತೇನೆ. ಘಟನೆಯ ನಂತರ ನಾನು ನಮ್ಮ ಅಂಗಡಿಗೆ ಹೋಗಿ ನಮ್ಮ ಮಾಲೀಕರಿಗೆ ವಿಷಯ ತಿಳಿಸಿ ನಂತರ ಎಲ್ಲರು ವಿಚಾರ ಮಾಡಿ ದೂರು ನೀಡಲು ತಡವಾಗಿರುತ್ತದೆ. ಕಾರಣ ದಿನಾಂಕ:14/01/2022 ರಂದು 9:15 ಪಿ.ಎಮ್. ಕ್ಕೆ ಯಾದಗಿರಿ ನಗರದ ಗಂಜ್ ಸರ್ಕಲ್ ಹತ್ತಿರ ನನ್ನ ಹತ್ತಿರ ಇದ್ದ ರೂ.44800/- ಹಣವನ್ನು ದೋಚಿಕೊಂಡು ಹೋದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಹಣವನ್ನು ಪತ್ತೆಮಾಡಿಕೊಡಬೇಕಾಗಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 11/2022 ಕಲಂ 392 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ.12/2022 ಕಲಂ.269 ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 : ಇಂದು ದಿನಾಂಕ. 15/01/2022 ರಂದು 10-30 ಎಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಯಾದಗಿರಿ ನಗರದಲ್ಲಿ ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 05/01/2022 ರ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ಕೋವಿಡ್ ಸೂಕ್ತ ನಡುವಳಿಕೆಗಳನ್ನು ಪಾಲಿಸಬೇಕು ಅಂತಾ ಸಕರ್ಾರ ಆದೇಶ ಹೊರಡಿಸಿದ್ದು ಮತ್ತು ದಿನಾಂಕ; 14/01/202 ರಂದು 8-00 ಪಿಎಮ್ ದಿಂದ ದಿನಾಂಕ; 17/01/2022 ರಂದು ಬೆಳೆಗ್ಗೆ 5-00 ಗಂಟೆಯವರೆಗೆ ವಾರಾಂತ್ಯದ ಕಪ್ಯರ್ೂ ಆದೇಶ ಹೊರಡಿಸಿದ್ದು ಇರುತ್ತದೆ. ಹಿಗೀದ್ದು ಇಂದು ದಿನಾಂಕ; 15.01.2022 ರಂದು 9-30 ಎಎಮ್ ಸುಮಾರಿಗೆ ನಾನು ಮತ್ತು ನಮ್ಮ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಅಬ್ದುಲಬಾಷಾ ಪಿಸಿ-237 ರವರು ಕೂಡಿಕೊಂಡು ಕರೋನಾ ಕೋವಿಡ್-19 ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಕಾಡ್ಲೂರು ಪೆಟ್ರೋಲ ಬಂಕ ಕ್ರಾಸ ಮುಖಾಂತರ ಕೋರ್ಟ ಕಡೆಗೆ ಹೋಗುತ್ತಿರುವಾಗ 9-45 ಎಎಮ್ ಕ್ಕೆ ಲಕ್ಷ್ಮೀನಗರದ ವಾಟರ ಪೀಲ್ಟರ ಪಾಯಿಂಟ್ ಹತ್ತಿರ ಬಸವ ರೊಟ್ಟಿ ಕೇಂದ್ರ ಮತ್ತು ಟಿಫನ್ ಸೆಂಟರ ತೆಗೆದಿದ್ದು ನೋಡಲು ಸದರಿ ಬಸವ ರೊಟ್ಟಿ ಕೇಂದ್ರದಲ್ಲಿ ಸುಮಾರು 8-10 ಜನರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಿಗೊಬ್ಬರು ಅಂಟಿಸಿಕೊಂಡು ಟಿಫನ್ ಮಾಡುತ್ತಾ ಕುಳಿತಿದ್ದರು. ಆಗ ಅಲ್ಲಿದ್ದ ಅಂಗಡಿ ಮಾಲಿಕನಿಗೆ ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಚೆನ್ನಸಂಗನಬಸವ ತಂದೆ ಸಣ್ಣ ಬಸವರಾಜಪ್ಪ ರಾಕಾ ವ;48 ಜಾ; ಲಿಂಗಾಯತ ಉ; ರೊಟ್ಟಿ ಕೇಂದ್ರ ಮತ್ತು ಟಿಫನ್ ಸೆಂಟರ ವ್ಯಾಪಾರ ಸಾ; ವನಿಕೇರಿ ಲೇ ಔಟ್ ಬಾಲಾಜಿ ಗುಡುಯ ಹತ್ತಿರ ಯಾದಗಿರಿ ಅಂತ ತಿಳಿಸಿದ್ದು ಇರುತ್ತದೆ. ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಈ ಮೇಲಿನ ಆದೇಶ ಪ್ರಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿ ಹೊಟೇಲಗಳಲ್ಲಿ ಮತ್ತು ರೊಟ್ಟಿ ಕೇಂದ್ರಗಳಿಗೆ ಪಾಸರ್ೆಲ್ಗೆ ಮಾತ್ರ ಅವಕಾಶ ನೀಡಿದ್ದು, ಆದರೆ ಸದರಿ ಬಸವ ರೊಟ್ಟಿ ಕೇಂದ್ರ ಮತ್ತು ಟಿಫನ್ ಸೆಂಟರ ಮಾಲೀಕನು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ಯಾವುದೇ ದೈಹಿಕ ಅಂತರ ಕಾಪಾಡಿಕೊಳ್ಳದೇ ತನ್ನ ಬಸವ ರೊಟ್ಟಿ ಕೇಂದ್ರ ಮತ್ತು ಟಿಫನ್ ಸೆಂಟರದಲ್ಲಿ ಜನರನ್ನು ಗುಂಪಾಗಿ ಕೂಡಿಸಿ ವ್ಯಾಪಾರ ಮಾಡಿಕೊಂಡಿದ್ದು ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಅಪರ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಬಸವ ರೊಟ್ಟಿ ಕೇಂದ್ರ ಮತ್ತು ಟಿಫನ್ ಸೆಂಟರ ಮಾಲಿಕನಾದ ಚೆನ್ನಸಂಗನಬಸವ ತಂದೆ ಸಣ್ಣ ಬಸವರಾಜಪ್ಪ ರಾಕಾ ರವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ನಾನು ಹೇಳಿದಂತೆ ಫಿರ್ಯಾದಿಯನ್ನು ಗಣಕಯಂತ್ರದಲ್ಲಿ ಟೈಪ ಮಾಡಿಸಿ ನಂತರ ಪ್ರಿಂಟ್ ತಗೆಯಿಸಿ ಸಹಿ ಮಾಡಿ 10-30 ಎ.ಎಮ್.ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ನಿಮಗೆ ನೀಡಿದ್ದು ಇರುತ್ತದೆ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 12/2022 ಕಲಂ. 269 ಐಪಿಸಿ ಮತ್ತು ಕಲಂ. 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 13/2022 ಕಲಂ. 269, ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 : ಇಂದು ದಿನಾಂಕ. 15/01/2022 ರಂದು ಸಾಯಂಕಾಲ 5-15 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಯಾದಗಿರಿ ನಗರದಲ್ಲಿ ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 05/01/2022 ರ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ಕೋವಿಡ್ ಸೂಕ್ತ ನಡುವಳಿಕೆಗಳನ್ನು ಪಾಲಿಸಬೇಕು ಅಂತಾ ಸಕರ್ಾರ ಆದೇಶ ಹೊರಡಿಸಿದ್ದು ಮತ್ತು ದಿನಾಂಕ; 14/01/2022 ರಂದು 8-00 ಪಿಎಮ್ ದಿಂದ ದಿನಾಂಕ; 17/01/2022 ರಂದು ಬೆಳೆಗ್ಗೆ 5-00 ಗಂಟೆಯವರೆಗೆ ವಾರಾಂತ್ಯದ ಕಪ್ಯರ್ೂ ಆದೇಶ ಹೊರಡಿಸಿದ್ದು ಇರುತ್ತದೆ. ಹಿಗೀದ್ದು ಇಂದು ದಿನಾಂಕ; 15.01.2022 ರಂದು ಮದ್ಯಾಹ್ನ 4-15 ಪಿಎಮ್ ಸುಮಾರಿಗೆ ನಾನು ಮತ್ತು ನಮ್ಮ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಅಬ್ದುಲಬಾಷಾ ಪಿಸಿ-237 ರವರು ಕೂಡಿಕೊಂಡು ಕರೋನಾ ಕೋವಿಡ್-19 ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಅಂಬೇಡ್ಕರಚೌಕ ಮುಖಾಂತರ ಚರ್ಚಕ್ರಾಸ ಮೂಲಕ ಕೋರ್ಟ ಕಡೆಗೆ ಹೋಗುತ್ತಿರುವಾಗ 4-45 ಪಿಎಮ್ ಕ್ಕೆ ಕೋರ್ಟ ಮುಂದುಗಡೆ ಇರುವ ವಿನಾಯಕ ಹೊಟೇಲ್ ತೆಗೆದಿದ್ದು ಒಳಗಡೆ ಹೋಗಿ ನೋಡಲಾಗಿ ಸದರಿ ವಿನಾಯಕ ಹೊಟೇಲದಲ್ಲಿ ಸುಮಾರು 8-10 ಜನರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಿಗೊಬ್ಬರು ಅಂಟಿಸಿಕೊಂಡು ಟಿಫನ್ ಮಾಡುತ್ತಾ ಕುಳಿತಿದ್ದರು. ಆಗ ಅಲ್ಲಿದ್ದ ಹೋಟೆಲ ಮಾಲಿಕನಿಗೆ ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರೋಹಿತ ತಂದೆ ರಘುರಾಮ್ ವೈದ್ಯ ವ;36 ಜಾ: ಲಿಂಗಾಯತ ಉ; ಹೊಟೇಲ ವ್ಯಾಪಾರ ಸಾ; ಗಾಂಧಿನಗರ ಯಾದಗಿರಿ ಅಂತ ತಿಳಿಸಿದ್ದು ಇರುತ್ತದೆ. ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಈ ಮೇಲಿನ ಆದೇಶ ಪ್ರಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿ ಹೊಟೇಲಗಳಲ್ಲಿ ಪಾಸರ್ೆಲ್ಗೆ ಮಾತ್ರ ಅವಕಾಶ ನೀಡಿದ್ದು, ಆದರೆ ಸದರಿ ವಿನಾಯಕ ಹೊಟೇಲ ಮಾಲೀಕನು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವವಿರುವ ಬಗ್ಗೆ ತಿಳಿದ್ದಿದ್ದು ಸಹ ಯಾವುದೇ ದೈಹಿಕ ಅಂತರ ಕಾಪಾಡಿಕೊಳ್ಳದೇ ತನ್ನ ವಿನಾಯಕ ಹೊಟೇಲದಲ್ಲಿ ಜನರನ್ನು ಗುಂಪಾಗಿ ಕೂಡಿಸಿ ವ್ಯಾಪಾರ ಮಾಡಿಕೊಂಡಿದ್ದು ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಅಪರ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ವಿನಾಯಕ ಹೊಟೇಲ ಮಾಲಿಕನಾದ ರೋಹಿತ ತಂದೆ ರಘುರಾಮ್ ವೈದ್ಯ ರವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ನಾನು ಹೇಳಿದಂತೆ ಫಿರ್ಯಾದಿಯನ್ನು ಗಣಕಯಂತ್ರದಲ್ಲಿ ಟೈಪ ಮಾಡಿಸಿ ನಂತರ ಪ್ರಿಂಟ್ ತಗೆಯಿಸಿ ಸಹಿ ಮಾಡಿ 5-15 ಪಿ.ಎಮ್.ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ನಿಮಗೆ ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 13/2022 ಕಲಂ. 269 ಐಪಿಸಿ ಮತ್ತು ಕಲಂ. 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 17-01-2022 04:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080