ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-06-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 96/2022 ಕಲಂ: 379, 511, 341, 323. 504, 506 ಸಂಗಡ 149 ಐಪಿಸಿ. : ದಿನಾಂಕ 12.06.2022 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಕಾಲಂ: ನಂಬರ 07 ರಲ್ಲಿಯ ಎ-1 ರಿಂದ ಎ-10 ನೇ ವರೆಗಿನ ಆರೋಪಿತರು ಅರಕೇರಾ(ಕೆ) ಸಿಮಾಂತರದಲ್ಲಿರುವ ಮಶಮ್ಮ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವಿಷಯ ಗೊತ್ತಾಗಿ ಸದರಿ ಕೆರೆಯನ್ನು ಟೆಂಡರ್ ಪಡೆದಿದ್ದ ಫಿರ್ಯಾದಿಯು ತನ್ನ ಸ್ನೇಹಿತರೊಂದಿಗೆ ಕೆರೆಗೆ ಹೋಗಿ ನೋಡುವಷ್ಟರಲ್ಲಿ ಎ-1 ಮತ್ತು ಎ-2 ಆರೋಪಿತರು ಸಿಕ್ಕಿದ್ದು ಉಳಿದ ಆರೋಪಿತರು ಓಡಿ ಹೋಗಿರುತ್ತಾರೆ. ನಂತರ ಫಿರ್ಯಾದಿಯು ಸಿಕ್ಕಿಬಿದ್ದ ಆರೋಪಿತರಿಗೆ ವಿಚಾರಿಸಿ ಉಳಿದ ಎ-3 ರಿಂದ ಎ-10 ರ ವರೆಗಿನ ಆರೋಪಿತ ಹೆಸರು ಮತ್ತು ವಿಳಾಸದ ಬಗ್ಗೆ ತಿಳಿದುಕೊಂಡ ನಂತರ ಫೀರ್ಯಾದಿ ಮತ್ತು ಆತನ ಸ್ನೇಹಿತರು ಮರಳಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಎ-1 ರಿಂದ ಎ-12 ರವರೆಗಿನ ಆರೋಪಿತರು ಫಿರ್ಯಾದಿಗೆ ಅಕ್ರವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ಊರಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ: ಕಲಂ. 3 & 7 ಇ.ಸಿ.ಎಕ್ಟ-1955: ಇಂದು ದಿನಾಂಕ 16.06.2022 ರಂದು ಸಾಯಂಕಾಲ 5.35 ಗಂಟೆಗೆ ಗುರುಮಠಕಲ್ ಪಟ್ಟಣದ ಎಸ್ಬಿಐ ಬ್ಯಾಂಕಿನ ಮುಂದುಗಡೆೆ ಸೈಯದ್ ಮೈನೋದ್ದಿನ್ ಕಿರಾಣಿ ಅಂಗಡಿಂಲ್ಲಿ ಪಂಚರ ಸಮಕ್ಷಮದಲ್ಲಿ ದಿನಾಂಕ:16.06.202 ರಂದು 5.35 ರಿಂದ 6.35 ರವರಗೆ ಜಪ್ತಿ ಪಂಚನಾಮೆ ಕೈಗೊಂಡು ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಸದರಿ ಅಂಗಡಿಯ ಮಾಲಿಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ನಾನು ಶಿವಲಿಂಗಪ್ಪ ಪಿಎಸ್ಐ ಗುರುಮಠಕಲ್ ಠಾಣೆ ಗುನ್ನೆ ನಂಬರ 97/2022 ಕಲಂ: ಕಲಂ. 3 & 7 ಇ.ಸಿ.ಎಕ್ಟ-1955 ಕ್ರಮ ಕೈಕೊಂಡೆನು.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 08/2022 107 ಸಿ.ಆರ್.ಪಿ.ಸಿ : ಇಂದು ದಿನಾಂಕ:16/06/2022 ರಮದು ಅಜರ್ಿ ವಿಚಾರಣೆ ಕುರಿತು ಸಾಯಂಕಾಲ 16.00 ಗಂಟೆಗೆ ಬೆನಕನಹಳ್ಳಿ ಗ್ರಾಮಕ್ಕೆ ಹೊದಾಗ, ಬೆನಕನಹಳ್ಳಿ ಸೀಮಾಂತರದ ಹೊಲ ಸವರ್ೆ ನಂ:42/1 ವಿಸ್ತೀರ್ಣ 4ಎಕರೆ 6ಗುಂಟೆ ಜಮೀನು ಮತ್ತು ಪಕ್ಕದ ಜಮೀನು ಆದ ಸವರ್ೆ ನಂ:42/2 ವಿಸ್ತೀರ್ಣ 3 ಎಕರೆ 5 ಗುಂಟೆ ಜಮೀನಿನ ಸಂಬಂದ ಎರಡೂ ಪಾಟರ್ಿಗಳ ಮದ್ಯ ತಕರಾರು ನಡೆದಿದ್ದು, ಅಲ್ಲದೆ ಸವರ್ೆ ನಂ:42/1 ನೇದ್ದನ್ನು 1ನೇ ಪಟರ್ಿಯವರು ಅಳತೆ ಮಾಡಿಸಿದ್ದು, ಸವರ್ೆ ನಂ:42/2 ರಲ್ಲಿ ಜಮೀನು ಬಂದಿದ್ದು, ಸದರಿ ವಿಷಯದಲ್ಲಿ ಎರಡೂ ಪಾಟರ್ಿಗಳ ನಡುವೆ ವೈಷಮ್ಯ ಬೆಳೆದಿದ್ದು, ಪರ & ವಿರೋದ ಎರಡು ಗುಂಪುಗಳಾಗಿ, ಮುಂದೆ ಹೊಡೆದಾಟಗಳಾಗಿ ಕೊಲೆ & ರಕ್ತಪಾತಗಳಾಗುವ ಸಂಭವ ಇರುತ್ತದೆ. ಸದರಿ ವಿಷಯದಲ್ಲಿ ಎರಡು ಪಾಟರ್ಿಯವರ ಮದ್ಯೆ ಮುಂಭರುವ ದಿನಗಳಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಸದರಿ ಆರೋಪಿತರ ವಿರುದ್ದ ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 104/2022 ಕಲಂ 78 (3) ಕೆ.ಪಿ ಆಕ್ಟ್ .: ಇಂದು ದಿನಾಂಕ 16/06/2022 ರಂದು, 19-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶ್ರೀನಿವಾಸ್ ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 16/06/2022 ರಂದು, ಮಧ್ಯಾಹ್ನ 15-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರದ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಮುಂದೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿಯವರಾದ ಬಾಬುರಾವ್ ಪಿ.ಎಸ್.ಐ. ಶರಣಪ್ಪ ಹೆಚ್.ಸಿ. 164. ಸಂಜಿವಕುಮಾರ ಹೆಚ್.ಸಿ.173. ಮುತ್ತಪ್ಪ ಪಿ.ಸಿ.118. ಭೀಮನಗೌಡ ಪಿ.ಸಿ.402. ಜೀಪಚಾಲಕ ರುದ್ರಗೌಡ ಎ.ಪಿ.ಸಿ. 34. ರವರಿಗೆ ಮತ್ತು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಸಾಬಯ್ಯ ತಂದೆ ಮಂಚಪ್ಪ @ ಮಾನಶಪ್ಪ ಧನಕಾಯರ ವ|| 32 ಜಾ|| ಬೇಡರ ಉ|| ಮಟಕಾಬರೆದುಕೊಳ್ಳುವುದು ಸಾ|| ಇಬ್ರಾಹಿಂಪೂರ ತಾ|| ಶಹಾಪೂರ ಜಿ|| ಯಾದಗಿರಿ. ಈತನ್ನು ಹಿಡಿದು ಅವನ ಹತ್ತಿರವಿದ್ದ ನಗದು ಹಣ 1320-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು. ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 104/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 17-06-2022 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080