Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17-05-2021

ಸೈದಾಪೂರ ಪೊಲೀಸ್ ಠಾಣೆ :- 74/2021 ಕಲಂ. 279.338 304(ಎ) ಐಪಿಸಿ : ದಿನಾಂಕ. 16-05-.2021 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆೆ ಸರಕಾರಿ ಆಸ್ಪತ್ರೆ, ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಮೃತನ ಹೆಂಡತಿಯನ್ನು ವಿಚಾರಿಸಿ ಆಕೆ ಫಿಯರ್ಾದಿ ಹೇಳಿಕೆ ನೀಡಿದ ಸಾರಾಂಶವೇನೆಂದರೆ, ನಾನು ಮೇಲ್ಕಾಣಿಸಿದ ವಿಳಾಸದ ನಿವಾಸಿತಳಿದ್ದು ನಮ್ಮ ಕುಟುಂಬದೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತೇನೆ. ನನ್ನ ಮಗ ಮಲ್ಲಪ್ಪ ಈತನು ದುಡಿಯಲು ಬೆಂಗಳೂರಿಗೆ ಹೋಗಿರುತ್ತಾನೆ ನಾನು ದಿನಾಲೂ ಸೈದಾಪೂರಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತೇನೆ ನನ್ನ ಗಂಡ ಸಣ್ಣಭೀಮಪ್ಪ ಈತನಿಗೆ ಸುಮಾರು 8 ದಿನಗಳಿಂದ ಆರಾಮ ಇಲ್ಲದ ಕಾರಣ ಆತನಿಗೆ ದಿನಾಲೂ ಸೈದಾಪೂರ ಆಸ್ಪತ್ರೆಯಲ್ಲಿ ತೋರಿಸುತಿದ್ದೆವು. ಇಂದು ದಿನಾಂಕ: 16-05-2021 ರಂದು ಬೆಳಿಗ್ಗೆ 07-00 ಗಂಟೆಗೆ ನಾನು ಕೂಲಿ ಕೆಲಸಕ್ಕೆ ಸೈದಾಪೂರಕ್ಕೆ ಬರುವಾಗ ನನ್ನ ಗಂಡನಿಗೆ ನೀನು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಸೈದಾಪೂರಕ್ಕೆ ಆಸ್ಪತ್ರೆಗೆ ಬಾ ತೋರಿಸಿಕೊಳ್ಳುವದಕ್ಕೆ ಅಂತಾ ಹೇಳಿ ಬಂದಿದ್ದೆನು. ನಾನು ಸೈದಾಪೂರದಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ನಮ್ಮೂರಿನ ಜುಟ್ಲಯ್ಯ ತಂದೆ ಭೀಮಯ್ಯ ಈತನು ಬಂದು ತಿಳಿಸಿದ್ದೆನೆಂದರೆ ನಿನ್ನ ಗಂಡನಿಗೆ ಕೂಡ್ಲೂರ ಕ್ರಾಸ ಹತ್ತಿರ ಅಪಘಾತವಾಗಿದೆ ಅಂತಾ ತಿಳಿಸಿದ್ದರಿಂದ ಆಗ ನಾನು ಆತನ ಮೋಟರ ಸೈಕಲ್ ಮೇಲೆ ಘಟನಾ ಸ್ಥಳವಾದ ಕೂಡ್ಲೂರ ಕ್ರಾಸಗೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಬಲಗಾಲಿನ ಮೋಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದು ರಕ್ತ ಸೋರುತಿತ್ತು, ತಲೆಗೆ ಭಾರಿ ರಕ್ತಗಾಯವಾಗಿತ್ತು, ಮಾತನಾಡಿಸಿದರೆ ಮಾತನಾಡುತ್ತಿರಲಿಲ್ಲ ನನ್ನ ಗಂಡನಿಗೆ ಅಪಘಾತಪಡಿಸಿದವನಿಗೆ ನೋಡಲಾಗಿ ಅವನಿಗೆ ಮುಖಕ್ಕೆ ಮತ್ತು ಬಾಯಿಗೆ ಭಾರಿ ರಕ್ತಗಾಯವಾಗಿತ್ತು, ಬಲಗಾಲಿನ ಪಾದದ ಮೇಲೆ ತರಚಿದ ರಕ್ತಗಾಯವಾಗಿತ್ತು. ಅವನ ಹೆಸರು ಕೇಳಲಾಗಿ ಅವನ ಹೆಸರು ಮಲ್ಲಪ್ಪ ತಂದೆ ಸಾಬಣ್ಣ ಕೋನೇರ ವ|| 25 ವರ್ಷ ಜಾ|| ಮಾದಿಗ ಸಾ|| ನೀಲಹಳ್ಳಿ ಅಂತಾ ತಿಳಿಸಿದನು. ಅಪಘಾತಪಡಿಸಿದ ಮೋಟರ ಸೈಕಲ್ ನೋಡಲಾಗಿ ಹೊಂಡಾ ಡ್ರೀಮ್ ಇದ್ದು ಅದರ ನಂ. ಕೆಎ-53 ಇಎಫ್-1287 ಅಂತಾ ಇತ್ತು ಆಗ ನಾನು ಜುಟ್ಲಯ್ಯ ಈತನಿಗೆ ಹೇಗಾಯಿತು ಅಂತಾ ಕೇಳಲಾಗಿ ಆತನು ಹೆಳಿದ್ದೆನೆಂದರೆ ನಿನ್ನ ಗಂಡ ಸಣ್ಣಭೀಮಪ್ಪ, ನಾನು ಮತ್ತು ತಾಯಪ್ಪ 3 ಜನರು ಕೂಡ್ಲೂರ ಕ್ರಾಸ ಹತ್ತಿರ ಕಟ್ಟೆಯ ಮೇಲೆ ಕುಳಿತಿದ್ದೆವು. ನಿನ್ನ ಗಂಡ ಆಸ್ಪತ್ರೆಗೆ ತೋರಿಸಿಕೊಳ್ಳಲು ಸೈದಾಪೂರಕ್ಕೆ ಹೋಗುತ್ತೇನೆ ಅಂತಾ ಹೇಳಿ ರೋಡಿನ ಮೇಲೆ ಬೆಳಿಗ್ಗೆ 09-30 ಗಂಟೆಗೆ ಸೈದಾಪೂರಕ್ಕೆ ಕೂಡ್ಲೂರ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಟರ ಸೈಕಲ್ ಚಾಲಕನು ಸೈದಾಪೂರ ಕಡೆಯಿಂದ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದನು ಅಂತಾ ತಿಳಿಸಿದನು. ಅಪಘಾತವಾದ ಬಗ್ಗೆ ಯಾರೋ ಅಂಬುಲೇನ್ಸಗೆ ಪೊನ್ ಮಾಡಿದ್ದರಿಂದ ಅಂಬುಲೇನ್ಸ ಬಂತು ಆಗ ನಾನು ನಮ್ಮೂರಿನ ಜುಟ್ಲಯ್ಯ, ತಾಯಪ್ಪ ಸೇರಿ ನನ್ನ ಗಂಡನಿಗೆ ಮತ್ತು ಇನ್ನೊಬ್ಬ ಗಾಯಾಳುವನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ವೈದ್ಯಕೀಯ ಉಪಚಾರ ಕುರಿತು ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ನನ್ನ ಗಂಡ ಸೈದಾಪೂರ ಸರಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10-20 ಗಂಟೆಗೆ ಅಪಘಾತದಲ್ಲಿ ಆದ ಗಾಯಗಳ ಬಾದೆಯಿಂದ ಮೃತಪಟ್ಟಿರುತ್ತಾನೆ. ಮೋಟರ ಸೈಕಲ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.

ಶೋರಾಪೂರವ ಪೊಲೀಸ್ ಠಾಣೆ :- 79/2021 ಕಲಂಃ 323,324,341,504,506 ಐಪಿಸಿ : ದಿನಾಂಕ: 16/05/2021 ರಂದು 01-15 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ರವಿಕುಮಾರ ತಂದೆ ಸಿದ್ದಣ್ಣ ನಾಯಕ ಸಾ:ಬೈರಿಮಡ್ಡಿ ಹಾವ:ಕಬಾಡಗೇರಾ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:14-05-2021 ರಂದು ರಾತ್ರಿ 08:30 ಗಂಟೆ ಸುಮಾರಿಗೆ ಸುರಪೂರ ಜಾಲಗಾರ ಓಣಿಯ ಸರಕಾರಿ ಬಾಲಕರ ಕಾಲೇಜ ಹತ್ತಿರ ನನ್ನ ಮೊಟಾರ ಸೈಕಲ್ ನಂಬರ ಕೆಎ-33, ಎಲ್-8369 ನೇದ್ದನ್ನು ಚಲಾಯಿಸಿಕೊಂಡು ನಮ್ಮ ಮನೆಗೆ ಹೋಗುತ್ತಿರುವಾಗ ಅದೇ ಸಮಯಕ್ಕೆ ಸುರಪೂರ ಬಿಜಗತ್ತ ಕೇರಿಯ ಕಾಮಣ್ಣ ತಂದೆ ರಾಮಣ್ಣ ಪ್ಯಾಪಲಿ ಈತನು ಮೋಟಾರ ಸೈಕಲ್ ನಡೆಸಿಕೊಂಡು ಎದುರಿಗೆ ಬಂದವನೆ ನನ್ನ ಮೊಟಾರ ಸೈಕಲ್ಗೆ ಅಡ್ಡ ಗಟ್ಟಿ ತಡೆದು ನಿಲ್ಲಿಸಿ ನನ್ನ ಮೊಟಾರ ಸೈಕಲ್ ಚಾವಿ ತಗೆದುಕೊಂಡವನೆ, ಎಲೇ ಬೋಸಡಿ ಸುಳೇ ಮಗನೆ ನಿಂದ ಊರಾಗ ಬಹಳ ಆಗಿದೆ, ಇವತ್ತು ನೀನಗೆ ಬಿಡುವದಿಲ್ಲ ಅಂತಾ ಅಂದವನೆ ನನ್ನ ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಒದ್ದು, ಅಲ್ಲೆ ಬಿದ್ದ ಒಂದು ಕಲ್ಲನ್ನು ತಗೆದುಕೊಂಡು ನನ್ನ ಕೈ ಹೊಡೆದಾಗ ನನ್ನ ಎಡಗೈ ಹಸ್ತದ ಮೇಲೆ ತೆರಚಿದ ಗಾಯವಾಗಿದ್ದು ಇರುತ್ತದೆ. ನಂತರ ನಾನು ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿರುವಾಗ ಪುನ: ಕಾಮಣ್ಣ ಈತನು ನನ್ನನ್ನು ಬೆನ್ನತ್ತಿ ಹಿಡಿದವನೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿರುವಾಗ ಆಗ ಅದೆ ರಸ್ತೆಯ ಮುಖಾಂತರ ಹೋಗುತ್ತಿದ್ದ ಬಸವರಾಜ ತಂದೆ ಮಲ್ಲಯ್ಯಾ ಬಿಲಾಕಲ್ಲ, ಯಲ್ಲಪ್ಪ ತಂದೆ ತಿರುಪತಿ ಕಲ್ಲೋಡಿ ಇವರು ಬಂದು ಜಗಳ ಬಿಡಿಸಿದರು ಆಗ ಕಾಮಣ್ಣ ಈತನು ಇವತ್ತು ಉಳದಿ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನೀನಗೆ ಜೀವ ಸಹಿತ ಹೊಡೆಯದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ಈಗ ಸುಮಾರು 6 ತಿಂಗಳ ಹಿಂದೆ ಕಾಮಣ್ಣ ಈತನು ನಮ್ಮ ಜಯ ಕನರ್ಾಟಕ ಸಂಘಟನೆಯ ಬ್ಯಾನರಗಳನ್ನು ಹರಿದು ಹಾಕಿದ್ದು, ಆಗ ಕಾಮಣ್ಣನ ಮೇಲೆ ನಮ್ಮ ಸಂಘಟನೆಯ ನಗರ ಘಟಕದ ಅಧ್ಯಕ್ಷರು ಕಾಮಣ್ಣನ ಮೇಲೆ ಠಾಣೆಯಲ್ಲಿ ಕೇಸು ಮಾಡಿದ್ದು, ಇದೆ ವಿಷಯಕ್ಕೆ ಸಂಬಂಧಿಸಿದಂತೆ ಕಾಮಣ್ಣನ ಮೇಲೆ ಕೇಸು ಮಾಡಿಸಲು ನಾನೇ ಕಾರಣ ಅಂತಾ ತಿಳಿದು ಕಾಮಣ್ಣ ಈತನು ನನಗೆ ಅವಾಚ್ಯ ಬೈದು ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ನಂತರ ನಾನು ಕಾಮಣ್ಣ ಈತನು ನನಗೆ ಹೊಡೆ ಬಡೆ ಮಾಡಿದ ವಿಷಯವನ್ನು ನಮ್ಮ ಮನೆಗೆ ಹೋಗಿ ನನ್ನ ಅಣ್ಣಂದಿರರಾದ ಬಲಬೀಮ ನಾಯಕ, ಶರಣು ನಾಯಕ ಇವರಿಗೆ ತಿಳಿಸಿ ಅವರೊಂದಿಗೆ ವಿಚಾರ ಮಾಡಿ ಠಾಣೆಗೆ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ನನಗೆ ಅವಾಚ್ಯ ಬೈದು ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ ಕಾಮಣ್ಣ ಈತನ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿ ಕೊಡಲು ವಿನಂತಿಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ :- 62/2021 ಕಲಂ: 143, 147, 148, 504, 324, 323, 506 ಸಂಗಡ 149 ಐಪಿಸಿ : ಇಂದು ದಿನಾಂಕ:16/05/2021 ರಂದು 12-45 ಪಿಎಮ್ಕ್ಕೆ ಶ್ರೀ ಹಣಮಂತ ತಂದೆ ದುರ್ಗಪ್ಪ ಗೊಂದಡಗಿ, ವ:27, ಜಾ:ಎಸ್.ಸಿ ಹೊಲೆಯ, ಉ:ಒಕ್ಕಲುತನ ಸಾ:ಗೋನಾಲ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ಮನೆ ಮುಂದೆ ನಮ್ಮ ಜಾತಿಯ ಮಲ್ಲಪ್ಪ ತಂದೆ ಶಂಕ್ರೆಪ್ಪ ಇವರ ಮನೆ ಇರುತ್ತದೆ. ಸದರಿ ಮನೆಯ ಡೋಣಿ ನೀರು ಮಳೆ ಬಂದಾಗ ನಮ್ಮ ಮನೆ ಒಳಗಡೆ ಬರುತ್ತಿದ್ದರಿಂದ ಅವರಿಗೆ ಡೋಣಿಯನ್ನು ಬೇರೆ ಕಡೆ ತಿರುಗಿಸಿ ಇಡುವಂತೆ ಹಲವಾರು ಸಲ ಹೇಳಿದರು ಕೂಡಾ ಅವರು ಕಿವಿಗೆ ಹಾಕಿಕೊಳ್ಳದೆ ಅಲಕ್ಷ ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:15/05/2021 ರಂದು ಸಾಯಂಕಾಲ ಮಳೆ ಬಂದಿದ್ದರಿಂದ ಮಲ್ಲಪ್ಪ ಇವರ ಡೋಣಿ ನೀರು ನಮ್ಮ ಮನೆ ಒಳಗಡೆ ಬಂದಿದ್ದನ್ನು ನೋಡಿ 7-30 ಪಿಎಮ್ ಸುಮಾರಿಗೆ ನಮ್ಮ ತಂದೆ ಮತ್ತು ನಮ್ಮ ತಮ್ಮ ಯಂಕಪ್ಪ ಇಬ್ಬರೂ ಹೊರಗಡೆ ಬಂದು ನಮ್ಮ ಮನೆ ಮುಂದಿನ ಸಿ.ಸಿ ರೋಡಿನ ಮೇಲೆ ನಿಂತು ಮಲ್ಲಪ್ಪನಿಗೆ ನಿಮ್ಮ ಡೋಣಿ ಬೇರೆ ಕಡೆ ತಿರಿಗಿಸಿ ಇಡ್ರಿ ಅಂದ್ರೆ ಇಡುತ್ತಿಲ್ಲ. ಡೋಣಿ ನೀರು ಪೂತರ್ಿ ನಮ್ಮ ಮನೆ ಒಳಗಡೆ ಬರುತ್ತಿದೆ ಎಂದು ಹೇಳುತ್ತಿದ್ದರು. ಆಗ ನಾನು ಕೂಡಾ ಹೊರಗಡೆ ಬಂದು ನಿಂತುಕೊಂಡಿದ್ದೇನು. ಅಷ್ಟರಲ್ಲಿ 1) ಮಲ್ಲಪ್ಪ ತಂದೆ ಶಂಕ್ರೆಪ್ಪ, 2) ನಾಗಪ್ಪ ತಂದೆ ಶಂಕ್ರೆಪ್ಪ, 3) ಅಯ್ಯಪ್ಪ ತಂದೆ ಶಂಕ್ರೆಪ್ಪ, 4) ಶಂಕ್ರೆಪ್ಪ ಮದರಕಲ್, 5) ಹಣಮಂತಿ ಗಂಡ ಶಂಕ್ರೆಪ್ಪ ಮತ್ತು 6) ಲಕ್ಷ್ಮೀ ಗಂಡ ಅಯ್ಯಪ್ಪ ಎಲ್ಲರೂ ಸಾ:ಗೋನಾಲ ಈ 6 ಜನ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಬಂದವರೆ ನಮ್ಮ ತಂದೆ ಮತ್ತು ತಮ್ಮನಿಗೆ ಮಕ್ಕಳೆ ಡೋಣಿ ನೀರು ಬಿಡಬ್ಯಾಡ ಅಂತಿರಿ ನಿಮ್ಮ ಸೊಕ್ಕು ಜಾಸ್ತಿಯಾಗಿದೆ ನಿಮಗೆ ಇವತ್ತು ಒಂದು ಗತಿ ಕಾಣಿಸುತ್ತೇವೆ ಎಂದು ಜಗಳ ತೆಗೆದವರೆ ಶಂಕ್ರೆಪ್ಪ ಮತ್ತು ಹಣಮಂತಿ ನಮ್ಮ ತಂದೆಗೆ ಗಟ್ಟಿಯಾಗಿ ಹಿಡಿದಕೊಂಡಾಗ ಮಲ್ಲಪ್ಪನು ಕಟ್ಟಿಗೆಯಿಂದ ನಮ್ಮ ತಂದೆಯ ನಡು ತೆಲೆಗೆ ಹೊಡೆದು ರಕ್ತಗಾಯ ಮಾಡಿದನು ಮತ್ತೆ ಅದೆ ಕಟ್ಟಿಗೆಯಿಂದ ನಮ್ಮ ತಂದೆಯ ಬಲಗಾಲ ತೊಡೆಗೆ ಹೊಡೆದು ಒಳಪೆಟ್ಟು ಮಾಡಿದನು. ನಾಗಪ್ಪನು ಹಿಡಿಗಲ್ಲಿನಿಂದ ನಮ್ಮ ತಂದೆಯ ಗದ್ದಕ್ಕೆ ಗುದ್ದಿ ಒಳಪೆಟ್ಟು ಮಾಡಿದನು. ಬಿಡಿಸಲು ಹೊದ ನಮ್ಮ ತಮ್ಮ ಯಂಕಪ್ಪನಿಗೆ ಅಯ್ಯಪ್ಪನು ತನ್ನ ಕೈಯಲ್ಲಿದ್ದ ಹಿಡಿಗಲ್ಲಿನಿಂದ ಪಾದಕ್ಕೆ ಹೊಡೆದು ರಕ್ತಗಾಯ ಮಾಡಿದನು. ಶಂಕ್ರೆಪ್ಪನು ನಮ್ಮ ತಂದೆಗೆ ಕೈಯಿಂದ ಡುಬ್ಬಕ್ಕೆ ಗುದ್ದಿದನು. ಲಕ್ಷ್ಮೀ ಇವಳು ನಮ್ಮ ತಮ್ಮನಿಗೆ ಮುಷ್ಠಿ ಮಾಡಿ ಮುಖಕ್ಕೆ ಹೊಡೆದಳು. ಆಗ ಜಗಳವನ್ನು ನಾನು ಮತ್ತು ಅಲ್ಲಿಯೇ ಇದ್ದ ನಮ್ಮೂರ ನಿಂಗಪ್ಪ ತಂದೆ ದೊಡ್ಡಪ್ಪ ಹೆಂಡೆರ, ಹುಲಗಪ್ಪ ತಂದೆ ಹನುಮಂತ ಹೆಂಡೆರ ಮೂರು ಜನ ಹೋಗಿ ಜಗಳ ಬಿಡಿಸಿದ್ದು, ಆಗ ಹೊಡೆಯವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಂದು ಸಲ ಡೋಣಿ ವಿಷಯ ತೆಗೆದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಭಯ ಹಾಕಿ ಹೊದರು. ನಂತರ ನಮ್ಮ ತಂದೆ ಮತ್ತು ನಮ್ಮ ತಮ್ಮನಿಗೆ ಉಪಚಾರ ಕುರಿತು ನಾನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದರು. ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ವಡಗೇರಾ ಠಾಣೆ ಪೊಲೀಸ್ರು ಬಂದು ನಮಗೆ ದೂರಿನ ಬಗ್ಗೆ ಕೇಳಿದಾಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿ ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿದೆವು. ನಂತರ ನಾನು ರಾತ್ರಿ ಮನೆಯಲ್ಲಿ ಯಾರು ಇಲ್ಲ ಎಂದು ಮರಳಿ ಮನೆಗೆ ಬಂದು ಊರಲ್ಲಿ ಇದ್ದಾಗ ಇಂದು ದಿನಾಂಕ:16/05/2021 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಶಂಕ್ರೆಪ್ಪನ ಬೀಗರಾದ ಕೋಡಾಲ ಗ್ರಾಮದ 7) ಹನುಮಂತ ತಂದೆ ಬಸಪ್ಪ, 8) ಯಲ್ಲಮ್ಮ ಗಂಡ ಬಸಪ್ಪ, 9) ಮೂಕಪ್ಪ ತಂದೆ ಬಸಪ್ಪ ಮತ್ತು 10) ಭೀಮಪ್ಪ ತಂದೆ ಬಸಪ್ಪ ಈ ನಾಲ್ಕು ಜನ ನಮ್ಮ ಮನೆ ಮುಂದೆ ಬಂದವರೆ ಮಕ್ಕಳೆ ನಮ್ಮ ಬೀಗರಿಗೆ ಡೋಣಿ ನೀರು ಬಿಡಬ್ಯಾಡ್ರಿ ಎಂದು ಹೇಳುತ್ತಿದ್ದಿರಿ ಅಂತಾ ನಮ್ಮ ಬೀಗರ ತಂಟೆಗೆ ಹೋದರೆ ಮತ್ತು ಅವರ ಮೇಲೆ ಕೇಸು ಏನಾದರೂ ಮಾಡಿದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಬಾಯಿಗೆ ಬಂದಂಗೆ ಬೈಯುತ್ತಿದ್ದಾಗ ಮೇಲ್ಕಂಡ ನಿಂಗಪ್ಪ ಮತ್ತು ಹುಲಗಪ್ಪ ಬಂದು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ನಮ್ಮ ಹಿರಿಯರಿಗೆ ವಿಚಾರಿಸಿದಾಗ ನೀನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರಿಂದ ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಡೋಣಿ ನೀರು ನಮ್ಮ ಮನೆ ಒಳಗಡೆ ಬರುತ್ತಿದೆ. ಡೋಣಿ ನೀರು ಬೇರೆ ಕಡೆ ತಿರುಗಿಸಿರಿ ಎಂದು ಹೇಳಿದರೆ ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯ ಬೈದು ಕಟ್ಟಿಗೆ, ಕಲ್ಲಿನಿಂದ ಹೊಡೆದು, ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2021 ಕಲಂ: 143, 147, 148, 504, 324, 323, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 63/2021 ಕಲಂ: 143, 147, 148, 504, 324, 323 ಸಂಗಡ 149 ಐಪಿಸಿ : ಇಂದು ದಿನಾಂಕ:16/05/2021 ರಂದು 3-45 ಪಿಎಮ್ಕ್ಕೆ ಶ್ರೀ ಅಯ್ಯಪ್ಪ ತಂದೆ ಶಂಕ್ರೆಪ್ಪ ಬ್ಯಾಗಾರ, ವ:27, ಜಾ:ಎಸ್.ಸಿ ಹೊಲೆಯ, ಉ:ಗೌಂಡಿ ಕೆಲಸ ಸಾ:ಗೋನಾಲ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಗೌಂಡಿ ಕೆಲಸ ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ಮನೆ ಹಿಂದೆ ನಮ್ಮ ಜಾತಿಯ ದುರ್ಗಪ್ಪ ತಂದೆ ಹಣಮಂತ ಇವರ ಮನೆ ಇರುತ್ತದೆ. ನಮ್ಮ ಹಳೆ ಮನೆ ಬಿದ್ದಿದ್ದರಿಂದ ನಾವು ಇತ್ತಿಚ್ಚೆಗೆ ಅದೇ ಜಾಗದಲ್ಲಿ ಹೊಸ ಮನೆ ಕಟ್ಟುತ್ತಿದ್ದು, ಅದರ ಡೋಣಿ ನೀರು ಮೊದಲು ಹಳೆ ಮನೆ ಇದ್ದಾಗ ಬಿಟ್ಟಿದ್ದ ಜಾಗದಲ್ಲಿ ಬಿಟ್ಟಿರುತ್ತೇವೆ. ಆದರೆ ಸದರಿ ದುರ್ಗಪ್ಪ ಮತ್ತು ಸಂಗಡಿಗರು ಡೋಣಿ ನೀರು ನಮ್ಮ ಮನೆ ಕಡೆ ಬೀಳದಂತೆ ಬೇರೆ ಕಡೆ ಇಡಬೇಕು ಎಂದು ನಮ್ಮೊಂದಿಗೆ ಸುಮಾರು ದಿನಗಳಿಂದ ತಕರಾರು ಮಾಡುತ್ತಾ ಬಂದಿರುತ್ತಾರೆ. ಆಗ ನಾವು ಸದ್ಯ ಇನ್ನು ಮನೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮುಗಿದ ಕೂಡಲೆ ಡೋಣಿ ನೀರು ಬೇರೆ ಕಡೆ ತಿರುಗಿಸಿ ಇಡುತ್ತೆವೆ ಎಂದು ಹೇಳಿದರು ಕೇಳುತ್ತಿರಲಿಲ್ಲ. ಹೀಗಿದ್ದು ನಿನ್ನೆ ದಿನಾಂಕ:15/05/2021 ರಂದು ಸಾಯಂಕಾಲ 7-30 ಪಿಎಮ್ ಸುಮಾರಿಗೆ ಸದರಿ ದುರ್ಗಪ್ಪ ಈತನ ಮನೆ ಮುಂದಿನ ಸಿ.ಸಿ ರೋಡಿನ ಮೇಲಿಂದ ನಾನು ಊರೊಳಗೆ ಹೋಗುತ್ತಿದ್ದಾಗ 1) ಯಂಕಪ್ಪ ತಂದೆ ದುರ್ಗಪ್ಪ, 2) ಹಣಮಂತ ತಂದೆ ದುರ್ಗಪ್ಪ, 3) ಮಲ್ಲಪ್ಪ ತಂದೆ ದುರ್ಗಪ್ಪ, 4) ಬಸವರಾಜ ತಂದೆ ದುರ್ಗಪ್ಪ 5) ಮರೆಪ್ಪ ತಂದೆ ದುರ್ಗಪ್ಪ, 6) ದುರ್ಗಪ್ಪ ತಂದೆ ಹಣಮಂತ, 7) ಬಸಮ್ಮ ಗಂಡ ದುರ್ಗಪ್ಪ ಮತ್ತು 8) ಪ್ರೇಮಾ ಗಂಡ ಹಣಮಂತ ಎಲ್ಲರೂ ಸಾ:ಗೋನಾಲ ಈ 8 ಜನ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆಗಳು ಹಿಡಿದುಕೊಂಡು ಬಂದವರೆ ನನಗೆ ಮಗನೆ ಡೋಣಿ ನೀರು ನಮ್ಮ ಮನೆ ಕಡೆ ಬಿಡಬ್ಯಾಡ ಬೇರೆ ಕಡೆ ತಿರುಗಿಸಿ, ಇಡು ಎಂದರು ಇಡುತ್ತಿಲ್ಲ, ನಿನ್ನ ಸೊಕ್ಕು ಜಾಸ್ತಿಯಾಗಿದೆ ನಿನಗೆ ಇವತ್ತು ಒಂದು ಗತಿ ಕಾಣಿಸುತ್ತೇವೆ ಎಂದು ಜಗಳ ತೆಗೆದವರೆ ನನಗೆ ಮರೆಪ್ಪ ಮತ್ತು ಬಸವರಾಜ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ಹಣಮಂತನು ಕಟ್ಟಿಗೆಯಿಂದ ನನ್ನ ನಡುತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ನನಗೆ ಹೊಡೆಯುವುದು ನೋಡಿ ಬಿಡಿಸಲು ಬಂದ ನನ್ನ ತಮ್ಮ ನಾಗಪ್ಪನಿಗೆ ಮಲ್ಲಪ್ಪನು ಹಿಡಿದುಕೊಂಡಾಗ ಯಂಕಪ್ಪನು ಕಟ್ಟಿಗೆಯಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಬಂದ ನಮ್ಮ ತಂದೆ ಶಂಕ್ರೆಪ್ಪನಿಗೆ ಬಸಮ್ಮ ಮತ್ತು ಪ್ರೇಮಾ ಹಿಡಿದುಕೊಂಡಾಗ ದುರ್ಗಪ್ಪನು ಕೈ ಮುಷ್ಠಿ ಮಾಡಿ ಬಲಗೈ ರಟ್ಟೆಗೆ ಗುದ್ದಿ ಒಳಪೆಟ್ಟು ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರು ಹುಲಗಪ್ಪ ತಂದೆ ಶೇಖಪ್ಪ ಹೆಂಡೆರ್ ಮತ್ತು ಪರಪ್ಪ ತಂದೆ ಶೇಖಪ್ಪ ಹೆಂಡೆರ್ ಇಬ್ಬರೂ ಬಂದು ಜಗಳ ಬಿಡಿಸಿದರು. ರಾತ್ರಿಯಾಗಿದ್ದರಿಂದ ಬಸ್ಸಿನ ಅನಾನೂಕುಲತೆಯಿಂದ ಇಂದು ದಿನಾಂಕ:16/05/2021 ರಂದು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಡೋಣಿ ನೀರು ಇನ್ನು ಕೆಲವು ದಿನಗಳಲ್ಲಿ ಬೇರೆ ಕಡೆ ಬಿಟ್ಟುಕೊಳ್ಳುತ್ತೇವೆ ಎಂದು ಹೇಳಿದರು ಕೂಡಾ ಕೇಳದೆ ನಮ್ಮೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 63/2021 ಕಲಂ: 143, 147, 148, 504, 324, 323 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 67/2019 ಕಲಂ 32, 34 ಕೆ.ಇ. ಆ್ಯಕ್ಟ : ದಿನಾಂಕ 16/05/2021 ರಂದು 5-00 ಪಿ.ಎಮ್ ಕ್ಕೆ ಆರೋಪಿತನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಪ್ರೇಶರ್ ಶೀಲ್ಡ ಪಾಕೇಟಗಳು ಮತ್ತು ಮಧ್ಯದ ಬಾಟಲಿಗಳನ್ನು ಹಾಕಿಕೊಂಡು ಆಚಿಜನೇಯ ಗುಡಿ ಹತ್ತಿರ ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 180 ಎಮ್.ಎಲ್ ದ 54 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ 70.26.32/- ರೂ ಯಂತೆ ಒಟ್ಟು 54 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಕಿಮ್ಮತ್ತು 3794/- ರೂ ಮತ್ತು 180 ಎಮ್.ಎಲ್ ದ 21 ಮೆಗ್ಡೊಲ್ ವಿಸ್ಕಿ ಬಾಟಲಗಳು, ಒಂದು ಬಾಟಲಗೆ 198.26.23/- ರೂ ಯಂತೆ ಒಟ್ಟು 21 ಮೆಗ್ಡೊಲ್ ವಿಸ್ಕಿ ಬಾಟಲಗಳು ಕಿಮ್ಮತ್ತು 4162/- ರೂ, ಒಟ್ಟು 7956 ಕಿಮ್ಮತ್ತಿನ ಮಧ್ಯದ ಪಾಕೇಟಗಳು ಮತ್ತು ಬಾಟಲಗಳುಜಪ್ತಿ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.


ಶಹಾಪೂರ ಪೊಲೀಸ್ ಠಾಣೆ :- 104/2021 ಕಲಂ 269, 270, ಐ.ಪಿ.ಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ-2020 : ಇಂದು ದಿನಾಂಕ 16/05/2021 ರಂದು ಮದ್ಯಾಹ್ನ 12-30 ಗಂಟೆಗೆ ಸರಕಾರಿ ತಫರ್ೆ ಫಿಯರ್ಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ ಕಾಸು ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಪ್ರಸ್ತುತ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡುವಿಕೆ ಪ್ರಮಾಣ ಹೆಚ್ಚಾಗುತಿದ್ದರಿಂದ, ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ಸಂಬಂಧ ಈಗಾಗಲೇ ಕನರ್ಾಟಕ ಸರಕಾರವು ದಿನಾಂಕ 10/05/2021 ರಿಂದ ದಿನಾಂಕ 24/05/2021 ರ ವರೆಗೆ ಲಾಕ್ಡೌನ್ ಘೋಷಣೆ ಮಾಡಿದ್ದು, ಲಾಕ್ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೊಲೆ ಹೊರಡಿಸಿದ್ದು ಇರುತ್ತದೆ. ಅವಶ್ಯಕ ಸೇವೆಗಳನ್ನು ಪೂರೈಸಲು ಬೆಳಿಗ್ಗೆ 06-00 ಗಂಟೆಯಿಂದ ಮುಂಜಾನೆ 10-00 ಗಂಟೆಯವರೆಗೆ ಅವಧಿ ನಿಗಧಿ ಮಾಡಿರುತ್ತಾರೆ. ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳನ್ನು ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಮುಚ್ಚಲು ಸರಕಾರ ಆದೇಶಿಸಲಾಗಿರುತ್ತದೆ. ಈ ವಿಷಯ ಕುರಿತು ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ಹಾಗೂ ನಗರಸಭೆ ವತಿಯಿಂದ ಪಟ್ಟಣ/ಹಳ್ಳಿಯಲ್ಲಿ ದ್ವನಿವರ್ಧಕ ಹಾಗೂ ಡಂಗೂರ ಮೂಲಕ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ 16/05/2021 ರಂದು ಮುಂಜಾನೆ 09-30 ಗಂಟೆಗೆ ನಾನು, ಜೊತೆಯಲ್ಲಿ ಭೀಮಣ್ಣಗೌಡ ಪಿ.ಸಿ 402, ನಾಗರಡ್ಡಿ ಎ.ಹೆಚ್.ಸಿ 25 ಹಾಗೂ ನಗರಸಭೆ ಕಾಯರ್ಾಲಯ ಶಹಾಪೂರ ಶ್ರೀ ಹರೀಶ್ ಸಜ್ಜನಶೆಟ್ಟಿ ಇಂಜಿನಿಯರ್ ಮತ್ತು ಅವರ ಸಿಬ್ಬಂದಿಯವರಾದ ಆನಂದ, ಶರಣಪ್ಪ, ಜಂಬಯ್ಯ ಸ್ವಾಮಿ ರವರೆಲ್ಲರೂ ಕೂಡಿ ಕೊವಿಡ್-19 ರ ಲಾಕ್ಡೌನ್ ಸಂಬಂಧವಾಗಿ ಶಹಾಪೂರ ಪಟ್ಟಣದಲ್ಲಿ ಅವಶ್ಯಕ ಸೇವೆಗಳನ್ನು ಪೊರೈಸುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಹೊರತುಪಡಿಸಿ ಇತರೆ ಸೇವೆ ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳ ಬಗ್ಗೆ ನಿಗಾ ಮಾಡುತ್ತಾ ಜಂಟಿಯಾಗಿ ಶಹಾಪೂರ ನಗರದಲ್ಲಿ ಕಾಲ್ನಡಿಗೆಯಲ್ಲಿ ಪಟ್ರೋಲಿಂಗ್ ಮಾಡುತ್ತಾ ಕಾಯರ್ಾಚರಣೆ ಮಾಡುತಿದ್ದೇವು. ಕಾಯರ್ಾಚರಣೆ ಮಾಡುತ್ತಾ ಇಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಶಹಾಪೂರ ಪಟ್ಟಣದ ತರಕಾರಿ ಮಾರುಕಟ್ಟೆಯ ಕಡೆಗೆ ಹೋದಾಗ, ಅಲ್ಲಿ ಒಂದು ಅಂಗಡಿಯ ಮುಂದೆ ಬಹಳಷ್ಟು ಜನರು ಗುಂಪಾಗಿ ಸೇರಿದನ್ನು ಕಂಡು ಅಲ್ಲಿಗೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಎನ್.ಕೆ.ಹೆಚ್.ಎಸ್ ಕಿರಾಣಿ ಅಂಗಡಿಯ ಮುಂದೆ ಕಿರಾಣಾ ಸಾಮಾನುಗಳನ್ನು ರೋಡಿನ ಮೇಲೆ ಇಟ್ಟುಕೊಂಡು ಸುಮಾರು 10 ರಿಂದ 12 ಜನ ಗಿರಾಕಿಗಳನ್ನು ತನ್ನ ಅಂಗಡಿಯ ಮುಂದೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಲ್ಲಿಸಿಕೊಂಡು ತನ್ನ ಸ್ವಂತ ಲಾಭಕ್ಕಾಗಿ ವ್ಯಾಪಾರ ಮಾಡುತಿದ್ದನು, ಸಾರ್ವಜನಿಕರು ನಾವು ಬಂದಿದ್ದನ್ನು ನೋಡಿ ಓಡಿ ಹೋದರು. ಆಗ ನಾವು ವ್ಯಾಪಾರ ಮಾಡುತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ದಾವೂದ್ ತಂದೆ ಅಬ್ದುಲ್ ರಹೆಮಾನ್ ಅತ್ತಾರ, ವಯಸ್ಸು 27 ವರ್ಷ, ಜಾತಿ ಮುಸ್ಲಿಂ ಉಃ ಕಿರಾಣಾ ವ್ಯಾಪಾರಸ್ಥ ಸಾಃ ಖವಾಸಪೂರ ಶಹಾಪೂರ ಹಾಗೂ ಎನ್.ಕೆ.ಹೆಚ್.ಎಸ್ ಕಿರಾಣಿ ಅಂಗಡಿಯ ಮಾಲೀಕ ಅಂತ ಹೇಳಿದನು. ದಾವೂದ್ ಈತನು ತನ್ನ ಲಾಭಕ್ಕಾಗಿ ತನ್ನ ಕಿರಾಣಿ ಅಂಗಡಿಯ ಮುಂದೆ ಸುಮಾರು 10 ರಿಂದ 12 ಜನ ಗಿರಾಕಿಗಳನ್ನು ಗುಂಪುಗೂಡಿಸಿಕೊಂಡು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ತೋರಿಸಿ ಅತೀವ ನಿರ್ಲಕ್ಷ್ಯತನ ವಹಿಸಿರುತ್ತಾನೆ. ಇದರಿಂದ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ಉಲ್ಬಣಿಸಿ, ಸಾರ್ವಜನಿಕರ ಜೀವಕ್ಕೆ ಪ್ರಾಣ ಹಾನಿಯಾಗುವ ಸಾಧ್ಯತೆ ಇರುತ್ತದೆ ಅಂತ ಗೊತ್ತಿದ್ದರೂ ಸಹಿತ, ನಿರ್ಲಕ್ಷ್ಯತನದಿಂದ ಉದ್ದೇಶಪೂರ್ವಕವಾಗಿ ಕನರ್ಾಟಕ ಸರಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ ಕೃತ್ಯ ಎಸಗಿರುವುದು ಕಂಡು ಬಂದಿರುತ್ತದೆ. ಎನ್.ಕೆ.ಹೆಚ್.ಎಸ್ ಅಂಗಡಿಯ ಮಾಲೀಕ ವ್ಯಾಪಾರಸ್ಥನಾದ ದಾವೂದ್ ಈತನ್ನು ಮುಂಜಾನೆ 11-45 ಗಂಟೆಗೆ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು, ಮುಂದಿನ ಕ್ರಮಕ್ಕಾಗಿ ಸರಕಾರಿ ತಫರ್ೇ ಫಿಯರ್ಾದಿದಾರನಾಗಿ ಮದ್ಯಾಹ್ನ 12-30 ಗಂಟೆಗೆ ವರದಿ ನೀಡಿದ್ದು, ಎನ್.ಕೆ.ಹೆಚ್.ಎಸ್ ಅಂಗಡಿಯ ಮಾಲೀಕ ವ್ಯಾಪಾರಸ್ಥನಾದ ದಾವೂದ್ ತಂದೆ ಅಬ್ದುಲ್ ರಹೆಮಾನ್ ಅತ್ತಾರ ಸಾಃ ಖವಾಸಪೂರ ಶಹಾಪೂರ ಎಂಬುವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ವರದಿಯ ಸಾರಾಂಶದದ ಮೇಲಿಂದ ಠಾಣೆ ಗುನ್ನೆ ನಂಬರ 104/2021 ಕಲಂ 269, 270 ಐ.ಪಿ.ಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸಸ್ ಯಾಕ್ಟ್ -2020 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Last Updated: 17-05-2021 09:48 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080