ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-03-2022


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 22/2022 ಕಲಂ: 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಕಾಯ್ದೆ : ಇಂದು ದಿನಾಂಕ: 16/03/2022 ರಂದು 7-15 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ರೇಣುಕಾ ಗಂಡ ಹಣಮಂತ್ರಾಯ ಬೇಟೆಗಾರ ವಯಸ್ಸು-40 ವರ್ಷ ಉ: ಕೂಲಿ ಜಾತಿ: ಬೇಡರ ಸಾ: ದೇವರಗೋನಾಲ ತಾ: ಸುರಪೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನಿನ್ನೆ ನಾನು ಮತ್ತು ನಮ್ಮ ಸೊಸೆ ನಿಂಗಮ್ಮ ಗಂಡ ಬಸವರಾಜ ಬೇಟೆಗಾರ ವಯಾ;25 ವರ್ಷ ಉ: ಮನೆಗೆಲಸ ಜಾ: ಬೇಡರ ಹಾಗೂ ನಮ್ಮ ಮಾವನವರಾದ ಮಾನಪ್ಪ ಗಂಡ ನಿಂಗಪ್ಪ ಕಿರದಳ್ಳಿ (ಬನ್ನಟ್ಟಿ) ವಯಾ:58 ಉ: ಒಕ್ಕಲುತನ ಜಾ: ಬೇಡರ ಸಾ: ದೇವರಗೊನಾಲ ಮೂರು ಜನರು ಸಗರ ಯಲ್ಲಮ್ಮ ದೇವರಿಗೆ ಅಂತ ನಿನ್ನೆ ದಿನಾಂಕ: 15/03/2022 ರಂದು 11.00 ಎಎಂ ಸುಮಾರಿಗೆ ಹೋಗಿದ್ದು, ದೇವರು ಮುಗಿಸಿಕೊಂಡು ನಿನ್ನೆ ರಾತ್ರಿ 11.00 ಪಿಎಂ ಸುಮಾರಿಗೆ ಸಗರ ಯಲ್ಲಮ್ಮ ನಿಂದ ನಮ್ಮ ಊರಿಗೆ ಬರುವಾಗ ನಾವು ತೆಗೆದುಕೊಂಡು ಹೋದ ಟಂಟಂ ಅಟೋ ನಂಬರ: ಕೆಎ-33-ಎ-4639 ನೇದ್ದರ ಚಾಲಕನಾದ ಮಾನಯ್ಯ ತಂದೆ ಅಂಬ್ಲಯ್ಯ ಗುತ್ತೆದಾರ ಜಾ: ಇಳಗೇರ ಸಾ: ದೇವರಗೊನಾಲ ಇತನು ಶೆಟ್ಟಿಕೇರಾ ಬಾದ್ಯಾಪೂರ ನಡುವೆ ಸದರಿ ಟಂಟಂ ಅಟೋವನ್ನು ನಾವು ನಿಧಾನ ನಡೆಸುವಂತೆ ಹೇಳಿದರೂ ಕೇಳದೆ ಅತೀವೇಗ ಮತ್ತು ಅಲಕ್ಷತನದಿಂದ ನಡೆೆಸಿಕೊಂಡು ನಮ್ಮೂರ ಕಡೆಗೆ ಹೋಗುವಾಗ ಶೆಟ್ಟಿಕೇರಾ ದಾಟಿದ ಸ್ವಲ್ಪ ಮುಂದೆ ರಾಚಣ್ಣ ಸಾಹುಕಾರ ಎಂಬುವವರ ಹೊಲದ ಪಕ್ಕ ರೋಡಿನ ಮೇಲೆ ರೋಡ ಜಂಪಗೆ ಕಟ್ ಹೊಡೆಯಲು ಹೋಗಿ ಸದರಿ ಟಂಟಂ ನಂಬರ ಕೆಎ-33-ಎ-4639 ನೇದ್ದನ್ನು ಪಲ್ಟಿ ಮಾಡಿ ರೋಡಿನಲ್ಲಿ ಬಿದ್ದಿದ್ದರಿಂದ ಟಂಟಂದಲ್ಲಿದ್ದ ನಾನು ಮತ್ತು ನಿಂಗಮ್ಮ, ಮಾನಪ್ಪ ಮೂರು ಜನರು ರೋಡಿನಲ್ಲಿ ಬಿದ್ದಿದ್ದರಿಂದ ನಮಗೆ ಗಾಯಗಳಾಗಿ, ಗಾಬರಿಯಾಗಿ ಏಳುತ್ತಿದ್ದಾಗ ಅಷ್ಟರಲ್ಲಿ ಹಿಂದೆ ಬರುತ್ತಿದ್ದ ನಮ್ಮ ಭಾವನ ಮಗನಾದ ನಿಂಗಣ್ಣ ತಂದೆ ಬಾಲಪ್ಪ ಬನ್ನೆಟ್ಟಿ, ಬಲಭೀಮ ತಂದೆ ಯಂಕಪ್ಪ ಬೇಟೇಗಾರ ಇವರುಗಳು ಬಂದು ನೋಡಿ ನನಗೆ ಮತ್ತು ನಿಂಗಮ್ಮಗೆ ಎಬ್ಬಸಿದರು, ಮಾನಪ್ಪ ತಂದೆ ನಿಂಗಪ್ಪ ಕಿರದಳ್ಳಿ ಯವರು ಟಂಟಂ ಕೇಳಗೆ ಬಿದ್ದಿದ್ದು, ಟಂಟಂ ಎತ್ತಿ ಅವರಿಗೆ ಎಬ್ಬಿಸಿದರು, ನನಗೆ ಕುತ್ತಿಗೆಯ ಹಿಂದೆ ಸ್ವಲ್ಪ ಪೆಟ್ಟಾಗಿದ್ದು, ನಿಂಗಮ್ಮ ಬೇಟೆಗಾರ ಇವರಿಗೆ ಬಲಗಾಲಿಗೆ ಭಾರಿ ಗುಪ್ತಗಾಯವಾಗಿದ್ದು, ಮೈಕೈಗೆ ತರಚಿದ ಗಾಯಗಳಾಗಿರುತ್ತವೆ. ಮಾನಪ್ಪ ಇವರಿಗೆ ತೆಲೆಗೆ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಬಲಪಕ್ಕೆಗೆ ತೂತು ಬಿದ್ದು ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಭಲಬುಜಕ್ಕೆ, ಬೆನ್ನಿಗೆ ಬಲಗಾಲ ಮೋಳಕಾಲಿಗೆ, ಪಾದದ ಹತ್ತಿರ ಎಡಗೈ ಮುಂಗೈಗೆ ತರಚಿದ ಗಾಯಗಳಾಗಿದ್ದು, ನಿಂಗಣ್ಣ ಮತ್ತು ಬಲಭೀಮ ಇವರುಗಳು ನಮಗೆ ಸರಕಾರಿ ಆಸ್ಪತ್ರೆ ಸುರಪೂರ ಕ್ಕೆ ಸೇರಿಕೆ ಮಾಡಿದರು. ಅಪಘಾತ ಆದಾಗ ಅಂದಾಜು ಸಮಯ 11.30 ಪಿಎಂ ಆಗಿತ್ತು. ಸುರಪೂರ ಆಸ್ಪತ್ರೆಯಿಂದ ಮಾನಪ್ಪ ಕಿರದಳ್ಳಿ, ನಿಂಗಮ್ಮ ಬೇಟೆಗಾರ ಇವರಿಗೆ ಹೆಚ್ಚಿನ ಉಪಚಾರಕ್ಕೆ ಕಲಬುರಗಿ ಆಸ್ಪತ್ರೆಗೆ ಕಳುಹಿಸಿದ್ದು, ಆಸ್ಪತ್ರೆಗೆ ಹೋಗುವಾಗ ಹಸನಾಪೂರ ಹತ್ತಿರ ಇಂದು ದಿನಾಂಕ: 16/03/2022 ರಂದು 01.00 ಎಎಂ ಸುಮಾರಿಗೆ ಮಾನಪ್ಪ ತಂದೆ ನಿಂಗಪ್ಪ ಕಿರದಳ್ಳಿ ಮೃತಪಟ್ಟಿದ್ದು, ಶವವನ್ನು ಸುರಪುರ ಆಸ್ಪತ್ರೆಗೆ ತಂದು ಇಟ್ಟಿರುತ್ತಾರೆ. ನಿಂಗಮ್ಮ ಇವರಿಗೆ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಟಂಟಂ ಅಟೋ ಚಾಲಕ ಮಾನಯ್ಯ ತಂದೆ ಅಂಬ್ಲಯ್ಯ ಗುತ್ತೆದಾರ ಈತನು ಅಪಘಾತವಾದಾಗ ಹಿಂದೆ ವಾಹನ ಬರುತ್ತಿರುವದನ್ನು ನೋಡಿ ಟಂಟಂ ಅಟೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಟಂಟಂ ಅಟೋ ನಂಬರ ಕೆಎ-33-ಎ-4639 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿ ಓಡಿಹೋದ ಟಂಟಂ ಅಟೋ ಚಾಲಕ ಮಾನಯ್ಯ ತಂದೆ ಅಂಬ್ಲಯ್ಯ ಗುತ್ತೇದಾರ ವಯಾ:50 ವರ್ಷ ಸಾ: ದೇವರಗೊನಾಲ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಅಜರ್ಿಯನ್ನು ಶ್ರೀ. ಭೀಮರಾಯ ತಂದೆ ಹಣಮಂತ್ರಾಯ ಸಾ; ದೇವರಗೋನಾಲ ಇವರ ಕಡೆಯಿಂದ ಅಜರ್ಿ ಬರೆಯಿಸಿದ್ದು ಇರುತ್ತದೆ ಅಂತಾ ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 22/2022 ಕಲಂ: 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ. 279,337, 338 ಐಪಿಸಿ : ದಿನಾಂಕ: 16-03-2022 ರಂದು ರಾತ್ರಿ ಕಲಬುರಗಿ ಬಸವೇಶ್ವರ ಆಸ್ಪತ್ರೆಯಿಂದ ಎಮ್ ಎಲ್.ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಗ್ಗೆ ವಿಚಾರಿಸಲಾಗಿ ಗಾಯಾಳು ಮಾತನಾಡುವಸ್ಥಿತಿಯಲ್ಲಿ ಇಲ್ಲದ ಕಾರಣ ಆತನ ಮಗ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 15-03-2022 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನನ್ನ ತಂದೆ ಕ್ರಿಷ್ಟೋಪರ ಮತ್ತು ನಮ್ಮ ಸಂಬಂದಿಕನಾದ ಯೋಹಾನ ತಂದೆ ತಿಪ್ಪಣ್ಣ ಸಾಲವಡಗಿ ಇಬ್ಬರು ಕೂಡಿ ನಮ್ಮ ತಾತನಿಗೆ ಮಾತಾಡಿಸಿಕೊಂಡು ಬರಲು ಅಬ್ಬೆತುಮಕೂರಿಗೆ ಹೋಗುತ್ತೇವೆ ಅಂತಾ ಹೇಳಿ ಮೋಟರ ಸೈಕಲ್ ನಂ. ಕೆಎ-33 ಯು-2597 ನೇದ್ದರ ಮೇಲೆ ಅಬ್ಬೆತುಮಕೂರ ಕಡೆಗೆ ಹೋದರು ಮೋಟರ ಸೈಕಲನ್ನು ಯೋಹಾನನು ನಡೆಸುತಿದ್ದನು. ಅಂದು ರಾತ್ರಿ ನಾನು ಮನೆಯಲ್ಲಿರುವಾಗ ನಮ್ಮ ಹೊಲದಲ್ಲಿ ಕೆಲಸ ಮಾಡುವ ಶರಣಪ್ಪ ತಂದೆ ಈರಣ್ಣ ಕೌಳೂರ ಈತನು ನನಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಂದೆಯವರು ಹೋಗುವ ಮೋಟರ ಸೈಕಲ್ ಮತ್ತು ಇನ್ನೊಂದು ಮೋಟರ ಸೈಕಲಗೆ ರೋಡಿನ ಮೇಲೆ ಮರೆಮ್ಮ ಗುಡಿಯ ಹತ್ತಿರ ಅಪಘಾತವಾಗಿದೆ ಬೇಗ ಬಾ ಅಂತಾ ತಿಳಿಸಿದ್ದರಿಂದ ಆಗ ನಾನು ನನ್ನ ಗೇಳೆಯ ಸುನಿಲ್ ಈತನಿಗೆ ಕರೆದು ವಿಷಯ ತಿಳಿಸಿ ನಾನು ಮತ್ತು ಸುನಿಲ್ ಇಬ್ಬರು ಕೂಡಿ ಕಾರಿನಲ್ಲಿ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ಎರಡು ಮೋಟರ ಸೈಕಲಗಳು ಅಪಘಾತವಾಗಿ ರೋಡಿನ ಮೇಲೆ ಬಿದ್ದಿದ್ದು ಆಗ ನಾನು ನಮ್ಮ ತಂದೆ ಕ್ರೀಷ್ಟೋಪರ ತಂದೆ ಪೀಟರ ಈತನಿಗೆ ನೋಡಲಾಗಿ ಆತನಿಗೆ ತಲೆಗೆ ಭಾರಿ ಗುಪ್ತಗಾಯವಾಗಿದ್ದು ಆತನು ಮಾತಾಡುತ್ತಿರುಲಿಲ್ಲ, ನಮ್ಮ ಸಂಬಂದಿಕನಾದ ಯೋಹಾನನಿಗೆ ನೋಡಲಾಗಿ ಆತನಿಗೆ ಮುಖದ ಎಡಭಾಗಕ್ಕೆ ಕಣ್ಣಿಗೆ ಹಣೆಗೆ ಭಾರಿ ರಕ್ತಗಾಯವಾಗಿದ್ದು ಆತನು ಕೂಡ ಮಾತಾಡುತ್ತಿರಲಿಲ್ಲ. ಮತ್ತು ಠಾಣಾಗುಂದಿ ಗ್ರಾಮದ ದೇವಪ್ಪ ತಂದೆ ನಾಗಪ್ಪಯ್ಯ ದೊಡ್ಡಮನಿ ಈತನಿಗೆ ನೋಡಲಾಗಿ ಕಣ್ಣು, ಮೂಗು, ಬಾಯಿಗೆ ಭಾರಿ ರಕ್ತಗಾಯವಾಗಿದ್ದು ಆತನು ಕೂಡ ಮಾತಾಡುತ್ತಿರಲಿಲ್ಲ, ಮೋಟರ ಸೈಕಲ್ ನಡೆಸುವ ತಾಯಪ್ಪ ಈತನಿಗೆ ಯಾವುದೇ ಗಾಯಗಳು ಆಗಿರಲಿಲ್ಲ. ಆಗ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುವ ಶರಣಪ್ಪ ಈತನಿಗೆ ಹೇಗಾಯಿತು ಅಂತಾ ಕೇಳಲಾಗಿ ಆತನು ಹೇಳಿದ್ದೆನೆಂದರೆ ನಿಮ್ಮ ತಂದೆ ಮತ್ತು ಯೋಹಾನ ಇಬ್ಬರು ಅಬ್ಬೆತುಕೂರ ಕಡೆಗೆ ಹೋಗುತಿದ್ದರು, ಮತ್ತು ತಾಯಪ್ಪ ತಂದೆ ಮಲ್ಲಣ್ಣ ದೊಡ್ಡಮನಿ, ದೇವಪ್ಪ ತಂದೆ ನಾಗಪ್ಪಯ್ಯ ದೊಡ್ಡಮನಿ, ಇವರು ಒಂದು ಮೋಟರ ಸೈಕಲ್ ಮೇಲೆ ಠಾಣಾಗುಂದಿ ಗ್ರಾಮದ ಕಡೆಗೆ ಹೋಗುತಿದ್ದು ಇಬ್ಬರು ಮೋಟರ ಸೈಕಲ್ ಚಾಲಕರು ರಾತ್ರಿ 09-30 ಗಂಟೆ ಸುಮಾರಿಗೆ ತಾವು ನಡೆಸುವ ಮೋಟರ ಸೈಕಲಗಳನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ತಾಯಪ್ಪ ಮತ್ತು ಯೋಹಾನ ಇಬ್ಬರು ಚಾಲಕರು ಒಬ್ಬರಿಗೊಬ್ಬರು ಮುಖಾಮುಖಿ ಡಿಕ್ಕಿಹೊಡೆದಿದ್ದರಿಂದ ಮೋಟರ ಸೈಕಲ್ ಮೇಲೆ ಕುಳಿತವರು ಕೆಳಗೆ ಬಿದ್ದಿದ್ದು ಇರುತ್ತದೆ ಆಗ ನಾನು ಅವರಿಗೆ ಎಬ್ಬಿಸಿದಾಗ ಅವರು ಮಾತಾಡುತಿಲ್ಲರಿಲ್ಲ ಅಂತಾ ತಿಳಿಸಿದನು, ಆಗ ನಾನು ಡಿಕ್ಕಿ ಪಡಿಸಿದ ಮೋಟರ ಸೈಕಲಗಳನ್ನು ನೋಡಲಾಗಿ ಎರಡು ಮೋಟರ ಸೈಕಲಗಳು ಜಖಂಗೊಂಡು ರೋಡಿನ ಪಕ್ಕದಲ್ಲಿ ಬಿದ್ದದ್ದವು, ಅವುಗಳ ನಂಬರ ನೋಡಲಾಗಿ ಒಂದು ಮೋಟರ ಸೈಕಲ್ ನಂ. ಕೆಎ-33 ಯು-2597 ಅಂತಾ ಇದ್ದು ಇನ್ನೊಂದು ನೋಡಲಾಗಿ ಅದರ ನಂ. ಕೆಎ-33 ಇಬಿ-6575 ಅಂತಾ ಇತ್ತು ಆಗ ನಾವು ನಮ್ಮ ತಂದೆ ಮತ್ತು ಯೋಹಾನನಿಗೆ ಗಾಯಗಳು ಆಗಿದ್ದರಿಂದ ಕಾರಿನಲ್ಲಿ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಮ್ಮಂತೆ ದೇವಪ್ಪ ತಂದೆ ನಾಗಪ್ಪಯ್ಯ ಈತನಿಗೆ ಅವರ ಸಂಬಂದಿಕರು ಬಂದು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾವು ಸರಕಾರಿ ಆಸ್ಪತ್ರೆ ಯಾದಗಿರಿಗೆ ಬಂದಾಗ ನಮ್ಮ ತಂದೆ ಮತ್ತು ಯೊಹಾನಿಗೆ ಬಹಳ ಗಾಯವಾಗಿದ್ದರಿಂದ ನಾವು ಬೇಗನೆ ಕಲಬುರಗಿ ಕರೆದುಕೊಂಡು ಹೋಗಿ ನಮ್ಮ ತಂದೆಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಮತ್ತು ಯೋಹಾನನಿಗೆೆ ಎ.ಎಸ್.ಎಮ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದ ಇಬ್ಬರು ಮೋಟರ ಚಾಲಕರಾದ 1) ತಾಯಪ್ಪ ತಂದೆ ಮಲ್ಲಣ್ಣ ದೊಡ್ಡಮನಿ ವ|| 32 ವರ್ಷ ಜಾ|| ಕುರಬ ಉ|| ಒಕ್ಕಲುತನ ಸಾ|| ಠಾಣಾಗುಂದಿ 2) ಯೋಹಾನ ತಂದೆ ತಿಪ್ಪಣ್ಣ ಸಾಲವಾಡಗಿ ವ|| 40 ವರ್ಷ ಜಾ|| ಕ್ರೀಶ್ಚನ್ ಉ|| ಒಕ್ಕಲುತನ ಸಾ|| ಅಬ್ಬೆತುಮಕೂರ ಇವರ ಮೇಲೆ ಸೂಕ್ತ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಪಿಯರ್ಾದಿ ಸಾರಶಂದ ಮೇಲಿಂದ ಠಾಣಾ ಗುನ್ನೆ ನಂ.33/2022 ಕಲಂ. 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 36/2022 ಕಲಂ: 417, 420 ಸಂ 34 ಐಪಿಸಿ : ದಿನಾಂಕ:16/03/2022 ರಂದು 7-45 ಪಿಎಮ್ ಕ್ಕೆ ಮಾನ್ಯ ಆರಕ್ಷಕ ಉಪ-ಅಧೀಕ್ಷಕರು ಯಾದಗಿರಿ ರವರ ಕಾರ್ಯಲಯದಿಂದ ಟಪಾಲ ಮೂಲಕ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 22/2022 ಕಲಂ: 417, 420 ಸಂ 34 ಐಪಿಸಿ ಪ್ರಕರಣದ ಮೂಲ ಕಡತವು ಹದ್ದಿಯ ಆಧಾರದ ಮೇಲೆ ನಮ್ಮ ಠಾಣೆಗೆ ವಗರ್ಾವಣೆ ಮಾಡಿದ್ದನ್ನು ಸ್ವಿಕೃತ ಮಾಡಿಕೊಂಡೆನು. ಸದರಿ ವಗರ್ಾವಣೆ ಕಡತದ ಪ್ರ. ವ. ವರದಿಯ ಸಾರಾಂಶವೇನಂದರೆ ದಿನಾಂಕ: 07/02/2022 ರಂದು 8 ಪಿಎಮ್ ಕ್ಕೆ ಶ್ರೀಮತಿ ದೇವಿಂದ್ರಮ್ಮ ಗಂಡ ಮೋಹನರೆಡ್ಡಿ ವ:46, ಜಾ:ಲಿಂಗಾಯತ, ಉ:ಮನೆಕೆಲಸ ಸಾ:ರಾಚನಹಳ್ಳಿ ಗ್ರಾಮ ಹಾ:ವ: ಜೋಳದಡಗಿ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ ಶ್ರೀ ಮೋಹನರೆಡ್ಡಿ ತಂದೆ ಮಹಾದೇವಪ್ಪ ಸಂಗಾರೆಡ್ಡಿ ಸಾ:ರಾಚನಹಳ್ಳಿ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀಲಹಳ್ಳಿ ಈತನು ನನ್ನನ್ನು 11/05/1993 ರಂದು ಜೋಳದಡಗಿ ಗ್ರಾಮದಲ್ಲಿ ನನ್ನ ತವರು ಮನೆ ಮುಂದೆ ಗುರುಹಿರಿಯರ ಸಮಕ್ಷಮ ಮದುವೆ ಮಾಡಿಕೊಂಡಿದ್ದು, ನಂತರ ಮೂರು-ನಾಲ್ಕು ವರ್ಷಗಳ ವರೆಗೆ ಚನ್ನಾಗಿ ಸಂಸಾರ ಮಾಡಿದ್ದು, ನನಗೆ ಸಿದ್ದಲಿಂಗರೆಡ್ಡಿ ತಂದೆ ಮೋಹನರೆಡ್ಡಿ ಸಂಗಾರೆಡ್ಡಿ ಎಂಬ ಮಗನಿದ್ದು, 3-4 ವರ್ಷಗಳು ಆದ ನಂತರ ವರದಕ್ಷಿಣೆ ಕಿರುಕುಳ ಮಾನಸಿಕ ಹಿಂಸೆ, ದೈಹಿಕ ಕಿರುಕುಳ ಹೊಡೆಬಡೆ ಮಾಡಿರುತ್ತಾನೆ. ಈ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ನಂತರ ನನ್ನನ್ನು ಮನೆಯಲ್ಲಿ ಸೇರಿಸಿಕೊಳ್ಳದೆ ಹೊಡೆಬಡೆ ಮಾಡಿ ಹೊರ ಹಾಕಿದ್ದರಿಂದ ನಾನು ಜೀವನಾಂಶ ಕೋರಿ ಮಾನ್ಯ ನ್ಯಾಯಾಲಯಕ್ಕೆ 2001 ರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ನನ್ನ ಗಂಡನಾದ ಮೋಹನರೆಡ್ಡಿ ಈತನು ಮಾನ್ಯ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದೆನಂದರೆ ದಿನಾಂಕ:24/03/1988 ರಂದು ಶ್ರೀ ಬಸವೇಶ್ವರ ದೇವಸ್ಥಾನ ಬೋನಾಳ ತಾ:ಸುರಪೂರದಲ್ಲಿ ಶ್ರೀಮತಿ ತಿಪ್ಪಮ್ಮ ಇವರನ್ನು ಮದುವೆ ಆಗಿರುತ್ತೇನೆ ಮತ್ತು ರೇಖಾ ಎಂಬ ಮಗಳು ಇರುತ್ತಾಳೆ ಅಂತಾ ಹೇಳಿಕೆ ಕೊಟ್ಟಿದ್ದಕಾಗಿ ನನಗೆ ಮೊದಲ ಹೆಂಡತಿ ಜೀವಂತ ಇರುವ ಬಗ್ಗೆ ಗೊತ್ತಾಗಿದ್ದು, ನನಗೆ ಭಾರಿ ಮೋಸ ವಂಚನೆ ನನ್ನ ಗಂಡನಾದ ಮೋಹನರೆಡ್ಡಿ ಮಾಡಿರುತ್ತಾನೆ. ಮೊದಲ ಹೆಂಡತಿ ಜೀವಂತ ಇರುವುದನ್ನು ನನಗೆ ಹೇಳದೆ ಮೋಸ ಮಾಡಿ ಮದುವೆ ಮಾಡಿಕೊಂಡಿದ್ದು ಮತ್ತು ನನ್ನ ಬಿಟ್ಟು 3 ನೇ ಮದುವೆ ಮಾಡಿಕೊಂಡಿರುತ್ತಾನೆ. ದಿನಾಂಕ:25/06/2007 ರಂದು ಶ್ರೀ ಅಮರೇಶ್ವರ ದೇವಸ್ಥಾನ ಗುರುಗುಂಟಾದಲ್ಲಿ ತಾ:ಲಿಂಗಸ್ಗೂರು, ಜಿ:ರಾಯಚೂರದಲ್ಲಿ 3 ನೇ ಮದುವೆ ಆದ ಬಗ್ಗೆ ಲಗ್ನ ಪತ್ರಿಕೆ ಹಾಗೂ ಫೋಟೊಗಳನ್ನು ತಾನೇ ಸಲ್ಲಿಸಿದ್ದು, ಸೇವಾ ಪುಸ್ತಕದಲ್ಲಿ ಕಾನೂನು ಪ್ರಕಾರ ಮೊದಲನೆ ಹೆಂಡತಿ ಸೇರಿಸದೆ 3 ನೇ ಹೆಂಡತಿಯಾದ ಗುರುಸಂಗಮ್ಮ ಹೆಂಡತಿಯನ್ನು ಸೇರ್ಪಡೆ ಮಾಡಿದ್ದು, ನಾವಿಬ್ಬರೂ ಹೆಂಡತಿಯವರು ಇದ್ದು ಗೊತ್ತಿದ್ದು, ಗುರುಸಂಗಮ್ಮ 3 ನೇ ಮದುವೆ ಮಾಡಿಕೊಂಡಿರುತ್ತಾಳೆ. ಮಾನ್ಯರವರು ಶ್ರೀ ಮೋಹನರೆಡ್ಡಿ ಶಿಕ್ಷಕರು ಮತ್ತು 3 ನೇ ಹೆಂಡತಿಯಾದ ಗುರುಸಂಗಮ್ಮಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ. 1997 ನೇ ಇಸ್ವಿಯಿಂದ ಇಲ್ಲಿಯವರೆಗೆ ನನ್ನ ಗಂಡ ಮೋಸ ಮಾಡಿರುತ್ತಾನೆ ಅಂತಾ ದೂರಿನ ಸಾರಾಂಶದ ಮೇಲಿಂದ ಸೈದಾಪೂರ ಠಾಣಾ ಗುನ್ನೆ ನಂ. 22/2022 ಕಲಂ: 417, 420 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು, ಪ್ರ. ವ. ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತಾರೆ. ನಂತರ ಪ್ರಕರಣದಲ್ಲಿ ಗುನ್ನೆ ಸ್ಥಳ ಪಂಚನಾಮೆ ಕೈಕೊಂಡು ಹದ್ದಿಯ ಆಧಾರದ ಮೇಲಿಂದ ಸದರಿ ಪ್ರಕರಣವನ್ನು ವಡಗೇರಾ ಠಾಣೆಗೆ ವಗರ್ಾವಣೆ ಮಾಡಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಮಾನ್ಯ ಆರಕ್ಷಕ ಉಪ-ಅಧೀಕ್ಷಕರು ಯಾದಗಿರಿ ರವರ ಮೂಲಕ ನಮ್ಮ ಠಾಣೆಗೆ ವಗರ್ಾವಣೆ ಮಾಡಿರುತ್ತಾರೆ. ಸದರಿ ವಗರ್ಾವಣೆ ಪ್ರಕರಣದ ಕಡತದ ಪ್ರ. ವ. ವರದಿ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ. 36/2022 ಕಲಂ: 417, 420 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 37/2022 ಕಲಂ 498(ಎ), 323, 324, 504 ಸಂಗಡ 34 ಐಪಿಸಿ : ಇಂದು ದಿನಾಂಕ 16.03.2022 ರಂದು ಮಧ್ಯಾಹ್ನ 1 ಗಂಟೆಗೆ ಶ್ರೀಮತಿ ವೈಷ್ಣವಿ ಗಂಡ ಮಲ್ಲಪ್ಪ ಮಡಿವಾಳ, ವ|| 23 ವರ್ಷ, ಜಾ|| ಮಡಿವಾಳ, ಉ|| ಮನೆಕೆಲಸ, ಸಾ|| ಯಲಸತ್ತಿ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ತನ್ನಗಂಡ ಹಾಗೂ ಅತ್ತೆ, ಮೈದುನರು ತನಗೆ ಹೊಲಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ ಅಂತಾ ನಿಂದಿಸಿದ್ದಲ್ಲದೆ ಗಂಡ ದೈಹಿಕ ಮತ್ತು ಮಾನಸಿಕ ಹಿಂಸೆ ಹಾಗೂ ಅತ್ತೆ, ಮೈದುನ ಮಾನಸಿಕ ಹಿಂಸೆ ನೀಡಿ ತನ್ನ ಮೇಲೆ ಕ್ರೌರ್ಯ ನಡೆಸಿರುತ್ತಾರೆ ಅಂತಾ ಆಪಾದನೆ.

 


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 36/2022 ಕಲಂ 457, 380 ಐಪಿಸಿ : ಇಂದು ದಿನಾಂಕ 09/03/2022 ರಂದು ಬೆಳಿಗ್ಗೆ 09-00 ಗಂಟೆಗೆ ಫಿಯರ್ಾದಿ ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಹಲಿಮಾ ಹಜಗರಿ ಹಾಗೂ ನನ್ನ ಮಗಳಾದ ಸಾದಿಯಾ ಜೆಬಿನ್ ಇರುತ್ತೇವೆ. ನನ್ನ ಹೆಂಡತಿಗೆ ಕಿಡ್ನಿ ಸಮಸ್ಯೆ ಇದ್ದ ಕಾರಣ ನಾವು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತುತ್ತಿದ್ದೇವೆ. ಹೀಗಿದ್ದು ಮೊನ್ನೆ ದಿನಾಂಕ 14/03/2022 ರಂದು ಸಾಯಂಕಾಲ 08-00 ಗಂಟೆಗೆ ನಾನು ನನ್ನ ಹೆಂಡತಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿದ್ದು, ನನ್ನ ಮಗಳು ಮನೆಯಲ್ಲಿ ಒಬ್ಬಳೆ ಆಗುತ್ತಾಳೆಂದು, ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ಹತ್ತಿರ ಇರುವ ನಮ್ಮ ಅಳಿಯ ಎಂ.ಡಿ ನಜರೊದ್ದೀನ್ ತಂದೆ ಎಂ.ಡಿ ಜೈರೊದ್ದೀನ್ ಇವರ ಮನೆಯಲ್ಲಿ ಅವರಿಗೆ ಉಳಿದುಕೊಳ್ಳಲು ಹೇಳಿ ಹೋದೆವು. ಅವರಂತೆ ನನ್ನ ಮಗಳು ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ನಂತರ ನಿನ್ನೆ ದಿನಾಂಕ 15/03/2022 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ ಮಗಳು ಸಾದಿಯಾ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನೀವು ಬೆಂಗಳೂರಿಗೆ ಹೋದ ಮೇಲೆ ನಾನು ನಮ್ಮ ಮಾವರ ಮನೆಯಲ್ಲಿ ಉಳಿದುಕೊಂಡಿದ್ದು ಇಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಿದಾಗ ಮುಂದಿನ ಗೇಟಿನ ಕೀಲಿ ಹಾಗಯೇ ಇದ್ದು, ಸೈಡಿಗೆ ಇದ್ದ ಗೇಟಿನ ಕೀಲಿ ಮುರಿದು ಒಳಗೆ ಬಂದು ಮನೆಗೆ ಹಾಕಿದ ಕೀಲಿ ಕೊಂಡಿ ಮುರಿದು ಮನೆಯ ಎರಡು ಬೆಡ್ ರೂಮಿನಲ್ಲಿ ಇದ್ದ ಅಲಮರಿ ಮುರಿದು ಅಲಮರಿಯಲ್ಲಿ ಇದ್ದ 1] ನಗದು ಹಣ 20,000/- ರೂಪಾಯಿಗಳು, 2] ಒಂದು 5 ತೊಲೆಯ ಒಂದು ಜೊತೆ ಬೆಳ್ಳಿಯ ಕಾಲು ಚೈನ್, ಅ.ಕಿ 3000/-ರೂ|| ಗಳು, 3] ಒಂದು 4 ತೊಲೆಯ ಒಂದು ಜೊತೆ ಬೆಳ್ಳಿಯ ಕಾಲು ಚೈನ್, ಅ.ಕಿ 2400/-ರೂ|| ಗಳು, 4] ಸುಮಾರು 2 ತೊಲೆ ಬೆಳ್ಳಿಯ 05 ರಿಂಗ್ಗಳು, ಅ.ಕಿ 12,00/- ರೂ|| ಗಳು. ಹಾಗೂ 5] ಎರಡು ಹೆಣ್ಣು ಮಕ್ಕಳ ಸೊನಾಟಾ ವಾಚ್ಗಳು, ಅ.ಕಿ 5000/ ರೂ|| ಗಳು. ಹೀಗೆ ಒಟ್ಟು 31,600/- ರೂಪಾಯಿಗಳ ಕಿಮ್ಮತ್ತಿನ ಹಣ ಹಾಗೂ ಬೆಳ್ಳಿಯ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನನಗೆ ತಿಳಿಸಿದಳು. ನಂತರ ನಾನು ತೋರಿಸಿಕೊಂಡು ನಾಳೆ ಬರುತ್ತೇವೆ ಬಂದ ನಂತರ ಕೇಸ್ ಮಾಡೋಣ ಅಂತಾ ತಿಳಿಸಿದೆವು. ನಂತರ ನಾನು ಇಂದು ದಿನಾಂಕ 16/03/2022 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಮನೆಗೆ ಬಂದು ನೋಡಿದಾಗ, ಮನೆಯ ಕೀಲಿ ಮುರಿದು ಕಳ್ಳತನವಾಗಿದ್ದು ಕಂಡು ಬಂತು. ಸದರಿ ವಿಷಯ ನಮ್ಮ ಮನೆ ಕಳ್ಳತನವಾದ ವಿಷಯ ನಮ್ಮ ಅಳಿಯ ಎಂ.ಡಿ ನಜರೊದ್ದೀನ್, ನಮ್ಮ ಮನೆಯ ಪಕ್ಕದಲ್ಲಿ ಇರುವ ಚಾಂದ್, ಇವರಿಗೆ ತಿಳಿಸಿದಾಗ ಅವರು ಕೂಡ ಮನೆಗೆ ಬಂದು ನೋಡಿ ಘಟನೆಯ ಬಗ್ಗೆ ವಿಚಾರಿಸಿದರು. ನಾನು ಬೆಳಗಳೂರಿನಿಂದ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಮನೆಯಲ್ಲಿ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 36/2022 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 17-03-2022 10:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080