ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17-06-2021

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 73/2021 ಕಲಂ: 380 ಐಪಿಸಿ : ದಿನಾಂಕ:16/06/2021 ರಂದು 4-30 ಪಿಎಮ್ ಕ್ಕೆ ಶ್ರೀ ಮಾಳಪ್ಪ ತಂದೆ ಮಲ್ಲಪ್ಪ ವಾರಿ, ವ:42, ಜಾ:ಕುರುಬರ, ಉ:ಒಕ್ಕಲುತನ ಸಾ:ಖಾನಾಪೂರ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಸೌಭಾಗ್ಯ, ಮಕ್ಕಳಾದ ಹೊನ್ನಪ್ಪ, ವ:14, ನಿಂಗಯ್ಯ ವ:12, ಮಹಾಂತೇಶ ವ:10 ಮತ್ತು ಭಾಗ್ಯಶ್ರೀ ವ:08 ವರ್ಷ ಇವರೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಮ್ಮ ಹೊಲದಲ್ಲಿ ಹತ್ತಿ ಬೆಳೆ ರಾಶಿ ಆದ ನಂತರ ನಾನು ನಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಹೋಗಿ ಅಲ್ಲಿ ಸುಮಾರು 2-3 ತಿಂಗಳು ಇದ್ದು, ಕೂಲಿ ಕೆಲಸ ಮಾಡಿಕೊಂಡಿದ್ದೇನು. ಇತ್ತಿಚ್ಚೆಗೆ ಸುಮಾರು ಒಂದುವರೆ ತಿಂಗಳ ಹಿಂದೆ ಲಾಕಡೌನ ಆಗುತ್ತದೆ ಎಂದು ಹೇಳಲಾರಂಭಿಸಿದ್ದರಿಂದ ನನ್ನ ಹೆಂಡತಿ-ಮಕ್ಕಳೊಂದಿಗೆ ಮರಳಿ ನಮ್ಮ ಗ್ರಾಮಕ್ಕೆ ಬಂದಿದ್ದೇನು. ಬೆಂಗಳೂರಿನಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಲಿ ಕೆಲಸ ಮಾಡಿ ಒಂದು ಲಕ್ಷ ರೂಪಾಯಿ ಜಮಾ ಮಾಡಿದ್ದು, ಸದರಿ ಒಂದು ಲಕ್ಷ ರೂ. ನಗದು ಹಣವನ್ನು ಮಳೆಗಾಲ ಸಮಯಕ್ಕೆ ಹತ್ತಿ ಬೀಜ ಗೊಬ್ಬರ ಎಣ್ಣೆಗೆ ಬೇಕಾಗುತ್ತದೆ ಎಂದು ನಮ್ಮ ಅಡಿಗೆ ಮನೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿದ್ದೆನು. ಅದೇ ರೀತಿ ನಮ್ಮ ಹಿರಿಯರ ಹಳೆಯ ಬಂಗಾರದ ಆಭರಣಗಳಾದ 1) ಒಂದು ಬೊರಮಾಳಸರ ಅಂದಾಜು ಒಂದು ತೊಲೆ, 2) ಒಂದು ಕರೆಳ್ಳಿ ಸರ ಅಂದಾಜು ಒಂದು ತೊಲೆ, 3) ಒಂದು ಜೀರಾಮಣಿ ಸರ ಅಂದಾಜು 1/2 ತೊಲೆ, 4) ಕಿವಿಯ ಬುಗುಡಿ ಕಡ್ಡಿ, ಲವಂಗ ಕಡ್ಡಿ ಸೇರಿ ಅಂದಾಜು 1/2 ತೊಲೆ ಹೀಗೆ ಒಟ್ಟು 3 ತೊಲೆ ಬಂಗಾರದ ಆಭರಣಗಳನ್ನು ಕೂಡಾ ಮೇಲ್ಕಂಡ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಅದಕ್ಕೆ ಕೀಲಿಯನ್ನು ಹಾಕಿದ್ದೇವು. ಸದರಿ ಕಬ್ಬಿಣದ ಪೆಟ್ಟಿಗೆಯನ್ನು ಅಡಿಗೆ ಮನೆಯ ಮಾಡಾದಲ್ಲಿಟ್ಟು, ಅದರ ಮೇಲ್ಗಡೆ ನನ್ನ ಮಗ ಹೊನ್ನಪ್ಪನ ಸೋಂಟ ನೋವಿನ ಕುರಿತು ತೆಗೆಸಿದ ಎಕ್ಸರೇ ಇತರ ದವಾಖಾನೆಯ ಕಾಗದ ಪತ್ರಗಳನ್ನು ಇಟ್ಟಿದ್ದೇವು. ಹೀಗಿದ್ದು ಪ್ರತಿ ದಿನದಂತೆ ನಿನ್ನೆ ದಿನಾಂಕ:15/06/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಎಲ್ಲರೂ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆವು. ನಮ್ಮ ಮನೆಯ ಮೇನ ಬಾಗಿಲ ಮತ್ತು ಅಡಿಗೆ ಮನೆ ಬಾಗಿಲ ಎರಡು ಚೀಲಕ ಹಾಕದೆ ಬೇಸಿಗೆ ಧಗೆ ಆಗಿದ್ದರರಿಂದ ಹಾಗೇ ಖುಲ್ಲಾ ಬಿಟ್ಟು ಮಲಗಿಕೊಂಡಿದ್ದೇವು. ಇಂದು ದಿನಾಂಕ:16/06/2021 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನನ್ನ ಹೆಂಡತಿ ಸೌಭಾಗ್ಯ ಇವಳು ಎದ್ದು, ಅಡಿಗೆ ಮನೆಯಲ್ಲಿ ಹೋದವಳೆ ಮನೆಯಲ್ಲಿ ನನ್ನ ಮಗ ಹೊನ್ನಪ್ಪನ ಸೊಂಟ ನೋವಿಗೆ ತೆಗೆಸಿದ ಎಕ್ಸರೇ ಮತ್ತು ಇತರ ದವಾಖಾನೆಯ ಕಾಗದ ಪತ್ರಗಳು ಚೆಲ್ಲಾಪಿಲ್ಲಿಯಾಗಿದ್ದು, ನೋಡಿ ಹೌ ಹಾರಿ ಮಾಡದಲ್ಲಿ ನೋಡಿದರೆ ಅಲ್ಲಿ ಕಬ್ಬಿಣದ ಪೆಟ್ಟಿಗೆ ಇಲ್ಲದ್ದು, ನೋಡಿ ನನಗೆ ಚೀರಿ ಕರೆದಳು. ನಾನು ಒಳಗಡೆ ಹೋಗಿ ನೋಡಿದರೆ ನಾವು ಬೆಂಗಳೂರಿನಲ್ಲಿ ದುಡಿದುಕೊಂಡು ಬಂದ ನಗದು ಹಣ 1,00,000/- ರೂ. ಮತ್ತು ಬಂಗಾರದ ಆಭರಣಗಳನ್ನು ಇಟ್ಟ ಕಬ್ಬಿಣದ ಪೆಟ್ಟಿಗೆ ಇರಲಿಲ್ಲ. ಆಗ ನಾನು ಮತ್ತು ಆಜು ಬಾಜುದವರಾದ ನಾಗರಾಜ ತಂದೆ ಚಂದ್ರಾಮಪ್ಪ ಮತ್ತು ಹಣಮಂತ ತಂದೆ ಮಲ್ಲಪ್ಪ ಬಸಂಪೂರ ಮತ್ತು ಇತರರು ಕೂಡಿ ಮನೆಯಲ್ಲಿ ಮತ್ತು ಹೊರಗಡೆ ಸುತ್ತಮುತ್ತ ಹುಡುಕಾಡಿದರೆ ಎಲ್ಲಿಯ ಕಾಣಲಿಲ್ಲ. ಅಲ್ಲಿಂದ ನಮ್ಮೂರ ಕರೆ ಕಡೆ ಜನ ಸಂಡಾಸಕ್ಕೆ ಹೋಗುವ ದಾರಿ ಹತ್ತಿರ ಕಬ್ಬಿಣದ ಪೆಟ್ಟಿಗೆ ಬಿದ್ದಿದೆ ಎಂದು ಕೇಳಿ ಗೊತ್ತಾಗಿ ನಾವು ಅಲ್ಲಿ ಹೋಗಿ ನೋಡಿದ್ದು, ಸದರಿ ಕಬ್ಬಿಣದ ಪೆಟ್ಟಿಗೆ ನಮ್ಮದೆ ಇದ್ದು, ಅದರ ಕೀಲಿ ಮುರಿದು ಒಳಗಡೆ ಸಾಮಾನುಗಳು, ಕಾಗದ ಪತ್ರಗಳು ಚೆಲ್ಲಾಪಿಲ್ಲಿ ಮಾಡಿದ್ದು, ಒಳಗಡೆ ಇಟ್ಟ ನಗದು ಹಣ ಮತ್ತು ಬಂಗಾರದ ಆಭರಣಗಳು ಇರಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ:15/06/2021 ರಂದು 9 ಪಿಎಮ್ ದಿಂದ 16/06/2021 ರ ಬೆಳಗ್ಗೆ 6 ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ಮನೆಯಲ್ಲಿ ಬಂದು ಅಡಿಗೆ ಮನೆಯಲ್ಲಿಟ್ಟ ಕಬ್ಬಿಣದ ಪೆಟ್ಟಿಗೆ ಹೊತ್ತುಕೊಂಡು ಹೋಗಿ ಅದರಲ್ಲಿಟ್ಟ 1) ನಗದು ಹಣ 1,00,000/- ರೂ. ಮತ್ತು ಬಂಗಾರದ ಆಭರಣಗಳಾದ 2) ಒಂದು ಬೊರಮಾಳಸರ ಅಂದಾಜು ಒಂದು ತೊಲೆ ಅ:ಕಿ:15,000/-, 3) ಒಂದು ಕರೆಳ್ಳಿ ಸರ ಅಂದಾಜು ಒಂದು ತೊಲೆ ಅ:ಕಿ:15,000/-, 4) ಒಂದು ಜೀರಾಮಣಿ ಸರ ಅಂದಾಜು 1/2 ತೊಲೆ ಅ:ಕಿ:8,000/-, 5) ಕಿವಿಯ ಬುಗುಡಿ ಕಡ್ಡಿ, ಲವಂಗ ಕಡ್ಡಿ ಸೇರಿ ಅಂದಾಜು 1/2 ತೊಲೆ ಅ:ಕಿ:8,000/- ಹೀಗೆ ಒಟ್ಟು 3 ತೊಲೆ ಬಂಗಾರ ಒಟ್ಟು ಅ:ಕಿ: 46,000/- ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೆ ನಮ್ಮೂರ ಗಿರೆಪ್ಪ ತಂದೆ ಅಭಿಮನ್ಯಪ್ಪ ಈತನು ತನ್ನ ಮನೆ ಮುಂದೆ ರಾತ್ರಿ ಮಲಗಿಕೊಂಡಾಗ ಆತನ ತೆಲೆಗುಂಬ ಇಟ್ಟುಕೊಂಡ ರೆಡ್ಮಿ ಮೊಬೈಲ್ ಅ:ಕಿ:2000/- ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಕೇಳಿ ಗೊತಾಗಿರುತ್ತದೆ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ, ನಮ್ಮ ಕಳುವಾದ ನಗದು ಹಣ, ಆಭರಣಗಳು ಮತ್ತು ಮೊಬೈಲ್ ಇವುಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 73/2021 ಕಲಂ: 380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ : 33/2021 ಕಲಂ 279, 338 ಐಪಿಸಿ : ನಿನ್ನೆ ದಿನಾಂಕ 15/06/2021 ರಂದು ಮದ್ಯಾಹ್ನ 1-30 ಪಿ.ಎಂ. ದ ಸುಮಾರಿಗೆ ಯಾದಗಿರಿ - ಶಹಾಫುರ ಮುಖ್ಯ ರಸ್ತೆಯ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಪಿಯರ್ಾದಿಯ ತಾಯಿಯಾದ ಗಾಯಾಳು ಸೈದಮ್ಮ ವಯ;65 ವರ್ಷ ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಮೋಟಾರು ಸೈಕಲ್ ಸವಾರ ಸಾಯಿಕುಮಾರ ಈತನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಎಡಗಾಲು ತೊಡೆಗೆ ಮತ್ತು ಎಡಗೈಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯ ಹಾಗೂ ತಲೆಗೆ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕಾರಣರಾದ ಮೋಟಾರು ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ತಡವಾಗಿ ಇಂದು ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 33/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 134/2021 ಕಲಂ 87 ಕೆಪಿ ಆಕ್ಟ್ : ಇಂದು ದಿನಾಂಕ: 16-06-2021 ರಂದು 8:00 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 16-06-2021 ರಂದು 7:00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ನಂದಳ್ಳಿ ಗ್ರಾಮದ ಹೊರವಲಯದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಗುಪ್ತ ಸಿಬ್ಬಂದಿಯವರಿಂದ ಮಾಹಿತಿ ಬಂದಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದಿರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 34/2021 ನೇದ್ದನ್ನು ಧಾಖಲಿಸಿದ್ದು ಇದೆ. ಮತ್ತು ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಇಸ್ಪೀಟ ಜುಜಾಟ ಆಡುವ ವ್ಯಕ್ರಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 134/2021 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು ನಂತರ ದಾಳಿಗೆ ಹೋಗಿ ದಾಳಿಮಾಡಿ 9 ಜನ ಆರೋಪಿತರು ಮತ್ತು ನಗದು 56180/- ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 111/2021 ಕಲಂ: 87 ಕೆ.ಪಿ.ಕಾಯ್ದೆ : ದಿನಾಂಕ:16/06/2021 ರಂದು 3 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸ.ತ ಫಿರ್ಯಾದಿ ಶ್ರೀ ವೆಂಕಟೇಶ ಡಿ.ಎಸ್.ಪಿ. ಸುರಪುರ ಉಪ-ವಿಭಾಗ ಸುರಪುರ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 04 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ಇಂದು ದಿನಾಂಕ: 16-06-2021 ರಂದು 12 ಪಿ.ಎಮ್. ಸುಮಾರಿಗೆ ಉಪವಿಭಾಗದ ಕಛೆರಿಯಲ್ಲಿರುವಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಾಲಗೇರಾ ಸೀಮಾಂತರದ ಈಚಲ ಹಳ್ಳದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹುಂಜಗಳ ಮೇಲೆ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿಯವರಾದ 1) ಶ್ರೀ ಮಂಜನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಶ್ರೀ ಮಂಜುನಾಥ ಸಿಪಿಸಿ-271 4) ಶ್ರೀ ಸುಭಾಶ ಸಿಪಿಸಿ-174 5) ಶ್ರೀ ರವಿಕುಮಾರ ಸಿಪಿಸಿ-376, 6) ಶ್ರೀ ದೇವಿಂದ್ರಪ್ಪ ಸಿಪಿಸಿ-184, 7) ಶ್ರೀ ವಿರೇಶ ಸಿಪಿಸಿ-374 ಎಲ್ಲರಿಗೂ ವಿಷಯ ತಿಳಿಸಿ ಠಾಣೆಯ ಶ್ರೀ ಸುಭಾಶ ಪಿಸಿ-174 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ ಮೇರೆಗೆ, ಸುಭಾಶ ಪಿಸಿ ರವರು ಇಬ್ಬರು ಪಂಚರಾದ 1) ವಾಸುದೇವ ತಂದೆ ಹಣಮಂತ ಬಸೆಟ್ಟಿ ವ|| 30 ವರ್ಷ ಜಾ|| ಬೇಡರು ಉ|| ವ್ಯಾಪಾರ ಸಾ|| ಡೊಣ್ಣಿಗೇರಿ ಸುರಪುರ 2) ಶ್ರೀ ದೇವರಾಜ ತಂದೆ ರಾಮಣ್ಣ ವ|| 27 ವರ್ಷ ಜಾ|| ಬೇಡರು ಉ|| ಡ್ರೈವರ್ ಸಾ|| ಮಾಚಗುಂಡಾಳ ತಾ|| ಸುರಪುರ ಇವರನ್ನು 12:15 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರೊಂದಿಗೆ ಎಲ್ಲರೂ ಕೂಡಿ ಠಾಣೆಯಿಂದ 12:30 ಪಿ.ಎಮ್. ಕ್ಕೆ ಸರಕಾರಿ ಜೀಪ ನಂಬರ ಕೆಎ-33 ಜಿ-0253 ನೇದ್ದರಲ್ಲಿ ಹೊರಟು 1:15 ಪಿ.ಎಮ್.ಕ್ಕೆ ಹಾಲಗೇರಾ ಸೀಮಾಂತರದ ಈಚಲ ಹಳ್ಳದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಹಳ್ಳದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ನಿಂತುಕೊಂಡು ಹುಂಜಗಳ ಮೇಲೆ ಹಣವನ್ನು ಪಣಕ್ಕಿಟ್ಟು ಅವುಗಳ ಮೇಲೆ ಪಂದ್ಯ ಆಡುತ್ತಾ ಜೂಜಾಟವಾಡುತ್ತಿದ್ದದ್ದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು 1:20 ಪಿ.ಎಮ್.ಕ್ಕೆ ಒಮ್ಮೆಲೆ ಅವರ ಮೇಲೆ ದಾಳಿಮಾಡಲಾಗಿ ಒಟ್ಟು ನಾಲ್ಕು ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಸುಭಾಶ ತಂದೆ ಭೀರಪ್ಪ ಕಮತಗಿ ವ|| 57 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಕನರ್ಾಳ ತಾ|| ಸುರಪುರ ಈತನ ಹತ್ತಿರ 950/- ನಗದು ಹಣ ಸಿಕ್ಕಿದ್ದು 2) ನಾಗರೆಡ್ಡಿ ತಂದೆ ಯಂಕಣ್ಣ ಮೇದಾರಗೋಳ ವ|| 28 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ತಾ|| ಸುರಪುರ ಈತನ ಹತ್ತಿರ 650/- ನಗದು ಹಣ ಸಿಕ್ಕಿದ್ದು 3) ತಿರುಪತಿ ತಂದೆ ನಾಗಪ್ಪ ಬಿಚಗತ್ತಿ ವ|| 30 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಬಿಚಗತಕೇರಿ ಸುರಪುರ ಈತನ ಹತ್ತಿರ 850/- ನಗದು ಹಣ ಸಿಕ್ಕಿದ್ದು, 4) ಯಂಕೋಬ ತಂದೆ ಭೀಮರಾಯ ಬಿರೆದಾರ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ತಾ|| ಸುರಪುರ ಈತನ ಹತ್ತಿರ 750/- ನಗದು ಹಣ ಸಿಕ್ಕಿದ್ದು, ಹೀಗೆ ಒಟ್ಟು ನಗದು ಹಣ 3200/- ಹಾಗೂ ಕಣದಲ್ಲಿ 4 ಹುಂಜಗಳು ಇದ್ದು ಅವುಗಳ ಅ.ಕಿ 800/-ರೂ ಮತ್ತು 4 ಕತ್ತಿಗಳು ಅ.ಕಿ 00=00 ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 1:20 ಪಿ.ಎಮ್ ದಿಂದ 2:20 ಪಿ.ಎಮ್.ದ ವರೆಗೆ ಬರೆದುಕೊಂಡು, ನಂತರ 4 ಜನ ಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ ಬಂದು ತಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಸದರಿ ಆರೋಪಿತರ ವಿರುದ್ದ ಕಲಂ. 87 ಕೆ.ಪಿ ಆಕ್ಟ ಅಡಿಯಲ್ಲಿ ಕ್ರಮ ಜರುಗಿಸಲು ಒಪ್ಪಿಸಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ : 65/2021 ಕಲಂ, 87 ಕೆ.ಪಿ ಆ್ಯಕ್ಟ್ : ದಿನಾಂಕ 16/01/2021 ರಂದು 08:30 ಪಿ.ಎಮ್.ಕ್ಕೆ ಶ್ರೀ. ವೆಂಕಟೇಶ ಹುಗಿಬಂಡಿ ಡಿ.ವೈ.ಎಸ್.ಪಿ ಸುರಪೂರ ಉಪ-ವಿಭಾಗ ರವರು ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಮತ್ತು ಒಂದು ವರದಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ಮಹಲ್ ರೋಜಾ ಸೀಮಾಂತರದ ಸಗರ ಯಲ್ಲಮ್ಮ ದೇವಸ್ಥಾನದ ಕ್ರಾಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಆರೋಪಿತರು ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 48,500=00 ರೂ. 52 ಇಸ್ಪೀಟ್ ಎಲೆಗಳು ಹಾಗೂ ಒಂದು ಬ್ಯಾಟರಿ ಲೈಟನ್ನು ಜಪ್ತಿಪಡಿಸಿಕೊಂಡು 07:00 ಪಿ.ಎಮ್.ದಿಂದ 08:00 ಪಿ.ಎಮ್.ದವರೆಗೆ ಜಪ್ತಿಪಡಿಸಿಕೊಂಡು ಸದರಿ ಆರೋಪಿತರು, ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 65/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 17-06-2021 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080