ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-04-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 49/2022 ಕಲಂ 379 ಐಪಿಸಿ : 16-04-2022 ರಂದು ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 02-03-2022 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಾನು ನನ್ನ ಕೆಲಸ ನಿಮಿತ್ತ ಯಾದಗಿರಿ ಶಹಾಪೂರಕ್ಕೆ ಹೋಗಿ ಸಾಯಂಕಾಲ 06-00 ಗಂಟೆ ಸುಮಾರಿಗೆ ನಮ್ಮೂರಾದ ರಾಮಸಮುದ್ರ ಗ್ರಾಮದ ನಮ್ಮ ಮನೆಗೆ ಬಂದು ನನ್ನ ಮೋಟರ ಸೈಕಲನ್ನು ನಮ್ಮ ಮನೆಯ ಮುಂದೆ ಅಂಗಳದಲ್ಲಿ ಇಟ್ಟು ಅದಕ್ಕೆ ಕೀಲಿ ಹಾಕಿದ್ದೆನು. ಅಂದು ರಾತ್ರಿ ನಾನು ಮತ್ತು ನಮ್ಮ ತಮ್ಮ ನಾಗರಾಜ ಮತ್ತು ನಮ್ಮ ಮನೆಯವರು ಊಟ ಮಾಡಿ ರಾತ್ರಿ 11 ಗಂಟೆವರೆಗೆ ಅಂಗಳದಲ್ಲಿ ಮಾತಾಡುತ್ತ ಕುಳಿತುಕೊಂಡಿದ್ದು, ನಂತರ ನಮಗೆ ನಿದ್ದೆ ಬಂದ ನಂತರ ನಾವು ಮನೆಯಲ್ಲಿ ಹೋಗಿ ಮಲಗಿಕೊಂಡಿರುತ್ತೇವೆ. ದಿನಾಂಕ: 03-03-2022 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ನಾನು ಎದ್ದು ಮನೆಯ ಅಂಗಳದ ಮುಂದೆ ಬಂದಾಗ ನನ್ನ ಮೋಟರ ಸೈಕಲ್ ಇರಲಿಲ್ಲ ಆಗ ನಾನು ನನ್ನ ಮೋಟರ ಸೈಕಲನ್ನು ನಮ್ಮ ಮನೆಯವರು ಯಾರಾದರು ತೆಗೆದುಕೊಂಡು ಹೋಗಿರಬೇಕು ಅಂತಾ ವಿಚಾರಿಸಲಾಗಿ ಯಾರು ತೆಗೆದುಕೊಂಡು ಹೋಗಿರುವದಿಲ್ಲ ಅಂತಾ ಗೋತ್ತಾಯಿತು. ನಂತರ ನಾನು ನಮ್ಮ ಗೇಳೆಯರು ಯಾರಾದರು ತೆಗೆದುಕೊಂಡು ಹೋಗಿರಬೇಕು ಅಂತಾ ಊರೊಳಗೆ ಹೋಗಿ ನಮ್ಮ ಗೇಳೆಯರಿಗೆ ವಿಚಾರ ಮಾಡಲಾಗಿ ಅವರು ಕೂಡ ನನ್ನ ಮೋಟರ ಸೈಕಲ್ ಬಗ್ಗೆ ಎನು ಗೋತ್ತಿಲ್ಲಾ ಅಂತಾ ತಿಳಿಸಿದರು. ಆಗ ನಾನು ಯಾರಾದರು ಎಮಜರ್ೆನ್ಸಿಯಾಗಿ ತೆಗೆದುಕೊಂಡಿರಬೇಕು ಬರಬಹುದು ಅಂತಾ ಸುಮ್ಮನಿದ್ದೆನು. ಸಾಯಂಕಾಲ ಆದರು ಕೂಡ ನನ್ನ ಮೋಟರ ಸೈಕಲ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಮರುದಿನ ನಾನು ಮತ್ತು ನಮ್ಮ ತಮ್ಮ ನಾಗರಾಜ ಇಬ್ಬರು ಕೂಡಿ ನಮ್ಮ ಸುತ್ತ ಮುತ್ತ ಊರುಗಳಿಗೆ ಮತ್ತು ತಾಂಡಗಳಿಗೆ ಹೋಗಿ ನನ್ನ ಮೋಟರ ಸೈಕಲ್ ಯಾರಾದರು ತೆಗೆದುಕೊಂಡು ಬಂದಿದ್ದಾರೆನು ಅಂತಾ ವಿಚಾರ ಮಾಡಲಾಗಿ ನನ್ನ ಮೋಟರ ಸೈಕಲ್ ಬಗ್ಗೆ ಯಾವುದೆ ಮಾಹಿತಿ ಸಿಗಲಿಲ್ಲ. ನನ್ನ ಮೋಟರ ಸೈಕಲಗಾಗಿ ಇಲ್ಲಿಯವರೆಗೆ ಅಲಲ್ಲಿ ಹುಡಕಾಡಿದರು ನಮ್ಮ ಮೋಟರ ಸೈಕಲ್ ಸಿಕ್ಕಿರುವದಿಲ್ಲ. ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ದಿನಾಂಕ: 02-03-2022 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 03-03-2022 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನನ್ನ ಮೋಟರ ಸೈಕಲ್ ಅಂದಾಜು ಕಿಮ್ಮತ್ತು 12 ಸಾವಿರ ಇರುತ್ತದೆ.

 

ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ. ಮಹಿಳೆ ಕಾಣೆ : ದಿನಾಂಕ: 16-04-2022 ರಂದು ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನನಗೆ ಸನ್ 2006 ನೇ ಸಾಲಿನಲ್ಲಿ ನೀಲಮ್ಮ ಈಕೆಯ ಜೋತೆ ಮದುವೆಯಾಗಿರುತ್ತದೆ ಈಗ ನಮಗೆ 3 ಜನ ಮಕ್ಕಳಿರುತ್ತಾರೆ, ನಾವು ಸುಮಾರು ದಿನಗಳಿಂದ ಬಾಂಬೆಗೆ ದುಡಿಯಲು ಹೋಗಿ ಅಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದೆವು, ನಮ್ಮೂರಾದ ಮೈಲಾಪೂರಕ್ಕೆ ಆಗಾಗ ಹಬ್ಬಕ್ಕೆ ಜಾತ್ರೆಗೆ ಬಂದು ಮತ್ತೆ ಹೋಗುತಿದ್ದೆವು. ಈಗ ಸುಮಾರು 2 ತಿಂಗಳಿಂದೆ ನಾವು ಬಾಂಬೆಯಿಂದ ನಮ್ಮೂರಾದ ಮೈಲಾಪೂರ ಗ್ರಾಮಕ್ಕೆ ಕುಟುಂಬ ಸಮೇತ ಬಂದು ನಮ್ಮೂರಿನಲ್ಲೆ ಇದ್ದೆವು. ನಾನು ಕೆಲಸಕ್ಕೆ ಅಂತಾ ಯಾದಗಿರಿಗೆ ಬಂದು ಸಾಯಂಕಾಲ ಮನೆಗೆ ಹೋಗುತಿದ್ದೆನು ನನ್ನ ಹೆಂಡತಿ ನೀಲಮ್ಮ ಈಕೆಯು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರುತಿದ್ದಳು. ದಿನಾಂಕ: 25-03-2022 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿರುವಾಗ ನನ್ನ ಹೆಂಡತಿ ನೀಲಮ್ಮ ಈಕೆಯು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದಳು ಸಾಯಂಕಾಲ ಆದರು ಕೂಡ ನನ್ನ ಹೆಂಡತಿ ಮನೆಗೆ ಬರಲಿಲ್ಲಾ ಆಗ ನಾವು ಆಕೆ ಮೊಬೈಲ್ ನಂ. 9096415670 ಗೆ ಕರೆ ಮಾಡಿದಾಗ ಆ ನಂಬರ ಸ್ವಿಚ್ ಆಪ್ ಅಂತಾ ಹೇಳಿತು, ಆಗ ನಾವು ಹೆಣ್ಣು ಮಕ್ಕಳು ಸಂಡಾಸಕ್ಕೆ ಹೋಗುವ ಕಡೆಗೆ ನಾನು ನನ್ನ ಮಕ್ಕಳು ಕೂಡಿ ಹೋಗಿ ನೋಡಲಾಗಿ ನನ್ನ ಹೆಂಡತಿ ಅಲ್ಲಿ ಇರಲಿಲ್ಲ ಆಗ ನಾವು ಊರೆಲ್ಲ ಹುಡುಕಾಡಲಾಗಿ ನನ್ನ ಹೆಂಡತಿ ನೀಲಮ್ಮ ಈಕೆಯು ಎಲ್ಲಿ ಸಿಗಲಿಲ್ಲ. ಮರು ದಿನ ನಾವು ಆಕೆಯ ತವರೂರಾದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗುಂಜಬಬಲಾದ ಗ್ರಾಮಕ್ಕೆ ಆಕೆಯ ತಾಯಿಗೆ ಮತ್ತು ಆಕೆಯ ಅಣ್ಣನವರಿಗೆ ಕರೆ ಮಾಡಿ ನೀಲಮ್ಮ ಬಂದಿದ್ದಾಳೆನು ಅಂತಾ ಕೇಳಲಾಗಿ ಆಕೆ ಬಂದಿಲ್ಲ ಅಂತಾ ಹೇಳಿದರು, ನಮ್ಮ ಮೇಲೆ ಸಿಟ್ಟಾಗಿ ಬಾಂಬೆಗೆ ಎನಾದರು ಹೋಗಿರಬಹುದು ಅಂತಾ ನಾನು ಬಾಂಬೆಗೆ ಹೊಗಿ ನಾವು ಈ ಮೋದಲೆ ಇರುವ ಏರಿಯಾಕ್ಕೆ ಹೋಗಿ ಹುಡಕಾಡಲಾಗಿ ಅಲ್ಲಿ ನನ್ನ ಹೆಂಡತಿ ಸಿಗಲಿಲ್ಲ. ನಂತರ ನಾನು ನಮ್ಮ ಬೀಗರ ನೆಂಟರ ಊರುಗಳಿಗೆ ಹೋಗಿ ನನ್ನ ಹೆಂಡತಿ ನೀಲಮ್ಮ ಬಗ್ಗೆ ವಿಚಾರಿಸಲಾಗಿ ನನ್ನ ಹೆಂಡತಿ ಅಲ್ಲಿ ಕೂಡ ಇರಲಿಲ್ಲ. ನನ್ನ ಹೆಂಡತಿ ನೀಲಮ್ಮ ಗಂಡ ಮಲ್ಲಿನಾಥ ಹೂಗಾರ ವ|| 34 ವರ್ಷ ಜಾ||| ಹೂಗಾರ ಉ|| ಮನೆಕೆಲಸ ಸಾ|| ಮೈಲಾಪೂರ ತಾ|| ಜಿ|| ಯಾದಗಿರಿ ಈಕೆಯು ದಿನಾಂಕ: 25-03-2022 ರಂದು ಸಾಯಂಕಾಲ 04-00 ಗಂಟೆಗೆ ಮನೆಯಿಂದ ಕಾಣೆಯಾಗಿರುತ್ತಾಳೆ ಇಷ್ಟು ದಿನ ಎಲ್ಲಾ ಕಡೆ ಹುಡಕಾಡಿದರು ನನ್ನ ಹೆಂಡತಿ ನೀಲಮ್ಮ ಈಕೆಯು ಸಿಕ್ಕಿರುವದಿಲ್ಲ. ನನ್ನ ಹೆಂಡತಿ ನೀಲಮ್ಮ ಈಕೆಯು ಕಾಣೆಯಾದ ಬಗ್ಗೆ ದೂರು ದಾಖಲಿಸಿ ಹುಡಕಿಕೊಡಲು ಮಾನ್ಯರವರಿಲ್ಲಿ ವಿನಂತಿ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ : 56/2022 ಕಲಂ:143, 147. 148, 323, 324, 354, 504, 506. ಸಂ 149 ಐಪಿಸಿ : ನಿನ್ನೆ ದಿನಾಂಕ 15.04.2022 ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಗಾಯಾಳು ಪಿಂಕಿಬಾಯಿಯು ರೋಡಿನ ಉದ್ದಕ್ಕೆ ಬಹರ್ಿದೆಸೆಗೆ ಹೋಗಿದ್ದನ್ನು ತಪ್ಪಾಗಿ ತಿಳಿದು ಆಕೆ ತಮ್ಮ ಹೊಲದಲ್ಲಿ ಹೋಗಿ ಬಂದಿರುತ್ತಾಳೆ ಅಂತಾ ತಿಳಿಸಿದು ಆರೋಪಿತರೆಲ್ಲಾರು ಕೂಡಿಕೊಂಡು ಅಕ್ರಮ ಕೂಡ ರಚಿಸಿಕೊಂಡು ಫಿರ್ಯಾದಿಯ ಮನೆಗೆ ಹೋಗಿ ಅವರೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲಿನಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು ಫೀರ್ಯಾದಿಯ ಕೈಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 56/2022 ಕಲಂ: 143, 147. 148, 323, 324, 354, 504, 506. ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನ

ಇತ್ತೀಚಿನ ನವೀಕರಣ​ : 17-04-2022 12:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080